Tag: data pack

  • ದೀಪಾವಳಿಗೆ ಜಿಯೋ ಗಿಫ್ಟ್: 399 ರೂ. ರಿಚಾರ್ಜ್ ಮಾಡಿ ಫುಲ್ ಕ್ಯಾಶ್‍ಬ್ಯಾಕ್ ಪಡೆಯಿರಿ

    ದೀಪಾವಳಿಗೆ ಜಿಯೋ ಗಿಫ್ಟ್: 399 ರೂ. ರಿಚಾರ್ಜ್ ಮಾಡಿ ಫುಲ್ ಕ್ಯಾಶ್‍ಬ್ಯಾಕ್ ಪಡೆಯಿರಿ

    ಮುಂಬೈ: ಟೆಲಿಕಾಂ ಕಂಪೆನಿಗಳ ಮಧ್ಯೆ ಮತ್ತೊಮ್ಮೆ ಡೇಟಾ ಸಮರ ಆರಂಭವಾಗುವ ಸಾಧ್ಯತೆಯಿದೆ. ರಿಲಯನ್ಸ್ ಜಿಯೋ ದೀಪಾವಳಿ ಹಿನ್ನೆಲೆಯಲ್ಲಿ ಪ್ರೈಮ್ ಗ್ರಾಹಕರಿಗೆ 399 ರೂ. ಕ್ಯಾಶ್ ಬ್ಯಾಕ್ ಆಫರನ್ನು ಪ್ರಕಟಿಸಿದೆ.

    399 ರೂ. ರಿಚಾರ್ಜ್ ಮಾಡಿದರೆ 50 ರೂ. 8 ವೋಚರ್ ನೀಡಲಾಗುವುದು. ಈ ವೋಚರ್ ಮೂಲಕ ಮುಂದೆ 50 ರೂ. ನಿಂದ ಆರಂಭವಾಗಿ 399 ರೂ. ವರೆಗಿನ ಆಫರನ್ನು ರಿಚಾರ್ಜ್ ಮಾಡಬಹುದು ಎಂದು ಜಿಯೋ ತಿಳಿಸಿದೆ.

    84 ದಿನಗಳ ವ್ಯಾಲಿಡಿಟಿ ಹೊಂದಿರುವ 399 ರೂ. ರಿಚಾರ್ಜ್ ಮಾಡಿದರೆ ಪ್ರತಿದಿನ ಗರಿಷ್ಠ 1 ಜಿಬಿ ಡೇಟಾ ಬಳಕೆ ಮಾಡಬಹುದು. ಅಲ್ಲದೇ ಹೊರ ಹೊಗುವ ಎಲ್ಲ ಕರೆಗಳು ಉಚಿತವಾಗಿರಲಿದೆ ಎಂದು ತಿಳಿಸಿದೆ.

    ಅಕ್ಟೋಬರ್ 12 ರಿಂದ 18ರವರೆಗೆ ರಿಚಾರ್ಜ್ ಮಾಡಿದ ಗ್ರಾಹಕರಿಗೆ ಈ ಆಫರ್ ಲಭ್ಯವಾಗಲಿದೆ. ವೋಚರನ್ನು ಗ್ರಾಹಕರು ನವೆಂಬರ್ 15ರ ನಂತರ ಬಳಸಬಹುದಾಗಿದೆ.

     

  • ಜಿಯೋಗೆ ಫೈಟ್ ನೀಡಲು ಬಿಎಸ್‍ಎನ್‍ಎಲ್‍ನಿಂದ ಹೊಸ ಬಂಪರ್ ಆಫರ್

    ಜಿಯೋಗೆ ಫೈಟ್ ನೀಡಲು ಬಿಎಸ್‍ಎನ್‍ಎಲ್‍ನಿಂದ ಹೊಸ ಬಂಪರ್ ಆಫರ್

    ನವದೆಹಲಿ: ರಿಲಯನ್ಸ್ ಜಿಯೋ ಡೇಟಾ ಸಮರ ಆರಂಭಗೊಂಡ ಬಳಿಕ ಉಳಿದ ಕಂಪನಿಗಳು ಆಕರ್ಷಕ ಡೇಟಾ ಪ್ಯಾಕ್ ನೀಡಲು ಆರಂಭಿಸಿದ್ದು, ಈಗ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಹೊಸ ಡೇಟಾ ಆಫರ್ ನೀಡಿದೆ.

    90 ದಿನಗಳ ಕಾಲ ವ್ಯಾಲಿಡಿಟಿ ಹೊಂದಿರುವ 429 ರೂ. ಹೊಸ ರಿಚಾರ್ಜ್ ಆಫರ್ ಅನ್ನು ಬಿಎಸ್‍ಎನ್‍ಎಲ್ ಪ್ರಕಟಿಸಿದೆ.

    ಈ ಆಫರ್ ಪ್ರಕಾರ 90 ದಿನಗಳ ಕಾಲ ಪಾನ್ ಇಂಡಿಯಾ(ಕೇರಳ ವಲಯ ಹೊರತು ಪಡಿಸಿ)ದಲ್ಲಿ ಪ್ರತಿದಿನ ಗರಿಷ್ಟ 1 ಜಿಬಿ ಡೇಟಾವನ್ನು ಬಳಸಬಹುದು. ಅಷ್ಟೇ ಅಲ್ಲದೇ ಈ ಅವಧಿಯಲ್ಲಿ ಹೊರ ಹೋಗುವ ಎಲ್ಲ ಎಸ್‍ಟಿಡಿ ಮತ್ತು ಸ್ಥಳೀಯ ಕರೆಗಳು ಉಚಿತವಾಗಿರಲಿದೆ ಎಂದು ಬಿಎಸ್‍ಎನ್‍ಎಲ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಬಿಎಸ್‍ಎನ್‍ಎಲ್ ಬೋರ್ಡ್ ನಿರ್ದೇಶಕ ಆರ್‍ಕೆ ಮಿತ್ತಲ್ ಪ್ರತಿಕ್ರಿಯಿಸಿ, ಡೇಟಾ ಮತ್ತು ಕರೆಗೆ 429 ರೂ. ಅಂದರೆ ತಿಂಗಳಿಗೆ 143 ರೂ ಇದರಲ್ಲಿ ಸಿಗುತ್ತದೆ. ಪ್ರಸ್ತುತ ಈ ಆಫರ್ ಹೆಚ್ಚು ಸ್ಪರ್ಧಾತ್ಮಕವಾಗಿದೆ ಎಂದು ಹೇಳಿದರು.

    ಇದನ್ನೂ ಓದಿ:  84 ದಿನಗಳ ಕಾಲ 84 ಜಿಬಿ ಡೇಟಾ: ಜಿಯೋದ ಹೊಸ ಆಫರ್‍ಗಳ ಸಂಪೂರ್ಣ ಮಾಹಿತಿ ಇಲ್ಲಿದೆ

  • ಜಿಯೋ Vs ಬಿಎಸ್‍ಎನ್‍ಎಲ್: 339 ರೂ. ರಿಚಾರ್ಜ್ ಮಾಡಿದ್ರೆ ದಿನಕ್ಕೆ 2ಜಿಬಿ ಡೇಟಾ

    ಜಿಯೋ Vs ಬಿಎಸ್‍ಎನ್‍ಎಲ್: 339 ರೂ. ರಿಚಾರ್ಜ್ ಮಾಡಿದ್ರೆ ದಿನಕ್ಕೆ 2ಜಿಬಿ ಡೇಟಾ

    ನವದೆಹಲಿ: ಡೇಟಾ ಪ್ಯಾಕ್‍ನಲ್ಲಿ ಜಿಯೋ ದರ ಸಮರ ಆರಂಭಿಸಿದ ಬಳಿಕ ಏರ್‍ಟೆಲ್, ಐಡಿಯಾಗಳು ಡೇಟಾ ಪ್ಯಾಕ್‍ನಲ್ಲಿ ಆಫರ್ ಘೋಷಿಸಿತ್ತು. ಈಗ ಬಿಎಸ್‍ಎನ್‍ಎಲ್ 339 ರೂ. ರಿಚಾರ್ಜ್ ಮಾಡಿದ್ರೆ ಒಂದು ದಿನಕ್ಕೆ 3ಜಿ ವೇಗದ 2 ಜಿಬಿ ಡೇಟಾ ಇರುವ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ಆಫರ್ ಪ್ರಕಟಿಸಿದೆ.

    ಈ ಆಫರ್‍ನಲ್ಲಿ ಪ್ರತಿದಿನ ಬಿಎಸ್‍ಎನ್‍ಎಲ್‍ನಿಂದ ಬಿಎಸ್‍ಎನ್‍ಎಲ್ ನೆಟ್‍ವರ್ಕಿಗೆ ಹೋಗುವ ಎಲ್ಲ ಕರೆ ಉಚಿತವಾಗಿದ್ದು, 25 ನಿಮಿಷಗಳ ಕಾಲ ಇತರೆ ನೆಟ್‍ವರ್ಕಿಗೆ ಹೋಗುವ ಕರೆ ಉಚಿತವಾಗಿದೆ. 25 ನಿಮಿಷ ಮುಗಿದ ಬಳಿಕ ಪ್ರತಿ ನಿಮಿಷಕ್ಕೆ 25 ಪೈಸೆ ಚಾರ್ಜ್ ಮಾಡುತ್ತದೆ. ಅದರೆ ಈ ಆಫರ್ 90 ದಿನಗಳ ಅವಧಿಗೆ ಮಾತ್ರ ಸೀಮಿತವಾಗಿದೆ.

    ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆ ನೀಡಲು ಈ ಆಫರನ್ನು ಪರಿಚಯಿಸಿದ್ದೇವೆ ಎಂದು ಬಿಎಸ್‍ಎನ್‍ಎಲ್‍ನ ಗ್ರಾಹಕ ಮೊಬಿಲಿಟಿ ವಿಭಾಗದ ನಿರ್ದೇಶಕ ಆರ್.ಕೆ. ಮಿತ್ತಲ್ ಹೇಳಿದ್ದಾರೆ.

    ಜಿಯೋ ಪ್ಲಾನ್ ಹೇಗಿದೆ?
    ಜಿಯೋದ ಹ್ಯಾಪಿ ನ್ಯೂ ಇಯರ್ ಪ್ಲಾನ್ ಮಾರ್ಚ್ 31ಕ್ಕೆ ಅಂತ್ಯವಾಗಲಿದ್ದು, ಏಪ್ರಿಲ್‍ನಿಂದ ಗ್ರಾಹಕರು ಪ್ರತಿ ದಿನ 1 ಜಿಬಿ ಡೇಟಾ ಪಡೆಯಬೇಕಾದರೆ 99 ರೂ. ನೀಡಿ ಪ್ರೈಮ್ ಸದಸ್ಯರಾಗಬೇಕಾಗುತ್ತದೆ. ಈ ಪ್ರೈಮ್ ಸದಸ್ಯತ್ವದ ಅವಧಿ 12 ತಿಂಗಳು ಆಗಿದ್ದು, ಸದಸ್ಯರಾದವರು 303 ರೂ. ಮತ್ತು ಅದಕ್ಕಿಂತಲೂ ಹೆಚ್ಚಿನ ರೂ. ಆಫರ್ ರಿಚಾರ್ಜ್ ಮಾಡಿದ್ರೆ ಅವರಿಗೆ ಪ್ರತಿ ದಿನ 4ಜಿ ವೇಗದಲ್ಲಿ 1 ಜಿಬಿ ಡೇಟಾ ಸಿಗುತ್ತದೆ. ಅಷ್ಟೇ ಅಲ್ಲದೇ ಜಿಯೋ ನ್ಯೂಸ್, ಜಿಯೋ ಸಿನಿಮಾ, ಜಿಯೋ ಟಿವಿ ಆಗಿರುವ ಜಿಯೋ ಮೀಡಿಯಾ ಸರ್ವಿಸ್ ಉಚಿತವಾಗಿ ದೊರೆಯಲಿದೆ.

    ಪ್ರೈಮ್ ಆಫರ್ ನಂತರ ಜಿಯೋ ಬೈ ಒನ್ ಗೆಟ್ ಒನ್ ಆಫರ್ ಬಿಡುಗಡೆ ಮಾಡಿತ್ತು. ಈ ಆಫರ್‍ ನಲ್ಲಿ 303 ರೂ. ರಿಚಾರ್ಜ್ ಮಾಡಿದರೆ  ಹೆಚ್ಚುವರಿಯಾಗಿ 5 ಜಿಬಿ ಡೇಟಾ ನೀಡುವುದಾಗಿ ಪ್ರಕಟಿಸಿದೆ. ಇದರಿಂದಾಗಿ ಗ್ರಾಹಕರು 28 ದಿನಗಳ ಅವಧಿಯಲ್ಲಿ ಒಟ್ಟು 33 ಜಿಬಿ ಡೇಟಾವನ್ನು ಪಡೆದುಕೊಳ್ಳಬಹುದು. ಇನ್ನು 499 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಿದ್ರೆ ಹೆಚ್ಚುವರಿಯಾಗಿ 10 ಜಿಬಿ ಡೇಟಾ ಸಿಗಲಿದೆ. ಈ ಹೆಚ್ಚುವರಿ ಡೇಟಾಗಳು ಹೇಗೆ ಸೇರ್ಪಡೆಯಾಗುತ್ತದೆ ಎನ್ನುವ ಪ್ರಶ್ನೆಗೆ ಜಿಯೋ ಆಟೋಮ್ಯಾಟಿಕ್ ಆಗಿ ಗ್ರಾಹಕರ ಖಾತೆಗೆ ಸೇರ್ಪಡೆಯಾಗುತ್ತದೆ ಎಂದು ತಿಳಿಸಿದೆ. 303 ರೂ.ಗಿಂತ ಹೆಚ್ಚಿನ ರಿಚಾರ್ಜ್ ಮಾಡಿದ ಪ್ರೈಮ್ ಗ್ರಾಹಕರಿಗೆ ಮಾತ್ರ ಈ ಆಫರ್ ಸಿಗಲಿದೆ.

    ಜಿಯೋಗೆ ಸಂಬಂಧಿಸಿದ  ಎಲ್ಲ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ: ಜಿಯೋ


  • ಪ್ರೈಮ್ ಗ್ರಾಹಕರಿಗೆ ಗುಡ್‍ನ್ಯೂಸ್: ಜಿಯೋದಿಂದ ಈಗ ಬೈ ಒನ್ ಗೆಟ್ ಒನ್ ಡೇಟಾ ಆಫರ್

    ಪ್ರೈಮ್ ಗ್ರಾಹಕರಿಗೆ ಗುಡ್‍ನ್ಯೂಸ್: ಜಿಯೋದಿಂದ ಈಗ ಬೈ ಒನ್ ಗೆಟ್ ಒನ್ ಡೇಟಾ ಆಫರ್

    ಮುಂಬೈ:  ಬಟ್ಟೆ,ಎಲೆಕ್ಟ್ರಾನಿಕ್ಸ್ ವಸ್ತು ಇತ್ಯಾದಿ ಗಳನ್ನು ಖರೀದಿ ಮಾಡುವಾಗ ಬೈ ಒನ್ ಗೆಟ್ ಒನ್ ಆಫರ್‍ಗಳನ್ನು ನೀವು ಕೇಳಿರಬಹುದು. ಆದರೆ ಈಗ ಮೊಬೈಲ್ ಡೇಟಾದದಲ್ಲೂ ಈ ಆಫರ್ ಬಂದಿದೆ. ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಹೊಸ ಮೈಲಿಗಲ್ಲನ್ನು ಸೃಷ್ಟಿಸುತ್ತಿರುವ ರಿಲಯನ್ಸ್ ಜಿಯೋ ಡೇಟಾ ರಿಚಾರ್ಜ್ ನಲ್ಲಿ ಸಿಮೀತ ಅವಧಿಯ ಬೈ ಒನ್ ಗೆಟ್ ಒನ್ ಆಫರ್ ಪ್ರಕಟಿಸಿದೆ.

    ಹೌದು. ಪ್ರೈಮ್ ಗ್ರಾಹಕರಿಗೆ ಈಗ 5 ಜಿಬಿ ಮತ್ತು 10 ಜಿಬಿ ಡೇಟಾವನ್ನು ಹೆಚ್ಚುವರಿಯಾಗಿ ನೀಡಲು ಜಿಯೋ ಮುಂದಾಗಿದೆ. ಆದರೆ ಈ ಆಫರ್ ಎಲ್ಲ ಜಿಯೋ ಪ್ರೈಮ್ ಸೇರ್ಪಡೆಯಾದ ಗ್ರಾಹಕರಿಗೆ ಸಿಗುವುದಿಲ್ಲ. ಆಯ್ದ ರಿಚಾರ್ಜ್ ಮಾಡಿದವರಿಗೆ ಮಾತ್ರ ಈ ಲಾಭ ಸಿಗಲಿದೆ.

    ಇದನ್ನೂ ಓದಿ:ಜಿಯೋ ಪ್ರೈಮ್ ಆಫರ್: ಎಷ್ಟು ರೂ. ರಿಚಾರ್ಜ್ ಮಾಡಿದ್ರೆ ಎಷ್ಟು ಡೇಟಾ ಸಿಗುತ್ತೆ? ಇಲ್ಲಿದೆ ಮಾಹಿತಿ

    ಜಿಯೋ ಪ್ರೈಮ್ ಗ್ರಾಹಕರು ಮಾರ್ಚ್ 31ರ ನಂತರ 303 ರೂ. ರಿಚಾರ್ಜ್ ಮಾಡಿದ್ರೆ 28 ಜಿಬಿ ಡೇಟಾ(ದಿನಕ್ಕೆ ಗರಿಷ್ಟ 1 ಜಿಬಿ ಡೇಟಾ) ನೀಡಲಾಗುವುದು ಎಂದು ಜಿಯೋ ಈ ಹಿಂದೆ ಹೇಳಿತ್ತು. ಆದರೆ ಈಗ ಈ ಆಫರ್‍ಗೆ ಹೆಚ್ಚುವರಿಯಾಗಿ 5 ಜಿಬಿ ಡೇಟಾ ನೀಡುವುದಾಗಿ ಪ್ರಕಟಿಸಿದೆ. ಇದರಿಂದಾಗಿ ನೀವು 28 ದಿನಗಳ ಅವಧಿಯಲ್ಲಿ ಒಟ್ಟು 33 ಜಿಬಿ ಡೇಟಾವನ್ನು ಪಡೆದುಕೊಳ್ಳುವಿರಿ.

    ಇದನ್ನೂ ಓದಿ: ಜಿಯೋದಲ್ಲಿ 303 ರೂ.ಗೆ ಫ್ರೀ ಕಾಲ್ 28 ಜಿಬಿ ಡೇಟಾ: ಬೇರೆ ಕಂಪೆನಿಗಳಲ್ಲಿ 10 ಜಿಬಿ ಡೇಟಾಗೆ ಎಷ್ಟು ರೂ. ರಿಚಾರ್ಜ್

    ಇನ್ನು 499 ರೂ. ಮತ್ತು ಅದಕ್ಕಿಂತ ಹೆಚ್ಚಿನ ರಿಚಾರ್ಜ್ ಮಾಡಿದ್ರೆ ನಿಮಗೆ ಹೆಚ್ಚುವರಿಯಾಗಿ 10 ಜಿಬಿ ಡೇಟಾ ಸಿಗಲಿದೆ. ಈ ಹೆಚ್ಚುವರಿ ಡೇಟಾಗಳು ಹೇಗೆ ಸೇರ್ಪಡೆಯಾಗುತ್ತದೆ ಎನ್ನುವ ಪ್ರಶ್ನೆಗೆ ಜಿಯೋ ಆಟೋಮ್ಯಾಟಿಕ್ ಆಗಿ ಗ್ರಾಹಕರ ಖಾತೆಗೆ ಸೇರ್ಪಡೆಯಾಗುತ್ತದೆ ಎಂದು ತಿಳಿಸಿದೆ.

    303 ರೂ.ಗಿಂತ ಹೆಚ್ಚಿನ ರಿಚಾರ್ಜ್ ಮಾಡಿದ ಪ್ರೈಮ್ ಗ್ರಾಹಕರಿಗೆ ಮಾತ್ರ ಈ ಆಫರ್ ಸಿಗಲಿದೆ. ಈ ಆಫರ್ ಬೇಕಾದರೆ ಜಿಯೋ ಗ್ರಾಹಕರು ಮಾರ್ಚ್ 31ರ ಒಳಗಡೆ 99 ರೂ. ನೀಡಿ ಪ್ರೈಮ್ ಸದಸ್ಯರಾಗುವುದು ಕಡ್ಡಾಯ.

    ಇದನ್ನೂ ಓದಿ: ಏಪ್ರಿಲ್ 1ರಿಂದ ಜಿಯೋ ಉಚಿತವಲ್ಲ: ಏನಿದು ಜಿಯೋ ಪ್ರೈಮ್? ಇಲ್ಲಿದೆ ಪೂರ್ಣ ಮಾಹಿತಿ

  • ಜಿಯೋಗೆ ಸೆಡ್ಡು: 36 ರೂ.ಗೆ 1 ಜಿಬಿ ಬಿಎಸ್‍ಎನ್‍ಎಲ್ ಡೇಟಾ

    ಜಿಯೋಗೆ ಸೆಡ್ಡು: 36 ರೂ.ಗೆ 1 ಜಿಬಿ ಬಿಎಸ್‍ಎನ್‍ಎಲ್ ಡೇಟಾ

    ನವದೆಹಲಿ: ರಿಲಯನ್ಸ್ ಜಿಯೋಗೆ ಫೈಟ್ ನೀಡಲು ಈಗ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಲ್ 36 ರೂ. ಗೆ 1 ಜಿಬಿ ಡೇಟಾ ನಿಡಲು ಮುಂದಾಗಿದೆ.

    ಪ್ರಿಪೇಯ್ಡ್ ಗ್ರಾಹಕರು 28 ದಿನ ವ್ಯಾಲಿಡಿಟಿ ಹೊಂದಿರುವ ವಿಶೇಷ ಟ್ಯಾರಿಫ್ ವೋಚರ್(ಎಸ್‍ಟಿವಿ) 291 ರೂ. ರಿಚಾರ್ಜ್ ಮಾಡಿದ್ದರೆ ಇಲ್ಲಿಯವರೆಗೆ 4 ಜಿಬಿ ಡೇಟಾ ಸಿಗುತಿತ್ತು. ಆದರೆ ಇನ್ನು ಮುಂದೆ ನೀವು 8 ಜಿಬಿ ಡೇಟಾವನ್ನು ಪಡೆಯಬಹುದು.

    ಇದರ ಜೊತೆಯಲ್ಲೇ 78 ರೂ. ಎಸ್‍ಟಿವಿ ರಿಚಾರ್ಜ್ ಮಾಡಿದರೆ 4 ಜಿಬಿ ಡೇಟಾವನ್ನು ಪಡೆಯಬಹುದು. ಈ ಹಿಂದೆ ಈ ಆಫರ್‍ನಲ್ಲಿ ರಿಚಾರ್ಜ್ ಮಾಡಿದ್ದರೆ 2 ಜಿಬಿ ಡೇಟಾ ಸಿಗುತಿತ್ತು.

    36ರೂಪಾಯಿಗೆ 1 ಜಿಬಿ ನೀಡುವುದು ಟೆಲಿಕಾಂ ಇಂಡಸ್ಟ್ರಿಯಲ್ಲಿ ಅತೀ ಕಡಿಮೆ ಬೆಲೆ ಆಫರ್ ಎಂದು ಬಿಎಸ್‍ಎನ್‍ಎಲ್ ಹೇಳಿದೆ. ಬಿಎಸ್‍ಎನ್‍ಎಲ್ ನಿರ್ದೇಶಕ ಆರ್‍ಕೆ ಮಿತ್ತಲ್ ಹೇಳಿಕೆಯನ್ನು ಬಿಡುಗಡೆಗೊಳಿಸಿ ಈ ಹೊಸ ಆಫರ್ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದಿನಿಂದ(ಫೆ.6ರಿಂದ) ಈ ಆಫರ್ ಲಭ್ಯವಾಗಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಹ್ಯಾಪಿ ನ್ಯೂ ಈಯರ್ ಪ್ಲಾನ್ ನಲ್ಲಿರುವ ಗ್ರಾಹಕರಿಗೆ ರಿಲಯನ್ಸ್ ಜಿಯೋ ಜನವರಿ 1ರಿಂದ ಮಾರ್ಚ್ 31ರವರೆಗೆ ಪ್ರತಿ ದಿನ 1ಜಿಬಿ 4 ಜಿ ಡೇಟಾವನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ. 1ಜಿಬಿ ಡೇಟಾ ಮುಗಿದ ಮೇಲೆ 128 ಕೆಬಿಪಿಎಸ್ ವೇಗದಲ್ಲಿ ಡೇಟಾ ಸಿಗುತ್ತಿದೆ.