Tag: Dating

  • ಧನುಶ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?

    ಧನುಶ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?

    ಮಿಳು ನಟ ಧನುಶ್ (Dhanush) ಹಾಗೂ ಸೀತಾ ರಾಮಂ ಬೆಡಗಿ ಮೃಣಾಲ್ ಠಾಕೂರ್ (Mrunal Thakur) ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ. ಇದಕ್ಕೆ ಸಾಕ್ಷಿ ಇಬ್ಬರ ನಡುವಿನ ಭಾರೀ ಅನ್ಯೋನ್ಯತೆ.

    ಇಬ್ಬರೂ ಒಟ್ಟಿಗೆ ಸಿನಿಮಾದಲ್ಲಿ ನಟಿಸದಿದ್ದರೂ ಈ ಮಟ್ಟಿಗೆ ಸ್ನೇಹ ಹೇಗೆ ಉಂಟಾಯಿತು ಎಂದು ಪ್ರಶ್ನೆ ಹುಟ್ಟುಹಾಕಿದೆ. ಮೃಣಾಲ್ ಕೈ ಹಿಡಿದಿರುವ ಧನುಶ್ ಫೋಟೋ ವೈರಲ್ ಆಗಿದೆ. ಅಷ್ಟಕ್ಕೂ ಇದು ನಡೆದಿದ್ದು ತೇರೆ ಇಷ್ಕ್ ಮೆ ಚಿತ್ರದ ಶೂಟಿಂಗ್ ರ‍್ಯಾಪ್ ಅಪ್ ಪಾರ್ಟಿಯಲ್ಲಿ ಎಂದು ಹೇಳಲಾಗುತ್ತಿದೆ.

    ಈ ಚಿತ್ರಕ್ಕೂ ಮೃಣಾಲ್‌ಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಮೃಣಾಲ್ ಈ ಪಾರ್ಟಿಯಲ್ಲಿದ್ದರು ಎನ್ನಲಾಗುವ ಫೋಟೋ ವೈರಲ್‌ ಆಗಿದೆ. ಇಬ್ಬರ ನಡುವಿನ ಆಪ್ತತೆ ನೋಡುಗರಲ್ಲಿ ಪ್ರೇಮ ಸಂಬಂಧವನ್ನೇ ಕಲ್ಪಿಸುತ್ತಿದೆ.

    ಈ ಹಿಂದೆ ಮೃಣಾಲ್ ಅಭಿನಯದ ಸನ್ ಆಫ್ ಸರ್ದಾರ್ 2 ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್‌ನಲ್ಲಿ ಪಾಲ್ಗೊಳ್ಳಲು ಚೆನ್ನೈನಿಂದ ಮುಂಬೈಗೆ ಧನುಶ್‌ ಬಂದಿದ್ದರು. ಈ ಎರಡು ಘಟನೆಗಳು ಅನುಮಾನಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ಇದನ್ನೂ ಓದಿ: `ಕೇರಂ, ಬ್ಯಾಡ್ಮಿಂಟನ್ ಆಡುವಾಗ ಸೆಕೆಂಡ್‍ನಲ್ಲಿ ಸೋಲಿಸುತ್ತಿದ್ದರು’- ಸುಮಲತಾ ನೆನಪು ಹಂಚಿಕೊಂಡಿದ್ದು ಯಾರ ಬಗ್ಗೆ?

    ಇಬ್ಬರ ಮೊದಲ ಭೇಟಿ ಸೀತಾರಾಮಂ ಸಕ್ಸಸ್ ಇವೆಂಟ್‌ನಲ್ಲಿ ನಡೆದಿತ್ತು. ಅಲ್ಲಿಂದ ಸ್ನೇಹ ಶುರುವಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಅಂದಹಾಗೆ ಧನುಶ್ ಈಗಾಗಲೇ ರಜನಿಕಾಂತ್ ಪುತ್ರಿ ಐಶ್ವರ್ಯರನ್ನು (Aishwarya Rajinikanth) ವಿವಾಹವಾಗಿ ವಿಚ್ಛೇದನವನ್ನು (Divorce) ನೀಡಿದ್ದರು.

    ಇಬ್ಬರು ಪರಸ್ಪರ ಬೇರೆಯಾಗುವು ಬಗ್ಗೆ ಧನುಶ್ 2022ರಲ್ಲೇ ಘೋಷಿಸಿದ್ದರು. ಇದೀಗ ಅಧಿಕೃತ ವಿಚ್ಛೇದನವೂ ಆಗಿದೆ. ವಿಚ್ಛೇದನಕ್ಕೆ ಅಸಲಿ ಕಾರಣ ತಿಳಿದುಬಂದಿರಲಿಲ್ಲ. ಇದೀಗ ಮೃಣಾಲ್ ಜೊತೆ ಧನುಶ್ ಇನ್ನಿಲ್ಲದ ಸ್ನೇಹ ಇನ್ನೇನೇನೋ ಗಾಸಿಪ್‌ಗೆ ದಾರಿಮಾಡಿಕೊಟ್ಟಿದೆ.

  • ನಾನಿನ್ನೂ ಸಿಂಗಲ್‌, ಮದ್ವೆಯಾಗಲು ನಾನು ಬಯಸುವವರ ಜೊತೆ ಮಾತ್ರ ಡೇಟಿಂಗ್‌ – ಚಹಲ್‌ ಜೊತೆ ಕಾಣಿಸಿಕೊಂಡ ಬ್ಯೂಟಿ ಸ್ಪಷ್ಟನೆ

    ನಾನಿನ್ನೂ ಸಿಂಗಲ್‌, ಮದ್ವೆಯಾಗಲು ನಾನು ಬಯಸುವವರ ಜೊತೆ ಮಾತ್ರ ಡೇಟಿಂಗ್‌ – ಚಹಲ್‌ ಜೊತೆ ಕಾಣಿಸಿಕೊಂಡ ಬ್ಯೂಟಿ ಸ್ಪಷ್ಟನೆ

    ಮುಂಬೈ: ಇತ್ತೀಚೆಗೆ ಟೀಂ ಇಂಡಿಯಾ ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಜೊತೆ ಕಾಣಿಸಿಕೊಂಡಿದ್ದ ಬ್ಯೂಟಿ ಆರ್‌ಜೆ ಮಹ್ವಾಷ್ (RJ Mahvash) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಚಹಲ್‌ ಅವರೊಂದಿಗೆ ಡೇಟಿಂಗ್‌ ಸುದ್ದಿ ಹರಿದಾಡುತ್ತಿದ್ದಂತೆ ವದಂತಿಗಳಿಗೆ ಫುಲ್‌ಸ್ಟಾಪ್‌ ಹಾಕಿದ್ದಾರೆ. ನಾನು ಮದುವೆಯಾಗಲು ಬಯಸುವವರ ಜೊತೆಗೆ ಮಾತ್ರ ಡೇಟಿಂಗ್‌ ಮಾಡ್ತೀನಿ ಅಂತ ಸ್ಪಷ್ಟನೆ ನೀಡಿದ್ದಾರೆ.

     

    View this post on Instagram

     

    A post shared by Mahvash (@rj.mahvash)

    ಕಳೆದ ತಿಂಗಳು ಮುಕ್ತಾಯಗೊಂಡ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಪಂದ್ಯದ ವೇಳೆ ಚಹಲ್‌ (Yuzvendra Chahal) ಜೊತೆಗೆ ಮಹ್ವಾಷ್‌ ಕಾಣಿಸಿಕೊಂಡಿದ್ದರು. ಆದ್ರೆ ನೃತ್ಯ ಸಂಯೋಜಕಿ ಧನಶ್ರೀ ವರ್ಮಾ (Dhanashree Verma) ಅವರಿಂದ ವಿಚ್ಛೇದನ ಪಡೆದ ಬಳಿಕ ಚಹಲ್‌ ಮತ್ತು ಮಹ್ವಾಷ್‌ ಅವರ ಡೇಟಿಂಗ್‌ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಹೈಪ್‌ ಕ್ರಿಯೆಟ್‌ ಮಾಡಿತ್ತು. ಅಲ್ಲದೇ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಹೇಳಿಕೆಗಳೂ ಕೇಳಿಬಂದಿತ್ತು. ಇದೀಗ ಈ ಎಲ್ಲ ವದಂತಿಗಳಿಗೆ ಆರ್‌ಜೆ ಮಹ್ವಾಷ್‌ ಫುಲ್‌ಸ್ಟಾಪ್‌ ಹಾಕಿದ್ದಾರೆ.

    ಪಾಡ್‌ಕಾಸ್ಟ್‌ವೊಂದರಲ್ಲಿ ಮಾತಮಾಡಿದ ಅವರು, ಸದ್ಯಕ್ಕೆ ನಾನಿನ್ನೂ ಸಿಂಗಲ್, ಮದುವೆ ಪರಿಕಲ್ಪನೆಯೇ ನನಗೆ ಅರ್ಥವಾಗುತ್ತಿಲ್ಲ. ಈ ಮೊದಲು ನನಗೆ ನಿಶ್ಚಿತಾರ್ಥ ಆಗಿತ್ತು, ಆ ಸಂಬಂಧವೂ ಮುರಿದುಬಿದ್ದಿತು. ಹಾಗಾಗಿ ನಾನು ಕ್ಯಾಷುವಲ್ ಡೇಟಿಂಗ್ ಹೋಗಲ್ಲ, ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ನಾನು ಮದುವೆಯಾಗಲು ಬಯಸಿದವರ ಜೊತೆ ಮಾತ್ರ ಡೇಟಿಂಗ್‌ಗೆ ಹೋಗಲು ಬಯಸುತ್ತೇನೆ. ಆದ್ರೆ ಸದ್ಯಕ್ಕೆ ಈ ಯಾವ ಯೋಚನೆಯೂ ನನಗಿಲ್ಲ ಎಂದಿದ್ದಾರೆ.

    ತನಗೆ 19ನೇ ವಯಸ್ಸಿನಲ್ಲೇ ನಿಶ್ಚಿತಾರ್ಥ ಆಗಿತ್ತು, ಮದ್ವೆಗೆ 2 ವರ್ಷ ಸಮಯವಿತ್ತು. ಆದ್ರೆ ತಾನು 21 ವರ್ಷ ವಯಸ್ಸಿನವಳಿದ್ದಾಗ, ಮದುವೆ ಸಂಬಂಧವನ್ನು ರದ್ದುಗೊಳಿಸಿದೆ. ಏಕೆಂದರೆ ನನಗೆ ಹೊಂದಿಕೆಯಾಗುವಂತಹ ಒಳ್ಳೆಯ ಗಂಡ ಸಿಗಬೇಕು ಅನ್ನೋದೊಂದೇ ನನ್ನ ಬಯಕೆಯಾಗಿತ್ತು. ಮುಂದೆ ಅಂತಹ ತಪ್ಪು ಆಗದಂತೆ ನಾನು ನೋಡಿಕೊಳ್ಳಲು ಬಯಸುತ್ತಿದ್ದೇನೆ ಎಂದು ಮಹ್ವಾಷ್‌ ಹೇಳಿಕೊಂಡಿದ್ದಾರೆ.

  • ನಿಶಾಂತ್ ಜೊತೆ ಡೇಟಿಂಗ್ ವಿಚಾರ: ನಟಿ ಕಂಗನಾ ಪ್ರತಿಕ್ರಿಯೆ

    ನಿಶಾಂತ್ ಜೊತೆ ಡೇಟಿಂಗ್ ವಿಚಾರ: ನಟಿ ಕಂಗನಾ ಪ್ರತಿಕ್ರಿಯೆ

    ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut) ಡೇಟಿಂಗ್ (Dating)ನಲ್ಲಿ ಇರುವ ವಿಚಾರ ಹಾಗಾಗ್ಗೆ ಮುನ್ನೆಲೆಗೆ ಬರುತ್ತದೆ. ಅದರಲ್ಲೂ ಈಸ್ ಮೈಟ್ರಿಪ್ ಸಂಸ್ಥಾಪಕ ನಿಶಾಂತ್ ಪಿಟ್ಟಿ (Nishant Pitti) ಜೊತೆ ಕಂಗನಾ ಕಾಣಿಸಿಕೊಂಡಾಗೆಲ್ಲ ಇಬ್ಬರ ಹೆಸರೂ ತಳುಕು ಹಾಕಿಕೊಳ್ಳುತ್ತದೆ. ಈ ಬಾರಿಯೂ ಅದೇ ಆಗಿದೆ. ನಿಶಾಂತ್ ಜೊತೆ ಕಂಗನಾ ಅಯೋಧ್ಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

    ಸುದ್ದಿ ಭಾರೀ ಪ್ರಮಾಣದಲ್ಲಿ ಹರಡುತ್ತಿದ್ದಂತೆಯೇ ಕಂಗನಾ ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ನಿಶಾಂತ್ ಮದುವೆ ಆಗಿರುವ ವಿಚಾರವನ್ನೂ ಹೇಳಿಕೊಂಡಿದ್ದಾರೆ. ನಿಶಾಂತ್ ಅವರಿಗೆ ಈಗಾಗಲೇ ಮದುವೆ ಆಗಿದೆ. ನಮ್ಮಿಬ್ಬರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ, ಅವರ ಸಂಸಾರ ಹಾಳು ಮಾಡಬೇಡಿ. ನಾನು ಬೇರೆಯವರ ಜೊತೆ ಡೇಟಿಂಗ್ ಮಾಡುತ್ತಿದ್ದರೂ, ಅದನ್ನು ಹೇಳುವುದಕ್ಕಾಗಿ ಸಮಯ ಕೊಡಿ ಎಂದು ಕಂಗನಾ ಹೇಳಿದ್ದಾರೆ.

    ಈ ನಡುವೆ  ಕಂಗನಾ ರಣಾವತ್  ಮತ್ತೊಂದು ಸುದ್ದಿಯನ್ನೂ ನೀಡಿದ್ದಾರೆ. ಕಂಗನಾ ನಟನೆಯ ‘ಎಮರ್ಜೆನ್ಸಿ’ (Emergency) ಸಿನಿಮಾ ನವೆಂಬರ್ 24ರಂದು ರಿಲೀಸ್ (Release) ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದ್ದರು ಕಂಗನಾ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು ‘ನಾವು ಘೋಷಿಸಿದ ತಿಂಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿದ್ದು, 2024ರಲ್ಲಿ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದ್ದೇವೆ ಎಂದು ಬರೆದುಕೊಂಡಿದ್ದರು. ಈಗ ಜೂನ್ ನಲ್ಲಿ ಸಿನಿಮಾವನ್ನು ತೆರೆಗೆ ತರುವುದಾಗಿ ಅಪ್ ಡೇಟ್ ನೀಡಿದ್ದಾರೆ.

    ಕಂಗನಾ ರಣಾವತ್ (Kangana Ranaut) ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಸಿನಿಮಾವನ್ನು ಅವರೇ ನಿರ್ಮಾಣ ಮಾಡಿ, ನಿರ್ದೇಶನ ಮತ್ತು ನಟನೆ ಮಾಡುತ್ತಿದ್ದರೆ ಮತ್ತೊಂದು ಚಿತ್ರದಲ್ಲಿ ಕೇವಲ ನಟಿಯಾಗಿದ್ದಾರೆ. ಈ ಎರಡೂ ಸಿನಿಮಾಗಳ ನಡುವೆ ಅವರು ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದು, ಆ ಸಿನಿಮಾ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ.  ಎಮರ್ಜೆನ್ಸಿ ಸಿನಿಮಾ ತೆರೆಗೆ ಬರುತ್ತಿದ್ದಂತೆಯೇ ಲೆಜೆಂಡ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ತಯಾರಾಗಲಿರುವ, ಸಂದೀಪ್ ಸಿಂಗ್ (Sandeep Singh) ನಿರ್ಮಾಣದ ಹೊಸ ಸಿನಿಮಾದಲ್ಲಿ ಅವರು ನಟಿಸಲಿದ್ದಾರಂತೆ.

     

    ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕುರಿತಾದ ‘ಎಮರ್ಜೆನ್ಸಿ’ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಈ ಸಿನಿಮಾಗಾಗಿ ತಮ್ಮೆಲ್ಲ ಆಸ್ತಿಯನ್ನು ಅಡ ಇಟ್ಟಿರುವುದಾಗಿ ಬರೆದುಕೊಂಡಿದ್ದಾರೆ. ಎಮರ್ಜೆನ್ಸಿ ಸಿನಿಮಾ ಕಂಗನಾ ಪಾಲಿಗೆ ಅಳಿವು ಉಳಿವಿನ ಪ್ರಶ್ನೆ. ಈ ಸಿನಿಮಾದಲ್ಲಿ ಕೇವಲ ನಟಿಯಾಗಿ ಮಾತ್ರವಲ್ಲ, ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿಯೂ ಅವರು ಕೆಲಸ ಮಾಡಿದ್ದಾರೆ.

  • ನಟರ ಜೊತೆ ಡೇಟ್ ಮಾಡುವುದಿಲ್ಲ: ಜಾಹ್ನವಿ ಶಾಕಿಂಗ್ ಹೇಳಿಕೆ

    ನಟರ ಜೊತೆ ಡೇಟ್ ಮಾಡುವುದಿಲ್ಲ: ಜಾಹ್ನವಿ ಶಾಕಿಂಗ್ ಹೇಳಿಕೆ

    ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ (Jahnavi Kapoor) ಹಿಂದಿನ ಪಾಪ್ಯುಲರ್ ಶೋ ಕಾಫಿ ವಿತ್ ಕರಣ್ (Koffee With Karan) ದಲ್ಲಿ ಭಾಗಿಯಾಗಿದ್ದಾರೆ. ಕರಣ್ ಜೊತೆ ಜಾಹ್ನವಿ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಡೇಟಿಂಗ್ (Dating) ವಿಚಾರವನ್ನು ಹಂಚಿಕೊಂಡಿದ್ದು, ತಾವು ಯಾವುದೇ ಕಾರಣಕ್ಕೂ ನಟರ ಜೊತೆ ಡೇಟ್ ಮಾಡುವುದಿಲ್ಲವೆಂದು ಅವರು ಹೇಳಿದ್ದಾರೆ.

    ಕಾಫಿ ವಿತ್ ಕರಣ್ ಶೋನಲ್ಲಿ ಇದಷ್ಟೇ ಅಲ್ಲ, ಇನ್ನೂ ಹಲವು ಸಂಗತಿಗಳನ್ನು ಅವರು ನೇರವಾಗಿ ಮಾತನಾಡಿದ್ದಾರೆ. ನಿರೂಪಕ ಕರಣ್ ಜೋಹಾರ್ (Karan Johar) ಕೇಳಿದ ಪ್ರಶ್ನೆಗೆ ಅಷ್ಟೇ ಬೋಲ್ಡ್ ಆಗಿ ಉತ್ತರಿಸಿದ್ದಾರೆ. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ಬೋಲ್ಡ್ ಪ್ರಶ್ನೆಗಳನ್ನು ಕೇಳುವುದರಲ್ಲಿ ಕರಣ್ ಜೋಹಾರ್ ಎತ್ತಿದ ಕೈ. ಅದರಲ್ಲೂ ಕಾಂಟ್ರವರ್ಸಿ ಎನ್ನುವಂತಹ ಪ್ರಶ್ನೆಗಳನ್ನೂ ಅವರು ಕೇಳುತ್ತಾರೆ. ಹೆಚ್ಚಾಗಿ ಅವರ ಮಾತುಗಳು ಸೆಕ್ಸ್, ಅಫೇರ್, ಬ್ರೇಕ್ ಅಪ್, ಡೇಟಿಂಗ್ ಇದರ ಸುತ್ತಲೇ ಗಿರಕಿ ಹೊಡೆಯುತ್ತವೆ. ಅದರಲ್ಲೂ ಸೆಕ್ಸ್ ಬಗ್ಗೆ ಕೇಳದೇ ಯಾವ ಎಪಿಸೋಡ್ ಅನ್ನು ಅವರು ಮುಗಿಸೋದಿಲ್ಲ. ಜಾಹ್ನವಿ ಎಪಿಸೋಡ್ ನಲ್ಲಿ ಅವರು ಬೇರೆ ರೀತಿಯಲ್ಲಿ ಕೇಳಿ ಅಚ್ಚರಿ ಮೂಡಿಸಿದ್ದಾರೆ.

    ಜಾಹ್ನವಿ ಕಪೂರ್ ಅವರ ಸಿನಿಮಾ ಕೆರಿಯರ್, ಶೂಟಿಂಗ್, ಫ್ರೆಂಡ್ಸ್ ಹೀಗೆ ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತಾ ಹೋಗುವ ಕರಣ್ ಜೋಹಾರ್, ಕೊನೆಗೊಂದು ಪ್ರಶ್ನೆ ಮಾಡುತ್ತಾರೆ. ರಾಪಿಡ್ ರೌಂಡ್ ನಲ್ಲಿ ಅವರು, ನಿಮ್ಮನ್ನು ಮೊದಲ ಬಾರಿಗೆ ಹುಡುಗರು ನೋಡಿದಾಗ, ಅವರ ಕಣ್ಣುಗಳು ನಿಮ್ಮಲ್ಲಿ ಏನನ್ನು ನೋಡುತ್ತಿರುತ್ತವೆ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಅಷ್ಟೇ ಸಖತ್ತಾಗಿ ಆನ್ಸರ್ ಮಾಡಿದ್ದಾರೆ ಜಾಹ್ನವಿ.

     

    ಮೊದಲ ಬಾರಿಗೆ ಹುಡುಗರು ನನ್ನನ್ನು ನೋಡಿದಾಗ, ಅವರು ನನ್ನ ಕಣ್ಣುಗಳನ್ನು ನೋಡುತ್ತಾರೆ ಎಂದುಕೊಂಡಿದ್ದೆ. ಆದರೆ, ಅವರು ಬೇರೆಯದನ್ನೇ ನೋಡ್ತಾ ಇರ್ತಾರೆ ಅನ್ನೋದು ಆಮೇಲೆ ಗೊತ್ತಾಯಿತು ಎಂದು ಹೇಳುವ ಮೂಲಕ ಹುಡುಗರಿಗೆ ಶಾಕ್ ನೀಡಿದ್ದಾರೆ.

  • ಪ್ರೇಮಿಗಳ ದಿನದಂದು ನಟಿ ತಮನ್ನಾ ಮದುವೆ

    ಪ್ರೇಮಿಗಳ ದಿನದಂದು ನಟಿ ತಮನ್ನಾ ಮದುವೆ

    ಕ್ಷಿಣದ ಖ್ಯಾತ ನಟಿ ತಮನ್ನಾ (Tamannaah) ಮತ್ತು ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಲವ್ವಿಡವ್ವಿ ವಿಚಾರ ಗುಟ್ಟಿನ ಸಂಗತಿಯೇನೂ ಅಲ್ಲ. ಇಬ್ಬರೂ ಒಟ್ಟೊಟ್ಟಿಗೆ ಪ್ರವಾಸ ಮಾಡುತ್ತಿದ್ದಾರೆ, ಹಲವಾರು ಪ್ರಾಜೆಕ್ಟ್ ಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಇದೀಗ ಈ ಜೋಡಿ ಹೊಸ ಜೀವನಕ್ಕೆ ಕಾಲಿಡಲು ನಿರ್ಧರಿಸಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. 2024 ಫೆಬ್ರವರಿಯಲ್ಲಿ ಅವರು ಮದುವೆ (Marriage) ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಮದುವೆ ವಿಚಾರವನ್ನು ಈ ಜೋಡಿ ಅಧಿಕೃತವಾಗಿ ಹೇಳದೇ ಇದ್ದರೂ, ಮಾಧ್ಯಮಗಳ ಜೊತೆ ಮಾತನಾಡಿರುವ ವಿಜಯ್ ವರ್ಮಾ, ‘ನನಗೆ ತಮನ್ನಾ ಮೇಲೆ ಮತ್ತಷ್ಟು ಪ್ರೀತಿಯಾಗಿದೆ (Love). ಹೆಚ್ಚೆಚ್ಚು ಪ್ರೀತಿ  ಮೂಡುತ್ತಿದೆ’ ಎಂದು ಹೇಳುವ ಮೂಲಕ ತಮ್ಮಿಬ್ಬರ ನಡುವಿನ ಡೇಟಿಂಗ್ ಅನ್ನು ಖಚಿತ ಪಡಿಸಿದ್ದಾರೆ.

    ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ ಲಿಪ್ ಲಾಕ್ ಮಾಡಿಕೊಂಡ ವೀಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ವಿಜಯ್‌ ವರ್ಮಾ ಜೊತೆಗಿನ ಡೇಟಿಂಗ್ (Dating) ವಿಚಾರವನ್ನು ತಳ್ಳಿ ಹಾಕಿದ್ದರು ತಮನ್ನಾ. ನಾವಿಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿದ್ದೇವೆ. ಇಂಥ ವದಂತಿಗಳು ಎಲ್ಲಾ ಕಡೆ ಹರಿದಾಡುತ್ತಲೇ ಇರುತ್ತದೆ. ಇಂಥ ವದಂತಿಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಮತ್ತು ಸ್ಪಷ್ಟೀಕರಣ ಕೊಡುವ ಅನಿವಾರ್ಯತೆ ಇಲ್ಲ. ಅದರ ಬಗ್ಗೆ ನಾನು ಹೆಚ್ಚು ಏನು ಹೇಳಲ್ಲ ಎಂದಿದ್ದರು.

    ಆದರೆ, ನಂತರದ ದಿನಗಳಲ್ಲಿ ಡೇಟಿಂಗ್ ಕುರಿತು ಭಿನ್ನ ಪ್ರತಿಕ್ರಿಯೆ ನೀಡಿದ್ದರು ತಮನ್ನಾ. ವಿಜಯ್ ವರ್ಮಾ ಜೊತೆ ತಾವು ಲವ್ ಮಾಡುತ್ತಿರುವ ವಿಚಾರವನ್ನು ಒಪ್ಪಿಕೊಂಡಿದ್ದರು. ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ʻಲಸ್ಟ್ ಸ್ಟೋರಿ -2′ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸೆಟ್‌ನಲ್ಲಿ ಮೊದಲು ಭೇಟಿಯಾಗಿದ್ದರು. ಅಲ್ಲಿಂದ ಪ್ರಾರಂಭವಾದ ಇವರ ಸ್ನೇಹ ಬಳಿಕ ಪ್ರೀತಿಯಾಗಿದೆ ಎಂದು ಹೇಳಿದ್ದರು. ಅದರ ಮುಂದುವರೆದ ಭಾಗವಾಗಿ ಹೊಸ ವರ್ಷಾಚರಣೆ ವೇಳೆ ಇಬ್ಬರೂ ತಬ್ಬಿಕೊಂಡು, ಕಿಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಪ್ರೇಮಿಗಳ ದಿನದಂದು ತಮನ್ನಾಗೆ ವಿಜಯ್ ವರ್ಮಾ ವಿಶೇಷವಾಗಿ ವಿಶ್ ಮಾಡಿದ್ದರು. ತನ್ನ ಪ್ರೇಮಿಯ ಜೊತೆಗಿನ ಫೋಟೋವನ್ನು ವಿಜಯ್ ವರ್ಮಾ ಶೇರ್ ಮಾಡಿದ್ದರು.  ವಿಜಯ್ ಅವರು ಕಾಲೊಂದರ ಫೋಟೋವನ್ನು ಶೇರ್ ಮಾಡಿ ಹಾರ್ಟ್ ಇಮೋಜಿ ಇರಿಸಿದ್ದರು. ಅದು ತಮನ್ನಾ ಕಾಲು ಎಂದು ಹೇಳಲಾಗಿತ್ತು. ತಮನ್ನಾ ಧರಿಸಿದ್ದ ಶೋ ಮತ್ತು ಜರ್ಕಿನ್ ಫೋಟೋಗಳನ್ನು ಶೇರ್ ಮಾಡಿ ಇದು ಪಕ್ಕಾ ತಮನ್ನಾ ಅವರ ಕಾಲು ಎಂದಿದ್ದರು.

     

    ವಿಜಯ್ ವರ್ಮಾ ತಮ್ಮ ಪ್ರೀತಿಯ ವಿಷಯದಲ್ಲಿ ಸ್ಪಷ್ಟವಾಗಿದ್ದರೂ, ತಮನ್ನಾ ಮಾತ್ರ ಅದನ್ನು ಹೇಳಿಕೊಳ್ಳಲು ತಯಾರು ಇರಲಿಲ್ಲ. ಯಾರೇ ಕೇಳಿದರೂ ಅದನ್ನು ಗಾಸಿಪ್ ಎಂದು ತೇಲಿಸಿ ಬಿಡುತ್ತಿದ್ದರು. ನಂತರ ವಿಜಯ್ ಜೊತೆಗಿನ ಪ್ರೀತಿಯನ್ನು ಒಪ್ಪಿಕೊಂಡಿದ್ದರು. ಒಂದು ಸಲ ಒಪ್ಪಿಕೊಂಡು ಮತ್ತೊಂದು ಸಲ ಗಾಸಿಪ್ ಎಂದು ಹೇಳುತ್ತಾ ಡೇಟಿಂಗ್ ವಿಚಾರದಲ್ಲಿ ಇಬ್ಬರೂ ಸದಾ ಸುದ್ದಿಯಲ್ಲಿರುತ್ತಾರೆ ಈ ಸ್ಟಾರ್ ಜೋಡಿ.

  • ಡೇಟಿಂಗ್ ಆ್ಯಪ್ ಬಂಬಲ್ ಬಳಸುವ ಮುನ್ನ ಎಚ್ಚರ.. ಎಚ್ಚರ

    ಡೇಟಿಂಗ್ ಆ್ಯಪ್ ಬಂಬಲ್ ಬಳಸುವ ಮುನ್ನ ಎಚ್ಚರ.. ಎಚ್ಚರ

    ನವದೆಹಲಿ: ಡೇಟಿಂಗ್ ಆ್ಯಪ್ (Dating App) ಬಂಬಲ್ (Bumble) ಮೂಲಕ ಸ್ನೇಹ ಬೆಳೆಸಿದ ಮಹಿಳೆಯ ಮೇಲೆ ಅತ್ಯಾಚಾರ (Rape) ಎಸಗಿರುವ ಆರೋಪದ ಮೇಲೆ ವ್ಯಕ್ತಿಯೋರ್ವನ ವಿರುದ್ಧ ದೆಹಲಿ ಪೊಲೀಸರು (Delhi Police) ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ಥ ಮಹಿಳೆಯ ದೂರಿನ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

    ಈ ಘಟನೆಯು ಜನವರಿ 18 ರಂದು ನಡೆದಿದೆ ಎನ್ನಲಾಗಿದ್ದು, ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ವ್ಯಕ್ತಿ ತನ್ನನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ. ಮಹಿಳೆಯ ಪ್ರಕಾರ ಅವರು ಜನವರಿ 17 ರಂದು ಬಂಬಲ್ ಮೂಲಕ ಆರೋಪಿ ವ್ಯಕ್ತಿಯೊಂದಿಗೆ ಮಾತನಾಡಲು ಪ್ರಾರಂಭಿಸಿದರು. ಮರುದಿನ ಆ ವ್ಯಕ್ತಿ ತಡರಾತ್ರಿಯಲ್ಲಿ ಅವಳನ್ನು ಭೇಟಿಯಾಗಲು ಒತ್ತಾಯಿಸಿದ್ದಾನೆ. ಇದನ್ನೂ ಓದಿ: ಗರ್ಭದಲ್ಲಿರುವುದು ಹೆಣ್ಣು ಮಗು ಎಂದು ತಿಳಿದು ಪತ್ನಿಯನ್ನು ಹತ್ಯೆಗೈದ ಪತಿ

    ಆ ದಿನ ಸಂಜೆ ಇಬ್ಬರೂ ಕಾಫಿ ಶಾಪ್‌ನಲ್ಲಿ ಭೇಟಿಯಾದರು. ನಂತರ ಆರೋಪಿ ಮಹಿಳೆಯನ್ನು ಬಸಂತ್ ನಗರ ಪ್ರದೇಶದ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಆರೋಪಿಸಿದ್ದಾಳೆ. ಈ ಸಂಬಂಧ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 376ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಾಗಿ ಹುಡುಕಾಟ ಆರಂಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 8 ಬಾರಿ ಟ್ರ್ಯಾಕ್ಟರ್‌ ಹರಿಸಿ ಸಹೋದರನನ್ನು ಕೊಂದೇ ಬಿಟ್ಟ

    ಈ ತಿಂಗಳ ಆರಂಭದಲ್ಲಿ, ಬಂಬಲ್ ಮೂಲಕ ಭೇಟಿಯಾದ ಮಹಿಳೆಯೊಬ್ಬರು ದರೋಡೆ ಮಾಡಿದ್ದಾರೆ ಎಂದು ಆರೋಪಿಸಿ ಗುರುಗ್ರಾಮ್ ಪೊಲೀಸರಿಗೆ ನೀಡಿದ ದೂರಿನಲ್ಲಿ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಮಹಿಳೆ ತನ್ನ ಮನೆಗೆ ಬಂದು ತನ್ನ ಮೊಬೈಲ್ ಫೋನ್, ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾಳೆ ಮತ್ತು ತನಗೆ ಮಾದಕವಸ್ತು ನೀಡಿ 1.78 ಲಕ್ಷ ರೂ. ಅನ್ನು ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾಳೆ ಎಂದು ವ್ಯಕ್ತಿ ಆರೋಪಿಸಿದ್ದ. ಇದನ್ನೂ ಓದಿ: ಕೋಲಿನಿಂದ ಹೊಡೆದಾಡೋ ಜಾತ್ರೆ- ಮೂವರ ಸ್ಥಿತಿ ಗಂಭೀರ, ನೂರಕ್ಕೂ ಹೆಚ್ಚು ಮಂದಿಗೆ ಗಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಶಾಂತ್ ಸಿಂಗ್ ಮಾಜಿ ಗೆಳತಿ ಜೊತೆ ಉದ್ಯಮಿ ನಿಖಿಲ್ ಕಾಮತ್ ಡೇಟಿಂಗ್

    ಸುಶಾಂತ್ ಸಿಂಗ್ ಮಾಜಿ ಗೆಳತಿ ಜೊತೆ ಉದ್ಯಮಿ ನಿಖಿಲ್ ಕಾಮತ್ ಡೇಟಿಂಗ್

    ಬೆಂಗಳೂರು ಮೂಲದ ಖ್ಯಾತ ಉದ್ಯಮಿ ನಿಖಿಲ್ ಕಾಮತ್ ಹೆಸರಿನ ಜೊತೆ ಬಾಲಿವುಡ್ ನಟಿಯೊಬ್ಬರ ಹೆಸರು ಕೇಳಿ ಬರುತ್ತಿದೆ. ಖ್ಯಾತ ನಟ ದಿ.ಸುಶಾಂತ್ ಸಿಂಗ್ ಮಾಜಿ ಗೆಳತಿ ರಿಯಾ ಚಕ್ರವರ್ತಿ (Rhea Chakraborty) ಜೊತೆ ನಿಖಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಚಾರ ಬಿಟೌನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಧಿಕೃತವಾಗಿ ಈ ಕುರಿತು ಇಬ್ಬರೂ ಯಾವುದೇ ಮಾಹಿತಿ ಹಂಚಿಕೊಳ್ಳುತ್ತಿದ್ದರೂ, ಅದು ನಿಜ ಎಂದು ಹೇಳಲಾಗುತ್ತಿದೆ.

    ಮಾನುಷಿ ಚಿಲ್ಲರ್ ಜೊತೆ ಬ್ರೇಕ್ ಅಪ್?

    ನಟಿ ಮಾನುಷಿ ಚಿಲ್ಲರ್(Manushi Chillar) ಸಿನಿಮಾಗಿಂತ ತಮ್ಮ ಖಾಸಗಿ ವಿಚಾರವಾಗಿ ಸಖತ್ ಸುದ್ದಿಯಲ್ಲಿರುತ್ತಾರೆ. ಬಿಟೌನ್‌ನಲ್ಲಿ ಈ ಹಿಂದೆ ಮಾನುಷಿ ಡೇಟಿಂಗ್ ಸುದ್ದಿಯೇ ಸಖತ್ ಸದ್ದು ಮಾಡಿತ್ತು. ಇದೇ  Zerodha ಕಂಪನಿಯ ಸಹ ಸಂಸ್ಥಾಪಕ ನಿಖಿಲ್ ಕಾಮತ್ (Nikhil Kamath) ಜೊತೆ ಮಾನುಷಿ ಎಂಗೇಜ್ ಆಗಿದ್ದಾರೆ ಎಂದು ಹೇಳಲಾಗಿತ್ತು.

    ಅಕ್ಷಯ್ ಕುಮಾರ್(Akshay Kumar) ನಟನೆಯ `ಸಾಮ್ರಾಟ್ ಪೃಥ್ವಿರಾಜ್’ (Samrat Prithviraj) ಚಿತ್ರದಲ್ಲಿ ಮಾನುಷಿ ನಾಯಕಿಯಾಗಿ ನಟಿಸಿದ್ದರು. ಬಳಿಕ ಇದೀಗ ಸಾಕಷ್ಟು ಚಿತ್ರಗಳ ಆಫರ್ಸ್ ಅರಸಿ ಬಂದವು. ಇದರ ಮಧ್ಯೆ ಮಾನುಷಿ ಉದ್ಯಮಿ(Bengaluru Based Businessman) ನಿಖಿಲ್ ಕಾಮತ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ಸುದ್ದಿಯಾಗಿತ್ತು. ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು.

    ಅದಕ್ಕೆ ಪೂರಕ ಎನ್ನುವಂತೆ ಈ ಜೋಡಿ, ರಿಷಿಕೇಶಕ್ಕೆ ಒಟ್ಟಿಗೆ ಹೋಗಿದ್ದರು. ಇಬ್ಬರೂ ಒಟ್ಟಿಗೆ ನೆಲೆಸಿದ್ದಾರೆ ಎಂದು ಹೇಳಲಾಗಿತ್ತು. ಎಂಗೇಜ್ ಆಗಿರುವ ಬಗ್ಗೆ ಇಬ್ಬರೂ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲವಾದರೂ ಮೂಲಗಳ ಪ್ರಕಾರ, ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಈಗ ನೋಡಿದರೆ ಮತ್ತೋರ್ವ ಹುಡುಗಿಯ ಹೆಸರು ಕಾಮತ್ ಹೆಸರಿನ ಜೊತೆ ತಳುಕು ಹಾಕಿಕೊಂಡಿದೆ.

     

    ಬೆಂಗಳೂರಿನ ಮೂಲದ ಬ್ಯುಸಿನೆಸ್ ಮ್ಯಾನ್ ಆಗಿರುವ ನಿಖಿಲ್ ಕಾಮತ್‌ಗೆ ಈ ಹಿಂದೆಯೇ ಒಂದು ಮದುವೆ ಆಗಿತ್ತು. 2019ರ ವೇಳೆ ಇಟಲಿಯಲ್ಲಿ ಅಮಂಡಾ ಪುರವಂಕರ ಜೊತೆ ವಿವಾಹವಾಗಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಂದ 2021ರಲ್ಲಿ ಡಿವೋರ್ಸ್ ಪಡೆದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತನ್ನ ವಿಚಿತ್ರ ಬಯಕೆಯನ್ನು ಹೊರ ಹಾಕಿದ ಕಂಗನಾ ರಣಾವತ್

    ತನ್ನ ವಿಚಿತ್ರ ಬಯಕೆಯನ್ನು ಹೊರ ಹಾಕಿದ ಕಂಗನಾ ರಣಾವತ್

    ನ್ನ ಖಾಸಗಿ ವಿಚಾರವಾಗಿ ಯಾವುದನ್ನೂ ಮುಚ್ಚಿಟ್ಟುಕೊಂಡಿಲ್ಲ ಬಾಲಿವುಡ್ ನಟ ಕಂಗನಾ ರಣಾವತ್ (Kangana Ranaut), ತನ್ನ ಸಿನಿಮಾಗಳಾಚೆಯೂ ಅವರು ಬೋಲ್ಡ್ ಆಗಿ ಮಾತನಾಡಿದ್ದಾರೆ. ಅದರಲ್ಲೂ ಪ್ರೀತಿ, ಪ್ರೇಮ, ಡೇಟಿಂಗ್, ಸೆಕ್ಸ್ ಹೀಗೆ ಯಾವುದನ್ನೂ ಉಳಿಸಿಲ್ಲ. ಎಲ್ಲವೂ ಖುಲಂಖುಲ್ಲಾ. ಇಂತಹ ಬೋಲ್ಡ್ ನಟಿ ತನ್ನ ವಿಚಿತ್ರ ಬಯಕೆಯೊಂದನ್ನು ಹೇಳಿಕೊಂಡಿದ್ದಾರೆ. ಆದರೆ, ಅದು ಭಯಾನಕ ಆಗಿದೆ ಎನ್ನುವುದು ದುರಂತ.

    ಕಂಗನಾ ರಣಾವತ್ ಬಾಲಿವುಡ್ (Bollywood) ನ ಅನೇಕ ನಟರ ಜೊತೆ ಡೇಟಿಂಗ್ (Dating) ಮಾಡಿದ್ದಾರೆ. ಯಾರೆಲ್ಲ ತಮಗೆ ಮೋಸ ಮಾಡಿದ್ದಾರೆ ಎನ್ನುವುದನ್ನೂ ಹೇಳಿಕೊಂಡಿದ್ದಾರೆ. 16ನೇ ವಯಸ್ಸಿನಲ್ಲೇ ಶುರುವಾದ ಪ್ರೀತಿ-ಪ್ರೇಮಕ್ಕೆ ಈವರೆಗೂ ಅವರು ಲೆಕ್ಕವಿಟ್ಟಿಲ್ಲವಂತೆ. ಆದರೆ, ಅವರಾಗಿಯೇ ಯಾರಿಗೂ ಕೈಕೊಟ್ಟಿಲ್ಲವಂತೆ. ಇದೀಗ ಪ್ರೀತಿ ಮಾಡಿ ತಾನೇ ಯಾರಿಗಾದರೂ ಕೈ ಕೊಡಬೇಕು ಅನಿಸುತ್ತಿದೆಯಂತೆ. ಇದನ್ನೂ ಓದಿ:ಮಗಳ ವಯಸ್ಸಿನ ನಟಿ ಜೊತೆ ಅನಿಲ್ ಕಪೂರ್ ಲಿಪ್‌ಲಾಕ್- ನೆಟ್ಟಿಗರಿಂದ ಛೀಮಾರಿ

    ನಾನು ಒಬ್ಬರ ಜೊತೆ ನಿಯತ್ತಾಗಿ ಕಮಿಟ್ ಆಗಿರುತ್ತಿದ್ದೆ. ಅವರು ನನಗೆ ಮೋಸ ಮಾಡಿ ಕೈ ಕೊಡುತ್ತಿದ್ದರು. ಮತ್ತೆ ಅವರು ನನ್ನ ಹತ್ತಿರಕ್ಕೆ ಬರುವ ಹೊತ್ತಿನಲ್ಲಿ ಮತ್ತೊಬ್ಬರ ಜೊತೆ ನಾನು ಕಮಿಟ್ ಆಗಿರುತ್ತಿದ್ದೆ. ನಾನು ಯಾರಿಗೂ ಈ ವಿಷಯದಲ್ಲಿ ನೋವು ಮಾಡಲಿಲ್ಲ. ನನಗೆ ಎಲ್ಲರೂ ತೊಂದರೆ ಕೊಟ್ಟರು. ನಾನೀಗ ಈ ವಿಷಯದಲ್ಲಿ ಯಾರಿಗಾದರೂ ಮೋಸ ಮಾಡಬೇಕು, ನೋವು ಮಾಡಬೇಕು ಎಂದು  ಅನಿಸಿದೆ ಎಂದು ಹೇಳಿಕೊಂಡಿದ್ದಾರೆ.

     

    ಸದ್ಯ ಕಂಗನಾ ತಮ್ಮದೇ ನಿರ್ದೇಶನ ಹಾಗೂ ನಿರ್ಮಾಣದ ಎಮರ್ಜನ್ಸಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಅವರು ನಟಿಸುವುದರ ಜೊತೆಗೆ ಹಲವಾರು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾ ಬಿಡುಗಡೆಗೂ ಕೂಡ ಸಿದ್ಧವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿಮ್ಮ ಧ್ವನಿ, ನೋಟ ನನಗಿಷ್ಟ: ಟೈಗರ್ ಶ್ರಾಫ್ ಎಂಬ ಮನ್ಮಥನಿಗೆ ಹೂಬಾಣ ಬಿಟ್ಟ ದಿಶಾ

    ನಿಮ್ಮ ಧ್ವನಿ, ನೋಟ ನನಗಿಷ್ಟ: ಟೈಗರ್ ಶ್ರಾಫ್ ಎಂಬ ಮನ್ಮಥನಿಗೆ ಹೂಬಾಣ ಬಿಟ್ಟ ದಿಶಾ

    ಬಾಲಿವುಡ್ (Bollywood) ನಟ ಟೈಗರ್ ಶ್ರಾಫ್ ನಟನೆಯ ‘ಲವ್ ಸ್ಟಿರಿಯೊ ಎಗೇನ್’ ಸಿನಿಮಾದ ಹಾಡೊಂದು ರಿಲೀಸ್ ಆಗಿದೆ. ಈ ಹಾಡಿನಲ್ಲಿ ಟೈಗರ್ ಶ್ರಾಫ್ ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಶರ್ಟಲೆಸ್ ಬಾಡಿಯಲ್ಲಿ ಅವರು ರೊಚ್ಚಿಗೆಬ್ಬಿಸುತ್ತಾರೆ. ಜೊತೆಗೆ ನಟಿ ಜಹ್ರಾ ಖಾನ್ ಇರುವುದರಿಂದ ಟೈಗರ್ ಇನ್ನಷ್ಟು ಮತ್ತಷ್ಟು ರೊಮ್ಯಾಂಟಿಕ್ ಆಗಿ ಕಂಡಿದ್ದಾರೆ. ಹಾಗಾಗಿಯೇ ಮಾಜಿ ಗೆಳೆತಿ ದಿಶಾ (Disha Patani) ಹಾಡಿ ಹೊಗಳಿದ್ದಾರೆ.

    ಸಿನಿಮಾದ ಹಾಡೊಂದನ್ನು ಶೇರ್ ಮಾಡಿಕೊಂಡಿರುವ ದಿಶಾ ಪಟಾನಿ, ‘ನೀವು ಮಾಡಲು ಸಾಧ್ಯವಾಗದೇ ಇರುವುದು ಯಾವುದಾದರೂ ಇದೆಯಾ ಟೈಗರ್ ಶ್ರಾಫ್. ನನಗೆ ನಿಮ್ಮ ಧ್ವನಿ ಮತ್ತು ಆ ನಿನ್ನ ತೀಕ್ಷ್ಣ ನೋಟ ನನಗಿಷ್ಟ’ ಎಂದು ಬರೆದುಕೊಂಡಿದ್ದಾರೆ. ಅದನ್ನು ಟೈಗರ್ ಗೆ ಟ್ಯಾಗ್ ಕೂಡ ಮಾಡಿದ್ದಾರೆ.

    ‘ಭಾಘಿ 2’ ಮತ್ತು ‘ಭಾಘಿ 3’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದ ಟೈಗರ್ ಶ್ರಾಫ್ (Tiger Shroff)- ದಿಶಾ ಪಟಾನಿ ನಡುವೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಸ್ಟಾರ್ ಕಿಡ್ಸ್ ಮತ್ತು ಸ್ಟಾರ್ ನಟ-ನಟಿಯರು ಆಗಿರೋ ಕಾರಣ ಈ ಜೋಡಿ ಮದುವೆ ಮಾಡಿಕೊಳ್ತಾರಾ ಎಂಬ ಬಗ್ಗೆ ಕುತೂಹಲವಿತ್ತು. ಆದರೆ ಕಳೆದ ವರ್ಷ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯ ಮೂಲಕ ಅಭಿಮಾನಿಗಳಿಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ರು. ಬಳಿಕ ಇಬ್ಬರೂ ಎಲ್ಲೂ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ. ಬ್ರೇಕಪ್ ಸುದ್ದಿಗೆ ಇದು ಮತ್ತಷ್ಟು ಪುಷ್ಟಿ ನೀಡಿತ್ತು. ಇದನ್ನೂ ಓದಿ:ತೆಲುಗು ಬಿಗ್ ಬಾಸ್ ಮನೆಗೆ ಕನ್ನಡದ ನಟಿ ಐಶ್ವರ್ಯಾ

    ನಂತರ ಅಚ್ಚರಿ ಎನ್ನುವಂತೆ ಮುಂಬೈ ಟು ದೆಹಲಿಗೆ ಬರುವಾಗ ಒಟ್ಟಿಗೆ ಇಬ್ಬರೂ ಟ್ರಾವೆಲ್ ಮಾಡಿದ್ದರು. ಕಾರ್ಯಕ್ರಮವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರೂ ಜೊತೆಯಾಗಿ ಕುಳಿತು ಮಾತನಾಡುತ್ತಿರೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು. ಈವೆಂಟ್‌ನಲ್ಲಿ ದಿಶಾ ಮತ್ತು ಟೈಗರ್ ಶ್ರಾಫ್ ಇಬ್ಬರು ಅಕ್ಕ-ಪಕ್ಕದಲ್ಲಿ ಕುಳಿತಿದ್ದರು. ಇವರ ಜೊತೆ ಟೈಗರ್ ಶ್ರಾಫ್ ಸಹೋದರಿ ಕೃಷ್ಣಾ ಶ್ರಾಫ್, ತಾಯಿ ಆಯೇಶಾ ಶ್ರಾಫ್ ಕೂಡ ದಿಶಾ ಪಕ್ಕದಲ್ಲಿ ಕುಳಿತಿದ್ದರು. ಹಾಗಾಗಿ ಲವ್  ಬ್ರೇಕ್ ಆಗಿಲ್ಲ ಎಂದು ಹೇಳಲಾಗಿತ್ತು. ಈಗ ಟೈಗರ್ ನನ್ನು ದಿಶಾ ಹಾಡಿ ಹೊಗಳಿ ಮತ್ತೆ ಲವ್ ಕಹಾನಿಯನ್ನು ಜೀವಂತವಾಗಿರಿಸಿದ್ದಾರೆ.

     

    ಸದ್ಯ ಟೈಗರ್ ಶ್ರಾಫ್- ದಿಶಾ ಪಟಾನಿ ಬೇರೆ ಬೇರೇ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತೆ ಒಟ್ಟಿಗೆ ಸಿನಿಮಾ ಮಾಡುತ್ತಾರಾ.? ಜೊತೆಗೆ ಬಾಲಿವುಡ್‌ನ ಸಾಲು ಸಾಲು ಜೋಡಿಗಳು ಹಸೆಮಣೆ ಏರಿವೆ. ಅದೇ ಸಾಲಿಗೆ ಈ ಜೋಡಿ ಸೇರುತ್ತಾ? ಮದುವೆ ಬಗ್ಗೆ ಸ್ವೀಟ್ ನ್ಯೂಸ್ ಕೊಡುತ್ತಾರಾ ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಲೈಗರ್‌’ ನಟಿ ಜೊತೆ ಆದಿತ್ಯ ಕಪೂರ್ ಕಣ್ ಕಣ್ ಸಲಿಗೆ

    ‘ಲೈಗರ್‌’ ನಟಿ ಜೊತೆ ಆದಿತ್ಯ ಕಪೂರ್ ಕಣ್ ಕಣ್ ಸಲಿಗೆ

    ಬಾಲಿವುಡ್‌ನ (Bollywood) ನಯಾ ಜೋಡಿ ಅನನ್ಯಾ ಪಾಂಡೆ- ಆದಿತ್ಯ ರಾಯ್ ಕಪೂರ್ (Adithya Roy Kapoor) ಅವರು ರೊಮ್ಯಾಂಟಿಕ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಪೋರ್ಚುಗಲ್‌ನಲ್ಲಿ ಈ ಲವ್ ಬರ್ಡ್ಸ್ ಫೋಟೋಗ್ರಾಫರ್ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.

    ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ, ಸಿದ್- ಕಿಯಾರಾ ಜೋಡಿಯಂತೆ ಮತ್ತೊಂದು ಹೊಸ ಜೋಡಿ ಹಸೆಮಣೆ ಏರುವ ಸುದ್ದಿ ಕೊಡ್ತಾರಾ ಕಾಯಬೇಕಿದೆ. ಸದ್ಯ ಮುಂಬೈ ಗಲ್ಲಿ ಮತ್ತು ವಿದೇಶದಲ್ಲೂ ಅನನ್ಯಾ ಪಾಂಡೆ(Ananya Panday) – ಆದಿತ್ಯ ರಾಯ್ ಕಪೂರ್ ಜೋಡಿ ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಇಬ್ಬರ ಡೇಟಿಂಗ್ ಬಗ್ಗೆ ಸಾಕಷ್ಟು ಸುದ್ದಿ ಸೌಂಡ್ ಮಾಡ್ತಿದೆ.

    ಕೆಲ ದಿನಗಳ ಹಿಂದೆ ಸ್ಪೇನ್‌ನಲ್ಲಿ ಅನನ್ಯಾ- ಆದಿತ್ಯ ಜೋಡಿ ಒಟ್ಟಿಗೆ ಇರುವ ರೊಮ್ಯಾಂಟಿಕ್ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಈಗ ಇಬ್ಬರು ಪೋರ್ಚುಗಲ್‌ನ (Portugal) ರೆಸ್ಟೋರೆಂಟ್‌ವೊಂದರಲ್ಲಿ ಅನನ್ಯಾ- ಆದಿತ್ಯ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಕಣ್ ಸಲಿಗೆ ಫೋಟೋ ಸಖತ್ ವೈರಲ್ ಆಗುತ್ತಿದೆ.

    ಸಾಕಷ್ಟು ವರ್ಷಗಳಿಂದ ಆದಿತ್ಯ- ಅನನ್ಯಾ ಪಾಂಡೆ ಇಬ್ಬರು ಪರಿಚಿತರು. ಹಾಗಾಗಿ ಡೇಟಿಂಗ್ ಸುದ್ದಿಗೆ ಈ ಜೋಡಿಯ ನಯಾ ಪುಷ್ಟಿ ನೀಡುತ್ತಿದೆ. ಇಬ್ಬರೂ ಅವರು ಪ್ರತ್ಯೇಕವಾಗಿ ವಿಮಾನ ಏರಿ ವಿದೇಶಕ್ಕೆ ತೆರಳಿದ್ದಾರೆ. ಆದರೆ ಅವರಿಬ್ಬರೂ ಹೋಗಿರುವುದು ಒಂದೇ ಲೊಕೇಷನ್‌ಗೆ. ಸ್ಪೇನ್‌ನಲ್ಲಿ ಸಂಗೀತ ಕಾರ್ಯಕ್ರಮವೊಂದಕ್ಕೆ ಅವರು ಹಾಜರಿ ಹಾಕಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸ್ಟೋರಿಗಳನ್ನು ಅಪ್‌ಲೋಡ್ ಮಾಡಿಕೊಂಡಿದ್ದಾರೆ. ಇಬ್ಬರ ಸ್ಟೋರಿಯಲ್ಲೂ ಸಾಮ್ಯತೆ ಇರುವುದರಿಂದ ಅಭಿಮಾನಿಗಳಿಗೆ ಎಲ್ಲವೂ ಸ್ಪಷ್ಟವಾಗಿದೆ. ಇಷ್ಟೇ ಅಲ್ಲ, ಅವರಿಬ್ಬರ ನಡುವಿನ ಆಪ್ತತೆಗೆ ಸಾಕ್ಷಿ ಒದಗಿಸುವಂತಹ ಇನ್ನೊಂದು ಫೋಟೋ ಕೂಡ ವೈರಲ್ ಆಗಿದೆ. ಇದನ್ನೂ ಓದಿ:ತೆಲುಗಿನ ಮತ್ತೊಬ್ಬ ನಟಿಯ ದಾಂಪತ್ಯದಲ್ಲಿ ಬಿರುಕು- ಪತಿ ಜೊತೆ ಸ್ವಾತಿ ರೆಡ್ಡಿ ಡಿವೋರ್ಸ್?

    ಅನನ್ಯಾರನ್ನು ಆದಿತ್ಯ ಅವರು ಹಿಂಬದಿಯಿಂದ ತಬ್ಬಿಕೊಂಡು ನಿಂತಿರುವ ಫೋಟೋ ಸದ್ದು ಮಾಡುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಇಷ್ಟು ದಿನಗಳ ಕಾಲ ಈ ಜೋಡಿ ಹಕ್ಕಿಗಳು ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಆದರೆ ಈಗ ಎಲ್ಲವೂ ಬಟಾಬಯಲಾಗಿದೆ. ಕದ್ದು-ಮುಚ್ಚಿ ಡೇಟಿಂಗ್ ಮಾಡುತ್ತಿರುವ ರಹಸ್ಯ ರಿವೀಲ್ ಆಗಿದೆ. ಫ್ಯಾನ್ಸ್ ಬಗೆ ಬಗೆಯ ರೀತಿಯಲ್ಲಿ ಕಾಮೆಂಟ್ ಮಾಡ್ತಿದ್ದಾರೆ.ಇನ್ನೂ ಕೆಲವು ತಿಂಗಳುಗಳ ಹಿಂದೆ ಇವೆಂಟ್‌ವೊಂದರಲ್ಲಿ ಇಬ್ಬರು ಜೊತೆಯಾಗಿ ರ‍್ಯಾಂಪ್ ವಾಕ್ ಮಾಡಿದ್ದು. ಜೋಡಿಯಾಗಿ ಹಲವು ಇವೆಂಟ್‌ನಲ್ಲಿ ಭಾಗಿಯಾಗುತ್ತಿದ್ದರು. ಅಂದಿನ ಆದಿತ್ಯ- ಅನನ್ಯಾ ಅವರ ಫೋಟೋಶೂಟ್ ಸಖತ್ ವೈರಲ್ ಆಗಿತ್ತು. ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು ಕೂಡ ತಮ್ಮ ರಿಲೇಷನ್‌ಶಿಪ್ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]