Tag: Dasun Shanaka

  • ಸೂರ್ಯನ ಸಿಡಿಲಬ್ಬರದ ಶತಕಕ್ಕೆ ಲಂಕಾ ಭಸ್ಮ – ಭಾರತಕ್ಕೆ ಟಿ20 ಸರಣಿ ಕಿರೀಟ

    ಸೂರ್ಯನ ಸಿಡಿಲಬ್ಬರದ ಶತಕಕ್ಕೆ ಲಂಕಾ ಭಸ್ಮ – ಭಾರತಕ್ಕೆ ಟಿ20 ಸರಣಿ ಕಿರೀಟ

    ಮುಂಬೈ: ಸೂರ್ಯಕುಮಾರ್‌ ಯಾದವ್‌ (Suryakumar Yadav) ಸಿಡಿಲಬ್ಬರದ ಶತಕ ಹಾಗೂ ಸಂಘಟಿತ ಬೌಲಿಂಗ್‌ ಪ್ರದರ್ಶನದಿಂದಾಗಿ ಟೀಂ ಇಂಡಿಯಾ (Team India) ಶ್ರೀಲಂಕಾ (Srilanka) ವಿರುದ್ಧದ ಕೊನೆಯ ಟಿ20 ಪಂದ್ಯದಲ್ಲಿ 91 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ 2-1 ಅಂತರದಲ್ಲಿ ಗೆದ್ದು ಸರಣಿ ಕಿರೀಟ ಮುಡಿಗೇರಿಸಿಕೊಂಡಿದೆ.

    ಶ್ರೀಲಂಕಾ ವಿರುದ್ಧದ T20 ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಹಾರ್ದಿಕ್‌ ಪಡೆ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 228 ರನ್‌ಗಳ ಬೃಹತ್‌ ಮೊತ್ತ ಪೇರಿಸಿತು. 229 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಶ್ರೀಲಂಕಾ ನಿಗದಿತ 16.4 ಓವರ್‌ಗಳಲ್ಲಿ 137 ರನ್‌ಗಳಿಗೆ ಸರ್ವಪತನ ಕಂಡು, ಸೋಲೊಪ್ಪಿಕೊಂಡಿತು. ಟೀಂ ಇಂಡಿಯಾ 2-1 ಅಂತರದಲ್ಲಿ ಸರಣಿ ಗೆದ್ದು ಬೀಗಿತು.

    ಟೀಂ ಇಂಡಿಯಾದ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಶ್ರೀಲಂಕಾ (SriLanka) ಉತ್ತಮ ಶುಭಾರಂಭ ನೀಡಿತು. ಒಂದೆಡೆ ರನ್‌ ಕಲೆಹಾಕುತ್ತಿದ್ದರೂ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು. ಭಾರತದ ಬೌಲರ್‌ಗಳು ತಮ್ಮ ಮಾರಕ ದಾಳಿಯಿಂದ ಲಂಕನ್ನರಿಗೆ ಲಗಾಮು ಹಾಕಿದರು. ಪರಿಣಾಮ ಪವರ್‌ ಪ್ಲೇ ಮುಗಿಯುವಷ್ಟರಲ್ಲೇ 51 ರನ್‌ ಗಳಿಸಿದ್ದ ಲಂಕಾ ತಂಡ 2 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

    ಆರಂಭಿಕರಾಗಿ ಕಣಕ್ಕಿಳಿದ ಪಾತುಮ್‌ ನಿಸಾಂಕ 3 ಬೌಂಡರಿಗಳೊಂದಿಗೆ 15 ರನ್‌ ಗಳಿಸಿದ್ರೆ, ಕುಸಾಲ್‌ ಮೆಂಡಿಸ್‌ (Kusal Mendis) 15 ಎಸೆತಗಳಲ್ಲಿ 23ರನ್‌ (2 ಸಿಕ್ಸರ್‌, 2 ಬೌಂಡರಿ) ಬಾರಿಸಿ ಪೆವಿಲಿಯನ್‌ ನತ್ತ ಮುಖ ಮಾಡಿದ್ರು. 2ನೇ ಕ್ರಮಾಂಕದಲ್ಲಿ ಬಂದ ಅವಿಷ್ಕಾ ಫರ್ನಾಂಡೋ 1 ರನ್‌ ಗಳಿಸಿದರು. ವಾನಿಂದು ಹಸರಂಗ (Wanindu Hasaranga de Silva) ಸಹ 9 ರನ್‌, ಚಮಿಕ ಕರುಣ ರತ್ನೆ (Chamika Karunaratne) ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದ್ರು.

    ನಂತರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಧನಂಜಯ ಡಿ ಸಿಲ್ವಾ ಹಾಗೂ ಚರಿತ್ ಅಸಲಂಕಾ ಉತ್ತಮ ಇನ್ನಿಂಗ್ಸ್‌ ಕಟ್ಟಲು ಪ್ರಯತ್ನಿಸಿದರು. ಸೆಲ್ವಾ 14 ಎಸೆತಗಳಲ್ಲಿ 22 ರನ್‌ ಗಳಿಸಿದ್ರೆ, ಅಸಲಂಕಾ 14 ಎಸೆತಗಳಲ್ಲಿ 19 ರನ್‌ ಗಳಿಸಿದರು. ಇವರಿಬ್ಬರ ಆಟಕ್ಕೆ ಭಾರತದ ಬೌಲರ್‌ಗಳು ಬ್ರೇಕ್‌ ಹಾಕಿದ್ರು. ನಾಯಕ ದಸುನ್‌ ಶನಕ  (Dasun Shanaka) ಕೂಡ 23 ರನ್‌ಗಳಿಸಿ ಔಟಾದರು. ಮಹೀಶ್‌ ತೀಕ್ಷಣ 2 ರನ್‌ ದಿಲ್ಶನ್‌ 9ರನ್‌ ಗಳಿಸಿದ್ರೆ, ಕುಸನ್‌ ರಜಿತ ಶೂನ್ಯಕ್ಕೆ ನಿರ್ಗಮಿಸಿದರು. ಕಳಪೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಪ್ರದರ್ಶನದಿಂದಾಗಿ ಶ್ರೀಲಂಕಾ ತಂಡ ಹೀನಾಯ ಸೋಲನ್ನು ಅನುಭವಿಸಿತು.

    ಅರ್ಷ್‌ದೀಪ್‌, ಹಾರ್ದಿಕ್‌, ಚಾಹಲ್‌ ಬೌಲಿಂಗ್‌ ಕಮಾಲ್‌:
    ಬೌಲಿಂಗ್‌ನಲ್ಲೀ ತಮ್ಮ ಕೈಚಳಕ ತೋರಿದ ಭಾರತೀಯ ಬೌಲರ್‌ಗಳು ಪ್ರಮುಖ ವಿಕೆಟ್‌ಗಳನ್ನು ಉರುಳಿಸುವಲ್ಲಿ ಯಶಸ್ವಿಯಾದರು.‌ ಕಳೆದ ಪಂದ್ಯದಲ್ಲಿ ನೋಬಾಲ್‌ ನೀಡಿ ಕೆಟ್ಟ ದಾಖಲೆ ಬರೆದಿದ್ದ ಅರ್ಷ್‌ದೀಪ್‌ ಸಿಂಗ್‌ (Arshdeep Singh) ಈ ಬಾರಿ 3 ವಿಕೆಟ್‌ ಪಡೆದು ಗೆಲುವಿಗೆ ಶ್ರಮಿಸಿದರು. ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya), ಯಜುವೇಂದ್ರ ಚಾಹಲ್‌, ಉಮ್ರಾನ್‌ ಮಲಿಕ್‌ ತಲಾ 2 ವಿಕೆಟ್‌ ಪಡೆದರೆ, ಅಕ್ಷರ್‌ ಪಟೇಲ್‌ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    ಟಾಸ್‌ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ಆರಂಭಿಕನಾಗಿ ಕಣಕ್ಕಿಳಿದ ಇಶಾನ್‌ ಕಿಶನ್‌ 1 ರನ್‌ ಗಳಿಸಿ ಟೀಂ ಇಂಡಿಯಾಕ್ಕೆ ನಿರಾಸೆ ಮೂಡಿಸಿದರು. ಈ ವೇಳೆ 2ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ರಾಹುಲ್‌ ತ್ರಿಪಾಟಿ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಪವರ್‌ ಪ್ಲೇನಲ್ಲಿ ಭರ್ಜರಿ ರನ್‌ ತಂದುಕೊಟ್ಟರು. 16 ಎಸೆತಗಳನ್ನು ಎದುರಿಸಿದ ತ್ರಿಪಾಟಿ 218.75 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ 35 ರನ್‌ (2 ಸಿಕ್ಸರ್‌, 5 ಬೌಂಡರಿ) ಸಿಡಿಸಿದರು. ಈ ವೇಳೆ ಚಮಿಕ ಕರುಣರತ್ನೆ ಬೌಲಿಂಗ್‌ನಲ್ಲಿ ಬೌಂಡರಿಗೆ ತಳ್ಳಲುಹೋಗಿ ಕ್ಯಾಚ್‌ ನೀಡಿ ನಿರ್ಗಮಿಸಿದರು. ನಂತರ ಸೂರ್ಯನ ಅಬ್ಬರ ಶುರುವಾಯಿತು.

    2ನೇ ಪಂದ್ಯದಲ್ಲಿ ಅರ್ಧ ಶತಕ ಗಳಿಸಿ ಔಟಾಗಿದ್ದ ಸೂರ್ಯ ಈ ಬಾರಿ ಆರಂಭದಿಂದಲೇ ಅಬ್ಬರಿಸಲು ಶುರು ಮಾಡಿದರು. ಸಿಕ್ಸರ್‌- ಬೌಂಡರಿಗಳನ್ನು ಬಾರಿಸುತ್ತಾ ಲಂಕಾ ಬೌಲರ್‌ಗಳು ಕಂಗಾಲಾಗುವಂತೆ ಮಾಡಿದ್ರು. 219.60 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಸೂರ್ಯ 51 ಎಸೆತಗಳಲ್ಲಿ 7 ಬೌಂಡರಿ ಹಾಗೂ 9 ಸಿಕ್ಸರ್ ಗಳೊಂದಿಗೆ 112 ರನ್‌ ಗಳಿಸಿ ಅಜೇಯರಾಗುಳಿದರು.

    ಈ ವೇಳೆ ಸೂರ್ಯನಿಗೆ ಸಾಥ್‌ ನೀಡಿದ ಶುಭಮನ್‌ ಗಿಲ್‌ 36 ಎಸೆತಗಳಲ್ಲಿ 46 ರನ್‌ (3 ಸಿಕ್ಸರ್‌, 2 ಬೌಂಡರಿ) ಸಿಡಿಸಿ ಪೆವಿಲಿಯನ್‌ಗೆ ಮರಳಿದರು. ಅಂತಿಮ ಹಂತದಲ್ಲಿ ಅಕ್ಷರ್ ಪಟೇಲ್ ಕೂಡ ಭರ್ಜರಿ ಬ್ಯಾಟಿಂಗ್‌ ಮಾಡಿದರು. 9 ಎಸೆತ ಎದುರಿಸಿದ ಅಕ್ಷರ್ 21 ರನ್‌ಗಳಿಸಿ ಅಜೇಯವಾಗುಳಿದರು. ಆದ್ರೆ ಮಧ್ಯಮ ಕ್ರಮಾಂಕದಲ್ಲಿ ಬಂದ ನಾಯಕ ಹಾರ್ದಿಕ್‌ ಪಾಂಡ್ಯ 4 ಎಸೆತಗಳಲ್ಲಿ 4 ರನ್‌ ಗಳಿಸಿ ಔಟಾದರು.

    ಶ್ರೀಲಂಕಾ ತಂಡದ ಪರ ದಿಲ್ಶನ್ ಮಧುಶಂಕ 2 ವಿಕೆಟ್‌ ಪಡೆದರೆ, ಕಸುನ್ ರಜಿತಾ, ಚಮಿಕ ಕರುಣರತ್ನೆ ಹಾಗೂ ವಾನಿಂದು ಹಸರಂಗ ತಲಾ ಒಂದೊಂದು ವಿಕೆಟ್‌ ಪಡೆದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 9 ಸಿಕ್ಸರ್‌, 7 ಬೌಂಡರಿ – 45 ಎಸೆತಗಳಲ್ಲೇ ಸ್ಫೋಟಕ ಶತಕ ಸಿಡಿಸಿದ ದಾಖಲೆ ವೀರ ಸೂರ್ಯ

    9 ಸಿಕ್ಸರ್‌, 7 ಬೌಂಡರಿ – 45 ಎಸೆತಗಳಲ್ಲೇ ಸ್ಫೋಟಕ ಶತಕ ಸಿಡಿಸಿದ ದಾಖಲೆ ವೀರ ಸೂರ್ಯ

    ಮುಂಬೈ: ದಾಖಲೆಗಳ ಸರದಾರ ಸೂರ್ಯಕುಮಾರ್ ಯಾದವ್ (Suryakumar Yadav) ಭರ್ಜರಿ ಶತಕ ಸಿಡಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

    ಈ ಹಿಂದೆ ಕಿವೀಸ್‌ ಪಡೆಯ ದ್ವಿಪಕ್ಷೀಯ ಸರಣಿಯ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ ಬೌಲರ್‌ಗಳನ್ನು ಬೆಂಡೆತ್ತಿದ್ದ ಸೂರ್ಯ ಈಗ ಲಂಕಾ ಬೌಲರ್‌ಗಳ ಬೆವರಿಳಿಸಿದ್ದಾರೆ. ಇದನ್ನೂ ಓದಿ: 11 ಬೌಂಡರಿ, 7 ಸಿಕ್ಸ್ – ಶತಕ ಸಿಡಿಸಿದ ದಾಖಲೆ ವೀರ ಸೂರ್ಯ

    ಶನಿವಾರ ಗುಜರಾತ್‌ನ ರಾಜ್‌ಕೋಟ್‌ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ನಡುವಿನ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ 45 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸುವ ಮೂಲಕ ಸೂರ್ಯಕುಮಾರ್‌ ತನ್ನ ದಾಖಲೆಯನ್ನು ತಾನೇ ಮುರಿದಿದ್ದಾರೆ. ಕಿವೀಸ್‌ ಪಡೆ ಎದುರು 49 ಎಸೆತಗಳಲ್ಲಿ ಶತಕ ಸಿಡಿಸಿದ್ದ ಸೂರ್ಯ‌ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ 219.60 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ 45 ಎಸೆತಗಳಲ್ಲೇ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ (Rohit Sharma) ನಂತರ ಅತೀ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ 2ನೇ ಭಾರತೀಯನೆಂಬ ಖ್ಯಾತಿ ಪಡೆದಿದ್ದಾರೆ.

    ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ 51 ಎಸೆತಗಳನ್ನು ಎದುರಿಸಿದ ಸೂರ್ಯಕುಮಾರ್ ಅಜೇಯ 112 ರನ್ ಚಚ್ಚಿದ್ದಾರೆ. ಸಿಂಹಳೀಯರ ವಿರುದ್ಧ ಆರಂಭದಿಂದಲೇ ಅಬ್ಬರಿಸಲು ಮುಂದಾದ ಸೂರ್ಯಕುಮಾರ್ ಮೊದಲ 26 ಎಸೆತಗಳಲ್ಲಿ 50 ರನ್ ಸಿಡಿಸಿದ್ರೆ, ಮುಂದಿನ 25 ಎಸೆತಗಳಲ್ಲಿ 62 ರನ್ ಚಚ್ಚಿದ್ದಾರೆ. 9 ಸಿಕ್ಸರ್, 7 ಬೌಂಡರಿಗಳೂ ಇದರಲ್ಲಿ ಸೇರಿವೆ.

    ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (Cricket) ಇದು ಸೂರ್ಯಕುಮಾರ್ ಯಾದವ್ ಅವರ 3ನೇ ಶತಕವಾಗಿದೆ. 2022ರ ಆವೃತ್ತಿಯ ಜುಲೈನಲ್ಲಿ ಇಂಗ್ಲೆಂಡ್ (England) ವಿರುದ್ಧ ನಡೆದ ಟಿ20 ಸರಣಿಯಲ್ಲಿ 48 ಎಸೆತಗಳಲ್ಲಿ ಸೂರ್ಯಕುಮಾರ್ ಭರ್ಜರಿ ಶತಕ ಬಾರಿಸಿದ್ದರು. ಇದರಲ್ಲಿ 14 ಬೌಂಡರಿ ಮತ್ತು 6 ಸಿಕ್ಸ್‌ಗಳು ದಾಖಲಾಗಿದ್ದವು. 2022ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ನಡೆದ ಟಿ20ಯಲ್ಲಿ 49 ಎಸೆತಗಳಲ್ಲಿ ಶತಕ ಸಿಡಿಸಿದ್ದರು ಇದರಲ್ಲಿ 11 ಬೌಂಡರಿ, 7 ಸಿಕ್ಸರ್‌ ದಾಖಲಾಗಿದ್ದವು. ಇದೀಗ ಶ್ರೀಲಂಕಾ ವಿರುದ್ಧ 45 ಎಸೆತಗಳಲ್ಲಿ 8 ಸಿಕ್ಸರ್‌, 6 ಬೌಂಡರಿಗಳೊಂದಿಗೆ ಸ್ಫೋಟಕ ಶತಕ ಸಿಡಿಸಿ ದಾಖಲೆಯ ಪುಟ ಸೇರಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2018ರ ಆವೃತ್ತಿಯಲ್ಲಿ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಈವರೆಗಿನ ದಾಖಲೆಯಾಗಿದೆ.

    ಟಿ20ನಲ್ಲಿ ಸೂರ್ಯಕುಮಾರ್ ಸಿಡಿಸಿದ 3ನೇ ಶತಕವಾಗಿದ್ದು, ರೋಹಿತ್ ಶರ್ಮಾ (Rohit Sharma) ನಂತರ ಅತೀ ಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ 2ನೇ ಭಾರತೀಯನೆಂಬ ಖ್ಯಾತಿ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿಕ್ಸರ್‌, ಬೌಂಡರಿಗಳ ಸುರಿಮಳೆ ಆಟ – ಆರಂಭದಲ್ಲಿ ಹಿನ್ನಡೆಯಾದ್ರೂ ಹೋರಾಡಿ ಸೋತ ಭಾರತ

    ಸಿಕ್ಸರ್‌, ಬೌಂಡರಿಗಳ ಸುರಿಮಳೆ ಆಟ – ಆರಂಭದಲ್ಲಿ ಹಿನ್ನಡೆಯಾದ್ರೂ ಹೋರಾಡಿ ಸೋತ ಭಾರತ

    ಮುಂಬೈ: ಅಕ್ಷರ್‌ ಪಟೇಲ್‌ (Axar Patel), ಸೂರ್ಯಕುಮಾರ್‌ ಯಾದವ್‌ (Suryakumar Yadav) ಅವರ ಸ್ಫೋಟಕ ಅರ್ಧಶತಕದಿಂದ ಗೆಲುವಿನ ಹತ್ತಿರ ಬಂದಿದ್ದ ಭಾರತ (Team India) ಕೊನೆಯಲ್ಲಿ ವಿಕೆಟ್‌ ಕಳೆದುಕೊಂಡು ಸೋತಿದೆ. ಎರಡನೇ ಟಿ20 ಪಂದ್ಯವನ್ನು 16 ರನ್‌ಗಳಿಂದ ಲಂಕಾ (Srilanka) ಗೆದ್ದುಕೊಂಡಿದ್ದು, ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮವಾಗಿದೆ.

    9.1 ಓವರ್‌ಗಳಲ್ಲಿ 57 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡಿದ್ದರಿಂದ 207 ರನ್‌ಗಳ ಗುರಿ ಭಾರತಕ್ಕೆ ಕಠಿಣವಾಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಅಕ್ಷರ್‌ ಪಟೇಲ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಕೇವಲ 41 ಎಸೆತಗಳಿಗೆ 91 ರನ್‌ ಜೊತೆಯಾಟವಾಡಿ ತಂಡವನ್ನು ಗೆಲುವಿನ ಹತ್ತಿರ ತಂದಿಟ್ಟರು. ಬಳಿಕ ಅಕ್ಷರ್‌ ಪಟೇಲ್‌ ಮತ್ತು ಶಿವಂ ಮಾವಿ 22 ಎಸೆತಗಳಲ್ಲಿ 41 ರನ್‌ ಚಚ್ಚಿದ್ದರು. ಆದರೆ ಕೊನೆಯಲ್ಲಿ ಸೂರ್ಯಕುಮಾರ್‌ ಯಾದವ್‌, ಅಕ್ಷರ್‌ ಪಟೇಲ್‌ ಔಟ್‌ ಆದ ಕಾರಣ ಭಾರತ 8 ವಿಕೆಟ್‌ ನಷ್ಟಕ್ಕೆ 190 ರನ್‌ ಗಳಿಸಿ ಸೋಲು ಅನುಭವಿಸಿತು.

    ಸಿಕ್ಸರ್‌ ಬೌಂಡರಿಗಳ ಈ ಆಟದಲ್ಲಿ ಒಟ್ಟು 26 ಸಿಕ್ಸರ್‌ ಹಾಗೂ 21 ಬೌಂಡರಿಗಳು ದಾಖಲಾದವು. ಶ್ರೀಲಂಕಾ ಪರ 14 ಸಿಕ್ಸರ್‌, 10 ಬೌಂಡರಿಗಳು ದಾಖಲಾದರೆ, ಟೀಂ ಇಂಡಿಯಾ ಪರ 12 ಸಿಕ್ಸರ್‌, 11 ಬೌಂಡರಿಗಳು ದಾಖಲಾದವು. 10 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 64 ರನ್‌ ಗಳಿಸಿದ್ದ ಟೀಂ ಇಂಡಿಯಾ ಉಳಿದ 10 ಓವರ್‌ಗಳಲ್ಲಿ 126 ರನ್‌ಗಳನ್ನು ಪೇರಿಸಿ ಕೊನೆಯವರೆಗೂ ಹೋರಾಡಿತು.

    ಕೊನೆಯ ಓವರ್‌ನಲ್ಲಿ ಟೀಂ ಇಂಡಿಯಾಕ್ಕೆ 21 ರನ್‌ಗಳ ಅಗತ್ಯವಿತ್ತು. ಈ ವೇಳೆ 20ನೇ ಓವರ್‌ನ ಮೊದಲ ಎಸೆತವನ್ನು ಮಾವಿ ಸಿಂಗಲ್‌ ತಂದುಕೊಟ್ಟರು. ಬಳಿಕ ಸ್ಟ್ರೈಕ್‌ ತೆಗೆದುಕೊಂಡ ಅಕ್ಷರ್‌ ಪಟೇಲ್‌ 2ನೇ ಎಸೆತದಲ್ಲಿ 2 ರನ್‌ ಕದಿಯುವಲ್ಲಿ ಯಶಸ್ವಿಯಾದರು. 3ನೇ ಎಸೆತದಲ್ಲಿ ಸಿಕ್ಸ್‌ ಎತ್ತುವ ಬರದಲ್ಲಿ ಬೌಂಡರಿ ಲೈನ್‌ ಬಳಿ ಕ್ಯಾಚ್‌ ನೀಡಿ ಔಟಾದರು. 4, 5ನೇ ಎಸೆತದಲ್ಲಿ ತಲಾ ಒಂದೊಂದು ರನ್‌ ಸೇರ್ಪಡೆಯಾಯಿತು. ಕೊನೆಯ ಎಸೆತದಲ್ಲಿ ಮಾವಿ ಕ್ಯಾಚ್‌ ನೀಡಿದರು.

    ಶ್ರೀಲಂಕಾ ತಂಡದ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ತೀವ್ರ ಆಘಾತ ಎದುರಾಗಿತ್ತು. ಕ್ರೀಸ್‌ನಲ್ಲಿ ಅಬ್ಬರಿಸಬೇಕಿದ್ದ ಪ್ರಮುಖ ಬ್ಯಾಟರ್‌ಗಳು ಕೈಕೊಟ್ಟು ಪೆವಿಲಿಯನ್‌ ಸೇರಿದ್ರು.

    ಆರಂಭಿಕರಾಗಿ ಕಣಕ್ಕಿಳಿದ ಇಶಾನ್‌ ಕಿಶನ್‌ ಹಾಗೂ ಶುಭಮನ್‌ ಗಿಲ್‌ ಜೋಡಿ ಕಳಪೆ ಬ್ಯಾಟಿಂಗ್‌ ಪ್ರದರ್ಶನ ನೀಡಿತು. ಇಶಾನ್‌ ಕೇವಲ 2 ರನ್‌ ಗಳಿಸಿದ್ರೆ ಗಿಲ್‌ 5 ರನ್‌ ಗಳಿಸಿ ಔಟಾದರು. ನಂತರ ಬಂದ ರಾಹುಲ್‌ ತ್ರಿಪಾಟಿ ಸಹ 5 ರನ್‌ ಗಳಿಗೆ ಮಕಾಡೆ ಮಲಗಿದ್ರು. ಭರವಸೆಯ ಆಟಗಾರ, ನಾಯಕ ಹಾರ್ದಿಕ್‌ ಪಾಂಡ್ಯ (Hardik Pandya) ಸಹ 12 ಎಸೆತಗಳಲ್ಲಿ 1 ಸಿಕ್ಸರ್‌, 1 ಬೌಂಡರಿಯೊಂದಿಗೆ 12 ರನ್‌ ಗಳಿಸಿ ಔಟಾದರು. ಒಟ್ಟಿನಲ್ಲಿ ಪವರ್‌ ಪ್ಲೇ ಮುಗಿಯುವಷ್ಟಲ್ಲಿ ಟೀಂ ಇಂಡಿಯಾ 41 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ಆಲ್‌ರೌಂಡರ್‌ ದೀಪಕ್‌ ಹೂಡಾ ಸಹ 9 ರನ್‌ ಗಳಿಸಿ ಪೆವಿಲಿಯನ್‌ ಸೇರಿದ್ರು.

    ಅಕ್ಷರ್‌-ಸೂರ್ಯ ಹೊಡಿಬಡಿ ಆಟ:
    ಬಸವಳಿದಿದ್ದ ಟೀಂ ಇಂಡಿಯಾಕ್ಕೆ (Team India) ಮಧ್ಯಮ ಕ್ರಮಾಂಕದಲ್ಲಿ ಬಂದ ಅಕ್ಷರ್‌ ಪಟೇಲ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಆಸರೆಯಾದರು. ಸಿಕ್ಸರ್‌, ಬೌಂಡರಿಗಳ ಮೂಲಕ ಲಂಕಾ ಬೌಲರ್‌ಗಳನ್ನು ಬೆಂಡೆತ್ತಿ ರನ್‌ ಕಲೆ ಹಾಕಿದರು. ಸೂರ್ಯಕುಮಾರ್‌ ಯಾದವ್‌ 36 ಎಸೆತಗಳಲ್ಲಿ 3 ಸಿಕ್ಸರ್‌, 3 ಬೌಂಡರಿಯೊಂದಿಗೆ ಆಕರ್ಷಕ ಅರ್ಧ ಶತಕ ಗಳಿಸಿದ್ರೆ, ಕೊನೆಯವರೆಗೂ ಅಬ್ಬರಿಸಿದ ಅಕ್ಷರ್‌ ಪಟೇಲ್‌ 31 ಎಸೆತಗಳಲ್ಲಿ 6 ಸಿಕ್ಸರ್‌, 3 ಬೌಂಡರಿಳೊಂದಿಗೆ 65 ರನ್‌ ಚಚ್ಚಿ ಔಟಾದರು. ಈ ವೇಳೆ ಶಿವಂ ಮಾವಿ 15 ಎಸೆತಗಳಲ್ಲಿ ಸ್ಫೋಟಕ 26 ರನ್‌ ಗಳಿಸಿ ಔಟಾದರು.

    ಕೆಟ್ಟ ದಾಖಲೆ ಬರೆದ ಅರ್ಷ್‌ ದೀಪ್‌ಸಿಂಗ್‌:
    ಗಾಯದ ಸಮಸ್ಯೆಯಿಂದಾಗಿ ಮೊದಲ ಟಿ20 ಯಲ್ಲಿ ಹೊರಗುಳಿದಿದ್ದ ಅರ್ಷ್‌ದೀಪ್‌ ಸಿಂಗ್‌ ಈ ಪಂದ್ಯದಲ್ಲಿ ಭಾರೀ ನಿರಾಸೆ ಅನುಭವಿಸಿದ್ದಾರೆ. ಕೇವಲ 2 ಓವರ್‌ಗಳ ಬೌಲಿಂಗ್ ಮಾಡಿದ ಅರ್ಷ್‌ದೀಪ್‌ ಬರೊಬ್ಬರಿ 37 ರನ್‌ ಚಚ್ಚಿಸಿಕೊಂಡರು. 18.50 ಎಕಾನಮಿಯಲ್ಲಿ ಬೌಲಿಂಗ್ ನಡೆಸಿ ಹಿನ್ನಡೆ ಅನುಭವಿಸಿದ್ದು ಮಾತ್ರವಲ್ಲದೇ ಒಂದೇ ಮ್ಯಾಚ್‌ನಲ್ಲಿ ಹ್ಯಾಟ್ರಿಕ್‌ ನೋಬಾಲ್‌ ನೀಡಿ ಅಂತ್ಯಂತ ಕೆಟ್ಟದಾಖಲೆ ಬರೆದರು.

    ಲಂಕಾ ಸಿಕ್ಸರ್‌, ಬೌಂಡರಿ ಆಟ:
    ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಲಂಕಾ ಬ್ಯಾಟ್ಸ್‌ಮ್ಯಾನ್‌ಗಳು ಟೀಂ ಇಂಡಿಯಾ ಬೌಲರ್‌ಗಳ ವಿರುದ್ಧ ಮೇಲುಗೈ ಸಾಧಿಸಿದ್ರು. ಮಧ್ಯಮ ಓವರ್‌ಗಳಲ್ಲಿ ಲಂಕಾ ಪಡೆಯನ್ನು ಕಟ್ಟಿಹಾಕಿತ್ತಾದರೂ ಡೆತ್‌ ಓವರ್‌ನಲ್ಲಿ ಅಬ್ಬರಿಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳ ಬೆವರಿಳಿಸಿದರು.

    ಟಾಸ್‌ ಸೋತು ಮೊದಲು ಕ್ರೀಸ್‌ಗಿಳಿದ ಲಂಕಾ ಉತ್ತಮ ಶುಭಾರಂಭ ಪಡೆಯಿತು. ಅದರಲ್ಲೂ ಕುಸಾಲ್ ಮೆಂಡಿಸ್ (Kusal Mendis) ಟೀಂ ಇಂಡಿಯಶ ಬೌಲರ್‌ಗಳ ಬೆವರಿಳಿಸುತ್ತಾ ಸಾಗಿದರು. ಪಾತುಮ್ ನಿಸ್ಸಂಕ ಹಾಗೂ ಮೆಂಡಿಸ್‌ ಜೋಡಿ 8.2 ಓವರ್‌ಗಳಲ್ಲಿ 80 ರನ್ ಕಲೆ ಹಾಕಿ ಬೇರ್ಪಟ್ಟಿತು. ಮೆಂಡಿಸ್ 31 ಎಸೆತಗಳಲ್ಲಿ 52 ರನ್‌ (4 ಸಿಕ್ಸರ್‌, 3 ಬೌಂಡರಿ) ಗಳಿಸಿ ಮಿಂಚಿದರು. ಪಾತುಮ್ ನಿಸ್ಸಂಕ 35 ಎಸೆತಗಳಲ್ಲಿ 33 ರನ್‌ ಕಲೆಹಾಕಿ ಔಟಾದರು.

    ನಂತರ ಮಧ್ಯಮ ಕ್ರಮಾಂಕದಲ್ಲಿ ಜೊತೆಯಾದ ಚರಿತ್ ಅಸಲಂಕಾ ಹಾಗೂ ನಾಯಕ ದಾಸುನ್ ಶನಕ (Dasun Shanaka) ಸಿಕ್ಸರ್‌ ಬೌಂಡರಿಗಳ ಭರ್ಜರಿ ಜೊತೆಯಾಟವಾಡಿದರು.

    ಕೊನೆಯವರೆಗೂ ಕ್ರೀಸ್‌ನಲ್ಲಿ ನಿಂತು ಅಬ್ಬರಿಸಿದ ನಾಯಕ ಶನಕ ಕೇವಲ 22 ಎಸೆತಗಳಲ್ಲಿ ಭರ್ಜರಿ 56 ರನ್‌ (6 ಸಿಕ್ಸರ್‌, 2 ಬೌಂಡರಿ) ಚಚ್ಚಿದರೆ, ಅಸಲಂಕಾ 19 ಎಸೆತಗಳಲ್ಲಿ 4 ಸಿಕ್ಸರ್‌ಗಳೊಂದಿಗೆ 37 ಬಾರಿಸಿದರು. ಈ ಮೂಲಕ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ ಭರ್ಜರಿ 206 ರನ್ ಕಲೆಹಾಕಿತು. ಬಾನುಕಾ ರಾಜಪಕ್ಷ 2 ರನ್‌, ಧನಂಜಯ ಡಿ.ಸೆಲ್ವ 3 ರನ್‌ ಗಳಿಸಿದ್ರೆ ವಾನಿಂದು ಹಸರಂಗ ಶೂನ್ಯಕ್ಕೆ ನಿರ್ಗಮಿಸಿದ್ರು.

    4 ಓವರ್‌ಗಳಲ್ಲಿ 48 ರನ್‌ ನೀಡಿದ ಉಮ್ರಾನ್ ಮಲಿಕ್ 3 ವಿಕೆಟ್‌ ಪಡೆದರೆ, 24 ರನ್‌ ನೀಡಿದ ಅಕ್ಷರ್‌ ಪಟೇಲ್‌ 2 ವಿಕೆಟ್‌ ಪಡೆದರು. ಯಜುವೇಂದ್ರ ಚಾಹಲ್‌ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • T20WorldCup: ಶ್ರೀಲಂಕಾ ವಿರುದ್ಧ ನಮೀಬಿಯಾ ಆರ್ಭಟ – ಉದ್ಘಾಟನಾ ಪಂದ್ಯದಲ್ಲೇ 55 ರನ್‌ಗಳ ಭರ್ಜರಿ ಜಯ

    T20WorldCup: ಶ್ರೀಲಂಕಾ ವಿರುದ್ಧ ನಮೀಬಿಯಾ ಆರ್ಭಟ – ಉದ್ಘಾಟನಾ ಪಂದ್ಯದಲ್ಲೇ 55 ರನ್‌ಗಳ ಭರ್ಜರಿ ಜಯ

    ಕ್ಯಾನ್ಬೆರಾ: ಜಾನ್ ಪ್ರೈಲಿಂಕ್ (JanFrylinck), ಜೆಜೆ ಸ್ಮಿತ್ ಆಲ್‌ರೌಂಡರ್ ಆಟ ಹಾಗೂ ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಟಿ20 ವಿಶ್ವಕಪ್ (T20 WorldCup) ಮೊದಲ ಪಂದ್ಯದಲ್ಲೇ ಶ್ರೀಲಂಕಾ (SriLanka) ವಿರುದ್ಧ ನಮೀಬಿಯಾ (Namibia) 55 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅರ್ಹತಾ ಸುತ್ತಿನ ಉದ್ಘಾಟನಾ ಪಂದ್ಯದಲ್ಲೇ ಶುಭಾರಂಭ ಪಡೆದುಕೊಂಡಿದೆ.

    ಶ್ರೀಲಂಕಾ ಬೌಲರ್‌ಗಳ ಸಂಘಟಿತ ಪ್ರದರ್ಶನದ ಹೊರತಾಗಿಯೂ ನಮೀಬಿಯಾ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 163 ರನ್ ಬಾರಿಸಿತು. ಸಾಧಾರಣ ರನ್‌ಗಳ ಗುರಿ ಬೆನ್ನತ್ತಿದ ಲಂಕಾ ಪ್ರಮುಖ ಬ್ಯಾಟರ್‌ಗಳ ವೈಫಲ್ಯದಿಂದಾಗಿ ನಿಗದಿತ 19 ಓವರ್‌ಗಳಲ್ಲೇ 108 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲನ್ನು ಒಪ್ಪಿಕೊಂಡಿತು.

    ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನಮೀಬಿಯಾಕ್ಕೆ ನೀಡಿತು. ನಂತರ ಕ್ರೀಸ್‌ಗಳಿದ ಲಂಕಾಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕರಾದ ಪಾತುಮ್ ನಿಸ್ಸಾಂಕ ಹಾಗೂ ಕುಸಲ್ ಮೆಂಡಿಸ್ (Kusal Mendis)  ಅಲ್ಪಮೊತ್ತಕ್ಕೆ ನಿರ್ಗಮಿಸಿದರು. ನಿಸ್ಸಾಂಕ 10 ಎಸೆತಗಳಲ್ಲಿ 9 ರನ್‌ಗಳಿಸಿದರೆ ಮೆಂಡಿಸ್ 6 ಎಸೆತಕ್ಕೆ 6ರನ್ ಗಳಿಸಿ ಪೆವಿಲಿಯನ್ ಸೇರಿದರು. ನಂತರ ಬ್ಯಾಟ್ ಬೀಸಿದ ಧನಂಜಯ ಡಿ ಸಿಲ್ವಾ 11 ಎಸೆತಗಳಲ್ಲಿ 1 ಬೌಂಡರಿಯೊಂದಿಗೆ 12 ರನ್ ಗಳಿಸಿ ನಿರ್ಗಮಿಸಿದರು.

    ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಭಾನುಕಾ ರಾಜಪಕ್ಸೆ (Bhanuka Rajapaksa)ಹಾಗೂ ದಸುನ್ ಶನಕ ಉತ್ತಮ ಸಾಂಘಿಕ ಪ್ರದರ್ಶನದಿಂದ 49 ರನ್ ಕಲೆಹಾಕಿದರು. ಇಬ್ಬರ ಜೊತೆಯಾಟದಲ್ಲಿ 4 ಬೌಂಡರಿ 1 ಸಿಕ್ಸರ್ ಸೇರಿ 44 ಎಸೆತಗಳಲ್ಲಿ 49 ರನ್ ಗಳಿಸಿದರು. ಇದರಿಂದ ತಂಡ ಗೆಲುವಿನ ಕನಸು ಕಾಣುತ್ತಿರುವಾಗಲೇ ರಾಜಪಕ್ಸೆ ಆಟಕ್ಕೆ ನಮೀಬಿಯಾ ಬೌಲರ್ ಬ್ರೇಕ್ ಹಾಕಿದರು. ರಾಜಪಕ್ಸೆ 20 ರನ್ (21 ಎಸೆತ, 2 ಬೌಂಡರಿ), ದಸುಮ್ ಶನಕ 29 ರನ್ (23 ಎಸೆತ, 2 ಬೌಂಡರಿ, 1 ಸಿಕ್ಸರ್) ಬಾರಿಸಿ ಔಟಾದರು. ನಂತರದ ಆಟಗಾರರು ಸ್ಥಿರವಾಗಿ ನಿಲ್ಲದ ಕಾರಣ ಲಂಕಾ ಉದ್ಘಾಟನಾ ಪಂದ್ಯದಲ್ಲೇ ಸೋಲನ್ನು ಅನುಭವಿಸಬೇಕಾಯಿತು.

    ದನುಷ್ಕ ಗುಣತಿಲಕ, ಪ್ರಮೋದ್ ಮದುಶನ್ ಶೂನ್ಯಕ್ಕೆ ನಿರ್ಗಮಿಸಿದರೆ, ವನಿಂದು ಹಸರಂಗ 4 ರನ್, ಚಾಮಿಕಾ ಕರುಣಾರತ್ನೆ 5 ರನ್, ದುಷ್ಮಂತ ಚಮೀರ 8 ರನ್ ಗಳಿಸಿದರು. ಮಹೇಶ್ ತೀಕ್ಷಣ 11 ರನ್‌ಗಳಿಸಿ ಅಜೇಯರಾಗುಳಿದರು. ಶ್ರೀಲಂಕಾ ತಂಡದ ಪರ ಪ್ರಮೋದ್ ಮದುಶನ್ 2 ವಿಕೆಟ್ ಪಡೆದರೆ, ಮಹೀಶ್ ತೀಕ್ಷಣ, ಚಮೀರಾ, ಕರುಣರತ್ನೆ ಹಾಗೂ ವನಿಂದ ಹಸರಂಗ (Wanindu Hasaranga) ತಲಾ ಒಂದೊಂದು ವಿಕೆಟ್ ಪಡೆದರು. ಒಟ್ಟಿನಲ್ಲಿ ಲಂಕಾ ಬ್ಯಾಟಿಂಗ್ ವೈಫಲ್ಯ ಇಂದಿನ ಸೋಲಿಗೆ ಕಾರಣವಾಯಿತು.

    ಇಲ್ಲಿನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನಮೀಬಿಯಾ ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಗಿತ್ತು. ಆರಂಭಿಕ ಬ್ಯಾಟರ್‌ಗಳಾದ ಮಿಚೆಲ್ ವ್ಯಾನ್ ಲಿಂಗೆನ್ 3 ರನ್, ಡಿವನ್ ಲಾ ಕುಕ್ 9 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. 16 ರನ್ ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರೂ ಪೆವಿಲಿಯನ್ ಸೇರಿದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ಜಾನ್ ನಿಕೊಲ್ ಈಟನ್ 20 ರನ್, ಸ್ಟಿಫನ್ ಬಾರ್ಡ್ 26, ನಾಯಕ ಗೆರ್ಹಾಡ್ ಬಾರ್ಡ್ 20 ರನ್ ಕಲೆಹಾಕಿ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು.

    ಪ್ರೈಲಿಂಕ್ – ಸ್ಮಿತ್ ಆಲ್‌ರೌಂಡರ್ ಆಟ: ನಮೀಬಿಯಾ ತಂಡವು 14.2 ಓವರ್‌ಗಳಲ್ಲಿ 6 ವಿಕೆಟ್‌ಗಳನ್ನು ಕಳೆದುಕೊಂಡು 93 ರನ್ ಗಳಿಸಿ ಸಂಕಷ್ಟದ ಸುಳಿಗೆ ಸಿಲುಕಿತ್ತು. ಆದರೆ 7ನೇ ವಿಕೆಟ್‌ಗೆ ಜಾನ್ ಪ್ರೈಲಿಂಕ್ (JanFrylinck) ಹಾಗೂ ಜೆಜೆ ಸ್ಮಿತ್ 34 ಎಸೆತಗಳಲ್ಲಿ 69 ರನ್‌ಗಳ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 160ರ ಗಡಿ ದಾಟಿಸಿದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಜಾನ್ ಪ್ರೈಲಿಂಕ್ ಕೇವಲ 28 ಎಸೆತಗಳಲ್ಲಿ 4 ಬೌಂಡರಿ ಸಹಿತ 44 ರನ್ ಬಾರಿಸಿ ರನೌಟ್ ಆದರು. ಇನ್ನು ಮತ್ತೊಂದು ತುದಿಯಲ್ಲಿ ಜೆಜೆ ಸ್ಮಿತ್ 16 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 31 ರನ್ ಪೇರಿಸಿ ತಂಡಕ್ಕೆ ಆಸರೆಯಾದರು.

    ಇನ್ನೂ ಬೌಲಿಂಗ್‌ನಲ್ಲೂ ಅಬ್ಬರಿಸಿದ ಪ್ರೈಲಿಂಕ್ 4 ಓವರ್‌ಗಳಲ್ಲಿ 26 ರನ್ ನೀಡಿ 2 ವಿಕೆಟ್ ಪಡೆದರೆ, ಜೆಜೆ ಸ್ಮಿತ್ 3 ಓವರ್‌ಗಳಲ್ಲಿ 16 ರನ್ ನೀಡಿ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

    ನಮೀಬಿಯಾ ತಂಡದ ಪರ ಡೇವಿಡ್ ವೈಸ್, ಬರ್ನಾರ್ಡ್ ಸ್ಕೋಲ್ಟ್ಜ್‌, ಬೆನ್ ಶಿಕೊಂಗೊ, ಜಾನ್ ಫ್ರಿಲಿಂಕ್, ತಲಾ ಎರಡು ವಿಕೆಟ್ ಪಡೆದರೆ, ಜೆಜೆ ಸ್ಮಿತ್ 1 ವಿಕೆಟ್ ಪಡೆದರು.

    Live Tv
    [brid partner=56869869 player=32851 video=960834 autoplay=true]

  • ಪಾಕ್ ವಿರುದ್ಧ ಪಂದ್ಯದ ಗೆಲುವಿಗೆ ಧೋನಿ, ಸಿಎಸ್‌ಕೆ ಸ್ಫೂರ್ತಿ: ದಸುನ್ ಶನಕ

    ಪಾಕ್ ವಿರುದ್ಧ ಪಂದ್ಯದ ಗೆಲುವಿಗೆ ಧೋನಿ, ಸಿಎಸ್‌ಕೆ ಸ್ಫೂರ್ತಿ: ದಸುನ್ ಶನಕ

    ದುಬೈ: ಭಾನುವಾರ ದುಬೈನಲ್ಲಿ(Dubai) ನಡೆದ ಏಷ್ಯಾ ಕಪ್ 2022ರ(Asia Cup 2022) ಫೈನಲ್‌ನಲ್ಲಿ ಶ್ರೀಲಂಕಾ(Sri Lanka) ತಂಡ ಪಾಕಿಸ್ತಾನವನ್ನು ಸೋಲಿಸಿತು. ಈ ಗೆಲುವಿಗೆ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿ(MS Dhoni) ಹಾಗೂ ಚೆನ್ನೈ ಸೂಪರ್ ಕಿಂಗ್ಸ್(CSK) ತಂಡದ 2021ರ ಐಪಿಎಲ್ ಗೆಲುವೇ ಸ್ಫೂರ್ತಿ ಎಂದು ಶ್ರೀಲಂಕಾ ತಂಡದ ನಾಯಕ ದಸುನ್ ಶನಕ(Dasun Shanaka) ತಿಳಿಸಿದ್ದಾರೆ.

    ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 2021ರ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದ್ದನ್ನು ನೋಡಿ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದು ಶನಕ ಬಹಿರಂಗಪಡಿಸಿದ್ದಾರೆ. ಇದೀಗ ನಾವು ಏಷ್ಯಾಕಪ್ ಗೆದ್ದಿದ್ದೇವೆ. ನಮ್ಮ ಈ ಗೆಲುವನ್ನು ನಮ್ಮ ದೇಶಕ್ಕೆ ಅರ್ಪಿಸಲು ಬಯಸುತ್ತೇವೆ ಎಂದು ಶನಕ ಪಂದ್ಯದ ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸೋಲು – ಸ್ಟೇಡಿಯಂನಲ್ಲಿ ಕಣ್ಣೀರಿಟ್ಟ ಕೊಹ್ಲಿಯ ಪಾಕ್ ಅಭಿಮಾನಿ

    ಭಾನುವಾರ ಪಾಕಿಸ್ತಾನ ಹಾಗೂ ಶ್ರೀಲಂಕಾದ ನಡುವಿನ 15ನೇ ಆವೃತ್ತಿಯ ಏಷ್ಯಾಕಪ್ ಫೈನಲ್‌ನಲ್ಲಿ ಶ್ರೀಲಂಕಾ 23 ರನ್‌ಗಳ ಭರ್ಜರಿ ಜಯದೊಂದಿಗೆ 6ನೇ ಬಾರಿ ಏಷ್ಯಾಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿತು.

    ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಯಾರೂ ನಿರೀಕ್ಷೆ ಮಾಡಿರದಂತಹ ಆಟವನ್ನು ಆಡಿ ಕ್ರಿಕೆಟ್ ಪ್ರಿಯರ ಮನಗೆದ್ದಿತು. ಶ್ರೀಲಂಕಾ ನೀಡಿದ 172 ರನ್‌ಗಳ ಟಾರ್ಗೆಟ್ ಅನ್ನು ಹಿಂದಿಕ್ಕಲಾಗದೇ 147 ರನ್‌ಗಳ ಮೂಲಕ ಪಾಕಿಸ್ತಾನ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಏಷ್ಯಾಕಪ್ ಫೈನಲ್ ರಂಗೇರಿಸಿದ ಹಸರಂಗ – 6ನೇ ಬಾರಿ ಸಿಂಹಳೀಯರಿಗೆ ಕಿರೀಟ

    Live Tv
    [brid partner=56869869 player=32851 video=960834 autoplay=true]