Tag: Datta Jayanti

  • ಬಾಬಾಬುಡನ್‌ಗಿರಿಯಲ್ಲಿ ದತ್ತಜಯಂತಿಗೆ ಶಾಂತಿಯುತ ತೆರೆ

    ಬಾಬಾಬುಡನ್‌ಗಿರಿಯಲ್ಲಿ ದತ್ತಜಯಂತಿಗೆ ಶಾಂತಿಯುತ ತೆರೆ

    ಚಿಕ್ಕಮಗಳೂರು: ತಾಲೂಕಿನ (Chikkamagaluru) ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ (Datta Peeta) ಕಳೆದ 9 ದಿನಗಳಿಂದ ನಡೆಯುತ್ತಿದ್ದ ದತ್ತಜಯಂತಿಗೆ (Datta Jayanti) ಶಾಂತಿಯುತ ತೆರೆಬಿದ್ದಿದೆ.

    ದಕ್ಷಿಣದ ಅಯೋಧ್ಯೆ ಎಂದೇ ಖ್ಯಾತಿಯಾಗಿರುವ ಧಾರ್ಮಿಕ ಹಾಗೂ ವಿವಾದಿತ ಪ್ರದೇಶ ದತ್ತಪೀಠದಲ್ಲಿ ಮುಂಜಾನೆಯಿಂದಲೇ ಸಾವಿರಾರು ಭಕ್ತರು ಭಾರೀ ಭದ್ರತೆ ನಡುವೆ ದತ್ತಪಾದುಕೆ ದರ್ಶನ ಪಡೆದು ಪುನೀತರಾಗಿದ್ದಾರೆ. ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರ ಕಣ್ಗಾವಲಿನಲ್ಲಿ 15 ಸಾವಿರ ದತ್ತಭಕ್ತರು ಪಾದುಕೆ ದರ್ಶನ ಪಡೆದರು.

    ಭಕ್ತರು ಪಾದುಕೆ ದರ್ಶನಕ್ಕೆ ಬರುವ ವೇಳೆ ದತ್ತಪೀಠ ಸಂಪೂರ್ಣ ಹಿಂದೂಗಳ ಪೀಠವಾಗಬೇಕು. ಗೋರಿಗಳನ್ನ ಸ್ಥಳಾಂತರಿಸಬೇಕು ಎಂಬ ಆಕ್ರೋಶದ ಘೋಷಣೆ ಕೂಗಿದ್ದಾರೆ. ಇದರ ನಡುವೆ ಮೊದಲ ಬಾರಿಗೆ ಶ್ರೀರಾಮಸೇನೆ, ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷದ್ ನಾಯಕರು ಒಟ್ಟಿಗೆ ಸೇರಿ ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.

    ದತ್ತಾತ್ರೇಯರ ಗುಹೆ ಸಮೀಪದಲ್ಲಿಯೇ ಹೋಮ-ಹವನ ನಡೆದಿದೆ. ಇನ್ನೂ ದತ್ತಮಾಲಾಧಾರಿಗಳು ಇರುಮುಡಿ ಹೊತ್ತು ಕಾಲ್ನಡಿಗೆಯಲ್ಲಿ ಬಂದು ದತ್ತಪಾದುಕೆ ದರ್ಶನ ಮಾಡಿದ್ದಾರೆ. ಈ ಮೂಲಕ‌ ಕಳೆದ 9 ದಿನಗಳಿಂದ ವ್ರತ ಆಚರಣೆಯೊಂದಿಗೆ ನಡೆದ ದತ್ತಜಯಂತಿ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಮಳೆ-ಮಂಜು ಆತಂಕವಿದ್ದರೂ ನಿರೀಕ್ಷೆಗೂ ಮೀರಿಯೇ ಮಾಲಾಧಾರಿಗಳು ದತ್ತಪಾದುಕೆ ದರ್ಶನ ಪಡೆದಿದ್ದಾರೆ.

    ಮಾಜಿ ಸಚಿವ ಸಿ.ಟಿ.ರವಿ ಹೊನ್ನಮ್ಮ ಹಳ್ಳದಿಂದ ಕಾಲ್ನಡಿಗೆ ಮೂಲಕ ಇರುಮುಡಿ ಹೊತ್ತು ಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆದರು.

  • ದತ್ತ ಪೀಠದ ಬಳಿ ಭಾರೀ ಮಳೆ – ಗಾಳಿಯ ರಭಸಕ್ಕೆ ಹಾರಿಹೋದ ಶೆಡ್!

    ದತ್ತ ಪೀಠದ ಬಳಿ ಭಾರೀ ಮಳೆ – ಗಾಳಿಯ ರಭಸಕ್ಕೆ ಹಾರಿಹೋದ ಶೆಡ್!

    ಚಿಕ್ಕಮಗಳೂರು: ದತ್ತ ಪೀಠದ ಬಳಿ (Datta peeta) ಭಾರೀ ಗಾಳಿ-ಮಳೆಯಾಗುತ್ತಿದ್ದು (Rain), ದತ್ತ ಜಯಂತಿ (Datta Jayanti) ಪ್ರಯುಕ್ತ ನಿರ್ಮಿಸಲಾಗಿದ್ದ ಶೆಡ್‍ನ ಶೀಟ್‍ಗಳು ಹಾರಿ ಹೋಗಿವೆ.

    ದತ್ತ ಜಯಂತಿ ಪ್ರಯುಕ್ತ ಶನಿವಾರದ ವಿಶೇಷ ಪೂಜೆಗೆಂದು ತಾತ್ಕಾಲಿಕವಾಗಿ ಶೆಡ್ ನಿರ್ಮಿಸಲಾಗಿತ್ತು. ಆದರೆ ಭಾರೀ ಗಾಳಿ ಮಳೆಯಿಂದಾಗಿ ಶೆಡ್‍ನ ಶೀಟ್‍ಗಳು ಹಾರಿಹೋಗಿವೆ. ಅಲ್ಲದೇ ದತ್ತಪೀಠದ ಬಳಿ ರಸ್ತೆಯೇ ಕಾಣದಂತೆ ದಟ್ಟ ಮಂಜು ಆವರಿಸಿದೆ.

    ಜಿಲ್ಲಾಡಳಿತದಿಂದ ಮತ್ತೆ ಶೆಡ್ ದುರಸ್ಥಿ ಕಾರ್ಯ ನಡೆಯುತ್ತಿದೆ. ಅಲ್ಲದೇ ದತ್ತ ಪೀಠಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಅನಾನೂಕೂಲತೆ ಆಗದಂತೆ ಜಿಲ್ಲಾಡಳಿತ ನಿಗಾ ವಹಿಸಿದೆ.

    ಶನಿವಾರ ದತ್ತ ಜಯಂತಿಯ ಕೊನೆಯ ದಿನವಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದಾರೆ. ಈ ಬಾರಿ ಸುಮಾರು 20,000ಕ್ಕೂ ಅಧಿಕ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೊಲೀಸರು ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿರಿಸಿದ್ದಾರೆ.

  • ಬಹುತ್ವವನ್ನು ಅಳವಡಿಸಿಕೊಂಡಿರುವುದು ಹಿಂದೂ ಧರ್ಮ ಮಾತ್ರ: ಸಿ.ಟಿ.ರವಿ

    ಬಹುತ್ವವನ್ನು ಅಳವಡಿಸಿಕೊಂಡಿರುವುದು ಹಿಂದೂ ಧರ್ಮ ಮಾತ್ರ: ಸಿ.ಟಿ.ರವಿ

    ಚಿಕ್ಕಮಗಳೂರು: ಸಿಎಂ ಸಿದ್ದರಾಮಯ್ಯನವರು (Siddaramaiah) ಯಾವಾಗಲೂ ಬಹುತ್ವದ ಬಗ್ಗೆ ಮಾತನಾಡುತ್ತಾರೆ. ಆದರೆ ಬಹುತ್ವವನ್ನ ಒಪ್ಪಿಕೊಂಡು, ಅಳವಡಿಸಿಕೊಂಡಿರುವುದು ಕೇವಲ ಹಿಂದೂ ಧರ್ಮ (Hindu Religion) ಮಾತ್ರ, ಬಹುತ್ವಕ್ಕೆ ಬೆಲೆ ಇರುವುದು ಹಿಂದೂ ಧರ್ಮದಲ್ಲಿಯೇ ಎಂದು ಮಾಜಿ ಸಚಿವ ಸಿ.ಟಿ.ರವಿ (CT Ravi) ಹೇಳಿದ್ದಾರೆ.

    ಚಿಕ್ಕಮಗಳೂರು (Chikkamagaluru) ತಾಲೂಕಿನ ದತ್ತ ಪೀಠದಲ್ಲಿ ನಡೆದ ದತ್ತ ಜಯಂತಿಯ (Datta Jayanthi) ಹೋಮ ಪೂಜೆಯ ಬಳಿಕ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಹಮ್ಮಿಕೊಂಡಿದ್ದ ದತ್ತ ಮಾಲೆ ಜಯಂತಿ ಕಾರ್ಯಕ್ರಮ ವಿದ್ಯುಕ್ತವಾಗಿ ಸಂಪನ್ನಗೊಂಡಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೂಡ ವಿಶೇಷ ಧನ್ಯವಾದ ಎಂದರು. ಸರ್ಕಾರದ ಪ್ರತಿನಿಧಿಯಾಗಿ ಯಾರಾದರೂ ಒಬ್ಬರು ಭಾಗವಹಿಸಬೇಕಾಗಿತ್ತು. ಸರ್ಕಾರದ ಪ್ರತಿನಿಧಿಗಳಾಗಿ ಯಾರು ಬಾರದೇ ಇರುವುದು ದುರಾದೃಷ್ಟಕರ ಹಾಗೂ ನೋವಿನ ಸಂಗತಿ ಎಂದರು. ಇದನ್ನೂ ಓದಿ: ಯೂಟ್ಯೂಬ್‌ನಲ್ಲಿ ವಿಶ್ವದಾಖಲೆ ಬರೆದ ನರೇಂದ್ರ ಮೋದಿ

    ಇದು ಮುಜರಾಯಿ ಇಲಾಖೆಗೆ ಸೇರಿದ ದತ್ತಾತ್ರೇಯ ಸ್ವಾಮಿ ದೇವಸ್ಥಾನವಾಗಿದ್ದು, ಯಾರಾದರೂ ಒಬ್ಬರು ಭಾಗವಹಿಸಬೇಕಾದದ್ದು ಕ್ರಮವಾಗಿತ್ತು. ಯಾರೂ ಭಾಗವಹಿಸದೇ ಇರುವುದು ದುರಾದೃಷ್ಟಕರ. ಅವರ ಮನಸ್ಸಿನಲ್ಲಿ ಹಿಂದೂ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸಿದರೆ ಜಾತ್ಯಾತೀತತೆಗೆ ಭಂಗ ಬರುತ್ತದೆ ಎಂಬ ಭಾವನೆ ಇರಬಹುದು. ಈದ್ ಮಿಲಾದ್‌ನಲ್ಲಿ ಪಾಲ್ಗೊಳ್ಳುತ್ತಾರೆ. ದತ್ತ ಜಯಂತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದರೆ ಏನರ್ಥ? ಯಾವ ಸಂದೇಶ ಕೊಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಪಾಕಿಸ್ತಾನದ ಜೊತೆ ಭಾರತ ಸಂಬಂಧವನ್ನು ಸುಧಾರಿಸದೇ ಇದ್ದಲ್ಲಿ ಕಾಶ್ಮೀರಕ್ಕೆ ಗಾಜಾ ಪರಿಸ್ಥಿತಿ ಬರಬಹುದು: ಫಾರೂಖ್ ಅಬ್ದುಲ್ಲಾ

    ನಾವು ಹಿಂದೂ ಭಾವನೆಗಳ ಜೊತೆಗಿಲ್ಲ ಎಂಬ ಸಂದೇಶವನ್ನು ಅವರು ಕೊಡುತ್ತಿದ್ದಾರೆಂದು ನನಗೆ ಅನಿಸುತ್ತಿದೆ. ಹಿಂದೂ ಧರ್ಮ ಮಾತ್ರ ಜಗತ್ತಿನ ಎಲ್ಲವನ್ನು ಒಳಗೊಳ್ಳುವಂತದ್ದು. ಇಲ್ಲಿ ಬಹುತ್ವಕ್ಕೆ ಅವಕಾಶವಿದೆ. ಅವರವರ ಭಾವಕ್ಕೆ, ಭಕ್ತಿಗೆ ತೆರನಾಗಿ ಇರುತಿಹನು ಶಿವಯೋಗಿ ಎಂಬ ತತ್ವದ ಮೇಲೆ ನಂಬಿಕೆ ಇಟ್ಟಿರುವುದು ಹಿಂದೂ ಧರ್ಮ. ಜಗತ್ತಿನ ಯಾವ ಶಕ್ತಿಯೂ ಕೂಡ ಶಿವನನ್ನು ಹಿಂದೂ ಧರ್ಮದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಬ್ರಹ್ಮ, ವಿಷ್ಣು, ಮಹೇಶ್ವರರು ಏಕೀಭಾವವಾಗಿ ಅವತರಿಸಿರುವುದೇ ದತ್ತಾತ್ರೇಯರ ಅವತಾರ. ಯಾವ ಶಕ್ತಿಯೂ ಕೂಡ ಅದನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಕಲ್ಕಡ್ಕ ಪ್ರಭಾಕರ ಭಟ್‌ ವಿರುದ್ಧ ಎಫ್‌ಐಆರ್‌ ದಾಖಲು

  • ದರ್ಗಾದಲ್ಲಿ ದತ್ತಜಯಂತಿ ಆಚರಣೆಗೆ ಶ್ರೀರಾಮ ಸೇನೆ ಸಿದ್ಧತೆ- ಜಿಲ್ಲಾಡಳಿತದಿಂದ ನಿಷೇಧಾಜ್ಞೆ

    ದರ್ಗಾದಲ್ಲಿ ದತ್ತಜಯಂತಿ ಆಚರಣೆಗೆ ಶ್ರೀರಾಮ ಸೇನೆ ಸಿದ್ಧತೆ- ಜಿಲ್ಲಾಡಳಿತದಿಂದ ನಿಷೇಧಾಜ್ಞೆ

    ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ದತ್ತಪೀಠದಲ್ಲಿ (Dattapeeta) ಉತ್ಸವದ ಹಿನ್ನೆಲೆ ನಾಗೇನಹಳ್ಳಿಯ ಸುತ್ತಮುತ್ತ ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ದತ್ತಪೀಠದ ದತ್ತಾತ್ರೇಯ ಸ್ವಾಮಿಯ ಉತ್ಸವ (Datta Jayanti) ಈ ಬಾರಿ ಹೊಸ ರೂಪ ಪಡೆದುಕೊಂಡಿದೆ. ವಿ.ಎಚ್.ಪಿ, ಹಾಗೂ ಬಜರಂಗದಳ ದತ್ತಪೀಠದಲ್ಲಿ ದತ್ತಜಯಂತಿ ಮಾಡುತ್ತಿದ್ದರೆ, ಶ್ರೀರಾಮಸೇನೆ (Sri Ram Sena) ದರ್ಗಾದಲ್ಲಿ ದತ್ತಜಯಂತಿಗೆ ಮುಂದಾಗಿದೆ. ಇದೇ ಕಾರಣಕ್ಕೆ ಜಿಲ್ಲಾಡಳಿತ ದರ್ಗಾ ಸುತ್ತಮುತ್ತ ನಿಷೇಧಾಜ್ಞೆ ಹೇರಿದೆ. ಪೊಲೀಸ್ ಇಲಾಖೆಯು ಪ್ರಮೋದ್ ಮುತಾಲಿಕ್ ಹಾಗೂ ಗಂಗಾಧರ್ ಕುಲಕರ್ಣಿ ಅವರಿಗೆ ಜಿಲ್ಲೆಗೆ ಬರಲು ನಿರ್ಬಂಧ ವಿಧಿಸಿದೆ. ಈ ಮಧ್ಯೆ ಸಾವಿರಾರು ಜನರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಇದನ್ನೂ ಓದಿ: ಚಾರಣಕ್ಕೆ ತೆರಳಿದ್ದ ಯುವಕ ಬೆಟ್ಟದಲ್ಲೇ ಕುಸಿದು ಬಿದ್ದು ದುರ್ಮರಣ

    ದರ್ಗಾ ಇರುವ ನಾಗೇನಹಳ್ಳಿ ಗ್ರಾಮದ ಸರ್ವೇ ನಂಬರ್ 57ರ 200 ಮೀಟರ್ ಸುತ್ತಮುತ್ತ 4 ದಿನಗಳ ಕಾಲ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದೆ. ಪೊಲೀಸ್ ಇಲಾಖೆ ಪ್ರಮೋದ್ ಮುತಾಲಿಕ್ ಹಾಗೂ ಗಂಗಾಧರ್ ಕುಲಕರ್ಣಿ ಅವರಿಗೆ ಮುಂದಿನ ಜ.5ರವರೆಗೆ ಜಿಲ್ಲೆಗೆ ಬರದಂತೆ ನಿರ್ಬಂಧ ವಿಧಿಸಿದೆ.

    ದತ್ತಜಯಂತಿಯ ಮೂರು ದಿನಗಳ ಕಾರ್ಯಕ್ರಮದಲ್ಲಿ ಮೊದಲ ದಿನವಾದ ಭಾನುವಾರ ಶಾಂತಿಯುತವಾಗಿ ತೆರೆಕಂಡಿದೆ. ಉಳಿದ ಎರಡು ದಿನಗಳಲ್ಲಿ ಭಕ್ತರು ಹೆಚ್ಚಾಗಿ ಬರಲಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 4,000 ಪೊಲೀಸರನ್ನು ನಿಯೋಜಿಸಲಾಗಿದೆ.

    ಚಿಕ್ಕಮಗಳೂರು ನಗರದ ಪ್ರಮುಖ ರಸ್ತೆಯಲ್ಲಿ ಇಂದು (ಸೋಮವಾರ) ಸುಮಾರು 30 ಸಾವಿರಕ್ಕೂ ಅಧಿಕ ಭಕ್ತರು ಬೃಹತ್ ಶೋಭಾಯಾತ್ರೆ ನಡೆಸಲಿದ್ದಾರೆ. ಕಾಮಧೇನು ಗಣಪತಿ ದೇವಾಲಯದಿಂದ ಆರಂಭವಾಗುವ ಯಾತ್ರೆ ಕೆಇಬಿ ಸರ್ಕಲ್, ಬಸವನಹಳ್ಳಿ, ಹನುಮಂತಪ್ಪ ಸರ್ಕಲ್, ಎಂ.ಜಿ.ರಸ್ತೆ ಮೂಲಕ ಸಾಗಿ ಆಜಾದ್ ಪಾರ್ಕ್‍ವರೆಗೆ ಸುಮಾರು 4 ಕಿ.ಮೀ. ನಡೆಯಲಿದೆ.

    ಇನ್ನೂ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ತಂತ್ರ ಹೆಣೆಯುತ್ತಿರುವ ವಿಪಕ್ಷ ನಾಯಕ ಆರ್.ಅಶೋಕ್ ಇದೇ ಮೊದಲ ಬಾರಿಗೆ ದತ್ತ ಮಾಲೆ ಧರಿಸಿ ದತ್ತಭಕ್ತರಾಗಿದ್ದಾರೆ. ಮಾಲಾಧಾರಿ ವಿಪಕ್ಷ ನಾಯಕ ಅಶೋಕ್, ದತ್ತಪೀಠ ಅತಿಕ್ರಮಣವಾಗಿದೆ. ದತ್ತಪೀಠ ದತ್ತಪೀಠವಾಗಿಯೇ ಉಳಿಯಬೇಕು ಎಂದು ಆಗ್ರಹಿಸಿದ್ದಾರೆ. ಈ ಮಧ್ಯೆ ಶಾಸಕ ಸಿ.ಟಿ.ರವಿ ದತ್ತಪೀಠ ಹಿಂದೂಗಳ ಪೀಠ, ಹಿಂದೂಗಳಿಗೆ ಸೇರಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಿಮಿಕ್ರಿ ಮಾಡೋದು ಕಲೆ ಆಗಿದ್ದು, ಬೇಕಿದ್ರೆ ಸಾವಿರ ಬಾರಿ ಮಾಡ್ತೀನಿ: ಟಿಎಂಸಿ ಸಂಸದ

  • ಕಾಫಿನಾಡಲ್ಲಿ ಡಿ.17 ರಿಂದ 26ರವರೆಗೆ ದತ್ತ ಜಯಂತಿ ಸಂಭ್ರಮ

    ಕಾಫಿನಾಡಲ್ಲಿ ಡಿ.17 ರಿಂದ 26ರವರೆಗೆ ದತ್ತ ಜಯಂತಿ ಸಂಭ್ರಮ

    ಚಿಕ್ಕಮಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ಹಿಂದೂ ಪರಿಷತ್ (VHP) ಮತ್ತು ಬಜರಂಗದಳದ (Bajarang Dal) ವತಿಯಿಂದ ಡಿ.17 ರಿಂದ ಡಿ.26ರವರೆಗೆ ದತ್ತ ಜಯಂತಿ (Datta Jayanti) ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದು ಬಜರಂಗದಳ ದಕ್ಷಿಣ ಕರ್ನಾಟಕ ಪ್ರಾಂತ ಸಂಯೋಜಕ ಕೆ.ಆರ್.ಸುನೀಲ್ ತಿಳಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ನಿರಂತರ ಹೋರಾಟದಿಂದ ದತ್ತಪೀಠದಲ್ಲಿ ಈಗಾಗಲೇ ತ್ರಿಕಾಲ ಪೂಜೆ ನಡೆಯುತ್ತಿದೆ. 2023ರಲ್ಲಿ ದತ್ತ ಜಯಂತಿಯನ್ನು ಕರ್ನಾಟಕ ನಾಡ ಉತ್ಸವದಂತೆ ಆಚರಿಸಲು ಸಂಘಟನೆ ತೀರ್ಮಾನಿಸಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಒಂದಲ್ಲ ಮೂರು ಬಾರಿ ಮನೋರಂಜನ್‌ಗೆ ಪ್ರತಾಪ್‌ ಸಿಂಹ ಕಚೇರಿಯಿಂದ ಸಿಕ್ಕಿತ್ತು ಪಾಸ್‌!

    ಈ ಬಾರಿಯ ದತ್ತಜಯಂತಿಗೆ ರಾಜ್ಯದ ವಿವಿಧ ಭಾಗಗಳಿಂದ 30 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ. ಡಿ.17ರಂದು ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ದತ್ತಮಾಲಾಧಾರಣೆ ನಡೆಯಲಿದೆ. ಡಿ.24ರಂದು ಅನುಸೂಯ ಜಯಂತಿ ನಡೆಯಲಿದ್ದು, ಆ ದಿನ ಬೆಳಗ್ಗೆ 9:30ಕ್ಕೆ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಯಲಿದೆ. ದತ್ತಪೀಠದಲ್ಲಿ ಗಣಪತಿ ಪೂಜೆ, ಪುಣ್ಯಹವಾಚನ, ಪಂಚಗವ್ಯ ಶುದ್ಧಿ, ಗಣಪತಿ ಹೋಮ, ದುರ್ಗಾಹೋಮ, ಕಲಶಾಭಿಷೇಕ, ಹಾಗೂ ಮಹಾಪೂಜೆ ಜರುಗಲಿದೆ. ಸಂಜೆ ಪಾದುಕಾಶುದ್ಧಿ, ಪ್ರಕಾರ ಶುದ್ಧಿ, ಸುದರ್ಶನ ಹೋಮ, ಕಲಶಾಭಿಷೇಕ ಮಹಾಪೂಜೆ ನಡೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಂಸತ್‍ನಲ್ಲಿ ಸ್ಮೋಕ್ ಬಾಂಬ್ ಎಸೆದಿದ್ದ ಮನೋರಂಜನ್ ಯಾರು?, ಈತನ ಹಿನ್ನೆಲೆಯೇನು?

    ಡಿ.25ರಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಾಗೂ ಆಜಾದ್ ಪಾರ್ಕ್ ವೃತ್ತದಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಾಧು-ಸಂತರು, ಸ್ವಾಮೀಜಿಗಳು ಹಾಗೂ ವಿಶ್ವ ಹಿಂದೂ ಪರಿಷತ್ ಅಖಿಲ ಭಾರತೀಯ ಸಹಕಾರ್ಯದರ್ಶಿ ಶಂಕರ್ ಗಾಯ್ಕರ್ ಭಾಗವಹಿಸಲಿದ್ದಾರೆ. ಅಂದು ದತ್ತಪೀಠದಲ್ಲಿ ನವಕಲಶ ಕಲಾವಾಹನಂ, ಕಲಾತತ್ವಾದಿವಾಸ ಪೂಜೆ, ಕಲಾಹೋಮ, ರುದ್ರಹೋಮ, ಕಲಶಾಭೀಷೇಕ ಮಹಾಪೂಜೆ ನಡೆಸಲು ಸಂಘಟನೆ ತೀರ್ಮಾನಿಸಿದೆ. ಡಿ.26ರಂದು ದತ್ತಪೀಠದಲ್ಲಿ ದತ್ತಜಯಂತಿ ಪ್ರಯುಕ್ತ ದತ್ತಭಕ್ತರು ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆಯುವರು. ಅಲ್ಲಿ ದತ್ತಾತ್ರೇಯ ಮಹಾಮಂತ್ರ, ಮಹಾಯಾಗ, ಕಲಶಾಭಿಷೇಕ, ಮಹಾಪೂಜೆ, ತಂತ್ರಿಗಳಿಂದ ಆಶೀರ್ವಚನಾ, ಬ್ರಹ್ಮಭೋಜನ, ಪ್ರಸಾದ ವಿನಿಯೋಗ ನಡೆಯಲಿದೆ. ದತ್ತಜಯಂತಿಯನ್ನು ವಿಜೃಂಭಣೆಯಿಂದ ನಡೆಸಲು ನಿರ್ಧರಿಸಿದ್ದು, ಜಿಲ್ಲಾಡಳಿತ ಹೈಕೋರ್ಟ್ ಆದೇಶದಂತೆ ಸೌಕರ್ಯವನ್ನು ಒದಗಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.  ಇದನ್ನೂ ಓದಿ: ಸಾಗರ್ ಶರ್ಮಾ ಇ-ರಿಕ್ಷಾ ಓಡಿಸುತ್ತಿದ್ದ: ಆರೋಪಿ ಮಗನ ಬಗ್ಗೆ ತಾಯಿ ಹೇಳಿದ್ದೇನು?

  • ದತ್ತಪೀಠದ ಮಾರ್ಗದಲ್ಲಿ ಮೊಳೆ – ಕೋರ್ಟ್‍ಗೆ ಶರಣಾದ ಆರೋಪಿ

    ದತ್ತಪೀಠದ ಮಾರ್ಗದಲ್ಲಿ ಮೊಳೆ – ಕೋರ್ಟ್‍ಗೆ ಶರಣಾದ ಆರೋಪಿ

    ಚಿಕ್ಕಮಗಳೂರು: ತಾಲೂಕಿನ ದತ್ತಪೀಠದಲ್ಲಿ ನಡೆದ ದತ್ತಜಯಂತಿಯ ಕಾರ್ಯಕ್ರಮದ ಮುನ್ನ ದತ್ತಪೀಠದ  ರಸ್ತೆಯುದ್ಧಕ್ಕೂ ಮೊಳೆಗಳನ್ನ ಚೆಲ್ಲಿದ್ದ ಆರೋಪಿಗಳ ಪೈಕಿ ಮತ್ತೊಬ್ಬ ಆರೋಪಿ ಕೋರ್ಟ್‌ಗೆ ಶರಣಾಗಿದ್ದಾನೆ.

    ಕಳೆದ ಎರಡು ದಿನಗಳ ಹಿಂದೆಯಷ್ಟೇ ಗ್ರಾಮಾಂತರ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ದತ್ತಜಯಂತಿಯ ಅಂಗವಾಗಿ ಜಿಲ್ಲಾಡಳಿತ ಚಿಪ್ಸ್ ಕೆಫೆ ಮೂಲಕ ದತ್ತಪೀಠದಲ್ಲಿ ಸಿಸಿಟಿವಿಗೆ ಕ್ಲ್ಯಾಂಪ್ ಹಾಕಲು ಹೋಗಿದ್ದ ಮೊಹಮ್ಮದ್‌ ಶಹಬಾಸ್ ಹಾಗೂ ವಾಹೀದ್ ಹುಸೇನ್‌ರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದರು.

    ಅವರು ಮೊಳೆ ಖರೀದಿಸಿದ್ದು ಎಲ್ಲಿ? ಎಂತಹಾ ಮೊಳೆ? ಎಲ್ಲಾ ಮಾಹಿತಿ ಕಲೆ ಹಾಕಿ ಇಬ್ಬರನ್ನು ಬಂಧಿಸಿದ್ದರು. ಆದರೆ ಉಳಿದ ನಾಲ್ಕೈದು ಜನ ತಲೆಮರೆಸಿಕೊಂಡಿದ್ದರು. ಇದನ್ನೂ ಓದಿ: ದತ್ತಜಯಂತಿಯಂದು ದತ್ತಪೀಠ ಮಾರ್ಗದಲ್ಲಿ ಮೊಳೆ ಸುರಿದಿದ್ದ ಇಬ್ಬರ ಬಂಧನ

    ಡಿಸೆಂಬರ್ 6-7-8ರಂದು ದತ್ತಪೀಠದಲ್ಲಿ ದತ್ತಜಯಂತಿ ಕಾರ್ಯಕ್ರಮ ನಡೆದಿತ್ತು. ಡಿಸೆಂಬರ್ 5ರಂದು ಜಿಲ್ಲಾಡಳಿತವೇ ಸಿಸಿಟಿವಿಗೆ ಕ್ಲ್ಯಾಂಪ್ ಹಾಕಲು ಇಬ್ಬರನ್ನು ಕಳುಹಿಸಿತ್ತು. ಆಗ ಇಬ್ಬರು ದತ್ತಪೀಠದ ಮಾರ್ಗದ ಸುಮಾರು ಮೂರು ಕಿ.ಮೀ.ನಷ್ಟು ದೂರ ಸಣ್ಣ-ಸಣ್ಣ ಮೊಳೆಯನ್ನು ಸುರಿದು ಬಂದಿದ್ದರು.

    ಇದರಿಂದ ಪೊಲೀಸರ ವಾಹನ ಸೇರಿ ಐದಾರು ಗಾಡಿಗಳು ಪಂಚರ್ ಆಗಿದ್ದವು. ನಗರವನ್ನು ಕೇಸರಿಮಯವಾಗಿಸಿದ್ದಾರೆ. ನಮ್ಮ ಬಗ್ಗೆ ಅವಹೇಳನಕಾರಿಯಾಗಿ ಕೂಗುತ್ತಾರೆ. ಸಹಿಸಲಾಗದೇ ಕಾರ್ಯಕ್ರಮವನ್ನು ಹಾಳುಮಾಡಬೇಕೆಂದು ನಾವೇ ಹೀಗೆ ಮಾಡಿದ್ದೇವೆ ಎಂದು ಆರೋಪಿಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದರು.

    ಇಬ್ಬರನ್ನು ಅರೆಸ್ಟ್‌ ಮಾಡಿದ್ದ ಪೊಲೀಸರು ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಶುಕ್ರವಾರ ಇಬ್ಬರು ಅರೆಸ್ಟ್ ಆಗುತ್ತಿದ್ದಂತೆ ಶನಿವಾರ ಓರ್ವ ನೇರವಾಗಿ ಕೋರ್ಟ್ ಹಾಜರಾಗಿದ್ದಾನೆ. ಪ್ರಕರಣ ಸಂಬಂಧ ಒಟ್ಟು ಮೂವರು ಆರೋಪಿಗಳು ಬಂಧನವಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದತ್ತಜಯಂತಿಯಂದು ದತ್ತಪೀಠ ಮಾರ್ಗದಲ್ಲಿ ಮೊಳೆ ಸುರಿದಿದ್ದ ಇಬ್ಬರ ಬಂಧನ

    ದತ್ತಜಯಂತಿಯಂದು ದತ್ತಪೀಠ ಮಾರ್ಗದಲ್ಲಿ ಮೊಳೆ ಸುರಿದಿದ್ದ ಇಬ್ಬರ ಬಂಧನ

    ಚಿಕ್ಕಮಗಳೂರು: ದತ್ತ ಜಯಂತಿಯಂದು (Datta Jayanti) ತಾಲೂಕಿನ ದತ್ತಪೀಠ ಮಾರ್ಗದಲ್ಲಿ ಮೂಳೆ (Nails) ಹಾಕಿ ದುಷ್ಕೃತ್ಯ ನಡೆಸಲು ಹುನ್ನಾರ ನಡೆಸಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರು ಚಿಕ್ಕಮಗಳೂರಿನ (Chikkamagaluru) ದುಬೈ ನಗರ ನಿವಾಸಿಗಳಾದ ಮಹಮದ್ ಶಹಬಾಸ್ ಹಾಗೂ ವಾಹೀದ್ ಹುಸೇನ್ ಎಂದು ಗುರುತಿಸಲಾಗಿದೆ. ಡಿಸೆಂಬರ್ 6, 7 ಮತ್ತು 8 ರಂದು ಚಿಕ್ಕಮಗಳೂರು ನಗರದಲ್ಲಿ ದತ್ತಜಯಂತಿ ಕಾರ್ಯಕ್ರಮವಿತ್ತು. ಡಿಸೆಂಬರ್ 6 ರಂದು ದತ್ತಜಯಂತಿಯ ಮೊದಲ ದಿನ ಅನುಸೂಯ ಜಯಂತಿ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ಸಾವಿರಾರು ಮಹಿಳೆಯರು ಮೆರವಣಿಗೆ ನಡೆಸಿ ದತ್ತಪೀಠಕ್ಕೆ ತೆರಳಿ ಹೋಮ-ಹವನ ನಡೆಸುವವರಿದ್ದರು. ಆದರೆ, ಈ ವೇಳೆ ಕಿಡಿಗೇಡಿಗಳು ದತ್ತಪೀಠದ ಮಾರ್ಗದಲ್ಲಿ ಸುಮಾರು 2 ಕಿ.ಮೀ. ಸಣ್ಣ-ಸಣ್ಣ ಮೊಳೆ ಚೆಲ್ಲಿದ್ದರು. ಇದರಿಂದ ಪೊಲೀಸ್ ಸೇರಿದಂತೆ ನಾಲ್ಕೈದು ವಾಹನಗಳು ಮಾರ್ಗ ಮಧ್ಯೆಯೇ ಪಂಚರ್ ಆಗಿದ್ದವು. ಕೂಡಲೇ ಪೊಲೀಸರು ಮೊಳೆ ತೆಗೆದು ಸರಾಗ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಇದನ್ನೂ ಓದಿ: ದತ್ತ ಜಯಂತಿ ಉತ್ಸವಕ್ಕೆ ಅಡ್ಡಿಪಡಿಸುವ ಹುನ್ನಾರ – ರಸ್ತೆಯುದ್ದಕ್ಕೂ ಮೊಳೆಗಳನ್ನು ಹಾಕಿದ ಕಿಡಿಗೇಡಿಗಳು

    ಘಟನೆ ಬಗ್ಗೆ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ಕೂಡ ದಾಖಲಿಸಿಕೊಂಡಿದ್ದರು. ಕಳೆದ ಎಂಟತ್ತು ದಿನಗಳಿಂದ ತನಿಖೆ ನಡೆಸಿದ ಪೊಲೀಸರು ಚಿಕ್ಕಮಗಳೂರಿನ ದುಬೈ ನಗರದ ಇಬ್ಬರನ್ನು ಬಂಧಿಸಿದ್ದಾರೆ. ಅವರು ಎಲ್ಲಿ ಮೊಳೆ ಖರೀದಿಸಿರು ಎಂಬ ಮಾಹಿತಿಯನ್ನೂ ಕಲೆ ಹಾಕಿ, ವೈಜ್ಞಾನಿವಾಗಿ ಸಾಬೀತು ಮಾಡಿಕೊಂಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾದ ಇನ್ನೂ ಐದಾರು ಜನ ತಲೆಮರೆಸಿಕೊಂಡಿದ್ದಾರೆ ಎಂಬ ಮಾಹಿತಿ ಇದ್ದು ಪೊಲೀಸರು ಅವರಿಗೂ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರು ಸರ್ಕಾರಿ ಹಾಸ್ಟೆಲ್‌ನಲ್ಲಿ PUC ವಿದ್ಯಾರ್ಥಿನಿಗೆ ಹೆರಿಗೆ

    ಮೂರು ದಿನದ ಕಾರ್ಯಕ್ರಮಲ್ಲಿ ಮೊದಲ ದಿನವೇ ರಸ್ತೆಗೆ ಮೊಳೆ ಸುರಿದಿದ್ದರಿಂದ ಉಳಿದ ಎರಡು ದಿನಗಳ ಬಗ್ಗೆ ಆತಂಕ ಉಂಟಾಗಿತ್ತು. ಶಾಸಕ ಸಿ.ಟಿ.ರವಿ ಕೂಡ ಇಂತಹ ಬೆದರಿಕೆಗೆ ಬಗ್ಗಲ್ಲ, ದತ್ತಜಯಂತಿಯನ್ನು ಮತ್ತಷ್ಟು ಅದ್ಧೂರಿಯಾಗಿ ಆಚರಿಸಲು ಹಠ ಬಂದಿದೆ ಎಂದಿದ್ದರು. ಈ ನಡುವೆ ಕಾರ್ಯಕ್ರಮ ಚೆನ್ನಾಗಿ ನಡೆದಿತ್ತು. ಚುನಾವಣೆ ವರ್ಷವೇ ಕಿಡಿಗೇಡಿಗಳ ಈ ದುಷ್ಕೃತ್ಯದಿಂದ ಚಿಕ್ಕಮಗಳೂರು ಜನ ಕೂಡ ಆತಂಕಕ್ಕೀಡಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕಾಫಿನಾಡಲ್ಲಿ ಮನೆ-ಮನೆಗೆ ತೆರಳಿ ಸಿ.ಟಿ.ರವಿ ಭಿಕ್ಷಾಟನೆ

    ಕಾಫಿನಾಡಲ್ಲಿ ಮನೆ-ಮನೆಗೆ ತೆರಳಿ ಸಿ.ಟಿ.ರವಿ ಭಿಕ್ಷಾಟನೆ

    ಚಿಕ್ಕಮಗಳೂರು: ದತ್ತಜಯಂತಿ (Datta Jayanti) ಹಿನ್ನೆಲೆ ಶಾಸಕ, ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T Ravi) ಮನೆ-ಮನೆಗೆ ತೆರಳಿ ಭಿಕ್ಷಾಟನೆ (Ritual Begging) ನಡೆಸಿದ್ದಾರೆ.

    ನಗರದ ನಾರಾಯಣಪುರ, ರಾಘವೇಂದ್ರ ಮಠ, ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಮನೆ-ಮನೆಗೆ ತೆರಳಿ ಭಿಕ್ಷಾಟನೆ ನಡೆಸಿದ್ದಾರೆ. ಪಡಿ ಸಂಗ್ರಹಕ್ಕೆ ಮನೆಗೆ ಬಂದ ದತ್ತಮಾಲಾಧಾರಿಗಳಿಗೆ ಸಾರ್ವಜನಿಕರು ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ, ವೀಳ್ಯದೆಲೆ ಅಡಿಕೆ-ಬೆಲ್ಲ ನೀಡಿದರು. ಇಂದು ಮನೆಮನೆಗೆ ತೆರಳಿ ಪಡಿ ಸಂಗ್ರಹಿಸಿದ ದತ್ತಮಾಲಾಧಾರಿಗಳು ನಾಳೆ ಇರುಮುಡಿ ರೂಪದಲ್ಲಿ ಅದನ್ನು ದತ್ತಪೀಠಕ್ಕೆ ಕೊಂಡೊಯ್ದು ದತ್ತಾತ್ರೇಯ ಸ್ವಾಮಿಗೆ ಅರ್ಪಣೆ ಮಾಡಲಿದ್ದಾರೆ. ಇದನ್ನೂ ಓದಿ: 108 ಅಂಬುಲೆನ್ಸ್ ಸಿಬ್ಬಂದಿ ಉದ್ಧಟತನ – ಗಾಯಾಳುವನ್ನು ಅಪಘಾತದ ಸ್ಥಳದಲ್ಲೇ ಬಿಟ್ಟು ವಾಪಸ್

    ಪಡಿ ಸಂಗ್ರಹಕ್ಕೆ ಶಾಸಕ ಸಿ.ಟಿ. ರವಿಗೆ 20ಕ್ಕೂ ಹೆಚ್ಚು ಮಾಲಾಧಾರಿಗಳು ಸಾಥ್ ನೀಡಿದ್ದಾರೆ. ದತ್ತಪೀಠಕ್ಕೆ ಸಚಿವ ಸುನಿಲ್ ಕುಮಾರ್ (Sunil Kumar) ಭೇಟಿ ನೀಡಿ ದತ್ತಪಾದುಕೆ ದರ್ಶನ ಮಾಡಿದ್ದಾರೆ. ಪ್ರತಿ ವರ್ಷಕ್ಕಿಂತ ಈ ವರ್ಷದ ದತ್ತಜಯಂತಿ ಅತ್ಯಂತ ಸಂತೋಷ ಹಾಗೂ ಸಂಭ್ರಮದಿಂದ ಕೂಡಿದೆ. ಇಷ್ಟು ದಿನ ದತ್ತಾತ್ರೇಯರ ಪಾದುಕೆ ದರ್ಶನ ಮಾಡಿಕೊಂಡು ಹೋಗುತ್ತಿದ್ದೇವು. ಆದರೆ, ಈ ವರ್ಷ ದತ್ತಪಾದುಕೆ ದರ್ಶನದ ಜೊತೆ ಹಿಂದೂ ಅರ್ಚಕರಿಂದ ಪೂಜೆ, ಮಂಗಳಾರತಿಯನ್ನು ನೋಡುವ ಭಾಗ್ಯ ಲಭಿಸಿದೆ. ಹಾಗಾಗಿ, ಈ ವರ್ಷದ ದತ್ತಜಯಂತಿ ಹಿಂದೂ ಸಮುದಾಯ ಮತ್ತು ದತ್ತಭಕ್ತರಿಗೆ ಅತ್ಯಂತ ಸಂತಸದ ದಿನ. ಹಲವು ವರ್ಷಗಳಿಂದ ನಮ್ಮ ಬೇಡಿಕೆ ಇದ್ದದ್ದೆ ದತ್ತಾತ್ರೇಯರ ಪಾದುಕೆಗಳಿಗೆ ಹಿಂದೂ ಅರ್ಚಕರಿಂದ ಪೂಜೆ ಜೊತೆ, ತ್ರಿಕಾಲ ಪೂಜೆ ಆಗಬೇಕು ಎಂದು ಬೇಡಿಕೆ ಇಟ್ಟಿದ್ದೆವು. ಅದರಿಂದ ಬಿಜೆಪಿ ಸರ್ಕಾರ ಇಂದು ದತ್ತಪೀಠಕ್ಕೆ ಆಡಳಿತ ಮಂಡಳಿ ನೇಮಿಸಿ ಹಿಂದೂ ಅರ್ಚಕರಿಂದ ಪೂಜೆ ನೋಡಲು ಅವಕಾಶ ಕಲ್ಪಿಸಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಹಿಂದೂ ಹುಲಿನೇ, ಮುಲ್ಲಾ ಅಂತ ಕರೆಯೋಕ್ಕಾಗಲ್ಲ: ಸಿ.ಟಿ ರವಿ

    ಇದು ಹಿಂದೂಬಾಂಧವರಿಗೆ ಅತ್ಯಂತ ಸಂಭ್ರಮದ ದಿನ. ಇಂದು ಮಧ್ಯಾಹ್ನ ನಗರದಲ್ಲಿ 30 ಸಾವಿರಕ್ಕೂ ಅಧಿಕ ದತ್ತಭಕ್ತರಿಂದ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಹಾಗಾಗಿ, ಮುಂಜಾಗೃತ ಕ್ರಮವಾಗಿ ಶೋಭಾಯಾತ್ರೆ ತೆರಳುವ ಮಾರ್ಗದಲ್ಲಿ ಪಾರ್ಕಿಂಗ್ ಕ್ಯಾನ್ಸಲ್ ಮಾಡಿದ್ದು, ಬೆಳಗ್ಗೆಯಿಂದಲೂ ಪೊಲೀಸರು ಕಾವಲಿದ್ದು, ಖಾಕಿ ಪಡೆ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದೆ.

    Live Tv
    [brid partner=56869869 player=32851 video=960834 autoplay=true]

  • 47 ವರ್ಷದ ಹೋರಾಟದ ಬಳಿಕ ದತ್ತಪೀಠದಲ್ಲಿ ನೆರವೇರಿತು ಹಿಂದೂ ಅರ್ಚಕರಿಂದ ಪೂಜೆ

    47 ವರ್ಷದ ಹೋರಾಟದ ಬಳಿಕ ದತ್ತಪೀಠದಲ್ಲಿ ನೆರವೇರಿತು ಹಿಂದೂ ಅರ್ಚಕರಿಂದ ಪೂಜೆ

    ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರುವ ದತ್ತಪೀಠದಲ್ಲಿನ (Dattapita) ದತ್ತಜಯಂತಿಗೆ (Datta Jayanti) ಕಾಫಿನಾಡ ಜಿಲ್ಲಾಡಳಿತ ತಯಾರಾಗಿದೆ. ಅತ್ತ ಹಿಂದೂಗಳು 47 ವರ್ಷದ ಹೋರಾಟದ ಫಲವಾಗಿ ದತ್ತಪೀಠದಲ್ಲಿ ಹಿಂದೂ ಅರ್ಚಕರ ಪೂಜೆ ಕಂಡು ಪುಳಕಿತರಾಗಿದ್ದಾರೆ. ಸೋಮವಾರದಿಂದ 3 ದಿನಗಳ ಕಾಲ ನಡೆಯುವ ದತ್ತಜಯಂತಿಗೆ ಕಾಫಿನಾಡ (Chikkamagaluru) ಖಾಕಿಗಳು ಹೈ ಅಲರ್ಟ್ ಘೋಷಿಸಿದ್ದಾರೆ.

    ದತ್ತಪೀಠದಲ್ಲಿ ಹಿಂದೂ ಅರ್ಚಕರು ಪೂಜೆ ನಡೆಸಿದ್ದಾರೆ. ಮತ್ತೊಂದೆಡೆ ಕಾಫಿನಾಡು ಕೇಸರಿನಾಡಾಗಿ ಕಂಗೊಳಿಸಿದೆ. ಜಿಲ್ಲಾದ್ಯಂತ ಕಾಫಿನಾಡ ಖಾಕಿಗಳು ಹೈ ಅಲರ್ಟ್ ಆಗಿದ್ದಾರೆ. ಓರ್ವ ಎಸ್‌ಪಿ, 4 ಎಎಸ್‌ಪಿ, 17 ಡಿವೈಎಸ್‌ಪಿ, 39 ಇನ್ಸ್ಪೆಕ್ಟರ್, 156 ಸಬ್ ಇನ್ಸ್ಪೆಕ್ಟರ್, 285 ಎಎಸ್‌ಐ, 2050 ಕಾನ್ಸ್ಟೇಬಲ್, 200 ಲೇಡಿ ಪೋಲೀಸ್, 500 ಹೋಂ ಗಾರ್ಡ್, 15 ಕೆಎಸ್‌ಆರ್‌ಪಿ, 25 ಡಿಆರ್, ಹೀಗೆ ಒಟ್ಟು 4,500 ಪೊಲೀಸರು ಜಿಲ್ಲೆಯಾದ್ಯಂತ ರೂಟ್ ಮಾರ್ಚ್ ನಡೆಸಿದ್ದಾರೆ. 150ಕ್ಕೂ ಹೆಚ್ಚು ಸಿಸಿಟಿವಿ ಜೊತೆ 25 ಚೆಕ್ ಪೋಸ್ಟ್ಗಳನ್ನು ಭದ್ರತೆಗಾಗಿ ಇರಿಸಲಾಗಿದೆ.

    ಕಳೆದ 47 ವರ್ಷಗಳಿಂದ ದತ್ತಪೀಠದ ಉಮೇದುವಾರಿಕೆ ಹಾಗೂ ಹಿಂದೂ ಅರ್ಚಕರಿಗಾಗಿ ಹೋರಾಡುತ್ತಿದ್ದ ಹಿಂದೂ ಸಂಘಟನೆಗಳಿಗೆ ಈ ಬಾರಿ ಹಿಂದೂ ಅರ್ಚಕರಿಂದ ಪೂಜೆ ನೋಡುವ ಭಾಗ್ಯ ಲಭಿಸಿದೆ. ಇಂದಿನಿಂದ 3 ದಿನ ಸರ್ಕಾರ ನೇಮಿಸಿರುವ ತಾತ್ಕಾಲಿಕ ಅರ್ಚಕರಿಂದ ದತ್ತಾತ್ರೇಯ ಸ್ವಾಮಿಗೆ ಪೂಜಾ-ಕೈಂಕರ್ಯಗಳು ನಡೆಯಲಿವೆ. ಇಂದು ದತ್ತಪೀಠಕ್ಕೆ ಭೇಟಿ ನೀಡಿದ್ದ ಅರ್ಚಕರಾದ ಶ್ರೀಧರ್ ಹಾಗೂ ಸಂದೀಪ್ ದತ್ತಾತ್ರೇಯ ಸ್ವಾಮಿಗೆ ಪೂಜೆಗೈದು ಬಂದಿದ್ದಾರೆ. ಇದನ್ನೂ ಓದಿ: Himachal Pradesh Exit Poll Result: ಬಿಜೆಪಿ ಕಾಂಗ್ರೆಸ್‌ ಮಧ್ಯೆ ನೆಕ್‌ ಟು ನೆಕ್‌ ಫೈಟ್‌

    ಈ ನಡುವೆ ಮಾತನಾಡಿರುವ ಶಾಸಕ ಸಿಟಿ ರವಿ, ನಮ್ಮ ಮೊದಲ ಹಂತದ ಹೋರಾಟದಲ್ಲಿ ಜಯ ಕಂಡಿದ್ದೇವೆ. ಇನ್ಮುಂದೆ ದತ್ತಪೀಠವೇ ಬೇರೆ, ದರ್ಗಾವೇ ಬೇರೆ ಎಂಬ 2ನೇ ಹಂತದ ಹೋರಾಟ ಆರಂಭವಾಗಲಿದೆ ಎಂದಿದ್ದಾರೆ.

    ಮಂಗಳೂರು, ಉಡುಪಿ, ಶಿವಮೊಗ್ಗ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಹೆಚ್ಚುವರಿ ಪೊಲೀಸರು ಬಂದೋಬಸ್ತ್ಗೆ ಬೆನ್ನೆಲುಬಾಗಿದ್ದಾರೆ. ನಗರ ಸೇರಿದಂತೆ ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ 25 ಚೆಕ್ ಪೋಸ್ಟ್ಗಳನ್ನ ತೆರೆಯಲಾಗಿದೆ. ಹಲವರಿಂದ ಬಾಂಡ್ ಬರೆಸಿಕೊಂಡಿದ್ದಾರೆ. ಸಮಾಜದ ಶಾಂತಿ ಕದಡಿ, ಸಾರ್ವಜನಿಕರ ನೆಮ್ಮದಿ ಹಾಳು ಮಾಡಿದರೆ ನಿರ್ಧಾಕ್ಷಣ್ಯವಾಗಿ ಕಠಿಣ ಕ್ರಮ ಕೈಗೊಳ್ಳೋದಾಗಿ ಡಿಸಿ ಹಾಗೂ ಎಸ್‌ಪಿ ಖಡಕ್ಕಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಸಚಿವರ ಬೆಳಗಾವಿ ಭೇಟಿ ರದ್ದಾಗುವ ಸುಳಿವು – ಸಿಎಂ ನಿರ್ಧರಿಸುತ್ತಾರೆ ಎಂದ ದೇವೇಂದ್ರ ಫಡ್ನವಿಸ್

    Live Tv
    [brid partner=56869869 player=32851 video=960834 autoplay=true]

  • ದತ್ತಜಯಂತಿಗೆ ಕಾಫಿನಾಡಲ್ಲಿ ಪೊಲೀಸ್ ಸರ್ಪಗಾವಲು – ಡಿ.5 ರಿಂದ 9ರವರೆಗೆ ಪ್ರವಾಸಿಗರಿಗೆ ನಿಷೇಧ

    ದತ್ತಜಯಂತಿಗೆ ಕಾಫಿನಾಡಲ್ಲಿ ಪೊಲೀಸ್ ಸರ್ಪಗಾವಲು – ಡಿ.5 ರಿಂದ 9ರವರೆಗೆ ಪ್ರವಾಸಿಗರಿಗೆ ನಿಷೇಧ

    ಚಿಕ್ಕಮಗಳೂರು: ಡಿ. 6,7,8 ರಂದು ತಾಲೂಕಿನ ದತ್ತಪೀಠದಲ್ಲಿ ನಡೆಯುವ ದತ್ತಜಯಂತಿ (Datta Jayanti) ಹಿನ್ನೆಲೆ ಡಿಸೆಂಬರ್ 5ರ ಬೆಳಗ್ಗೆ 6 ಗಂಟೆಯಿಂದ ಡಿ.9ರ ಬೆಳಗ್ಗೆ 10 ಗಂಟೆಯವರೆ ಮುಳ್ಳಯ್ಯನಗಿರಿ ಭಾಗದ ಎಲ್ಲಾ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ (DC) ಕೆ.ಎನ್ ರಮೇಶ್ ತಿಳಿಸಿದ್ದಾರೆ.

    ಡಿಸೆಂಬರ್ 6 ರಿಂದ ಮೂರು ದಿನಗಳ ಕಾಲ ನಡೆಯಲಿರುವ ದತ್ತಜಯಂತಿ ಹಿನ್ನೆಲೆ ಜಿಲ್ಲಾದ್ಯಂತ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಭಕ್ತಾಧಿಗಳ ಅನುಕೂಲಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯಿಂದ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಗಮ ಸಂಚಾರ ದೃಷ್ಟಿಯಿಂದ ರಸ್ತೆ ದುರಸ್ಥಿ ಕಾರ್ಯವೂ ಪೂರ್ಣಗೊಂಡಿದೆ. ತಾತ್ಕಾಲಿಕ ಆರೋಗ್ಯ ಸೌಲಭವನ್ನು ಒದಗಿಸಲು 3 ದಿನದ ಮಟ್ಟಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲಾಗುವುದು. ಹೊನ್ನಮ್ಮನ ಹಳ್ಳದಲ್ಲಿ ಭಕ್ತರು ಸ್ನಾನ ಮಾಡಲು ಮೆಟ್ಟಿಲು, ಕಟ್ಟೆ ನಿರ್ಮಾಣ ಮಾಡಲಾಗಿದೆ. ದತ್ತ ಜಯಂತಿ ಮುಗಿಯುವವರೆಗೂ ನಿರಂತರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಮೆಸ್ಕಾಂ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 3 ದಿನವಾದ್ರೂ ಸಿಗದ ಚಾಲಾಕಿ ಚಿರತೆ – 4ನೇ ದಿನಕ್ಕೆ ಕಾರ್ಯಾಚರಣೆ

    ಭಕ್ತರು ಬೆಟ್ಟಕ್ಕೆ ತೆರಳಲು ಅನುಕೂಲವಾಗುವಂತೆ ಖಾಸಗಿ ಸಂಘ ಸಂಸ್ಥೆಯವರೊಂದಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಕುಡಿಯುವ ನೀರು ಶೌಚಾಲಯ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಡಿಸೆಂಬರ್ 6 ರಿಂದ 8 ವರೆಗೆ ದತ್ತಜಯಂತಿ ನಡೆಯಲಿದ್ದು, 6 ರಂದು ಅನುಸೂಯ ಜಯಂತಿ ನಡೆಯಲಿದೆ. ಅಂದು ಬೋಳರಾಮೇಶ್ವರ ದೇವಸ್ಥಾನದಿಂದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುವರೆಗೂ ಮೆರವಣಿಗೆ ನಡೆಯಲಿದೆ. ಸುಮಾರು 5 ರಿಂದ 6 ಸಾವಿರ ಜನರು ಸೇರುವ ಮಾಹಿತಿ ಇದೆ. ಡಿ. 7 ರಂದು ನಗರದ ಕಾಮಧೇನು ಗಣಪತಿ ದೇವಸ್ಥಾನ ಆವರಣದಿಂದ ಆಜಾದ್‍ಪಾರ್ಕ್ ವೃತ್ತದವರೆಗೂ ಶೋಭಾಯಾತ್ರೆ ನಡೆಯಲಿದ್ದು, 30 ಸಾವಿರಕ್ಕೂ ಅಧಿಕ ಜನ ಸೇರುವ ಬಗ್ಗೆ ಮಾಹಿತಿ ಇದೆ. ಡಿ. 8ರಂದು ದತ್ತಪೀಠದಲ್ಲಿ ದತ್ತಪಾದುಕೆ ದರ್ಶನ ನಡೆಯಲಿದೆ. ಈ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದತ್ತಪೀಠಕ್ಕೆ ತಾತ್ಕಾಲಿಕ ಹಿಂದೂ ಅರ್ಚಕರ ನೇಮಕ- ಬಿಜೆಪಿಯಿಂದ ಸಂಭ್ರಮಾಚರಣೆ

    ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಕ್ಯಾಮೆರಾ, ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ದತ್ತ ಜಯಂತಿ ಕಾರ್ಯಕ್ರಮಗಳ ದಿನದಂದು ಸಂಚಾರ ವ್ಯವಸ್ಥೆಯಲ್ಲಿ ಕೆಲವೊಂದು ಮಾರ್ಪಡುಗಳನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎರಡು ಸಮುದಾಯಗಳ ಮುಖಂಡರೊಂದಿಗೆ ಸಭೆ ನಡೆಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟರ್ ಹಾಕದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅನ್ಯಧರ್ಮ ಜನರ ಭಾವನೆಗೆ ಧಕ್ಕೆಯಾಗುಂತಹ ಘೋಷಣೆಗಳನ್ನು ಕೂಗದಂತೆ ಸೂಚನೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]