Tag: data

  • Cyber Attack | ಸ್ಟಾರ್‌ ಹೆಲ್ತ್‌ ವಿಮಾ ಸಂಸ್ಥೆಯಿಂದ 3.1 ಕೋಟಿ ಗ್ರಾಹಕರ ಡೇಟಾ ಕಳವು

    Cyber Attack | ಸ್ಟಾರ್‌ ಹೆಲ್ತ್‌ ವಿಮಾ ಸಂಸ್ಥೆಯಿಂದ 3.1 ಕೋಟಿ ಗ್ರಾಹಕರ ಡೇಟಾ ಕಳವು

    – ಪ್ಯಾನ್, ಬ್ಯಾಂಕ್‌ ಖಾತೆ ವಿವರ, ಮೊಬೈಲ್ ಸಂಖ್ಯೆ ಸೇರಿ ಪ್ರಮುಖ ಡೇಟಾ ಕಳವು

    ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ಸೈಬರ್‌ ಪ್ರಕರಣವೊಂದು (Cyber Case) ಬೆಳಕಿಗೆ ಬಂದಿದೆ. ಭಾರತದ ಪ್ರಮುಖ ಆರೋಗ್ಯ ವಿಮಾ ಸಂಸ್ಥೆ ಸ್ಟಾರ್‌ ಹೆಲ್ತ್‌ ನಲ್ಲಿ (Star Health Insurance) ಕೋಟ್ಯಂತರ ಪ್ರಮಾಣದ ಡೇಟಾ ಕಳವಾಗಿದೆ ಎಂದು ವರದಿಯಾಗಿದೆ.

    ಕೋಟ್ಯಂತರ ಗ್ರಾಹಕರ ಸೂಕ್ಷ್ಮ, ವೈಯಕ್ತಿಕ ಹಾಗೂ ವಿಮೆಗೆ ಸಂಬಂಧಿಸಿದ ವಿವರಗಳನ್ನು ಕಳುವು ಮಾಡಲಾಗಿದೆ. ಕದ್ದ ಡೇಟಾಗಳು ಆನ್‌ಲೈನ್‌ನಲ್ಲಿ ಮಾರಾಟವಾಗಿವೆ ಎಂದು ವರದಿಗಳು ಉಲ್ಲೇಖಿಸಿವೆ. ಈ ಬಗ್ಗೆ ಖುದ್ದು ಹ್ಯಾಕರ್‌ (Hacker) ಹೇಳಿಕೊಂಡಿರುವುದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಟೆಸ್ಲಾದಿಂದ ಸ್ಟೀರಿಂಗ್ ವೀಲ್‌ ಇಲ್ಲದ AI ಆಧಾರಿತ ರೋಬೋಟ್ಯಾಕ್ಸಿ ಬಿಡುಗಡೆ

    ತಾನು 3.1 ಕೋಟಿಗಿಂತಲೂ ಹೆಚ್ಚು ಗ್ರಾಹಕರಿಗೆ ಸಂಬಂಧಿಸಿದ 7.24TB ಡೇಟಾವನ್ನು (7240 GB) ಹ್ಯಾಕ್‌ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೇ ಕಳವು ಮಾಡಿದ ಈ ಡೇಟಾವನ್ನು 1.50 ಲಕ್ಷ ಡಾಲರ್‌ಗೆ (1.26 ಕೋಟಿ ರೂ.) ಮಾರಾಟ ಮಾಡಲು ಡೇಟಾಗಳನ್ನ ಪಟ್ಟಿ ಮಾಡಲಿದ್ದೇನೆ. ಹೆಚ್ಚುವರಿಯಾಗಿ ಹೊಂದಿರುವ 1 ಲಕ್ಷ ಗ್ರಾಹಕರ ಸಣ್ಣ ಡೇಟಾ ಸೆಟ್‌ಗಳನ್ನು ಪ್ರತಿ ತಲಾ 10 ಸಾವಿರ ಡಾಲರ್‌ಗೆ (8.40 ಲಕ್ಷ ರೂ.) ಮಾರಾಟ ಮಾಡಲು ನಿರ್ಧರಿಸಿದ್ದೇನೆ ಎಂಬುದಾಗಿ ಹೇಳಿದ್ದಾನೆ. ಈ ಡೇಟಾ ಉಲ್ಲಂಘನೆಯು ದೇಶದಲ್ಲಿ ದತ್ತಾಂಶ ರಕ್ಷಣೆ ಮತ್ತು ಭದ್ರತೆ ಬಗ್ಗೆ ಗಮನಾರ್ಹ ಕಾಳಜಿಯನ್ನು ಹುಟ್ಟುಹಾಕಿದೆ. ಬಳಕೆದಾರರು ಕೂಡಲೇ ತಮ್ಮ ಪಾಸ್‌ವರ್ಡ್‌ಗಳನ್ನು ತಕ್ಷಣವೇ ಬದಲಾಯಿಸಿಕೊಳ್ಳುವಂತೆ ಸೈಬರ್‌ ತಜ್ಞರು ಸೂಚಿಸಿದ್ದಾರೆ.

    ಏನೇನು ಡೇಟಾ ಕಳವು?
    ಸ್ಟಾರ್‌ ಹೆಲ್ತ್‌ ವಿಮಾ ಸಂಸ್ಥೆಯಿಂದ ಕದ್ದ ಡೇಟಾಗಳಲ್ಲಿ ಗ್ರಾಹಕರ ಹೆಸರು, ಪ್ಯಾನ್ ಸಂಖ್ಯೆ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸಗಳು, ಜನ್ಮದಿನಾಂಕ, ಗೌಪ್ಯ ವೈದ್ಯಕೀಯ ದಾಖಲೆಗಳು, ವಸತಿ ವಿಳಾಸಗಳು, ಬ್ಯಾಂಕ್‌ ಸ್ಥಿತಿ ವಿವರ, ಆರೋಗ್ಯ ಕಾರ್ಡ್ ಸಂಖ್ಯೆಗಳು ಸೇರಿ ಅತ್ಯಂತ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿದೆ ಎಂದು ಹ್ಯಾಕರ್ ಹೇಳಿಕೊಂಡಿದ್ದಾನೆ. ಇದನ್ನೂ ಓದಿ: 10 ವರ್ಷಗಳ ಹಿಂದೆ ಮಾಡಿದ ಜಾತಿಗಣತಿ ರಿಪೋರ್ಟ್ ಇಟ್ಕೊಂಡು ಏನು ಮಾಡ್ತೀರಿ? : ಹೆಚ್‌ಡಿಕೆ ಕಿಡಿ

    ಸ್ಟಾರ್‌ ಹೆಲ್ತ್‌ ವಿಮಾ ಸಂಸ್ಥೆಯ ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ (CISO) ಅಮರ್‌ಜೀತ್ ಖನುಜಾ ಅವರೇ ಮಾಹಿತಿಯನ್ನು ನೇರವಾಗಿ ನನಗೆ ಮಾರಾಟ ಮಾಡುವ ಮೂಲಕ ಡೇಟಾ ಸೋರಿಕೆಯ ಪಾಲುದಾರರಾಗಿದ್ದಾರೆ. 3.1 ಕೋಟಿ ಗ್ರಾಹಕರ ಡೇಟಾವನ್ನು 43,000 ಯುಎಸ್‌ ಡಾಲರ್‌ಗೆ (36.14 ಲಕ್ಷ ರೂ.)ಗೆ ಮಾರಾಟ ಮಾಡಿದ್ದಾರೆ ಎಂದು ಖುದ್ದು ಹ್ಯಾಕರ್‌ ಹೇಳಿಕೊಂಡಿದ್ದಾನೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

  • ಡೇಟಾ ಟ್ರಾಫಿಕ್‌- ಚೀನಾ ಕಂಪನಿ ಹಿಂದಿಕ್ಕಿದ  ರಿಲಯನ್ಸ್‌

    ಡೇಟಾ ಟ್ರಾಫಿಕ್‌- ಚೀನಾ ಕಂಪನಿ ಹಿಂದಿಕ್ಕಿದ ರಿಲಯನ್ಸ್‌

    ಮುಂಬೈ: ಕಳೆದ ತ್ರೈಮಾಸಿಕದಲ್ಲಿ 40.9 ಎಕ್ಸಾಬೈಟ್‌ ಡೇಟಾ ಟ್ರಾಫಿಕ್‌ (Data Traffic) ದಾಖಲಾಗುವ ಮೂಲಕ  ರಿಲಯನ್ಸ್‌ ಜಿಯೋ (Reliance Jio) ಮೈಲಿಗಲ್ಲು  ಬರೆದಿದೆ.

    ಮೊಬೈಲ್‌ ಸೇವೆಗಳ ಬಗ್ಗೆ ಅಧ್ಯಯನ ನಡೆಸುವ Tefficient ಕಂಪನಿ ಈ ವರದಿ ಪ್ರಕಾರ ಜಿಯೋ 40.9 ಎಕ್ಸಾಬೈಟ್‌ ಡೇಟಾ ಬಳಕೆಯಾಗಿದ್ದರೆ ಇಲ್ಲಿಯವರೆಗೆ ನಂಬರ್‌ 1 ಸ್ಥಾನದಲ್ಲಿದ್ದ ಚೀನಾದ ಚೀನಾ ಮೊಬೈಲ್‌ (China Mobile) 38 ಎಕ್ಸಾಬೈಟ್‌ ಡೇಟಾ ದಾಖಲಾಗಿದೆ.

    ಜಿಯೋ 10.8 ಕೋಟಿ ಗ್ರಾಹಕರನ್ನು ಹೊಂದುವ ಮೂಲಕ 5ಜಿ ಗ್ರಾಹಕರ ಪೈಕಿ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ. ಸದ್ಯ ಜಿಯೋದ 28% ಆದಾಯ 5ಜಿ ಸೇವೆಯಿಂದ ಬರುತ್ತಿದೆ.

    ಜಿಯೋದ ಏರ್‌ಫೈಬರ್‌ ಸೇವೆ 5,900 ನಗರದಲ್ಲಿ ಇದೆ. ಜಿಯೋ ಏರ್‌ಫೈಬರ್‌ನಲ್ಲಿ ಪ್ರತಿದಿನ 13 ಗಿಗಾಬೈಟ್‌ ಡೇಟಾ ಬಳಕೆ ಆಗುತ್ತಿದ್ದು, ಜಿಯೋ ಫೈಬರ್‌ಗೆ ಹೋಲಿಸಿದರೆ 30% ಹೆಚ್ಚಿದೆ

    ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಅವರು ರಿಲಯನ್ಸ್ ಜಿಯೋ ಯಶಸ್ಸಿನ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ, ಎಲ್ಲಾ ವಿಭಾಗಗಳು ದೃಢವಾದ ಹಣಕಾಸು ಮತ್ತು ಕಾರ್ಯನಿರ್ವಹಣೆಯ ಕಾರ್ಯಕ್ಷಮತೆ ದಾಖಲಿಸಿದ್ದು ಹರ್ಷದಾಯಕವಾಗಿದೆ ಎಂದಿದ್ದಾರೆ.

    5ಜಿ ಸೇವೆಗಳ ಪ್ರಾರಂಭದ ನಂತರ, ರಿಲಯನ್ಸ್ ಜಿಯೊದ ಡೇಟಾ ಬಳಕೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 35.2ರಷ್ಟು ಜಿಗಿತವನ್ನು ಕಂಡಿದೆ.

  • ಮಕ್ಕಳ ವೈಯಕ್ತಿಕ ಡೇಟಾ ದುರುಪಯೋಗ – ಟಿಕ್‌ಟಾಕ್‌ಗೆ ಭಾರೀ ದಂಡ ವಿಧಿಸಿದ ಬ್ರಿಟನ್

    ಮಕ್ಕಳ ವೈಯಕ್ತಿಕ ಡೇಟಾ ದುರುಪಯೋಗ – ಟಿಕ್‌ಟಾಕ್‌ಗೆ ಭಾರೀ ದಂಡ ವಿಧಿಸಿದ ಬ್ರಿಟನ್

    ಲಂಡನ್: ಮಕ್ಕಳ ವೈಯಕ್ತಿಕ ಡೇಟಾ ದುರುಪಯೋಗ ಸೇರಿದಂತೆ ಹಲವಾರು ಡೇಟಾ ರಕ್ಷಣಾ ಕಾನೂನುಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಚೀನಾ (China) ಒಡೆತನದ ವೀಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ಗೆ (TikTok) ಬ್ರಿಟನ್ (Britain) ಸುಮಾರು 16 ಮಿಲಿಯನ್ ಡಾಲರ್ (ಸುಮಾರು 130 ಕೋಟಿ ರೂ.) ದಂಡವನ್ನು ವಿಧಿಸಿದೆ.

    ವರದಿಗಳ ಪ್ರಕಾರ ಟಿಕ್‌ಟಾಕ್ ನಿಯಮಗಳನ್ನು ಉಲ್ಲಂಘಿಸಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 10 ಲಕ್ಷ ಮಕ್ಕಳಿಗೆ ವೀಡಿಯೋ ಹಂಚಿಕೆ ಪ್ಲಾಟ್‌ಫಾರ್ಮ್ ಅನ್ನು ಬಳಸಲು ಅವಕಾಶ ನೀಡಿದೆ.

    ಮಂಗಳವಾರ ಮಾಹಿತಿ ಆಯುಕ್ತರ ಕಚೇರಿ (ಐಸಿಒ), ಟಿಕ್‌ಟಾಕ್ ಯಾರು, ಯಾವ ವಯಸ್ಸಿನಲ್ಲಿ ತನ್ನ ಪ್ಲಾಟ್‌ಫಾರ್ಮ್ಅನ್ನು ಬಳಸುತ್ತಾರೆ ಎಂಬುದರ ಬಗ್ಗೆ ಸರಿಯಾಗಿ ಗಮನಹರಿಸಿಲ್ಲ. ಮಾತ್ರವಲ್ಲದೇ ಅಪ್ರಾಪ್ತ ಮಕ್ಕಳನ್ನು ನಿರ್ಬಂಧಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಅದು ವಿಫಲವಾಗಿದೆ. ಬಳಕೆದಾರರ ಡೇಟಾವನ್ನು ಹೇಗೆ ಸಂಗ್ರಹಿಸಲಾಗುತ್ತಿದೆ ಹಾಗೂ ಬಳಸಲಾಗುತ್ತಿದೆ ಎಂಬುದರ ಬಗ್ಗೆ ಸರಿಯಾಗಿ ಮಾಹಿತಿಯನ್ನು ಒದಗಿಸಿಲ್ಲ. ಇದೀಗ ದಂಡವನ್ನು 2018ರ ಮೇ ಯಿಂದ 2020ರ ಜುಲೈ ನಡುವಿನ ನಿಯಮ ಉಲ್ಲಂಘನೆಗೆ ವಿಧಿಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಶೀಘ್ರವೇ ಬರಲಿದೆ ವಾಟ್ಸಪ್ ಚಾಟ್ ಲಾಕ್ ಮಾಡೋ ಹೊಸ ಫೀಚರ್

    ಮಕ್ಕಳು ಭೌತಿಕ ಜಗತ್ತಿನಲ್ಲಿರುವಂತೆಯೇ ಡಿಜಿಟಲ್ ಜಗತ್ತಿನಲ್ಲಿಯೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಕಾನೂನುಗಳಿವೆ. ಆದರೆ ಟಿಕ್‌ಟಾಕ್ ಆ ಕಾನೂನುಗಳಿಗೆ ಬದ್ಧವಾಗಿಲ್ಲ. ಟಿಕ್‌ಟಾಕ್ ಈ ಬಗ್ಗೆ ಸರಿಯಾಗಿ ಮಾಹಿತಿ ನೀಡಿ, ಉತ್ತಮವಾಗಿ ಕಾರ್ಯನಿರ್ವಹಿಸಬೇಕಿತ್ತು ಎಂದು ಬ್ರಿಟನ್‌ನ ಮಾಹಿತಿ ಆಯುಕ್ತ ಜಾನ್ ಎಡ್ವರ್ಡ್ಸ್ ಹೇಳಿದ್ದಾರೆ.

    ಈಗಾಗಲೇ ಟಿಕ್‌ಟಾಕ್ ಅನ್ನು ಭದ್ರತಾ ದೃಷ್ಟಿಯಿಂದ ಹಲವು ದೇಶಗಳಲ್ಲಿ ಬ್ಯಾನ್ ಮಾಡಲಾಗಿದೆ. ಅವುಗಳಲ್ಲಿ ಭಾರತ, ಆಸ್ಟ್ರೇಲಿಯಾ, ಫ್ರಾನ್ಸ್, ಬ್ರಿಟನ್, ಕೆನಡಾ, ನ್ಯೂಜಿಲೆಂಡ್ ದೇಶಗಳು ಸೇರಿವೆ. ಇದನ್ನೂ ಓದಿ: Twitter logo: ಟ್ವಿಟ್ಟರ್‌ ‘ನೀಲಿ ಹಕ್ಕಿ’ ನಾಯಿ ಮರಿಯಾಯ್ತು!

  • ಜ್ಯೂಸ್ ಜಾಕಿಂಗ್ ಮೂಲಕ ಡೇಟಾ ಕಳವು – ಪವರ್ ಬ್ಯಾಂಕ್ ಚಾರ್ಚಿಂಗ್‍ನಿಂದ ಆಪತ್ತು!

    ಜ್ಯೂಸ್ ಜಾಕಿಂಗ್ ಮೂಲಕ ಡೇಟಾ ಕಳವು – ಪವರ್ ಬ್ಯಾಂಕ್ ಚಾರ್ಚಿಂಗ್‍ನಿಂದ ಆಪತ್ತು!

    ಬೆಂಗಳೂರು: ಡಿಜಿಟಲ್ ಯುಗದಲ್ಲಿ ಜನ ಸ್ಮಾರ್ಟ್ ಆದಷ್ಟು ಸಮಸ್ಯೆಗಳು ಕೂಡ ಹೆಚ್ಚಾಗುತ್ತಿವೆ. ಇಷ್ಟು ದಿನ ಮೊಬೈಲ್ ಆ್ಯಪ್‍ಗಳಿಂದ ಸೈಬರ್ ಕಳ್ಳರಿಗೆ ಆಹಾರ ಆಗುತ್ತಿದ್ದ ಸಾಮಾನ್ಯ ಜನರು, ಈಗ ಜ್ಯೂಸ್ ಜಾಕಿಂಗ್ ಎನ್ನುವ ದಂಧೆಗೆ ಗೊತ್ತಿಲ್ಲದ ಹಾಗೆ ಸಿಕ್ಕಿಬೀಳುತ್ತಿದ್ದಾರೆ.

    ಮೊಬೈಲ್ ಚಾರ್ಜಿಂಗ್ ಮೂಲಕವೂ ಜನರು ತಮ್ಮ ಡೇಟಾವನ್ನು ಕಳೆದುಕೊಳ್ಳುತ್ತಿದ್ದಾರೆ ಎನ್ನುವ ಆತಂಕದ ವರದಿಯನ್ನು ಸೈಬರ್ ತಜ್ಞರು ಬಿಚ್ಚಿಟ್ಟಿದ್ದಾರೆ. ಖಾಸಗಿ ಚಾರ್ಜಿಂಗ್ ಸ್ಟೇಷನ್ ಅಥವಾ ಅಪರಿಚಿತ ವ್ಯಕ್ತಿಗಳ ಪವರ್ ಬ್ಯಾಂಕ್ ಬಳಕೆ ಮಾಡುವಾಗ ವೈರಸ್‍ಗಳು ನಮ್ಮ ಮೊಬೈಲ್‍ನಲ್ಲಿ ಆಕ್ಟಿವ್ ಆಗಿರಲಿದ್ದು, ಈ ಮೂಲಕ ನಮ್ಮ ಮೊಬೈಲ್‍ನಲ್ಲಿನ ಡೇಟಾವನ್ನು ನಮಗೆ ಗೊತ್ತೇ ಆಗದ ಹಾಗೇ ಸೈಬರ್ ಕಿರಾತಕರು ಕದಿಯುತ್ತಿದ್ದಾರೆ. ಇದನ್ನೂ ಓದಿ: ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನವನ್ನು ನಾನು ಸ್ವೀಕರಿಸುವುದಿಲ್ಲ: ನರೇಂದ್ರ ರೈ ದೇರ್ಲ

    ವಿಮಾನ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣಗಳು, ಉದ್ಯಾನವನಗಳು ಮತ್ತು ಮಾಲ್‍ಗಳಲ್ಲಿ ಉಚಿತ ಚಾರ್ಜಿಂಗ್ ಪಾಯಿಂಟ್‍ಗಳನ್ನು ನೀಡುವ ಸಾರ್ವಜನಿಕ ಸ್ಥಳಗಳನ್ನು ಹ್ಯಾಕರ್‌ಗಳು ಗುರಿಯಾಗಿಸಿ ಜನರನ್ನು ಬಲಿಪಶುಗಳನ್ನಾಗಿಸುತ್ತಾರೆ. ಚಾರ್ಜಿಂಗ್‍ಗಾಗಿ ಬಳಸುವ ಯುಎಸ್‍ಬಿ ಪೋರ್ಟ್‍ಗಳು ಡೇಟಾ ಕೇಬಲ್ ಒಂದೇ ಆಗಿರುವುದರಿಂದ ಮೊಬೈಲ್‍ನಲ್ಲಿರುವ ವ್ಯಕ್ತಿಯ ಮಾಹಿತಿಯನ್ನು ಸುಲಭವಾಗಿ ಕದಿಯುವ ತಂತ್ರವನ್ನಾಗಿ ಹ್ಯಾಕರ್‌ಗಳು ಬಳಸುತ್ತಿದ್ದಾರೆ. ಹೀಗಾಗಿ ಬ್ಯಾಂಕಿಂಗ್ ಹಾಗೂ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳು, ವೈಯಕ್ತಿಕ ಡೇಟಾಕ್ಕಾಗಿ ಬಳಸುವ ಪಾಸ್‍ವರ್ಡ್‍ಗಳ ಬಗ್ಗೆ ಹ್ಯಾಕರ್‌ಗಳು ತಿಳಿದುಕೊಂಡು, ಅದನ್ನು ಹ್ಯಾಕ್ ಮಾಡಿ ಅವರಿಗೆ ಬೇಕಾದ ಮಾಹಿತಿಯನ್ನು ಸರಾಗವಾಗಿ ಕದಿಯುತ್ತಾರೆ. ಅವರಿಗೆ ಬೇಕಾದಂತೆ ಪಾಸ್‍ವರ್ಡ್‍ಗಳನ್ನು ಬದಲಾಯಿಸಿಕೊಂಡು ನಿಮ್ಮ ಗೌಪ್ಯ ಮಾಹಿತಿಯನ್ನು ಕದಿಯುವಂತ ವ್ಯವಸ್ಥಿತ ಜಾಲ ನಡೆಯುತ್ತಿದೆ. ಇದನ್ನೂ ಓದಿ: ಮದರಸಾ ಶಿಕ್ಷಣಕ್ಕೆ ವಿಶೇಷ ಮಂಡಳಿ – ಉತ್ತರ ಪ್ರದೇಶದಲ್ಲಿ ಹೇಗಿದೆ?

    ಈ ದಂಧೆಗೆ ಸೈಬರ್ ತಜ್ಞರ ಭಾಷೆಯಲ್ಲಿ ಜ್ಯೂಸ್ ಜಾಕಿಂಗ್ ಅಂತಾ ಕರೆಯುತ್ತಾರೆ. ಸದ್ಯ ಭಾರತದಲ್ಲಿ ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರೂ ಹೆಚ್ಚು ಎಚ್ಚರಿಕೆ ವಹಿಸಬೇಕು, ಆದಷ್ಟು ಖಾಸಗಿ ಚಾರ್ಜಿಂಗ್ ಸ್ಟೇಷನ್‍ಗಳ ಬಳಕೆ ಮಾಡದಂತೆ ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೂರ್ಯನ ಅರ್ಧ ಆಯಸ್ಸು ಮುಕ್ತಾಯ – ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ವರದಿಯಲ್ಲಿ ಏನಿದೆ?

    ಸೂರ್ಯನ ಅರ್ಧ ಆಯಸ್ಸು ಮುಕ್ತಾಯ – ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ವರದಿಯಲ್ಲಿ ಏನಿದೆ?

    ಬ್ರಸೆಲ್ಸ್: ಸೂರ್ಯನ ಅರ್ಧ ಆಯಸ್ಸು ಮುಕ್ತಾಯಗೊಂಡಿದೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ತಿಳಿಸಿದೆ.

    ಈಗ ಸುಮಾರು 4.57 ಶತಕೋಟಿ ವರ್ಷಗಳಷ್ಟು ತಲುಪಿದ್ದು ಸೂರ್ಯನಿಗೆ ಈಗ ಮಧ್ಯ ವಯಸ್ಸು ಎಂದು ಹೇಳಿದೆ. ಇದನ್ನೂ ಓದಿ: 17ರ ವಿದ್ಯಾರ್ಥಿನಿ ಮೇಲೆ 6 ಜನರಿಂದ ಅತ್ಯಾಚಾರ

    ಇಎಸ್‌ಎ ಸಂಶೋಧನೆಯ ಪ್ರಕಾರ, ಆಗಾಗ್ಗೆ ಸೂರ್ಯನ ಸೌರ ಜ್ವಾಲೆಗಳು, ಪ್ಲಾಸ್ಮಾದಿಂದ ಹೊರಹೊಮ್ಮುವ ವಿಕಿರಣಗಳು (ಕರೋನಲ್ ಮಾಸ್ಕ್ ಎಜೆಕ್ಷನ್ – ಸಿಎಂಇಎಸ್) ಹಾಗೂ ಸೌರ ಬಿರುಗಾಳಿಯೊಂದಿಗೆ ಹೋಗುತ್ತಿರುವಂತೆ ಕಾಣುತ್ತಿದೆ ಎಂದು ಬಾಹ್ಯಾಕಾಶ ಸಂಸ್ಥೆಯ `ಗಯಾ ಬಾಹ್ಯಾಕಾಶ ನೌಕೆ’ ಬಿಡುಗಡೆ ಮಾಡಿದ ದತ್ತಾಂಶದ ಮೂಲಕ ವಿಶ್ಲೇಷಿಸಲಾಗಿದೆ. ಇದು ಬ್ರಹ್ಮಾಂಡದ ವಿವಿಧ ನಕ್ಷತ್ರಗಳ ಜೀವಿತಾವಧಿಯನ್ನೂ ಪತ್ತೆಹಚ್ಚಲು ಸಹಾಯ ಮಾಡುತ್ತದೆ ಎಂದು ವರದಿ ಹೇಳಿದೆ.

    ಗಯಾ ನೌಕೆ ಬಿಡುಗಡೆ ಮಾಡಿದ 3ನೇ ಪ್ರಮುಖ ದತ್ತಾಂಶವೂ ಇದಾಗಿದ್ದು ನೂರಾರು ಮಿಲಿಯನ್ ನಕ್ಷತ್ರಗಳ ಆಂತರಿಕ ಗುಣಲಕ್ಷಣ ಮಾಹಿತಿಗಳ ಪೈಕಿ ಇದು ಒಂದಾಗಿದೆ. ಈ ದತ್ತಾಂಶವು ನಕ್ಷತ್ರಗಳ ತಾಪಮಾನ, ಗಾತ್ರ ಹಾಗೂ ದ್ರವ್ಯ ರಾಶಿಯ ಮಾಹಿತಿಯನ್ನೂ ಒಳಗೊಂಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ತಂದೆಯ ಹುಟ್ಟು ಹಬ್ಬದ ನೆನಪಿಗೆ ಹುಟ್ಟೂರಿನ ಆಸ್ಪತ್ರೆಗೆ 50 ಲಕ್ಷ ರೂ. ನೀಡಿದ ಪ್ರಶಾಂತ್ ನೀಲ್

    ನಕ್ಷತ್ರಗಳ ಸ್ಪಷ್ಟ ಹೊಳಪು ಹಾಗೂ ಅವುಗಳ ಬಣ್ಣವನ್ನು ನಿಖರವಾಗಿ ಗಯಾ ನೌಕೆ ಮಾಪನ ಮಾಡುತ್ತದೆ. ಸೂರ್ಯ ಈಗ ಸುಮಾರು 4.57 ಶತಕೋಟಿ ವರ್ಷಗಳ ವಯಸ್ಸಿನೊಂದಿಗೆ ಮಧ್ಯವಯಸ್ಸಿನಲ್ಲಿದ್ದು, ಈ ಅಧ್ಯಯನದಿಂದ ನಕ್ಷತ್ರಗಳನ್ನು ಸರಿಯಾಗಿ ಗುರುತಿಸುವುದು ಮಾತ್ರವಲ್ಲದೇ, ಭವಿಷ್ಯದಲ್ಲಿ ಸೂರ್ಯ ಹೇಗೆ ವಿಕಸನಗೊಳ್ಳುತ್ತದೆ ಎಂಬುದನ್ನು ಅಂದಾಜಿಸಬಹುದು ಎಂದು ವರದಿಯಾಗಿದೆ.

    ಸೂರ್ಯನ ಮೇಲ್ಮೈಯಲ್ಲಿ ಬದಲಾವಣೆಗಳು ಕಂಡುಬಂದಂತೆ ಕೆಂಪು ದೈತ್ಯ ನಕ್ಷತ್ರವಾಗಿ ಹೊರಹೊಮ್ಮುತ್ತದೆ. ಈ ವೇಳೆ ಎಷ್ಟು ದ್ರವ್ಯ ರಾಶಿಯನ್ನು ಹೊಂದಿರುತ್ತದೆ ಅದರ ರಾಸಾಯನಿಕ ಸಂಯೋಜನೆಯ ಆಧಾರದ ಮೇಲೆ ತನ್ನ ಮೇಲ್ಮೈ ತಾಪಮಾನವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ ಎಂದು ವರದಿಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • 7.50 ಲಕ್ಷ ಚೀನಾ ನಾಗರಿಕರ ಡೇಟಾ ಕಳವು

    7.50 ಲಕ್ಷ ಚೀನಾ ನಾಗರಿಕರ ಡೇಟಾ ಕಳವು

    ಬೀಜಿಂಗ್: ನೂರಾರು ಮಿಲಿಯನ್ ಚೀನಾದ ನಾಗರಿಕರ ವೈಯಕ್ತಿಕ ಡೇಟಾವನ್ನು ಕದ್ದಿರುವುದಾಗಿ ಹೇಳಿಕೊಂಡಿರುವ ಹ್ಯಾಕರ್‌ ಈಗ ಆ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ.

    ಹ್ಯಾಕರ್ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ 7,50,000 ನಮೂದುಗಳ ಮಾದರಿಯು ನಾಗರಿಕರ ಹೆಸರುಗಳು, ಮೊಬೈಲ್ ಫೋನ್ ಸಂಖ್ಯೆಗಳು, ರಾಷ್ಟ್ರೀಯ ID ಸಂಖ್ಯೆ, ವಿಳಾಸ, ಜನ್ಮದಿನಾಂಕ ಮತ್ತು ಅವರು ಸಲ್ಲಿಸಿದ ಪೊಲೀಸ್ ವರದಿಗಳನ್ನು ತೋರಿಸಿದೆ. ಇದನ್ನೂ ಓದಿ: ಸಾರ್ವಜನಿಕವಾಗಿ ಕುರಾನ್ ಸುಟ್ಟಿದ್ದಕ್ಕೆ ಆಕ್ರೋಶ – ನಾಯಕನ ಕಾರನ್ನು ಅಪಘಾತಗೈದವರು ಅರೆಸ್ಟ್

    ಇದು ಬಹು ಮೂಲಗಳಿಂದ ಬಂದಂತೆ ತೋರುತ್ತಿದೆ. ಕೆಲವು ಫೇಸ್‌ ರೆಕಗ್ನಿಷನ್ ಸಿಸ್ಟಮ್‌ನಂತೆ, ಇನ್ನೂ ಕೆಲವು ಜನಗಣತಿ ಡೇಟಾದಂತೆ ಕಂಡುಬರುತ್ತಿವೆ ಎಂದು ಸೈಬರ್‌ಸೆಕ್ಯುರಿಟಿ ಸಂಸ್ಥೆಯ ಇಂಟರ್ನೆಟ್ 2.0ನ ಸಹ-ಸಂಸ್ಥಾಪಕ ರಾಬರ್ಟ್ ಪಾಟರ್ ತಿಳಿಸಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದ ಒಟ್ಟು ದಾಖಲೆಗಳ ಯಾವುದೇ ಪರಿಶೀಲನೆ ಇಲ್ಲ. ಒಂದು ಬಿಲಿಯನ್ ನಾಗರಿಕರ ಸಂಖ್ಯೆಯ ಬಗ್ಗೆ ನನಗೆ ಸಂದೇಹವಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ದುಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್‌ ವಿಮಾನ ಕರಾಚಿಯಲ್ಲಿ ತುರ್ತು ಭೂಸ್ಪರ್ಶ

    ಸೋರಿಕೆಯಾದ ಕೆಲವು ಡೇಟಾವು ಎಕ್ಸ್‌ಪ್ರೆಸ್ ಡೆಲಿವರಿ ಬಳಕೆದಾರರ ದಾಖಲೆಗಳಿಂದ ಕಂಡುಬಂದಿದೆ. ಆದರೆ ಇತರ ನಮೂದುಗಳು ಶಾಂಘೈನಲ್ಲಿ ಒಂದು ದಶಕಕ್ಕೂ ಹೆಚ್ಚು ಅವಧಿಯಲ್ಲಿ ಪೊಲೀಸರಿಗೆ ವರದಿಯಾದ ಘಟನೆಗಳ ಸಾರಾಂಶವನ್ನು ಒಳಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಡೇಟಾ ರಿಚಾರ್ಜ್ ಮಾಡಿಸದಿದ್ದಕ್ಕೆ ನೇಣಿಗೆ ಶರಣಾದ 14ರ ಬಾಲಕ

    ಡೇಟಾ ರಿಚಾರ್ಜ್ ಮಾಡಿಸದಿದ್ದಕ್ಕೆ ನೇಣಿಗೆ ಶರಣಾದ 14ರ ಬಾಲಕ

    ಭೋಪಾಲ್: ತನ್ನ ತಂದೆ ಮೊಬೈಲ್ ರಿಚಾರ್ಜ್ ಮಾಡಿಸಿಕೊಡಲಿಲ್ಲವೆಂಬ ಕಾರಣಕ್ಕೆ 14 ವರ್ಷದ ಹುಡುಗನೊಬ್ಬ, ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಜಬ್ಬಲ್‌ಪುರ್‌ನಲ್ಲಿ ಬೆಳಕಿಗೆ ಬಂದಿದೆ.

    ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ. ಅಂತೆಯೇ ಜಬ್ಬಲ್‌ಪುರ್‌ನ ಹುಡುಗನೊಬ್ಬ ಮೊಬೈಲ್ ವ್ಯಸನಿಯಾಗಿದ್ದು, ಡೇಟಾ ಅವಧಿ ಮುಗಿದ ಬಳಿಕ ರಿಚಾರ್ಜ್ ಮಾಡಿಸಿಕೊಡುವಂತೆ ತಂದೆಯನ್ನು ಒತ್ತಾಯಿಸಿದ್ದಾನೆ. ನಿರಂತರ ಬೇಡಿಕೆಯ ಹೊರತಾಗಿಯೂ ತನ್ನ ತಂದೆ ರೀಚಾರ್ಜ್ ಮಾಡಿಸಿರಲಿಲ್ಲ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾದ ಹುಡುಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.  ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯಲ್ಲಿ ಕಾಣಿಸಿಕೊಂಡಿದ್ದ ಮೌಲ್ವಿಯ ಅಸಲಿ ರೂಪ ಬಯಲು

    CRIME 2

    ಪೊಲೀಸರು ಮಾಹಿತಿ ನೀಡಿದ್ದು, ಮೃತನ ತಂದೆ, ಕೂಲಿ ಕೆಲಸ ಮಾಡುತ್ತಿದ್ದು, ತನ್ನ ಕುಟುಂಬವನ್ನು ಪೋಷಿಸಲು ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು. ಇದರಿಂದಾಗಿ ಮಗನ ಮೊಬೈಲ್ ಫೋನ್ ಡೇಟಾ ಪ್ಯಾಕ್ ರೀಚಾರ್ಜ್ ಮಾಡಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ. ಗೋರಖ್‌ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಆಂಡ್ರಾಯ್ಡ್ ಬಳಕೆದಾರಿಗೆ ಮೋಸ ಮಾಡಿ ಸಿಕ್ಕಿಬಿದ್ದ ಗೂಗಲ್

    ಆಂಡ್ರಾಯ್ಡ್ ಬಳಕೆದಾರಿಗೆ ಮೋಸ ಮಾಡಿ ಸಿಕ್ಕಿಬಿದ್ದ ಗೂಗಲ್

    ಲಂಡನ್: ಆಂಡ್ರಾಯ್ಡ್ ನಲ್ಲಿ ಫೋನ್ ಮತ್ತು ಮೆಸೇಜ್ ಅಪ್ಲಿಕೇಶನ್ ಬಳಸಿಕೊಂಡು ಬಳಕೆದಾರರ ಡೇಟಾವನ್ನು ಗೂಗಲ್ ಸಂಗ್ರಹಿಸುತ್ತಿದ್ದು ಸಿಕ್ಕಿಬಿದ್ದಿದೆ.

    ಟೆಕ್ ಕಂಪನಿಗಳು ನಿಮ್ಮ ಬಗ್ಗೆ ಎಷ್ಟು ತಿಳಿದಿವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಿಮ್ಮ ಡೇಟಾ ನಿಜವಾಗಿಯೂ ಖಾಸಗಿಯಾಗಿದೆಯೇ? ಎಂಬುದರ ಬಗ್ಗೆ ಬಳಕೆದಾರರು ಯೋಚಿಸಬೇಕು. ಲಂಡನ್‍ನ ಟ್ರಿನಿಟಿ ಕಾಲೇಜಿನ ಪ್ರೋಫೆಸರ್ ಡೌಗ್ಲಾಸ್ ಲೀತ್ ಪ್ರಕಟಿಸಿದ ಸಂಶೋಧನಾ ಪ್ರಬಂಧವು, ಗೂಗಲ್ ನಿಂದ ಆಂಡ್ರೊಯ್ ಫೋನ್‍ಗಳಲ್ಲಿ ಮೆಸೇಜ್ ಅಪ್ಲಿಕೇಶನ್ ಬಳಸುವ ಬಳಕೆದಾರರಿಂದ ಸಂಗ್ರಹಿಸಬಹುದಾದ ಡೇಟಾದ ಪ್ರಮಾಣವನ್ನು ವಿವರಿಸಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಎಎಪಿ ಸದಸ್ಯತ್ವ ಅಭಿಯಾನಕ್ಕೆ ಪೃಥ್ವಿ ರೆಡ್ಡಿ ಚಾಲನೆ 

    Google caught collecting user data using its Phone and Messages app for Android

    ಈ ಪ್ರಬಂಧದಲ್ಲಿ, ಗೂಗಲ್ ತನ್ನ ಬಳಕೆದಾರರ ಫೋನ್ ಕಾಲ್ ದಾಖಲೆ ಮತ್ತು ಮೇಸೆಜ್ ಲೀಟ್ಸ್‌ನನ್ನು ಅವರ ಒಪ್ಪಿಗೆಯಿಲ್ಲದೆ ಸಂಗ್ರಹಿಸುತ್ತಿದೆ. ಗೂಗಲ್ ಪೇ ಸೇವೆಗಳಿಂದಲೂ ಗೂಗಲ್ ಹೆಚ್ಚು ಡೇಟಾ ಸಂಗ್ರಹ ಮಾಡುತ್ತಿದೆ. ಈ ಮೂಲಕ ಡೇಟಾವನ್ನು ಸಿಂಕ್ ಮಾಡುತ್ತದೆ ಎಂದು ಬಳಕೆದಾರರಿಗೆ ಬಹಿರಂಗಪಡಿಸಿದೆ.

    ಗೂಗಲ್‍ನ ಗೌಪ್ಯತೆ ನೀತಿಗಳಲ್ಲಿ ಒಳಗೊಂಡಿರುವ ವ್ಯಾಪ್ತಿಯಿಂದ ಹೊರಗುಳಿದು ಗೂಗಲ್ ಡೇಟಾವನ್ನು ಸಂಗ್ರಹಿಸುತ್ತಿದೆ. ಉದಾಹರಣೆಗೆ ಮೇಸೆಜ್ ಅಪ್ಲಿಕೇಶನ್, ನಿಮ್ಮ ಸಂದೇಶದ ವಿಷಯ ಮತ್ತು ಟೈಮ್‍ಸ್ಟ್ಯಾಂಪ್‍ಗಳನ್ನು ತೆಗೆದುಕೊಳ್ಳುತ್ತದೆ. ಇದು ನಂತರ ಡೇಟಾವನ್ನು ಅನಾಮಧೇಯವಾಗಿಡಲು ಹ್ಯಾಶ್ ರಚಿಸುತ್ತದೆ. ಅದರ ಒಂದು ಭಾಗವನ್ನು ಗೂಗಲ್‍ನ ಸರ್ವರ್‌ಗಳಿಗೆ ಕಳುಹಿಸುತ್ತದೆ ಎಂದು ಪ್ರೋ.ಲೀತ್ ವಿವರಿಸುತ್ತಾರೆ. ಇದನ್ನೂ ಓದಿ: ಗಂಡನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಊರೆಲ್ಲಾ ಅರಚಾಡಿ ಹೈ-ಡ್ರಾಮಾ ಮಾಡಿದ ಪತ್ನಿ

    Google to Crack Down on Android Apps That Collect User Data Without Consent
    ಆಂಡ್ರೊಯ್ ಡೇಟಾವು ಮೆಸೇಜ್ ಲಿಸ್ಟ್‌ನ ಹ್ಯಾಶ್ ಮತ್ತು ಫೋನ್ ಕಾಲ್ ಅವಧಿಯನ್ನು ಒಳಗೊಂಡಿದೆ ಎಂದು ಡಬ್ಲಿನ್ ಪ್ರೋ.ಡೌಗ್ಲಾಸ್ ಲೀತ್ ಹೇಳಿದ್ದಾರೆ. ಇದನ್ನು ತಿಳಿಸಲು ಲೀತ್ ತಮ್ಮ ಸಂಶೋಧನೆಗಳನ್ನು ಗೂಗಲ್‍ನೊಂದಿಗೆ ಹಂಚಿಕೊಂಡರು. ನಂತರ ಅದರಲ್ಲಿ ನಡೆಯುವ ಬದಲಾವಣೆಗಳನ್ನು ನೇರವಾಗಿ ತೋರಿಸಿದ್ದಾರೆ.

  • ತಿಂಗಳಿಗೆ 160 ರೂ.ಗೆ 16 ಜಿಬಿ ಡೇಟಾ ಸಿಗುತ್ತಿರುವುದು ದುರಂತ – ಏರ್‌ಟೆಲ್‌ ಮುಖ್ಯಸ್ಥ

    ತಿಂಗಳಿಗೆ 160 ರೂ.ಗೆ 16 ಜಿಬಿ ಡೇಟಾ ಸಿಗುತ್ತಿರುವುದು ದುರಂತ – ಏರ್‌ಟೆಲ್‌ ಮುಖ್ಯಸ್ಥ

    ನವದೆಹಲಿ: ವಿಶ್ವದಲ್ಲೇ ಕಡಿಮೆ ಬೆಲೆಗೆ ಸಿಗುತ್ತಿದ್ದ ಡೇಟಾ ಮುಂದಿನ ದಿನಗಳಲ್ಲಿ ದುಬಾರಿಯಾಗಲಿದೆ ಎಂಬುದನ್ನು ಏರ್‌ಟೆಲ್‌ ಮುಖ್ಯಸ್ಥ ಸುನಿಲ್‌ ಭಾರ್ತಿ ಮಿತ್ತಲ್‌ ಸೂಚ್ಯವಾಗಿ ಹೇಳಿದ್ದಾರೆ.

    ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತಿಂಗಳಿಗೆ 160 ರೂ. ದರದಲ್ಲಿ 16 ಜಿಬಿ ಡೇಟಾ ಲಭ್ಯವಾಗುತ್ತಿರುವುದು ದುರಂತ ಎಂದು ನೇರವಾಗಿಯೇ ಹೇಳಿದ್ದಾರೆ.

    ಈಗ ನೀವು ಪೂರ್ಣವಾಗಿ 1.6 ಜಿಬಿ ಡೇಟಾವನ್ನು ಬಳಕೆ ಮಾಡುತ್ತಿರೋ ಇಲ್ಲವೋ ಗೊತ್ತಿಲ್ಲ. ಆದರೆ ದರದ ಲೆಕ್ಕಾಚಾರ ಹಾಕಿದರೆ ನೀವು ಹೆಚ್ಚು ದರ ಪಾವತಿಸಲು ಸಿದ್ಧರಾಗಿ. ನಾವು ಅಮೆರಿಕ ಯುರೋಪ್‌ನಲ್ಲಿ ಇರುವಂತೆ 50-60 ಅಮೆರಿಕ ಡಾಲರ್‌ ಏರಿಕೆ ಆಗಬೇಕೆಂದು ಹೇಳುತ್ತಿಲ್ಲ. ಆದರೆ ತಿಂಗಳಿಗೆ 2 ಡಾಲರ್‌ ಬೆಲೆಯಲ್ಲಿ 16 ಜಿಬಿ ನೀಡುವುದು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

     

    ಓರ್ವ ಗ್ರಾಹಕನಿಂದ ಕಂಪನಿಗೆ ಸಿಗುವ ಸರಾಸರಿ ಆದಾಯವನ್ನು ಎಆರ್‌ಪಿಯು ಎಂದು ಕರೆಯಲಾಗುತ್ತದೆ. ನಮಗೆ ಎಆರ್‌ಪಿಯುನಿಂದ 300 ರೂ. ಬಂದರೆ ಸಹಾಯವಾಗುತ್ತದೆ. ಟೆಲಿಕಾಂ ಒಂದೇ ಉದ್ಯಮವಲ್ಲ. ಡಿಜಿಟಲ್‌ ಕ್ಷೇತ್ರದಲ್ಲೂ ಹೂಡಿಕೆ ಮಾಡಬೇಕು. ಕಂಪನಿ ಉಳಿಯಬೇಕಾದರೆ ಡೇಟಾ ಬೆಲೆ ಏರಿಕೆ ಅನಿವಾರ್ಯ ಎಂದು ಎಂದು ಹೇಳಿದರು.

    ಜೂನ್‌ 30ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ ಏರ್‌ಟೆಲ್‌ 157 ರೂ. ಎಆರ್‌ಪಿಯು ಗಳಿಸಿತ್ತು. ಬಹಳ ಕಠಿಣ ಸಮಯದಲ್ಲಿ ನಾವು ಸೇವೆ ನೀಡಿದ್ದೇವೆ. ಅಷ್ಟೇ ಅಲ್ಲದೇ 5ಜಿ, ಅಪ್ಟಿಕಲ್‌ ಕೇಬಲ್‌, ಸಬ್‌ಮರೀನ್‌ ಕೇಬಲ್‌ಗಳಿಗೆ ಹೂಡಿಕೆ ಮಾಡಲು ಎಆರ್‌ಪಿಯು ಹೆಚ್ಚಾಗಬೇಕು ಎಂದು ಅಭಿಪ್ರಾಯಪಟ್ಟರು.

     

     

    ಕೋವಿಡ್‌ 19 ನಿಂದಾಗಿ‌ ಕಳೆದ 6 ತಿಂಗಳಿನಲ್ಲಿ ಡಿಜಿಟಲ್‌ ಕಂಟೆಂಟ್‌ ಬಳಕೆ ಹೆಚ್ಚಾದ ಕಾರಣ ಎವರೆಜ್‌ ರೆವೆನ್ಯೂ ಪರ್‌ ಯೂಸರ್(ಎಆರ್‌ಪಿಯು) 200 ರೂ. ಗಿಂತಲೂ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಮಿತ್ತಲ್‌ ಹೇಳಿದ್ದಾರೆ.

    ಏರ್‌ಟೆಲ್‌ ಅತೀ ಹೆಚ್ಚಿನ ಎಆರ್‌ಪಿಯು ಹೊಂದಿದ್ದು ಪ್ರತಿ ಗ್ರಾಹಕನಿಂದ ಪ್ರತಿ ತಿಂಗಳು ಸರಾಸರಿ 157 ರೂಪಾಯಿ ಆದಾಯ ಸಂಗ್ರಹಿಸುತ್ತಿದೆ. ಜಿಯೋ 140 ರೂ., ವೊಡಾಫೋನ್‌ 114 ರೂ. ಎಆರ್‌ಪಿಯು ಗಳಿಸುತ್ತಿದೆ.

    ಎಜಿಆರ್‌ ಶುಲ್ಕ ವಿಚಾರವಾಗಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನ ಎಜಿಆರ್‌ ಆದೇಶದಿಂದ ಏರ್‌ಟೆಲ್‌ಗೆ ಬಹಳ ಸಮಸ್ಯೆಯಾಗಿದೆ. ಆದರೂ ನಾವು ಸ್ವಲ್ಪ ಪ್ರಮಾಣ ಹಣ ಪಾವತಿಸಿ ಬಗೆ ಹರಿಸಲು ಯತ್ನಿಸಿದ್ದೇವೆ. ಈ ಹಣ ಪಾವತಿಯಿಂದಾಗಿ ನಮಗೆ 4ಜಿ, 5ಜಿ ನೆಟ್‌ವರ್ಕ್‌ ಹೂಡಿಕೆಗೆ ಸಮಸ್ಯೆಯಾಗಿದೆ ಎಂದು ತಿಳಿಸಿದರು.

    ಭಾರತಿ ಏರ್‌ಟೆಲ್‌ ಎಜಿಆರ್‌ ಶುಲ್ಕವಾಗಿ 43,980 ಕೋಟಿ ರೂ.ಪಾವತಿಸಬೇಕಿದ್ದು, ಸದ್ಯ 18,004 ಕೋಟಿ ರೂ. ಪಾವತಿಸಿದೆ. ಈಗ ಕಂಪನಿ ಉಳಿದ ಮೊತ್ತವನ್ನು ಪಾವತಿಸಲು 15 ವರ್ಷ ಸಮಯವನ್ನು ಕೇಳಿದೆ.

    ವೊಡಾಫೋನ್‌ ಐಡಿಯಾ 58,254 ಕೋಟಿ ರೂ. ಪಾವತಿಸಬೇಕಿದ್ದು, ಈಗ 7,854 ಕೋಟಿ ರೂ. ಎಜಿಆರ್‌ ಶುಲ್ಕ ಪಾವತಿಸಿದೆ. ಏರ್‌ಟೆಲ್‌ನಂತೆ ವೊಡಾಫೋನ್‌ ಉಳಿದ 50,400 ಕೋಟಿ ರೂ. ಪಾವತಿಸಲು 15 ವರ್ಷ ಸಮಯ ನೀಡುವಂತೆ ಕೇಳಿಕೊಂಡಿದೆ.

    ಏನಿದು ಎಜಿಆರ್?
    ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಕಳೆದ ವರ್ಷ ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.

    ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

  • ಎನ್‌ಆರ್‌ಸಿ ಚರ್ಚೆ ಬಿಟ್ಟು ದಾಖಲೆ ಸರಿ ಮಾಡಿಕೊಳ್ಳಿ: ವಕ್ಫ್

    ಎನ್‌ಆರ್‌ಸಿ ಚರ್ಚೆ ಬಿಟ್ಟು ದಾಖಲೆ ಸರಿ ಮಾಡಿಕೊಳ್ಳಿ: ವಕ್ಫ್

    ಗ ದೇಶದ ಎಲ್ಲಾ ಕಡೆ ಎನ್‌ಆರ್‌ಸಿ( ರಾಷ್ಟ್ರೀಯ ಪೌರತ್ವ ನೋಂದಣಿ) ಮತ್ತು ಪೌರತ್ವ ಕಾಯ್ದೆಯದ್ದೇ ಚರ್ಚೆ. ಇದರ ಬಗ್ಗೆ ಪರ-ವಿರೋಧ ಚರ್ಚೆ, ಟೀಕೆ ಜೋರಾಗಿ ನಡೆಯುತ್ತಿರುವಾಗಲೇ ಕರ್ನಾಟಕ ಸರ್ಕಾರ ಸದ್ದಿಲ್ಲದೇ ಒಂದು ಕೆಲಸಕ್ಕೆ ಕೈ ಹಾಕಿದೆ. ಅದೇನೆಂದ್ರೆ ಪರ-ವಿರೋಧಗಳು ಏನೇ ಇರಲಿ, ಈ ವಿಚಾರದ ಸುತ್ತ ಗಿರಕಿ ಹೊಡೆಯುತ್ತಿರುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದವರ ದಾಖಲೆಗಳನ್ನು ಸರಿ ಮಾಡಿಸಿಕೊಳ್ಳುವ ಅಭಿಯಾನಕ್ಕೆ ಕೈಹಾಕಿದೆ. ಏನಪ್ಪಾ ಇದು, ಎನ್‌ಆರ್‌ಸಿ, ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆ ಜಾರಿಗೆ ತರುತ್ತಿರೋದು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ. ರಾಜ್ಯದಲ್ಲಿರುವುದೂ ಬಿಜೆಪಿ ಸರ್ಕಾರ. ಇದು ಹೇಗಪ್ಪಾ ಸಾಧ್ಯ ಅಂತಾ ನಿಮಗೆ ಆಶ್ಚರ್ಯ ಆಗಲೇಬೇಕು. ಹೌದು, ಇದು ಅಚ್ಚರಿಯಾದ್ರೂ ನಿಜ.

    ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಮುಸ್ಲಿಂ ಧರ್ಮೀಯರನ್ನು ಹೊರಗಿಟ್ಟು ಬಿಜೆಪಿ ಸರ್ಕಾರ ಧರ್ಮ ಬೇಧ ಮಾಡುತ್ತಿದೆ ಎಂದು ವಿರೋಧ ಪಕ್ಷಗಳೆಲ್ಲಾ ಬೀದಿಗೆ ಬಂದಿದೆ. ಜೊತೆಗೆ ಮುಸ್ಲಿಂ ಸಮುದಾಯದ ಬಹುತೇಕ ಮಂದಿ ಕೂಡಾ ಇದನ್ನು ವಿರೋಧಿಸುತ್ತಿದ್ದಾರೆ. ಸಹಜವಾಗಿ ಈ ವಿಚಾರದಲ್ಲಿ ರಾಜಕೀಯ ಇದೆ ಅನ್ನೋದ್ರಲ್ಲಿ ಸಂಶಯವಿಲ್ಲ. ಪ್ರಣಾಳಿಕೆಯ ಭರವಸೆಯನ್ನು ಈಡೇರಿಸ್ತಿರೋ ಬಿಜೆಪಿ, ತನ್ನ ಮತಬ್ಯಾಂಕ್ ಗಟ್ಟಿ ಮಾಡಿ ಸಂದೇಶವೊಂದನ್ನು ರವಾನಿಸುತ್ತಾ ಇರುವುದಂತೂ ಸತ್ಯ. ಅದೇ ರೀತಿ ನಾವು ಮುಸ್ಲಿಂ ಸಮುದಾಯದ ಪರ ಎಂದು ಬಿಂಬಿಸುತ್ತಾ ಕಾಂಗ್ರೆಸ್, ಎಡಪಕ್ಷ ಸೇರಿದಂತೆ ಇನ್ನಿತರ ಪಕ್ಷಗಳು ಕಾಯ್ದೆ ತಿದ್ದುಪಡಿ ವಿರೋಧಿಸಿ ತನ್ನ ಮತ ಬ್ಯಾಂಕ್ ಪರ ನಿಲ್ಲುತ್ತಿದೆ. ಆದರೆ ಈ ಕಾಯ್ದೆ ಇಲ್ಲಿನ ಮುಸ್ಲಿಮರಿಗೆ ಸದ್ಯಕ್ಕೇನೂ ಅಪಾಯವಿಲ್ಲ, ಆದ್ರೆ ಭವಿಷ್ಯದಲ್ಲಿ ಇದು ಖಂಡಿತಾ ಮುಸ್ಲಿಂ ಸಮುದಾಯಕ್ಕೆ ಅಪಾಯಕಾರಿ ಎಂಬ ವಿಶ್ಲೇಷಣೆಯೂ ಇದೆ. ಬೇರೆ ದೇಶದಿಂದ ಬಂದಿದ್ದಾರೆ ಎನ್ನಲಾಗಿರುವ ಮುಸ್ಲಿಮರಿಗೆ ಮಾತ್ರ ಅನ್ವಯವಾಗುತ್ತದೆ ಎಂಬ ಕಾರಣಕ್ಕೆ ಇಲ್ಲಿನ ಮುಸ್ಲಿಮರು ಸದ್ಯಕ್ಕೆ ನಿಟ್ಟುಸಿರು ಬಿಡಬಹುದು.

    ಆದ್ರೆ ಎನ್‌ಆರ್‌ಸಿ ಜಾರಿಗೆ ತಂದರೆ ಅಕ್ರಮವಾಗಿ ವಲಸೆ ಬಂದ ಎಲ್ಲಾ ಮುಸ್ಲಿಮರ ಜೊತೆಗೆ ಇಲ್ಲಿರುವ ಮೂಲ ನಿವಾಸಿ ಮುಸ್ಲಿಮರ ಬುಡಕ್ಕೂ ಬರುತ್ತೆ ಎಂಬ ಆತಂಕ ಸಮುದಾಯದಲ್ಲಿ ಇರುವುದಂತೂ ಸತ್ಯ. ದಾಖಲೆ ಸರಿ ಇಲ್ಲ ಅನ್ನೋ ಕಾರಣಕ್ಕೆ ಇಲ್ಲಿನ ಮುಸ್ಲಿಮರು ಪೌರತ್ವ ಕಳೆದುಕೊಳ್ಳಬಹುದು ಅಥವಾ ಸೌಲಭ್ಯ ವಂಚಿತರಾಗಬಹುದು, ಅತಂತ್ರರಾಗಬಹುದು ಎಂಬುದು ಆತಂಕಕ್ಕೆ ಮೂಲಕಾರಣ. ಪರಿಸ್ಥಿತಿ ಹೀಗಿರುವಾಗ ಮೂಲ ಭಾರತೀಯರೇ ಆಗಿರುವ ಮುಸ್ಲಿಮರು ನಿಜವಾಗಿಯೂ ಏನು ಮಾಡಬೇಕು ಎಂಬ ಅರಿವಿಲ್ಲದೇ ಗೊಂದಲದಲ್ಲಿರುವಾಗ, ಕರ್ನಾಟಕದ ಬಿಜೆಪಿ ಸರ್ಕಾರ ಮುಸ್ಲಿಂ ಸಮುದಾಯಕ್ಕೊಂದು ಸಂದೇಶ ರವಾನಿಸಿದೆ. ಅದೇನಪ್ಪಾ ಅಂದ್ರೆ, ಕೇಂದ್ರ ಸರ್ಕಾರ ಎನ್‌ಆರ್‌ಸಿಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, 2012ರ ರಾಷ್ಟ್ರೀಯ ಜನಗಣತಿಗೂ ಮುನ್ನ, ರಾಷ್ಟ್ರೀಯ ಜನಸಂಖ್ಯಾ ದಾಖಲೆಗಳನ್ನು ಮಾಡಲು 2020ರಲ್ಲಿ ಗಣತಿ ಮಾಡಲಿದೆ. ಹೀಗಾಗಿ ಮುಂದಿನ ವರ್ಷ ನಡೆಯುವ ಈ ಮಾಹಿತಿ ಸಂಗ್ರಹದ ಗಣತಿ ಸಂದರ್ಭದಲ್ಲಿ ದಾಖಲೆ ರಹಿತ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ, ಕೆಲವು ಕನಿಷ್ಠ ದಾಖಲೆಗಳನ್ನು ಮಾಡಿಕೊಳ್ಳುವ ಅಭಿಯಾನಕ್ಕೆ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಮುನ್ನುಡಿ ಬರೆದಿದೆ. ಕಳೆದ ನವೆಂಬರಿನಲ್ಲೇ ಸುತ್ತೋಲೆ ಹೊರಡಿಸಿರುವ ವಕ್ಫ್ ಬೋರ್ಡ್, ರಾಜ್ಯದ ಎಲ್ಲಾ ಮಸೀದಿಗಳಿಗೆ ಕೆಲವು ನಿರ್ದಿಷ್ಟ ಸೂಚನೆಗಳನ್ನು ನೀಡಿದೆ.

    ಸುಮಾರು 35,000 ಆಸ್ತಿಗಳಿಗೆ ಸರಿಸುಮಾರು 32,000 ಮಸೀದಿಗಳು ವಕ್ಫ್ ವ್ಯಾಪ್ತಿಗೊಳಪಟ್ಟಿದ್ದು, ಎಲ್ಲಾ ಮಸೀದಿಗಳು ತಮ್ಮ ಮೊಹಲ್ಲಾ ವ್ಯಾಪ್ತಿಯ ಮುಸ್ಲಿಂ ಸಮುದಾಯದವರ ಮಾಹಿತಿ, ದಾಖಲೆಗಳನ್ನು ಕಡ್ಡಾಯವಾಗಿ ಸಂಗ್ರಹಿಸಿ ಇಡುವಂತೆ ಸೂಚಿಸಿದೆ. ಎಲ್ಲಾ ಮಸೀದಿಗಳ ಮೂಲಕ ಮುಸ್ಲಿಂ ಸಮುದಾಯದವರಿಗೆ ಕೆಲವು ಅಗತ್ಯ ದಾಖಲೆಗಳ ಬಗ್ಗೆ ಜಾಗೃತಿ ನೆರವು ನೀಡಬೇಕು. ಅಗತ್ಯವಿರುವ ಕಡೆ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ಅರಿವು ಮೂಡಿಸಬೇಕು. ನಗರಪ್ರದೇಶದ ಮಸೀದಿಗಳು ಸಮುದಾಯದವರ ದಾಖಲೆ ಮಾಹಿತಿಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ಇಡಬೇಕು. ಹೊರಗಿನವರು ಯಾರು? ಸ್ಥಳೀಯರು ಯಾರು? ಅಪರಿಚಿತರು ಯಾರು ಮತ್ತು ಯಾವಾಗ ಎಲ್ಲಿಂದ ವಲಸೆ ಬಂದಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಿದರೆ ಮುಂದಿನ ದಿನಗಳಲ್ಲಿ ಜನಗಣತಿಗಾಗಿ ಅಥವಾ ಇನ್ನಿತರ ಕಾರ್ಯಗಳಿಗೆ ಸರ್ಕಾರದ ಪ್ರತಿನಿಧಿಗಳು ಬಂದಾಗ ಸಹಕಾರಿಯಾಗಲಿದೆ ಎಂಬುದು ವಕ್ಫ್ ಸುತ್ತೋಲೆಯ ಮೂಲ ಉದ್ದೇಶ.

    ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಹಲವು ಕಡೆ ಸೂಕ್ತ ದಾಖಲೆಗಳಿಲ್ಲದೇ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ವಕ್ಫ್ ಮಂಡಳಿ ಗಮನಿಸಿದೆ. ಸಮುದಾಯಾದ ಅನಕ್ಷರಸ್ಥರು, ಅರಿವಿನ ಕೊರತೆಯಿಂದ ಸರಿಯಾಗಿ ದಾಖಲೆಗಳನ್ನು ಇಟ್ಟುಕೊಂಡಿಲ್ಲ. ಮಳೆ, ಅತಿವೃಷ್ಟಿ, ಪ್ರವಾಹ, ಪ್ರಕೃತಿ ವಿಕೋಪಗಳ ಪರಿಣಾಮ ದಾಖಲೆ ಕಳೆದುಕೊಂಡವರೂ ಇದ್ದಾರೆ. ಮತದಾರರ ಗುರುತಿನ ಚೀಟಿ ಇಲ್ಲದೇ ಮತದಾನದಿಂದ ವಂಚಿತರಾಗುತ್ತಿರುವ ಬಗ್ಗೆ ಇತ್ತೀಚೆಗೆ ಸಾಕಷ್ಟು ದೂರುಗಳಿವೆ. ಹೀಗಿರುವಾಗ ಸರ್ಕಾರದ ದಾಖಲೆಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಲು ಮೊಹಲ್ಲಾ ಮಸೀದಿಗಳು, ಸ್ವಯಂಸೇವಾ ಸಂಸ್ಥೆಗಳು ನೆರವಾಗಬೇಕು ಎನ್ನುವುದು ವಕ್ಫ್ ಮಂಡಳಿಯ ಆಶಯ. ಈ ಬಗ್ಗೆ ಸಮುದಾಯದ ಸುಶಿಕ್ಷಿತರು, ಜಾಗೃತಿಗೆ ಕೈಜೋಡಿಸಿದರೆ ಸೌಲಭ್ಯವಂಚಿತ ಹಾಗೂ ಅಭದ್ರತೆ ಕಾಡುತ್ತಿರುವ ಹಿಂದುಳಿದ ಸಮುದಾಯಕ್ಕೆ ಸಹಕಾರಿಯಾಗುವುದರಲ್ಲಿ ಅನುಮಾನವೇ ಇಲ್ಲ.

    ಎನ್‌ಆರ್‌ಸಿ ಬಗ್ಗೆ ಪರ ವಿರೋಧಗಳು, ಪ್ರತಿಭಟನೆ ಬಹಿಷ್ಕಾರದ ಮಾತುಗಳು ಏನೇ ಇರಲಿ, ತಮ್ಮ ಅಗತ್ಯ ದಾಖಲೆಗಳನ್ನು ಸರಿಯಾಗಿ ಮಾಡಿಸಿಕೊಂಡು ಇಟ್ಟುಕೊಂಡರೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವುದನ್ನು ತಡೆಯಬಹುದು. ಪ್ರತಿ ಚುನಾವಣೆ ಸಂದರ್ಭದಲ್ಲೂ ವೋಟರ್ ಐಡಿ ಇಲ್ಲ ಎಂಬ ಕಾರಣಕ್ಕೆ ಮತದಾನದಿಂದ ವಂಚಿತರಾದಾಗ ಕೂಗಾಟ, ವಾಗ್ವಾದ ಪ್ರತಿಭಟನೆ ಆಕ್ರೋಶ ವ್ಯಕ್ತವಾಗುತ್ತಿರುವುದು ಹಲವು ಬಾರಿ ವರದಿಯಾಗಿದೆ. ಆದ್ರೆ ಏನೇ ಕೂಗಾಡಲಿ ಅವರಿಗೆಲ್ಲಾ ಮತದಾನಕ್ಕೆ ತಕ್ಷಣ ಅವಕಾಶ ಕೊಡಿಸಿದ ಉದಾಹರಣೆ ಇಲ್ಲ. ಇಂತಹ ಸಂದರ್ಭದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕೀಯ ಪಕ್ಷಗಳು ನಂತರ ಮುಂದಿನ ಚುನಾವಣೆವರೆಗೂ ಕಣ್ಮರೆಯಾಗುತ್ತವೆ. ಮತ್ತೆ ಅವಕಾಶ ವಂಚಿತರಾಗೋದು ಮಾತ್ರ ಆ ಮುಗ್ಧ ಜನರು. ಹೀಗಾಗಿ ಎನ್‌ಆರ್‌ಸಿ ಜಾರಿಯಾಗುತ್ತೋ ಬಿಡುತ್ತೋ, ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಏನೆಲ್ಲಾ ಮಾಡ್ತಾರೋ ಮಾಡಲಿ. ಅಲ್ಪಸಂಖ್ಯಾತ ಸಮುದಾಯದ ಜನತೆ ದಾಖಲೆಗಳನ್ನು ಮಾಡಿಸಿಕೊಂಡು ಜಾಣತನ ಮೆರೆಯಬೇಕು. ಯಾಕೆಂದರೆ, ನಾವು ಎನ್‌ಆರ್‌ಸಿ  ವಿರೋಧಿಸ್ತೀವಿ, ದಾಖಲೆ ನೀಡಿ ನಾನು ಪ್ರಜೆ ಎಂದು ಸಾಬೀತು ಮಡಲ್ಲ ಎಂದು ಭಾಷಣ ಬಿಗಿಯುವ ಎಲ್ಲಾ ಮಹಾನುಭಾವರುಗಳ ಬಳಿ ಎಲ್ಲಾ ದಾಖಲೆಗಳು ಸರಿಯಾಗಿಯೇ ಇರುತ್ತವೆ. ಆದರೆ, ಅವರ ಭಾಷಣ ಕೇಳಿ ಚಪ್ಪಾಳೆ ತಟ್ಟಿ ಮನೆಗೆ ಹೋಗುವ ಮುಗ್ಧ ಜನರ ಬುಡಕ್ಕೆ ಬಂದಾಗ ಇವರು ಯಾರೂ ಇರುವುದಿಲ್ಲ. ಮತ್ತೆ ಬೀದಿಗೆ ಬರುವುದು ಆ ಮುಗ್ಧ ಸೌಲಭ್ಯವಂಚಿತರೇ. ಆದ್ದರಿಂದ ಈ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಪಕ್ಷಗಳ ಲಾಭ ನಷ್ಟ ಲೆಕ್ಕಾಚಾರದಲ್ಲಿ ಜನಸಾಮಾನ್ಯರು ಬಲಿಪಶುಗಳಾಗುತ್ತಾರೆ.

    ಹಾಗಾಗಿ ರಾಜಕೀಯ ಕಾರಣಗಳಿಗಾಗಿ ನಡೆಯುವ ಈ ಎಲ್ಲಾ ಪರ ವಿರೋಧ ಪ್ರಹಸನಗಳಿಂದ ಮುಗ್ಧ ಜನರು ಬಲಿಪಶುಗಳಾಗುವುದನ್ನು ತಪ್ಪಿಸಲು ಪ್ರಜ್ಞಾವಂತರು ದಾಖಲೆಗಳಿಲ್ಲದೇ ಪರದಾಡುತ್ತಿರುವ ಈ ಬಡಜನರ ನೆರವಿಗೆ ಬರಬೇಕಾದ್ದು ಇಂದಿನ ಅಗತ್ಯತೆ. ಆದ್ದರಿಂದ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸೂಚಿಸಿರುವಂತೆ ಎಲ್ಲಾ ಮಸೀದಿ, ಮೊಹಲ್ಲಾಗಳ ಪ್ರಜ್ಞಾವಂತರು ಯಾವುದೇ ರಾಜಕೀಯ ಪಕ್ಷಗಳ ಕೆಸರೆರಚಾಟಕ್ಕೆ ಕಿವಿಕೊಡದೇ ದಾಖಲೆವಂಚಿತ ಮುಸ್ಲಿಂ ಸಮುದಾಯದ ಬಡವರ್ಗಕ್ಕೆ ನೆರವಾಗುವುದು ಎಲ್ಲಾ ದೃಷ್ಟಿಯಿಂದಲೂ ಒಳಿತು.