Tag: Dating

  • ಬಾಲಿವುಡ್ ನಟಿಯೊಂದಿಗೆ ರವಿಶಾಸ್ತ್ರಿ ಡೇಟಿಂಗ್! ನಟಿ ಹೇಳಿದ್ದು ಏನು?

    ಬಾಲಿವುಡ್ ನಟಿಯೊಂದಿಗೆ ರವಿಶಾಸ್ತ್ರಿ ಡೇಟಿಂಗ್! ನಟಿ ಹೇಳಿದ್ದು ಏನು?

    ಮುಂಬೈ: ಬಾಲಿವುಡ್ ನಟಿಯರೊಂದಿಗೆ ಕ್ರಿಕೆಟ್ ಆಟಗಾರರು ಡೇಟಿಂಗ್ ನಡೆಸುವುದು ಸಾಮಾನ್ಯ. ಈ ಹಿಂದೆ ಟೀಂ ಇಂಡಿಯಾ ಆಟಗಾರರಾದ ಯುವರಾಜ್ ಸಿಂಗ್, ಧೋನಿ, ಹಭರ್ಜನ್ ಸಿಂಗ್, ಜಹೀರ್ ಖಾನ್ ಸೇರಿದಂತೆ ಹಲವು ಆಟಗಾರರು ಡೇಟಿಂಗ್ ನಡೆಸಿ ಸುದ್ದಿಯಾಗಿದ್ದರು. ಆದರೆ ಸದ್ಯ ಟೀಂ ಇಂಡಿಯಾ ಮುಖ್ಯಕೋಚ್ ರವಿಶಾಸ್ತ್ರಿ ಬಾಲಿವುಡ್ ನಟಿ ನಿಮೃತ್ ಕೌರ್ ರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    `ತೇರಾ ಮೇರಾ ಪ್ಯಾರ್’ ಎಂಬ ಸಂಗೀತ ವೀಡಿಯೋ ಮೂಲಕ ಬಾಲಿವುಡ್‍ಗೆ ಪ್ರವೇಶ ಪಡೆದ ನಟಿ ನಿಮೃತ್ ಕೌರ್ ಬಳಿಕ ಒನ್ ನೈಟ್ ವಿಥ್ ದಿ ಕಿಂಗ್, ಲಂಚ್ ಬಾಕ್ಸ್, ಹೋಮ್ ಲ್ಯಾಂಡ್, ಲವ್ ಶವ್ ತೇ ಚಿಕನ್ ಖುರಾನ, ಏರ್‍ಲಿಫ್ಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಚಾಕಲೇಟ್ ಜಾಹೀರಾತಿನಲ್ಲಿ ನಟಿಸಿ ಪಡ್ಡೆ ಹುಡುಗರ ಮನಸ್ಸು ಕದ್ದಿದ್ದರು. ಆದರೆ 36 ವರ್ಷದಿಂದ ಏಕಾಂಗಿಯಾಗಿಯೇ ಇದ್ದ ನಟಿ, ಕಳೆದ 2 ವರ್ಷಗಳಿಂದ ಗೌಪ್ಯವಾಗಿ ರವಿಶಾಸ್ತ್ರಿ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಅಂದಹಾಗೇ ರವಿಶಾಸ್ತ್ರಿಗೆ ಈಗಾಗಲೇ ಮದುವೆಯಾಗಿದ್ದು, ಆದರೆ ಪತ್ನಿ ರಿತೂ ಸಿಂಗ್ ರಿಂದ 1990ರಲ್ಲೇ ದೂರವಾಗಿದ್ದಾರೆ. ಇಬ್ಬರಿಗೂ ಒಂದು ಹೆಣ್ಣು ಮಗು ಕೂಡ ಇದೆ. ಇನ್ನು ನಟಿ ನಿಮೃತ್ ಕೌರ್ ಖಾಸಗಿ ಕಾರು ಕಂಪೆನಿಯೊಂದರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ರವಿಶಾಸ್ತ್ರಿರೊಂದಿಗೆ ಪರಿಚಯವಾಗಿದೆ. ಸದ್ಯ ರವಿಶಾಸ್ತ್ರಿಗೆ 56 ವರ್ಷ ವಯಸ್ಸಾಗಿದ್ದು, ಇಬ್ಬರ ನಡುವೆ 20 ವರ್ಷ ವಯಸ್ಸಿನ ವ್ಯತ್ಯಾಸವಿದೆ.

    ರವಿಶಾಸ್ತ್ರಿಯೊಂದಿನ ಡೇಟಿಂಗ್ ಸುದ್ದಿಯ ಕುರಿತು ನಟಿ ನಿಮೃತ್ ಕೌರ್ ಪ್ರತಿಕ್ರಿಯೆ ಕೂಡ ನೀಡಿದ್ದು, ಇಂತಹ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಇನ್ನು ರವಿಶಾಸ್ತ್ರಿ ಅವರಿಗೆ ಬಾಲಿವುಡ್ ನಟಿಯೊಂದಿಗೆ ಈ ಹಿಂದೆಯೂ ಡೇಟಿಂಗ್ ನಡೆಸಿದ್ದು, 30 ವರ್ಷದ ಹಿಂದೆ ನಟಿ ಅಮೃತಾ ಸಿಂಗ್‍ರೊಂದಿಗೆ ಡೇಟಿಂಗ್ ನಡೆಸಿ ಸುದ್ದಿಯಾಗಿದ್ದರು. ಬಳಿಕ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಬೇರೆಯಾಗಿದ್ದರು.

    ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ರವಿಶಾಸ್ತ್ರಿ ಡೇಟಿಂಗ್ ಸುದ್ದಿಯ ಕುರಿತು ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇನ್ನು ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಸೋಲುಂಡು ಸರಣಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದೆ. ಇದೇ ವೇಳೆ ಕೋಚ್ ರವಿಶಾಸ್ತ್ರಿ ಡೇಟಿಂಗ್ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮೆರಿಕದ ಸಿಂಗರ್ ಜೊತೆ ಪ್ರಿಯಾಂಕಾ ಚೋಪ್ರಾ ಡೇಟಿಂಗ್!

    ಅಮೆರಿಕದ ಸಿಂಗರ್ ಜೊತೆ ಪ್ರಿಯಾಂಕಾ ಚೋಪ್ರಾ ಡೇಟಿಂಗ್!

    ಮುಂಬೈ: ಬಾಲಿವುಡ್‍ನ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅಮೆರಿಕದ ಗಾಯಕ ನಿಕ್ ಜೋನಸ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಈಗ ಕೆಲವು ದಿನಗಳಿಂದ ಒಬ್ಬರಿಗೊಬ್ಬರು ತಮ್ಮ ಇನ್‍ಸ್ಟಾಗ್ರಾಂ ಪೋಸ್ಟ್ ಲೈಕ್ ಮಾಡುವುದರ ಮೂಲಕ ತಮ್ಮ ರಿಲೇಷನ್‍ಶಿಪ್ ಬಗ್ಗೆ ಕನ್ಫರ್ಮ್ ಮಾಡಿದ್ದಾರೆ.

    ಪ್ರಿಯಾಂಕಾ ಚೋಪ್ರಾ ಕೆಲವು ದಿನಗಳಿಂದ ಅಮೆರಿಕದಲ್ಲೇ ವಾಸಿಸುತ್ತಿದ್ದು, ಈಗ ಅವರು ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಜೋಡಿ ಒಬ್ಬರನೊಬ್ಬರ ಪೋಸ್ಟ್ ಲೈಕ್ ಹಾಗೂ ಕಮೆಂಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

    ಸದ್ಯ ಈ ಇಬ್ಬರು ತಮ್ಮ ರಿಲೇಷನ್ ಶಿಪ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಅಮೆರಿಕದಲ್ಲಿ ಇವರಿಬ್ಬರು ಜೊತೆಯಲ್ಲಿ ಸುತ್ತಾಡುತ್ತಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

    ಪ್ರಿಯಾಂಕಾ ತನ್ನ ಗೆಳೆಯ ನಿಕ್ ಜೀನಸ್ ಜೊತೆ ಪಾರ್ಟಿ, ರೆಸ್ಟೋರೆಂಟ್‍ಗಳಿಗೆ ಒಟ್ಟಿಗೆ ತಿರುಗಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಷ್ಟೇ ಅಲ್ಲದೇ ಜೊತೆಯಲ್ಲಿ ಒಬ್ಬರಿಗೊಬ್ಬರು ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಹೇಳಲಾಗಿದೆ.

    ಪ್ರಿಯಾಂಕಾ ಚೋಪ್ರಾಗೆ 35 ವರ್ಷಗಳಾಗಿದ್ದು, ಜೋನಸ್ 25 ವರ್ಷದ ಗಾಯಕ. ತಮಗಿಂತ 10 ವರ್ಷ ಚಿಕ್ಕ ವಯಸ್ಸಿನ ಯುವಕನ ಜೊತೆ ಪ್ರಿಯಾಂಕಾ ಓಡಾಡುತ್ತಿರುವುದು ಹಾಗೂ ಡೇಟಿಂಗ್ ನಡೆಸುತ್ತಿರುವುದರ ಬಗ್ಗೆ ಹಲವಾರು ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

  • ಪತ್ನಿಯ ಫೋಟೋದೊಂದಿಗೆ ಮತ್ತೊಬ್ಬ ವ್ಯಕ್ತಿಯ ಫೋಟೋ ಎಡಿಟ್- ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡಿದ ಪತಿ ಅರೆಸ್ಟ್!

    ಪತ್ನಿಯ ಫೋಟೋದೊಂದಿಗೆ ಮತ್ತೊಬ್ಬ ವ್ಯಕ್ತಿಯ ಫೋಟೋ ಎಡಿಟ್- ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡಿದ ಪತಿ ಅರೆಸ್ಟ್!

    ಬೆಂಗಳೂರು: ಡೇಟಿಂಗ್ ವೆಬ್‍ಸೈಟ್‍ನಲ್ಲಿ ಪತ್ನಿಯ ಮೊಬೈಲ್ ನಂಬರ್ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡಿದ ಪತಿಯನ್ನು ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

    ತೀರ್ಥಹಳ್ಳಿ ಮೂಲದ ವಿನಯ್ ಬಂಧಿತ ಆರೋಪಿ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿ ಹಾಗೂ ಪತ್ನಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಸಾಮಾಜಿಕ ಜಾಲತಾಣ ಫೇಸ್‍ಬುಕ್‍ನಲ್ಲಿ ನಕಲಿ ಅಕೌಂಟ್ ಓಪನ್ ಮಾಡಿ ತನ್ನ ಪತ್ನಿಯ ಫೋಟೋ ಜೊತೆಗೆ ಮತ್ತೊಬ್ಬ ವ್ಯಕ್ತಿಯ ಫೋಟೋ ಎಡಿಟ್ ಮಾಡಿ ವೆಬ್‍ಸೈಟ್‍ನಲ್ಲಿ ಹಾಕಿದ್ದನು.

    ಡೇಟಿಂಗ್ ವೆಬ್‍ಸೈಟೊಂದರಲ್ಲಿ ಪತ್ನಿಯ ಫೋಟೋ ಮತ್ತು ನಂಬರ್ ಹಾಕಿದ್ದ. ಇದರಿಂದಾಗಿ ಅಪರಿಚಿತರು ಪತ್ನಿಗೆ ನಿರಂತರವಾಗಿ ಕರೆ ಮಾಡಿ ಕಿರುಕುಳ ನೀಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪತ್ನಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ದೂರು ಸ್ವೀಕರಿಸುವ ಪೊಲೀಸರು ಸದ್ಯ ಆರೋಪಿ ಪತಿಯನ್ನು ಬಂಧಿಸಿದ್ದಾರೆ.

  • ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ಚಹಲ್, ತನಿಷ್ಕಾ

    ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ಚಹಲ್, ತನಿಷ್ಕಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಜೊತೆ ಡೇಟಿಂಗ್ ಮಾಡುತ್ತಿರುವ ಹಾಗೂ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡುವುದರ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಯಜುವೇಂದ್ರ ಚಹಲ್ ಸ್ಪಷ್ಟನೆ ನೀಡಿದ್ದಾರೆ.

    ಸೋಮವಾರ ಚಹಲ್ ತನ್ನ ಹಾಗೂ ತನಿಷ್ಕಾ ಸಂಬಂಧದ ಬಗ್ಗೆ ಟ್ವಿಟ್ಟರಿನಲ್ಲಿ ಫೋಟೋ ಹಾಕಿ ನಾನು ಇಷ್ಟು ಬೇಗ ಮದುವೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಗಾಸಿಪ್ ಗಳಿಗೆ ಬ್ರೇಕ್ ಹಾಕಿದ್ದಾರೆ.

    ಫೋಟೋದಲ್ಲಿ ಏನಿತ್ತು: ಎಲ್ಲರಿಗೂ ನನ್ನ ನಮಸ್ಕಾರ. ನನ್ನ ಜೀವನದಲ್ಲಿ ಏನೂ ನಡೆಯುತ್ತಿಲ್ಲ ಎಂಬ ಸಂದೇಶವನ್ನು ನಿಮಗೆ ನೀಡಲು ಇಷ್ಟಪಡುತ್ತೇನೆ. ನಾನು ಮದುವೆಯಾಗುತ್ತಿಲ್ಲ. ತನಿಷ್ಕಾ ಹಾಗೂ ನಾನು ಒಳ್ಳೆಯ ಸ್ನೇಹಿತರು ಅಷ್ಟೇ ಅದು ಬಿಟ್ಟು ನಮ್ಮ ನಡುವೆ ಯಾವ ಸಂಬಂಧವೂ ಇಲ್ಲ. ಈ ರೀತಿಯ ಸುದ್ದಿಗಳು ಹಬ್ಬಿಸದಂತೆ ನಾನು ಎಲ್ಲ ಮಾಧ್ಯಮದವರಿಗೂ ಹಾಗೂ ನನ್ನ ಅಭಿಮಾನಿಗಳಿಗೂ ಮನವಿ ಮಾಡಿಕೊಳ್ಳುತ್ತೇನೆ. ನೀವು ನನ್ನ ಖಾಸಗಿತನವನ್ನು ಗೌರವಿಸುತ್ತೀರಾ ಎಂದುಕೊಂಡಿದ್ದೇನೆ. ದಯವಿಟ್ಟು ಈ ರೀತಿ ಸುದ್ದಿಗಳನ್ನು ಹಬ್ಬಿಸುವುದು ನಿಲ್ಲಿಸಿ. ಈ ರೀತಿಯ ಮದುವೆ ಸುದ್ದಿಗಳನ್ನು ಹಬ್ಬಿಸುವ ಮೊದಲು ಪರಿಶೀಲಿಸಿ. ಧನ್ಯವಾದಗಳು. ಲವ್ ಯೂ ಆಲ್ ಎಂದು ಬರೆದ ಫೋಟೋವನ್ನು ಚಹಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

    ನಟಿ ತನಿಷ್ಕಾ ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು, `ನನಗೂ ಚಹಲ್‍ಗೂ ಯಾವುದೇ ಸಂಬಂಧವಿಲ್ಲ. ನನಗೆ ಅವರು ವೈಯಕ್ತಿಕವಾಗಿ ಪರಿಚಯವೇ ಇಲ್ಲ. ನಾನು ಮದುವೆ ಆಗುತ್ತಿಲ್ಲ. ಸದ್ಯ ನಾನು ನನ್ನ ವಿದ್ಯಾಭ್ಯಾಸದ ಕಡೆ ಗಮನ ಕೊಡುತ್ತಿದ್ದೇನೆ. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಹೇಳಿದ್ದಾರೆ.

    ಫಸ್ಟ್ ರ‍್ಯಾಂಕ್ ರಾಜು ಚಿತ್ರದಲ್ಲಿ ಗುರುನಂದನ್ ಜೊತೆ ನಾಯಕಿಯಾಗಿ ನಟಿಸಿದ ತನಿಷ್ಕಾ ಕಪೂರ್ ಜೊತೆ ಚಹಲ್ ಕೆಲವು ತಿಂಗಳಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲೂ ಈ ಜೋಡಿ ಒಬ್ಬರಿಗೊಬ್ಬರು ಪ್ರತಿಕ್ರಿಯಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಜೋಡಿಯ ಒಟ್ಟಿಗೆಯಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಐಪಿಎಲ್ ಮುಗಿದ ನಂತರ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನೂ ಓದಿ: ಸ್ಯಾಂಡಲ್‍ವುಡ್ ನಟಿ ಜೊತೆ ಚಹಲ್ ಡೇಟಿಂಗ್- ಶೀಘ್ರವೇ ಆಗಲಿದ್ದಾರೆ ಮದುವೆ!

  • ಸ್ಯಾಂಡಲ್‍ವುಡ್ ನಟಿ ಜೊತೆ ಚಹಲ್ ಡೇಟಿಂಗ್- ಶೀಘ್ರವೇ ಆಗಲಿದ್ದಾರೆ ಮದುವೆ!

    ಸ್ಯಾಂಡಲ್‍ವುಡ್ ನಟಿ ಜೊತೆ ಚಹಲ್ ಡೇಟಿಂಗ್- ಶೀಘ್ರವೇ ಆಗಲಿದ್ದಾರೆ ಮದುವೆ!

    ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಯಜುವೇಂದ್ರ ಚಹಲ್ ಸ್ಯಾಂಡಲ್‍ವುಡ್ ನಟಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಆ ನಟಿಯೊಂದಿಗೆ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

    ಹೌದು, ಫಸ್ಟ್ ರ‍್ಯಾಂಕ್ ರಾಜು ಚಿತ್ರದಲ್ಲಿ ಗುರುನಂದನ್ ಜೊತೆ ನಾಯಕಿಯಾಗಿ ನಟಿಸಿದ ತನಿಷ್ಕಾ ಕಪೂರ್ ಜೊತೆ ಚಹಲ್ ಡೇಟಿಂಗ್ ಮಾಡುತ್ತಿದ್ದು, ಐಪಿಎಲ್ ಮುಗಿದ ನಂತರ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ.

    ಕೆಲವು ತಿಂಗಳಿಂದ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲೂ ಈ ಜೋಡಿ ಒಬ್ಬರಿಗೊಬ್ಬರು ಪ್ರತಿಕ್ರಿಯಿಸುತ್ತಿದ್ದಾರೆ. ಐಪಿಎಲ್ ಮುಗಿದ ಮೇಲೆ ಟೀಂ ಇಂಡಿಯಾ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಹಾಗಾಗಿ ಐಪಿಎಲ್ ಮುಗಿದ ತಕ್ಷಣ ಚಹಲ್ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿದೆ.

    ಈ ಹಿಂದೆ ಟೀಂ ಇಂಡಿಯಾ ಹಾಗೂ ಆರ್‌ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇನ್ನೂ ಟೀಂ ಆಟಗಾರ ಜಹೀರ್ ಖಾನ್ ನಟಿ ಸಾಗಾರಿಕ ಗಾಟ್ ಅವರನ್ನು ಮದುವೆಯಾದರೆ, ಯುವರಾಜ್ ಸಿಂಗ್ ನಟಿ ಹೆಜಲ್ ಕೀಚ್ ಜೊತೆ ಮದುವೆಯಾಗಿದ್ದರು. ಇನ್ನೂ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ನಟಿ ಗೀತಾ ಬಸ್ರಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ಭುವನೇಶ್ವರ್ ಡೇಟಿಂಗ್ ಸುದ್ದಿ ಕೇಳಿದ ತಂದೆ ಹೇಳಿದ್ದು ಹೀಗೆ!

    ಭುವನೇಶ್ವರ್ ಡೇಟಿಂಗ್ ಸುದ್ದಿ ಕೇಳಿದ ತಂದೆ ಹೇಳಿದ್ದು ಹೀಗೆ!

    ಮೀರತ್: ಶ್ರೀಲಂಕಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಕೊನೆಯ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅತ್ಯುತ್ತಮ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಅವರ ಕುಟುಂಬ ತುಂಬಾ ಸಂತೋಷದಲ್ಲಿದೆ. ಈ ಸಂತೋಷದ ಸಂದರ್ಭದಲ್ಲಿ ಭುವಿ ಅವರ ತಂದೆ ಕಿರಣ್ ಪಾಲ್ ಸಿಂಗ್ ತಮ್ಮ ಮಗನ ಮದುವೆಯ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

    ಭುವಿ ಕ್ರಿಕೆಟ್ ಮೈದಾನದಲ್ಲಿ ತಮ್ಮನ್ನು ತಾವು ಸಾಬಿತು ಮಾಡಿಕೊಳ್ಳುತ್ತಿದ್ದಾರೆ. ತಾಯಿ ಇಂದ್ರೇಶ್ ನಿಂದ ತಂಗಿ ರೇಖಾವರೆಗೆ ಭುವಿ ಮದುವೆಗೆ ಕಾಯುತ್ತಿದ್ದಾರೆ. ಆದರೆ ಟೀಂ ಇಂಡಿಯಾದ ಬ್ಯುಸಿ ಶೆಡ್ಯೂಲ್ ನ ಕಾರಣ ಈ ವರ್ಷ ಮದುವೆ ಆಗುವುದು ಕಷ್ಟವೆಂದು ಉತ್ತರ ಪ್ರದೇಶದಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿರುವ ಕಿರಣ್ ಪಾಲ್ ಸಿಂಗ್ ತಿಳಿಸಿದ್ದಾರೆ.

    27 ವರ್ಷದ ಭುವನೇಶ್ವರ್ ನ ಮದುವೆ ಯಾರೊಂದಿಗೆ ಆಗುತ್ತದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕಿರಣ್ ಪಾಲ್ ಸಿಂಗ್ ಈ ವಿಷಯಕ್ಕೆ ಸಂಬಂಧಪಟ್ಟಂತೆ ನಾವು ನಮ್ಮ ಮಗನ ಮೇಲೆ ಯಾವುದೇ ಒತ್ತಡ ಹಾಕುವುದಿಲ್ಲ. ಅವನು ಇಷ್ಟಪಡುವ ಹುಡುಗಿ ಜೊತೆ ಮದುವೆ ಆಗುವ ಸ್ವಾತಂತ್ರ್ಯ ಅವನಿಗಿದೆ ಎಂದು ಉತ್ತರಿಸಿದರು.

    ಇದನ್ನೂ ಓದಿ: ಭುವನೇಶ್ವರ್ ತಮ್ಮ ಡೇಟಿಂಗ್ ಸುದ್ದಿ ಬಗ್ಗೆ ಟ್ವಿಟರ್ ನಲ್ಲಿ ಹೀಗೆ ಬರೆದುಕೊಂಡಿದ್ರು..

    ಮಾಧ್ಯಮಗಳಲ್ಲಿ ಮಗನ ಅಪೇರ್ ಬಗ್ಗೆ ಸಾಕಷ್ಟು ಕೇಳಿದ್ದೇನೆ. ನಾನು ಭುವಿಯೊಂದಿಗೆ ಮಾತನಾಡಿದ್ದೇನೆ. ಅವನು ಯಾವುದೇ ಹುಡುಗಿಯ ಬಗ್ಗೆ ನನ್ನ ಜೊತೆ ಮಾತನಾಡಿಲ್ಲ. ನಮ್ಮ ಮನೆಯ ಸದಸ್ಯರೆಲ್ಲ ಸ್ಟ್ರೇಟ್ ಫಾರ್ವಡ್ ನಿಲುವು ಹೊಂದಿದ್ದು, ಯಾವುದಾದರೂ ವಿಷಯ ಇದ್ದರೆ ಭುವಿ ನಮ್ಮ ಹತ್ತಿರ ಹೇಳುತ್ತಾನೆ. ಸದ್ಯಕ್ಕೆ ಭುವಿಗೆ ಮದುವೆಯ ಯಾವುದೇ ಯೋಚನೆ ಇಲ್ಲ. ಮಗನ ಖುಷಿಯೇ ನಮ್ಮ ಖುಷಿ ಎಂದು ಕಿರಣ್ ಪಾಲ್ ಸಿಂಗ್ ಹೇಳಿದರು.

    ಭುವನೇಶ್ವರ್ ಕುಮಾರ್ ಸೌತ್ ಇಂಡಿಯನ್ ನಟಿ ಅನುಸ್ಮೃತಿ ಸರ್ಕಾರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಈ ಹಿಂದೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

    ಕೊಲಂಬೋದಲ್ಲಿ ಲಂಕಾ ವಿರುದ್ಧ ನಡೆದ ಐದನೇ ಏಕದಿನ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ 9.4 ಓವರ್ ಎಸೆದು 42 ರನ್ ನೀಡಿ ಐದು ವಿಕೆಟ್ ಪಡೆಯುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.

    ಇದನ್ನೂ ಓದಿ: ಐಸಿಸಿ ಏಕದಿನ ಬೌಲಿಂಗ್ ಪಟ್ಟಿಯಲ್ಲಿ ಭುವನೇಶ್ವರ್ ಕುಮಾರ್ ಗೆ ಎಷ್ಟನೇ ಶ್ರೇಯಾಂಕ ಗೊತ್ತಾ?