Tag: Dassault Aviation

  • ಆಪರೇಷನ್‌ ಸಿಂಧೂರದಲ್ಲಿ ಭಾರತೀಯ ಸೇನೆ ರಫೇಲ್‌ ಯುದ್ಧ ವಿಮಾನ ಕಳೆದುಕೊಂಡಿಲ್ಲ: ಡಸಾಲ್ಟ್‌ ಏವಿಯೇಷನ್‌ ಸ್ಪಷ್ಟನೆ

    ಆಪರೇಷನ್‌ ಸಿಂಧೂರದಲ್ಲಿ ಭಾರತೀಯ ಸೇನೆ ರಫೇಲ್‌ ಯುದ್ಧ ವಿಮಾನ ಕಳೆದುಕೊಂಡಿಲ್ಲ: ಡಸಾಲ್ಟ್‌ ಏವಿಯೇಷನ್‌ ಸ್ಪಷ್ಟನೆ

    ನವದೆಹಲಿ: ಆಪರೇಷನ್ ಸಿಂಧೂರದ ಸಮಯದಲ್ಲಿ ಭಾರತೀಯ ವಾಯುಸೇನೆ ರಫೇಲ್ ಯುದ್ಧ ವಿಮಾನವೊಂದು ಕಳೆದುಕೊಂಡಿದೆ ಎಂದು ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್‌ನ ಸಿಇಒ ಎರಿಕ್ ಟ್ರಾಪಿಯರ್ ಹೇಳಿದ್ದಾರೆ ಎಂದು ವರದಿಯಾಗಿತ್ತು. ಆದರೆ, ಈ ವರದಿಯನ್ನು ಡಸಾಲ್ಟ್ ಏವಿಯೇಷನ್ ನಿರಾಕರಿಸಿದೆ.

    ಈ ಹಿಂದೆ ಪ್ರಕಟವಾದ ಕೆಲವು ವರದಿಗಳಲ್ಲಿ ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್‌ನ ಸಿಇಒ ಎರಿಕ್ ಟ್ರಾಪಿಯರ್ ಭಾರತೀಯ ವಾಯುಸೇನೆ ರಫೇಲ್ ಯುದ್ಧ ವಿಮಾನವೊಂದು ಕಳೆದುಕೊಂಡಿದೆ ಎಂದು ಹೇಳಿದ್ದಾರೆ. ರಫೇಲ್ ವಿಮಾನದ ನಷ್ಟವು ಯಾವುದೇ ಯುದ್ಧ ಕಾರ್ಯಾಚರಣೆಯ ಸಂದರ್ಭದಲ್ಲಿ ಸಂಭವಿಸಿಲ್ಲ. ಆದರೆ, ಘಟನೆಯ ಖಚಿತ ಕಾರಣಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ ಎಂದು ಹೇಳಿದ್ದಾರೆ ಎಂದು ವರದಿಯಾಗಿತ್ತು.

    ಆದರೆ ಈ ಬಗ್ಗೆ ಡಸಾಲ್ಟ್ ಏವಿಯೇಷನ್ ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ಸ್ಪಷ್ಟನೆ ನೀಡಿದೆ. ಎರಿಕ್ ಟ್ರ್ಯಾಪಿಯರ್ ಇಂತಹ ಯಾವುದೇ ಕಾರ್ಯಾಚರಣೆಯ ಅಥವಾ ತಾಂತ್ರಿಕ ಹೇಳಿಕೆಗಳನ್ನು ನೀಡಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

  • 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಹಿ; ಭಾರತ-ಫ್ರಾನ್ಸ್ ಮಧ್ಯೆ 63,000 ಕೋಟಿ ಮೆಗಾ ಡೀಲ್‌

    26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಹಿ; ಭಾರತ-ಫ್ರಾನ್ಸ್ ಮಧ್ಯೆ 63,000 ಕೋಟಿ ಮೆಗಾ ಡೀಲ್‌

    ನವದೆಹಲಿ: ಭಾರತ ಸರ್ಕಾರವು (India Government) ಫ್ರಾನ್ಸ್‌ನಿಂದ (France) 26 ರಫೇಲ್ ಎಂ ಯುದ್ಧ ವಿಮಾನಗಳನ್ನು (Rafale – M Fighter Jets) ಖರೀದಿಸುವ 63,000 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದವು ಭಾರತದ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ.

    Rafale

    ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ (Dassault Aviation) ಕಂಪನಿಯು ಭಾರತೀಯ ನೌಕಾಪಡೆಗಾಗಿ 26 ರಫೇಲ್ ಯುದ್ಧ ವಿಮಾನಗಳನ್ನು ಪೂರೈಸಲಿದೆ. ಇದರಲ್ಲಿ 22 ಸಿಂಗಲ್ ಸೀಟರ್ ಹಾಗೂ 4 ಡಬಲ್ ಸೀಟರ್ ಯುದ್ಧ ವಿಮಾನಗಳು ಒಳಗೊಂಡಿದೆ. 2031ರ ವೇಳೆಗೆ 26 ಯುದ್ಧ ವಿಮಾನಗಳು ಪೂರ್ಣ ಪ್ರಮಾಣದಲ್ಲಿ ಭಾರತಕ್ಕೆ ಪೂರೈಕೆ ಆಗುವ ನಿರೀಕ್ಷೆಯಿದೆ. ಈ ವಿಮಾನಗಳಿಂದ ಭಾರತದ ರಕ್ಷಣಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಾಗಲಿದೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿ| ಚೀನಾ ಲಿಂಕ್‌ ಬಗ್ಗೆ ತನಿಖೆಗೆ ಇಳಿದ ಎನ್‌ಐಎ!

    IAF Rafale main

    ರಫೇಲ್ ಮೆರೈನ್ ವಿಮಾನಗಳು ವಿಶ್ವದ ಮುಂದುವರಿದ ಫೈಟರ್‌ ಜೆಟ್‌ಗಳಲ್ಲಿ (Fighter Jet) ಒಂದಾಗಿದೆ. ಪ್ರಸ್ತುತ ಫ್ರಾನ್ಸ್‌ ನೌಕಾಪಡೆ ಮಾತ್ರ ಈ ಜೆಟ್ ಅನ್ನು ಹೊಂದಿದೆ. ಆಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿದ್ದು, ಇವು ಭಾರತದ ಸಾಗರ ಗಡಿಗಳ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಈ ಖರೀದಿ ಪ್ರಕ್ರಿಯೆಯು ದೀರ್ಘಕಾಲದ ಮಾತುಕತೆಗಳ ನಂತರ ಅಂತಿಮಗೊಂಡಿದ್ದು, ರಕ್ಷಣಾ ಸಚಿವಾಲಯವು ಈ ಒಪ್ಪಂದಕ್ಕೆ ಅಧಿಕೃತವಾಗಿ ಸಹಿಹಾಕಿದೆ. ಇದನ್ನೂ ಓದಿ: ಭಾರತ – ಪಾಕ್‌ ನಡುವೆ ಉದ್ವಿಗ್ನತೆ ಮೇಲೆ ಚೀನಾ ನಿಗಾ – ಪಾಕಿಸ್ತಾನದ ಈ ಬೇಡಿಕೆಗೆ ಬೆಂಬಲ

    Rafale IAF 2

    2016 ರಲ್ಲಿ ಭಾರತೀಯ ವಾಯುಪಡೆಗೆ ರಫೇಲ್‌ ಯುದ್ಧ ವಿಮಾನ ಖರೀದಿ ಸಂಬಂಧ 59,000 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಒಪ್ಪಂದಂತೆ 36 ರಫೇಲ್‌ ಯುದ್ಧ ವಿಮಾನಗಳು ಈಗಾಗಲೇ ಭಾರತದ ವಾಯುಸೇನೆಯ ಬತ್ತಳಿಕೆಯನ್ನು ಸೇರಿದೆ.

    ಈ ಯುದ್ಧ ವಿಮಾನಗಳನ್ನು ವಿಮಾನವಾಹಕ ನೌಕೆಗಳಾದ ಐಎನ್‌ಎಸ್ ವಿಕ್ರಾಂತ್ ಮತ್ತು ಐಎನ್‌ಎಸ್ ವಿಕ್ರಮಾದಿತ್ಯ ಅಲ್ಲಿ ನಿಯೋಜಿಸಲಾಗುವುದು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಇದನ್ನೂ ಓದಿ: Pahalgam Attack | AK-47, M4 ರೈಫಲ್‌ ಹೊತ್ತು, ದಟ್ಟ ಕಾಡಿನಲ್ಲಿ 22 ಗಂಟೆ ನಡೆದುಕೊಂಡೇ ಬಂದಿದ್ದ ಉಗ್ರರು

  • 26 ರಫೇಲ್ ಯುದ್ಧ ವಿಮಾನ ಖರೀದಿ – ಭಾರತ ಫ್ರಾನ್ಸ್ ಮಧ್ಯೆ 63,000 ಕೋಟಿ ಡೀಲ್‌ಗೆ ಅನುಮೋದನೆ

    26 ರಫೇಲ್ ಯುದ್ಧ ವಿಮಾನ ಖರೀದಿ – ಭಾರತ ಫ್ರಾನ್ಸ್ ಮಧ್ಯೆ 63,000 ಕೋಟಿ ಡೀಲ್‌ಗೆ ಅನುಮೋದನೆ

    ನವದೆಹಲಿ : ಭಾರತ ಸರ್ಕಾರವು (India Government) ಫ್ರಾನ್ಸ್‌ನಿಂದ (France) 26 ರಫೇಲ್ ಮೆರೈನ್ ಯುದ್ಧ ವಿಮಾನಗಳನ್ನು (Rafale Marine Fighter Jets) ಖರೀದಿಸುವ ಬೃಹತ್ ಒಪ್ಪಂದಕ್ಕೆ ಅಂತಿಮ ಅನುಮೋದನೆ ನೀಡಿದೆ. ಈ ಒಪ್ಪಂದದ ಮೌಲ್ಯ 63,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ. ಈ ಒಪ್ಪಂದವು ಭಾರತದ ನೌಕಾಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ.

    ಈ ಒಪ್ಪಂದದ ಅಡಿಯಲ್ಲಿ, ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ (Dassault Aviation) ಕಂಪನಿಯು ಭಾರತೀಯ ನೌಕಾಪಡೆಗಾಗಿ 26 ರಫೇಲ್ ಯುದ್ಧ ವಿಮಾನಗಳನ್ನು ಪೂರೈಸಲಿದೆ,‌ ಇದರಲ್ಲಿ 22 ಸಿಂಗಲ್, 4 ಡಬಲ್ ಸೀಟರ್ ವಿಮಾನಗಳು ಒಳಗೊಂಡಿದೆ. ಈ ವಿಮಾನಗಳಿಂದ ಭಾರತದ ರಕ್ಷಣಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಾಗಲಿದೆ. ಇದನ್ನೂ ಓದಿ: ದೇಶ ತೊರೆಯಿರಿ ಅಥವಾ ಜೈಲು ಶಿಕ್ಷೆ ಅನುಭವಿಸಿ: ವಿದೇಶಿ ಭಯೋತ್ಪಾದಕರಿಗೆ ಅಮೆರಿಕ ಎಚ್ಚರಿಕೆ

    ರಫೇಲ್ ಮೆರೈನ್ ವಿಮಾನಗಳು ಆಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿದ್ದು, ಇವು ಭಾರತದ ಸಾಗರ ಗಡಿಗಳ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಈ ಖರೀದಿ ಪ್ರಕ್ರಿಯೆಯು ದೀರ್ಘಕಾಲದ ಮಾತುಕತೆಗಳ ನಂತರ ಅಂತಿಮಗೊಂಡಿದ್ದು, ರಕ್ಷಣಾ ಸಚಿವಾಲಯವು ಈ ಒಪ್ಪಂದವನ್ನು ಅಧಿಕೃತವಾಗಿ ದೃಢೀಕರಿಸಿದೆ.

    ಈ ಒಪ್ಪಂದದ ಭಾಗವಾಗಿ, ತರಬೇತಿ, ದುರಸ್ತಿ, ಮತ್ತು ತಾಂತ್ರಿಕ ಸಹಾಯವನ್ನು ಒಳಗೊಂಡಂತೆ ಹಲವು ಸೌಲಭ್ಯಗಳನ್ನು ಫ್ರಾನ್ಸ್ ಒದಗಿಸಲಿದೆ. ಈ ಯುದ್ಧ ವಿಮಾನಗಳ ಸೇರ್ಪಡೆಯು ಭಾರತೀಯ ನೌಕಾಪಡೆಯ ಆಧುನೀಕರಣದಲ್ಲಿ ಮಹತ್ವದ ಮೈಲಿಗಲ್ಲು ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಈ ಒಪ್ಪಂದವು ಭಾರತದ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಮತ್ತು ಆಧುನಿಕೀಕರಣದ ದಿಕ್ಕಿನಲ್ಲಿ ಮತ್ತೊಂದು ಪ್ರಗತಿಯನ್ನು ಸೂಚಿಸುತ್ತದೆ. ಇದನ್ನೂ ಓದಿ: ಸತತ 2ನೇ ಬಾರಿ ರೆಪೋ ದರ ಕಡಿತ – ಇಳಿಕೆಯಾಗಲಿದೆ ಗೃಹ ಸಾಲ, ಇಎಂಐ

    ಈ ಒಪ್ಪಂದವು ರಕ್ಷಣಾ ವಲಯಕ್ಕೆ ಮಾತ್ರವಲ್ಲದೆ, ಭಾರತೀಯ ಕಾರ್ಯತಂತ್ರದ ಶಕ್ತಿಗೆ ಹೊಸ ದಿಕ್ಕನ್ನು ನೀಡುತ್ತದೆ. ಇದು ವಾಯುಪಡೆ ಮತ್ತು ನೌಕಾಪಡೆಯ ಸಾಮರ್ಥ್ಯಗಳನ್ನು ಹೆಚ್ಚಿಸುವುದಲ್ಲದೆ, ಚೀನಾ ಮತ್ತು ಪಾಕಿಸ್ತಾನದಂತಹ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಭಾರತಕ್ಕೆ ಇನ್ನಷ್ಟು ಶಕ್ತಿ ನೀಡಲಿದೆ.

    2016 ರಲ್ಲಿ ಭಾರತೀಯ ವಾಯುಪಡೆಗೆ ರಫೇಲ್‌ ಯುದ್ಧ ವಿಮಾನ ಖರೀದಿ ಸಂಬಂಧ 59,000 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿತ್ತು. ಈ ಒಪ್ಪಂದಂತೆ 36 ರಫೇಲ್‌ ಯುದ್ಧ ವಿಮಾನಗಳು ಈಗಾಗಲೇ ಭಾರತದ ವಾಯುಸೇನೆಯ ಬತ್ತಳಿಕೆಯನ್ನು ಸೇರಿದೆ.

    ಒಪ್ಪಂದಕ್ಕೆ ಸಹಿ ಹಾಕಿದ 37 ರಿಂದ 65 ತಿಂಗಳೊಳಗೆ ಡಸಾಲ್ಟ್‌ ಕಂಪನಿ ಭಾರತಕ್ಕೆ ಯುದ್ಧ ವಿಮಾನಗಳನ್ನು ಹಸ್ತಾಂತರಿಸಬೇಕಾಗುತ್ತದೆ. ಎಲ್ಲಾ ಎಲ್ಲಾ ಜೆಟ್‌ಗಳು 2030-31 ರ ವೇಳೆಗೆ ವಿತರಣೆಯಾಗುವ ಸಾಧ್ಯತೆಯಿದೆ.