Tag: data operator

  • ಬೆಳಿಗ್ಗೆ ಮದುವೆ, ರಾತ್ರಿ ನೇಣು ಬಿಗಿದು ಆತ್ಮಹತ್ಯೆ – ಡೇಟಾ ಆಪರೇಟರ್ ಸಾವಿನ ಸುತ್ತ ಅನುಮಾನದ ಹುತ್ತ

    ಬೆಳಿಗ್ಗೆ ಮದುವೆ, ರಾತ್ರಿ ನೇಣು ಬಿಗಿದು ಆತ್ಮಹತ್ಯೆ – ಡೇಟಾ ಆಪರೇಟರ್ ಸಾವಿನ ಸುತ್ತ ಅನುಮಾನದ ಹುತ್ತ

    ಕೋಲಾರ: ಬೆಳಿಗ್ಗೆ ಮದುವೆಯಾಗಿದ್ದ ವ್ಯಕ್ತಿ ಅದೇ ದಿನ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

    ಬಂಗಾರಪೇಟೆ (Bangarpete) ತಾಲೂಕಿನ ನಾಯಕರಹಳ್ಳಿ ಮೂಲದ ಹರೀಶ್ ಬಾಬು (33) ನೇಣಿಗೆ ಶರಣಾಗಿದ್ದು, ಕಳೆದ 8 ವರ್ಷಗಳಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದರು.ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ವಸ್ತ್ರ ಸಂಹಿತೆ ಜಾರಿ ಆಗಲಿ: ಸಂಸದ ಯದುವೀರ್

    ಕಳೆದ ಮೂರು ದಿನಗಳಿಂದ ರಜೆಯಲ್ಲಿದ್ದ ಹರೀಶ್ ಬಾಬು, ಬುಧವಾರ ಬೆಳಿಗ್ಗೆ ರಿಜಿಸ್ಟಾರ್ ಮ್ಯಾರೇಜ್ ಆಗಿದ್ದರು. ಆದರೆ ಅದೇ ದಿನ ರಾತ್ರಿ 11:30ರ ಸುಮಾರಿಗೆ ಆಸ್ಪತ್ರೆಯ ಇಎನ್‌ಟಿ ವಿಭಾಗದ ಕೊಠಡಿಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

    ಈ ಕುರಿತು ಮೃತ ಹರೀಶ್ ಬಾಬು ತಾಯಿ ಮಾತನಾಡಿ, ಒಂದು ತಿಂಗಳ ಹಿಂದೆ ಯುವತಿಯೊಬ್ಬಳು ನಮ್ಮ ಮನೆಗೆ ಬಂದು ನಾನು ಹಾಗೂ ಹರೀಶ್ ಮದುವೆಯಾಗುತ್ತೇವೆ ಎಂದಳು. ಅದಕ್ಕೆ ಕೆಲ ದಿನಗಳ ನಂತರ ನಾನೇ ಮಾಡುತ್ತೇನೆ ಎಂದು ಹೇಳಿದ್ದೆ. ಆದರೆ ಬುಧವಾರ ಬೆಳಿಗ್ಗೆ ಯುವತಿ ಕಡೆಯವರು ಬಂದು ನನ್ನ ಮಗನನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ಮದುವೆ ಮಾಡಿಸಿದ್ದಾರೆ ಎಂದು ತಿಳಿಸಿದರು.

    ಮೃತ ಹರೀಶ್ ಬುಧವಾರ ರಾತ್ರಿ 11:15ರ ಸುಮಾರಿಗೆ ಆಸ್ಪತ್ರೆಯೊಳಗೆ ಹೋಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮದ್ಯ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸದ್ಯ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಲ್ಯಾಂಬೋರ್ಗಿನಿ ಭೀಕರ ಅಪಘಾತ; ಫುಟ್ಬಾಲ್‌ ಆಟಗಾರ ಡಿಯೋಗೊ ದುರಂತ ಸಾವು

  • ಗುಜರಾತ್‍ನ ಡಾಟಾ ಆಪರೇಟರ್ ರಾಜ್ಯಪಾಲರ ಪಿಎ- 2 ವರ್ಷ ಕೆಲಸ ಮಾಡ್ದಿದ್ರೂ ಬಿಟ್ಟಿ ಸಂಬಳ

    ಗುಜರಾತ್‍ನ ಡಾಟಾ ಆಪರೇಟರ್ ರಾಜ್ಯಪಾಲರ ಪಿಎ- 2 ವರ್ಷ ಕೆಲಸ ಮಾಡ್ದಿದ್ರೂ ಬಿಟ್ಟಿ ಸಂಬಳ

    ಬೆಂಗಳೂರು: ರಾಜ್ಯಪಾಲ ವಿ.ಆರ್. ವಾಲಾ ಸಾಹೇಬ್ರು ತಮ್ಮ ಪ್ರೈವೇಟ್ ಸೆಕ್ರೆಟರಿಯನ್ನಾಗಿ ನೇಮಕ ಮಾಡಿಕೊಡಿರೋದು ಯಾರನ್ನು ಗೊತ್ತೆ? ಕೇಳಿದ್ರೆ ನಿಮಗೆ ಆಶ್ಚರ್ಯ ಆಗುತ್ತೆ.

    ರಾಜ್ಯಪಾಲರ ಪಿಎ ಆಗಿರೋದು ಗುಜರಾತ್‍ನ ಮಾರಿಟೈಮ್ ಬೋರ್ಡ್‍ನಲ್ಲಿ ಡಾಟಾ ಎಂಟ್ರಿ ಅಪರೇಟರ್ ಆಗಿದ್ದ ತೇಜಸ್ ಭಟ್ಟಿ. ರಾಜ್ಯಪಾಲರ ಪ್ರಪೋಸಲ್ ಗೆ ತುಟಿಕ್ ಪಿಟಿಕ್ ಎನ್ನದ ಸರ್ಕಾರ ಬರೋಬ್ಬರಿ 60 ಸಾವಿರ ರೂ. ಸಂಬಳ ನೀಡಿ ಗುತ್ತಿಗೆ ಆಧಾರದಲ್ಲಿ ಭಟ್ಟಿಯನ್ನ ನೇಮಿಸಿಕೊಂಡಿದೆ.

    ಇಂಟ್ರೆಸ್ಟಿಂಗ್ ವಿಷಯ ಅಂದ್ರೆ ತೇಜಸ್ ಭಟ್ಟಿ ನೇಮಕಕ್ಕೆ ಒಪ್ಪಿಗೆ ನೀಡಿದ್ದು ಜನವರಿ 4, 2016 ರಂದು. ಆದ್ರೆ ನಮ್ಮ ಘನ ಸರ್ಕಾರ ಸೆಪ್ಟಂಬರ್ 1, 2014 ರಿಂದ ಅನ್ವಯವಾಗುವಂತೆ ಬರೋಬ್ಬರಿ 60 ಸಾವಿರದಂತೆ ಸಂಬಳ ನೀಡುತ್ತಿದೆ. ಭಟ್ಟಿ ನೇಮಕದಲ್ಲಿ ಎಲ್ಲಾ ನಿಮಗಳನ್ನು ಗಾಳಿಗೆ ತೂರಲಾಗಿದೆ ಎಂದು ತಿಳಿದುಬಂದಿದೆ.