Tag: Dating Rumours

  • ರೂಮರ್ ಬಾಯ್‍ಫ್ರೆಂಡ್ ಜೊತೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಮಂತಾ!

    ರೂಮರ್ ಬಾಯ್‍ಫ್ರೆಂಡ್ ಜೊತೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಮಂತಾ!

    ವಿಚ್ಛೇದನ ಪಡೆದು ಒಂಟಿಯಾಗಿದ್ದ ಸಮಂತಾ (Samantha) ಹೆಸರು ಇತ್ತೀಚೆಗೆ ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಜೊತೆ ಥಳುಕು ಹಾಕಿಕೊಂಡಿತ್ತು. ದುಬೈನಲ್ಲಿ ಇಬ್ಬರೂ ಕೈ ಹಿಡಿದು ಓಡಾಡುವ ಫೋಟೋ ವೈರಲ್ ಆದ್ಮೇಲಂತೂ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಇದೀಗ ಮುಂಬೈನ ಬಾಂದ್ರಾದಲ್ಲಿ ಒಟ್ಟಿಗೆ ಕಾಣಿಸ್ಕೊಂಡು ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದೀಗ ಪ್ರೀತಿ ವದಂತಿಗೆ (Dating Rumours) ಇನ್ನಷ್ಟು ರೆಕ್ಕೆ ಪುಕ್ಕ ಬಂದಂತಾಗಿದೆ.

    ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಕೊಂಚ ಹೆಚ್ಚೇ ಅನ್ಯೋನ್ಯವಾಗಿರೋದು ಹಲವು ಬಾರಿ ಸುದ್ದಿಯಾಗಿತ್ತು. ಇಬ್ಬರೂ ಒಟ್ಟಿಗೆ ಫ್ಯಾಮಿಲಿ ಮ್ಯಾನ್ ಹಾಗೂ ಸಿಟಾಡೆಲ್ ವೆಬ್‍ಸಿರೀಸ್‍ಗಳನ್ನ ಮಾಡುವಾಗ ಹೆಚ್ಚಿನ ಒಡನಾಟ ಸಾಮಾನ್ಯ. ಆದರೂ ಅದಕ್ಕೂ ಮೀರಿ ಇಬ್ಬರ ನಡುವಿನ ಸ್ನೇಹ, ಪ್ರೀತಿಗೆ ತಿರುಗಿದೆ ಎನ್ನಲಾಗಿತ್ತು. ಇದೀಗ ಆ ವದಂತಿಗೆ ಬಲವಾದ ಸಾಕ್ಷ್ಯ ಸಿಕ್ಕಂತಾಗಿದೆ. ಇನ್ಮೇಲೆ ಯಾಕೆ ಮುಚ್ಚುಮರೆ ಎಂಬಂತೆ ಒಟ್ಟಿಗೆ ಕಾಣಿಸ್ಕೊಂಡಿದೆ ಈ ಜೋಡಿ. ಇದನ್ನೂ ಓದಿ: ವದಂತಿಗೆ ಫುಲ್‌ಸ್ಟಾಪ್ – ಪ್ರೆಗ್ನೆನ್ಸಿ ಘೋಷಿಸಿದ ಕತ್ರಿನಾ ಕೈಫ್

    ರೆಗ್ಯುಲರ್ ಆಗಿ ಮುಂಬೈನಲ್ಲಿ ಸಮಂತಾ ಜಿಮ್ ಮುಗಿಸಿ ವಾಪಸ್ ಬರುವಾಗ ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗುತ್ತಾರೆ. ಈ ಬಾರಿ ವಿಶೇಷ ಅಂದ್ರೆ ಸಮಂತಾ ಜೊತೆ ರಾಜ್ ಕೂಡ ಕಾಣಿಸ್ಕೊಂಡಿದ್ದಾರೆ. ಮೊದಲು ರಾಜ್ ಹೊರಬಂದು ಕಾರಿನೊಳಗೆ ಕುಳಿತ್ರು. ಬಳಿಕ ಒಂದೇ ನಿಮಿಷದಲ್ಲಿ ಸಮಂತಾ ಹೊರಬಂದು ಅದೇ ಕಾರಿನಲ್ಲಿ ಕುಳಿತು ಜೊತೆಯಾಗಿ ತೆರಳಿದ್ದಾರೆ. ಪ್ರಸ್ತುತ ಈ ಬೆಳವಣಿಗೆ ಇಬ್ಬರ ನಡುವೆ ಪ್ರೀತಿ ಚಿಗುರಿರೋ ಸುದ್ದಿಗೆ ಸೀಲ್ ಹೊಡೆದಂತಾಗಿದೆ. ಈ ಬಗ್ಗೆ ಸಮಂತಾ ಯಾವ ರೀತಿ ಪ್ರತಿಕ್ರಿಯೆ ಕೊಡ್ತಾರೋ ಕಾದು ನೋಡ್ಬೇಕು. ಇದನ್ನೂ ಓದಿ: ರಿಷಬ್ ಬಗ್ಗೆ ನನಗೆ ಹೆಮ್ಮೆ ಇದೆ – ಪತ್ನಿ ಪ್ರಗತಿ ಶೆಟ್ಟಿ ಭಾವುಕ ನುಡಿ

  • ಧನುಷ್ ನನ್ನ ಗೆಳೆಯ – ಡೇಟಿಂಗ್ ವದಂತಿಗೆ ತೆರೆ ಎಳೆದ ಮೃಣಾಲ್ ಠಾಕೂರ್

    ಧನುಷ್ ನನ್ನ ಗೆಳೆಯ – ಡೇಟಿಂಗ್ ವದಂತಿಗೆ ತೆರೆ ಎಳೆದ ಮೃಣಾಲ್ ಠಾಕೂರ್

    ಖ್ಯಾತ ನಟ ನಟ ಧನುಷ್ (Dhanush) ಮತ್ತು ನಟಿ ಮೃಣಾಲ್ ಠಾಕೂರ್ (Mrunal Thakur) ನಡುವೆ ಲವ್ ಇದೆ, ಇಬ್ಬರು ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ವದಂತಿಗೆ ಖುದ್ದು ಮೃಣಾಲ್‌ ತೆರೆ ಎಳೆದಿದ್ದಾರೆ.

    ಕೆಲ ದಿನಗಳಿಂದ ಮೃಣಾಲ್‌ ಜೊತೆಗೆ ಧನುಷ್‌ ಡೇಟಿಂಗ್‌ (Dating Rumours) ನಡೆಸುತ್ತಿದ್ದಾರೆ ಅನ್ನೋ ವದಂತಿ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡ್ತಿತ್ತು. ಆದ್ರೆ ಈ ಬಗ್ಗೆ ಧನುಷ್‌ ಆಗಲಿ, ನಟಿ ಆಗಲಿ ಯಾವುದೇ ರಿಯಾಕ್ಷನ್‌ ಕೊಟ್ಟಿರಲಿಲ್ಲ. ಆದರೀಗ ಮೃಣಾಲ್ ಠಾಕೂರ್ ಅವ್ರೇ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್; ದರ್ಶನ್, ಪವಿತ್ರಾ ಗೌಡ ಸೇರಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು

    ನಾನು ಮತ್ತು ಧನುಷ್ ಉತ್ತಮ ಸ್ನೇಹಿತರು. ನಮ್ಮಿಬ್ಬರ ಬಗ್ಗೆ ಬಹಳಷ್ಟು ಸುದ್ದಿಗಳು ಹರಿದಾಡುತ್ತಿವೆ ಅನ್ನೋದು ಗಮನಕ್ಕೆ ಬಂದಿದೆ. ಮೊದಲು ನೋಡಿದಾಗ ತಮಾಷೆಗೆ ಅಂದುಕೊಂಡಿದ್ದೆ. ‘ಸನ್ ಆಫ್ ಸರ್ದಾರ್ 2’ ಸಿನಿಮಾದ ಪ್ರೀಮಿಯರ್‌ಗೆ ಧನುಷ್ ಹಾಜರಾಗಿದ್ದರು. ಹಾಗಂದ ಮಾತ್ರಕ್ಕೆ ಯಾರೂ ಅದನ್ನ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಅಂದಹಾಗೆ, ಧನುಷ್ ಅವರನ್ನು ಅಜಯ್ ದೇವಗನ್ ಆಹ್ವಾನಿಸಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: `ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್

    ಡೇಟಿಂಗ್‌ ವದಂತಿ ಹಬ್ಬಿದ್ದೇಕೆ?
    ಈಚೆಗೆ ಮೃಣಾಲ್ ಠಾಕೂರ್ ಅವರ ಹುಟ್ಟುಹಬ್ಬವಿತ್ತು. ಅಲ್ಲಿಗೆ ಧನುಷ್ ಆಗಮಿಸಿದ್ದರು. ಅದಕ್ಕೂ ಮುನ್ನ ಅಜಯ್ ದೇವ್‌ಗನ್ ಮತ್ತು ಮೃಣಾಲ್ ಠಾಕೂರ್ ನಟನೆಯ ‘ಸನ್ ಆಫ್ ಸರ್ದಾರ್ 2’ ಸಿನಿಮಾದ ಪ್ರೀಮಿಯರ್ ಶೋಗೂ ಧನುಷ್ ಆಗಮಿಸಿದ್ದರು. ಈ ವೇಳೆ ಪ್ರೀಮಿಯರ್ ರೆಡ್ ಕಾರ್ಪೆಟ್ ಬಳಿ ಧನುಷ್ ಬಂದಾಗ, ಸ್ವತಃ ಮೃಣಾಲ್ ಹೋಗಿ ಕರೆದುಕೊಂಡು ಬಂದಿದ್ದರು. ಆ ಕ್ಷಣದ ಅವರಿಬ್ಬರ ನಡುವಿನ ಆಪ್ತತೆ ಹಲವರ ಕಣ್ಣು ಕುಕ್ಕಿತ್ತು. ಹೀಗಾಗಿ ಇಬ್ಬರ ನಡುವೆ ಸಂಥಿಗ್‌, ಸಂಥಿಕ್‌ ನಡೀತಿದೆ ಎಂದೇ ಹೇಳಲಾಗಿತ್ತು.

    ಐಶ್ವರ್ಯಾರಿಂದ ದೂರವಾಗಿರುವ ಧನುಷ್
    ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ ಅವರನ್ನು ನಟ ಧನುಷ್ ಪ್ರೀತಿಸಿ ಮದುವೆ ಆಗಿದ್ದರು. ಆದರೆ 2022ರಲ್ಲಿ ಇವರು ದೂರವಾಗುತ್ತಿರುವುದಾಗಿ ಹೇಳಿಕೊಂಡಿದ್ದರು. ಬಳಿಕ 2024ರ ನವೆಂಬರ್‌ನಲ್ಲಿ ನ್ಯಾಯಾಲಯವು ಇವರಿಗೆ ವಿಚ್ಛೇದನ ನೀಡಿತ್ತು. ಇದನ್ನೂ ಓದಿ: ಉಂಗುರಕ್ಕೆ 9ನೇ ವರ್ಷದ ಸಂಭ್ರಮ – ವಿಶೇಷ ನೆನಪು ಹಂಚಿಕೊಂಡ ರಾಧಿಕಾ