Tag: Datta peetha

  • ದತ್ತಪೀಠ ಮಾರ್ಗದಲ್ಲಿ ಕಾರು, ಜೀಪ್ ಡಿಕ್ಕಿ – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್!

    ದತ್ತಪೀಠ ಮಾರ್ಗದಲ್ಲಿ ಕಾರು, ಜೀಪ್ ಡಿಕ್ಕಿ – ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್!

    ಚಿಕ್ಕಮಗಳೂರು: ರಾಜ್ಯದ ಸುಪ್ರಸಿದ್ಧ ಪ್ರವಾಸಿ ತಾಣ ಪಶ್ಚಿಮ ಘಟ್ಟ ತಪ್ಪಲಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಕವಿಕಲ್ ಗಂಡಿ ಬಳಿ ಕಾರು-ಜೀಪ್ ನಡುವೆ ಡಿಕ್ಕಿ ಸಂಭವಿಸಿ ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್  (Traffic Jam) ಉಂಟಾಗಿ ಪ್ರವಾಸಿಗರು ಪರದಾಡಿದ್ದಾರೆ.

    ಬೆಂಗಳೂರು ನೋಂದಣಿ ಹೊಂದಿರುವ ಜೀಪ್ ಹಾಗೂ ಗುಜರಾತ್ ನೋಂದಣಿಯ ಕಾರಿನ ನಡುವೆ ನಡೆದ ಅಪಘಾತದಿಂದಾಗಿ ರಸ್ತೆಯಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿ ಪ್ರವಾಸಿಗರು ಪರದಾಡುವಂತಾಗಿತ್ತು. ವೀಕ್ ಎಂಡ್ ಹಿನ್ನೆಲೆ ಇಂದು (ಶನಿವಾರ) ಮುಳ್ಳಯ್ಯನಗಿರಿ ಹಾಗೂ ದತ್ತಪೀಠ (Datta Peetha) ಭಾಗಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸಿದ್ದರು. ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು. ಇದರ ನಡುವೆ ಕಾರು-ಜೀಪ್ ಡಿಕ್ಕಿಯಿಂದ ಮತ್ತಷ್ಟು ಸಮಸ್ಯೆ ಉಂಟಾಗಿತ್ತು. ಇದನ್ನೂ ಓದಿ: ಈ ಬಾರಿ ದಸರಾ ಸಿದ್ದರಾಮಯ್ಯ ಅಲ್ಲ ನೂತನ ಸಿಎಂ ಮಾಡ್ತಾರೆ: ಆರ್. ಅಶೋಕ್ ಭವಿಷ್ಯ

    ಅಪಘಾತದಿಂದ ಕಾರಿನಲ್ಲಿದ್ದವರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಿಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವಾಹನ ದಟ್ಟಣೆ ಸರಿಪಡಿಸಲು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಹಾಗೂ ಪ್ರವಾಸಿಗರು ಹರಸಾಹಸ ಪಟ್ಟಿದ್ದಾರೆ.

    ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ನಿರಂತರವಾಗಿ ಅಪಘಾತಗಳು ನಡೆಯುತ್ತಿದ್ದು, ಪ್ರವಾಸಿ ವಾಹನಗಳೇ ಹೆಚ್ಚಾಗಿ ಅಪಘಾತಕ್ಕೀಡಾಗುತ್ತಿವೆ. ಹಾಗಾಗಿ, ಹೊರ ಜಿಲ್ಲೆಗಳಿಂದ ಆಗಮಿಸುವವರು ಎಚ್ಚರಿಕೆಯಿಂದ ಚಾಲನೆ ಮಾಡಲು ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಆರಿದ್ರಾ ಮಳೆಯಬ್ಬರ – 93 ವರ್ಷಗಳ ಬಳಿಕ ಜೂನ್‌ನಲ್ಲೇ KRS 123 ಅಡಿ ಭರ್ತಿ

  • ಗಾಳಿ-ಮಳೆಗೆ ಧರೆಗುರುಳಿದ ಮರ; ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗ ಬಂದ್

    ಗಾಳಿ-ಮಳೆಗೆ ಧರೆಗುರುಳಿದ ಮರ; ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗ ಬಂದ್

    ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಭಾರೀ ಗಾಳಿ-ಮಳೆಗೆ ಬೃಹತ್ ಮರ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಚಿಕ್ಕಮಗಳೂರು-ಮುಳ್ಳಯ್ಯನಗಿರಿ-ದತ್ತಪೀಠ ಮಾರ್ಗದ ರಸ್ತೆ ಸಂಪೂರ್ಣ ಬಂದ್ ಆಗಿದೆ.

    ಬೆಳ್ಳಂ ಬೆಳಗ್ಗೆಯೇ ಬೃಹತ್ ಮರ ರಸ್ತೆಗೆ ಬಿದ್ದ ಪರಿಣಾಮ ಪ್ರವಾಸಿಗರು ಹಾಗೂ ಸ್ಥಳೀಯರು ಪರದಾಟ ಅನುಭವಿಸುವಂತಾಗಿದೆ. ಕೈಮರದಿಂದ 4 ಕಿ.ಮೀ. ದೂರದಲ್ಲಿ ದತ್ತಪೀಠ (Datta Peetha) ಹಾಗೂ ಮುಳ್ಳಯ್ಯನಗಿರಿ (Mullayyanagiri) ಹೋಗುವ ಸರ್ಕಲ್ ಬಳಿಯೇ ಮರ ಬಿದ್ದಿದ್ದು, ಎರಡು ಸ್ಥಳಗಳಿಗೆ ಸಂಪರ್ಕ ಸಂಪೂರ್ಣ ಕಟ್ ಆಗಿದೆ. ಕಿರಿದಾದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಕಾರಣ ಸ್ಥಳೀಯರು-ಗ್ರಾಮಾಂತರ ಪೊಲೀಸರು ಮರ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಮಹಿಳೆಯ ನಗ್ನ ವಿಡಿಯೋ ರೆಕಾರ್ಡ್‌ ಮಾಡ್ಕೊಂಡು ಬ್ಲ್ಯಾಕ್‌ಮೇಲ್‌ – ಪ್ರತಿಷ್ಠಿತ ದೇವಸ್ಥಾನದ ಅರ್ಚಕ ಅರೆಸ್ಟ್‌

    ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಸಿಗರು ಎಚ್ಚರಿಕೆಯಿಂದ ಸಂಚರಿಸುವಂತೆ ಪ್ರವಾಸಿಗರಿಗೆ ಮನವಿ ಮಾಡಿದ್ದಾರೆ. ಇನ್ನು ಕೊಪ್ಪ ತಾಲೂಕಿನ ಮೇಗುಂದಾ ಸಮೀಪದ ವೆಂಕಟರಮಣ ದೇವಸ್ಥಾನದ ಬಳಿ ಕೊಗ್ರೆ ಗ್ರಾಮಕ್ಕೆ ಹೋಗುವ ಮಾರ್ಗದಲ್ಲೂ ಬೃಹತ್ ಮರ ರಸ್ತೆಗೆ ಉರುಳಿದ್ದು, ನಾಲ್ಕೈದು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಬೃಹತ್ ಮರ ಬುಡಸಮೇತ ಬಿದ್ದ ಪರಿಣಾಮ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮರ ತೆರವು ಮಾಡಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಇರಾನ್‌-ಇಸ್ರೇಲ್‌ ಸಂಘರ್ಷ ತೀವ್ರ – ಇಸ್ರೇಲ್‌ ಮಿಸೈಲ್‌ ದಾಳಿಗೆ ಇರಾನ್‌ನ 14 ಅಧಿಕಾರಿಗಳು ಬಲಿ

  • ಪ್ರವಾಸಿಗರೇ ಗಮನಿಸಿ; ಕಾಫಿನಾಡ ಮುಳ್ಳಯ್ಯನಗಿರಿ-ದತ್ತಪೀಠ 3 ದಿನ ಬಂದ್!

    ಪ್ರವಾಸಿಗರೇ ಗಮನಿಸಿ; ಕಾಫಿನಾಡ ಮುಳ್ಳಯ್ಯನಗಿರಿ-ದತ್ತಪೀಠ 3 ದಿನ ಬಂದ್!

    ಚಿಕ್ಕಮಗಳೂರು: ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ 3 ದಿನಗಳ ಕಾಲ ಉರುಸ್ (Urus) ನಡೆಯುವುದರಿಂದ ಚಿಕ್ಕಮಗಳೂರು (Chikkamagaluru) ಜಿಲ್ಲಾಡಳಿತ ಪ್ರವಾಸಿಗರಿಗೆ (Tourists) ಸಂಪೂರ್ಣ ನಿರ್ಬಂಧ ಹೇರಿದೆ.

    ಉರುಸ್ ಅಂಗವಾಗಿ ಜಿಲ್ಲಾಡಳಿತ 3 ದಿನಗಳ ಕಾಲ ಪಶ್ಚಿಮ ಘಟ್ಟಗಳ ತಪ್ಪಲು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಮಾಣಿಕ್ಯಾಧಾರ, ಗಾಳಿಕೆರೆ ಸೇರಿ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಿದೆ. ಇದೇ ಮಾರ್ಚ್ 15ರಿಂದ 17ರವರೆಗೆ 3 ದಿನಗಳ ಕಾಲ ಜಿಲ್ಲಾಡಳಿತ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ-ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ. ಚಿಕ್ಕಮಗಳೂರು ತಾಲೂಕಿನ ದತ್ತಪೀಠದಲ್ಲಿ ಮಾರ್ಚ್ 15 ರಿಂದ 17ವರೆಗೆ 3 ದಿನ ಉರುಸ್ ನಡೆಯುವ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿ ತಾಣಗಳಿಗೆ ನಿರ್ಬಂಧಿಸಿದೆ. ಇದನ್ನೂ ಓದಿ: ಮತಾಂತರ ಆಗುವಂತೆ ನನಗೆ ಒತ್ತಡ ಹೇರುತ್ತಿದ್ದರು: ಮಾಜಿ ಪಾಕ್ ಕ್ರಿಕೆಟಿಗ ಕನೇರಿಯಾ

    ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಸಾವಿರಾರು ಮುಸ್ಲಿಂ ಬಾಂಧವರು ಉರುಸ್ ಆಚರಣೆಯಲ್ಲಿ ಪಾಲ್ಗೊಳ್ಳುವುದರಿಂದ ಯಾವುದೇ ಅಹಿತಕರ ಘಟನೆ ನಡೆಯಬಾರದು. ಟ್ರಾಫಿಕ್ ಜಾಮ್ ಸಮಸ್ಯೆ ಎದುರಾಗಬಾರದು ಎಂದು ಜಿಲ್ಲಾಡಳಿತ ಪ್ರವಾಸಿಗರಿಗೆ ಸಂಪೂರ್ಣ ನಿಷೇಧ ಹೇರಿದೆ. ಇದನ್ನೂ ಓದಿ: ಐಪಿಎಸ್ ಸೂಚನೆಯಂತೆ ರನ್ಯಾಗೆ ಗ್ರೀನ್‌ಚಾನಲ್ – ಡಿಆರ್‌ಐ ಮುಂದೆ ಶಿಷ್ಟಾಚಾರ ಅಧಿಕಾರಿ ಹೇಳಿಕೆ

    ಚಿಕ್ಕಮಗಳೂರಿನಿಂದ ದತ್ತಪೀಠದ ಮಾರ್ಗದ ರಸ್ತೆ ಅತ್ಯಂತ ಚಿಕ್ಕದಾಗಿರುವುದರಿಂದ ಟ್ರಾಫಿಕ್ ಜಾಮ್ ಉಂಟಾಗಬಾರದು ಜೊತೆಗೆ ಭದ್ರತೆಯ ದೃಷ್ಠಿಯಿಂದಲೂ ಪ್ರವಾಸಿಗರಿಗೆ ನಿರ್ಬಂಧ ಹಾಕಲಾಗಿದೆ. ಆದರೆ, ಹೋಂ ಸ್ಟೇ ಹಾಗೂ ರೆಸಾರ್ಟ್ಗಳಿಗೆ ಮೊದಲೇ ಬುಕ್ ಮಾಡಿರುವ ಪ್ರವಾಸಿಗರಿಗೆ ಯಾವುದೇ ನಿರ್ಬಂಧವಿಲ್ಲ. ಪ್ರವಾಸಿಗರು ಬುಕ್ಕಿಂಗ್ ತೋರಿಸಿ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಮಾತ್ರ ಹೋಗಬಹುದು. ಇದನ್ನೂ ಓದಿ: ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡೇ ಕೋಚಿಂಗ್‌ಗೆ ಬಂದ ರಾಹುಲ್ ದ್ರಾವಿಡ್

    ಇನ್ನು ಗಿರಿ ಭಾಗದ ಕಾಫಿ ತೋಟಗಳಿಗೆ ಓಡಾಡುವ ಸ್ಥಳೀಯರಿಗೂ ಯಾವುದೇ ನಿರ್ಬಂಧವಿಲ್ಲ. ಉರುಸ್ ಆಚರಣೆ ಹಿನ್ನೆಲೆ ಪೊಲೀಸ್ ಕೂಡ ಜಿಲ್ಲಾದ್ಯಂತ ಹದ್ದಿನ ಕಣ್ಣಿಟ್ಟಿದೆ. ಚಿಕ್ಕಮಗಳೂರು ನಗರ ಹಾಗೂ ದತ್ತಪೀಠದಲ್ಲಿ 800ಕ್ಕೂ ಅಧಿಕ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಇದನ್ನೂ ಓದಿ: 6 ಅಡಿ ಎತ್ತರದ ವ್ಯಕ್ತಿಯೊಬ್ಬ ಚಿನ್ನವಿದ್ದ ಎರಡು ಬಾಕ್ಸ್ ನೀಡಿದ್ದ: ರನ್ಯಾ ತಪ್ಪೊಪ್ಪಿಗೆ

  • ದತ್ತಪೀಠದ ಪೂಜಾ ಪದ್ಧತಿ – ಸುಪ್ರಿಂ ಸೂಚನೆಯಂತೆ ಕ್ಯಾಬಿನೆಟ್ ಸಬ್ ಕಮಿಟಿ ಸಭೆ

    ದತ್ತಪೀಠದ ಪೂಜಾ ಪದ್ಧತಿ – ಸುಪ್ರಿಂ ಸೂಚನೆಯಂತೆ ಕ್ಯಾಬಿನೆಟ್ ಸಬ್ ಕಮಿಟಿ ಸಭೆ

    ಚಿಕ್ಕಮಗಳೂರು: ರಾಜ್ಯ ಸರ್ಕಾರಕ್ಕೆ ದತ್ತಪೀಠದ (Datta Peetha) ಪೂಜಾ ಪದ್ಧತಿ ವಿಚಾರವಾಗಿ ಸುಪ್ರೀಂ ಕೋರ್ಟ್‌ (Supreme Court ) ಸೂಚನೆಯಂತೆ ಸರ್ಕಾರ ರಚಿಸಿರುವ ಕ್ಯಾಬಿನೆಟ್ ಸಬ್ ಕಮಿಟಿ ದತ್ತಪೀಠದ ವಾದ-ವಿವಾದದ ಬಗ್ಗೆ ಸಭೆ ನಡೆಸಿದೆ.

    ಜ.7 ರಂದು ಸುಪ್ರೀಂ ಕೋರ್ಟ್‌ ಕರ್ನಾಟಕ ಸರ್ಕಾರಕ್ಕೆ ದತ್ತಪೀಠದ ಪೂಜಾ ಪದ್ಧತಿ ಹಾಗೂ ಸಂವರ್ಧನಾ ಸಮಿತಿ ಬಗ್ಗೆ ನಿಮ್ಮ ನಿಲುವೇನು ಎಂಬ ಪ್ರಶ್ನೆ ಹಾಕಿ ಎರಡು ತಿಂಗಳ ಒಳಗೆ ಉತ್ತರ ನೀಡುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಅದರಂತೆ ದತ್ತಪೀಠದ ವಿವಾದ ಕುರಿತು ಸರ್ಕಾರ ನೇಮಿಸಿದ ಕಮಿಟಿ ಸಭೆ ನಡೆಸಿದೆ. ಸಭೆಯಲ್ಲಿ ಗೃಹಸಚಿವ ಪರಮೇಶ್ವರ್, ಜಮೀರ್ ಅಹಮದ್, ಕೃಷ್ಣಭೈರೇಗೌಡ, ರಾಮಲಿಂಗಾರೆಡ್ಡಿ ಸೇರಿ ಏಳು ಜನ ಸಚಿವರಿದ್ದು, ಹಿಂದೂ ಸಂಘಟನೆ ಮುಖಂಡರು ಹಾಗೂ ಶಾಖಾದ್ರಿ ಕುಟುಂಬದ ಜೊತೆ ಸಭೆ ನಡೆಸಿದ್ದಾರೆ. ಇದೇ ಮಾರ್ಚ್ 24ರಂದು ಸುಪ್ರೀಂ ಕೋರ್ಟಿನಲ್ಲಿ ಈ ಸಂಬಂಧ ವಿಚಾರಣೆ ನಡೆಯಲಿದೆ.

    ಹಿಂದೂ ಸಂಘಟನೆಗಳ ಪರವಾಗಿ ವಿಶ್ವ ಹಿಂದೂ ಪರಿಷದ್, ಭಜರಂಗದಳ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗಿದ್ದರು. ಮುಸ್ಲಿಮರ ಪರವಾಗಿ ಶಾಖಾದ್ರಿ ಕುಟುಂಬಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು. ಸಭೆಯ ವರದಿಯನ್ನು ಸುಪ್ರೀಂ ಕೋರ್ಟ್‍ಗೆ ತಲುಪಿಸಲಿದೆ. ಸಭೆಯ ಬಳಿಕ ದತ್ತಪೀಠದ ಪೂಜಾ ಪದ್ಧತಿ ಹಾಗೂ ದತ್ತಪೀಠ ಆಡಳಿತದ ಸಂವರ್ದನಾ ಸಮಿತಿ ಬಗ್ಗೆ ರಾಜ್ಯ ಸರ್ಕಾರದ ನಿಲುವು ಈಗ ನಿಗೂಢವಾಗಿದೆ.

    ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ತಾಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಉಮೇದುವಾರಿಕೆಗಾಗಿ ಕಳೆದ ಮೂರು ದಶಗಳಿಂದ ಹಿಂದೂ-ಮುಸ್ಲಿಮರು ನ್ಯಾಯಾಲಯದ ಹೊರಗೆ-ಒಳಗೆ ಹೋರಾಡುತ್ತಲೇ ಇದ್ದಾರೆ. ಹಿಂದೂಗಳು ಇದು ದತ್ತಪೀಠ, ನಿಮ್ಮ ದರ್ಗಾ ನಾಗೇಹಳ್ಳಿಯಲ್ಲಿದೆ ಎನ್ನುತ್ತಿದ್ದಾರೆ. ಮುಸ್ಲಿಮರು ಇದು ಬಾಬಾಬುಡನ್ ದರ್ಗಾ ನಮ್ಮದೇ ಎನ್ನುತ್ತಿದ್ದಾರೆ.

    ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ (ದತ್ತಪೀಠದ) ದ ಆಡಳಿತಕ್ಕಾಗಿ ಹೈಕೋರ್ಟ್ ಆದೇಶದ ಅನ್ವಯ ದತ್ತಪೀಠ ಸಂವರ್ದನಾ ಸಮಿತಿಯನ್ನ ನೇಮಿಸಿತ್ತು. ಅದರಂತೆ ಇಂದಿಗೂ ದತ್ತಪೀಠದಲ್ಲಿ ಹಿಂದೂ ಅರ್ಚಕರಿಂದ ದತ್ತಪೀಠದ ದತ್ತಾತ್ರೇಯರಿಗೆ ಪೂಜೆ ನಡೆಯುತ್ತಿದೆ. ಕಳೆದೊಂದು ವರ್ಷದ ಹಿಂದೆ ಶಾಖಾದ್ರಿ ಕುಟುಂಬದ ಫಕ್ರುದ್ಧಿನ್ ಶಾ ಖಾದ್ರಿ ದತ್ತಪೀಠದ ಪೂಜಾ ಪದ್ಧತಿ ಹಾಗೂ ಬಿಜೆಪಿ ಸರ್ಕಾರ ನೇಮಿಸಿದ್ದ ದತ್ತಪೀಠ ಸಂವರ್ದನಾ ಸಮಿತಿ ವಿರುದ್ಧ ರದ್ದು ಮಾಡುವಂತೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಶಾಖಾದ್ರಿ ಅವರ ಅರ್ಜಿಯನ್ನ ವಜಾಗೊಳಿಸಿತ್ತು. ಹಾಗಾಗಿ, ಫ್ರಕ್ರುದ್ಧಿನ್ ಶಾಖಾದ್ರಿ ಸುಪ್ರೀಂ ಕೋರ್ಟ್ ಮೇಟ್ಟಿಲೇರಿದ್ದರು. ಮೂರು ದಶಕಗಳಿಂದ ದತ್ತಪೀಠದ ವಿವಾದ ಸುಪ್ರೀಂ ಕೋರ್ಟಿನಲ್ಲಿದೆ.

  • ಒಂದೇ ಸಮುದಾಯದ 7 ಮಂದಿ ಇದ್ದಾರೆ – ದತ್ತಪೀಠದ ವ್ಯವಸ್ಥಾಪನ ಸಮಿತಿ ವಿರುದ್ಧ ಅಪಸ್ವರ

    ಒಂದೇ ಸಮುದಾಯದ 7 ಮಂದಿ ಇದ್ದಾರೆ – ದತ್ತಪೀಠದ ವ್ಯವಸ್ಥಾಪನ ಸಮಿತಿ ವಿರುದ್ಧ ಅಪಸ್ವರ

    ಚಿಕ್ಕಮಗಳೂರು: ಹಿಂದೂ-ಮುಸ್ಲಿಮರ ಧಾರ್ಮಿಕ ಭಾವೈಕ್ಯತಾ ಕೇಂದ್ರ ಹಾಗೂ ವಿವಾದಿತ ಪ್ರದೇಶವೂ ಆಗಿರುವ ದತ್ತಪೀಠದ (Datta Peetha) ಆಡಳಿತಕ್ಕೆ ರಾಜ್ಯ ಸರ್ಕಾರ (Government) ನೇಮಕ ಮಾಡಿದ ವ್ಯವಸ್ಥಾಪನ ಸಮಿತಿ ವಿರುದ್ಧ ಅಪಸ್ವರ ಕೇಳಿ ಬಂದಿದೆ.

    ಸಮಿತಿಯಲ್ಲಿ ಎರಡು ಸಮುದಾಯಕ್ಕೆ ಸೇರಿದ ಎಂಟು ಜನರಿರಬೇಕಿತ್ತು. ಆದರೆ, ಒಂದೇ ಸಮುದಾಯಕ್ಕೆ ಸೇರಿದ ಏಳು ಜನರಿದ್ದಾರೆ. ಈ ಸಮಿತಿ ಮೇಲೆ ನಂಬಿಕೆ ಇಲ್ಲ. ಕೂಡಲೇ ಈ ಸಮಿತಿಯನ್ನು ಅನೂರ್ಜಿತಗೊಳಿಸಬೇಕೆಂದು ಕೋಮು ಸೌಹಾರ್ದ ವೇದಿಕೆ ಆಗ್ರಹಿಸಿದೆ. ಇದನ್ನೂ ಓದಿ: 1 ರೂ.ಗೆ ಲೀಸ್ ಪಡೆದಿದ್ದ ಅವಧಿ ಮುಕ್ತಾಯ – ಜಾಗ ಬಿಟ್ಟುಕೊಡುವಂತೆ ಕೇಳಿದ ದೇವಸ್ಥಾನ ಮಂಡಳಿ

    ನಗರದಲ್ಲಿ ಮಾತನಾಡಿದ ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿನುದ್ದಿನ್, ಸಮಿತಿಯಲ್ಲಿ ಏಳು ಮಂದಿ ಸದಸ್ಯರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ಈ ಕಮಿಟಿಯನ್ನು ಕೂಡಲೇ ರದ್ದುಪಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಸರ್ಕಾರ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಆಡಳಿತಾತ್ಮಕ ಅನುಕೂಲಕ್ಕಾಗಿ ಹಿಂದೂ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದ ಎಂಟು ಜನರ ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿ ಆದೇಶಿಸಿದೆ. ಆದರೆ, ಮುಸ್ಲಿಂ ಸಮುದಾಯದ ಕೇವಲ ಒಬ್ಬರನ್ನು ಕಮಿಟಿ ಸದಸ್ಯರನ್ನಾಗಿ ನೇಮಿಸಿ, ಉಳಿದ 7 ಜನರನ್ನು ಒಂದೇ ಸಮುದಾಯಕ್ಕೆ ಸೇರಿದವರನ್ನು ನೇಮಿಸಿದೆ. ಈ ಮೂಲಕ ಸರ್ಕಾರ ತಾರತಮ್ಯ ನೀತಿ ಅನುಸರಿಸಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಕ – ಹಿಂದೂಗಳ 5 ದಶಕಗಳ ಹೋರಾಟಕ್ಕೆ ಜಯ ಎಂದ ಸಿಟಿ ರವಿ

    ಹಾಲಿ ಕಮಿಟಿಯನ್ನು ಅನೂರ್ಜಿತಗೊಳಿಸಬೇಕು. ಎರಡು ಸಮುದಾಯಕ್ಕೆ ಸೇರಿದ ಸದಸ್ಯರನ್ನು ಸಮಾನ ರೀತಿ ಹಾಗೂ ಇಬ್ಬರು ಮಹಿಳೆಯನ್ನೊಳಗೊಂಡ ಪಾರದರ್ಶಕ ಸಮಿತಿಯನ್ನು ರಚಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಕಮಿಟಿ 1989ರ ಧಾರ್ಮಿಕ ದತ್ತಿ ಆಯುಕ್ತರ ಆದೇಶಕ್ಕೆ ಪೂರಕವಾಗಿರಬೇಕು. ಇಲ್ಲವಾದಲ್ಲಿ ವೇದಿಕೆ ವತಿಯಿಂದ ಜನಪರ ಮತ್ತು ಕಾನೂನು ಹೋರಾಟ ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಮ್ಮ ಅವಧಿಯಲ್ಲೇ ದತ್ತಪೀಠಕ್ಕೆ ಮುಕ್ತಿ: ಶೋಭಾ ಕರಂದ್ಲಾಜೆ

    ನಮ್ಮ ಅವಧಿಯಲ್ಲೇ ದತ್ತಪೀಠಕ್ಕೆ ಮುಕ್ತಿ: ಶೋಭಾ ಕರಂದ್ಲಾಜೆ

    ಚಿಕ್ಕಮಗಳೂರು: ಹೇಗೆ ರಾಮ ಮಂದಿರದ ಕಲ್ಪನೆ ಇತ್ತೋ ಅದು ಇಂದು ಸಕಾರಗೊಂಡಿದೆ. ಅದೇ ರೀತಿ ನಮ್ಮ ದತ್ತಪೀಠದಲ್ಲಿ ದತ್ತಮಂದಿರ ನಿರ್ಮಾಣವಾಗುತ್ತೆ. ನಮ್ಮ ಸರ್ಕಾರದ ಅವಧಿಯಲ್ಲೇ ಈ ಸಮಸ್ಯೆ ಬಗೆಹರಿಯುತ್ತೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

    ಜಿಲ್ಲೆಯಲ್ಲಿ ನಡೆಯುತ್ತಿರುವ ದತ್ತ ಜಯಂತಿಯ ಮೊದಲ ದಿನವಾದ ಇಂದು ಅನುಸೂಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಗರದ ಬೋಳರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾಮಧೇನು ಗಣಪತಿ ದೇವಾಲಯದವರೆಗೂ ಮೆರವಣಿಗೆ ಬಡಡೆಸಲಾಯಿತು. ಬಳಿಕ ಶೋಭಾ ಕರಂದ್ಲಾಜೆ ಮಾಧ್ಯಮಗಳ ಜೊತೆ ಮಾತನಾಡಿದರು.

    ಇದೊಂದು ವಿಶೇಷ ಪೀಠ. ಜಗತ್ತಿನಾದ್ಯಂತ ದತ್ತ ಭಕ್ತರಿದ್ದಾರೆ. ಆದರೆ ದತ್ತನ ಪಾದುಕೆ ಇರೋದು ನಮ್ಮ ಚಿಕ್ಕಮಗಳೂರಲ್ಲಿ. ದತ್ತ ಪೀಠ ನಮ್ಮದು, ಇದು ನಮ್ಮದಾಗಬೇಕು. ಇದು ನಮ್ಮ ಸಂಕಲ್ಪ. ನ್ಯಾಯಾಲಯದಲ್ಲಿ ಹಲವು ರೀತಿಯ ತೀರ್ಮಾನಗಳು ಬಂದಿವೆ. ನಮಗೆ ವಿಶ್ವಾಸವಿದೆ ಮುಂದಿನ ದಿನಗಳಲ್ಲಿ ದತ್ತಪೀಠ ನಮ್ಮದಾಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

    ಕೊರೊನಾದಂತ ಮಹಾಮಾರಿ ದೂರವಾಗಬೇಕು, ಈ ದೇಶದಲ್ಲಿ ಸುಭೀಕ್ಷೆ ನೆಲೆಸಬೇಕು. ಅದಕ್ಕಾಗಿ ದತ್ತಾತ್ರೇಯನ ಬಳಿ ಪ್ರಾರ್ಥನೆ ಸಲ್ಲಿಸುತ್ತೇವೆ. ದತ್ತಪೀಠವನ್ನ ಹಿಂದೂಗಳ ಪೀಠವೆಂದು ಘೋಷಿಸಲು ಕಾನೂನಿನ ಅಡೆತಡೆಯಿದೆ. ನಮ್ಮ ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಕಾನೂನಿನ ಸಲಹೆಯಂತೆ ರಾಜ್ಯ ಸರ್ಕಾರ ನಡೆದುಕೊಳ್ಳೂತ್ತೆ. ನಮ್ಮ ಅವಧಿಯಲ್ಲೇ ದತ್ತಪೀಠದ ಸಮಸ್ಯೆ ಬಗೆಹರಿಯುತ್ತೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.

    ಎಲ್ಲ ಸಮಸ್ಯೆ ಹಾಗೂ ನ್ಯಾಯಾಲಯದಲ್ಲಿರುವ ಎಲ್ಲ ಅಡೆತಡೆಗಳನ್ನು ದತ್ತ ದೂರಗೊಳಿಸುತ್ತಾನೆ. ಈ ಪೀಠದಲ್ಲಿ ದತ್ತಾತ್ರೇಯ ಮಂದಿರ ನಿರ್ಮಾಣವಾಗುತ್ತೆ. ಬಾಬಾಬುಡನ್‍ಗೆ ಯಾವ ಜಾಗ ಮೀಸಲಿಟ್ಟಿದ್ಯೋ ಆ ಜಾಗದಲ್ಲಿ ಅವರಿಗೆ ಪೂಜೆಯಾಗುವಂತಹದ್ದು ಬರುವ ದಿನಗಳಲ್ಲಿ ಆಗುತ್ತೆ ಎಂದರು.

    ದತ್ತ ಪೀಠದಲ್ಲಿ ದತ್ತ ಜಯಂತಿ ಹಾಗೂ ಅನುಸೂಯ ಜಯಂತಿಯನ್ನು ಆಚರಿಸುತ್ತಿದ್ದೇವೆ. ಈ ವರ್ಷ ಕೋವಿಡ್ ಇರುವ ಕಾರಣ ಕೇವಲ ಪ್ರಮುಖರು ಮಾತ್ರ ಸಂಕೀರ್ತನಾ ಯಾತ್ರೆ ಕೈಗೊಂಡು ದತ್ತಪೀಠಕ್ಕೆ ಹೋಗಬೇಕೆಂದು ತೀರ್ಮಾನವಾಗಿದೆ. ಅನುಸೂಯ ಜಯಂತಿ ಅಂಗವಾಗಿ ರಾಜ್ಯದ ಪ್ರಮುಖ ಮಹಿಳೆಯರು ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. ಅನುಸೂಯ ಜಯಂತಿ ಹಾಗೂ ದತ್ತನ ದರ್ಶನ ಮಾಡುತ್ತೇವೆ ಎಂದರು.

    ಮೆರವಣಿಗೆ ಹಾಗೂ ದತ್ತಪೀಠದಲ್ಲಿ ನಡೆದ ಹೋಮ-ಹವನದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ, ನಟಿ ತಾರಾ ಹಾಗೂ ಮಾಳವಿಕ ಸೇರಿದಂತೆ ವಿವಿಧ ಮುಖಂಡರು ಪಾಲ್ಗೊಂಡಿದ್ದರು.

  • ರಕ್ತಚೆಲ್ಲಿಯಾದ್ರೂ ದತ್ತಪೀಠವನ್ನ ಹಿಂದೂ ಪೀಠವಾಗಿಸ್ತೇವೆ- ಮುತಾಲಿಕ್

    ರಕ್ತಚೆಲ್ಲಿಯಾದ್ರೂ ದತ್ತಪೀಠವನ್ನ ಹಿಂದೂ ಪೀಠವಾಗಿಸ್ತೇವೆ- ಮುತಾಲಿಕ್

    ಚಿಕ್ಕಮಗಳೂರು: ರಕ್ತಚೆಲ್ಲಿಯಾದರು ದತ್ತಪೀಠವನ್ನ ಹಿಂದೂಗಳ ಪೀಠವಾಗಿಸುತ್ತೇವೆ ಎಂದು ಸರ್ಕಾರಕ್ಕೆ ಸ್ಪಷ್ಟಪಡಿಸುತ್ತೇವೆ ಅಂತ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ನಗರದಲ್ಲಿ ಶ್ರೀರಾಮಸೇನೆ ನೇತೃತ್ವದಲ್ಲಿ ನಡೆಯುತ್ತಿರುವ ದತ್ತಮಾಲಾ ಅಭಿಯಾನದ ಅಂತಿಮ ದಿನವಾದ ಇಂದು ಶೋಭಾಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಮುತಾಲಿಕ್ ರಾಜಕೀಯ ಮುಖಂಡರ ವಿಳಂಬ ನೀತಿಯ ವಿರುದ್ಧ ವಾಗ್ದಾಳಿ ನಡೆಸಿದರು.

    ದತ್ತಪೀಠ ವಿವಾದವನ್ನು ಶಾಂತಿಯಿಂದಲೇ ಬಗೆಹರಿಸಬಹುದು. ಆದರೆ ವಿವಾದವನ್ನು ಜೀವಂತವಾಗಿರುವಂತೆ ರಾಜಕಾರಣಿಗಳು, ಬುದ್ಧಿಜೀವಿಗಳು ನೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ ಅವರು ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿದ್ದರು. ಇಂದು ದೇವೇಗೌಡ ಅವರ ಪುತ್ರರಾದ ಎಚ್‍ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾರೆ. ತಂದೆಯಂತೆ ಇಂದು ದತ್ತಪೀಠ ವಿವಾದವನ್ನ ಬಗೆಹರಿಸಿ ಹಿಂದೂಗಳಿಗೆ ನೀಡಬೇಕೆಂದು ಎಂದು ಮನವಿ ಮಾಡಿದರು.

    ದತ್ತಪೀಠದ ಪ್ರದೇಶದಲ್ಲಿರುವ ನಾಗೇನಹಳ್ಳಿ ಬಳಿರುವ ಬಾಬಾಬುಡನ್ ದರ್ಗಾವನ್ನು ಮುಸ್ಲಿಮರಿಗೆ ಒಪ್ಪಿಸಿ, ಈಗ ಇರುವ ಶ್ರೀ ಗುರು ದತ್ತಾತ್ರೇಯ ಪೀಠವನ್ನು ಹಿಂದೂಗಳಿಗೆ ನೀಡುವ ಮೂಲಕ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಬಹುದು. ಕಾಂಗ್ರೆಸ್ ಹಾಗೂ ಬುದ್ಧಿಜೀವಿಗಳಿಗೆ ದತ್ತಪೀಠದ ವಿವಾದ ಜೀವಂತವಾಗಿರಬೇಕಿದೆ. ಬುದ್ಧಿ ಜೀವಿಗಳ ಕಿತಾಪತಿ ಇರುವವರೆಗೂ ನೀತಿ ನಿಯಮಗಳು, ಬಂಧನಗಳು ಸಾಕಷ್ಟು ಇರುತ್ತದೆ. ಇವುಗಳೆಲ್ಲ ಇದ್ದರು ಕೂಡ ಭಕ್ತರು ಯಾವುದಕ್ಕೂ ಹೆದರದೆ ಹೋರಾಟದಲ್ಲಿ ಭಾಗವಹಿಸಿದ್ದಾರೆ. ನಮ್ಮ ಹೋರಾಟವನ್ನು ಯಾವುದೇ ಕಾರಣಕ್ಕೂ ತಡೆಯಲು ಸಾಧ್ಯವಿಲ್ಲ. ದತ್ತಪೀಠ ಹಿಂದೂಗಳ ಪೀಠ ಆಗುವವರೆಗೂ ನಮ್ಮ ಹೋರಾಟ ನಿರಂತರ ಎಂದು ಖಡಕ್ ಆಗಿ ನುಡಿದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv