Tag: Dating

  • ರೆಡ್ ಬಸ್ ಜೊತೆ ಸಾರಾ ಅಲಿಖಾನ್ ಫೋಟೋ ಶೂಟ್ : ನಿನ್ನಂಥೋರು ಯಾರು ಇಲ್ಲ ಎಂದ ಫ್ಯಾನ್ಸ್

    ರೆಡ್ ಬಸ್ ಜೊತೆ ಸಾರಾ ಅಲಿಖಾನ್ ಫೋಟೋ ಶೂಟ್ : ನಿನ್ನಂಥೋರು ಯಾರು ಇಲ್ಲ ಎಂದ ಫ್ಯಾನ್ಸ್

    ಬಾಲಿವುಡ್ ಚೆಲುವೆ, ನಟ ಸೈಫ್ (Saif Ali Khan) ಪುತ್ರಿ ಸಾರಾ ಅಲಿಖಾನ್ (Sara Ali Khan) ಡಬಲ್ ಡೆಕ್ಕರ್ ಬಸ್ ನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದು ಆ ಹಾಟ್ ಫೋಟೋಗಳನ್ನು(Photo Shoot) ಹಂಚಿಕೊಳ್ಳುವ ಮೂಲಕ ಪಡ್ಡೆಹುಡುಗರ ನಿದ್ದೆಗೆ ಕೊಳ್ಳಿ ಇಟ್ಟಿದ್ದಾರೆ. ಕೆಂಪು ಬಸ್ಸು ಹಳದಿ ಬಣ್ಣದ ಕಾಸ್ಟ್ಯೂಮ್ ಒಂದು ರೀತಿಯಲ್ಲಿ ಸಖತ್ ಕಾಂಬಿನೇಷನ್ ಆಗಿದೆ. ಕೇವಲ ಫೋಟೋ ಶೂಟ್ ಮಾತ್ರವಲ್ಲ, ಎಲ್ಲ ವಿಚಾರದಲ್ಲೂ ಸಾರಾ ಬೋಲ್ಡ್ ಆಗಿದ್ದಾರೆ.

    ಈ ಹಿಂದೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಸಾರಾ ಅಲಿಖಾನ್ ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟಿದ್ದರು. ತಮಗೆ ಅವಕಾಶ ಸಿಕ್ಕರೆ ವಿಜಯ್ ದೇವರಕೊಂಡ ಜೊತೆ ಡೇಟ್ ಮಾಡುವುದಾಗಿ ಹೇಳಿಕೊಂಡಿದ್ದರು. ಅಂತಹ ಹುಡುಗನ ಜೊತೆಯೇ ಡೇಟಿಂಗ್ ಗೆ ಹೋಗಲು ಇಷ್ಟಪಡುತ್ತೇನೆ ಎಂದೂ ಶೋನಲ್ಲಿ ಹೇಳಿದ್ದರು. ವಿಜಯ್ ಈಗಾಗಲೇ ಬಾಲಿವುಡ್ ಸಿನಿಮಾದಲ್ಲೂ ಮಿಂಚುತ್ತಿರುವುದರಿಂದ, ಇದು ಸಾಧ್ಯವೂ ಆಗಬಹುದು ಎನ್ನುವ ಗಾಸಿಪ್ ಹರಡಿತ್ತು.

    ತಂದೆಯ ಕಾರಣದಿಂದ ತನಗೆ ಅವಕಾಶ ಸಿಗುವುದು ಬೇಡ, ನನ್ನ ಟ್ಯಾಲೆಂಟ್ ಮೇಲೆ ಸಿಗಲಿ ಎಂದೂ ಸಾರಾ ಹೇಳಿಕೊಂಡಿದ್ದರು. ಪ್ರತಿಭೆಯ ಕಾರಣದಿಂದಾಗಿ ಅಕ್ಷಯ್ ಕುಮಾರ್ ಹಾಗೂ ಕಾಲಿವುಡ್ ನಟ ಧನುಷ್ ಜೊತೆ ಅತ್ರಂಗಿ ರೇ ಸಿನಿಮಾದಲ್ಲಿ ನಟಿಸಿದರು. ರಣ್‍ವೀರ್ ಸಿಂಗ್ ಜೊತೆ ಸಿಂಬಾ, ನಟ ಕಾರ್ತಿಕ್ ಲವ್ ಆಜ್ ಕಲ್-2, ಸುಶಾಂತ್ ಸಿಂಗ್ ಜೊತೆ ಕೇದರನಾಥ್ ಸಿನಿಮಾದಲ್ಲೂ ನಟಿಸಿದ್ದಾರೆ.

    ತಂದೆಯ ವಿಚಾರದಲ್ಲೂ ಅಷ್ಟೇ ಖುಲ್ಲಂ ಖುಲ್ಲಾ ಆಗಿ ಸಾರಾ ಮಾತನಾಡಿದ್ದರು. ‘ನನ್ನ ತಂದೆ ಎರಡನೇ ಮದುವೆ ಆಗುವ ವಿಷಯ ನನಗೆ ತಿಳಿದಿತ್ತು. ನಾನು ಕರೀನಾ ಕಪೂರ್ ಅವರ ಅಭಿಮಾನಿ. ಅವರು ನನ್ನ ಜೀವನದಲ್ಲಿ ಇರಬೇಕೆಂದು ಬಯಸಿದ್ದೆ. ಆದರೆ ಅವರು ಈಗ ಮಲತಾಯಿ ಆಗಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ’ ಎಂದು ಸಾರಾ ಅಲಿ ಖಾನ್ ಉತ್ತರಿಸಿದ್ದರು. ನನ್ನ ತಂದೆ ಕರೀನಾ ಕಪೂರ್ ಅವರನ್ನು ಮದುವೆ ಆಗುತ್ತಿದ್ದೀನಿ ಎಂದು ಹೇಳಿದ್ದಾಗ ನಾನು ಯಾವ ಉಡುಪು ಧರಿಸಬೇಕು ಎಂದು ನನ್ನ ತಾಯಿಯ ಬಳಿ ಕೇಳಿದೆ. ಆಗ ನನ್ನ ತಾಯಿ ನೀನು ಯಾವ ಉಡುಪನ್ನು ಧರಿಸುತ್ತೀಯಾ? ಎಂದು ಕೇಳಿದ್ದರು. ನನ್ನ ತಾಯಿ ಕೂಡ ನನ್ನ ತಂದೆಯ ಎರಡನೇ ಮದುವೆಗೆ ಒಪ್ಪಿಗೆ ನೀಡಿದ್ದರು ಎಂದು ಸಾರಾ ತಿಳಿಸಿದ್ದರು.

    ಸಾರಾ ಡೇಟಿಂಗ್ ವಿಚಾರದಲ್ಲಿ ಕರಣ್ ಅಚ್ಚರಿ ಎನ್ನುವಂತೆ ಮಾತನಾಡಿದ್ದರು. ಸಾರಾ ಹಾಗೂ ಜಾಹ್ನವಿಗೆ ನೀವಿಬ್ಬರೂ ಒಂದೇ ಕುಟುಂಬದ ಹುಡುಗರ ಜೊತೆ ಡೇಟಿಂಗ್ ಮಾಡುತ್ತಿದ್ದೀರಿ ಅಲ್ಲವಾ ಎಂದು ಕರಣ್ ಕೇಳಿದ್ದರು. ಈ ಪ್ರಶ್ನೆಯನ್ನು ಕನಸು ಮನಸಲ್ಲೂ ಎಣಿಸಿರದ ಸಾರಾ ಮತ್ತು ಜಾಹ್ನವಿ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದರು. ಕೊನೆಗೆ ಆ ಹುಡುಗರು ಯಾರು ಎನ್ನುವುದನ್ನು ಕರಣ್ ಅವರೇ ಬಾಯ್ಬಿಟ್ಟರು. ಮಹಾರಾಷ್ಟ್ರದ ಮಾಜಿ ಸಿಎಂ. ಶಿಂಧೆ ಅವರ ಮಕ್ಕಳಾದ ವೀರ ಪಹಾರಿ, ಶಿಖರ್ ಪಹಾರಿ ಹೆಸರು ಹೇಳುವ ಮೂಲಕ ಮತ್ತೆ ಅಚ್ಚರಿಗೆ ದೂಡಿದ್ದರು ಕರಣ್.

  • ಡೇಟಿಂಗ್ ವಿಚಾರದಲ್ಲಿ ಸಿಕ್ಕಾಪಟ್ಟೆ ಗೊಂದಲ ಸೃಷ್ಟಿಸ್ತಿದ್ದಾರೆ ರಶ್ಮಿಕಾ ಮಂದಣ್ಣ

    ಡೇಟಿಂಗ್ ವಿಚಾರದಲ್ಲಿ ಸಿಕ್ಕಾಪಟ್ಟೆ ಗೊಂದಲ ಸೃಷ್ಟಿಸ್ತಿದ್ದಾರೆ ರಶ್ಮಿಕಾ ಮಂದಣ್ಣ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಡೇಟಿಂಗ್ (Dating) ವಿಚಾರದಲ್ಲಿ ತಮ್ಮ ಅಭಿಮಾನಿಗಳನ್ನು ಗೊಂದಲಕ್ಕೆ ಸಿಲುಕಿಸಿದ್ದಾರಂತೆ. ರಶ್ಮಿಕಾ ಮಂದಣ್ಣ ಅಂದಾಕ್ಷಣ ಥಟ್ಟನೆ ನೆನಪಾಗುತ್ತಿದ್ದ ಮತ್ತೊಂದು ಹೆಸರು ವಿಜಯ್ ದೇವರಕೊಂಡ (Vijay Devarakonda) ಅವರದ್ದು. ಈ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಅವರಿಬ್ಬರೂ ಒಟ್ಟಿಗೆ ಇರುವ ಸಾಕಷ್ಟು ಫೋಟೋಗಳು ಮತ್ತು ವಿಡಿಯೋಗಳಿವೆ.

    ಫೋಟೋ ಮತ್ತು ವಿಡಿಯೋಗಳು ಮಾತ್ರವಲ್ಲ ಕಳೆದ ವರ್ಷ ಹೊಸ ವರ್ಷವನ್ನೂ ಅವರು ಗೋವಾದ ಹೋಟೆಲ್ ವೊಂದರಲ್ಲಿ ಆಚರಿಸಿದ್ದರು. ವಿದೇಶ ಪ್ರವಾಸವನ್ನೂ ಒಟ್ಟಿಗೆ ಮಾಡಿದ್ದರು. ತಾವಿಬ್ಬರೂ ಪ್ರೀತಿಸುತ್ತಿರುವ ವಿಚಾರವನ್ನು ಅವರು ಹಲವು ರೀತಿಯಲ್ಲಿ ವ್ಯಕ್ತ ಪಡಿಸಿದ್ದರು. ಆದರೆ, ದಿಢೀರ್ ಅಂತ ದೂರವಾದ ಸುದ್ದಿಯನ್ನೂ ಕೊಟ್ಟಿದ್ದರು.

    ಇತ್ತೀಚೆಗಷ್ಟೇ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ (Bellamkonda Sai Srinivas) ಜೊತೆ ರಶ್ಮಿಕಾ ಹೆಸರು ಕೇಳಿ ಬಂದಿತ್ತು. ಇಬ್ಬರೂ ಅನೇಕ ಸಲ ಒಟ್ಟಿಗೆ ಹೋಟೆಲ್ ಗಳಲ್ಲಿ ಕಾಣಿಸಿಕೊಂಡರು. ಹಲವಾರು ಕಾರ್ಯಕ್ರಮಗಳಲ್ಲಿ ಜೊತೆಯಾಗಿಯೇ ಹೆಜ್ಜೆ ಹಾಕಿದ್ದರು. ಹಾಗಾಗಿ ಈ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿ ಆಯಿತು. ಈ ಸುದ್ದಿ ಇನ್ನೂ ಹಸಿಯಾಗಿರುವಾಗಲೇ ಮತ್ತೆ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಇರುವುದು ಪತ್ತೆಯಾಗಿದೆ. ಇದು ನಾನಾ ಗೊಂದಲಗಳಿಗೂ ಕಾರಣವಾಗಿದೆ.

    rashmika hot images

    ಎರಡು ದಿನಗಳ ಹಿಂದೆಯಷ್ಟೇ ರಶ್ಮಿಕಾ ಮಂದಣ್ಣ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಅವರು ಫೇಸ್ ಬುಕ್ ಲೈವ್ ಕೂಡ ಮಾಡಿದ್ದಾರೆ. ಅದು ವಿಜಯ್ ದೇವರಕೊಂಡ ಮನೆಯಿಂದ ಎನ್ನುವುದು ಗೊಂದಲಕ್ಕೆ ಕಾರಣವಾಗಿದೆ. ಅಲ್ಲದೇ, ರಶ್ಮಿಕಾ ಧರಿಸಿದ್ದ ಉಂಗುರ ವಿಜಯ್ ದ್ದು ಎಂದು ಹೇಳಲಾಗುತ್ತಿದೆ. ಈ ಎಲ್ಲವನ್ನೂ ಇಟ್ಟುಕೊಂಡು ಅಭಿಮಾನಿಗಳು ರಶ್ಮಿಕಾಗೆ ಹಲವು  ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ರಶ್ಮಿಕಾ ಕೂಲ್ ಕೂಲ್ ಆಗಿ ಉತ್ತರ ಕೊಟ್ಟಿದ್ದಾರೆ. ಆದರೆ, ಲವ್ ವಿಚಾರ ಮಾತ್ರ ಹಂಚಿಕೊಳ್ಳದೇ ಜಾಣತನ ಮೆರೆದಿದ್ದಾರೆ.

  • ಅಮಿತಾಭ್ ಮನೆಗೆ ಸೊಸೆಯಾಗಲಿದ್ದಾರಾ ಶಾರುಖ್ ಖಾನ್ ಮಗಳು

    ಅಮಿತಾಭ್ ಮನೆಗೆ ಸೊಸೆಯಾಗಲಿದ್ದಾರಾ ಶಾರುಖ್ ಖಾನ್ ಮಗಳು

    ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ (Amitabh Bachchan) ಮನೆಗೆ ಶಾರುಖ್ ಖಾನ್ (Shahrukh Khan) ಪುತ್ರಿ ಸುಹಾನಾ (Suhana) ಸೊಸೆಯಾಗಿ ಬರುತ್ತಾರೆ ಎನ್ನುವ ಮಾತು ಹರಿದಾಡುತ್ತಿದೆ. ಇದು ನಂಬಲು ಅಸಾಧ್ಯವೆನಿಸಿದರೂ, ಸಾಧ್ಯವಾಗುವಂತಹ ವಿಚಾರಗಳನ್ನು ಬಿಟೌನ್ ತನ್ನ ಒಡಲಿಲ್ಲ ಇಟ್ಟುಕೊಂಡಿರುವುದಂತೂ ಸತ್ಯ. ಹಾಗಾಗಿ ಇಂಥದ್ದೊಂದು ಸುದ್ದಿಗೆ ರೆಕ್ಕೆಪುಕ್ಕಗಳು ಬಂದಿವೆ.

    ಅಮಿತಾಭ್ ಮೊಮ್ಮಗ ಅಗಸ್ತ್ಯ (Agastya) ಹಾಗೂ ಶಾರುಖ್ ಖಾನ್ ಮಗಳು ಸುಹಾನಾ ಡೇಟಿಂಗ್ (Dating) ವಿಚಾರ ಗುಟ್ಟಾಗೇನೂ ಉಳಿದಿಲ್ಲ. ಆದರೆ, ಅವರ ಪ್ರೇಮ ಮದುವೆಯವರೆಗೂ ಹೋಗಿದೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಪರಸ್ಪರ ಗೌರವ ಕೊಟ್ಟುಕೊಂಡು ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅದೊಂದು ಗಟ್ಟಿ ಪ್ರೇಮವಾದ್ದರಿಂದ ಮದುವೆಯಾದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಿದೆ ಬಾಲಿವುಡ್. ಇದನ್ನೂ ಓದಿ: 2ನೇ ಮದುವೆ ಸುದ್ದಿಗೆ ಸ್ಪಷ್ಟನೆ ನೀಡಿದ ಕಿರುತೆರೆ ನಟಿ ಸ್ವಾತಿ

    ಸುಹಾನಾ ಮತ್ತು ಅಗಸ್ತ್ಯ ಅನೇಕ ಬಾರಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅನೇಕ ಸಮಾರಂಭಗಳಿಗೆ ಒಟ್ಟಿಗೆ ಹೋಗಿದ್ದಾರೆ. ಅಲ್ಲದೇ, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹಾಗಾಗಿ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಬೆಳೆಯುತ್ತಿದ್ದಾರೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಹಾಗಂತ ಇಬ್ಬರೂ ತಾವು ಡೇಟಿಂಗ್ ಮಾಡುತ್ತಿರುವ ವಿಚಾರವನ್ನೂ ಈವರೆಗೂ ಯಾವತ್ತೂ ಬಹಿರಂಗವಾಗಿ ಮಾತನಾಡಿಲ್ಲ.

    ಈ ವಯಸ್ಸಿನ ಡೇಟಿಂಗ್ ತುಂಬಾ ದಿನ ಉಳಿಯುವುದಿಲ್ಲ ಎನ್ನುವ ಮಾತಿದೆ. ಹಲವಾರು ಪ್ರೇಮಿಗಳು ಅರ್ಧಕ್ಕೆ ಬಾಂಧವ್ಯವನ್ನು ತುಂಡರಿಸಿಕೊಂಡು ಹೋಗಿದ್ದಾರೆ. ಇವರಿಬ್ಬರ ಪ್ರೇಮವೂ ಹಾಗೆಯೇ ಆಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಏನೇ ಆಗಲಿ, ಅವರ ಪ್ರೇಮ ಗಟ್ಟಿಯಾಗಿ ಉಳಿದುಕೊಳ್ಳಲಿ ಎನ್ನುವುದು ಅವರ ಅಭಿಮಾನಿಗಳ ಹಾರೈಕೆ.

  • ಶೋಭಿತಾ ಜೊತೆ ಡೇಟಿಂಗ್‌, ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಾಗಚೈತನ್ಯ

    ಶೋಭಿತಾ ಜೊತೆ ಡೇಟಿಂಗ್‌, ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಾಗಚೈತನ್ಯ

    ನಟಿ ಸಮಂತಾ-ನಾಗಚೈತನ್ಯ (Nagachaitanya) ಡಿವೋರ್ಸ್ (Divorce) ಪಡೆದಿರುವ ಕಾರಣ ಇದುವರೆಗೂ ತಿಳಿದು ಬಂದಿಲ್ಲ. ಸಮಂತಾ(Samantha) ಜೊತೆ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಶೋಭಿತಾ ಜೊತೆಗಿನ ಡೇಟಿಂಗ್ ವಿಚಾರವಾಗಿ ನಾಗಚೈತನ್ಯ ಸುದ್ದಿಯಲ್ಲಿದ್ದರು. ಡೇಟಿಂಗ್ ಸುದ್ದಿ ಸುಳ್ಳು ಎಂದು ಈ ಜೋಡಿ ಸ್ಪಷ್ಟನೆ ನೀಡುತ್ತಲೇ ಬಂದಿತ್ತು. ಆದರೆ ಈ ಬಾರಿ ನಾಗಚೈತನ್ಯ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ನಟಿಯ ಜೊತೆಗಿನ ನಾಗ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಸಮಂತಾ- ನಾಗಚೈತನ್ಯ ಪ್ರೀತಿಸಿ ಮದುವೆಯಾದ ಜೋಡಿ. ಈ ಸುಖ ಸಂಸಾರಕ್ಕೆ ಯಾರ ಕಣ್ಣು ಬಿತ್ತೋ ಏನೋ ಏಕಾಏಕಿ ಡಿವೋರ್ಸ್ ಅನೌನ್ಸ್ ಮಾಡಿ ಫ್ಯಾನ್ಸ್ ಶಾಕ್ ಕೊಟ್ಟಿದ್ದರು. ಹಳೆಯದನ್ನು ಮರೆತು ಇಬ್ಬರು ಹೊಸ ಬದುಕನ್ನ ಕಟ್ಟಿಕೊಳ್ತಿದ್ದಾರೆ. ಸ್ಯಾಮ್ ಗುಡ್ ಬೈ ಹೇಳಿದ ಮೇಲೆ ಶೋಭಿತಾ ಜೊತೆ ನಾಗಚೈತನ್ಯ ಡೇಟ್ ಮಾಡ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ. ಲಂಡನ್‌ನಲ್ಲಿ (London) ಅಭಿಮಾನಿಯೊಬ್ಬನ ಜೊತೆ ನಾಗ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ಹಿಂದೆ ಶೋಭಿತಾ ಕೂಡ ಕುಳಿತಿದ್ದಾರೆ.

    ಲಂಡನ್ ಐಷಾರಾಮಿ ಹೋಟೆಲ್ ಒಂದರಲ್ಲಿ ಭಾರತ ಮೂಲದ ಸುಂದರ್ ಮೋಹನ್ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದಾರೆ. ಇದೇ ಹೋಟೆಲ್‌ಗೆ ನಾಗ ಚೈತನ್ಯ ಹಾಗೂ ಶೋಭಿತಾ ಆಗಮಿಸಿದ್ದರು. ಈ ವೇಳೆ ನಾಗ ಚೈತನ್ಯ ಜೊತೆ ಸುಂದರ್ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಹಿಂಭಾಗದಲ್ಲಿ ಶೋಭಿತಾ ಕೂಡ ಕಾಣಿಸಿದ್ದಾರೆ. ಇಷ್ಟು ದಿನ ಡೇಟಿಂಗ್ (Dating) ವಿಚಾರವನ್ನು ಅಲ್ಲಗಳೆಯುತ್ತಲೇ ಬರುತ್ತಿದ್ದ ನಾಗ ಚೈತನ್ಯ ಅವರು ಈಗ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಈ ಫೋಟೋನ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದ ಸುಂದರ್ ಅವರು ನಂತರ ಅದನ್ನು ಡಿಲೀಟ್ ಮಾಡಿದ್ದಾರೆ.

    ಶೋಭಿತಾ- ನಾಗಚೈತನ್ಯ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿಗೆ ಈ ಪೋಸ್ಟ್ ಮೂಲಕ ಸ್ಪಷ್ಟನೆ ಸಿಕ್ಕಿದೆ. ಈ ಫೋಟೋ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸುತ್ತಿದೆ.

  • ಆಪ್ ನಾಯಕನ ಜೊತೆ ನಟಿ ಪರಿಣೀತಿ ಚೋಪ್ರಾ ಡೇಟಿಂಗ್ : ವೈರಲ್ ಆದ ಫೋಟೋ

    ಆಪ್ ನಾಯಕನ ಜೊತೆ ನಟಿ ಪರಿಣೀತಿ ಚೋಪ್ರಾ ಡೇಟಿಂಗ್ : ವೈರಲ್ ಆದ ಫೋಟೋ

    ಸಾಮಾನ್ಯವಾಗಿ ಬಾಲಿವುಡ್ ನಾಯಕಿಯರು ಕ್ರಿಕೆಟ್ ಆಟಗಾರರ ಜೊತೆಗಿನ ಡೇಟಿಂಗ್ (Dating) ವಿಚಾರಕ್ಕಾಗಿ ಸುದ್ದಿಯಲ್ಲಿರುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ಜೊತೆಗಿನ ನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ನಟಿ ಸ್ವರ ಭಾಸ್ಕರ್ ರಾಜಕಾರಣಿಯನ್ನು ಮದುವೆಯಾದರು. ಇದೀಗ ಪರಿಣೀತ ಚೋಪ್ರಾ (Parineeti Chopra) ಆಪ್ (Aam Aadmi Party) ನಾಯಕನ ಹಿಂದೆ ಬಿದ್ದಿದ್ದಾರೆ. ಪದೇ ಪದೇ ಹೋಟೆಲ್ ಗಳಲ್ಲಿ ಭೇಟಿ ಆಗುತ್ತಿದ್ದಾರೆ.

    ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ (Raghav Chadha) ಮತ್ತು ಪರಿಣೀತಿ ಬುಧವಾರ ಮತ್ತು ಗುರುವಾರ ಬೇರೆ ಬೇರೆ ಹೋಟೆಲ್ ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಅಲ್ಲದೇ, ಇಬ್ಬರೂ ಒಂದೇ ಬಣ್ಣದ ಬಟ್ಟೆಗಳನ್ನು ಧರಿಸಿದ್ದು ಕೂಡ ಅನುಮಾನಕ್ಕೆ ಕಾರಣವಾಗಿದೆ. ಪದೇ ಪದೇ ಹೋಟೆಲ್ ಗಳಲ್ಲೇ ಕಾಣಿಸಿಕೊಂಡಿದ್ದರಿಂದ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರಾ ಎನ್ನುವ ವಿಚಾರ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ ಅಮೂಲ್ಯ

    ಮೂಲಗಳ ಪ್ರಕಾರ ರಾಘವ್ ಚಡ್ಡಾ ಹಾಗೂ ಪರಿಣೀತಿ ಒಂದೇ ಕಾಲೇಜಿನಲ್ಲಿ ಓದಿದವರಂತೆ. ಅಲ್ಲದೇ, ಹಲವು ದಿನಗಳಿಂದಲೂ ಅವರು ಸ್ನೇಹಿತರು. ಆಗಾಗ್ಗೆ ಇಬ್ಬರೂ ಹೀಗೆ ಸಿಗುತ್ತಲೇ ಇರುತ್ತಾರಂತೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎನ್ನುವವರು ಇದ್ದಾರೆ. ಜೊತೆಗೆ ಪರಿಣೀತಿ ಮತ್ತು ಚಡ್ಡಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳುವವರು ಇದ್ದಾರೆ.

    ಬುಧವಾರ ಗುರುಗ್ರಾಮ ಹೋಟೆಲ್ ನಲ್ಲಿ ಈ ಜೋಡಿ ರಾತ್ರಿ ಊಟ ಮಾಡಿದ್ದರೆ, ಗುರುವಾರ ಮಧ್ಯಾಹ್ನ ಮುಂಬೈನ ಬಾಂದ್ರಾದ ಹೋಟೆಲ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡು ಅನುಮಾನಕ್ಕೆ ಕಾರಣರಾಗಿದ್ದಾರೆ. ಬೇರೆ ಬೇರೆ ನಗರಗಳಲ್ಲಿ ಈ ಜೋಡಿ ಡಿನ್ನರ್ ಮಾಡಿದ್ದಕ್ಕೆ ನಾನಾ ಕಾರಣಗಳನ್ನು ಹುಡುಕುತ್ತಿರುವುದಂತೂ ಸತ್ಯ.

  • ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ಸುದ್ದಿಗೆ ತಮನ್ನಾ ಸ್ಪಷ್ಟನೆ

    ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ಸುದ್ದಿಗೆ ತಮನ್ನಾ ಸ್ಪಷ್ಟನೆ

    ಸೌತ್ ಮತ್ತು ಬಾಲಿವುಡ್‌ನಲ್ಲಿ (Bollywood) ಸದ್ಯ ಸೌಂಡ್ ಮಾಡ್ತಿರುವ ವಿಚಾರ ಅಂದರೆ ತಮನ್ನಾ ಭಾಟಿಯಾ (Tamanna Bhatia) ಮತ್ತು ವಿಜಯ್ ವರ್ಮಾ (Vijay Varma)  ಡೇಟಿಂಗ್ ವದಂತಿ. ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಈ ವಿಚಾರಕ್ಕೆ ಇದೀಗ ನಟಿ ತಮನ್ನಾ ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದಾರೆ. ಇದನ್ನೂ ಓದಿ: `ಜೊತೆ ಜೊತೆಯಲಿ’ ಖ್ಯಾತಿಯ ಶಿಲ್ಪಾ ಅಯ್ಯರ್ ಮದುವೆ ಆಲ್ಬಂ

    ಮಿಲ್ಕಿ ಬ್ಯೂಟಿ ತಮನ್ನಾ ಈಗೀಗ ಸಿನಿಮಾಗಿಂತ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗಿನ ಲವ್ವಿ- ಡವ್ವಿ ವಿಷ್ಯವಾಗಿಯೇ ಸಖತ್ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಲಿಪ್ ಲಾಕ್ ವೀಡಿಯೋ ವೈರಲ್ ಆದ ಮೇಲೆ ಇದೀಗ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.

    ತಮನ್ನಾ ಅವರು ವಿಜಯ್‌ ವರ್ಮಾ ಜೊತೆಗಿನ ಡೇಟಿಂಗ್ ವಿಚಾರವನ್ನು ತಳ್ಳಿ ಹಾಕಿದ್ದಾರೆ. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದು ಹೇಳಿದ್ದಾರೆ.

    ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ʻಲಸ್ಟ್ ಸ್ಟೋರಿ -2′ ಸಿನಿಮಾ ಸೆಟ್‌ನಲ್ಲಿ ಮೊದಲು ಭೇಟಿಯಾಗಿದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿದೆ ಎನ್ನಲಾಗುತ್ತಿದೆ. ಇಬ್ಬರೂ ಕದ್ದು ಮುಚ್ಚಿ ಪ್ರೀತಿ ಮಾಡುತ್ತಿದ್ದರು. ಆದರೆ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಇಬ್ಬರ ಪ್ರೀತಿ ಬಹಿರಂಗವಾಗಿದೆ.

  • ನಟಿ ಪರಿಣಿತಿ ಚೋಪ್ರಾಗೆ ಒಳ್ಳೆಯ ಹುಡುಗ ಬೇಕಂತೆ : ಅರ್ಜಿ ಹಾಕಿ

    ನಟಿ ಪರಿಣಿತಿ ಚೋಪ್ರಾಗೆ ಒಳ್ಳೆಯ ಹುಡುಗ ಬೇಕಂತೆ : ಅರ್ಜಿ ಹಾಕಿ

    ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಇನ್ನೂ ತಾವು ಸಿಂಗಲ್ ಇರುವುದಾಗಿ ಹೇಳಿಕೊಂಡಿರುವ ಅವರು, ಮಿಂಗಲ್ ಆಗೋಕೆ ರೆಡಿ ಇರುವುದಾಗಿಯೂ ತಿಳಿಸಿದ್ದಾರೆ. ಬಾಲಿವುಡ್ ನಲ್ಲಿ ನಡೆಯುತ್ತಿರುವ ಮದುವೆಗಳನ್ನು ಕಂಡಾಗ ತಮಗೂ ಮದುವೆ ಆಗಬೇಕು ಎನ್ನುವ ಆಸೆ ಮೂಡುತ್ತಂತೆ. ಹಾಗಾಗಿ ಒಳ್ಳೆಯ ಹುಡುಗ ಇದ್ದರೆ ತಿಳಿಸಿ ಎಂದಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ಪರಿಣಿತಿ, ‘ಅನೇಕ ನಟ ನಟಿಯರು ಮದುವೆ ಆಗುತ್ತಿದ್ದಾರೆ. ಅವರನ್ನೆಲ್ಲ ನೋಡುತ್ತಿದ್ದರೆ, ನನಗೂ ಮದುವೆ ಆಗುವ ಆಸೆ ಆಗುತ್ತದೆ. ಮಕ್ಕಳನ್ನು ಹೊಂದಬೇಕು ಅನಿಸುತ್ತದೆ. ನಾನಿನ್ನೂ ಸಿಂಗಲ್. ಮಿಂಗ್ ಆಗುವುದಕ್ಕೆ ತಯಾರಿದ್ದೇನೆ. ಹುಡುಗ ಸಿಗಬೇಕು ಅಷ್ಟೇ’ ಎಂದು ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.

    ಡೇಟಿಂಗ್ ವಿಚಾರವನ್ನೂ ಹೇಳಿಕೊಂಡಿರುವ ಪರಿಣಿತಿ, ತಾವು ಈವರೆಗೂ ಯಾರೊಂದಿಗೂ ಡೇಟಿಂಗ್ ಮಾಡಿಲ್ಲ ಎನ್ನುತ್ತಾರೆ. ಡೇಟಿಂಗ್ ವಿಚಾರದಲ್ಲಿ ನಾನು ದೂರ. ಯಾರೊಂದಿಗೂ ನನ್ನ ಹೆಸರು ತಳುಕು ಹಾಕಿಕೊಂಡಿಲ್ಲ. ಆ ರೀತಿಯಲ್ಲಿ ಅಂತರ ಕಾಪಾಡಿಕೊಂಡು ಬಂದಿದ್ದೇನೆ. ಹಾಗಾಗಿ ಒಳ್ಳೆಯ ಹುಡುಗ ಸಿಗುತ್ತಾನೆ ಎನ್ನುವ ನಂಬಿಕೆ ನನಗಿದೆ. ಆದಷ್ಟು ಬೇಗ ಸಿಗಲಿ ಎಂದಿದ್ದಾರೆ.

    15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು, ಹೇಳಿಕೊಳ್ಳುವಂತಹ ಯಶಸ್ಸು ಸಿಗದೇ ಇದ್ದರೂ, ಹ್ಯಾಪಿ ಜೀವನ ಕಳೆಯುತ್ತಿದ್ದಾರಂತೆ. ಸಿಕ್ಕಿರುವ ಪಾತ್ರಗಳು ತಮಗೆ ಖುಷಿ ಕೊಟ್ಟಿರುವುದರಿಂದ ತಮಗೆ ಯಾವುದೇ ನೋವಿಲ್ಲ ಎಂದಿದ್ದಾರೆ. ಕಿರುತೆರೆಯಲ್ಲೂ ಪರಿಣಿತಿ ಬ್ಯುಸಿಯಾಗಿದ್ದು, ಹಿರಿ ಮತ್ತು ಕಿರುತೆರೆಯ ಕೆಲಸವನ್ನು ತೂಗಿಸಿಕೊಂಡು ಹೋಗುತ್ತಿದ್ದಾರಂತೆ.

  • ಪೂಜಾ ಹೆಗ್ಡೆಗೆ ಅಂತ ದುಬಾರಿ ಕಾರು ಖರೀದಿಸಿದ್ರಾ ತೆಲುಗಿನ ಸ್ಟಾರ್ ಡೈರೆಕ್ಟರ್?

    ಪೂಜಾ ಹೆಗ್ಡೆಗೆ ಅಂತ ದುಬಾರಿ ಕಾರು ಖರೀದಿಸಿದ್ರಾ ತೆಲುಗಿನ ಸ್ಟಾರ್ ಡೈರೆಕ್ಟರ್?

    ಹೆಸರಾಂತ ನಟಿ, ಕರಾವಳಿ ಚೆಲುವೆ ಪೂಜಾ ಹೆಗ್ಡೆ (Pooja Hegde) ಹೆಸರು ಮತ್ತೆ ಸಿನಿಮಾ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಇತ್ತೀಚಿನ ಸಿನಿಮಾಗಳು ಗೆಲ್ಲದೇ ಇದ್ದರೂ, ಡೇಟಿಂಗ್ (Dating) ವಿಚಾರವಾಗಿ ಆಗಾಗ್ಗೆ ಪೂಜಾ ಗಾಸಿಪ್ ಕಾಲಂನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಈ ಹಿಂದೆ ಸಲ್ಮಾನ್ ಖಾನ್ ಜೊತೆ ಪೂಜಾಗೆ ಸಂಬಂಧವಿದೆ ಎಂದು ಹೇಳಲಾಗಿತ್ತು. ಪೂಜಾ ಮತ್ತು ಸಲ್ಮಾನ್ ಒಟ್ಟೊಟ್ಟಿಗೆ ಕಾಣಿಸಿಕೊಂಡ ಫೋಟೋಗಳು ವೈರಲ್ ಆಗಿದ್ದವು. ಅಲ್ಲದೇ, ಪೂಜಾ ಸಹೋದರನ ಮದುವೆ ಸಲ್ಮಾನ್ ಕೂಡ ಬಂದಿದ್ದರು.

    ಸಲ್ಮಾನ್ ಖಾನ್ ಜೊತೆಯಷ್ಟೇ ಅಲ್ಲ, ಪೂಜಾ ನಟಿಸಿರುವ ಸಿನಿಮಾಗಳ ಬಹುತೇಕ ನಟರ ಜೊತೆ ಇವರ ಹೆಸರು ತಳುಕು ಹಾಕಿಕೊಂಡಿದೆ. ಆದರೂ, ಈವರೆಗೂ ಅವರು ಡೇಟಿಂಗ್ ವಿಚಾರವಾಗಿ ಯಾವತ್ತೂ ಪ್ರತಿಕ್ರಿಯೆ ನೀಡಿಲ್ಲ. ಆ ಕುರಿತು ಮಾತನಾಡುವಂತಹ ಧೈರ್ಯವನ್ನೂ ಅವರು ಮಾಡಿಲ್ಲ. ಇದೀಗ ದುಬಾರಿ ಕಾರಿನ ಕಾರಣಕ್ಕಾಗಿ ಪೂಜಾ ಮತ್ತೆ ಸದ್ದು ಮಾಡುತ್ತಿದ್ದಾರೆ. ತೆಲುಗಿನ ಖ್ಯಾತ ನಿರ್ದೇಶಕರು ಪೂಜಾಗೆ ಎರಡು ಕೋಟಿ ಬೆಲೆಯ ದುಬಾರಿ ಕಾರು ನೀಡಿದ್ದಾರೆ ಎನ್ನುವುದು ಸದ್ಯಕ್ಕಿರುವ ಮಾಹಿತಿ.

    ತೆಲುಗಿನ ಸ್ಟಾರ್ ಡೈರೆಕ್ಟರ್  ತ್ರಿವಿಕ್ರಮ್ ಶ್ರೀನಿವಾಸ್ (Trivikram Srinivas) ಇತ್ತೀಚೆಗಷ್ಟೇ ದುಬಾರಿ ಕಾರೊಂದನ್ನು (Car) ಖರೀದಿಸಿದ್ದಾರೆ. ಆ ಕಾರನ್ನು ಪೂಜಾ ಹೆಗ್ಡೆಗೆ ಕೊಟ್ಟಿದ್ದಾರೆ ಎನ್ನುವುದು ವರ್ತಮಾನ. ತ್ರಿವಿಕ್ರಮ್ ನಿರ್ದೇಶನದ ಎರಡು ಸಿನಿಮಾಗಳಲ್ಲಿ ಪೂಜಾ ನಾಯಕಿಯಾಗಿ ನಟಿಸಿದ್ದರು. ಅರವಿಂದ ಸಮೇತ ವೀರ ರಾಘವ ಹಾಗೂ ಅಲಾ ವೆಕುಂಠಪುರಂಲೋ ಚಿತ್ರಗಳಿಗೆ ಇವರೇ ನಾಯಕಿ. ಎರಡೂ ಹಿಟ್ ಚಿತ್ರಗಳು. ಈಗ ಮೂರನೇ ಬಾರಿ ಪೂಜಾ ಇದೇ ನಿರ್ದೇಶಕ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    ತ್ರಿವಿಕ್ರಮ್ ನಿರ್ದೇಶನದ ಮಹೇಶ್ ಬಾಬು ನಟನೆಯ ಹೊಸ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ. ಈ ಸಿನಿಮಾದ ಶೂಟಿಂಗ್ ಗೆ ಬರುವುದಕ್ಕಾಗಿ ಪೂಜಾಗೆ ಕಾರು ಕೊಡಿಸಿದ್ದಾರೆ ಎನ್ನುವುದು ಗುಸುಗುಸು. ದುಬಾರಿ ಕಾರು ಕೊಡಿಸಿದ್ದರ ಕಾರಣಕ್ಕಾಗಿ ಇಬ್ಬರ ಮಧ್ಯೆ ಏನೋ ನಡೆದಿದ್ಯಾ ಎನ್ನುವ ಪ್ರಶ್ನೆಯನ್ನು ಹಲವರು ಮಾಡಿದ್ದಾರೆ. ಆದರೆ, ಈ ಕಾರಿನ ಹಿಂದೆ ಬೇರೆಯದ್ದೇ ಕಥೆ ಇದೆ ಎನ್ನುವುದು ಚಿತ್ರತಂಡದ ಮಾತು. ನಟಿಗೆ ಕೇವಲ ಪಿಕ್ ಅಪ್ ಮತ್ತು ಡ್ರಾಪ್ ಮಾಡುವುದಕ್ಕಾಗಿ ಮಾತ್ರ ಈ ಕಾರು ಬಳಕೆ ಆಗುತ್ತಿದೆಯಂತೆ.

  • ಕ್ರಿಕೆಟಿಗ ಶುಭಮನ್ ಜೊತೆ ಡೇಟಿಂಗ್ ಮಾಡುತ್ತಿಲ್ಲ: ನಟಿ ಸೋನಮ್ ಬಾಜ್ವಾ

    ಕ್ರಿಕೆಟಿಗ ಶುಭಮನ್ ಜೊತೆ ಡೇಟಿಂಗ್ ಮಾಡುತ್ತಿಲ್ಲ: ನಟಿ ಸೋನಮ್ ಬಾಜ್ವಾ

    ಟೀಮ್ ಇಂಡಿಯಾ ಕ್ರಿಕೆಟಿಗ (Cricket) ಶುಭಮನ್ ಗಿಲ್ (Shubman Gill) ಹೊಡೆದ ದ್ವಿಶತಕಕ್ಕಿಂತ ಆತನ ಡೇಟಿಂಗ್ (Dating) ವಿಚಾರವೇ ಭಾರತದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಗಿಲ್ ಜೊತೆ ದಿನಕ್ಕೊಂದು ಹುಡುಗಿಯ ಹೆಸರು ತಳುಕು ಹಾಕಿಕೊಳ್ಳುತ್ತಿದೆ. ಶುಭಮನ್ ಯಾರ ಜೊತೆ ಡೇಟಿಂಗ್ ಮಾಡುತ್ತಿದ್ದಾನೋ ಗೊತ್ತಿಲ್ಲ. ಆದರೆ, ಹೊಸ ಹೊಸ ಹುಡುಗಿಯರ ಹೆಸರು ಮಾತ್ರ ಕೇಳಿ ಬರುತ್ತಲೇ ಇದೆ.

    ಮೊನ್ನೆಯಷ್ಟೇ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಜೊತೆ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು. ಅದಕ್ಕೆ ಪೂರಕ ಎನ್ನುವಂತೆ ಈ ಇಬ್ಬರೂ ಸುತ್ತಾಡುವ ಫೋಟೋಗಳು ಕಂಡು ಬಂದವು. ರೆಸ್ಟೋರೆಂಟ್ ಸೇರಿದಂತೆ ನಾನಾ ಕಡೆ ಸಾರಾ ಮತ್ತು ಗಿಲ್ ಒಟ್ಟಿಗೆ ಇದ್ದ ಫೋಟೋಗಳು ವೈರಲ್ ಆದವು. ಹಾಗಾಗಿ ಇಬ್ಬರೂ ಡೇಟಿಂಗ್ ನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಇದನ್ನೂ ಓದಿ: ಉದ್ಯಮಿ ವಿಶಾಲ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ `ವಜ್ರಕಾಯ’ ನಟಿ ಶುಭ್ರ ಅಯ್ಯಪ್ಪ

    ಇದೀಗ ಗಿಲ್ ಜೊತೆ ಮತ್ತೋರ್ವ ಹುಡುಗಿಯ ಹೆಸರು ಕೇಳಿ ಬಂದಿದೆ. ಪಂಜಾಬಿ ನಟಿ ಸೋನಮ್ ಬಾಜ್ವಾ (Sonam Bajwa) ಜೊತೆ ಕ್ರಿಕೆಟಿಗ ಗಿಲ್ ಲವ್ವಿಡವ್ವಿ ಶುರು ಮಾಡಿದ್ದಾರಂತೆ. ಅದಕ್ಕೆ ಸಾಕ್ಷಿ ಎನ್ನುವಂತೆ ಇವರಿಬ್ಬರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತಿವೆ. ಇಬ್ಬರೂ ಒಟ್ಟಿಗೆ ಇರುವ ಫೋಟೋಗಳು ಆಚೆ ಬರುತ್ತಿದ್ದಂತೆಯೇ ಅದಕ್ಕೆ ಸೋನಮ್ ಪ್ರತಿಕ್ರಿಯೆಯನ್ನೂ ಕೊಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಗಿಲ್ ಜೊತೆ ನಾನು ಡೇಟಿಂಗ್ ಮಾಡುತ್ತಿಲ್ಲ. ಸುಖಾಸುಮ್ಮನೆ ರೂಮರ್ ಹಬ್ಬಿಸಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯಾಕೆ ವಿಜಯ್ ಮರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ: ತಮನ್ನಾಗೆ ನೆಟ್ಟಿಗರಿಂದ ಕ್ಲಾಸ್

    ಯಾಕೆ ವಿಜಯ್ ಮರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ: ತಮನ್ನಾಗೆ ನೆಟ್ಟಿಗರಿಂದ ಕ್ಲಾಸ್

    ಬಾಲಿವುಡ್(Bollywood) ಮತ್ತು ಸೌತ್ ಸಿನಿಮಾರಂಗದಲ್ಲಿ ಸದ್ಯ ಸದ್ದು ಮಾಡ್ತಿರುವ ವಿಚಾರ ಅಂದರೆ ವಿಜಯ್ ವರ್ಮಾ (Vijay Varma) ಮತ್ತು ತಮನ್ನಾ ಭಾಟಿಯಾ (Tamannaah Bhatia) ಡೇಟಿಂಗ್ ಸುದ್ದಿ. ಇಬ್ಬರ ಲಿಪ್‌ಲಾಕ್ ವೀಡಿಯೋ ವೈರಲ್ ಆದ ಬೆನ್ನಲ್ಲೇ ಗೋವಾದಲ್ಲಿ ಕ್ಲಿಕ್ಕಿಸಿಕೊಂಡಿದ್ದ ಫೋಟೋ, ವೀಡಿಯೋವನ್ನ ತಮನ್ನಾ ಶೇರ್ ಮಾಡಿದ್ದಾರೆ.

    ನಟಿ ತಮನ್ನಾ ಅವರು ಹೊಸ ವರ್ಷ ಆಚರಣೆಗೆ ಗೋವಾಗೆ ತೆರಳಿದ್ದರು. ಅವರ ಜತೆ ಬಾಲಿವುಡ್ ನಟ ವಿಜಯ್ ವರ್ಮಾ (Actor Vijay Varma) ಕೂಡ ಇದ್ದರು. ಇಬ್ಬರೂ ಸೇರಿ ಹೊಸ ವರ್ಷ ಸ್ಪೆಷಲ್ ಆಗಿ ಆಚರಿಸಿಕೊಂಡಿದ್ದಾರೆ. ಇಬ್ಬರೂ ಕಿಸ್ ಮಾಡಿಕೊಳ್ಳುತ್ತಿರುವ ವಿಡಿಯೋ ಮೂಲಕ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಖಚಿತವಾಗಿತ್ತು. ಇದನ್ನೂ ಓದಿ: ಅದ್ದೂರಿಯಾಗಿ ನಡೆಯಲಿದೆ ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ ಮದುವೆ

     

    View this post on Instagram

     

    A post shared by Tamannaah Bhatia (@tamannaahspeaks)

    ಬೀಚ್‌ನಲ್ಲಿ ಇರುವ ಫೋಟೋ, ಹೋಟೆಲ್‌ನಲ್ಲಿ ಊಟ ಮಾಡುತ್ತಿರುವ ಫೋಟೋಗಳನ್ನು ತಮನ್ನಾ ಅವರು ಹಂಚಿಕೊಂಡಿದ್ದಾರೆ. ಈ ಫೋಟೋ ನೋಡುತ್ತಿದ್ದಂತೆ ಫ್ಯಾನ್ಸ್ ವಿಜಯ್ ವರ್ಮಾ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಈ ಫೋಟೋಗಳನ್ನು ಕ್ಲಿಕ್ಕಿಸಿದ್ದು ವಿಜಯ್ ವರ್ಮಾ ಅಲ್ಲವೇ? ಅವರಿಗೆ ಕ್ರೆಡಿಟ್ ಕೊಡಿ ಎಂದು ಕೆಲವರು ಬರೆದುಕೊಂಡಿದ್ದಾರೆ. ತಮನ್ನಾ ಫೋಟೋ ಕೆಳಗೆ ಅಭಿಮಾನಿಗಳು ಅನೇಕ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

    ನೀವು ಯಾಕೆ ವಿಜಯ್ ವರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೋರ್ವ ಅಭಿಮಾನಿ, ನಿಮಗೆ ವಿಜಯ್ ವರ್ಮಾ ಸೂಟ್ ಆಗಲ್ಲ ಎಂದು ಹೇಳಿದ್ದಾರೆ. ಇನ್ನೂ ಕೆಲವರು ತುಂಬಾ ಕೆಟ್ಟ ಸೆಲೆಕ್ಷನ್ ತಮನ್ನಾ, ಅವರ ಜೊತೆ ಹೇಗೆ ಲಿಪ್‌ಲಾಕ್ ಮಾಡಿದ್ರಿ ಎಂದು ಕೇಳುತ್ತಿದ್ದಾರೆ.

    ಒಟ್ನಲ್ಲಿ ತಮನ್ನಾ, ಗೋವಾದ ಫೋಟೋ ಶೇರ್ ಮಾಡುತ್ತಿದ್ದಂತೆ ಪ್ರಶ್ನೆಗಳ ಸುರಿಮಳೆಯನ್ನೇ ಅಭಿಮಾನಿಗಳು ನಟಿಯ ಮುಂದೆ ಇಟ್ಟಿದ್ದಾರೆ. ಆದರೂ ಈ ಬಗ್ಗೆ ತಮನ್ನಾ ಯಾವುದೇ ಪ್ರತಿಕ್ರಿಯೆ ನೀಡದೇ ಸೈಲೆಂಟ್ ಆಗಿದ್ದಾರೆ. ಸದ್ಯ ತಮನ್ನಾ ಈ ವರ್ಷ ತಮ್ಮ ಮದುವೆಯ ಗುಡ್ ನ್ಯೂಸ್ ಕೊಡುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k