Tag: Dattatreya Hosabale

  • ದತ್ತಾತ್ರೇಯ ಹೊಸಬಾಳೆ ಮನುಸ್ಮೃತಿ ವ್ಯಕ್ತಿ – ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

    ದತ್ತಾತ್ರೇಯ ಹೊಸಬಾಳೆ ಮನುಸ್ಮೃತಿ ವ್ಯಕ್ತಿ – ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

    ಬೆಂಗಳೂರು: ಆರ್‌ಎಸ್‌ಎಸ್ (RSS) ನಾಯಕ ದತ್ತಾತ್ರೇಯ ಹೊಸಬಾಳೆ (Dattatreya Hosabale) ಮನುಸ್ಮೃತಿ ವ್ಯಕ್ತಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತಿರುಗೇಟು ನೀಡಿದರು.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಹೊಸಬಾಳೆ ಅವರು ಮನುಸ್ಮೃತಿಯ ವ್ಯಕ್ತಿ. ಬಡವರ್ಗದ ಜನರು ಏಳಿಗೆ ಹೊಂದುವುದು ಅವರಿಗೆ ಇಷ್ಟವಿಲ್ಲ. ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಪಾಲಿಸಿಕೊಂಡು ಬಂದಿರುವುದನ್ನು ಅವರು ಇನ್ನೂ ಮುಂದುವರಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು ಸಮಾಜವಾದ, ಜಾತ್ಯತೀತತೆ, ಒಕ್ಕೂಟ ವ್ಯವಸ್ಥೆ, ಸ್ವಾತಂತ್ರ‍್ಯ, ಸಮಾನತೆ ಅಥವಾ ಭ್ರಾತೃತ್ವದಲ್ಲಿ ನಂಬಿಕೆ ಇಡುವುದಿಲ್ಲ. ಎಲ್ಲಾ ಮೌಲ್ಯಗಳನ್ನು ತಿರಸ್ಕರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ರಾಯಚೂರು | ಹಾವು ಕಚ್ಚಿ ತಾಯಿ ಮಗ ಸಾವು – ಕುಟುಂಬಸ್ಥರ ಆಕ್ರಂದನ

    ಇದು ಅವರ ಪಕ್ಷದ ಮಾರ್ಗ, ಆರ್‌ಎಸ್‌ಎಸ್ ಮಾರ್ಗಕ್ಕೆ ನಿಜವಾಗಿಯೂ ಬದ್ಧರಾಗಿದ್ದರೆ, ಅವರು ಅಸ್ಪೃಶ್ಯತೆಯನ್ನು ತೊಡೆದು ಹಾಕುತ್ತಿದ್ದರು ಎಂದು ಟಾಂಗ್ ಕೊಟ್ಟರು.

    ಇದೇ ವೇಳೆ ಸೆಪ್ಟೆಂಬರ್ ಕ್ರಾಂತಿ, ಪೂರ್ಣಾವಧಿ ಸಿಎಂ, ನಾಯಕತ್ವ ಬದಲಾವಣೆ ಹೇಳಿಕೆಗಳ ಬಗ್ಗೆ ಮಾತನಾಡಿದ ಅವರು, ಹೈಕಮಾಂಡ್ ನಿರ್ಧಾರವನ್ನು ಯಾರಿಗೂ ಊಹಿಸಲು ಸಾಧ್ಯವಿಲ್ಲ ಎಂದು ಸಂದೇಶ ರವಾನಿಸಿದ್ದಾರೆ. ಈ ಮೂಲಕ ಏನೇ ನಿರ್ಧಾರ ಮಾಡುವುದಾದರೂ ಹೈಕಮಾಂಡ್ ತೀರ್ಮಾನ ಮಾಡೇ ಮಾಡುತ್ತದೆ ಎಂಬ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

    ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಹೈಕಮಾಂಡ್ ಏನು ನಿರ್ಧರಿಸುತ್ತದೆ ಅನ್ನೋದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಅದು ಪಕ್ಷದ ಹೈಕಮಾಂಡ್ ಕೈಯಲ್ಲಿದೆ. ಅದು ಹೈಕಮಾಂಡ್‌ಗೆ ಬಿಟ್ಟಿದ್ದು. ಮುಂದಿನ ಕ್ರಮ ತೆಗೆದುಕೊಳ್ಳುವ ಅಧಿಕಾರ ಹೈಕಮಾಂಡ್‌ಗೆ ಇದೆ. ಆದರೆ ಯಾರೂ ಅನಗತ್ಯವಾಗಿ ಸಮಸ್ಯೆಗಳನ್ನು ಸೃಷ್ಟಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಯಾರೂ ಊಹಿಸಲು‌ ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ

  • ಆರ್‌ಎಸ್‌ಎಸ್ ಪ್ರ.ಕಾರ್ಯದರ್ಶಿ ಹೊಸಬಾಳೆ ಹೇಳಿಕೆ ಸಮಂಜಸವಲ್ಲ: ಪರಂ

    ಆರ್‌ಎಸ್‌ಎಸ್ ಪ್ರ.ಕಾರ್ಯದರ್ಶಿ ಹೊಸಬಾಳೆ ಹೇಳಿಕೆ ಸಮಂಜಸವಲ್ಲ: ಪರಂ

    ಬೆಂಗಳೂರು: ಸಂವಿಧಾನ (Constitution) ಪೀಠಿಕೆಯಿಂದ ಜಾತ್ಯತೀತ, ಸಮಾಜವಾದ ಪದಗಳು ತೆಗೆಯುವ ಆರ್‌ಎಸ್‌ಎಸ್‌ನ (RSS) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ (Dattatreya Hosabale) ಹೇಳಿಕೆ ಸಮಂಜಸವಲ್ಲ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ಹೇಳಿದ್ದಾರೆ.

    ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂವಿಧಾನ ರಚನೆ ಸಂದರ್ಭದಲ್ಲಿ ಬಾಬಾ ಅಂಬೇಡ್ಕರ್ ಇಡೀ ವಿಶ್ವದಲ್ಲಿ ಯಾವ ಯಾವ ರಾಷ್ಟ್ರದಲ್ಲಿ ಸಂವಿಧಾನದ ಇದೆ ಎಂದು ಅಧ್ಯಯನ ಮಾಡಿದ್ದರು. ಭಾರತದ ಪರಿಸ್ಥಿತಿ ಅರ್ಥ ಮಾಡಿಕೊಂಡು ಸಮಾಜದಲ್ಲಿ ಇರುವ ವಿವಿಧ ಪದರಗಳನ್ನು ಅರ್ಥ ಮಾಡಿಕೊಂಡು ಸಂವಿಧಾನ ಕೊಟ್ಟಿದ್ದರು. ಜಾತಿ, ಧರ್ಮ ಅರ್ಥ ಮಾಡಿಕೊಂಡು ಜಾತ್ಯತೀತ ಪದವನ್ನು ಬಳಸಿದ್ದಾರೆ. ಅಂದಿನಿಂದ ಇಲ್ಲಿಯವರೆಗೆ ನಾವು ಪಾಲನೆ ಮಾಡಿಕೊಳ್ಳುತ್ತಾ ಬಂದಿದ್ದೇವೆ. ಈಗ ಏಕಾಏಕಿ ಪದಗಳನ್ನು ತೆಗೆಯಬೇಕು ಎಂಬುದು ಸರಿ ಕಾಣಿಸಲ್ಲ. ಹಾಗಾಗಿ ಹೊಸಬಾಳೆ ಹೇಳಿರುವುದು ಪ್ರಸ್ತುತ ಸಂದರ್ಭದಲ್ಲಿ ಸಮಂಜಸ ಅಲ್ಲ ಎಂದರು. ಇದನ್ನೂ ಓದಿ: 5 ಹುಲಿಗಳ ಸಾವು ಕೇಸ್ – ಮೃತ ಹಸು ಮಾಲೀಕ ಸೇರಿ ಮೂವರ ಬಂಧನ

    ಈಗಾಗಲೇ ರಾಹುಲ್ ಗಾಂಧಿ ಹೇಳಿದ್ದಾರೆ. ತೊಂದರೆ ಇಲ್ಲದೆ ನಡೆದು ಬಂದಿದೆ, ಅದು ಹಾಗೇ ಇರಬೇಕು. ಹೊಸಬಾಳೆ ಯಾವ ಉದ್ದೇಶಕ್ಕಾಗಿ ಆ ಮಾತು, ಪದ ಬಳಸಿದ್ದಾರೆ ಗೊತ್ತಿಲ್ಲ. ಭಾರತದ ಸಂವಿಧಾನ ವಿಶ್ವದ ಗಮನ ಸೆಳೆದಿದೆ. ವಿವಿಧತೆಯಲ್ಲಿ ಏಕತೆಯಿದೆ. ಜಾತಿ, ಧರ್ಮ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವುದೇ ಸಂವಿಧಾನದ ಆಶಯ. ನಮ್ಮಲ್ಲಿ ಬೇರೆ ಬೇರೆ ಭಾಷೆ, ಸಂಸ್ಕೃತಿ, ಧರ್ಮ ಇದೆ. ಇದೆಲ್ಲವನ್ನು ಒಟ್ಟುಗೂಡಿ ನಮ್ಮನ್ನ ಬಾಂಧವ್ಯದಿಂದ ಇರುವಂತೆ ಮಾಡಿದೆ. ಇದರಲ್ಲಿ ಕಾಂಪ್ರಮೈಸ್ ಮಾಡುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಇಲ್ಲದಿದ್ರೆ ರಾಜಕೀಯ ಬಿಡ್ತೀನಿ: ರಾಜಣ್ಣ

  • ‘ಆಪರೇಷನ್ ಸಿಂಧೂರ’ ಇಡೀ ದೇಶದ ಸ್ವಾಭಿಮಾನ, ಧೈರ್ಯ ಹೆಚ್ಚಿಸಿದೆ: ಆರ್‌ಎಸ್‌ಎಸ್

    ‘ಆಪರೇಷನ್ ಸಿಂಧೂರ’ ಇಡೀ ದೇಶದ ಸ್ವಾಭಿಮಾನ, ಧೈರ್ಯ ಹೆಚ್ಚಿಸಿದೆ: ಆರ್‌ಎಸ್‌ಎಸ್

    ನವದೆಹಲಿ: ಆಪರೇಷನ್ ಸಿಂಧೂರ(Operation Sindoor) ಇಡೀ ದೇಶದ ಸ್ವಾಭಿಮಾನ ಮತ್ತು ಧೈರ್ಯ ಹೆಚ್ಚಿಸಿದೆ. ಪಾಕ್ ಉಗ್ರರಿಗೆ ಪ್ರತ್ಯುತ್ತರ ನೀಡುತ್ತಿರುವ ಭಾರತ ಸರ್ಕಾರದ ನಾಯಕತ್ವ ಮತ್ತು ಸೇನಾಪಡೆಗಳಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದು ಆರ್‌ಎಸ್‌ಎಸ್(RSS) ತಿಳಿಸಿತು.

    ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ್ ಭಾಗವತ್(Mohan Bhagwat) ಮತ್ತು ಸರಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ(Dattatreya Hosabale) ಅವರು ಆಪರೇಷನ್ ಸಿಂಧೂರದ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪಹಲ್ಗಾಮ್‌ನಲ್ಲಿ(Pahalgam) ನಿಶಸ್ತ್ರ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರ ಮೇಲೆ ಮತ್ತು ಅವರ ಬೆಂಬಲಿಗರ ವ್ಯವಸ್ಥೆಯ ಮೇಲೆ ನಿರ್ಣಾಯಕವಾದ `ಆಪರೇಷನ್ ಸಿಂಧೂರ’ ಮೂಲಕ ಪ್ರತ್ಯುತ್ತರ ನೀಡುತ್ತಿರುವ ಭಾರತ ಸರ್ಕಾರದ ನಾಯಕತ್ವ ಮತ್ತು ಸೇನಾಪಡೆಗಳಿಗೆ ಹೃದಯಪೂರ್ವಕ ಅಭಿನಂದನೆಗಳು. ಹಿಂದೂ ಯಾತ್ರಿಗಳ ಕ್ರೂರ ಕಗ್ಗೊಲೆಯಿಂದ ಆಘಾತಕ್ಕೊಳಗಾದ ಕುಟುಂಬಗಳಿಗೆ ಮತ್ತು ಇಡೀ ದೇಶಕ್ಕೆ ನ್ಯಾಯ ಒದಗಿಸುವ ಈ ಕಾರ್ಯಾಚರಣೆಯು ಇಡೀ ದೇಶದ ಸ್ವಾಭಿಮಾನ ಮತ್ತು ಧೈರ್ಯವನ್ನು ಹೆಚ್ಚಿಸಿದೆ ಎಂದರು. ಇದನ್ನೂ ಓದಿ: ಭಾರತ-ಪಾಕ್ ಯುದ್ಧ ಭೀತಿ; ಚಂಡೀಗಢ ಸರ್ಕಾರದಿಂದ 2 ತಿಂಗಳು ಪಟಾಕಿ ಬ್ಯಾನ್

    ಪಾಕಿಸ್ತಾನದಲ್ಲಿರುವ(Pakistan) ಭಯೋತ್ಪಾದಕರು, ಅವರ ಸೌಲಭ್ಯಗಳು ಮತ್ತು ಪೂರಕ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯು ಭಾರತ ದೇಶದ ಭದ್ರತೆಗೆ ಅಗತ್ಯ ಮತ್ತು ಅನಿವಾರ್ಯ ಕ್ರಮವಾಗಿದೆ ಎಂದು ನಾವು ಭಾವಿಸುತ್ತೇವೆ. ರಾಷ್ಟ್ರೀಯ ಸಂಕಷ್ಟದ ಈ ಘಳಿಗೆಯಲ್ಲಿ, ಇಡೀ ದೇಶವು ತನು-ಮನ-ಧನದಿಂದ ಸರ್ಕಾರ ಮತ್ತು ಸೇನಾಪಡೆಗಳ ಜೊತೆಗೆ ಒಗ್ಗಟ್ಟಾಗಿ ನಿಂತಿದೆ ಎಂದು ಹೇಳಿದರು. ಇದನ್ನೂ ಓದಿ: ನಮ್ಮ ನಾಯಕ ಹೇಡಿ.. ಮೋದಿ ಹೆಸರು ಹೇಳುವುದಕ್ಕೂ ಹೆದರುತ್ತಿದ್ದಾರೆ: ತಮ್ಮ ಪ್ರಧಾನಿ ವಿರುದ್ಧವೇ ಗುಡುಗಿದ ಪಾಕ್ ಸಂಸದ

    ಭಾರತದ ಗಡಿಪ್ರದೇಶದ ಧಾರ್ಮಿಕ ಸ್ಥಳಗಳ ಮೇಲೆ ಮತ್ತು ನಾಗರಿಕ ವಸತಿ ಪ್ರದೇಶಗಳ ಮೇಲೆ ಪಾಕಿಸ್ತಾನ ಸೇನೆಯಿಂದ ನಡೆಯುತ್ತಿರುವ ದಾಳಿಗಳನ್ನು ನಾವು ಖಂಡಿಸುತ್ತೇವೆ ಮತ್ತು ಈ ದಾಳಿಗಳಿಗೆ ಬಲಿಯಾದವರ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಸರ್ಕಾರ ಮತ್ತು ಆಡಳಿತದಿಂದ ನೀಡಲಾದ ಎಲ್ಲಾ ಸೂಚನೆಗಳನ್ನು ಸಂಪೂರ್ಣವಾಗಿ ಪಾಲಿಸಬೇಕು ಎಂದು ಈ ಸವಾಲಿನ ಸಂದರ್ಭದಲ್ಲಿ ಸಮಸ್ತ ದೇಶವಾಸಿಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕರೆ ನೀಡುತ್ತಿದೆ ಎಂದರು. ಇದನ್ನೂ ಓದಿ: ಎಲ್‌ಒಸಿಯಲ್ಲಿ ಭಾರತ-ಪಾಕ್ ಸಂಘರ್ಷ; ಭಾರತೀಯ ಯೋಧ ಹುತಾತ್ಮ

    ಜೊತೆಗೆ, ಈ ಸಂದರ್ಭದಲ್ಲಿ ಸಾಮಾಜಿಕ ಏಕತೆ ಮತ್ತು ಸೌಹಾರ್ದತೆಯನ್ನು ಭಂಗಗೊಳಿಸುವ ರಾಷ್ಟ್ರವಿರೋಧಿ ಶಕ್ತಿಗಳ ಯಾವುದೇ ಷಡ್ಯಂತ್ರ ಯಶಸ್ವಿಯಾಗದಂತೆ ಎಚ್ಚರಿಕೆ ವಹಿಸಬೇಕು. ಆ ಮೂಲಕ ನಾವೆಲ್ಲರೂ ನಾಗರಿಕ ಕರ್ತವ್ಯವನ್ನು ಪಾಲಿಸಬೇಕು. ಈ ಸಂದರ್ಭದಲ್ಲಿ ಸೇನೆ ಮತ್ತು ಸ್ಥಳೀಯ ಆಡಳಿತಕ್ಕೆ ಎಲ್ಲಿ, ಯಾವ ರೀತಿಯ ಅಗತ್ಯವಿದೆಯೋ, ಅಲ್ಲಿ ಸಾಧ್ಯವಾದ ಎಲ್ಲ ರೀತಿಯ ಸಹಕಾರಕ್ಕೆ ಸಿದ್ಧರಾಗಿರಿ ಮತ್ತು ರಾಷ್ಟ್ರೀಯ ಏಕತೆ ಮತ್ತು ಭದ್ರತೆಯನ್ನು ಕಾಪಾಡುವ ಎಲ್ಲ ಪ್ರಯತ್ನಗಳಿಗೆ ಬಲವನ್ನು ಒದಗಿಸುವ ಮೂಲಕ ದೇಶಭಕ್ತಿಯನ್ನು ಅಭಿವ್ಯಕ್ತಗೊಳಿಸಬೇಕು ಎಂದು ಸಮಸ್ತ ದೇಶವಾಸಿಗಳಲ್ಲಿ ವಿನಂತಿಸಿಕೊಂಡರು.

  • ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಸಂವಿಧಾನ ಬಾಹಿರ – ದತ್ತಾತ್ರೇಯ ಹೊಸಬಾಳೆ

    ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಸಂವಿಧಾನ ಬಾಹಿರ – ದತ್ತಾತ್ರೇಯ ಹೊಸಬಾಳೆ

    -ಬಿಜೆಪಿ ರಾಷ್ಟ್ರಾಧ್ಯಕ್ಷರ ನೇಮಕದಲ್ಲಿ ಸಂಘ ತಲೆ ಹಾಕಲ್ಲ ಎಂದ ಸರಕಾರ್ಯವಾಹ

    ಬೆಂಗಳೂರು: ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಸಂವಿಧಾನ ಬಾಹಿರ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷರ ನೇಮಕದಲ್ಲಿ ಸಂಘ ತಲೆ ಹಾಕಲ್ಲ ಎಂದು ಆರ್‌ಎಸ್‌ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ (Dattatreya Hosabale) ಹೇಳಿದರು.

    ಬೆಂಗಳೂರಿನ (Bengaluru) ಚನ್ನೇನಹಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ (BJP) ರಾಷ್ಟ್ರಾಧ್ಯಕ್ಷರ ಆಯ್ಕೆ ವಿಚಾರ ಕೇಂದ್ರದ ಬಿಜೆಪಿಯೇ ನೋಡಿಕೊಳ್ಳಲಿದೆ. ರಾಷ್ಟ್ರಾಧ್ಯಕ್ಷರ ನೇಮಕಕ್ಕೂ ಸಂಘಕ್ಕೂ ಸಂಬಂಧ ಇಲ್ಲ. ಬಿಜೆಪಿ ಸಂಘವನ್ನು ಕೇಳಿ ನೇಮಕಾತಿ ಮಾಡಲ್ಲ. ಇನ್ನೂ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡುವುದನ್ನು ಸಂಘ ಖಂಡಿಸಿದೆ. ಸಂವಿಧಾನವು ಧರ್ಮ ಆಧಾರಿತ ಮೀಸಲಾತಿ ನೀಡುವುದಕ್ಕೆ ಅವಕಾಶ ನೀಡುವುದಿಲ್ಲ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲ. ಯಾರಾದರೂ ಹಾಗೆ ಮಾಡಿದರೆ ಅದು ನಮ್ಮ ಸಂವಿಧಾನ ಶಿಲ್ಪಿಗೆ ವಿರುದ್ಧವಾಗಿದೆ ಎಂದು ಕಿಡಿಕಾರಿದರು.ಇದನ್ನೂ ಓದಿ:ನಟಿ ರಮೋಲ ಒಂದು ದಿನದ ಖರ್ಚು ಕೇಳಿದ್ರೆ ಶಾಕ್ ಆಗ್ತೀರಾ!

    ಇನ್ನೂ ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ಕೊಡಲು ಮುಂದಾಗಿದ್ದ ಆಂಧ್ರಪ್ರದೇಶ (Andhra Pradesh) ಮತ್ತು ಮಹಾರಾಷ್ಟ್ರ (Maharashtra) ರಾಜ್ಯಗಳ ಪ್ರಯತ್ನಗಳನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ತಳ್ಳಿಹಾಕಿವೆ. ಅಂತಹ ಮೀಸಲಾತಿ ಒದಗಿಸಲು ಇರುವ ನಿಬಂಧನೆಗಳನ್ನು ನ್ಯಾಯಾಲಯಗಳು ತಿರಸ್ಕರಿಸಿವೆ ಎಂದು ತಿಳಿಸಿದರು.

    ಮಹಾರಾಷ್ಟ್ರ ಹಾಗೂ ಹಿಂದಿನ ಬಿಜೆಪಿ (BJP)  ಸರ್ಕಾರದಲ್ಲಿ ಸಚಿವರ ಪಿಎಗಳಾಗಿ ಸಂಘದ ವ್ಯಕ್ತಿಗಳ ನೇಮಕಕ್ಕೆ ಸಿದ್ದರಾಮಯ್ಯ ಟೀಕಿಸಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಂಘ ಯಾರಿಗೂ ಪಿಎಗಳಾಗಿ ನೇಮಿಸಿಕೊಳ್ಳಿ ಎಂದು ಸೂಚನೆ ಕೊಡಲ್ಲ. ಸಂಘದ ಹಿನ್ನೆಲೆಯವರು ಸಚಿವರ ಪಿಎಗಳಾಗುತ್ತಾರೆ. ಅಂದರೆ ಅದು ಅವರ ಪ್ರತಿಭೆ ಮತ್ತು ಸಾಮರ್ಥ್ಯದಿಂದ ಮಾತ್ರ. ಅದರಲ್ಲಿ ತಪ್ಪೇನಿಲ್ಲ ಎಂದರು.

    ಇನ್ನೂ ಸಂಸತ್ ಕ್ಷೇತ್ರಗಳ ಪುನರ್ ವಿಂಗಡಣೆಗೆ ದಕ್ಷಿಣದ ರಾಜ್ಯಗಳು ಆತಂಕ ವ್ಯಕ್ತಪಡಿಸುತ್ತಿರುವ ಬಗ್ಗೆ ಮಾತನಾಡಿ, ಪುನರ್ವಿಂಗಡಣೆ ವಿಚಾರದಲ್ಲಿ ಕೇಂದ್ರ ಇನ್ನೂ ಅಧಿಕೃತವಾಗಿ ಯಾವುದೇ ಕರಡು ಪ್ರಕಟಿಸಿಲ್ಲ. ಈ ಹಂತದಲ್ಲಿ ನಾವು ಏನನ್ನೂ ಹೇಳುವುದಿಲ್ಲ. ಈ ವಿಚಾರದಲ್ಲಿ ಕೇಂದ್ರಕ್ಕೆ ಸಂಘ ಯಾವುದೇ ಸಲಹೆ ಕೊಡುವುದಿಲ್ಲ ಎಂದು ಹೇಳಿದರು.ಇದನ್ನೂ ಓದಿ:ಗಾಜಾದಲ್ಲಿ ಇಸ್ರೇಲ್ ವಾಯುದಾಳಿಗೆ ಹಮಾಸ್ ರಾಜಕೀಯ ನಾಯಕ ಬಲಿ

  • ಇನ್ಮುಂದೆ `ಇಂಡಿಯಾ’ ಅನ್ನಬೇಡಿ, `ಭಾರತ’ ಎಂದೇ ಕರೆಯಿರಿ – ಆರ್‌ಎಸ್‌ಎಸ್ ನಾಯಕ ಹೊಸಬಾಳೆ ಕರೆ

    ಇನ್ಮುಂದೆ `ಇಂಡಿಯಾ’ ಅನ್ನಬೇಡಿ, `ಭಾರತ’ ಎಂದೇ ಕರೆಯಿರಿ – ಆರ್‌ಎಸ್‌ಎಸ್ ನಾಯಕ ಹೊಸಬಾಳೆ ಕರೆ

    -ಮತ್ತೆ ಮುನ್ನೆಲೆಗೆ ಬಂತು ಭಾರತ ವರ್ಸಸ್ ಇಂಡಿಯಾ ವಿವಾದ

    ನವದೆಹಲಿ: ಇನ್ಮುಂದೆ ದೇಶವನ್ನು `ಇಂಡಿಯಾ’ ಎಂದು ಕರೆಯಬಾರದು. ಭಾರತ ಎಂದೇ ಅಧಿಕೃತವಾಗಿ ಕರೆಯಬೇಕು ಎಂದು ಆರ್‌ಎಸ್‌ಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ (Dattatreya Hosabale) ಕರೆ ನೀಡಿದರು.

    ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ನಮ್ಮ ದೇಶದ ಹೆಸರು ಭಾರತ. ಹೀಗಾಗಿ `ಭಾರತ’ ಎಂದೇ ಕರೆಯಿರಿ. ಇಂಡಿಯಾ ಎಂಬುದು ಇಂಗ್ಲೀಷ್ ಹೆಸರು. ಇದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ರಷ್ಯಾ ವೈಮಾನಿಕ ದಾಳಿಗೆ ಪ್ರತಿಯಾಗಿ ಉಕ್ರೇನ್‌ ಡ್ರೋನ್ ದಾಳಿ – ಮಾಸ್ಕೋದಲ್ಲಿ 3 ಸಾವು, 17 ಮಂದಿಗೆ ಗಾಯ

    ಇನ್ನು, ಮೈಸೂರಿನಲ್ಲಿ ಮತ್ತೆ ಮಸೀದಿ ವಿವಾದ ಶುರುವಾಗುವಂತೆ ಕಾಣುತ್ತಿದೆ. ಇಲ್ಲಿನ ಕ್ಯಾತಮಾರನಹಳ್ಳಿ ವಿವಾದಿತ ಮಸೀದಿಯ ಬಾಗಿಲು ತೆಗೆಸಲು ರಾಜ್ಯ ಸರ್ಕಾರ ಯತ್ನಿಸಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪ ಮಾಡಿದರು. ಸರ್ಕಾರ ಎಷ್ಟೇ ಪ್ರಯತ್ನ ಮಾಡಿದರೂ ಮಸೀದಿ ತೆರೆಯಲು ಬಿಡಲ್ಲ. ಒಂದೊಮ್ಮೆ ಸಿಎಂ ಅವರು ಮಸೀದಿ ಓಪನ್ ಮಾಡಿಸಿದರೆ ಆಮೇಲೆ ಮುಂದಿನದ್ದು ಹೇಳ್ತೀನಿ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಯತ್ನಾಳ್ ನಮ್ಮ ಸಮುದಾಯದ ನಾಯಕ, ಬಲಿಪಶು ಆಗ್ಬಾರ್ದು: ರೇಣುಕಾಚಾರ್ಯ ಸಾಫ್ಟ್ ಕಾರ್ನರ್

    ಬೆಂಗಳೂರಿನ ಮದರಸಾದಲ್ಲಿ ಬಾಲಕಿಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದೂರು ಕೊಟ್ಟ ಮಕ್ಕಳ ಪೋಷಕರಿಗೆ ಕೇಸ್ ವಾಪಸ್ ಪಡೆಯುವಂತೆ ಮದರಸಾ ಮುಖ್ಯಸ್ಥ ಅನ್ವರ್ ಅಲಿ, ಹಸನ್ ಮುಸ್ಮೀಲ್ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

  • ಅಂತರ್ಜಾತಿ ವಿವಾಹಕ್ಕೆ ಸಂಘಪರಿವಾರ ಸಹಮತ: ಆರ್‌ಎಸ್‌ಎಸ್

    ಅಂತರ್ಜಾತಿ ವಿವಾಹಕ್ಕೆ ಸಂಘಪರಿವಾರ ಸಹಮತ: ಆರ್‌ಎಸ್‌ಎಸ್

    ಬೆಂಗಳೂರು: ಅಂತರ್ಜಾತಿ ವಿವಾಹಕ್ಕೆ ಆರ್‍ಎಸ್‍ಎಸ್ ಸಹಮತವಿದೆ. ಸಂಘ ಪರಿವಾರದ ಅನೇಕರು ವಿವಿಧ ಜಾತಿ ಮಧ್ಯೆ ವಿವಾಹ ಆಗಿದ್ದಾರೆ. ಹಿಂದೂ ಸಮಾಜ ಒಂದು ಎಂದು ಪ್ರತಿಪಾದನೆ ಮಾಡುತ್ತದೆ ಎಂದು ನೂತನವಾಗಿ ಆಯ್ಕೆಯಾದ ಆರ್‍ಎಸ್‍ಎಸ್ ಸರಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಹೇಳಿದರು.

    ಇತ್ತೀಚಿಗೆ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಬ್ರಾಹ್ಮಣ ಸಮಾಜದ ಹೆಣ್ಣುಮಕ್ಕಳಿಗೆ ಅಂತರ್ಜಾತಿ ವಿವಾಹ ಆಗದಂತೆ ತಡೆಯಲು ಸಮಿತಿ ರಚಿಸಬೇಕು ಎಂಬ ಹೇಳಿಕೆ ಕುರಿತು ಪ್ರಶ್ನಿಸಿದಾಗ ನಾನು ಶ್ರೀಗಳ ಹೇಳಿಕೆ ಪೂರ್ತಿಯಾಗಿ ನೋಡಿಲ್ಲ, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಪೇಜಾವರ ಹಿಂದಿನ ವಿಶ್ವೇಶ್ವರ ತೀರ್ಥರು ಅಸ್ಪೃಶ್ಯತೆ ವಿರುದ್ಧ ಹಲವಾರು ಭಾಷಣ ಹಾಗೂ ಕೆಲಸ ಮಾಡಿದ್ದಾರೆ ಇವರು ನಮಗೆ ಪ್ರೇರಣೆ ಎಂದು ಸಮರ್ಥನೆ ನೀಡಿದರು.

    ನೂತನ ಸರಕಾರ್ಯನಿರ್ವಾಹಕ ದತ್ತಾತ್ರೇಯ ಹೊಸಬಾಳೆ ಆಯ್ಕೆ:
    ಎರಡು ದಿನಗಳಿಂದ ಮಾಗಡಿ ರಸ್ತೆಯ ಜನಸೇವ ಮಂಡಳಿಯಲ್ಲಿ ನಡೆದ ಅಖಿಲ ಭಾರತ ಪ್ರತಿನಿಧಿ ಸಭೆಯಲ್ಲಿ ದತ್ತಾತ್ರೇಯ ಹೊಸಬಾಳೆಯನ್ನ ಸರಕಾರ್ಯವಾಹಕ ಹುದ್ದೆಗೆ ಆಯ್ಕೆ ಮಾಡಲಾಗಿದೆ.

    ದತ್ತಾತ್ರೇಯ ಹೊಸಬಾಳೆ ಪರಿಚಯ:
    ಆರ್‍ಎಸ್‍ಎಸ್ ನ ನೂತನ ಸರಕಾರ್ಯವಾಹರಾಗಿ ಚುನಾಯಿತ ದತ್ತಾತ್ರೇಯ ಹೊಸಬಾಳೆ, ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಸಬಾಳೆ ಗ್ರಾಮದವರು. ದತ್ತಾಜಿ ಎಂದೇ ಸಂಘದ ವಲಯದಲ್ಲಿ ಇವರನ್ನು ಗುರುತಿಸಲಾಗುತ್ತದೆ. 1954 ರ ಡಿಸೆಂಬರ್ 1 ರಂದು ಜನಿಸಿದ ಹೊಸಬಾಳೆ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಸಾಗರದಲ್ಲಿ ಪಡೆದರು. ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡ ದತ್ತಾತ್ರೇಯ ಅವರು ವಿದ್ಯಾಭ್ಯಾಸ ಮಾಡಿದ್ದು ನ್ಯಾಷನಲ್ ಕಾಲೇಜಿನಲ್ಲಿ. ಅಲ್ಲಿ ಅವರಿಗೆ ಸಿಕ್ಕಿದ್ದು ಹೆಚ್. ನರಸಿಂಹಯ್ಯನವರ ಒಡನಾಟ ಮತ್ತು ಮಾರ್ಗದರ್ಶನ. ಸ್ನಾತಕೋತ್ತರ ಪದವಿಯನ್ನು ಇಂಗ್ಲಿಷ್ ಲಿಟರೇಚರ್ ನಲ್ಲಿ ಹೊಸಬಾಳೆಯವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಗಳಿಸಿದರು.

    ಇವರ ಆರ್‍ಎಸ್‍ಎಸ್ ಪ್ರವೇಶ ಆಗಿದ್ದು 1968 ರಲ್ಲಿ. 1972 ರಲ್ಲಿ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಸದಸ್ಯರಾಗಿ ಅದರ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ 15 ವರ್ಷ ವಿದ್ಯಾರ್ಥಿ ಆಂದೋಲನವನ್ನು ರೂಪಿಸಿದವರು ಹೊಸಬಾಳೆಯವರು. ಸಂಘಟನೆ, ಸಾಮಾಜಿಕ ಸಮರಸತೆ, ಸಾಹಿತ್ಯ ಮತ್ತು ಕಲೆ ಹೊಸಬಾಳೆಯವರ ಆಸಕ್ತಿಯ ಕ್ಷೇತ್ರಗಳು. ಉತ್ತಮ ವಾಗ್ಮಿಗಳು, ಸಂಘಟನಾಕಾರರು, ಆಗಿರುವ ದತ್ತಾಜಿ ಹಲವು ಲೇಖನಗಳನ್ನು ಬರೆದಿದ್ದಾರೆ.

    ಕಾಲೇಜು ದಿನಗಳಲ್ಲಿ ಹಾಗೂ ನಂತರದ ದಿನಗಳಲ್ಲೂ ದತ್ತಾಜಿಯವರಿಗೆ ಕನ್ನಡದ ಸಾಹಿತಿಗಳು, ಪತ್ರಕರ್ತರು ಮತ್ತು ಕಲಾವಿದರೊಂದಿಗೆ ನಿಕಟ ಸಂಪರ್ಕವಿದೆ. ವಿಶೇಷವಾಗಿ ಗೋಪಾಲಕೃಷ್ಣ ಅಡಿಗ ಮತ್ತು ಖ್ಯಾತ ಪತ್ರಕರ್ತ ವೈಯೆನ್ಕೆ ಅವರುಗಳ ಜೊತೆಗೆ ಹೊಸಬಾಳೆ ಅವರದ್ದು ವಿಶೇಷ ಒಡನಾಟ.

    ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಹೊಸಬಾಳೆಯವರು ಒಂದು ವರ್ಷಕ್ಕೂ ಹೆಚ್ಚು ಕಾಲ ಮೀಸಾ ಬಂಧನಕ್ಕೆ ಒಳಪಟ್ಟಿದ್ದರು. ನಂತರದ ದಿನಗಳಲ್ಲಿ ಆರ್‍ಎಸ್‍ಎಸ್ ನ ಹೊ ವೆ ಶೇಷಾದ್ರಿಯವರು ತುರ್ತು ಪರಿಸ್ಥಿತಿಯ ಕುರಿತಾದ ‘ಭುಗಿಲು’ ಪುಸ್ತಕದ ಕೆಲಸದಲ್ಲಿ ಇವರು ಕಾರ್ಯ ನಿರ್ವಹಿಸಿದ್ದಾರೆ.

    ವಿದ್ಯಾರ್ಥಿಗಳ ಅಂತಾರಾಷ್ಟ್ರೀಯ ಸಂಘಟನೆಯಾದ “ವೋಸಿ” (World Organization for Student and Youth)  ಹಾಗೂ ಇನ್ನಿತರ ಸಂಘಟನೆಗಳು, ಕನ್ನಡದ ಮಾಸ ಪತ್ರಿಕೆ ”ಅಸೀಮಾ” ದ ಸಂಸ್ಥಾಪಕರು.

    2004ಕ್ಕೆ ಮಾತೃ ಸಂಘಟನೆಯಾದ ಆರ್‍ಎಸ್‍ಎಸ್ ಗೆ ಮರಳಿದ ಹೊಸಬಾಳೆಯವರು ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ್ ಹೊಣೆ ಹೊತ್ತರು. ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ)ರಾಗಿ ಆಯ್ಕೆ ಅಗುವ ಮೊದಲು ಇವರು ಆರೆಸ್ಸೆಸ್ ನ ಸಹ ಸರಕಾರ್ಯವಾಹರಾಗಿದ್ದರು.

    ಆಯ್ಕೆ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನ್ನಾಡಿದ ಇವರು, ಕನ್ನಡ ನನ್ನ ಮಾತೃಭಾಷೆ, ಪ್ರತಿನಿಧಿ ಸಭೆ ಸಾಮಾನ್ಯವಾಗಿ ನಗಪುರದಲ್ಲಿ ನಡೆಯುತ್ತದೆ. ಕೊರೊನಾ ಕಾರಣದಿಂದ ಈಗ ಬೆಂಗಳೂರಿನಲ್ಲಿ ನಡೆಯುತ್ತಿದೆ. ಈಗ ನನ್ನ ಮೇಲೆ ಹೊಸ ಜವಾಬ್ದಾರಿ ಇದೆ, ಸಂಘದ ಬಗ್ಗೆ ದೇಶ ವಿದೇಶಗಳಲ್ಲಿ ಪರಿಚಯ ಇದೆ. ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಗಳಿಂದ ಸಾಮಾನ್ಯ ವ್ಯಕ್ತಿಗಳವೆರೆಗೆ ಸಂಘದಲ್ಲಿ ಜನ ಇದ್ದಾರೆ.

    ಆರ್ ಎಸ್ ಎಸ್ 2025ಕ್ಕೆ 100 ವರ್ಷ ಪೂರೈಸಲಿದೆ. ಹೀಗಾಗಿ ಸಂಘ ಪ್ರತಿ ಮಂಡಲ್ ಗೆ ತಲುಪಬೇಕಿದೆ, ನವೆಂಬರ್ ನಂತರ ಶಾಖೆಯನ್ನ ಪರಿಸ್ಥಿತಿಗೆ ಅನುಗುಣವಾಗಿ ಶಾಖೆ ಪ್ರಾರಂಭವಾಗಿದೆ. ಕಾಲೇಜು ಹಾಗೂ ಶಾಲೆ ಪೂರ್ಣಪ್ರಮಾಣದಲ್ಲಿ ತೆರೆಯಲಿಲ್ಲದ ಕಾರಣ ಶಾಖೆಗಳ ಸಂಖ್ಯೆ ಕಡಿಮೆ ಆಗಿದೆ, ಇನ್ನೆರಡು ತಿಂಗಳಲ್ಲಿ ಪರಿಸ್ಥಿತಿ ಸುಧಾರಣೆ ಆದರೆ ಹೆಚ್ವಿನ ಶಾಖೆಗಳು ತೆರೆಯಲಾಗುವುದು.

    ಎಬಿಪಿಎಸ್ ಸಭೆಯಲ್ಲಿ 2 ನಿರ್ಣಯ:

    1. ರಾಮ ಮಂದಿರ ನಿರ್ಮಾಣ; ಭಾರತದ ಶಕ್ತಿ ಪ್ರದರ್ಶನ
    ಕಳೆದ ವರ್ಷ ಆಗಸ್ಟ್ 5ಕ್ಕೆ ರಾಮಮಂದಿರ ಶಂಕುಸ್ಥಾಪನೆ ಆಗಿತ್ತು, ಕೊರೊನಾ ನಿಯಮ ಪಾಲಿಸಿ ಶಂಕುಸ್ಥಾಪನೆ ಮಾಡಲಾಯಿತು. ಈ ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಕ್ಕೆ ಆರ್ ಎಸ್ ಎಸ್ ಬಾಗಿ ಆಗಿದೆ, ಮೊದಲ ದಿನದಿಂದಲೂ ಆರ್ ಎಸ್ ಎಸ್ ರಾಮಮಂದಿರ ವಿಷಯ ಪರವಾಗಿ ನಿಂತಿತ್ತು, ಸಮಾಜದಿಂದ ಅದ್ಭುತ ಪ್ರತಿಕ್ರಿಯೆ 12 ಕೋಟಿ ಪರಿವಾರ, 5.5 ಲಕ್ಷ ಊರುಗಳು ಮಂದಿರ ನಿರ್ಮಾಣಕ್ಕೆ ಕೈಜೋಡಿಸಿದೆ. ಅಯೋದ್ಯೆಗೆ ಹೋಗದೆ ಇರುವವರು ಇದಕ್ಕೆ ಕೈ ಜೋಡಿಸಿದ್ದಾರೆ. ಬಡವರು-ಸಾಹುಕಾರರು ಭೇದ ಇಲ್ಲದೆ ಹಣ ಸಂಗ್ರಹ ಆಗಿದೆ.

    2. ಕೋವಿಡ್ 19 ಮಹಾಮಾರಿ ವಿರುದ್ಧ ಭಾರತದ ಏಕತೆ ಪ್ರದರ್ಶನ:
    ಕಳೆದ ವರ್ಷ ಕೋವಿಡ್ ಕಾರಣದಿಂದ ಶಾಖೆಗಳು ನಡೆಯುವುದಕ್ಕೆ ಆಗಿಲ್ಲ. ಮೈದಾನಗಳಲ್ಲಿ ಬೇರೆ ಬೇರೆ ಕುಟುಂಬಗಲ್ಲಿ ಜನರನ್ನು ಒಂದೆಡೆ ಸೇರಿಸುವುದು ಸರಿ ಅಲ್ಲ. ಹೀಗಾಗಿ ಮನೆಯಿಂದಲೇ ಸ್ವಯಂಸೇವಕರ ಜಾಗೃಕತೆಗೆ ಸಂಪರ್ಕದಲ್ಲಿತ್ತು. ಸಂಘ ಕೋವಿಡ್ ಸಮಯದಲ್ಲಿ ಸೇವೆಯ ರೂಪದಲ್ಲಿ ದಿನಸಿ ಹಾಗೂ ಇನ್ನಿತರೆ ವಸ್ತುಗಳನ್ನ ಸಮಾಜಕ್ಕೆ ನೀಡಿದೆ. ಇದಕ್ಕೆ ನಮಗೆ ಕೃತಜ್ಞತೆ ಬೇಡ. ಸಭೆಯಲ್ಲಿ ಸಮಾಜಕ್ಕೆ ಅಭಿನಂದನೆ ಹಾಗೂ ಕೃತಜ್ಞತೆ ತಿಳಿಸುತ್ತದೆ. ತಪ್ಪುಗಳನ್ನ ನೋಡದೆ, ದೇಶ ಒಂದಾಗಿ ನಿಂತು, ಮಹಾಮಾರಿ ಎದಿರುಸುವುದಕ್ಕೆ ಸಾಧ್ಯವಾಯಿತು. ಈಗಲೂ 2ನೆ ಅಲೆ ಬರುತ್ತಿದ್ದರೂ ದೇಶ ತನ್ನ ಶಕ್ತಿಯನ್ನು ಪ್ರದರ್ಶನ ಮಾಡಿದೆ. ಹೀಗಾಗಿ ಲಸಿಕೆ ನಮಗೆ ಮಾತ್ರವಲ್ಲದೆ ಬೇರೆ ರಾಷ್ಟ್ರಗಳಿಗೂ ಲಸಿಕೆ ನೀಡಲಾಗುತ್ತಿದೆ. ಮುಂದಿನ ಪೀಳಿಗೆ ಈ ಸಮಯವನ್ನು ಪ್ರೇರಣೆಯಾಗಿ ತೆಗೆದುಕೊಂಡು ಮುಂದೆ ಯಾವುದೇ ಕಷ್ಟದ ಪರಿಸ್ಥಿತಿ ಎದುರಿಸಲು ಸಾಧ್ಯ ಎಂದು ದಾಖಲಾಗಬೇಕು.

    ಇನ್ನು ಉಳಿದಂತೆ ವಿವಿಧ ವಿಷಯಗಳಿಗೆ ಪ್ರತಿಕ್ರಿಯೆ ನೀಡಿದ ಹೊಸಬಾಳೆ, ಭಾರತದ ಇತಿಹಾಸದಿಂದ ಪ್ರೇರಣೆ ಪಡೆದು ವೈಚಾರಿಕ ಜಾಗೃತಿ ಪ್ರಾರಂಭಿಸಲಾಗುವುದು. ದೇಶದಲ್ಲಿ ಲೋಕತಂತ್ರ ವ್ಯವಸ್ಥೆ ಇದೆ, ನಾಗ್ಪುರದಿಂದ ಸರ್ಕಾರ ನಡೆಯಲ್ಲ. ರಾಮ ಮಂದಿರ ನಿರ್ಮಾಣ ಆರ್ ಎಸ್ ಎಸ್ ನಿರ್ಧಾರ ಅಲ್ಲ, ಸಮಾಜದ ಎಲ್ಲಾ ವರ್ಗದ ಜನ ಕೈಜೋಡಿಸುತ್ತಿದ್ದಾರೆ. ಇದು ಸುಪ್ರೀಂಕೋರ್ಟ್ ಆದೇಶ, ಉಚ್ಚ ನ್ಯಾಯಾಲಯದ ಆದೇಶ ಪಾಲನೆ ಮಾಡಲಾಗುತ್ತಿದೆ ಅಷ್ಟೇ. ಇದರ ವಿರೋಧ ಕೇವಲ ರಾಜಕೀಯ ಉದ್ದೇಶದಿಂದ ಮಾಡುತ್ತಿದ್ದಾರೆ ಅಷ್ಟೇ ವೈಯಕ್ತಿಕವಾಗಿ ಇವರು ರಾಮ ಮಂದಿರ ನಿರ್ಮಾಣ ಪರವಿದ್ದಾರೆ ಎಂದು ಸಂಘ ಪರಿವಾರದ ವಿರುದ್ಧ ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.

    ಒಟ್ಟಾರೆ ಮೂರು ವರ್ಷಗಳ ಕಾಲ ದತ್ತಾತ್ರೇಯ ಹೊಸಬಾಳೆ ಸರಕಾರ್ಯವಾಹಕ ಹುದ್ದೆ ಅವಧಿಯಲ್ಲಿ ಸಾರ್ವತ್ರಿಕ ಚುನಾವಣೆ ಜೊತೆಗೆ ಆರ್ ಎಸ್ ಎಸ್ 100 ವರ್ಷದ ಸಂಭ್ರಮ ಕೂಡ ಇದೆ. ಸರಸಂಘ ಚಾಲಕ ಮೋಹನ್ ಭಾಗವತ್ ಹುದ್ದೆ ನಂತರ ಸರಕಾರ್ಯವಾಹಕ ಸ್ಥಾನ ಆಗಿದೆ.

  • ಆರ್‌ಎಸ್‌ಎಸ್‌ ಸರಕಾರ್ಯವಾಹ ಸ್ಥಾನಕ್ಕೆ ಕನ್ನಡಿಗ ಹೊಸಬಾಳೆ ನೇಮಕ

    ಆರ್‌ಎಸ್‌ಎಸ್‌ ಸರಕಾರ್ಯವಾಹ ಸ್ಥಾನಕ್ಕೆ ಕನ್ನಡಿಗ ಹೊಸಬಾಳೆ ನೇಮಕ

    ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್‌)ದ ಎರಡನೇ ಅತ್ಯುನ್ನತ ಹುದ್ದೆ ಸರಕಾರ್ಯವಾಹ ಸ್ಥಾನಕ್ಕೆ ಕನ್ನಡಿಗರಾದ ದತ್ತಾತ್ರೇಯ ಹೊಸಬಾಳೆ ಅವರು ನೇಮಕವಾಗಿದ್ದಾರೆ.

    ಮೋಹನ್ ಭಾಗವತ್ ಅವರು ಆರ್‌ಎಸ್‌ಎಸ್‌ ನ ಸರಸಂಘಚಾಲಕರಾಗಿದ್ದು, ಇವರ ನಂತರದ ಸ್ಥಾನಕ್ಕೆ ಶಿವಮೊಗ್ಗದ ದತ್ತಾತ್ರೇಯ ಹೊಸಬಾಳೆ ಅವರು ನೇಮಕವಾಗಿದ್ದಾರೆ. ಈ ಮೂಲಕ ಆರ್‌ಎಸ್‌ಎಸ್‌ ನಲ್ಲಿ 2ನೇ ಸ್ಥಾನದ ಹುದ್ದೆಯನ್ನು ಕನ್ನಡಿಗರೊಬ್ಬರು ಅಲಂಕರಿಸಿದಂತಾಗಿದೆ.

    ಬೆಂಗಳೂರಿನ ಹೊರ ವಲಯದ ಚೆನ್ನೇನಹಳ್ಳಿ ಜನ ಸೇವಾ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಪ್ರತಿನಿಧಿ ಸಭಾ(ಎಬಿಪಿಎಸ್) ಅಧಿವೇಶನದ ವೇಳೆ ನಡೆದ ಚುನಾವಣೆಯಲ್ಲಿ ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಆರ್‌ಎಸ್‌ಎಸ್‌ ನಲ್ಲಿ ಸರಸಂಘಚಾಲಕ ಹಾಗೂ ಸರಕಾರ್ಯವಾಹ ಅತ್ಯುನ್ನತ ಹುದ್ದೆಯಾಗಿದ್ದು, ಈಗ ಮೋಹನ್ ಭಾಗವತ್ ಅವರು ಸರಸಂಘಚಾಲಕರಾಗಿದ್ದಾರೆ. ಇದರ ನಂತರದ ಹುದ್ದೆಯಾದ ಸರಕಾರ್ಯವಾಹ ಹುದ್ದೆಗೆ ಶನಿವಾರದ ಎಬಿಪಿಎಸ್ ನಲ್ಲಿ ನಡೆದ ಆಂತರಿಕ ಚುನಾವಣೆಯಲ್ಲಿ ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆಯಾಗಿದ್ದಾರೆ. 2009ರಿಂದ ಭೈಯಾಜಿ ಜೋಷಿಯವರು ಸರಕಾರ್ಯವಾಹರಾಗಿದ್ದರು.

    ಈ ಹಿಂದೆ ಕರ್ನಾಟಕದಿಂದ ಹೋ.ವೇ.ಶೇಷಾದ್ರಿ ಅವರು ಸರಕಾರ್ಯವಾಹರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಇದೀಗ ಮತ್ತೆ ಇದೇ ಹುದ್ದೆ ಕನ್ನಡಿಗರಿಗೆ ಒಲಿದಿದ್ದು, ದತ್ತಾತ್ರೇಯ ಹೊಸಬಾಳೆ ಅವರು ಆಯ್ಕೆಯಾಗಿದ್ದಾರೆ.

    ಹೊಸಬಾಳೆ ಕಿರುಪರಿಚಯ
    ಶಿವಮೊಗ್ಗದ ಸೊರಬದವರಾದ ದತ್ತಾತ್ರೇಯ ಹೊಸಬಾಳೆ ಅವರು, 1975ರಲ್ಲಿ ಎಂಎ ಅರ್ಧಕ್ಕೆ ಬಿಟ್ಟು, ಲೋಕನಾಯಕ ಜೆಪಿ ಅವರ ನವನಿರ್ಮಾಣ ಆಂದೋಲನಕ್ಕೆ ಧುಮುಕಿ, ಹೋರಾಟದ ಬದುಕಿಗೆ ಕಾಲಿಟ್ಟರು. ಬಾಲ್ಯದಿಂದಲೂ ಆರ್‍ಎಸ್‍ಎಸ್ ಸ್ವಯಂ ಸೇವಕರಾಗಿದ್ದ ಹೊಸಬಾಳೆ ಅವರು ಪಿಯು ಓದುವಾಗಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರಾಗಿದ್ದರು. 1968-72ರಲ್ಲಿ ಸೊರಬ ಹಾಗೂ ಬೆಂಗಳೂರಿನಲ್ಲಿ ಆರ್‌ಎಸ್‌ಎಸ್‌ ಶಾಖೆಯ ಮುಖ್ಯ ಶಿಕ್ಷಕರಾಗಿದ್ದರು.

    ಜೆಪಿ ಆಂದೋಲನಕ್ಕೆ ಧುಮುಕುವ ಮುನ್ನ 1975ರಲ್ಲಿ ಮಧ್ಯ ಪ್ರದೇಶದ ದುರ್ಗ್‍ನಲ್ಲಿ ಆರ್‌ಎಸ್‌ಎಸ್‌ ಓಟಿಸಿ(ಆಫೀಸರ್ಸ್ ಟ್ರೇನಿಂಗ್ ಕೋರ್ಸ್) ಶಿಬಿರ ಮಾಡಿದ್ದರು. ಅಲ್ಲದೆ ತುರ್ತು ಪರಿಸ್ಥಿತಿ ವಿರುದ್ಧ ರಾಜ್ಯದೆಲ್ಲೆಡೆ ಸಂಚರಿಸಿ ಕಾಲೇಜು ವಿದ್ಯಾರ್ಥಿಗಳನ್ನು ಸಂಘಟಿಸಿದರು. ಆದರೆ 1975ರ ಡಿಸೆಂಬರ್ 18ರಂದು ಮೀಸಾ ಕಾಯ್ದೆಯಡಿ ಬಂಧಿಸಲಾಗಿತ್ತು. ಬಳಿಕ ಹೊಸಬಾಳೆ ಅವರು ಸಂಘದ ಪೂರ್ಣಾವಧಿ ಪ್ರಚಾರಕರಾದರು.

    1992 ರಿಂದ 2002ರ ವರೆಗೆ 10 ವರ್ಷಗಳ ಕಾಲ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನ ಸಂಘಟನಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. 2003ರಲ್ಲಿ ಅಖಿಲ ಭಾರತ ಸಹಬೌದ್ಧಿಕ್ ಪ್ರಮುಖ್ ಹೊಣೆಗಾರಿಕೆ ನೀಡಲಾಯಿತು. 2009ರ ವೆರೆಗೆ ಅವರು ಈ ಹುದ್ದೆಯಲ್ಲಿದ್ದರು. 2009ರಲ್ಲಿ ಸಂಘದ ಸಹ ಸರಕಾರ್ಯವಾಹ(ಜಂಟಿ ಪ್ರಧಾನ ಕಾರ್ಯದರ್ಶಿ)ರಾಗಿ ನಿಯೋಜಿಸಲಾಯಿತು. ದತ್ತಾತ್ರೇಯ ಹೊಸಬಾಳೆ ಅವರು ಕನ್ನಡ ಹಾಗೂ ಇಂಗ್ಲಿಷ್‍ನಲ್ಲಿ ಹಲವು ಲೇಖನಗಳನ್ನು ಬರೆದಿದ್ದಾರೆ. ಕನ್ನಡ ಮಾಸಿಕ ಅಸೀಮಾದ ಸ್ಥಾಪಕ ಸಂಪಾದಕರೂ ಆಗಿದ್ದಾರೆ.