Tag: datta peeta

  • ದತ್ತಪೀಠದ ಗೋರಿಗಳು ನಕಲಿ – ಹಿಂದೂಪರ ಸಂಘಟನೆಗಳ ಆರೋಪ

    ದತ್ತಪೀಠದ ಗೋರಿಗಳು ನಕಲಿ – ಹಿಂದೂಪರ ಸಂಘಟನೆಗಳ ಆರೋಪ

    – ಪಂಚಾಯಿತಿ ದಾಖಲೆಯಲ್ಲಿಲ್ಲ ಶವ ಹೂತ ಮಾಹಿತಿ

    ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಕಾಫಿನಾಡ ದತ್ತಪೀಠದ (Datta Peeta) ಗುಹೆ ಒಳಗೆ-ಹೊರಗೆ ಇರೋ ಗೋರಿಗಳು ನಕಲಿ ಅಂತ ಬಿಜೆಪಿ-ಹಿಂದೂ ಸಂಘಟನೆಗಳು 30 ವರ್ಷದಿಂದ ಹೇಳಿಕೊಂಡೇ ಬರುತ್ತಿವೆ. ಇದರ ನಡುವೆ ಇನಾಂ ದತ್ತಾತ್ರೇಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೊಟ್ಟಿರೋ ಉತ್ತರ ಎಲ್ಲರ ಕಿವಿಯನ್ನ ನೆಟ್ಟಗಾಗಿಸಿದೆ.

    ಹಿಂದೂಪರ ಸಂಘಟನೆಗಳು ಆರ್‌ಟಿಐನಲ್ಲಿ ಗೋರಿಗಳು ಯಾರದ್ದು? ನೀವು ಯಾರದ್ದಾದರೂ ಶವ ಹೂತಿದ್ದೀರಾ? ಸಾಧು-ಸಂತರು, ಮುಸ್ಲಿಂ ಧರ್ಮಗುರುಗಳು, ಪಕೀರರ ಶವ ಹೂತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಈ ಮಾಹಿತಿಗೆ ಇನಾಂ ದತ್ತಾತ್ರೇಯ ಪೀಠ ಗ್ರಾಮ ಪಂಚಾಯಿತಿ ಯಾವುದೇ ಮಾಹಿತಿ ಗ್ರಾಮ ಪಂಚಾಯಿತಿಯಲ್ಲಿ ಇಲ್ಲ ಎಂದು ಹಿಂಬರಹ ನೀಡಿದ್ದಾರೆ. ಇದು ಬಿಜೆಪಿಗರು (BJP) ಇಷ್ಟು ವರ್ಷ ಮಾಡಿಕೊಂಡ ಬಂದ ಆರೋಪಕ್ಕೆ ಪುಷ್ಠಿ ಸಿಕ್ಕಿದ್ದು ಇನ್ಮುಂದೆ ಹೋರಾಟದ ಹಾದಿ ಬದಲಾಗೋ ಸಾಧ್ಯತೆ ಕೂಡ ಇದೆ. ಇದನ್ನೂ ಓದಿ: ದತ್ತಪೀಠ ವಿವಾದ; ಭೂ ದಾಖಲೆಗಳ ಆಧಾರದ ಮೇಲೆ ವಿವಾದ ಬಗೆಹರಿಯಲಿ: ಸಿ.ಟಿ ರವಿ

    ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಹೆಚ್‌ಪಿ (VHP) ಮುಖಂಡ ರಂಗನಾಥ್, ಗ್ರಾಮ ಪಂಚಾಯಿತಿಯ ಈ ಉತ್ತರ ಹಿಂದೂಪರ ಸಂಘಟನೆಗಳ ಹೋರಾಟಕ್ಕೆ ಆನೆ ಬಲ ತರಿಸಿದೆ. ಹಿಂದೂ ಪರ ಸಂಘಟನೆಗಳು 30 ವರ್ಷಗಳಿಂದ ದತ್ತಪೀಠ ಹಿಂದೂಗಳದ್ದು. ಧರ್ಮಸ್ಥಳದ ಉತ್ಖನನದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ದತ್ತಪೀಠದಲ್ಲೂ ಅಂತಹದ್ದೇ ಷಡ್ಯಂತ್ರ ನಡೆದಿದೆ. ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರೋದ್ರಿಂದ ಅಲ್ಲಿ ಯಾವುದೇ ಮುಸ್ಲಿಮರ ಕುರುಹುಗಳಿಲ್ಲ. ಹಾಗಾಗಿ, ದತ್ತಪೀಠವನ್ನು ಮುಸ್ಲಿಂ ಮುಕ್ತವನ್ನಾಗಿಸಿ ಸಂಪೂರ್ಣವಾಗಿ ಹಿಂದುಗಳಿಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.

    30 ವರ್ಷದ ದತ್ತಪೀಠದ ವಿವಾದ-ಹೋರಾಟ ಈಗ ಮತ್ತೊಂದು ರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಗ್ರಾಮ ಪಂಚಾಯಿತಿ ಅಲ್ಲಿನ ಗೋರಿಗಳ ಬಗ್ಗೆ ನಮಲ್ಲಿ ಯಾವುದೇ ಮಾಹಿತಿ-ದಾಖಲೆ ಇಲ್ಲ ಎಂದಿರೋದು ಹಿಂದೂಗಳ ಆರೋಪ-ಹೋರಾಟಕ್ಕೆ ಸಿಕ್ಕ ಅರ್ಧ ಜಯದಂತಾಗಿದೆ. ಆದರೆ, ಪ್ರಕರಣ ಕೋರ್ಟ್ ಕಟಕಟೆಯಲ್ಲಿದ್ದು ಅಂತಿಮವಾಗಿ ತೀರ್ಪು ಏನು ಬರುತ್ತೋ ಅನ್ನೋದು ಎರಡೂ ಧರ್ಮದವರಿಗೂ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ದತ್ತಪೀಠದ ಪೂಜಾ ಪದ್ಧತಿ – ಸುಪ್ರಿಂ ಸೂಚನೆಯಂತೆ ಕ್ಯಾಬಿನೆಟ್ ಸಬ್ ಕಮಿಟಿ ಸಭೆ

  • ಕಾಫಿನಾಡಿಗೆ ಹರಿದು ಬಂದ ಪ್ರವಾಸಿಗರ ದಂಡು – ಮುಳ್ಳಯ್ಯನಗಿರಿ ಬಳಿ 5 ಕಿ.ಮೀ ಸಾಲುಗಟ್ಟಿ ನಿಂತ ವಾಹನಗಳು

    ಕಾಫಿನಾಡಿಗೆ ಹರಿದು ಬಂದ ಪ್ರವಾಸಿಗರ ದಂಡು – ಮುಳ್ಳಯ್ಯನಗಿರಿ ಬಳಿ 5 ಕಿ.ಮೀ ಸಾಲುಗಟ್ಟಿ ನಿಂತ ವಾಹನಗಳು

    ಚಿಕ್ಕಮಗಳೂರು: ಸಾಲು ಸಾಲು ರಜೆ ಹಿನ್ನೆಲೆ ಜಿಲ್ಲೆಯ (Chikkamagaluru) ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಇದರಿಂದ ಮುಳ್ಳಯ್ಯನಗಿರಿ (Mullayanagiri) ಮಾರ್ಗದಲ್ಲಿ 4-5 ಕಿ.ಮೀ ವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ.

    ಮುಳ್ಳಯ್ಯನಗಿರಿ, ದತ್ತಪೀಠ (Datta peeta), ಮಾಣಿಕ್ಯಾಧಾರ ಭಾಗಕ್ಕೆ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಆಯುಧಪೂಜೆ, ವಿಜಯದಶಮಿ ಹಿನ್ನೆಲೆ ಸಾಲು ಸಾಲು ರಜೆಗಳಿದ್ದು, ಪ್ರವಾಸಿಗರು ಈ ಭಾಗದ ಪ್ರವಾಸಿ ತಾಣಗಳಿಗೆ ಬಂದಿದ್ದಾರೆ. ಗಿರಿ ಭಾಗಕ್ಕೆ ನಿತ್ಯ 1200 ವಾಹನಗಳಿಗೆ ಮಾತ್ರ ಅವಕಾಶವಿದೆ. ಬೆಳಗ್ಗೆ 600, ಮಧ್ಯಾಹ್ನ 600 ವಾಹನಗಳಿಗಷ್ಟೆ ಅವಕಾಶ ನೀಡಲಾಗುತ್ತದೆ. ಇದನ್ನೂ ಓದಿ: ಚಿಕ್ಕಮಗಳೂರು | ಮದ್ಯ ಕುಡಿದು ನನ್ನ ಬಳಿ ಬರಬೇಡಿ – ವಾಹನ ಸವಾರರಿಗೆ ಯಮರಾಜನ ಎಚ್ಚರಿಕೆ!

    ಈಗಾಗಲೇ ಗಿರಿ ಭಾಗಕ್ಕೆ ಸಾಕಷ್ಟು ವಾಹನಗಳು ತೆರಳಿದ್ದು, ಎನ್.ಎಂ.ಡಿ.ಸಿ.ಯಿಂದ ಕೈಮರ ಚೆಕ್ ಪೋಸ್ಟ್‌ವರೆಗೂ ವಾಹನಗಳು ಸಾಲುಗಟ್ಟಿ ನಿಂತಿವೆ. ಮೇಲೆ ಹೋಗಿರುವ ವಾಹನಗಳು ಕೆಳಗಿಳಿದ ಮೇಲೆ ಬೇರೆ ವಾಹನಗಳಿಗೆ ಅವಕಾಶ ನೀಡಲಾಗುತ್ತದೆ. ಇದನ್ನೂ ಓದಿ: ಚಿಕ್ಕಮಗಳೂರು | ಮಲೆನಾಡಿಗರ ಸ್ಪೆಷಲ್‌ ಬರಗಾಪಿಗೆ ಮನಸೋತ ಪ್ರವಾಸಿಗರು!

  • ದತ್ತಪೀಠದಲ್ಲಿ ಹೋಳಿ ಆಚರಣೆಗೆ ಮುಂದಾದ ಹಿಂದೂಗಳು – 800ಕ್ಕೂ ಅಧಿಕ ಪೊಲೀಸರಿಂದ ಭದ್ರತೆ

    ದತ್ತಪೀಠದಲ್ಲಿ ಹೋಳಿ ಆಚರಣೆಗೆ ಮುಂದಾದ ಹಿಂದೂಗಳು – 800ಕ್ಕೂ ಅಧಿಕ ಪೊಲೀಸರಿಂದ ಭದ್ರತೆ

    ಚಿಕ್ಕಮಗಳೂರು: ದತ್ತಪೀಠದಲ್ಲಿ (Datta Peeta) ಸಾಂಪ್ರದಾಯಿಕ ಹೋಳಿ (Holi) ಆಚರಣೆಗೆ ಹಿಂದೂ ಸಂಘಟನೆಗಳು ಮುಂದಾಗಿದ್ದು, ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.

    ಹೋಳಿ ಹುಣ್ಣಿಮೆ ಹಿನ್ನೆಲೆ, ಹಿಂದೂ ಸಂಘಟನೆಗಳು ದತ್ತಪೀಠದಲ್ಲಿ ಹೋಳಿ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದವು. ಅಲ್ಲದೇ ಔಂದುಬರ ವೃಕ್ಷದ ಬಳಿ ಹೋಳಿ ಆಚರಣೆಗೆ ಅನುಮತಿ ಕೇಳಲಾಗಿತ್ತು. ಮಾ.15ರಿಂದ 3 ದಿನಗಳ ಕಾಲ ದತ್ತಪೀಠದಲ್ಲಿ ಉರುಸ್ ಆಚರಣೆ ನಡೆಯಲಿದ್ದು, ಹೋಳಿ ಆಚರಣೆಗೆ ಅನುಮತಿ ನೀಡಲು ಜಿಲ್ಲಾಡಳಿತ ನಿರಾಕರಿಸಿದೆ. ಇದನ್ನೂ ಓದಿ: ಟಿಕೆಟ್ ಕಳೆದುಕೊಂಡು ವರ್ಷವಾಯ್ತು, ಜನರ ಆಶೀರ್ವಾದ ಇವತ್ತಿಗೂ ಹಾಗೇ ಇದೆ: ಪ್ರತಾಪ್‌ ಸಿಂಹ

    ಉರುಸ್ ಹಿನ್ನೆಲೆ ದತ್ತಪೀಠ ಹಾಗೂ ಚಿಕ್ಕಮಗಳೂರು ನಗರದಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. 800ಕ್ಕೂ ಅಧಿಕ ಪೊಲೀಸರಿಂದ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಹಾವೇರಿಯಲ್ಲಿ ಹಿಂದೂ ಯುವತಿ ಹತ್ಯೆ – ಪೊಲೀಸರಿಂದ ನಯಾಜ್‌ ಅರೆಸ್ಟ್‌

  • ದತ್ತಪೀಠದ ತಪ್ಪಲಿನಲ್ಲಿ ಕಾಡ್ಗಿಚ್ಚು – ಹೊತ್ತಿ ಉರಿದ ಅಪರೂಪದ ಶೋಲಾರಣ್ಯ

    ದತ್ತಪೀಠದ ತಪ್ಪಲಿನಲ್ಲಿ ಕಾಡ್ಗಿಚ್ಚು – ಹೊತ್ತಿ ಉರಿದ ಅಪರೂಪದ ಶೋಲಾರಣ್ಯ

    ಚಿಕ್ಕಮಗಳೂರು: ಪಶ್ಚಿಮ ಘಟ್ಟದ ತಪ್ಪಲಿನ ದತ್ತಪೀಠದ (Dattapeeta) ಬಳಿಯ ಅಪರೂಪದ ಶೋಲಾ ಅರಣ್ಯದಲ್ಲಿ (Shola Forest) ಕಾಡ್ಗಿಚ್ಚು (Wildfire) ಕಾಣಿಸಿಕೊಂಡಿದೆ. ಬೆಂಕಿಯಿಂದಾಗಿ ದತ್ತಪೀಠ, ಮುಳ್ಳಯ್ಯನಗಿರಿ, ಕವಿಕಲ್‍ಗಂಡಿ ತಪ್ಪಲಿನಲ್ಲಿರುವ ಹಲವಾರು ಸಸ್ಯಗಳು ಸುಟ್ಟು ಕರಕಲಾಗಿವೆ.

    ಸೋಮವಾರ (ಫೆ.17) ಸಂಜೆ ಕಾಣಿಸಿಕೊಂಡ ಬೆಂಕಿ ಸುಮಾರು ರಾತ್ರಿವರೆಗೂ ಹೊತ್ತಿ ಉರಿದಿದೆ. ಈ ವೇಳೆ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಆಗ್ನಿಶಾಮಕ ವಾಹನ ಹೋಗದ ಕಡೆಗಳಲ್ಲಿ ಅಧಿಕಾರಿಗಳು ಸೊಪ್ಪಿನ ರೆಂಬೆ ಹಾಗೂ ಕೆಲ ಆಧುನಿಕ ತಂತ್ರಜ್ಞಾನದ ಸಲಕರಣೆಗಳನ್ನು ಬಳಸಿ ರಾತ್ರಿ ವರೆಗೂ ಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ.

    ಈ ಅರಣ್ಯ ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ಮಾತ್ರ ಹೆಚ್ಚಾಗಿ ನೋಡಬಹುದು. ಈ ಕಾಡುಗಳು ನೀರನ್ನ ಹಿಡಿದಿಟ್ಟುಕೊಂಡು ವರ್ಷಪೂರ್ತಿ ಹರಿಸುತ್ತವೆ. ಶೋಲಾ ಅರಣ್ಯ ಇರುವ ಕಡೆ ಕಾಡು-ಕಾಡುಪ್ರಾಣಿಗಳು ಕೂಡ ಸಮೃದ್ಧವಾಗಿರುತ್ತವೆ. ಆದರೆ, ಕಾಡ್ಗಿಚ್ಚಿಗೆ ಶೋಲಾ ಕಾಡಿನ ಹಲವಾರು ಮರಗಳು ನಾಶವಾಗಿದೆ.

    ಅರಣ್ಯಕ್ಕೆ ಬೆಂಕಿ ಹೇಗೆ ಬಿದ್ದಿದೆ ಎಂಬ ಸ್ಪಷ್ಟವಾದ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಪ್ರವಾಸಿಗರು ಬೆಂಕಿ ಹಾಕಿರಬಹುದು ಅಥವಾ ಸಿಗರೇಟ್‌ನಿಂದ ಬೆಂಕಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.

  • ಬಾಬಾಬುಡನ್‌ಗಿರಿಯಲ್ಲಿ ದತ್ತಜಯಂತಿಗೆ ಶಾಂತಿಯುತ ತೆರೆ

    ಬಾಬಾಬುಡನ್‌ಗಿರಿಯಲ್ಲಿ ದತ್ತಜಯಂತಿಗೆ ಶಾಂತಿಯುತ ತೆರೆ

    ಚಿಕ್ಕಮಗಳೂರು: ತಾಲೂಕಿನ (Chikkamagaluru) ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ (Datta Peeta) ಕಳೆದ 9 ದಿನಗಳಿಂದ ನಡೆಯುತ್ತಿದ್ದ ದತ್ತಜಯಂತಿಗೆ (Datta Jayanti) ಶಾಂತಿಯುತ ತೆರೆಬಿದ್ದಿದೆ.

    ದಕ್ಷಿಣದ ಅಯೋಧ್ಯೆ ಎಂದೇ ಖ್ಯಾತಿಯಾಗಿರುವ ಧಾರ್ಮಿಕ ಹಾಗೂ ವಿವಾದಿತ ಪ್ರದೇಶ ದತ್ತಪೀಠದಲ್ಲಿ ಮುಂಜಾನೆಯಿಂದಲೇ ಸಾವಿರಾರು ಭಕ್ತರು ಭಾರೀ ಭದ್ರತೆ ನಡುವೆ ದತ್ತಪಾದುಕೆ ದರ್ಶನ ಪಡೆದು ಪುನೀತರಾಗಿದ್ದಾರೆ. ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರ ಕಣ್ಗಾವಲಿನಲ್ಲಿ 15 ಸಾವಿರ ದತ್ತಭಕ್ತರು ಪಾದುಕೆ ದರ್ಶನ ಪಡೆದರು.

    ಭಕ್ತರು ಪಾದುಕೆ ದರ್ಶನಕ್ಕೆ ಬರುವ ವೇಳೆ ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠವಾಗಬೇಕು. ಗೋರಿಗಳನ್ನ ಸ್ಥಳಾಂತರಿಸಬೇಕು ಎಂಬ ಆಕ್ರೋಶದ ಘೋಷಣೆ ಕೂಗಿದ್ದಾರೆ. ಇದರ ನಡುವೆ ಮೊದಲ ಬಾರಿಗೆ ಶ್ರೀರಾಮಸೇನೆ, ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷದ್ ನಾಯಕರು ಒಟ್ಟಿಗೆ ಸೇರಿ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.

    ದತ್ತಾತ್ರೇಯರ ಗುಹೆ ಸಮೀಪದಲ್ಲಿಯೇ ಹೋಮ-ಹವನ ನಡೆದಿದೆ. ಇನ್ನೂ ದತ್ತಮಾಲಾಧಾರಿಗಳು ಇರುಮುಡಿ ಹೊತ್ತು ಕಾಲ್ನಡಿಗೆಯಲ್ಲಿ ಬಂದು ದತ್ತಪಾದುಕೆ ದರ್ಶನ ಮಾಡಿದ್ದಾರೆ. ಈ ಮೂಲಕ‌ ಕಳೆದ 9 ದಿನಗಳಿಂದ ವ್ರತ ಆಚರಣೆಯೊಂದಿಗೆ ನಡೆದ ದತ್ತಜಯಂತಿ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಮಳೆ-ಮಂಜು ಆತಂಕವಿದ್ದರೂ ನಿರೀಕ್ಷೆಗೂ ಮೀರಿಯೇ ಮಾಲಾಧಾರಿಗಳು ದತ್ತಪಾದುಕೆ ದರ್ಶನ ಪಡೆದಿದ್ದಾರೆ.

    ಮಾಜಿ ಸಚಿವ ಸಿ.ಟಿ.ರವಿ ಹೊನ್ನಮ್ಮ ಹಳ್ಳದಿಂದ ಕಾಲ್ನಡಿಗೆ ಮೂಲಕ ಇರುಮುಡಿ ಹೊತ್ತು ಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆದರು.

  • ದತ್ತ ಪೀಠದ ಬಳಿ ಭಾರೀ ಮಳೆ – ಗಾಳಿಯ ರಭಸಕ್ಕೆ ಹಾರಿಹೋದ ಶೆಡ್!

    ದತ್ತ ಪೀಠದ ಬಳಿ ಭಾರೀ ಮಳೆ – ಗಾಳಿಯ ರಭಸಕ್ಕೆ ಹಾರಿಹೋದ ಶೆಡ್!

    ಚಿಕ್ಕಮಗಳೂರು: ದತ್ತ ಪೀಠದ ಬಳಿ (Datta peeta) ಭಾರೀ ಗಾಳಿ-ಮಳೆಯಾಗುತ್ತಿದ್ದು (Rain), ದತ್ತ ಜಯಂತಿ (Datta Jayanti) ಪ್ರಯುಕ್ತ ನಿರ್ಮಿಸಲಾಗಿದ್ದ ಶೆಡ್‍ನ ಶೀಟ್‍ಗಳು ಹಾರಿ ಹೋಗಿವೆ.

    ದತ್ತ ಜಯಂತಿ ಪ್ರಯುಕ್ತ ಶನಿವಾರದ ವಿಶೇಷ ಪೂಜೆಗೆಂದು ತಾತ್ಕಾಲಿಕವಾಗಿ ಶೆಡ್ ನಿರ್ಮಿಸಲಾಗಿತ್ತು. ಆದರೆ ಭಾರೀ ಗಾಳಿ ಮಳೆಯಿಂದಾಗಿ ಶೆಡ್‍ನ ಶೀಟ್‍ಗಳು ಹಾರಿಹೋಗಿವೆ. ಅಲ್ಲದೇ ದತ್ತಪೀಠದ ಬಳಿ ರಸ್ತೆಯೇ ಕಾಣದಂತೆ ದಟ್ಟ ಮಂಜು ಆವರಿಸಿದೆ.

    ಜಿಲ್ಲಾಡಳಿತದಿಂದ ಮತ್ತೆ ಶೆಡ್ ದುರಸ್ಥಿ ಕಾರ್ಯ ನಡೆಯುತ್ತಿದೆ. ಅಲ್ಲದೇ ದತ್ತ ಪೀಠಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಅನಾನೂಕೂಲತೆ ಆಗದಂತೆ ಜಿಲ್ಲಾಡಳಿತ ನಿಗಾ ವಹಿಸಿದೆ.

    ಶನಿವಾರ ದತ್ತ ಜಯಂತಿಯ ಕೊನೆಯ ದಿನವಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಈ ಬಾರಿ ಸುಮಾರು 20,000ಕ್ಕೂ ಅಧಿಕ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೊಲೀಸರು ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿರಿಸಿದ್ದಾರೆ.

  • ದತ್ತಮಾಲಾ ಅಭಿಯಾನ – 2 ದಿನ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ

    ದತ್ತಮಾಲಾ ಅಭಿಯಾನ – 2 ದಿನ ಮುಳ್ಳಯ್ಯನಗಿರಿ, ದತ್ತಪೀಠ ಭಾಗಕ್ಕೆ ಪ್ರವಾಸಿಗರಿಗೆ ನಿಷೇಧ

    ಚಿಕ್ಕಮಗಳೂರು: ಈ ವೀಕೆಂಡ್‍ನಲ್ಲಿ ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ಶ್ರೀರಾಮಸೇನೆಯ ದತ್ತಮಾಲಾ ಅಭಿಯಾನ ಹಿನ್ನೆಲೆಯಲ್ಲಿ ನ.9 ಹಾಗೂ 10 ರಂದು ಎರಡು ದಿನಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಈ ಪ್ರದೇಶದಲ್ಲಿ ಓಡಾಡಲು ದತ್ತ ಮಾಲಾಧಾರಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.

    ಮುಳ್ಳಯ್ಯನಗಿರಿ, ದತ್ತಪೀಠ, ದತ್ತಪೀಠ, ಗಾಳಿಕೆರೆ, ಸೀತಾಳಯ್ಯನಗಿರಿ, ಮಾಣಿಕ್ಯಾಧಾರ ತಾಣಗಗಳಿಗೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

    21ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಚಾಲನೆ ದೊರೆತಿದೆ. ದತ್ತಮಾಲಾಧಾರಿಗಳು ಏಳು ದಿನಗಳ ವ್ರತಾಚರಣೆಯಲ್ಲಿ ಇರಲಿದ್ದಾರೆ. ಈ ಬಾರಿ ದತ್ತ ಮಾಲಾ ಅಭಿಯಾನದಲ್ಲಿ ಬಿಜೆಪಿ ನಾಯಕರು ಸಹ ಭಾಗವಹಿಸಲಿದ್ದಾರೆ. ಜಿಲ್ಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್​​ ಮಾಡಲಿದ್ದಾರೆ.

  • ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿ – 6 ವರ್ಷದ ಬಾಲಕ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿ – 6 ವರ್ಷದ ಬಾಲಕ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಬಸ್ (Tourist Bus) 100 ಅಡಿ ಎತ್ತರದಿಂದ ಪಲ್ಟಿಯಾದ ಪರಿಣಾಮ ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, 6 ವರ್ಷದ ಬಾಲಕನೋರ್ವ ಸಾವನ್ನಪ್ಪಿದ ಘಟನೆ ತಾಲೂಕಿನ ದತ್ತಪೀಠದಲ್ಲಿ (Datta Peeta) ನಡೆದಿದೆ.

    ತುಮಕೂರು ಜಿಲ್ಲೆ ಶಿರಾ ತಾಲೂಕಿನಿಂದ ಮಿನಿ ಬಸ್ ಮಾಡಿಕೊಂಡು 23 ಜನ ಚಿಕ್ಕಮಗಳೂರು (Chikkamagaluru) ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದರು. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಸೇರಿದಂತೆ ಪಶ್ಚಿಮ ಘಟ್ಟಗಳ ಸೌಂದರ್ಯ ಸವಿದು ಮಾಣಿಕ್ಯಾಧಾರ ಹೋಗಿ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಇದನ್ನೂ ಓದಿ: ಮೋದಿ ಕಾರ್ಯಕ್ರಮ ಸ್ಥಳಕ್ಕೆ NSUI ಸಂಘಟನೆ ಮುತ್ತಿಗೆ ಯತ್ನ

    ಮಾಣಿಕ್ಯಧಾರ ನೋಡಿಕೊಂಡು ವಾಪಸ್ ಕೆಳಗೆ ಇಳಿಯುವ ಸಂದರ್ಭ ದತ್ತಪೀಠ-ಮಾಣಿಕ್ಯಾಧಾರ ಮಧ್ಯೆ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ 100 ಅಡಿ ಎತ್ತರದಿಂದ ಕೆಳಗೆ ಉರುಳಿ ಬಿದ್ದಿದೆ. ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ತೀವ್ರ ಅಸ್ವಸ್ಥನಾಗಿದ್ದ 6 ವರ್ಷದ ಬಾಲಕ ಮಹಮದ್‌ ನವಾಜ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಕೇಸ್ – ನೊಂದ ಮಹಿಳೆಯಿಂದ ಮಹಿಳಾ ಆಯೋಗಕ್ಕೆ ದೂರು

  • ದತ್ತಪೀಠದ ಗೋರಿ ಧ್ವಂಸ ಪ್ರಕರಣ – ನ್ಯಾಯಾಲಯಕ್ಕೆ ಹಾಜರಾದ 14 ಹಿಂದೂ ಕಾರ್ಯರ್ತರು

    ದತ್ತಪೀಠದ ಗೋರಿ ಧ್ವಂಸ ಪ್ರಕರಣ – ನ್ಯಾಯಾಲಯಕ್ಕೆ ಹಾಜರಾದ 14 ಹಿಂದೂ ಕಾರ್ಯರ್ತರು

    ಚಿಕ್ಕಮಗಳೂರು: ದತ್ತಪೀಠದ (Datta Peeta) ಗೋರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನ ಆರೋಪಿಗಳು ನ್ಯಾಯಾಲಯಕ್ಕೆ (Court) ಹಾಜರಾಗಿದ್ದಾರೆ.

    2017ರ ಡಿ.3 ರಂದು ನಡೆದಿದ್ದ ದತ್ತಪೀಠದ ಗೋರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನ ಹಿಂದೂ ಕಾರ್ಯಕರ್ತರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಇಂದು (ಸೋಮವಾರ) ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಇದನ್ನೂ ಓದಿ: ಬಿಲ್ಕಿಸ್ ಬಾನೋ ಗ್ಯಾಂಗ್‌ ರೇಪ್‌ ಕೇಸ್‌ – ಅಪರಾಧಿಗಳ ಬಿಡುಗಡೆ ಮಾಡಿದ ಗುಜರಾತ್‌ ಸರ್ಕಾರದ ಆದೇಶ ರದ್ದು

    2017ರಲ್ಲಿ ಕಾಂಗ್ರೆಸ್ (Congress) ಸರ್ಕಾರದ ಅವಧಿಯಲ್ಲಿ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿಯ ದರ್ಗಾದ ವಿಚಾರವಾಗಿ ದತ್ತಜಯಂತಿ ವೇಳೆ ಗಲಾಟೆ ನಡೆದಿತ್ತು. ಈ ವೇಳೆ ಉದ್ರಿಕ್ತರ ಗುಂಪು ಗೋರಿಗಳನ್ನು ಧ್ವಂಸಗೊಳಿಸಿತ್ತು. ಈ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸರ್ಕಾರ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ, 2023ರ ಅ.24ರಂದು ಚಿಕ್ಕಮಗಳೂರು (Chikkamagaluru) ಗ್ರಾಮಾಂತರ ಪೊಲೀಸರು (Police) ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

    ನ್ಯಾಯಾಲಯದ ಕಲಾಪ ಮುಗಿದ ಬಳಿಕ ಕೋರ್ಟ್ ಪಕ್ಕದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಹಿಂದೂ ಕಾರ್ಯಕರ್ತರು ಸಕಾರದ ವಿರುದ್ಧ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವರು ವೋಟಿಗಾಗಿ ಕಾಶ್ಮೀರ ಸಹ ಪಾಕಿಸ್ತಾನಕ್ಕೆ ಸೇರಿದ್ದು ಅಂತಾರೆ – ವಿಶ್ವನಾಥ್ ಕಿಡಿ

  • ದತ್ತಪೀಠ ಬಿಟ್ಟು ಮುಸ್ಲಿಮರು ನಾಗೇನಹಳ್ಳಿಯಲ್ಲಿ ನಮಾಜ್‌ ಮಾಡಿ: ಪ್ರಮೋದ್ ಮುತಾಲಿಕ್

    ದತ್ತಪೀಠ ಬಿಟ್ಟು ಮುಸ್ಲಿಮರು ನಾಗೇನಹಳ್ಳಿಯಲ್ಲಿ ನಮಾಜ್‌ ಮಾಡಿ: ಪ್ರಮೋದ್ ಮುತಾಲಿಕ್

    ಚಿಕ್ಕಮಗಳೂರು: ದತ್ತಪೀಠದ (Dattapeeta) ಗುಹೆಯೊಳಗಡೆ ಸೌಹಾರ್ದಯುತವಾಗಿ ಪಾದುಕೆಯ ಪೂಜೆ, ರುದ್ರಾಭಿಷೇಕವಾಗುತ್ತಿದೆ. ಆರತಿ, ಘಂಟೆ, ಶಂಖನಾದ ಎಲ್ಲವೂ ಇಸ್ಲಾಮಿಗೆ ವಿರುದ್ಧವಾಗಿದೆ. ಹಾಗಾಗಿ ಇದನ್ನು ಮುಸ್ಲಿಮರು ಬಿಟ್ಟುಕೊಟ್ಟು ನಾಗೇನಹಳ್ಳಿಯಲ್ಲಿ ನಮಾಜ್‌, ಪೂಜೆ ಪುನಸ್ಕಾರಗಳನ್ನು ಮಾಡಿಕೊಳ್ಳಬೇಕು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik)  ಮನವಿ ಮಾಡಿದ್ದಾರೆ.

    ದತ್ತಪೀಠದಲ್ಲಿ ದತ್ತಾತ್ರೇಯರಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾಗಿ ಪೂಜೆ, ರುದ್ರಾಭಿಷೇಕ, ಶಂಖನಾದ, ಆರತಿ ಎಲ್ಲವನ್ನೂ ನೋಡಿ-ಕೇಳಿ ಬದುಕು ಧನ್ಯವಾಯಿತು. 30 ವರ್ಷಗಳ ಸುದೀರ್ಘವಾದ ಹೋರಾಟಕ್ಕೆ ಬೆಲೆ ಸಿಕ್ಕಿದೆ. ಅದಕ್ಕಾಗಿ ರಾಜ್ಯ ಸರ್ಕಾರ, ಶಾಸಕ ಸಿ.ಟಿ. ರವಿಯವರಿಗೆ (CT Ravi) ಧನ್ಯವಾದ. ಕಾನೂನಾತ್ಮಕವಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ವಿನ ಕೆಲಸವಾಗಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಆರ್‌ಎಸ್‍ಎಸ್ ಭಾರತೀಯ ಸಂಸ್ಕೃತಿ, ಮೌಲ್ಯಗಳನ್ನು ಶ್ರೀಮಂತಗೊಳಿಸುತ್ತಿದೆ: ರವೀಂದ್ರ ಜಡೇಜಾ

    25 ವರ್ಷಗಳ ಹಿಂದೆಯೂ ಕೂಡಾ ಇಲ್ಲಿನ ಹಿರಿಯರಾದ ನಾಣಯ್ಯ, ವಿಠ್ಠಲ್ ರಾಯ್, ದತ್ತಾತ್ರೆಯ ಶೆಟ್ಟಿ ಸೇರಿದಂತೆ ಅನೇಕರು ಪರಿಶ್ರಮಪಟ್ಟಿದ್ದಾರೆ. ಇಂದು ಅವರಿಗೂ ಕೂಡ ಹಿಂದೂ ಅರ್ಚಕರ ನೇಮಕ ಆನಂದವಾಗಿದೆ. ಗರ್ಭಗುಡಿಯ ಒಳಗೆ ಪೂಜೆ ನಡೆಯುತ್ತಿರುವುದರಿಂದ ನಾಸ್ತಿಕವಾದಿಗಳು, ಗೋ ಹಂತಕರು, ಗೋ ಭಕ್ಷಕರು, ಮೂರ್ತಿ ಪೂಜೆ ನಂಬಲಾರದವರು ದತ್ತಪಾದುಕೆಯ ಗರ್ಭಗುಡಿಯ ಒಳಗೆ ಹೋಗಬಾರದು. ಕುರಾನಿನ ಪ್ರಕಾರ ಅದು ನಿಷಿದ್ಧ. ದತ್ತಪೀಠದ ಆವರಣ ಪೂರ್ಣ ಪ್ರಮಾಣದಲ್ಲಿ ದತ್ತಪೀಠ ಹಿಂದೂ ಪೀಠವಾಗುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ. ದತ್ತಪೀಠದಲ್ಲಿ ನಮಾಜ್, ಉರುಸ್ ಮಾಡುತ್ತಾರೆ. ಅವುಗಳೆಲ್ಲವನ್ನು ಸ್ಥಳಾಂತರಗೊಳಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಸಲ್ಮಾನ್ ಖುರ್ಷಿದ್

    ಹಾಸನದಲ್ಲಿ ಕೊರಿಯರ್‌ನಲ್ಲಿ ಬಂದ ಮಿಕ್ಸಿ ಸ್ಫೋಟಗೊಂಡ ಕುರಿತಾಗಿ ಮಾತನಾಡಿ, ಕೊರಿಯರ್ ಮೂಲಕ ಬಂದ ಮಿಕ್ಸಿ ಓಪನ್ ಮಾಡಿದಾಗ ಬ್ಲಾಸ್ಟ್‌ ಆಗಿದೆ. ಇದೊಂದು ವ್ಯವಸ್ಥಿತವಾದ ಟೆರರಿಸಂನ ಭಾಗ. ಶಾರಿಕ್ ಮೂಲಕ ಕುಕ್ಕರ್‌ನಲ್ಲಿ ಸ್ಫೋಟಿಸಲು ಯತ್ನಿಸಿದ್ದು. ಈ ರೀತಿಯಾಗಿ ಅನೇಕ ವಿಧಾನಗಳ ಮೂಲಕ ಮಾಡುವ ಕೃತ್ಯಗಳನ್ನು ತಡೆಯುವ ಕೆಲಸ ಆಗಬೇಕು. ಕೇಂದ್ರದ ನರೇಂದ್ರ ಮೋದಿ (Narendra Modi) ನೇತೃತ್ವ ಸರ್ಕಾರ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದ ಬಾಂಬ್ ಬ್ಲಾಸ್ಟ್ ಪ್ರಕರಣಗಳನ್ನು ಹತ್ತಿಕ್ಕುವ ಕೆಲಸ ಮಾಡಿದೆ. ಅದನ್ನು ತಡೆದುಕೊಳ್ಳಲಾಗದೆ. ಅಲ್ಲಲ್ಲಿ ಬೇರೆ-ಬೇರೆ ರೀತಿಯಲ್ಲಿ ಬ್ಲಾಸ್ಟ್ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿದೆ ಅದನ್ನೂ ಹತ್ತಿಕ್ಕುವ ಕೆಲಸ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]