Tag: Dating

  • ಯುವಿ ಮಾಜಿ ಪ್ರೇಯಸಿ ಜೊತೆ ಲಿಯಾಂಡರ್ ಪೇಸ್ ಡೇಟಿಂಗ್

    ಯುವಿ ಮಾಜಿ ಪ್ರೇಯಸಿ ಜೊತೆ ಲಿಯಾಂಡರ್ ಪೇಸ್ ಡೇಟಿಂಗ್

    ಪಣಜಿ: ಬಾಲಿವುಡ್ ನಟಿ ಕಿಮ್ ಶರ್ಮಾ ಜೊತೆ ಭಾರತ ಖ್ಯಾತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಡೇಟಿಂಗ್ ನಡೆಸುತ್ತಿದ್ದಾರೆ.

    ಇಬ್ಬರು ಗೋವಾಕ್ಕೆ ತೆರಳಿದ್ದು, ಜೊತೆಯಾಗಿ ರೆಸ್ಟೋರೆಂಟ್‍ನಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರೆಸ್ಟೋರೆಂಟ್ ಹಂಚಿಕೊಂಡ ಚಿತ್ರದಲ್ಲಿ ಲಿಯಾಂಡರ್ ಕಿಮ್ ಶರ್ಮಾ ಅವರನ್ನು ತಬ್ಬಿಕೊಂಡಿದ್ದಾರೆ.

    ಈ ಹಿಂದೆಯೇ ಮುಂಬೈನಲ್ಲಿ ಇವರಿಬ್ಬರು ಜೊತೆಯಾಗಿ ಹಲವು ಬಾರಿ ಕಾಣಿಸಿಕೊಂಡಿದ್ದರು. ಆಗಲೇ ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಈಗ ಈ ಫೋಟೋಗಳು ಬಹಿರಂಗವಾದ ಬಳಿಕ ಡೇಟಿಂಗ್ ವದಂತಿಗೆ ಪುಷ್ಟಿ ನೀಡುವಂತಿದೆ. ಇದನ್ನೂ ಓದಿ: ಯುವಿ ಪಾರ್ಟಿಗೆ ಆಗಮಿಸಿ ಟ್ವಿಸ್ಟ್ ಕೊಟ್ಟ ಮಾಜಿ ಗೆಳತಿ

    2000ನೇ ಇಸ್ವಿಯಲ್ಲಿ ಲಿಯಾಂಡರ್ ಪೇಸ್ ಮಾಡೆಲ್ ರಿಯಾ ಪಿಳ್ಳೈ ಅವರ ಜೊತೆ ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದರು. 2005ರಲ್ಲಿ ಇವರಿಬ್ಬರಿಗೆ ಹೆಣ್ಣು ಮಗು ಜನನವಾಗಿತ್ತು. ಕಿಮ್ ಈ ಹಿಂದೆ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಜೊತೆ ಡೇಟಿಂಗ್ ನಡೆಸಿದ್ದರು. ಇದಾದ ಬಳಿಕ ನಟ ಹರ್ಷವರ್ಧನ್ ರಾಣೆ ಜೊತೆಗೂ ಕಿಮ್ ಶರ್ಮಾ ಕಾಣಿಸಿಕೊಂಡಿದ್ದರು.

    ಕಿಮ್ ಮೊಹಬ್ಬಾತೆಯನ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಜೊತೆಗೆ ನೆಹಲ್ಲೆ ಪೆ ಡೆಹಲ್ಲಾ, ಟಾಮ್, ಡಿಕ್ ಮತ್ತು ಹ್ಯಾರಿ, ಕೆಹ್ತಾ ಹೈ ದಿಲ್ ಬಾರ್ ಬಾರ್ ಮತ್ತು ಪದ್ಮಶ್ರೀ ಲಾಲೂ ಪ್ರಸಾದ್ ಯಾದವ್ ಸೇರಿದಂತೆ ಹಲವಾರು ಸಿನಿಮಾದಲ್ಲಿ ಕಿಮ್ ನಟಿಸಿದ್ದಾರೆ. 2000 ರಲ್ಲಿ ಬಿಡುಗಡೆಯಾದ ಸುಷ್ಮಿತಾ ಸೇನ್ ಅವರ ಜಿಂದಗಿ ರಾಕ್ಸ್ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರು. ಎಸ್.ಎಸ್.ರಾಜಮೌಳಿ ಅವರ ಮಗಧೀರ ಚಿತ್ರದಲ್ಲಿ ಕಿಮ್ ಶರ್ಮಾ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  • ಬೆಂಗ್ಳೂರಲ್ಲಿ ಟ್ರೆಂಡ್ ಆಗಿದೆ ಡೇಟಿಂಗ್ ಆ್ಯಪ್ – ಪರಿಚಯ ಇಲ್ಲದವರ ಜೊತೆಗೆ ಮೋಜು-ಮಸ್ತಿ

    ಬೆಂಗ್ಳೂರಲ್ಲಿ ಟ್ರೆಂಡ್ ಆಗಿದೆ ಡೇಟಿಂಗ್ ಆ್ಯಪ್ – ಪರಿಚಯ ಇಲ್ಲದವರ ಜೊತೆಗೆ ಮೋಜು-ಮಸ್ತಿ

    ಬೆಂಗಳೂರು: ಡೇಟಿಂಗ್ ಆ್ಯಪ್ ಬಳಸುವುದರಲ್ಲಿ ಬೆಂಗಳೂರು ಈಗ ಟಾಪ್ 2 ಸ್ಥಾನ ಪಡೆದುಕೊಂಡಿದ್ದು, ನಮ್ಮ ಯುವ ಜನತೆ ನಿಜಕ್ಕೂ ಸೇಫ್ ಆಗಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

    ಯುವ ಸಮೂಹವೇ ಹೆಚ್ಚಾಗಿ ಡೇಟಿಂಗ್ ಆ್ಯಪ್ ಕ್ರೇಜ್‍ಗೆ ಒಳಗಾಗಿದ್ದಾರೆ. ಯಾರು, ಏನು ಅನ್ನೋದು ಗೊತ್ತಿಲ್ಲದೇ, ಪಾಶ್ಚಾತ್ಯ ಸಂಸ್ಕೃತಿ ಪ್ರಭಾವಕ್ಕೆ ಯುವ ಜನ ಒಳಗಾಗಿ ಈ ಡೇಟಿಂಗ್ ಕ್ರೇಜ್ ಹೆಚ್ಚು ಮಾಡಿಕೊಂಡಿದ್ದಾರೆ.

    ಬೆಂಗಳೂರಿನಲ್ಲಿ ಎಲ್ಲಾ ರಾಜ್ಯದ, ಹಲವು ದೇಶಗಳ ಜನ ವಾಸ ಮಾಡುತ್ತಾರೆ. ಅವರು ಈ ಆ್ಯಪ್‍ಗಳ ಮೂಲಕ ರಿಲೇಶನ್‍ಶಿಪ್‍ಗಾಗಿ ಹುಡುಕಾಟ ಮಾಡುತ್ತಿರುತ್ತಾರೆ. ಹೀಗಾಗಿಯೇ ಬೆಂಗಳೂರು 2ನೇ ಸ್ಥಾನಕ್ಕೆ ಬರಲು ಪ್ರಮುಖ ಕಾರಣ ಇರಬಹುದು ಎಂದು ಆ್ಯಪ್ ತಜ್ಞರು ಹೇಳುತ್ತಾರೆ.

    ಈ ಡಿಜಿಟಲ್ ಯುಗದಲ್ಲಿ ಎಲ್ಲಕ್ಕೂ ಆ್ಯಪ್‍ಗಳು ಬಂದುಬಿಟ್ಟಿವೆ. ಯಾವುದೇ ವಿಷಯಕ್ಕೂ ಆ್ಯಪ್ ಇಲ್ಲ ಎನ್ನುವ ಹಾಗಿಲ್ಲ. ಯುವ ಜನ ಮುಖ ಪರಿಚಯ ಇಲ್ಲದವರ ಸ್ನೇಹ ಮಾಡಿ ಸಿನಿಮಾಗಳ ರೀತಿ ಕನಸು ಕಾಣುತ್ತಿರುತ್ತಾರೆ. ಇದು ಒಂದು ಮಟ್ಟಕ್ಕಿದ್ದರೆ ಪರವಾಗಿಲ್ಲ ಆದರೆ ಆ್ಯಪ್‍ನಲ್ಲೇ ಬದುಕಿದ್ರೆ ಪಕ್ಕಾ ಡೆಂಜರ್ ಎಂದು ಜನ ಮಾತನಾಡುತ್ತಿದ್ದಾರೆ.

    ಬೆಂಗಳೂರು ಬೇರೆ ವಿಷಯಗಳಲ್ಲಿ ಟಾಪ್ ಬಂದರೆ ಖುಷಿಯಾಗುತ್ತೆ. ಆದರೆ ಈ ಆ್ಯಪ್ ಬಳಕೆಗಳನ್ನು ಕಡಿಮೆ ಮಾಡಿದರೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎನ್ನುವುದು ಎಲ್ಲರ ಆಶಯ.

  • ಭಾರತ ಮೂಲದ ಯುವತಿಯೊಂದಿಗೆ ಮ್ಯಾಕ್ಸ್‌ವೆಲ್ ಡೇಟಿಂಗ್

    ಭಾರತ ಮೂಲದ ಯುವತಿಯೊಂದಿಗೆ ಮ್ಯಾಕ್ಸ್‌ವೆಲ್ ಡೇಟಿಂಗ್

    ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತ ಮೂಲದ ಯುವತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.

    ಮ್ಯಾಕ್ಸ್‌ವೆಲ್ ವಿನಿ ರಾಮನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಮಿನಿ ರಾಮನ್ ಮ್ಯಾಕ್ಸ್‌ವೆಲ್ ಜೊತೆಗಿನ ಹಾಟ್ ಫೋಟೋಗಳನ್ನುತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    https://www.instagram.com/p/BuYXAL9Fqgk/

    ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಹಸನ್ ಅಲಿ ಭಾರತದ ಶಮಿಯಾ ಅಝ್ರೂ ಅವರನ್ನು ಆಗಸ್ಟ್ 20ರಂದು ದುಬೈನಲ್ಲಿ ವಿವಾಹವಾಗಿದ್ದರು. ಈ ಬೆನ್ನಲ್ಲೇ ಮ್ಯಾಕ್ಸ್‌ವೆಲ್ ಭಾರತದ ಯುವತಿಯೊಂದಿಗೆ ಡೇಟಿಂಗ್ ನಡೆಸಿರುವ ಸುದ್ದಿ ರಿವೀಲ್ ಆಗಿದೆ.

    ಭಾರತದಲ್ಲಿ ಜನಿಸಿರುವ ವಿನಿ ರಾಮನ್ ಮೆಲ್ಬೋರ್ನ್ ನಲ್ಲಿ ನೆಲೆಸಿದ್ದು, ಫಾರ್ಮಸಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವಿನಿ ಹಾಗೂ ಮ್ಯಾಕ್ಸ್‌ವೆಲ್ ಎರಡು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಈ ಜೋಡಿ ಮದುವೆಯಾಗುವ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.

    ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ಬೌಲರ್ ಶಾನ್ ಟೈಟ್ ಒಂದು ವರ್ಷದ ಡೇಟಿಂಗ್ ನಂತರ 2014ರಲ್ಲಿ ರೂಪದರ್ಶಿ, ವೈನ್ ಉದ್ಯಮಿ ಮಶೂಮ್ ಸಿಂಘಾ ಅವರನ್ನು ವಿವಾಹವಾಗಿದ್ದರು. ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರು 2010ರಲ್ಲಿ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ವಿವಾಹವಾಗಿದ್ದು, ಕಳೆದ ವರ್ಷ ಗಂಡು ಮಗುವನ್ನು ಜನ್ಮ ನೀಡಿದ್ದಾರೆ.

  • ವಿಶ್ವಕಪ್ ವೇಳೆ ಪಾಂಡ್ಯ ಜೊತೆ ವಿಶೇಷ ಮನವಿ – ಸ್ಪಷ್ಟನೆ ಕೊಟ್ಟ ಊರ್ವಶಿ ರೌಟೇಲಾ

    ವಿಶ್ವಕಪ್ ವೇಳೆ ಪಾಂಡ್ಯ ಜೊತೆ ವಿಶೇಷ ಮನವಿ – ಸ್ಪಷ್ಟನೆ ಕೊಟ್ಟ ಊರ್ವಶಿ ರೌಟೇಲಾ

    ಮುಂಬೈ: ಬಾಲಿವುಡ್ ನಟಿ, ಹೇಟ್ ಸ್ಟೋರಿ ಚಿತ್ರದ ಮೂಲಕ ಪ್ರಸಿದ್ಧಿಯಾದ ಊರ್ವಶಿ ರೌಟೇಲಾ ಟೀಂ ಇಂಡಿಯಾದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಜೊತೆ ಡೇಟಿಂಗ್ ಮಾಡುತ್ತಿದ್ದು, ಸಹಾಯ ಕೇಳಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈಗ ಈ ಎಲ್ಲ ವಿಚಾರಕ್ಕೆ ಸಂಬಂಧಿಸಿದಂತೆ ಊರ್ವಶಿ ರೌಟೇಲಾ ಸ್ಪಷ್ಟನೆ ನೀಡಿದ್ದಾರೆ.

    ಯೂ ಟ್ಯೂಬ್ ನಲ್ಲಿ “ಊರ್ವಶಿ ರೌಟೇಲಾ ತನ್ನ ಮಾಜಿ ಗೆಳೆಯ ಹಾರ್ದಿಕ್ ಪಾಂಡ್ಯ ಜೊತೆ ಸಹಾಯ ಕೇಳಿದ್ದಾರೆ” ಎನ್ನುವ ಹೆಡ್‍ಲೈನ್ ಹಾಕಿ ಒಂದು ವಿಡಿಯೋ ಅಪ್ಲೋಡ್ ಆಗಿತ್ತು. ಈ ವಿಡಿಯೋಗೆ ಸಂಬಂಧಿಸಿದಂತೆ ಇನ್‍ಸ್ಟಾಗ್ರಾಮನ್ ನಲ್ಲಿ ಸ್ಟೇಟಸ್ ಅಪ್‍ಡೇಟ್ ಮಾಡಿದ ಊರ್ವಶಿ, ಯೂ ಟ್ಯೂಬ್ ನಲ್ಲಿ ಅಪ್ಲೋಡ್ ಆಗುತ್ತಿರುವ ಈ ರೀತಿಯ ಸುದ್ದಿಗಳನ್ನು ದಯವಿಟ್ಟು ನಿಲ್ಲಿಸಿ. ನಾನು ನನ್ನ ಕುಟುಂಬಕ್ಕೆ ಉತ್ತರ ನೀಡಬೇಕು. ಇದರಿಂದ ನನಗೆ ಸಮಸ್ಯೆಯಾಗುತ್ತದೆ ಎಂದು ಅಪ್‍ಡೇಟ್ ಮಾಡಿಕೊಂಡಿದ್ದಾರೆ.

    ವಿಶ್ವಕಪ್ ಟೂರ್ನಿಯ ಸಂದರ್ಭದಲ್ಲಿ ಊರ್ವಶಿ ರೌಟೇಲಾ ಪಾಂಡ್ಯ ಜೊತೆ ಸಹಾಯ ಕೇಳಿದ್ದರು ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪಾಕಿಸ್ತಾನ ವಿರುದ್ಧ ಪಂದ್ಯವನ್ನು ತಾಯಿ ಜೊತೆ ವೀಕ್ಷಿಸಲು ಊರ್ವಶಿ 2 ಪಾಸ್ ಬೇಕಿತ್ತು ಎಂದು ಹಾರ್ದಿಕ್ ಪಾಂಡ್ಯ ಅವರಲ್ಲಿ ಕೇಳಿಕೊಂಡಿದ್ದರು. ಹಲವಾರು ಬಾರಿ ಮೆಸೇಜ್ ಮಾಡಿದ್ದರು ಪಾಂಡ್ಯ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಕ್ರಿಕೆಟ್ ಅಭ್ಯಾಸದಲ್ಲಿ ನಿರತರಾಗಿದ್ದ ಕಾರಣ ಹಾರ್ದಿಕ್ ಪಾಂಡ್ಯ ಪಾಸ್ ಬೇಡಿಕೆಯ ಮಸೇಜ್ ನೋಡಿರಲಿಲ್ಲವಂತೆ. ಈ ವಿಚಾರ ಬೆಳಕಿಗೆ ಬಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು.

    ಚರ್ಚೆ ಜೋರಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಊರ್ವಶಿ ರೌಟೇಲಾ, ನಾನು ಲಂಡನ್‍ಗೆಂದು ಶೂಟಿಂಗ್‍ಗೆ ತೆರಳಿದ್ದೆ. ಮ್ಯಾಚ್ ಮ್ಯಾಂಚೆಸ್ಟರ್ ನಲ್ಲಿತ್ತು. ಲಂಡನ್‍ನಿಂದ ಮ್ಯಾಂಚೆಸ್ಟರ್ ಗೆ ಬಹಳ ದೂರವಿದೆ. ನನ್ನ ಮಾಜಿ ಪಿಆರ್ ಹೇಳುವ ವಿಷಯವನ್ನು ನಂಬಬೇಡಿ. ಇದು ಸುಳ್ಳು ಸುದ್ದಿ ಎಂದು ಹೇಳಿದ್ದರು.

    2018ರಲ್ಲಿ ಊರ್ವಶಿ ರೌಟೇಲಾ ಮತ್ತು ಹಾರ್ದಿಕ್ ಪಾಂಡ್ಯ ಜೊತೆಯಾಗಿ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಇವರಿಬ್ಬರ ಮಧ್ಯೆ ಡೇಟಿಂಗ್ ನಡೆಯುತ್ತಿದೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಹಲವಾರು ಬಾರಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು.

  • ಕೆ.ಎಲ್ ರಾಹುಲ್ ಜೊತೆ ಬಿಟೌನ್ ಬೆಡಗಿ ಡೇಟಿಂಗ್ – ಬಿಸಿ ಬಿಸಿ ಚರ್ಚೆ

    ಕೆ.ಎಲ್ ರಾಹುಲ್ ಜೊತೆ ಬಿಟೌನ್ ಬೆಡಗಿ ಡೇಟಿಂಗ್ – ಬಿಸಿ ಬಿಸಿ ಚರ್ಚೆ

    ಮುಂಬೈ: ಟಿಂ ಇಂಡಿಯಾ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ವಿಶ್ವಕಪ್‍ನಲ್ಲಿ ತಮ್ಮ ಪವರ್‍ಫುಲ್ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಆದರೆ ಈಗ ಬಿಟೌನ್ ಬೆಡಗಿ ಜೊತೆ ರಾಹುಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಹಾಟ್ ಸುದ್ದಿಯೊಂದು ಎಲ್ಲೆಡೆ ಹರಿದಾಡುತ್ತಿದೆ.

    ಹೌದು. ರಾಹುಲ್ ಜೊತೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸದ್ಯ ಸುದ್ದಿಯಲ್ಲಿದ್ದಾರೆ. ಅಥಿಯಾ ಶೆಟ್ಟಿ ಹೆಸರು ಕ್ರಿಕೆಟರ್ ಕೆ.ಎಲ್. ರಾಹುಲ್ ಜೊತೆ ಕೇಳಿಬರುತ್ತಿದ್ದು, ಅವರಿಬ್ಬರೂ ರಿಲೇಶನ್ ಶಿಪ್‍ನಲ್ಲಿದ್ದಾರೆ ಎನ್ನಲಾಗುತ್ತಿದೆ.

    ರಾಹುಲ್ ಜೊತೆ ಈವರೆಗೆ ಅನೇಕ ಬಾಲಿವುಡ್ ನಟಿಯರ ಹೆಸರು ಕೇಳಿ ಬಂದಿದೆ. ಆದರೆ ರಾಹುಲ್, ಅಥಿಯಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಸಾರ್ವಜನಿಕವಾಗಿ ಇಬ್ಬರೂ ಪ್ರೀತಿ ವ್ಯಕ್ತಪಡಿಸಿಲ್ಲ. ಆದರೆ ಮೂಲಗಳ ಪ್ರಕಾರ, ಇಬ್ಬರೂ ಒಟ್ಟಿಗೆ ಸುತ್ತಾಡುತ್ತಿದ್ದಾರೆ ಎಂದು ಸುದ್ದಿ ಹಬ್ಬಿದೆ.

    ಫೆಬ್ರವರಿಯಲ್ಲಿ ಇಬ್ಬರ ಮಧ್ಯೆ ಪ್ರೀತಿ ಚಿಗುರಿದೆ. ಕಾಮನ್ ಫ್ರೆಂಡ್ಸ್ ಮೂಲಕ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಬಳಿಕ ಕೆಲವು ಭೇಟಿಗಳ ನಂತರ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ವಿಚಾರ ಸಖತ್ ಸದ್ದು ಮಾಡುತ್ತಿದೆ.

    ರಾಹುಲ್ ಹಾಗೂ ಅಥಿಯಾ ಅವರ ಕಾಮನ್ ಫ್ರೆಂಡ್ ಆಕಾಂಶಿ ರಂಜನ್ ತಮ್ಮ ಇನ್ಸ್ಟ್ರಾಗ್ರಾಮ್ ನಲ್ಲಿ ಹಾಕಿರುವ ಪೋಸ್ಟ್ ನಿಂದ ಈ ಡೇಟಿಂಗ್ ವಿಷಯ ಹೊರಬಿದ್ದಿದೆ. ಅಥಿಯಾ ಹಾಗೂ ರಾಹುಲ್ ಒಟ್ಟಿಗೆ ತಾವಿರುವ ಫೋಟೋವನ್ನು ಆಕಾಂಶಿ ಹಂಚಿಕೊಂಡಿದ್ದಾರೆ.

    https://www.instagram.com/p/Bwrl4SnBwcV/?utm_source=ig_embed

    ಅಥಿಯಾ ಈ ಬಗ್ಗೆ ಉತ್ತರ ನೀಡಲು ನಿರಾಕರಿಸಿದ್ದಾರೆ. ಅಂತೆಯೇ ರಾಹುಲ್ ಲಂಡನ್ ನಲ್ಲಿ ವಿಶ್ವಕಪ್ ಪಂದ್ಯದಲ್ಲಿ ಬ್ಯುಸಿ ಇರುವುದರಿಂದ ಈ ಬಗ್ಗೆ ಅವರ ಪ್ರತಿಕ್ರಿಯೆ ಸಿಕ್ಕಿಲ್ಲ.

    ಈ ಹಿಂದೆ ರಾಹುಲ್ ನಟಿ ನಿಧಿ ಅಗರ್ವಾಲ್ ಜೊತೆ ರಿಲೇಷನ್‍ಶಿಪ್‍ನಲ್ಲಿದ್ದರು ಎಂಬ ಗಾಸಿಫ್ ಎಲ್ಲೆಡೆ ಹರಿದಾಡಿತ್ತು. ಆಗ ನಾವಿಬ್ಬರು ಒಳ್ಳೆಯ ಸ್ನೇಹಿತರು ಎಂದು ಇಬ್ಬರೂ ಹೇಳಿಕೊಂಡಿದ್ದರು. ಇನ್ನೊಂದೆಡೆ ಅಥಿಯಾ ಅಂತರಾಷ್ಟ್ರೀಯ ರ್ಯಾಪರ್ ಹಾಗೂ ಗಾಯಕ ಡ್ರೇಕ್ ಜೊತೆ ಡೇಟಿಂಗ್ ನಡೆಸುತ್ತಿದ್ದರು ಸುದ್ದಿ ಕೂಡ ಕೇಳಿಬಂದಿತ್ತು.

  • ಕೆಎಲ್ ರಾಹುಲ್ ಜೊತೆ ಡೇಟಿಂಗ್ – ನಟಿ ಸೋನಾಲ್ ಚೌಹಾಣ್ ಸ್ಪಷ್ಟನೆ

    ಕೆಎಲ್ ರಾಹುಲ್ ಜೊತೆ ಡೇಟಿಂಗ್ – ನಟಿ ಸೋನಾಲ್ ಚೌಹಾಣ್ ಸ್ಪಷ್ಟನೆ

    ಮುಂಬೈ: ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಅವರೊಂದಿಗೆ ಡೇಟಿಂಗ್‍ನಲ್ಲಿದ್ದೇನೆ ಎಂಬ ವರದಿಗಳು ಸುಳ್ಳು ಎಂದು ಬಾಲಿವುಡ್ ನಟಿ ಸೋನಾಲ್ ಚೌಹಾಣ್ ತಿಳಿಸಿದ್ದಾರೆ.

    ರಾಹುಲ್ ಹಾಗೂ ಸೋನಾಲ್ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಬಹುಕಾಲದಿಂದ ಹರಿದಾಡುತ್ತಿತ್ತು. ಆದರೆ ಮೊದಲ ಬಾರಿಗೆ ನಟಿ ಬಹಿರಂಗವಾಗಿ ಸ್ಪಷ್ಟನೆ ನೀಡಿದ್ದಾರೆ.

    ಮಾಧ್ಯಮ ವರದಿಗಳ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸೋನಾಲ್, ರಾಹುಲ್ ಒಬ್ಬ ಉತ್ತಮ ಹಾಗೂ ಪ್ರತಿಭಾನ್ವಿತ ಕ್ರಿಕೆಟಿಗರಾಗಿದ್ದು, ನಾನು ಅವರೊಂದಿಗೆ ಡೇಟಿಂಗ್ ಮಾಡುತ್ತಿಲ್ಲ. ಈ ವಿಚಾರದಲ್ಲಿ ಬಂದ ಸಂಪೂರ್ಣ ಮಾಹಿತಿ ಬೇಕಾದರೆ ಕೇಳಿ ನೀಡುತ್ತೇನೆ ಎಂದಿದ್ದಾರೆ. ಈ ಹಿಂದೆ ನಟಿ ನಿಧಿ ಅಗರ್ವಾಲ್ ಅವರೊಂದಿಗೆ ರಾಹುಲ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ವರದಿಗಳನ್ನು ಕೆಎಲ್ ರಾಹುಲ್ ಹಾಗೂ ನಿಧಿ ಇಬ್ಬರು ನಿರಾಕರಿಸಿದ್ದರು. ಸದ್ಯ ರಾಹುಲ್ ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

    ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬ್ಯುಸಿಯಾಗಿದ್ದಾರೆ. ಟೂರ್ನಿಗೆ ಹೆಚ್ಚುವರಿ ಆರಂಭಿಕ ಸ್ಥಾನದಲ್ಲಿ ಆಯ್ಕೆ ಆಗಿದ್ದ ರಾಹುಲ್‍ಗೆ ಆಯ್ಕೆ ಸಮಿತಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಅಭ್ಯಾಸ ಪಂದ್ಯದಲ್ಲಿ ಅವಕಾಶ ನೀಡಿದ್ದರು. ರಾಹುಲ್ ಬಾಂಗ್ಲಾದೇಶದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಉಳಿದಂತೆ ಟೀಂ ಇಂಡಿಯಾ ಜೂನ್ 05 ರಂದು ದಕ್ಷಿಣಾ ಆಫ್ರಿಕಾ ವಿರುದ್ಧ ಮೊದಲ ಪಂದ್ಯ ಆಡಲಿದೆ.

  • ಯುವತಿಯೊಂದಿಗೆ ಡೇಟಿಂಗ್ ಮಾಡೋ ಆಸೆಯಿಂದ 45 ಲಕ್ಷ ಕಳೆದ್ಕೊಂಡ 65ರ ವೃದ್ಧ

    ಯುವತಿಯೊಂದಿಗೆ ಡೇಟಿಂಗ್ ಮಾಡೋ ಆಸೆಯಿಂದ 45 ಲಕ್ಷ ಕಳೆದ್ಕೊಂಡ 65ರ ವೃದ್ಧ

    ಮುಂಬೈ: 65 ವರ್ಷದ ವೃದ್ಧನೊಬ್ಬ ಯುವತಿಯೊಂದಿಗೆ ಡೇಟಿಂಗ್ ಮಾಡುವ ಆಸೆಯಿಂದ ಬರೋಬ್ಬರಿ 45 ಲಕ್ಷ ರೂ.ವನ್ನು ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ವೃದ್ಧ ಮಲಾಡ್ ಉಪನಗರದ ನಿವಾಸಿ ಎಂದು ತಿಳಿದುಬಂದಿದ್ದು, ಈಬಗ್ಗೆ ಕುರಾರ್ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ವೃದ್ಧ ದೂರು ನೀಡಿದ ಆಧಾರದ ಮೇರೆಗೆ ಅಪರಿಚಿತ ವ್ಯಕ್ತಿಗಳ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಇನ್ಸ್ ಪೆಕ್ಟರ್ ಉದಯ್ ರಾಜೇಶ್ರಿಕೆ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ವೃದ್ಧನಿಗೆ ಈಗಾಗಲೇ ಮದುವೆಯಾಗಿದ್ದು, ಮತ್ತೆ ಹುಡುಗಿ ಬೇಕಾಗಿದೆ ಎಂದು ವೆಬ್‍ಸೈಟ್‍ ವೊಂದರಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಹೀಗಾಗಿ ಮೀರಾ ಎಂಬ ಮಹಿಳೆ ವೃದ್ಧನಿಗೆ ಕರೆ ಮಾಡಿ ಪ್ರೀಮಿಯಂ ಸದಸ್ಯರಾಗಿ ನೋಂದಣಿ ಮಾಡಿಕೊಳ್ಳಲು ಶುಲ್ಕವನ್ನು ಪಾವತಿಸಬೇಕು ಎಂದು ಹೇಳಿದ್ದಾಳೆ. ಅಂತೆಯೇ ವೃದ್ಧ ಹಣ ಕಟ್ಟಿ ರಿಜಿಸ್ಟರ್ ಆದ ಬಳಿಕ ಆಕೆ ಮೂವರು ಹುಡುಗಿಯರ ಫೋಟೋ ಕಳಿಸಿ ಒಂದನ್ನು ಆಯ್ಕೆ ಮಾಡಲು ಸೂಚಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಕೆ ಕಳುಹಿಸಿದ್ದ ಮೂರು ಫೋಟೋಗಳಲ್ಲಿ ನಾನು ಒಂದನ್ನು ಆಯ್ಕೆ ಮಾಡಿಕೊಂಡೆ. ನಂತರ ಹುಡುಗಿಯನ್ನು ಭೇಟಿ ಮಾಡಲು 10 ಲಕ್ಷ ರೂ. ಹಣ ನೀಡಬೇಕು. ಅಲ್ಲದೆ ಆಕೆಯ ಜೊತೆ ಒಂದು ವರ್ಷ ಕಾಲ ಡೇಟ್ ಮಾಡಬಹುದು ಎಂದು ಹೇಳಿದ್ದಳು. ಅಷ್ಟೇ ಅಲ್ಲದೆ ವಿಡಿಯೋ ಕರೆ ಮತ್ತು ಭೇಟಿ ಮಾಡಲು ಎಂದು ಹೆಚ್ಚು ಹಣವನ್ನು ಕಟ್ಟಿಸಿಕೊಂಡಿದ್ದಳು. ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ವೃದ್ಧನ ಬಳಿಕ ಸುಮಾರು 30 ಲಕ್ಷ ಹಣವನ್ನು ಕಟ್ಟಿಸಿಕೊಂಡ ಬಳಿಕ ಕೊನೆಗೆ ಮೀರಾ ರೋಸಿ ಅಗರ್ವಾಲ್ ಎಂಬ ಯುವತಿಯ ಫೋನ್ ನಂಬರ್ ಕೊಟ್ಟಿದ್ದಾಳೆ. ರೋಸಿ ಕೂಡ ವೃದ್ಧನ ಬಳಿ ಅನೇಕ ನೆಪ ಹೇಳಿಕೊಂಡು ಹಣವನ್ನು ಪಡೆದುಕೊಂಡಿದ್ದಾಳೆ. ಕೊನೆಗೆ ವೃದ್ಧನಿಗೆ ವೆಬ್‍ಸೈಟ್ ಬಗ್ಗೆ ಅನುಮಾನ ಬಂದಿದ್ದು, ತಾನೂ ರಿಜಿಸ್ಟರ್ ಮಾಡಿಕೊಂಡಿದ್ದ ವೆಬ್ ಸೈಟ್ ಹುಡುಕಾಡಿದ್ದಾರೆ. ಆಗ ಆ ವೆಬ್‍ಸೈಟ್‍ನ ಬಗ್ಗೆ ಅನೇಕರು ಕಾಮೆಂಟ್ ಮಾಡಿದ್ದರು. ಆಗ ತಾನು ಮೋಸ ಹೋದ ಬಗ್ಗೆ ವೃದ್ಧನಿಗೆ ಗೊತ್ತಾಗಿದೆ.

    ತಕ್ಷಣ ಮೀರಾ ಹಾಗೂ ರೋಸಿಗೆ ಫೋನ್ ಮಾಡಿ ಹಣ ವಾಪಸ್ ಕೇಳಿದ್ದಾರೆ. ಆಗ ಅವರು 2019 ಜನವರಿ 10ರಂದು ಎಲ್ಲ ಹಣ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಈವರೆಗೂ ಹಣ ನೀಡಲಿಲ್ಲ. ಮತ್ತೆ ಫೋನ್ ಮಾಡಿದಾಗ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಕೊನೆಗೆ ಈ ಬಗ್ಗೆ ಕುಟುಂಬದವರಿಗೂ ಹೇಳಲು ಆಗದೆ ಸುಮ್ಮನಿದ್ದರು. ದಿನಕಳೆದಂತೆ ಕುಟುಂದವರಿಗೆ ಈ ಬಗ್ಗೆ ತಿಳಿದಿದೆ. ಹೀಗಾಗಿ ಫೆಬ್ರವರಿಯಲ್ಲಿ ಕುರಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಾರ್ಚ್ ನಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.

    ನಾವು ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದು, ವ್ಯಕ್ತಿ ಕೊಟ್ಟ ಫೋನ್ ನಂಬರ್ ಗಳು ಹಾಗೂ ಹಣ ಹಾಕಿದ ಬ್ಯಾಂಕ್ ಅಕೌಂಟ್‍ಗಳ ನಂಬರ್ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಇನ್ಸ್ ಪೆಕ್ಟರ್ ಹೇಳಿದ್ದಾರೆ.

  • ಅಮಲಾ ಪೌಲ್ ಮಾಜಿ ಪತಿ ಜೊತೆ ಸಾಯಿ ಪಲ್ಲವಿ ಡೇಟಿಂಗ್!

    ಅಮಲಾ ಪೌಲ್ ಮಾಜಿ ಪತಿ ಜೊತೆ ಸಾಯಿ ಪಲ್ಲವಿ ಡೇಟಿಂಗ್!

    ಹೈದರಾಬಾದ್: ದಕ್ಷಿಣದ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಈಗ ನಟಿ ಅಮಲಾ ಪೌಲ್ ಮಾಜಿ ಪತಿ ತಮಿಳು ನಿರ್ದೇಶಕ ಎ.ಎಲ್. ವಿಜಯ್ ಜೊತೆ ಡೇಟಿಂಗ್ ನಲ್ಲಿ ಇದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

    ಸಾಯಿ ಪಲ್ಲವಿ ಅವರು ಅಮಲಾ ಪೌಲ್ ಮಾಜಿ ಪತಿ ವಿಜಯ್ ತುಂಬಾ ದಿನಗಳಿಂದ ಒಟ್ಟಿಗೆ ಸುತ್ತಾಡುತ್ತಿದ್ದು, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರೆ. ಸದ್ಯದಲ್ಲಿ ಮದುವೆ ಕೂಡ ಆಗಲಿದ್ದಾರೆ. ಆದರೆ ಯಾರೊಬ್ಬರು ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ವಿಜಯ್-ಅಮಲಾ ಪೌಲ್
    2011 ರಲ್ಲಿ ‘ದೈವಾ ತಿರುಮಗಲ್’ ಸಿನಿಮಾದಲ್ಲಿ ಅಮಲಾ ಪೌಲ್ ಮತ್ತು ನಿರ್ದೇಶಕ ಎ.ಎಲ್ ವಿಜಯ್ ಒಟ್ಟಿಗೆ ಕೆಲಸ ಮಾಡಿದ್ದರು. ಆಗ ಅವರಿಬ್ಬರಿಗೂ ಪರಿಚಯವಾಗಿ ಸ್ನೇಹವಾಗಿತ್ತು. ನಂತರ ಇಬ್ಬರು ಡೇಟಿಂಗ್ ಮಾಡುತ್ತಿದ್ದರು. ಕೊನೆಗೆ 2014ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ಇಬ್ಬರು ಮದುವೆಯಾಗಿದ್ದರು. ಆದರೆ ಅಮಲಾ ಮತ್ತು ಅವರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಇಬ್ಬರು 2016 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಪರಸ್ಪರ ಒಪ್ಪಿಗೆಯ ಮೇರೆಗೆ ಫೆಬ್ರವರಿ 2017ರಲ್ಲಿ ಅವರಿಗೆ ವಿಚ್ಛೇದನ ಪಡೆದಿದ್ದರು.

    ವಿಜಯ್-ಸಾಯಿ ಪಲ್ಲವಿ:
    ನಟಿ ಸಾಯಿ ಪಲ್ಲವಿ ಅಭಿನಯದ ‘ದಿಯಾ’ ಎಂಬ ತಮಿಳು ಸಿನಿಮಾವನ್ನು ವಿಜಯ್ ನಿರ್ದೇಶನ ಮಾಡಿದ್ದಾರೆ. ಇದೇ ಸಿನಿಮಾ ತೆಲುಗಿನಲ್ಲಿ ‘ಕಣಂ’ ಹೆಸರಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಇಬ್ಬರಿಗೂ ಪರಿಚಯವಾಗಿ ಪ್ರೀತಿ ಆರಂಭವಾಗಿದೆ ಎಂದು ವರದಿಯಾಗಿದೆ. ಇದೀಗ ಇವರಿಬ್ಬರು ಮದುವೆಯಾಗಲಿದ್ದು, ಶೀಘ್ರದಲ್ಲಿಯೇ ಅಧಿಕೃತವಾಗಿ ತಿಳಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಹಿಂದೆ ನಟಿ ಸಾಯಿ ಪಲ್ಲವಿ ಅವರು, “ನನಗೆ ಈಗಲೇ ಮದುವೆಯಾಗಲು ಇಷ್ಟವಿಲ್ಲ. ನಮ್ಮ ತಂದೆತಾಯಿಯನ್ನು ನೋಡಿಕೊಳ್ಳಬೇಕು” ಎಂದು ಹೇಳಿದ್ದರು. ಸದ್ಯಕ್ಕೆ ನಟ ಸೂರ್ಯ ಜೊತೆ ‘ಎನ್‍ಜಿಕೆ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಅಭಿನಯಿಸುತ್ತಿದ್ದಾರೆ.

  • ಕೊಹ್ಲಿಯೊಂದಿಗೆ ತಮನ್ನಾ ಡೇಟಿಂಗ್! – ಕೊನೆಗೂ ಮೌನ ಮುರಿದ ಮಿಲ್ಕಿ ಬ್ಯೂಟಿ

    ಕೊಹ್ಲಿಯೊಂದಿಗೆ ತಮನ್ನಾ ಡೇಟಿಂಗ್! – ಕೊನೆಗೂ ಮೌನ ಮುರಿದ ಮಿಲ್ಕಿ ಬ್ಯೂಟಿ

    ಹೈದರಾಬಾದ್: ಟಾಲಿವುಡ್ ಸೇರಿದಂತೆ ಸಿನಿ ರಂಗದಲ್ಲಿ ತಮ್ಮ ಬ್ಯೂಟಿ ಹಾಗೂ ನಟನೆ ಮೂಲಕ ನಟಿ ತಮನ್ನಾ ಭಾಟಿಯಾ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಹಲವು ದಿನಗಳಿಂದ ಕೇಳಿ ಬರುತ್ತಿದ್ದ ಟೀಂ ಇಂಡಿಯಾ ನಾಯಕ ಕೊಹ್ಲಿ ಅವರೊಂದಿಗಿನ ಡೇಟಿಂಗ್ ರೂಮರ್ ಕುರಿತು ಸದ್ಯ ತಮನ್ನಾ ಸ್ಪಷ್ಟನೆ ಕೊಟ್ಟಿದ್ದಾರೆ.

    ಮಾಧ್ಯಮ ಸಂದರ್ಶನವೊಂದರಲ್ಲಿ ಈ ಕುರಿತು ಉತ್ತರಿಸಿರುವ ತಮನ್ನಾ, ಕೊಹ್ಲಿ ಅವರೊಂದಿಗೆ ಜಾಹೀರಾತು ಶೂಟಿಂಗ್‍ನಲ್ಲಿ ನಟಿಸಿದ್ದೇನೆ. ಅವರು ಉತ್ತಮ ನಟ. ಆದರೆ ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಸಂಬಂಧ ಇಲ್ಲ. ಇಬ್ಬರು ಶೂಟಿಂಗ್ ವೇಳೆ ಸರಿಯಾಗಿ ಮಾತನಾಡಿದ್ದು ಕೂಡ ಇಲ್ಲ. ಶೂಟಿಂಗ್ ಆದ ಬಳಿಕ ಕೊಹ್ಲಿರನ್ನು ಭೇಟಿ ಕೂಡ ಮಾಡಿಲ್ಲ ಎಂದಾದರೆ ಇನ್ನು ಡೇಟಿಂಗ್ ಮಾತು ಎಲ್ಲಿಂದಾ ಬಂತು ಎಂದು ತಿಳಿಸಿದ್ದಾರೆ.

    ಹಲವು ವರ್ಷಗಳ ಹಿಂದೆಯೇ ಕೊಹ್ಲಿ ಹಾಗೂ ತಮನ್ನಾ ಜಾಹೀರಾತು ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ವೇಳೆ ಇಬ್ಬರ ಡೇಟಿಂಗ್ ಬಗ್ಗೆ ಸಾಕಷ್ಟು ರೂಮರ್ಸ್ ಕೇಳಿ ಬಂದಿತ್ತು. ಆದರೆ ಈ ಸಂಬಂಧ ಎಲ್ಲೂ ಹೇಳಿಕೆ ನೀಡಿದ ತಮನ್ನಾ ಬಹುದಿನಗಳ ಬಳಿಕ ಮಾತನಾಡಿದ್ದಾರೆ.

    ತಮನ್ನಾ ನಟನೆ ಎಫ್2 ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಟಾಲಿವುಡ್‍ನಲ್ಲಿ ಯಶಸ್ಸುಗಳಿಸಿತ್ತು. ಸದ್ಯ ತಮನ್ನಾ ಮೆಗಾಸ್ಟಾರ್ ಚಿರಂಜೀವಿ ಅವರ ಬಹುನಿರೀಕ್ಷಿತ ಸಿನಿಮಾ ‘ಸೈರಾ ನರಸಿಂಹರೆಡ್ಡಿ’ ಹಾಗೂ ‘ದಟ್ ಈಸ್ ಮಹಾಲಕ್ಷ್ಮಿ’ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಳೆದ 10 ವರ್ಷದಿಂದ ನನ್ನನ್ನು ಯಾರು ಡೇಟಿಂಗ್‍ಗೆ ಕರೆದಿಲ್ಲ: ಕತ್ರಿನಾ ಕೈಫ್

    ಕಳೆದ 10 ವರ್ಷದಿಂದ ನನ್ನನ್ನು ಯಾರು ಡೇಟಿಂಗ್‍ಗೆ ಕರೆದಿಲ್ಲ: ಕತ್ರಿನಾ ಕೈಫ್

    ನವದೆಹಲಿ: ಕಳೆದ 10 ವರ್ಷಗಳಿಂದ ನನ್ನನ್ನು ಯಾರು ಡೇಟಿಂಗ್‍ಗೆ ಕರೆದಿಲ್ಲ ಎಂದು ಬಾಲಿವುಡ್ ಬಾಬಿ ಗರ್ಲ್ ಕತ್ರಿನಾ ಕೈಫ್ ಹೇಳಿದ್ದಾರೆ.

    ಝೀರೊ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಕತ್ರಿನಾ, ಶಾರುಖ್ ಖಾನ್ ಹಾಗೂ ಅನುಷ್ಕಾ ಶರ್ಮಾರೊಂದಿಗೆ ಮಾಧ್ಯಮ ಸಂದರ್ಶನದಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಡೇಟಿಂಗ್ ಕುರಿತ ಪ್ರಶ್ನೆಗೆ ಉತ್ತರಿಸಿದ ಕತ್ರಿನಾ, ಸುಮಾರು 10 ವರ್ಷಗಳಿಂದ ನನ್ನನ್ನು ಯಾರು ಡೇಟಿಂಗ್‍ಗೆ ಕರೆದಿಲ್ಲ ಎಂದು ಹೇಳಿದರು. ತಕ್ಷಣ ಇದಕ್ಕೆ ಪ್ರತಿಕ್ರಿಯೆ ನೀಡಿದ ಶಾರುಖ್ ಖಾನ್, ಕತ್ರಿನಾ ಅವರ ಮಾತು ಹೇಳಿ ನನಗೆ ಬೇಸರ ಆಗುತ್ತಿದೆ. ಇಂದೇ ನಾನು ಅವರನ್ನ ದೆಹಲಿ ನಗರದಲ್ಲಿ ಡೇಟಿಂಗ್‍ಗೆ ಕರೆದುಕೊಂಡು ಹೋಗುವುದಾಗಿ ತಿಳಿಸಿದರು.

    ಇದೇ ವೇಳೆ ಪುರುಷರಲ್ಲಿ ನೀವು ಮೊದಲು ಗಮನಿಸುವ ಅಂಶ ಯಾವುದು ಎನ್ನುವ ಪ್ರಶ್ನೆಗೆ ಕಣ್ಣು ಎಂದು ಕತ್ರಿನಾ ಉತ್ತರಿಸಿದರು. ಸದ್ಯ ಬಾಲಿವುಡ್ ಸೆಕ್ಸಿ ಗರ್ಲ್ ಆಗಿರುವ ಕತ್ರಿನಾ ಕೈಫ್ ಮದುವೆಗಾಗಿ ಕಾಯುತ್ತಿದ್ದು, ಸೂಕ್ತ ವರನಿಗಾಗಿ ಕತ್ರಿನಾ ಮತ್ತು ಕುಟುಂಬಸ್ಥರು ಹುಡುಕಾಟದಲ್ಲಿದ್ದಾರೆ ಎಂದು ಮಾಧ್ಯಮವೊಂದು ಕೆಲದಿನಗಳ ಹಿಂದೆ ಸುದ್ದಿ ಪ್ರಕಟಿಸಿತ್ತು.

    ಬಾಲಿವುಡ್ ನಲ್ಲಿ ತಮ್ಮ ಮೋಹಕ ಚೆಲುವಿನ ಮೂಲಕವೇ ಹೆಸರು ಮಾಡಿದ ಕತ್ರಿನಾ ಅವರ ಸಿನಿ ಕೆರಿಯರ್ ಆರಂಭದಿಂದಲೂ ಕೆಲ ನಾಯಕರ ಜೊತೆ ತುಳುಕು ಹಾಕಿಕೊಂಡಿತ್ತು. ಆರಂಭದಲ್ಲಿ ಭಾಯಿಜಾನ್ ಸಲ್ಮಾನ್ ಖಾನ್ ಅವರನ್ನೇ ಕತ್ರಿನಾ ಮದುವೆ ಆಗಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿತ್ತು. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಬ್ರೇಕಪ್ ಮಾಡಿಕೊಂಡಿದ್ದರು. ಈ ಎಲ್ಲ ಘಟನೆಗಳಿಂದ ನೊಂದಿದ್ದ ಕತ್ರಿನಾ ಲೈಫ್ ಎಂಟ್ರಿ ಕೊಟ್ಟಿದ್ದು ಚಾಕ್ಲೇಟ್ ಹೀರೋ ರಣ್‍ಬೀರ್ ಕಪೂರ್. ಸಿನಿಮಾದಲ್ಲಿ ಜೊತೆಯಾಗಿದ್ದ ರಣ್‍ಬೀರ್ ಸದ್ದಿಲ್ಲದೇ ಕತ್ರಿನಾಗೆ ಹತ್ತಿರವಾಗುತ್ತಾ ಹೋದರು. ಕತ್ರಿನಾ ಮತ್ತು ರಣ್‍ಬೀರ್ ವಿದೇಶ ಪ್ರವಾಸದಲ್ಲಿ ಮೋಜಿನಲ್ಲಿ ತೊಡಗಿಕೊಂಡಿದ್ದ ಫೋಟೋ ವೈರಲ್ ಆಗಿತ್ತು. ಕೆಲವು ದಿನಗಳ ನಂತರ ನಾವಿಬ್ಬರು ಬೇರೆಯಾಗಿದ್ದೇವೆ ಎಂಬ ಸಂದೇಶವನ್ನು ಈ ಜೋಡಿ ಪರೋಕ್ಷವಾಗಿ ಹೊರಹಾಕಿತ್ತು.

    ಕತ್ರಿನಾಳಿಂದ ದೂರವಾದ ರಣ್‍ಬೀರ್ ಇದೀಗ ಆಲಿಯಾ ಭಟ್ ಜೊತೆ ಡೇಟಿಂಗ್ ನಲ್ಲಿದ್ದಾರೆಂಬ ಸುದ್ದಿಯೊಂದು ಬಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ. ಇತ್ತ ಕತ್ರಿನಾ ಮತ್ತೆ ಹಳೆ ಗೆಳೆಯ ಸಲ್ಮಾನ್ ಖಾನ್ ಗೆ ಹತ್ತಿರವಾಗುತ್ತಿದ್ದು, ಸತತ ಸೋಲುಗಳಿಂದ ನಿರಾಸೆಗೊಳಗಾದ ಗೆಳತಿಗೆ ಸಿನಿಮಾ ಆಯ್ಕೆಯಲ್ಲಿ ಸುಲ್ತಾನ್ ಸಲಹೆ ನೀಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv