Tag: datta jayanthi

  • ಕಾಫಿನಾಡ ದತ್ತಜಯಂತಿಗೆ ಅಧಿಕೃತ ಚಾಲನೆ; ಸಿ.ಟಿ.ರವಿ ಮಾಲಾಧಾರಣೆ – ಜಿಲ್ಲಾದ್ಯಂತ ಹೈ ಅಲರ್ಟ್‌

    ಕಾಫಿನಾಡ ದತ್ತಜಯಂತಿಗೆ ಅಧಿಕೃತ ಚಾಲನೆ; ಸಿ.ಟಿ.ರವಿ ಮಾಲಾಧಾರಣೆ – ಜಿಲ್ಲಾದ್ಯಂತ ಹೈ ಅಲರ್ಟ್‌

    ಚಿಕ್ಕಮಗಳೂರು: ತಾಲೂಕಿನ ದತ್ತಪೀಠದಲ್ಲಿ ನಡೆಯುವ ದತ್ತ ಜಯಂತಿ (Datta Jayanthi) ಕಾರ್ಯಕ್ರಮಕ್ಕೆ ಇಂದು (ಭಾನುವಾರ) ಅಧಿಕೃತ ಚಾಲನೆ ದೊರೆತಿದೆ.‌ ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ಮಾಜಿ ಶಾಸಕ ಸಿ.ಟಿ.ರವಿ (C.T.Ravi) ಜೊತೆ 300 ಕ್ಕೂ ಅಧಿಕ ದತ್ತ ಭಕ್ತರು ಮಾಲಾಧಾರಣೆ ಮಾಡುವ ಮೂಲಕ 10 ದಿನಗಳ ದತ್ತಜಯಂತಿ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆತಿದೆ.

    ಕಳೆದ ವರ್ಷಕ್ಕಿಂತ ಈ ಬಾರಿ ಭಾರೀ ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ದತ್ತ ಭಕ್ತರು ಮಾಲಾಧಾರಣೆ ಮಾಡಿದ್ದಾರೆ. ಇಂದಿನಿಂದ 10 ದಿನಗಳ ಕಾಲ ಕಾಫಿನಾಡು ಬೂದಿ ಮುಚ್ಚಿದ ಕೆಂಡದಂತಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಡ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿ ಹದ್ದಿನ ಕಣ್ಣಿಟ್ಟಿದೆ. ಇದನ್ನೂ ಓದಿ: ಖಾಸಗಿ ದೇವಾಲಯಗಳನ್ನು ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆಗೆ ತೆಗೆದುಕೊಳ್ಳಲ್ಲ: ರಾಮಲಿಂಗಾ ರೆಡ್ಡಿ ಸ್ಪಷ್ಟನೆ

    ಇದೇ 24ರ ಭಾನುವಾರದಂದು ನಗರದಲ್ಲಿ ಸಾವಿರಾರು ಮಹಿಳೆಯರು ಬೃಹತ್ ಸಂಕೀರ್ತನ ಯಾತ್ರೆ ನಡೆಸಿ ದತ್ತಪೀಠದಲ್ಲಿ ಹೋಮ-ಹವನ ನಡೆಸುವ ಮೂಲಕ ಅನುಸೂಯ ಜಯಂತಿ ಆಚರಿಸಲಿದ್ದಾರೆ. ಡಿ.25 ರ ಸೋಮವಾರದಂದು ಚಿಕ್ಕಮಗಳೂರು ನಗರದಲ್ಲಿ ದತ್ತಭಕ್ತರು ಹಾಗೂ ಸಾರ್ವಜನಿಕರಿಂದ ಬೃಹತ್ ಶೋಭಾಯಾತ್ರೆ ನಡೆಯಲಿದ್ದು 20 ಸಾವಿರಕ್ಕೂ ಅಧಿಕ ಶೋಭಾಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

    ಡಿ.26 ರಂದು ರಾಜ್ಯದ ಮೂಲೆ ಮೂಲೆಗಳಿಂದ ಬರುವ 25,000ಕ್ಕೂ ಅಧಿಕ ದತ್ತ ಭಕ್ತರು ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ. ಕೊನೆ ಮೂರು ದಿನ ದತ್ತಜಯಂತಿಯ ಸೂಕ್ಷ್ಮ ದಿನವಾಗಿದ್ದು ಜಿಲ್ಲಾದ್ಯಂತ ಸಾವಿರಾರು ಪೊಲೀಸರ ಹದ್ದಿನ ಕಣ್ಣಿಡಲಿದ್ದಾರೆ. ಇಂದಿನಿಂದ 10 ದಿನಗಳ ಕಾಲ ಚಿಕ್ಕಮಗಳೂರು ಬೂದಿ ಮುಚ್ವಿದ ಕೆಂಡದಂತಿರಲಿದೆ. ಇದನ್ನೂ ಓದಿ: ಮಕ್ಕಳನ್ನು ಮಲದ ಗುಂಡಿಗೆ ಇಳಿಸಿ ಸ್ವಚ್ಛತೆ – ಪ್ರಿನ್ಸಿಪಾಲ್, ವಾರ್ಡನ್‌, ಡಿ-ಗ್ರೂಪ್‌ ನೌಕರರ ಅಮಾನತಿಗೆ ಸೂಚನೆ

  • ಚಿಕ್ಕಮಗಳೂರಲ್ಲಿ ದತ್ತಜಯಂತಿ ಸಂಭ್ರಮ- ಕೇಸರಿ ನಾಡಾದ ಕಾಫಿನಾಡು

    ಚಿಕ್ಕಮಗಳೂರಲ್ಲಿ ದತ್ತಜಯಂತಿ ಸಂಭ್ರಮ- ಕೇಸರಿ ನಾಡಾದ ಕಾಫಿನಾಡು

    ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ ಎಂದೇ ಖ್ಯಾತಿಯಾಗಿರೋ ಜಿಲ್ಲೆಯ ಇನಾಂ ದತ್ತಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ದತ್ತ ಜಯಂತಿಯ ಸಂಭ್ರಮ ಮೇಳೈಸಿರುವುದರಿಂದ ಸಂಘ ಪರಿವಾರದ ಕಾರ್ಯಕರ್ತರು ಇಡೀ ನಗರವನ್ನ ಕೇಸರಿಮಯವಾಗಿಸಿದ್ದಾರೆ.

    ಒಟ್ಟು 11 ದಿನದ ಕಾರ್ಯಕ್ರಮಕ್ಕೆ ಈಗಾಗಲೇ ಅಧಿಕೃತ ಚಾಲನೆ ಸಿಕ್ಕಿದೆ. ಡಿಸೆಂಬರ್ 19ರಂದೇ ಮಾಲೆ ಧರಿಸಿರೋ ದತ್ತ ಭಕ್ತರು ವೃತದಲ್ಲಿದ್ದಾರೆ. ಡಿಸೆಂಬರ್ 27 ಅನುಸೂಯ ಜಯಂತಿ, 28 ಸಾಂಕೇತಿಕ ಶೋಭಾ ಯಾತ್ರೆ ಹಾಗೂ 29 ರಂದು ದತ್ತಪೀಠದಲ್ಲಿ ದತ್ತ ಜಯಂತಿ ಹಾಗೂ ದತ್ತ ಪಾದುಕೆ ದರ್ಶನ ನಡೆಯಲಿದೆ.

    ದತ್ತಾತ್ರೇಯನ ಭಕ್ತರು ಇಡೀ ಚಿಕ್ಕಮಗಳೂರು ನಗರವನ್ನ ಕೇಸರಿಮಯವಾಗಿಸಿದ್ದಾರೆ. ಮಧ್ಯರಾತ್ರಿವರೆಗೂ ನಗರದ ಪ್ರಮುಖ ಬೀದಿಗಳಲ್ಲಿ ಕೇಸರಿ ಬ್ಯಾನರ್, ಬಂಟಿಗ್ಸ್ ಕಟ್ಟಿದ್ದಾರೆ. ನಗರದ ಹನುಮಂತಪ್ಪ ವೃತ್ತ, ಎನ್‍ಎಂಸಿ ವೃತ್ತ, ಬೋಳರಾಮೇಶ್ವರ ಸರ್ಕಲ್, ಟೌನ್ ಕ್ಯಾಂಟೀನ್ ಸರ್ಕಲ್, ಎಐಟಿ ವೃತ್ತ ಸೇರಿದಂತ ನಗರದ ಪ್ರಮುಖ ಬೀದಿಗಳನ್ನ ಕಲರ್ ಫುಲ್ ಮಾಡಿದ್ದಾರೆ.

    ಡಿ.27ರಂದು ಅನುಸೂಯ ಪೂಜೆ ಅಂಗವಾಗಿ ಬೆಳಗ್ಗೆ 9.30ಕ್ಕೆ ಮಹಿಳೆಯರಿಂದ ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಕಾಮಧೇನು ಗಣಪತಿ ದೇವಸ್ಥಾನದವರೆಗೆ ಸಂಕೀರ್ತನಾ ಯಾತ್ರೆ ನಡೆಯಲಿದೆ. ಈ ಸಂಕೀರ್ತನಾ ಯಾತ್ರೆಯಲ್ಲಿ ಜಿಲ್ಲೆಯ ಪ್ರಸಿದ್ಧ ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾಹಿತಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸೆಲಬ್ರಿಟಿಗಳು ಭಾಗವಹಿಸಲಿದ್ದಾರೆ.

    ಡಿ.28ರಂದು ಮಧ್ಯಾಹ್ನ 2ಗಂಟೆಗೆ ನಗರದ ರತ್ನಗಿರಿ ರಸ್ತೆಯಲ್ಲಿರುವ ಕಾಮಧೇನು ಗಣಪತಿ ದೇವಸ್ಥಾನದಿಂದ ಸಂಕೀರ್ತನಾ ಯಾತ್ರೆ ಆರಂಭಗೊಂಡು ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಆಜಾದ್‍ಪಾರ್ಕ್ ವೃತ್ತದಲ್ಲಿ ಮಹಾ ಆರತಿಯ ಕಾರ್ಯಕ್ರಮ ಮೂಲಕ ಕೊನೆಗೊಳ್ಳಲಿದೆ. ಡಿ.29ರಂದು ದತ್ತ ಭಕ್ತರು ಹಾಗೂ ಮಾಲಾಧಾರಿಗಳು ಹೊನ್ನಮ್ಮನ ಹಳ್ಳದಲ್ಲಿ ಸ್ನಾನ ಮಾಡಿ ಕಾಲ್ನಡಿಗೆಯಲ್ಲಿ ಭಜನೆಯೊಂದಿಗೆ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಬಳಿಕ ದತ್ತ ಪೀಠದಲ್ಲಿ ಗಣಪತಿ ಹೋಮ, ದತ್ತಹೋಮ, ಧನ್ವಂತರಿ ಹೋಮ ಕಾರ್ಯಕ್ರಮ ನಡೆಯಲಿದೆ.

  • ಒಂದೇ ದಿನ ದತ್ತ ಜಯಂತಿ, ಈದ್-ಮಿಲಾದ್: ಶಾಂತಿ-ಸುವ್ಯವಸ್ಥೆ ಕಾಪಾಡಲು ಚಿಕ್ಕಮಗಳೂರು ಪೊಲೀಸರ ವಿನೂತನ ಪ್ರಯತ್ನ

    ಒಂದೇ ದಿನ ದತ್ತ ಜಯಂತಿ, ಈದ್-ಮಿಲಾದ್: ಶಾಂತಿ-ಸುವ್ಯವಸ್ಥೆ ಕಾಪಾಡಲು ಚಿಕ್ಕಮಗಳೂರು ಪೊಲೀಸರ ವಿನೂತನ ಪ್ರಯತ್ನ

    ಚಿಕ್ಕಮಗಳೂರು: ದತ್ತ ಜಯಂತಿ ಹಾಗೂ ಈದ್-ಮಿಲಾದ್ ಒಂದೇ ದಿನ ಬಂದಿರೋದ್ರಿಂದ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಹೊಸ ಪ್ರಯತ್ನಕ್ಕೆ ಮುಂದಾಗಿದೆ.

    ಈಶ್ವರ್ ಅಲ್ಲಾ ತೇರೋ ನಾಮ್, ಸಬಕೋ ಸನ್ಮತಿ ದೇ ಭಗವಾನ್ ಎಂದು ಮಹಾತ್ಮ ಗಾಂಧಿಜೀ ಹಿಂದೂ ಹಾಗೂ ಮುಸ್ಲಿಂ ಯುವಕರನ್ನು ತಬ್ಬಿಕೊಂಡಿರೋ ಕಾರ್ಟೂನ್ ಸೇರಿದಂತೆ, ನೀವು ಪರಿಶೀಲಿಸದೆ ಫಾವರ್ಡ್ ಮಾಡೋ ಒಂದೊಂದು ಸಂದೇಶ ಕೂಡ ಮಾರಕಾಯುಧಗಳಷ್ಟೇ ಅಪಾಯಕಾರಿ ಹಾಗೂ ದೇಶ ಗೆಲ್ಲೋದಕ್ಕೆ ಮತೀಯ ಪಾರ್ಟ್ನ ರ್‍ಶಿಪ್ ಬೇಕು ಎಂಬ ಸಂದೇಶಗಳುಳ್ಳ ಬೋರ್ಡ್ ಮಾಡಿಸಿ ಚಿಕ್ಕಮಗಳೂರು ನಗರದ ಪ್ರಮುಖ ಭಾಗಗಳಲ್ಲಿ ಹಾಕಲಾಗಿದೆ.

    ದತ್ತ ಜಯಂತಿಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಅತೀ ಸೂಕ್ಷ್ಮವಾಗಿದ್ದು, ಮೂರು ದಿನಗಳ ಕಾಲ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಗೊಳಿಸಿಲಾಗಿದೆ. 4 ಸಾವಿರ ಪೊಲೀಸರ ಸರ್ಪಗಾವಲಿದ್ದರೂ ಪೊಲೀಸ್ ಇಲಾಖೆ ಈ ರೀತಿಯ ಸಂದೇಶಗಳ ಮೂಲಕ ಸಮಾಜದಲ್ಲಿ ಶಾಂತಿ ಕಾಪಾಡಿ ದತ್ತ ಜಯಂತಿ ಹಾಗೂ ಈದ್- ಮಿಲಾದ್ ಕಾರ್ಯಕ್ರಮವನ್ನು ಶಾಂತಿಯುತವಾಗಿ ಅಂತ್ಯಗೊಳಿಸಲು ಪ್ರಯತ್ನಿಸುತ್ತಿದೆ.

  • ಕಾಫಿನಾಡಲ್ಲಿ ಡಿಸೆಂಬರ್ 1 ರಿಂದ 3ರವರೆಗೆ ನಿಷೇಧಾಜ್ಞೆ

    ಕಾಫಿನಾಡಲ್ಲಿ ಡಿಸೆಂಬರ್ 1 ರಿಂದ 3ರವರೆಗೆ ನಿಷೇಧಾಜ್ಞೆ

    ಚಿಕ್ಕಮಗಳೂರು: ಡಿಸೆಂಬರ್ 1 ರಿಂದ 3ರವರೆಗೆ ಕಾಫಿನಾಡು ಚಿಕ್ಕಮಗಳೂರಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಡಿಸೆಂಬರ್ 2ರಂದು ಬಾಬಾ ಬುಡನ್‍ಗಿರಿಯಲ್ಲಿರುವ ದತ್ತಪೀಠದಲ್ಲಿ ದತ್ತಜಯಂತಿ ನಡೆಯಲಿದೆ. ಅದೇ ದಿನ ಮುಸ್ಲಿಮರಿಗೆ ಈದ್‍ಮಿಲಾದ್ ಸಂಭ್ರಮ ಕೂಡಾ ಇದೆ. ದತ್ತಜಯಂತಿ ಅಂಗವಾಗಿ ಬೃಹತ್ ಶೋಭಾಯಾತ್ರೆ ನಡೆದ್ರೆ, ಅಂದೇ ಈದ್‍ಮಿಲಾದ್ ಅಂಗವಾಗಿ ಮುಸ್ಲಿಮರು ಮೆರವಣಿಗೆ ಕೂಡ ನಡೆಸಲಿದ್ದಾರೆ.

    ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮಧ್ಯಾಹ್ನದವರೆಗೆ ಮುಸ್ಲಿಮರಿಗೆ ಮೆರವಣಿಗೆಗೆ ಅನುಮತಿ ನೀಡಿದ್ದು, ಮಧ್ನಾಹ್ನದ ನಂತರ ಶೋಭಾಯಾತ್ರೆಗೆ ಅವಕಾಶ ಕಲ್ಪಿಸಿದೆ. 3 ದಿನಗಳ ಕಾಲ ಜಿಲ್ಲಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದೆ.