Tag: Dating

  • ತಮನ್ನಾ ಮೇಲೆ ಹೆಚ್ಚು ಪ್ರೀತಿ ಆಗಿದೆ: ಮತ್ತೆ ಡೇಟಿಂಗ್ ಖಚಿತ ಪಡಿಸಿದ ವಿಜಯ್

    ತಮನ್ನಾ ಮೇಲೆ ಹೆಚ್ಚು ಪ್ರೀತಿ ಆಗಿದೆ: ಮತ್ತೆ ಡೇಟಿಂಗ್ ಖಚಿತ ಪಡಿಸಿದ ವಿಜಯ್

    ಕ್ಷಿಣದ ಖ್ಯಾತ ನಟಿ ತಮನ್ನಾ (Tamannaah) ಮತ್ತು ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಲವ್ವಿಡವ್ವಿ ವಿಚಾರ ಗುಟ್ಟಿನ ಸಂಗತಿಯೇನೂ ಅಲ್ಲ. ಆದರೂ, ಈ ವಿಚಾರವಾಗಿ ಆಗಾಗ್ಗೆ ಇಬ್ಬರೂ ಸುದ್ದಿ ಆಗುತ್ತಾರೆ. ನಿನ್ನೆಯಷ್ಟೇ ಮಾಧ್ಯಮಗಳ ಜೊತೆ ಮಾತನಾಡಿರುವ ವಿಜಯ್ ವರ್ಮಾ, ‘ನನಗೆ ತಮನ್ನಾ ಮೇಲೆ ಮತ್ತಷ್ಟು ಪ್ರೀತಿಯಾಗಿದೆ (Love). ಹೆಚ್ಚೆಚ್ಚು ಪ್ರೀತಿ  ಮೂಡುತ್ತಿದೆ’ ಎಂದು ಹೇಳುವ ಮೂಲಕ ತಮ್ಮಿಬ್ಬರ ನಡುವಿನ ಡೇಟಿಂಗ್ ಅನ್ನು ಖಚಿತ ಪಡಿಸಿದ್ದಾರೆ.

    ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ ಲಿಪ್ ಲಾಕ್ ಮಾಡಿಕೊಂಡ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ವಿಜಯ್‌ ವರ್ಮಾ ಜೊತೆಗಿನ ಡೇಟಿಂಗ್ (Dating) ವಿಚಾರವನ್ನು ತಳ್ಳಿ ಹಾಕಿದ್ದರು ತಮನ್ನಾ. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದಿದ್ದರು.

    ಆದರೆ, ನಂತರದ ದಿನಗಳಲ್ಲಿ ಡೇಟಿಂಗ್ ಕುರಿತು ಭಿನ್ನ ಪ್ರತಿಕ್ರಿಯೆ ನೀಡಿದ್ದರು ತಮನ್ನಾ. ವಿಜಯ್ ವರ್ಮಾ ಜೊತೆ ತಾವು ಲವ್ ಮಾಡುತ್ತಿರುವ ವಿಚಾರವನ್ನು ಒಪ್ಪಿಕೊಂಡಿದ್ದರು. ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ʻಲಸ್ಟ್ ಸ್ಟೋರಿ -2′ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸೆಟ್‌ನಲ್ಲಿ ಮೊದಲು ಭೇಟಿಯಾಗಿದ್ದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿದೆ ಎಂದು ಹೇಳಿದ್ದರು. ಅದರ ಮುಂದುವರೆದ ಭಾಗವಾಗಿ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ:ರಿಷಬ್ ನಿರ್ಮಾಣದ ‘ಶಿವಮ್ಮ’ನಿಗೆ ಮತ್ತೆ ಅಂತಾರಾಷ್ಟ್ರೀಯ ಪ್ರಶಸ್ತಿ

    ಪ್ರೇಮಿಗಳ ದಿನದಂದು ತಮನ್ನಾಗೆ ವಿಜಯ್ ವರ್ಮಾ ವಿಶೇಷವಾಗಿ ವಿಶ್ ಮಾಡಿದ್ದರು. ತನ್ನ ಪ್ರೇಮಿಯ ಜೊತೆಗಿನ ಫೋಟೋವನ್ನು ವಿಜಯ್ ವರ್ಮಾ ಶೇರ್ ಮಾಡಿದ್ದರು.  ವಿಜಯ್ ಅವರು ಕಾಲೊಂದರ ಫೋಟೋವನ್ನು ಶೇರ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದರು. ಅದು ತಮನ್ನಾ ಕಾಲು ಎಂದು ಹೇಳಲಾಗಿತ್ತು. ತಮನ್ನಾ ಧರಿಸಿದ್ದ ಶೋ ಮತ್ತು ಜರ್ಕಿನ್ ಫೋಟೋಗಳನ್ನು ಶೇರ್ ಮಾಡಿ ಇದು ಪಕ್ಕಾ ತಮನ್ನಾ ಅವರ ಕಾಲು ಎಂದಿದ್ದರು.

    ವಿಜಯ್ ವರ್ಮಾ ತಮ್ಮ ಪ್ರೀತಿಯ ವಿಷಯದಲ್ಲಿ ಸ್ಪಷ್ಟವಾಗಿದ್ದರೂ, ತಮನ್ನಾ ಮಾತ್ರ ಅದನ್ನು ಹೇಳಿಕೊಳ್ಳಲು ತಯಾರು ಇರಲಿಲ್ಲ. ಯಾರೇ ಕೇಳಿದರೂ ಅದನ್ನು ಗಾಸಿಪ್ ಎಂದು ತೇಲಿಸಿ ಬಿಡುತ್ತಿದ್ದರು. ನಂತರ ವಿಜಯ್ ಜೊತೆಗಿನ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ಒಂದು ಸಲ ಒಪ್ಪಿಕೊಂಡು ಮತ್ತೊಂದು ಸಲ ಗಾಸಿಪ್ ಎಂದು ಹೇಳುತ್ತಾ ಡೇಟಿಂಗ್ ವಿಚಾರದಲ್ಲಿ ಇಬ್ಬರೂ ಸದಾ ಸುದ್ದಿಯಲ್ಲಿರುತ್ತಾರೆ ಈ ಸ್ಟಾರ್ ಜೋಡಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತೀಯ ಮೂಲದ ಮಾಡೆಲ್ ಜೊತೆ ಟೈಟಾನಿಕ್ ಹೀರೋ ಡೇಟಿಂಗ್

    ಭಾರತೀಯ ಮೂಲದ ಮಾಡೆಲ್ ಜೊತೆ ಟೈಟಾನಿಕ್ ಹೀರೋ ಡೇಟಿಂಗ್

    ಹಾಲಿವುಡ್ ನ ಖ್ಯಾತ ನಟ, ಟೈಟಾನಿಕ್ ಚಿತ್ರದ ಹೀರೋ ಲಿಯೋನಾರ್ಡೊ ಡಿಕ್ಯಾಪ್ರಿಯೋ ಇದೀಗ ಭಾರತೀಯ ಮೂಲಕ ಮಾಡೆಲ್ ನೀಲಂ ಗೀಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನು ವಿಚಾರ ಹಾಲಿವುಡ್ ರಂಗದಲ್ಲಿ ಗಿರಕಿ ಹೊಡೆಯುತ್ತಿದೆ. ಪದೇ ಪದೇ ನೀಲಂ ಗೀಲ್ ಜೊತೆ ಲಿಯೋನಾರ್ಡೊ ಕಾಣಿಸಿಕೊಳ್ಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

    ಪದೇ ಪದೇ ಒಟ್ಟಿಗೆ ಹಲವಾರು ಕಡೆ ಕಾಣಿಸಿಕೊಂಡಿರುವ ಈ ಜೋಡಿ ಇತ್ತೀಚೆಗಷ್ಟೇ ನಡೆದ ಔತಣಕೂಟದಲ್ಲಿ ಒಟ್ಟಿಗೆ ಭಾಗಿಯಾಗಿದ್ದರು. ಪ್ಯಾರಿಸ್ ನಲ್ಲಿರುವ ಹೋಟೆಲ್ ನಲ್ಲಿ ಈ ಜೋಡಿ ತಡರಾತ್ರಿ ಊಟಕ್ಕಾಗಿ ಬಂದಿತ್ತು ಎಂದು ಹೇಳಲಾಗುತ್ತಿದೆ.  ಇವರ ಜೊತೆ ಡಿಕಾಪ್ರಿಯೊ ಕುಟುಂಬದ ಸದಸ್ಯರು ಕೂಡ ಇದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ:ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”true” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

    ಡಿಕಾಪ್ರಿಯೋ ಮತ್ತು ನೀಲಂ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನೂ ಅಲ್ಲ ಎಂದು ಹಾಲಿವುಡ್ ಮಾಧ್ಯಮಗಳ ವರದಿ ಮಾಡಿವೆ. ಇತ್ತೀಚೆಗೆ ನಡೆದ ಎರಡೂ ಕಾರ್ಯಕ್ರಮದಲ್ಲೂ ನೀಲಂ ತನ್ನ ಕುಟುಂಬದ ಜೊತೆಯೇ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿ ಡಿಕಾಪ್ರಿಯೊ ಕೂಡ ಇದ್ದರು. ಅಲ್ಲದೇ ಲಂಡನ್ ನ ಚಿಲ್ಟರ್ನ್ ಫೈರ್ ಹೌಸ್ ನಲ್ಲಿ ನಡೆದ ಔತಣಕೂಟದಲ್ಲಿ ಎರಡು ಕಡೆಯ ಕುಟುಂಬ ಭಾಗಿಯಾಗಿತ್ತು.

    ಎರಡೂ ಕುಟುಂಬಗಳು ಅನೇಕ ಬಾರಿ ಡಿನ್ನರ್ ಗೆ ಸೇರಿದ್ದರಂತೆ ನೀಲಂ ಮತ್ತು ಡಿಕಾಪ್ರಿಯೋ ಲವ್ ಇನ್ ಸಂಬಂಧದಲ್ಲಿ ಇದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ನೀಲಂ ಆಗಲಿ ಡಿಕಾಪ್ರಿಯೋ ಆಗಲಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು ಮಾತ್ರ ಬಿಟ್ಟಿಲ್ಲ.

  • ಬಾಲಿವುಡ್ ನಟನ ಜೊತೆಗಿನ ಡೇಟಿಂಗ್ ಒಪ್ಪಿಕೊಂಡ ನಟಿ ತಮನ್ನಾ

    ಬಾಲಿವುಡ್ ನಟನ ಜೊತೆಗಿನ ಡೇಟಿಂಗ್ ಒಪ್ಪಿಕೊಂಡ ನಟಿ ತಮನ್ನಾ

    ಡೇಟಿಂಗ್ ವಿಚಾರದಲ್ಲಿ ದಕ್ಷಿಣದ ಖ್ಯಾತ ನಟಿ ತಮನ್ನಾ (Tamannaah) ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಮೊನ್ನೆಯಷ್ಟೇ ಬಾಲಿವುಡ್ ನಟ ವಿಜಯ್ ವರ್ಮಾ (Vijay Varma)  ಡೇಟಿಂಗ್ ವದಂತಿಯನ್ನು ತಮನ್ನಾ ತಳ್ಳಿ ಹಾಕಿದ್ದರು. ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ವಿಚಾರಕ್ಕೆ ಅವರು ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದರು.

    ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ ಲಿಪ್ ಲಾಕ್ ಮಾಡಿಕೊಂಡ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ವಿಜಯ್ವರ್ಮಾ ಜೊತೆಗಿನ ಡೇಟಿಂಗ್ (Dating) ವಿಚಾರವನ್ನು ತಳ್ಳಿ ಹಾಕಿದ್ದರು. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದಿದ್ದರು. ಇದನ್ನೂ ಓದಿ:ಮೂಗು ಚುಚ್ಚಿಸಿಕೊಂಡ ಪತ್ನಿ ಸಂಗೀತಾ ಲುಕ್‌ಗೆ ‘ಭಾಗ್ಯಲಕ್ಷ್ಮಿ’ ನಟ ಏನಂದ್ರು ಗೊತ್ತಾ?

    ಆದರೆ, ಇದೀಗ ಡೇಟಿಂಗ್ ಕುರಿತು ಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯ್ ವರ್ಮಾ ಜೊತೆ ತಾವು ಲವ್ ಮಾಡುತ್ತಿರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ʻಲಸ್ಟ್ ಸ್ಟೋರಿ -2′ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸೆಟ್ನಲ್ಲಿ ಮೊದಲು ಭೇಟಿಯಾಗಿದ್ದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿದೆ ಎಂದು ಹೇಳಿದ್ದಾರೆ. ಅದರ ಮುಂದುವರೆದ ಭಾಗವಾಗಿ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಪ್ರೇಮಿಗಳ ದಿನದಂದು ತಮನ್ನಾಗೆ ವಿಜಯ್ ವರ್ಮಾ ವಿಶೇಷವಾಗಿ ವಿಶ್ ಮಾಡಿದ್ದರು. ತನ್ನ ಪ್ರೇಮಿಯ ಜೊತೆಗಿನ ಫೋಟೋವನ್ನು ವಿಜಯ್ ವರ್ಮಾ ಶೇರ್ ಮಾಡಿದ್ದರು.  ವಿಜಯ್ ಅವರು ಕಾಲೊಂದರ ಫೋಟೋವನ್ನು ಶೇರ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದರು. ಅದು ತಮನ್ನಾ ಕಾಲು ಎಂದು ಹೇಳಲಾಗಿತ್ತು. ತಮನ್ನಾ ಧರಿಸಿದ್ದ ಶೋ ಮತ್ತು ಜರ್ಕಿನ್ ಫೋಟೋಗಳನ್ನು ಶೇರ್ ಮಾಡಿ ಇದು ಪಕ್ಕಾ ತಮನ್ನಾ ಅವರ ಕಾಲು ಎಂದಿದ್ದರು.

     

    ವಿಜಯ್ ವರ್ಮಾ ತಮ್ಮ ಪ್ರೀತಿಯ ವಿಷಯದಲ್ಲಿ ಸ್ಪಷ್ಟವಾಗಿದ್ದರೂ, ತಮನ್ನಾ ಮಾತ್ರ ಅದನ್ನು ಹೇಳಿಕೊಳ್ಳಲು ತಯಾರು ಇರಲಿಲ್ಲ. ಯಾರೇ ಕೇಳಿದರೂ ಅದನ್ನು ಗಾಸಿಪ್ ಎಂದು ತೇಲಿಸಿ ಬಿಡುತ್ತಿದ್ದರು. ಪ್ರಥಮ ಬಾರಿಗೆ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ವಿಜಯ್ ಜೊತೆಗಿನ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ. 

  • ನಟಿ ಯಶಿಕಾ ಡೇಟ್ ಮಾಡ್ತಿರೋದು ತನಗಿಂತ 22 ವರ್ಷ ಹಿರಿಯ ನಟನ ಜೊತೆ?

    ನಟಿ ಯಶಿಕಾ ಡೇಟ್ ಮಾಡ್ತಿರೋದು ತನಗಿಂತ 22 ವರ್ಷ ಹಿರಿಯ ನಟನ ಜೊತೆ?

    ರಡು ವರ್ಷಗಳ ಹಿಂದೆ ಭೀಕರ ಅಪಘಾತದಲ್ಲಿ ಗಾಯಗೊಂಡು ಅರ್ಧ ವರ್ಷ ಆಸ್ಪತ್ರೆಯಲ್ಲೇ ಕಳೆದಿದ್ದ ನಟಿ ಯಶಿಕಾ ಆನಂದ್ (Yashika Anand), ಇದೀಗ ಸಂಪೂರ್ಣ ಚೇತರಿಸಿಕೊಂಡು ಮತ್ತೆ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ. 2021ರಲ್ಲಿ ನಡೆದ ಅಪಘಾತದಲ್ಲಿ ಅವರು ತೀವ್ರ ಗಾಯಗೊಂಡಿದ್ದರು. ಮತ್ತೆ ಬಣ್ಣದ ಪ್ರಪಂಚಕ್ಕೆ ಬರುವುದು ಅನುಮಾನ ಎಂದೇ ಹೇಳಲಾಗಿತ್ತು.

    ಮಾಡೆಲಿಂಗ್ ಪ್ರಪಂಚದಿಂದ ಬಂದಿರುವ ಯಶಿಕಾ, ಕಾಲಿವುಡ್ ನಲ್ಲಿ ‘ಇರುವಟ್ಟು ಅರಯಿಲ್ ಮುರಟ್ಟು ಕುತ್ತು’ ಎಂಬ ಅಡಲ್ಟ್ ಕಾಮಿಡಿ ಸಿನಿಮಾದಲ್ಲಿ ನಟಿಸಿದರು. ಅಲ್ಲಿಂದ ಅವರ ವೃತ್ತಿ ಜೀವನವೇ ಬದಲಾಗಿ ಹೋಯಿತು. ಅಡಲ್ಟ್ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದರಿಂದ ಸಲೀಸಾಗಿ ಅವರಿಗೆ ಬಿಗ್ ಬಾಸ್ ಮನೆಗೆ ಹೋಗುವುದಕ್ಕೆ ನೆರವಾಯಿತು.

    ಬಿಗ್ ಬಾಸ್ಮ (Bigg Boss) ನೆಯೊಳಗೆ ಹೋಗುತ್ತಿದ್ದಂತೆಯೇ ಜನರಿಗೆ ಮತ್ತಷ್ಟು ಹತ್ತಿರವಾದ ಯಶಿಕಾ, ಅಲ್ಲಿ ತಮ್ಮ ಜೀವನದಲ್ಲಿ ನಡೆದ ಸಾಕಷ್ಟು ಘಟನೆಗಳನ್ನು ಹಂಚಿಕೊಂಡಿದ್ದರು. ಹಾಗಾಗಿ ಮತ್ತಷ್ಟು ಖ್ಯಾತಿ ಕೂಡ ಅವರ ಬೆನ್ನತ್ತಿ ಬಂತು. ಸಿನಿಮಾಗಳಲ್ಲಿ ನಟಿಸಲು ಆಫರ್ ಕೂಡ ಬಂದವು. ವಯಸ್ಕರ ಕಾಮಿಡಿ ಚಿತ್ರ ಮತ್ತು ಬಿಗ್ ಬಾಸ್ ಅವರಿಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟವು.

    ಇದೀಗ ಮತ್ತೊಂದು ಕಾರಣಕ್ಕಾಗಿ ಯಶಿಕಾ ಸುದ್ದಿಯಾಗಿದ್ದಾರೆ. ತಮಗಿಂತ 22 ವರ್ಷ ಹಿರಿಯ ನಟನ ಜೊತೆ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದೆ. ಅದಕ್ಕೆ ಪೂರಕ ಎನ್ನುವಂತೆ ಆ ನಟನ ಜೊತೆಗೆ ಕಾರಿನಲ್ಲಿ ಸುತ್ತುವ ಮತ್ತು ಆತನೊಂದಿಗೆ ಕಿಸ್ ಮಾಡಿರುವ ಫೋಟೋಗಳು ವೈರಲ್ ಆಗಿವೆ.

    ಕಾಲಿವುಡ್ ಮಾಜಿ ನಟ, ಸೂಪರ್ ಸ್ಟಾರ್‍ ಅಜಿತ್ ಕುಮಾರ್ (Ajith Kumar) ಅವರ ಬಾಮೈದ ರಿಚರ್ಡ್ ರಿಷಿ (Richard Rishi) ಜೊತೆ ಯಶಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಯಶಿಕಾ ಜೊತೆಗಿನ ಫೋಟೋಗಳನ್ನು ಸ್ವತಃ ರಿಚರ್ಡ್ ರಿಷಿ ತಮ್ಮ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಹಾಗಾಗಿ ವದಂತಿಯು ನಿಜವಿರಬಹುದು ಎಂದು ಹೇಳಲಾಗುತ್ತಿದೆ.

    ಕೇವಲ 23ರ ವಯಸ್ಸಿನ ಯಶಿಕಾ ಆನಂದ್, 45 ವರ್ಷದ ರಿಚರ್ಡ್ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ಕಾಲಿವುಡ್ ನ ಗಲ್ಲಿಗಲ್ಲಿಗಳಲ್ಲಿ ಮಾತಾಡಿಕೊಳ್ಳುವಂತಾಗಿದೆ. ಅಲ್ಲದೇ ಇಬ್ಬರೂ ಜೊತೆಗಿರುವ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಕುರಿತು ಸ್ವತಃ ಯಾಶಿಕಾ ಸ್ಪಷ್ಟನೆಯನ್ನು ನೀಡಿದ್ದಾರೆ.

    ತಾನು ಯಾವುದೇ ವ್ಯಕ್ತಿಯನ್ನು ಪ್ರೀತಿಸುತ್ತಿಲ್ಲ ಮತ್ತು ಡೇಟ್ ಕೂಡ ಮಾಡುತ್ತಿಲ್ಲ. ಹರಿದಾಡುತ್ತಿರುವ ಫೋಟೋಗಳು ಮುಂದಿನ ಸಿನಿಮಾಗೆ ಸಂಬಂಧಿಸಿದವು ಆಗಿವೆ. ಈ ಸಿನಿಮಾವನ್ನು ವಿನಯ್ ಭಾರದ್ವಾಜ್ ನಿರ್ದೇಶನ ಮಾಡುತ್ತಿದ್ದಾರೆ. ರಿಚರ್ಡ್ ಆ ಸಿನಿಮಾದಲ್ಲಿ ನಟಿಸಿದ್ದಾರೆ. ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ ಯಶಿಕಾ.

    ಸಿಲಾ ನೋಡಿಗಲ್ ಹೆಸರಿನ ತಮಿಳು ಸಿನಿಮಾದಲ್ಲಿ ರಿಚರ್ಡ್ ಕೂಡ ನಟಿಸುತ್ತಿದ್ದಾರಂತೆ. ಆ ಸಿನಿಮಾದ ಫೋಟೋಗಳು ಅವು. ಯಾರೋ ಈ ರೀತಿಯಲ್ಲಿ ಸುದ್ದಿ ಹಬ್ಬಿಸಿದ್ದಾರೆ. ಬಾಲ ಕಲಾವಿದರಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ರಿಚರ್ಡ್ ಅವರು ಸಾಕಷ್ಟು ಸಾಧನೆ ಮಾಡಿದ್ದಾರೆ. ಅವರನ್ನು ನಾನು ಸದಾ ಗೌರವಿಸುವೆ ಎಂದಿದ್ದಾರೆ ಯಶಿಕಾ.

    ಯಶಿಕಾ ಆನಂದ್ ಬೋಲ್ಡ್ (Bold) ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಅವರ ಕಾಸ್ಟ್ಯೂಮ್ ಕೂಡ ಯಾವಾಗಲೂ ಬೋಲ್ಡ್ ಆಗಿಯೇ ಇರುತ್ತವೆ. ಹಾಗಾಗಿ ಆಗಾಗ್ಗೆ ಜನರು ಆಕೆಗೆ ತರ್ಲೆ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಯಾವುದೇ ಮುಜಗರವಿಲ್ಲದೇ ಯಶಿಕಾ ಕೂಡ ಅಷ್ಟೇ ಬೋಲ್ಡ್ ಆಗಿ ಉತ್ತರ ಕೊಡುತ್ತಿರುತ್ತಾರೆ.

  • ಶುಭ್ ಮನ್ ಗಿಲ್-ಸಾರಾ ಅಲಿಖಾನ್ ನಡುವಿನ ಪ್ರೇಮದಲ್ಲಿ ಬಿರುಕು

    ಶುಭ್ ಮನ್ ಗಿಲ್-ಸಾರಾ ಅಲಿಖಾನ್ ನಡುವಿನ ಪ್ರೇಮದಲ್ಲಿ ಬಿರುಕು

    ಬಾಲಿವುಡ್ ನಟ ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿ ಖಾನ್ (Sara Ali Khan) ಹಾಗೂ ಕ್ರಿಕೆಟಿಗ ಶುಭ್ ಮನ್ (Shubh Man Gill) ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವುದು ಹಳೆಯ ಸುದ್ದಿ. ಈ ಸುದ್ದಿಗೆ ಪುಷ್ಠಿ ಕೊಡುವಂತೆ ಇಬ್ಬರೂ ಸಾಕಷ್ಟು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ತಾಜಾ ಸಾಮಾಚಾರ ಎಂದರೆ, ಇಬ್ಬರ ನಡುವಿನ ಲವ್ ಬ್ರೇಕ್ ಅಪ್ ಆಗಿದೆ ಎನ್ನುವುದು. ಇಬ್ಬರೂ ಡೇಟ್ (Dating) ಮಾಡುತ್ತಿದ್ದಾರಾ, ಇಲ್ಲವಾ ಎನ್ನುವ ಅನುಮಾನದ ನಡುವೆಯೇ ಇಬ್ಬರೂ ದೂರವಾಗಿದ್ದು ಮಾತ್ರ ನಿಜ.

    ಶುಭ್ ಮನ್ ಗಿಲ್ ಮತ್ತು ಸಾರಾ ಅಲಿಖಾನ್ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿದ್ದರು. ಹಲವು ವಿಚಾರಗಳನ್ನೂ ಹಂಚಿಕೊಳ್ಳುತ್ತಿದ್ದರು. ಇದೀಗ ಇಬ್ಬರೂ ಫಾಲೋ ಮಾಡುವುದನ್ನು ನಿಲ್ಲಿಸಿದ್ದಾರೆ. ಇಬ್ಬರೂ ಒಬ್ಬರಿಗೊಬ್ಬರು ಅನ್ ಫ್ರೆಂಡ್ ಮಾಡಿಕೊಂಡಿದ್ದಾರೆ. ಹಾಗಾಗಿ ಪ್ರೀತಿಯ ಪಾರಿವಾಳ ಹಾರಿ ಹೋಗಿದೆ ಎಂದು ಹೇಳಲಾಗುತ್ತಿದೆ.

    ಬಿಟೌನ್‌ನ ಸಾಲು ಸಾಲು ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಸೈಫ್ ಅಲಿ ಖಾನ್ ಪುತ್ರಿ ಸಾರಾ ಸಿನಿಮಾಗಿಂತ ಡೇಟಿಂಗ್ ವಿಷ್ಯವಾಗಿ ಸುದ್ದಿಯಲ್ಲಿದ್ದರು.  ಮುಂಬೈ ಮತ್ತು ದೆಹಲಿಯಲ್ಲಿ ಶುಭ್ ಮನ್ ಗಿಲ್ ಮತ್ತು ಸಾರಾ ಪದೇ ಪದೇ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಇಬ್ಬರ ಲವ್ವಿ ಡವ್ವಿ ವಿಚಾರವನ್ನು ಬಹಿರಂಗಗೊಳಿಸಿದ್ದರು.

    ಇತ್ತೀಚೆಗೆ ಮುಂಬೈನ ಬಾಸ್ಟಿಯನ್ ರೆಸ್ಟೋರೆಂಟ್‌ನಲ್ಲಿ ಇಬ್ಬರೂ ಒಟ್ಟಿಗೆ ಡಿನ್ನರ್ ಮಾಡಿದ್ದರು. ನಂತರ ದೆಹಲಿಯಲ್ಲಿ ಈ ಜೋಡಿ ಕಾಣಿಸಿಕೊಂಡಿತ್ತು. ಕ್ಯಾಶುಯಲ್ ಉಡುಗೆಯಲ್ಲಿ ದೆಹಲಿ ಹೋಟೆಲ್‌ನಿಂದ ಇಬ್ಬರು ನಿರ್ಗಮಿಸಿದ್ದರು. ಬಳಿಕ ವಿಮಾನದಲ್ಲಿ ಅಭಿಮಾನಿಗಳಿಗೆ ಸೆಲ್ಫಿ ಕೊಡುತ್ತಿರುವ ವೀಡಿಯೋವೊಂದು ಸಖತ್ ವೈರಲ್ ಆಗಿತ್ತು.

    ಸದ್ಯ ಬಿಟೌನ್‌ನಲ್ಲಿ ಸಾರಾ ಮತ್ತು ಶುಭಮನ್ ಗಿಲ್ ಲವ್ವಿ ಡವ್ವಿ ಬ್ರೇಕ್ ಅಪ್ (Breakup) ವಿಚಾರವೇ ಸಖತ್ ಸೌಂಡ್ ಮಾಡುತ್ತಿದೆ. ಅಷ್ಟಕ್ಕೂ ಈ ಸುದ್ದಿ  ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನ ಅಧಿಕೃತವಾಗಿ ಹೇಳುವವರೆಗೂ ಕಾದುನೋಡಬೇಕಿದೆ.

  • ಕೈ ಸನ್ನೆ ಮೂಲಕ ಡೇಟಿಂಗ್ ಬಗ್ಗೆ ಉತ್ತರಿಸಿದ ನಟಿ ಅದಿತಿ ರಾವ್ ಹೈದರಿ

    ಕೈ ಸನ್ನೆ ಮೂಲಕ ಡೇಟಿಂಗ್ ಬಗ್ಗೆ ಉತ್ತರಿಸಿದ ನಟಿ ಅದಿತಿ ರಾವ್ ಹೈದರಿ

    ಬೊಮ್ಮರಿಲ್ಲು ಖ್ಯಾತಿಯ ನಟ ಸಿದ್ದಾರ್ಥ್ ಮತ್ತು ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ಡೇಟಿಂಗ್ ವಿಚಾರ ಮತ್ತೆ ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿದೆ. ಇಬ್ಬರೂ ಒಟ್ಟಾಗಿ ಹಲವಾರು ಬಾರಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಸಿನಿಮಾವನ್ನೂ ಮಾಡಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ಜಂಟಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಇಬ್ಬರೂ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಲಿ ಅಲ್ಲಿ ಡೇಟಿಂಗ್ ವಿಚಾರವನ್ನು ಕೇಳಲಾಗುತ್ತದೆ. ಅವರು ಕೂಡ ಜಾಣ್ಮೆಯಿಂದಲೂ ಉತ್ತರಿಸುತ್ತಾರೆ.

    ಈವರೆಗೂ ಡೇಟಿಂಗ್ ವಿಚಾರವನ್ನು ಅಲ್ಲಗಳೆಯುತ್ತಲೇ ಬಂದಿರುವ ಈ ಜೋಡಿ ಇತ್ತೀಚೆಗೆ ಮಾತ್ರ ಸತ್ಯವನ್ನು ಒಪ್ಪಿಕೊಂಡಿದೆ. ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅದಿತಿ ರಾವ್ ಹೈದರಿ ಅವರಿಗೆ ಡೇಟಿಂಗ್ ಕುರಿತಾಗಿ ಪ್ರಶ್ನೆ ಮಾಡಿದಾಗ,  ಆ ಕುರಿತು ತಾವು ಏನೂ ಹೇಳುವುದಿಲ್ಲ ಎಂದು ಕೈ ಸನ್ನೆ ಮಾಡಿ ಹೇಳುವ ಮೂಲಕ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅದರಲ್ಲೂ ಜಾಣ ನಡೆ ಪ್ರದರ್ಶನ ಮಾಡಿದ್ದಾರೆ.

    ಇತ್ತೀಚಿಗಷ್ಟೇ ತೆಲುಗು ನಟ ಶರ್ವಾನಂದ್ (Sharwanand) ಎಂಗೇಜ್‌ಮೆಂಟ್‌ಗೆ ಸಿದ್ಧಾರ್ಥ್- ಅದಿತಿ ಜೋಡಿಯಾಗಿ ಬಂದು ಶುಭಹಾರೈಸಿದ್ದರು. ಈ ಬೆನ್ನಲ್ಲೇ ಸಿದ್-ಅದಿತಿ ಡೇಟಿಂಗ್ ಸುದ್ದಿಗೆ ಸದ್ದು ಮಾಡಿತ್ತು. ಅಷ್ಟಕ್ಕೂ ಈ ಡೇಟಿಂಗ್ ಸುದ್ದಿ ನಿಜಾನಾ ಎಂಬುದಕ್ಕೆ ನಟಿ ಅದಿತಿ ರಾವ್ ಹೈದರಿ (Aditi Rao Hydari) ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಲೇ ಬಂದಿದ್ದಾರೆ. ಇದನ್ನೂ ಓದಿ:ಮುದ್ದು ಮಗಳ ಜೊತೆಗಿನ ಚೆಂದದ ವೀಡಿಯೋ ಹಂಚಿಕೊಂಡ ಧ್ರುವ ಸರ್ಜಾ

    ನಟಿ ಅದಿತಿ- ಸಿದ್ಧಾರ್ಥ್ (Actor Siddarth) ಅವರು `ಮಹಾ ಸಮುದ್ರಂ’ ಎಂಬ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದ ಸೆಟ್‌ನಲ್ಲಿ ಇಬ್ಬರಿಗೂ ಪ್ರೇಮಾಂಕುರವಾಗಿದೆ ಎನ್ನಲಾಗುತ್ತಿದೆ. 2021ರಿಂದ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂಬೈನಲ್ಲಿ ರೆಸ್ಟೋರೆಂಟ್‌ನಲ್ಲಿ ಸಾಕಷ್ಟು ಬಾರಿ ಈ ಜೋಡಿ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು ಇದೆ. ಸದ್ಯ ಟಿಟೌನ್ ಅಂಗಳದಲ್ಲಿ ಈ ವಿಚಾರ ಅನೇಕರ ಚರ್ಚೆಗೆ ಗ್ರಾಸವಾಗಿದೆ.

    ಈ ಹಿಂದೆಯೂ ಅದಿತಿ ನಟನೆಯ `ತಾಜ್’ (Taj) ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಅದಿತಿಗೆ ಸಿದ್ಧಾರ್ಥ್ ಜೊತೆಗಿನ ಡೇಟಿಂಗ್ (Dating) ಬಗ್ಗೆ ಕೇಳಲಾಗಿತ್ತು. ನನಗೆ ತುಂಬಾ ಹಸಿವಾಗುತ್ತಿದೆ. ಹಾಗಾಗಿ ನಾನು ಹೋಗಿ ತಿನ್ನುತ್ತೇನೆ ಎಂದು ನಟಿ ಏನೂ ಹೇಳಲದೇ ಹೊರಟಿದ್ದರು. ಈ ಪ್ರಶ್ನೆಗೆ ಊಟದ ನೆಪ ಹೇಳುವ ಮೂಲಕ ನಟಿ ಜಾರಿಕೊಂಡಿದ್ದರು.

  • ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡಲಿಲ್ಲ ರಶ್ಮಿಕಾ

    ವಿಜಯ್ ದೇವರಕೊಂಡ ಹುಟ್ಟುಹಬ್ಬಕ್ಕೆ ವಿಶ್ ಮಾಡಲಿಲ್ಲ ರಶ್ಮಿಕಾ

    ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ  (Vijay Devarakonda) ನಡುವಿನ ಫ್ರೆಂಡ್ ಶಿಪ್ ಮುರಿದು ಬಿದ್ದಿದೆಯಾ? ಹಾಗಂತ ಮಾತನಾಡಿಕೊಳ್ಳುತ್ತಿದೆ ತೆಲುಗು ಹಾಗೂ ತಮಿಳು ಚಿತ್ರರಂಗ.  ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಅತೀ ಹೆಚ್ಚು ಗಾಸಿಪ್ ಗೆ ಒಳಗಾದ ಈ ಜೋಡಿ ಇದೀಗ ದೂರ ದೂರ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ವಿಜಯ್ ದೇವರಕೊಂಡರಿಂದ ರಶ್ಮಿಕಾ ಅಂತರವನ್ನು ಕಾಪಾಡಿಕೊಳ್ಳುತ್ತಿದ್ದಾರೆ.

    ವಿಜಯ್ ದೇವರಕೊಂಡ ಸಿನಿಮಾ ರಿಲೀಸ್ ಇರಲಿ, ಹುಟ್ಟು ಹಬ್ಬವೇ (Birthday) ಆಗಿರಲಿ ರಶ್ಮಿಕಾ ವಿಶೇಷವಾಗಿ ಸೆಲೆಬ್ರೇಟ್ ಮಾಡುತ್ತಿದ್ದರು. ಒಂದೊಳ್ಳೆ ಫೋಟೋ ಹಂಚಿಕೊಂಡು ವಿಶ್ ಮಾಡುತ್ತಿದ್ದರು. ಆದರೆ, ಈ ಬಾರಿಯ ಹುಟ್ಟು ಹಬ್ಬಕ್ಕೆ ಅದ್ಯಾವುದೂ ಆಗಿಲ್ಲ. ವಿಜಯ್ ದೇವರಕೊಂಡ ಹುಟ್ಟು ಹಬ್ಬದ ಬಗ್ಗೆ ಒಂದು ಅಕ್ಷರ ಕೂಡ ಬರೆದಿಲ್ಲ. ಅಲ್ಲದೇ, ಹುಟ್ಟು ಹಬ್ಬದ ಸಂಭ‍್ರಮದಲ್ಲೂ ಭಾಗಿಯಾಗಿಲ್ಲ. ಇದನ್ನೂ ಓದಿ:ಲವರ್‌ಗಾಗಿ ಕವಿತೆ ಬರೆದ ‘ಗಟ್ಟಿಮೇಳ’ ನಟಿ ನಿಶಾ? ಹುಡುಗ ಯಾರು?

    ಈ ಜೋಡಿಯ ನಡೆ ಈವರೆಗೂ ಅರ್ಥವಾಗುತ್ತಿಲ್ಲ ಎನ್ನುವ ಮಾತುಗಳನ್ನೂ ಹಲವರು ಆಡಿದ್ದಾರೆ. ಸಡನ್ನಾಗಿ ವಿದೇಶದಲ್ಲಿ ಕಾಣಿಸಿಕೊಳ್ಳುವ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಆನಂತರ ಇಬ್ಬರ ಮಧ್ಯೆ ಏನೂ ಇಲ್ಲ ಎನ್ನುವಂತೆ ಉಳಿದುಕೊಂಡು ಬಿಡುತ್ತಾರೆ. ಇಬ್ಬರಿಗೂ ಪರಿಚಯವೇ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಹೀಗಾಗಿ ಡೇಟಿಂಗ್ (Dating) ವಿಚಾರವಾಗಿ ಈ ಜೋಡಿಯನ್ನೇ ಸೀರಿಯಸ್ ಆಗಿಯೂ ತಗೆದುಕೊಂಡಿಲ್ಲ.

    ವಿಜಯ್ ದೇವರಕೊಂಡ ಹುಟ್ಟು ಹಬ್ಬಕ್ಕೆ ಈ ಬಾರಿ ರಶ್ಮಿಕಾ ವಿಶ್ ಮಾಡದೇ ಇರೋದು ಸಾಕಷ್ಟು ಅನುಮಾನ ಮತ್ತು ಚರ್ಚೆಯನ್ನು ಹುಟ್ಟು ಹಾಕಿದೆ. ನಿಜವಾಗಿಯೂ ಇವರು ಬ್ರೇಕ್ ಅಪ್ (Break Up) ಮಾಡಿಕೊಂಡಿದ್ದಾರಾ ಅಥವಾ ಜನರಿಗೆ ಕಾಣದಂತೆ ಲವ್ವಿಡವ್ವಿ ನಡೆಸ್ತಿದ್ದಾರಾ ಎನ್ನುವ ಅನುಮಾನವನ್ನೂ ವ್ಯಕ್ತ ಪಡಿಸಿದ್ದಾರೆ. ಆದರೆ, ಈ ಬಾರಿ ರಶ್ಮಿಕಾ ವಿಶ್ ಮಾಡದೇ ಇರುವುದು ಭಾರೀ ಕುತೂಹಲವನ್ನಂತೂ ಮೂಡಿಸಿದೆ.

  • ನಟಿ ಶೋಭಿತಾ ಜೊತೆಗಿನ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ನಾಗ ಚೈತನ್ಯ

    ನಟಿ ಶೋಭಿತಾ ಜೊತೆಗಿನ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ನಾಗ ಚೈತನ್ಯ

    ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಮೂಲಕ ಮತ್ತೆ ಸದ್ದು ಮಾಡುತ್ತಿರುವ ನಟಿ ಶೋಭಿತಾ ಧೂಲಿಪಾಲ (Shobhita Dhulipala) ಈ ಹಿಂದೆ ಡೇಟಿಂಗ್ (Dating) ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ಅದರಲ್ಲೂ ನಟ ನಾಗ ಚೈತನ್ಯ (Naga Chaitanya) ಜೊತೆ ಲಂಡನ್ ಹೋಟೆಲ್ ವೊಂದರಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ನಾಗ ಚೈತನ್ಯ ಮತ್ತು ಶೋಭಿತಾ ಡೇಟಿಂಗ್ ಮಾಡುತ್ತಿರುವ ವಿಚಾರ ಹಲವು ಅನುಮಾನಗಳನ್ನೂ ಮೂಡಿಸಿತ್ತು.

    ಸಮಂತಾ (Samantha) ಜೊತೆಗಿನ ಬಾಂಧವ್ಯ ಕಡಿದುಕೊಂಡ ನಂತರ ನಾಗ ಚೈತನ್ಯ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಈ ವೇಳೆಯಲ್ಲಿ ಗೆಳೆತನಕ್ಕೆ ಸಿಕ್ಕವರೇ ಶೋಭಿತಾ ಎಂದು ಹೇಳಲಾಗುತ್ತಿದೆ. ನಾಗ ಚೈತನ್ಯಗೆ ಸ್ನೇಹಿತೆಯಾಗಿ ಅವರ ಜೀವನವನ್ನು ಮತ್ತಷ್ಟು ಚಂದಗೊಳಸಿದರು ಎನ್ನುವ ಮಾತಿದೆ. ಹಾಗಾಗಿ ಇಬ್ಬರೂ ಒಟ್ಟಿಗೆ ಹಲವು ದೇಶಗಳನ್ನು ಸುತ್ತಿದ್ದಾರೆ ಎನ್ನವುದಕ್ಕೆ ಲಂಡನ್ ನಲ್ಲಿ ಸಿಕ್ಕ ಫೋಟೋ ಸಾಕ್ಷಿ ಹೇಳಿತ್ತು.

    ಡೇಟಿಂಗ್ ವಿಚಾರ ಸಾಕಷ್ಟು ಸದ್ದು ಮಾಡಿದ್ದರೂ, ಈವರೆಗೂ ಒಂದೇ ಒಂದು ಪ್ರತಿಕ್ರಿಯೆ ಕೂಡ ನಾಗ ಚೈತನ್ಯ ಕೊಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ಶೋಭಿತಾ ಜೊತೆಗಿನ ಡೇಟಿಂಗ್ ವಿಚಾರವನ್ನು ಮಾತನಾಡಿದ್ದು, ಜೊತೆಗೆ ಡಿವೋರ್ಸ್ ಬಳಿಕದ ಜೀವನವನ್ನೂ ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ. ಸಮಂತಾ ಬಗ್ಗೆಯೂ ಮಾತನಾಡಿದ್ದಾರೆ. ಇದನ್ನೂ ಓದಿ:ವಿಧಾನಸಭೆ ಚುನಾವಣೆ 2023: ಸುದೀಪ್ ರೋಡ್ ಶೋ ಮತ್ತೆ ರದ್ದು

    ‘ಡಿವೋರ್ಸ್ (Divorce) ಬಳಿಕ ತಾವು ಯಾವತ್ತೂ ಖಿನ್ನತೆಗೆ ಒಳಗಾಗಿಲ್ಲ, ಎಲ್ಲವೂ ಪಾಠ. ಅದರ ಬಗ್ಗೆ ನನಗೆ ಯಾವುದೇ ಪಶ್ಚಾತಾಪವಿಲ್ಲ ಎಂದಿದ್ದಾರೆ ನಾಗ ಚೈತನ್ಯ. ಅಲ್ಲದೇ ಶೋಭಿತಾ ಡೇಟಿಂಗ್ ವಿಚಾರದ ಬಗ್ಗೆ ತಮಗೇನೂ ಗೊತ್ತಿಲ್ಲ.  ಆ ಕುರಿತು ಮಾತನಾಡಲಾರೆ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

  • ಬಾಯ್ ಫ್ರೆಂಡ್ ಜೊತೆ ಮತ್ತೆ ಹೋಟೆಲ್ ನಲ್ಲಿ ಕಾಣಿಸಿಕೊಂಡ ತಮನ್ನಾ

    ಬಾಯ್ ಫ್ರೆಂಡ್ ಜೊತೆ ಮತ್ತೆ ಹೋಟೆಲ್ ನಲ್ಲಿ ಕಾಣಿಸಿಕೊಂಡ ತಮನ್ನಾ

    ವಿಜಯ್ ವರ್ಮಾ ಮತ್ತು ತಮ್ಮ ನಡುವೆ ಅಂಥದ್ದು ಏನೂ ಇಲ್ಲ, ನಾವು ಜಸ್ಟ್ ಫ್ರೆಂಡ್ ಎಂದಿದ್ದ ತಮನ್ನಾ (Tamanna) ಪದೇ ಪದೇ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೇ ಹೋಟೆಲ್ ಗೆ ಬಂದು ಒಂದೇ ಕಾರಿನಲ್ಲಿ ತೆರಳಿರುವ ವಿಡಿಯೋ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಡೇಟಿಂಗ್ (Dating) ವಿಚಾರವನ್ನು ಮುಚ್ಚಿಟ್ಟು ಇವರು ಈ ರೀತಿ ಸುತ್ತಾಡುತ್ತಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

    ತಮ್ಮ ಮತ್ತು ವಿಜಯ್ ವರ್ಮಾ (Vijay Varma)  ಡೇಟಿಂಗ್ ಸುದ್ದಿಯು ವೈರಲ್ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. ಈಗಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ತಮನ್ನಾ ಸಂದರ್ಶನವೊಂದರಲ್ಲಿ ಮೌನ ಮುರಿದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಲಿಪ್ ಲಾಕ್ ವೀಡಿಯೋ ವೈರಲ್ ಆದ ಮೇಲೆ ಸ್ಪಷ್ಟನೆ ನೀಡುವ ಕೆಲಸಕ್ಕೆ ಕೈ ಹಾಕಿದ್ದರು. ಇದನ್ನೂ ಓದಿ:ಮತ್ತೆ ಕಿರುತೆರೆಯತ್ತ ದೀಪಿಕಾ ದಾಸ್

    ವಿಜಯ್‌ ವರ್ಮಾ ಜೊತೆಗಿನ ಡೇಟಿಂಗ್ ವಿಚಾರವನ್ನು ತಳ್ಳಿ ಹಾಕಿದ್ದ ಅವರು, ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದು ಹೇಳಿದ್ದರು.

    ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ʻಲಸ್ಟ್ ಸ್ಟೋರಿ -2′ (Love Story) ಸಿನಿಮಾ ಸೆಟ್‌ನಲ್ಲಿ ಮೊದಲು ಭೇಟಿಯಾಗಿದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿ ಬದಲಾಗಿದೆ ಎನ್ನಲಾಗುತ್ತಿದೆ. ಇಬ್ಬರೂ ಕದ್ದು ಮುಚ್ಚಿ ಪ್ರೀತಿ ಮಾಡುತ್ತಿದ್ದರು. ಆದರೆ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಇಬ್ಬರ ಪ್ರೀತಿ ಬಹಿರಂಗವಾಗಿತ್ತು. ಇದೀಗ ಇಬ್ಬರೂ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡುತ್ತಿದೆ.

  • ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

    ವಿಜಯ್‌ ವರ್ಮಾ ಜೊತೆ KGF ನಟಿ ತಮನ್ನಾ ಡಿನ್ನರ್‌ ಡೇಟ್‌

    ಬಾಲಿವುಡ್‌ನಲ್ಲಿ (Bollywood) ಸದ್ಯ ಸದ್ದು ಮಾಡ್ತಿರುವ ಜೋಡಿ ಅಂದರೆ ವಿಜಯ್ ವರ್ಮಾ- ತಮನ್ನಾ ಭಾಟಿಯಾ. ಇಬ್ಬರ ಬಗ್ಗೆ ಸಾಕಷ್ಟು ಸಮಯದಿಂದ ಲವ್ವಿ ಡವ್ವಿ ಕಥೆ ಕೇಳಿ ಬರುತ್ತಿದೆ. ವಿಜಯ್- ತಮನ್ನಾ ಇಬ್ಬರೂ ಇದರ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಇದೀಗ ಮತ್ತೆ ಈ ಜೋಡಿ ಸುದ್ದಿಯಲ್ಲಿದ್ದಾರೆ.

    ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್, ಸಿದ್-ಕಿಯಾರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬೆನ್ನಲ್ಲೇ ವಿಜಯ್ ವರ್ಮಾ- ತಮನ್ನಾ ಭಾಟಿಯಾ (Tamanna Bhatia) ಮದುವೆ (Wedding) ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ ಎಂಬ ಗುಸು ಗುಸು ಬಿಟೌನ್‌ನಲ್ಲಿ ಶುರುವಾಗಿದೆ. ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಎಂದು ಹೇಳುತ್ತಿದ್ದ ಈ ಜೋಡಿಯ ಡೇಟಿಂಗ್ ಜೋರಾಗಿದೆ.

     

    View this post on Instagram

     

    A post shared by Manav Manglani (@manav.manglani)

    ಇದೀಗ ವಿಜಯ್- ತಮನ್ನಾ ಡಿನ್ನರ್‌ಗೆ ಹಾಜರಾಗುವ ಮೂಲಕ ತಮ್ಮ ಡೇಟಿಂಗ್ ವದಂತಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದ್ದಾರೆ. ಇಬ್ಬರೂ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕಾರಿನಲ್ಲಿ ಬಂದ ತಮನ್ನಾ ಮತ್ತು ವಿಜಯ್ ವರ್ಮಾ (Vijay Varma)  ಇಬ್ಬರೂ ಪಾಪರಾಜಿಗಳ ಮುಂದೆ ಕಾಣಿಸಿಕೊಂಡಿದ್ದಾರೆ. ಬಳಿಕ ಇಬ್ಬರೂ ನಗು ಬೀರುತ್ತಾ ಒಟ್ಟಿಗೆ ಕಾರಿನಲ್ಲಿ ಹೊರಟರು. ವಿಜಯ್ ವರ್ಮಾ ಕಾರು ಚಲಾಯಿಸುತ್ತಿದ್ದರೆ ತಮನ್ನಾ ಪಕ್ಕದಲ್ಲಿ ಕುಳಿತಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸದ್ದು ಮಾಡ್ತಿದೆ.