Tag: Dasarahalli

  • ಮದುವೆಯಾಗೋದಾಗಿ ನಂಬಿಸಿ ಸೆಕ್ಸ್ – ಮತಾಂತರಕ್ಕೆ ಒಪ್ಪದ್ದಕ್ಕೆ ಹಿಂದೂ ಯುವತಿಗೆ ವಂಚಿಸಿದ್ದವ ಅರೆಸ್ಟ್

    ಮದುವೆಯಾಗೋದಾಗಿ ನಂಬಿಸಿ ಸೆಕ್ಸ್ – ಮತಾಂತರಕ್ಕೆ ಒಪ್ಪದ್ದಕ್ಕೆ ಹಿಂದೂ ಯುವತಿಗೆ ವಂಚಿಸಿದ್ದವ ಅರೆಸ್ಟ್

    – ದೈಹಿಕ ಸಂಪರ್ಕ ಬೆಳೆಸಿ, ವರಸೆ ಬದಲಿಸಿ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಆಗಿದ್ದ ಆರೋಪಿ

    ಬೆಂಗಳೂರು: ಮದುವೆಯಾಗ್ತೀನಿ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಮತಾಂತರಕ್ಕೆ ಒಪ್ಪದ್ದಕ್ಕೆ ಹಿಂದೂ ಯುವತಿಗೆ ವಂಚಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮೊಹಮ್ಮದ್ ಇಶಾಕ್ ಬಂಧಿತ ಆರೋಪಿಯಾಗಿದ್ದು, ಹಿಂದೂ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿ, ವರಸೆ ಬದಲಿಸಿ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಆಗಿದ್ದ ಎಂದು ತಿಳಿದುಬಂದಿದೆ.ಇದನ್ನೂ ಓದಿ: ಮಹಾರಾಷ್ಟ್ರ ವೈದ್ಯೆ ಆತ್ಮಹತ್ಯೆ ಕೇಸ್ – 5 ತಿಂಗಳಿಂದ ಮಾನಸಿಕವಾಗಿ ಕಿರುಕುಳ ನೀಡಿದ್ದ ಟೆಕ್ಕಿ ಅರೆಸ್ಟ್

    ಆರೋಪಿ ವಿರುದ್ಧ ಸಂತ್ರಸ್ತ ಯುವತಿ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ದೂರು ದಾಖಲಿಸಿದ್ದರು. ಕೃತ್ಯ ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದರಿಂದ ಪೊಲೀಸರು ಪ್ರಕರಣವನ್ನು ವರ್ಗಾಯಿಸಿದ್ದರು. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತ ಯುವತಿಯನ್ನು ಆರೋಪಿ ಇಶಾಕ್ ಪ್ರೀತಿಸಿ, ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಆರೋಪಿ ಹಾಗೂ ಆತನ ಭಾವ ಸೇರಿಕೊಂಡು ಯುವತಿಯನ್ನು ಮತಾಂತರ ಆಗುವಂತೆ ಒತ್ತಡ ಹೇರಿದ್ದರು. ಆದರೆ ಯುವತಿ ಒಪ್ಪದ್ದಕ್ಕೆ ವರಸೆ ಬದಲಿ ಮುಸ್ಲಿಂ ಯುವತಿಯ ಜೊತೆ ಎಂಗೇಜ್‌ಮೆಂಟ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಯುವತಿಯ ದೂರಿನಲ್ಲೇನಿದೆ?
    ಸಂತ್ರಸ್ತ ಯುವತಿ ಹಾಗೂ ಆರೋಪಿ ಇಶಾಕ್ 2024ರ ಅ.17ರಂದು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಅಲ್ಲಿಂದ ಸ್ನೇಹ ಬೆಳೆದು, ಪ್ರೀತಿ ಶುರುವಾಗಿತ್ತು. ಮೆಸೇಜ್‌ನಿಂದಲೇ ಯುವತಿಯನ್ನು ಮೋಡಿ ಮಾಡಿದ್ದ. ಬಳಿಕ ಅ.30ರಂದು ಥಣಿಸಂದ್ರದ ಮಾಲ್‌ನಲ್ಲಿ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಭೇಟಿ ವೇಳೆ ಮನೆಯವರ ಜೊತೆ ಮಾತನಾಡಿ ಮದುವೆ ಆಗ್ತೀನಿ ಅಂತ ನಂಬಿಸಿದ್ದ.

    ಭೇಟಿಯಾದ ದಿನವೇ ದಾಸರಹಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿ, ಯುವತಿಯನ್ನು ಕರೆದುಕೊಂಡು ಹೋಗಿದ್ದ. ಮದುವೆ ಆಗ್ತೀನಿ ನಂಬಿಸಿ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದ. ಅದಾದ ಸ್ವಲ್ಪ ದಿನಗಳ ನಂತರ ಆತನಿಗೆ ಬೇರೆ ಬೇರೆ ಹುಡುಗಿಯರ ಸಹವಾಸ ಇರೋದು ಯುವತಿಗೆ ತಿಳಿದು, ಆತನಿಗೆ ಪ್ರಶ್ನೆ ಮಾಡಿದ್ದಳು. ಇದೆಲ್ಲ ಆದ ನಂತರ 2025ರ ಸೆ.14ರಂದು ಆರೋಪಿ ಇಶಾಕ್ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ. ವಿಷಯ ತಿಳಿದ ಯುವತಿ ಆತನನ್ನು ಪ್ರಶ್ನೆ ಮಾಡಿದಾಗ, ನಿನ್ನ ದಾರಿ ನೀನು ನೋಡ್ಕೋ ಎಂದು ಹೇಳಿದ್ದ ಅಂತ ಯುವತಿನಲ್ಲಿ ದೂರಿನಲ್ಲಿ ಉಲ್ಲೇಖಿಸಿದ್ದರು.

    ಕಳೆದ ಮೂರು ತಿಂಗಳಿನಿಂದ ಇಶಾಕ್ ನನ್ನ ಅವೈಡ್ ಮಾಡ್ತಿದ್ದ. ಅದಾದ ಬಳಿಕ ಅವನಿಗೆ ಎಂಗೇಜ್‌ಮೆಂಟ್ ಆಗಿರೋ ವಿಷಯ ತಿಳಿಯಿತು. ನಾನು ಆತ್ಮಹತ್ಯೆಗೂ ಯತ್ನಿಸಿದೆ. ಆಗ ಆತನ ಪೋಷಕರು ಕರೆ ಮಾಡಿ, ಅವನನ್ನು ಮದುವೆಯಾಗಬೇಕು ಅಂದ್ರೆ ಮುಸ್ಲಿಂಗೆ ಮತಾಂತರ ಆಗಬೇಕು ಎಂದು ಕಂಡೀಷನ್ ಹಾಕಿದ್ದರು. ಅವನು ಯಾವಾಗಲೂ ಬೇರೆ ಯುವತಿಯರ ಜೊತೆ ಚಾಟ್ ಮಾಡ್ತಿದ್ದ. ಒಂದು ವರ್ಷದಿಂದ ನನ್ನ ಜೊತೆ ಸುತ್ತಾಡಿದ್ದ ಎಲ್ಲಾ ರೀತಿಯಲ್ಲಿ ಮೂವ್ ಆಗಿದ್ದು, ಈಗ ನನಗೆ ಮೋಸ ಮಾಡಿದ್ದಾನೆ ಎಂದು ಯುವತಿ ನೋವನ್ನು ಹೇಳಿಕೊಂಡಿದ್ದಳು.ಇದನ್ನೂ ಓದಿ: ಮಧ್ಯಪ್ರದೇಶ | ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ – ಆರೋಪಿ ಅರೆಸ್ಟ್‌

  • ಪ್ರೀತಿಸಿ, ಮದುವೆಯಾಗ್ತೀನಿ ಅಂತ ನಂಬಿಸಿ ಸೆಕ್ಸ್ – ಹಿಂದೂ ಹುಡುಗಿಗೆ ವಂಚಿಸಿ ಮುಸ್ಲಿಂ ಯುವತಿ ಜೊತೆ ಎಂಗೇಜ್

    ಪ್ರೀತಿಸಿ, ಮದುವೆಯಾಗ್ತೀನಿ ಅಂತ ನಂಬಿಸಿ ಸೆಕ್ಸ್ – ಹಿಂದೂ ಹುಡುಗಿಗೆ ವಂಚಿಸಿ ಮುಸ್ಲಿಂ ಯುವತಿ ಜೊತೆ ಎಂಗೇಜ್

    – ಮೊದಲ ಭೇಟಿಯಲ್ಲೇ ಮೋಡಿ ಮಾಡಿ ಲವ್ವರ್‌ನ ರೂಮ್‌ಗೆ ಕರೆದುಕೊಂಡು ಹೋಗಿದ್ದ ವಂಚಕ

    ಬೆಂಗಳೂರು: ಪ್ರೀತಿಸಿ, ಮದುವೆಯಾಗ್ತೀನಿ ಎಂದು ನಂಬಿಸಿ ಹಿಂದೂ ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಆರೋಪಿಯನ್ನು ಮೊಹಮದ್ ಇಶಾಕ್ ಎಂದು ಗುರುತಿಸಲಾಗಿದ್ದು, ಈತನ ವಿರುದ್ಧ ಸಂತ್ರಸ್ತ ಯುವತಿ ಹೆಚ್‌ಎಸ್‌ಆರ್ (HSR Layout) ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇದನ್ನೂ ಓದಿ: ಬಿಗ್‌ ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

    ಸಂತ್ರಸ್ತ ಯುವತಿ ಹಾಗೂ ಆರೋಪಿ ಇಶಾಕ್ 2024ರ ಅ.17ರಂದು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಅಲ್ಲಿಂದ ಸ್ನೇಹ ಬೆಳೆದು, ಪ್ರೀತಿ ಶುರುವಾಗಿತ್ತು. ಮೆಸೇಜ್‌ನಿಂದಲೇ ಯುವತಿಯನ್ನು ಮೋಡಿ ಮಾಡಿದ್ದ. ಬಳಿಕ ಅ.30ರಂದು ಥಣಿಸಂದ್ರದ ಮಾಲ್‌ನಲ್ಲಿ ಇಬ್ಬರು ಮೊದಲ ಬಾರಿ ಭೇಟಿಯಾಗಿದ್ದರು. ಭೇಟಿ ವೇಳೆ ಮನೆಯವರ ಜೊತೆ ಮಾತನಾಡಿ ಮದುವೆ ಆಗ್ತೀನಿ ಅಂತ ನಂಬಿಸಿದ್ದ.

    ಭೇಟಿಯಾದ ದಿನವೇ ದಾಸರಹಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿ, ಯುವತಿಯನ್ನು ಕರೆದುಕೊಂಡು ಹೋಗಿದ್ದ. ಮದುವೆ ಆಗ್ತೀನಿ ನಂಬಿಸಿ ಹಲವು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದ. ಅದಾದ ಸ್ವಲ್ಪ ದಿನಗಳ ನಂತರ ಆತನಿಗೆ ಬೇರೆ ಬೇರೆ ಹುಡುಗಿಯರ ಸಹವಾಸ ಇರೋದು ಯುವತಿಗೆ ತಿಳಿದು, ಆತನಿಗೆ ಪ್ರಶ್ನೆ ಮಾಡಿದ್ದಳು. ಇದೆಲ್ಲ ಆದ ನಂತರ 2025ರ ಸೆ.14ರಂದು ಆರೋಪಿ ಇಶಾಕ್ ಮುಸ್ಲಿಂ ಯುವತಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದ. ವಿಷಯ ತಿಳಿದ ಯುವತಿ ಆತನನ್ನು ಪ್ರಶ್ನೆ ಮಾಡಿದಾಗ, ನಿನ್ನ ದಾರಿ ನೀನು ನೋಡ್ಕೋ ಎಂದು ಹೇಳಿದ್ದ ಅಂತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಕಳೆದ ಮೂರು ತಿಂಗಳಿನಿಂದ ಇಶಾಕ್ ನನ್ನ ಅವೈಡ್ ಮಾಡ್ತಿದ್ದ. ಅದಾದ ಬಳಿಕ ಅವನಿಗೆ ಎಂಗೇಜ್‌ಮೆಂಟ್ ಆಗಿರೋ ವಿಷಯ ತಿಳಿಯಿತು. ನಾನು ಆತ್ಮಹತ್ಯೆಗೂ ಯತ್ನಿಸಿದೆ. ಆಗ ಆತನ ಪೋಷಕರು ಕರೆ ಮಾಡಿ, ಅವನನ್ನು ಮದುವೆಯಾಗಬೇಕು ಅಂದ್ರೆ ಮುಸ್ಲಿಂಗೆ ಮತಾಂತರ ಆಗಬೇಕು ಎಂದು ಕಂಡೀಷನ್ ಹಾಕಿದ್ದರು. ಅವನು ಯಾವಾಗಲೂ ಬೇರೆ ಯುವತಿಯರ ಜೊತೆ ಚಾಟ್ ಮಾಡ್ತಿದ್ದ. ಒಂದು ವರ್ಷದಿಂದ ನನ್ನ ಜೊತೆ ಸುತ್ತಾಡಿದ್ದ ಎಲ್ಲಾ ರೀತಿಯಲ್ಲಿ ಮೂವ್ ಆಗಿದ್ದು, ಈಗ ನನಗೆ ಮೋಸ ಮಾಡಿದ್ದಾನೆ ಎಂದು ಯುವತಿ ನೋವು ತೋಡಿಕೊಂಡಿದ್ದಾಳೆ.

    ಸದ್ಯ ಈ ಸಂಬಂಧ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ವಾಪಸ್ – ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ

  • PUBLiC TV Impact | ಕತ್ತಲಲ್ಲಿ ವಾಸಿಸುತ್ತಿದ್ದ 30 ಕುಟುಂಬಗಳಿಗೆ ಬೆಳಕಿನ ಭಾಗ್ಯ

    PUBLiC TV Impact | ಕತ್ತಲಲ್ಲಿ ವಾಸಿಸುತ್ತಿದ್ದ 30 ಕುಟುಂಬಗಳಿಗೆ ಬೆಳಕಿನ ಭಾಗ್ಯ

    ಬೆಂಗಳೂರು: ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲಲ್ಲಿ ವಾಸಿಸುತ್ತಿದ್ದ 30 ಕುಟುಂಬಗಳಿಗೆ `ಪಬ್ಲಿಕ್ ಟಿವಿ’ (PUBLiC TV) ವರದಿಯಿಂದಾಗಿ ಬೆಳಕಿನ ಭಾಗ್ಯ ದೊರೆತಿದೆ.

    ಒಂದು ವಾರದಿಂದ ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲಲ್ಲಿ ವಾಸಿಸುತ್ತಿದ್ದ ಕುಟುಂಬಗಳ ಕುರಿತು `ಪಬ್ಲಿಕ್ ಟಿವಿ’ ವರದಿಯನ್ನು ಬಿತ್ತರಿಸಿತ್ತು. ವರದಿಯ ಬೆನ್ನಲ್ಲೇ ವಿದ್ಯುತ್ ಸಂಪರ್ಕ ಕಡಿತ ಮಾಡಿ ನಿರ್ಲಕ್ಷ್ಯ ತೋರಿದ್ದ ಸ್ಥಳೀಯ ಇಂಜಿನಿಯರ್‌ಗಳಿಗೆ ಮೇಲಾಧಿಕಾರಿಗಳು ಸಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ.ಇದನ್ನೂ ಓದಿ: ನೆ ಮನೆಯಲ್ಲಿ ಮತ್ತೆ ಮುಸುಕಿನ ಗುದ್ದಾಟ – ಮದ್ದರೆಯಲು ಅಖಾಡಕ್ಕಿಳೀತಾರಾ ದೊಡ್ಡಗೌಡರು..?

    ದಾಸರಹಳ್ಳಿ (Dasarahalli) ವಿಧಾನಸಭಾ ಕ್ಷೇತ್ರದ ಮಾರುತಿ ಮಾರ್ಕಂಡಯ್ಯ ಲೇಔಟ್‌ನ (Markandeya Layout) ಪಿಳ್ಳಪ್ಪನಕಟ್ಟೆ (Pillappana katte) ರಸ್ತೆಯಲ್ಲಿ ವಿದ್ಯುತ್ ಕಂಬವನ್ನ ತೆಗೆದು ಬೇರೆ ಕಡೆಗೆ ಶಿಫ್ಟ್ ಮಾಡಲಾಗಿತ್ತು. ಹೀಗಾಗಿ ಒಂದು ವಾರದಿಂದ ವಿದ್ಯುತ್ ಸಂಪರ್ಕವಿಲ್ಲದೇ ಜನರು ಕತ್ತಲಲ್ಲೇ ಜೀವನ ನಡೆಸುತ್ತಿದ್ದರು. ಈ ಕುರಿತು `ಪಬ್ಲಿಕ್ ಟಿವಿ’ ಎರಡು ದಿನದ ಹಿಂದೆ ವರದಿ ಪ್ರಸಾರ ಮಾಡಿತ್ತು. ವರದಿಯ ಬಳಿಕ ಎಚ್ಚೆತ್ತ ಬೆಸ್ಕಾಂ ಅಧಿಕಾರಿಗಳು, ಕೂಡಲೇ ಸ್ಥಳಾಂತರ ಮಾಡಿದ್ದ ಕಂಬವನ್ನು ತಂದು, ಅದೇ ಜಾಗದಲ್ಲಿ ಅಳವಡಿಸಿ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಟ್ಟಿದ್ದಾರೆ.

    ಖಾಸಗಿ ವ್ಯಕ್ತಿಯೊಬ್ಬರು ನಮ್ಮ ಜಾಗದಲ್ಲಿ ವಿದ್ಯುತ್ ಕಂಬವಿದೆ ಎಂದು ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಆದೇಶದ ಪ್ರತಿ ಮೇರೆಗೆ ಬೆಸ್ಕಾಂ ಅಧಿಕಾರಿಗಳು, ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡಿದ್ದರು. ಸ್ಥಳಾಂತರ ಮಾಡಿ ಒಂದು ವಾರವಾದರೂ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ನೀಡದೇ ನಿರ್ಲಕ್ಷ್ಯ ತೋರಿದ್ದರು.

    ಸದ್ಯ ಪಿಳ್ಳಪ್ಪನಕಟ್ಟೆ ಏರಿಯಾದ ಜನರಿಗೆ ಬೆಳಕಿನ ಭಾಗ್ಯ ಸಿಕ್ಕಿದ್ದು, `ಪಬ್ಲಿಕ್ ಟಿವಿ’ಯ ಸಾಮಾಜಿಕ ಕಳಕಳಿಯ ವರದಿಗೆ ಸ್ಥಳೀಯರು ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ರಾತ್ರಿ ಸಮಯದಲ್ಲಿ ಕ್ರಿಮಿಕೀಟಗಳ ಭಯದಲ್ಲಿ ಓಡಾಡುತ್ತಿದ್ದ ಏರಿಯಾದ ಜನ ಇದೀದ ಬೀದಿ ದೀಪಗಳು ಇರುವುದರಿಂದ ನಿರಾತಂಕವಾಗಿ ಓಡಾಡುತ್ತಿದ್ದಾರೆ. ಇದಕ್ಕೆ ಕಾರಣವಾದ ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ.ಇದನ್ನೂ ಓದಿ: ಇಂದಿನಿಂದ ಸಂಸತ್‌ ಚಳಿಗಾಲದ ಅಧಿವೇಶನ – ಅದಾನಿ ಹಗರಣ, ವಕ್ಫ್, ಮಣಿಪುರ ಗದ್ದಲ ಅಸ್ತ್ರ ಪ್ರಯೋಗ

  • ಚಲಿಸುತ್ತಿದ ಬೈಕ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

    ಚಲಿಸುತ್ತಿದ ಬೈಕ್‌ಗೆ ಹಿಂಬದಿಯಿಂದ ಲಾರಿ ಡಿಕ್ಕಿ – ಸವಾರ ಸ್ಥಳದಲ್ಲೇ ಸಾವು

    ಬೆಂಗಳೂರು: ಚಲಿಸುತ್ತಿದ್ದ ಬೈಕ್‌ಗೆ (Bike) ಹಿಂಬದಿಯಿಂದ ಲಾರಿ (Lorry) ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನ (Bengaluru) ದಾಸರಹಳ್ಳಿ ಮೆಟ್ರೋ ಸ್ಟೇಷನ್ (Dasarahalli Metro Station) ಬಳಿ ನಡೆದಿದೆ.

    ಶೇಷಾದ್ರಿ (23) ಮೃತ ಬೈಕ್ ಸವಾರ. ಶೇಷಾದ್ರಿ ರಾಜಗೋಪಾಲನಗರ ನಿವಾಸಿ. ಘಟನೆ ಬಳಿಕ ಸ್ಥಳದಲ್ಲೇ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೀಣ್ಯ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ತಿಮ್ಮಪ್ಪನ ದರ್ಶನಕ್ಕೆ ಹೆಚ್ಚಾಯ್ತು ಡಿಮ್ಯಾಂಡ್ – ಪ್ರತಿದಿನ 1,000 ಜನರಿಗೆ ನೇರ ದರ್ಶನಕ್ಕೆ ಅವಕಾಶ ನೀಡುವಂತೆ KSTDC ಮನವಿ

    ಅಪಘಾತ ಮಾಡಿದ ಲಾರಿಯನ್ನು ಪೀಣ್ಯ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮೃತ ಶೇಷಾದ್ರಿ ತಂದೆ ಚಂದ್ರಶೇಖರ್ ಪೀಣ್ಯಾ ಸಂಚಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ರಾಜಕೀಯ ಬದಲಾವಣೆ ಬೆಳಗಾವಿಯಿಂದಲೇ ಆಗುತ್ತಾ?

  • PUBLiC TV Impact | ಡೆಡ್‌ಲೈನ್ ಟೆನ್ಶನ್‌ನಲ್ಲಿ ಪಾಲಿಕೆ ಯಡವಟ್ಟು – ಬಿಬಿಎಂಪಿಯಿಂದ ಗುಂಡಿ ಮುಚ್ಚುವ ಕಾರ್ಯ ಶುರು!

    PUBLiC TV Impact | ಡೆಡ್‌ಲೈನ್ ಟೆನ್ಶನ್‌ನಲ್ಲಿ ಪಾಲಿಕೆ ಯಡವಟ್ಟು – ಬಿಬಿಎಂಪಿಯಿಂದ ಗುಂಡಿ ಮುಚ್ಚುವ ಕಾರ್ಯ ಶುರು!

    ಬೆಂಗಳೂರು: ಟಾರ್ಗೆಟ್ ರೀಚ್ ಆಗುವ ಭರದಲ್ಲಿ ತರಾತುರಿಯಲ್ಲಿ ಗುಂಡಿ ಮುಚ್ಚುವ ಕೆಲಸ ಮಾಡಿದ್ದ ಬಿಬಿಎಂಪಿ, ಪಬ್ಲಿಕ್ ಟಿವಿ (PUBLiC TV) ವರದಿ ಬಳಿಕ ಎಚ್ಚೆತ್ತುಕೊಂಡಿದೆ.

    ಹೌದು. ಆಗಸ್ಟ್ 12ರಂದು ಜಾಲಹಳ್ಳಿ (Jalahalli) ರಸ್ತೆ ಗುಂಡಿ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿ ಪರಿಣಾಮ ಎಚ್ಚೆತ್ತ ಬಿಬಿಎಂಪಿ (BBMP) ಇದೀಗ ಗುಂಡಿ ಮುಚ್ಚುವ ಕೆಲಸ ಮಾಡಿಸಿದೆ. ಬಸವೇಶ್ವರ ನಗರದ (Basaveshwar Nagar) ವಾಟರ್ ಟ್ಯಾಂಕ್ ರಸ್ತೆಯಲ್ಲಿ ಬರೆ ಜೆಲ್ಲಿ ಕಲ್ಲು ಸುರಿದ ಬಿಬಿಎಂಪಿ ದುರಸ್ತಿ ಮಾಡಿತ್ತು. ಟಾರ್ಗೆಟ್ ರೀಚ್ ಆಗುವ ಬರದಲ್ಲಿ ತರಾತುರಿಯ ಕೆಲಸ ಮುಗಿಸಿತ್ತು. ಪ್ರಮುಖ ರಸ್ತೆ ದುರಸ್ತಿಗಾಗಿ 600 ಕೋಟಿಗೂ ಅಧಿಕ ಹಣವನ್ನು ಮೀಸಲಿಡಲಾಗುತ್ತು. ಆದರೆ ನೋಡಿದರೆ ಕೇವಲ ಜಲ್ಲಿ ಕಲ್ಲು ಹಾಗೂ ಸೀಮೆಂಟ್ ದುರಸ್ತಿ ಕೆಲಸ ಮಾಡಲಾಗಿತ್ತು.ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನ ಬಂಧನಕ್ಕೆ ಕೇಸರಿ ಕಲಿಗಳು ಕೆಂಡ – ಸರ್ಕಾರದ ವಿರುದ್ಧ ಅಶ್ವಥ್‌ ನಾರಾಯಣ್‌ ತೀವ್ರ ವಾಗ್ದಾಳಿ

    ರಸ್ತೆಯ ಅರ್ಧಭಾಗ ಆವರಿಸಿರುವ ಗುಂಡಿಗೆ ಕೇವಲ ಜೆಲ್ಲಿಯನ್ನು ಸುರಿಯಲಾಗಿತ್ತು. ಇದರಿಂದ ಇನ್ನಷ್ಟು ಅಪಘಾತಗಳು ಹೆಚ್ಚಾಗುತ್ತವೆ ಎಂದು ವಾಹನ ಸವಾರರು ಕಿಡಿಕಾರಿದ್ದರು. ದಯವಿಟ್ಟು ಕೈ ಮುಗಿದು ಬೇಡಿಕೊಳ್ಳುತ್ತೇವೆ ರಸ್ತೆ ಗುಂಡಿ ಮುಚ್ಚಿ ಅಂತ ಸಾರ್ವಜನಿಕರು ಬೇಡಿಕೊಂಡಿದ್ದರು. ಈ ಕುರಿತಂತೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಯ ಪರಿಣಾಮ ಇದೀಗ ಗುಂಡಿ ಮುಚ್ಚುವ ಆರಂಭವಾಗಿದೆ. ಜೊತೆಗೆ ಬೆಂಗಳೂರು ಗುಂಡಿ ಮುಕ್ತ ಮಾಡಲು ಡಿಸಿಎಂ ಸೆ.15ರ ವರೆಗೆ ಕೊನೆಯ ದಿನ ಎಂದು ಕೊಟ್ಟಿರುವ ಡೆಡ್‌ಲೈನ್ ಹಿನ್ನೆಲೆ ಕೆಲಸ ಜೋರಾಗಿ ನಡೆಯುತ್ತಿದೆ.

    ಇದೀಗ ಗುಂಡಿ ಮುಚ್ಚುವ ಕಾರ್ಯ ಆರಂಭವಾಗಿದ್ದು, ಜಾಲಹಳ್ಳಿ ಮುಖ್ಯ ರಸ್ತೆ, ದಾಸರಹಳ್ಳಿ (Dasarhalli) ವಲಯ ರಸ್ತೆಯನ್ನು ಆಯುಕ್ತರ ನೇತೃತ್ವದಲ್ಲಿ ಮುಚ್ಚಲಾಗುತ್ತಿದೆ. ಪಬ್ಲಿಕ್ ಟಿವಿ ವರದಿ ನಂತರ ಅಯ್ಯಪ್ಪ ದೇವಾಲಯದ ಮುಂದೆ ಬಿಬಿಎಂಪಿ ಗುಂಡಿ ಮುಚ್ಚುತ್ತಿದೆ. ಇಂದು ಕಡೆ ದಿನವಾದ ಹಿನ್ನೆಲೆ ಬಿಬಿಎಂಪಿ ಅಧಿಕಾರಿಗಳು ಭಾನುವಾರದಂದು ರಸ್ತೆ ಗುಂಡಿ ಮುಚ್ಚುವುದರಲ್ಲಿ ತೊಡಗಿದ್ದಾರೆ.ಇದನ್ನೂ ಓದಿ: ದೇಶದ ಮೊದಲ ವಂದೇ ಮೆಟ್ರೋ, 6 ವಂದೇ ಭಾರತ್‌ ರೈಲು ಸೇವೆಗೆ ಮೋದಿ ಚಾಲನೆ – ಏನಿದರ ವಿಶೇಷ!

  • ದಾಸರಹಳ್ಳಿಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಹತ್ಯೆ – ಮಲತಂದೆ ಅರೆಸ್ಟ್

    ದಾಸರಹಳ್ಳಿಯಲ್ಲಿ ಇಬ್ಬರು ಹೆಣ್ಣು ಮಕ್ಕಳ ಹತ್ಯೆ – ಮಲತಂದೆ ಅರೆಸ್ಟ್

    ಬೆಂಗಳೂರು: ಅಮೃತಹಳ್ಳಿಯ ದಾಸರಹಳ್ಳಿಯಲ್ಲಿ (Amruthahalli Dasarahalli) ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು  ಮಚ್ಚಿನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದ ಹಂತಕನನ್ನು ಅಮೃತಹಳ್ಳಿ ಪೊಲೀಸರು ಬಂಧನ ಮಾಡಿದ್ದಾರೆ.

    ಸಮಿತ್ ಬಂಧಿತ ಆರೋಪಿ. ಈತ ಕೊಲೆ ಮಾಡಿದ ಬಳಿಕ ಬಟ್ಟೆ ಬದಲಿಸಿಕೊಂಡು ಮನೆಯಿಂದ ಹೊರಗಡೆ ಹೋಗಿದ್ದ. ತಲೆಮರೆಸಿಕೊಂಡಿದ್ದವನನ್ನು ಘಟನೆ ನಡೆದ 2 ದಿನಗಳ ಒಳಗಾಗಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮಲತಂದೆ ಸಮಿತ್ ಮಾತಿಗೆ ಹೆಣ್ಣು ಮಕ್ಕಳು (Daughters) ವಿರೋಧ ವ್ಯಕ್ತಪಡಿಸುತ್ತಿದ್ದರು ಎಂಬ ಕೋಪಕ್ಕೆ ಹೆಣ್ಣುಮಕ್ಕಳಿಬ್ಬರನ್ನು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯ ವೇಳೆ ಬಹಿರಂಗವಾಗಿದೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ: ಬಾಲಕೃಷ್ಣ, ಲೋಲ, ಮುರಳಿ ಕೊಳಲ ಲೀಲ- ಎಲ್ಲೆಲ್ಲೂ ಭಗವಾನ್ ಶ್ರೀಕೃಷ್ಣ ಜಪ

    ಆರೋಪಿ ಸಮಿತ್ ಮಕ್ಕಳ ಮೇಲೆ ಸಾಕಷ್ಟು ಅನುಮಾನ ಪಡುತ್ತಿದ್ದ. ಮಗಳ ಸ್ನೇಹಿತ ಯಾರಾದರೂ ಮನೆಗೆ ಬಂದಿರಬಹುದು ಎಂಬ ಅನುಮಾನದ ಮೇಲೆ ಆರೋಪಿ ಸಮಿತ್ ಮನೆಗೆ ಬಂದಿದ್ದ. ಹತ್ಯೆಯ ದಿನ ಸಮಿತ್ ಸೃಷ್ಠಿ ಮತ್ತು ಸೋನಿಯಾಯರನ್ನು ಶಾಲೆಯಿಂದ ಕರೆದುಕೊಂಡು ಬಂದಿದ್ದ. ಶನಿವಾರವಾಗಿದ್ದರಿಂದ 12:30ರ ಸುಮಾರಿಗೆ ಮಕ್ಕಳನ್ನು ಮನೆಗೆ ಕರೆದುಕೊಂಡು ಬಂದಿದ್ದ. ಮನೆಗೆ ಬಂದ ತಕ್ಷಣ ಮಗಳು ರೂಂ ಸೇರಿಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಿರುತ್ತಾಳೆ. ಮಗಳ ರೂಂ ಬಳಿ ಬಂದು ನಿಂತುಕೊಂಡು ಮಗಳು ಮೊಬೈಲ್‌ನಲ್ಲಿ ಮಾತನಾಡುತಿದ್ದುದ್ದನ್ನು ಸಮಿತ್ ಕೇಳಿಸಿಕೊಂಡಿದ್ದಾನೆ. ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿ 2024: ಕೃಷ್ಣ ಜನ್ಮಭೂಮಿ ಮಥುರಾ ಅಂಗಳದ ಪ್ರಮುಖ ಕೃಷ್ಣ ಮಂದಿರಗಳು

    ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅನುಮಾನ ಪಟ್ಟು ಸಮಿತ್ ಮನೆಗೆ ಬಂದಿದ್ದ. ಮಗಳು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ವಿಷಯ ಕೇಳುವುದಕ್ಕೆ ಮುಂದಾಗುತ್ತಿದ್ದಂತೆ ಮಗಳು ಮೊಬೈಲ್ ಅನ್ನು ದಿಂಬಿನ ಕೆಳಗೆ ಮುಚ್ಚಿಟ್ಟಿದ್ದಾಳೆ. ಆರೋಪಿಗೆ ಅನುಮಾನ ಹೆಚ್ಚಾಗಿ ಮೊಬೈಲ್ ಪತ್ತೆ ಮಾಡಿ ಪರಿಶೀಲಿಸಿದ್ದಾನೆ. ಮೊಬೈಲ್ ನೋಡಿ ಮುಗಿಸುತ್ತಿದ್ದಂತೆ ಮಚ್ಚಿನಿಂದ ಹೊಡೆದು ಒಬ್ಬಳನ್ನು ಕೊಲೆ ಮಾಡಿದ್ದಾನೆ. ವಾಶ್ ರೂಂನಲ್ಲಿದ್ದ ಚಿಕ್ಕ ಮಗಳು ಹೊರಗಡೆ ಬಂದ ಕೂಡಲೇ ಅಕ್ಕನ ಬಗ್ಗೆ ಹೇಳಿದ್ದಾನೆ. ನಿನ್ನ ಅಕ್ಕ ಹೀಗೆ ಮಾಡುತ್ತಾಳೆ ನೋಡು ಎಂದು ಹೇಳಿ ಊಟ ಹಾಕಿಕೊಂಡು ಬರಲು ಹೇಳಿದ್ದಾನೆ. ಊಟ ಹಾಕಿಕೊಂಡು ಬರುವುದಕ್ಕೆ ಹೇಳಿ ಚಿಕ್ಕ ಹುಡುಗಿಯನ್ನು ಕೂಡ ಹೊಡೆದು ಕೊಲೆ ಮಾಡಿದ್ದಾನೆ. ಕೊಲೆ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: MUDA Scam | ರಾಜ್ಯಪಾಲರ ನಡೆಗೆ ಖಂಡನೆ – ಸಿದ್ದರಾಮಯ್ಯ ಬೆನ್ನಿಗೆ ನಿಂತ ಮಠಾಧೀಶರು

  • ಬಿಬಿಎಂಪಿ ಮೈದಾನದಲ್ಲಿ ಖಾಸಗಿ ಕಂಪನಿಯ ಕಂಟ್ರಾಕ್ಟರ್ ದರ್ಬಾರ್!

    ಬಿಬಿಎಂಪಿ ಮೈದಾನದಲ್ಲಿ ಖಾಸಗಿ ಕಂಪನಿಯ ಕಂಟ್ರಾಕ್ಟರ್ ದರ್ಬಾರ್!

    ಬೆಂಗಳೂರು: ಬಿಬಿಎಂಪಿ (BBMP) ಜಾಗವನ್ನ ಯಾರು ಬೇಕಾದ್ರೂ ಹೇಗೆ ಬೇಕಾದ್ರೂ ಬಳಸಿಕೊಳ್ಳಬಹುದು. ಯಾಕೆಂದರೆ ವರ್ಷಗಳ ಕಾಲ ಖಾಸಗಿಯವರು ಅಕ್ರಮವಾಗಿ ಬಳಸಿದರೂ ತನಗೂ ಇದಕ್ಕೂ ಸಂಬಂಧವಿಲ್ಲ ಎನ್ನುವಂತೆ ವರ್ತಿಸಿದೆ.

    ವಾರ್ಡ್ ನಂಬರ್ 12 ರ ಶೆಟ್ಟಿಹಳ್ಳಿ ಬಳಿಯ ಬಿಬಿಎಂಪಿ ಆಟದ ಮೈದಾನವನ್ನ (Ground) ಕಟ್ಟಡ ಸಾಮಾಗ್ರಿಗಳ ಹಾಗೂ ಕೆಲಸಗಾರರಿಗೆ ಟೆಂಟ್ ಹಾಕಿಕೊಡಲಾಗಿದೆ. ಅದೂ ಕಳೆದ ಎರಡು ವರ್ಷಗಳಿಂದ. ಇದರಿಂದ ರೋಸಿಹೋಗಿದ್ದ ಸ್ಥಳಿಯರು ಬಿಬಿಎಂಪಿ ಅಧಿಕಾರಿಗಳು ಹಾಗೂ ಖಾಸಗಿ ಕಂಟ್ರಾಕ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಿಬಿಎಂಪಿ ಆಟದ ಮೈದಾನವನ್ನೇ ಅಕ್ರಮವಾಗಿ ಬಳಸಿಕೊಳ್ಳುತ್ತಿರುವ ಖಾಸಗಿ ಗುತ್ತಿಗೆದಾರನನ್ನು ಸಂಪರ್ಕಿಸಿದರೆ ಶಾಸಕರ ಅನುಮತಿ ಪಡೆದಿದ್ದೇನೆ ಎಂದು ಎಂದು ಕಥೆ ಕಟ್ಟಿದ್ದ. ಈ ಬಗ್ಗೆ ದಾಸರಹಳ್ಳಿ ಶಾಸಕರಾದ ಮುನಿರಾಜು (Muniraju) ಅವರನ್ನು ಪಬ್ಲಿಕ್ ಟಿವಿ ಕೇಳಿದಾಗ ಅವನ್ಯಾರೋ ಫ್ರಾಡ್, ನಾನು ಯಾರಿಗೂ ಹೇಳಿಲ್ಲ. ನಾನೇ ಖಾಲಿ ಮಾಡಿಸಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದ್ದೇನೆ ಆದರೂ ಖಾಲಿ ಮಾಡಿಲ್ಲ. ಇನ್ನೊಂದು ವಾರದಲ್ಲಿ ಖಾಲಿ ಮಾಡಿ ಮೈದಾನವನ್ನ ಸ್ಥಳಿಯರಿಗೆ ಬಿಟ್ಟುಕೊಡದೇ ಹೋದರೆ ಕಟ್ಟಡ ಸಾಮಾಗ್ರಿಗಳನ್ನ ನಾನೇ ಹೊರಗೆ ಹಾಕಿಸುತ್ತೇನೆ ಎಂದರು. ಇದನ್ನೂ ಓದಿ: Wayanad landslides | ಸಂತ್ರಸ್ತರಿಗೆ 15 ಕೋಟಿ, 300 ಮನೆ ನೆರವು ನೀಡಲು ಮುಂದಾದ ಬೆಂಗ್ಳೂರು ಮೂಲದ ಆರೋಪಿ

    ಒಟ್ಟಾರೆ ಕಳೆದ ಎರಡು ವರ್ಷಗಳಿಂದ ಸಹಿಸಿಕೊಂಡು ಇದ್ದ ಸಾರ್ವಜನಿಕರು ಕೊನೆಗೆ ರೊಚ್ಚಿಗೆದ್ದು ತಮ್ಮ ಬಿಬಿಎಂಪಿ ಮೈದಾನ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಸ್ಥಳೀಯ ಶಾಸಕರೂ ಗಡುವು ಕೊಟ್ಟಿದ್ದಾರೆ.

     

  • ಹೆಚ್‍ಡಿಡಿಯಿಂದ ಸಿಎಂ ಮನೆ ಮುಂದೆ ಧರಣಿ ನಡೆಸೋ ಎಚ್ಚರಿಕೆ

    ಹೆಚ್‍ಡಿಡಿಯಿಂದ ಸಿಎಂ ಮನೆ ಮುಂದೆ ಧರಣಿ ನಡೆಸೋ ಎಚ್ಚರಿಕೆ

    ಬೆಂಗಳೂರು: ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡದೇ ಇದ್ದರೆ ಮುಖ್ಯಮಂತ್ರಿ ಮನೆ ಎದುರು ಧರಣಿ ನಡೆಸುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.

    ಜೆಡಿಎಸ್ ಶಾಸಕ ಮಂಜುನಾಥ್ ಪ್ರತಿನಿಧಿಸುವ ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅನುದಾನ ಇಲ್ಲದೇ ಗುಂಡಿಬಿದ್ದಿರುವ ದಾಸಹರಳ್ಳಿ ಕ್ಷೇತ್ರದ ರಸ್ತೆಗಳನ್ನು ದೇವೇಗೌಡರು ಭೇಟಿ ನೀಡಿ ವೀಕ್ಷಿಸಿದರು. ಇದನ್ನೂ ಓದಿ: ದಲಿತರೇ ಮುಂದಿನ ಸಿಎಂ ಅಂತ ಘೋಷಿಸುವಷ್ಟು ಪ್ರೀತಿ ಇದ್ಯಾ – ಸಿದ್ದುಗೆ ಬಿಜೆಪಿ ಪ್ರಶ್ನೆ

    ಬಳಿಕ ಪ್ರತಿಕ್ರಿಯಿಸಿದ ದೇವೇಗೌಡರು, ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿ ಆಗ್ಬೇಕು. ಆದರೆ ಅಭಿವೃದ್ಧಿ ಸಹಿಸಲಾಗದೇ ಹೇಡಿಗಳು ಪ್ರತಿಯೊಂದಕ್ಕೂ ಅಡ್ಡಿಪಡಿಸುತ್ತಿದ್ದಾರೆ. ಸಿಎಂ ಬಳಿ ನಾನೇ ಹೋಗುತ್ತೇನೆ, ಅನುದಾನ ನೀಡುವಂತೆ ಮನವಿ ಮಾಡುತ್ತೇನೆ. ಅನುದಾನದಲ್ಲಿ ರಾಜಕೀಯ ಮಾಡಿದ್ರೆ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

  • ಬೆಂಗ್ಳೂರಲ್ಲಿ ಮನೆ ತೆರವು ವೇಳೆ ಗಲಾಟೆ – ವಿಷ ಸೇವಿಸಿದ ಇಬ್ಬರನ್ನು ಎಳೆದೊಯ್ದ ಪೊಲೀಸರು!

    ಬೆಂಗ್ಳೂರಲ್ಲಿ ಮನೆ ತೆರವು ವೇಳೆ ಗಲಾಟೆ – ವಿಷ ಸೇವಿಸಿದ ಇಬ್ಬರನ್ನು ಎಳೆದೊಯ್ದ ಪೊಲೀಸರು!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸ್ಲಂ ತೆರವು ವೇಳೆ ಗಲಾಟೆ ನಡೆದಿದೆ. ಸ್ಲಂ ತೆರವು ಮಾಡುವುದನ್ನು ಪ್ರತಿಭಟಿಸಿ ಇಬ್ಬರು ವಿಷ ಸೇವನೆ ಮಾಡಿದ್ದಾರೆ. ಈ ಇಬ್ಬರನ್ನು ಪೊಲೀಸರು ಧರಧರನೇ ಎಳೆದೊಯ್ದು ದೌರ್ಜನ್ಯವೆಸಗಿದ್ದಾರೆ.

    ಈ ಘಟನೆ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ. ಏಕಾಏಕಿ ಬಂದು ಸ್ಲಂ ಬೋರ್ಡ್ ನಿಂದ ತೆರವು ಕಾರ್ಯಾಚರಣೆ ನಡೆದಿದೆ. ಪೊಲೀಸರ ದಂಡನ್ನೇ ಕರೆತಂದು ತೆರವು ಕಾರ್ಯಾಚರಣೆಗೆ ಯತ್ನಿಸಲಾಗಿದೆ. ಬಟ್ಟೆ, ಬರೆ, ಮಕ್ಕಳನ್ನು ಪೊಲೀಸರು ಮನೆಯಿಂದ ಹೊರಕ್ಕೆ ದಬ್ಬಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

    ಹೀಗೆ ಏಕಾಏಕಿ ಬಂದು ಮನೆ ತೆರವು ಮಾಡಿದರೆ ಈ ಕೊರೊನಾ ಸಮಯದಲ್ಲಿ ಎಲ್ಲಿ ಹೋಗೋಣ ಅಂತ ನಿವಾಸಿಗಳು ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೆ ಬಿಜೆಪಿ ಕೌನ್ಸಿಲರ್ ಕಾಂಗ್ರೆಸ್ಸಿನವರು ಅನ್ನೋ ಕಾರಣಕ್ಕೆ 17 ಮನೆಗೆ ನೋಟೀಸ್ ಕೊಟ್ಟು ಎತ್ತಂಗಡಿ ಮಾಡೋಕೆ ಪ್ರಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಜನವರಿಗೆ ಸ್ಟೇ ಅವಧಿ ಮುಗಿದಿತ್ತು. ಮೂವತ್ತು ಮನೆಯಲ್ಲಿ ಕೇವಲ ಹದಿನೇಳು ಮನೆಗೆ ನಿನ್ನೆ ನೋಟಿಸ್ ಕೊಟ್ಟಿದ್ದು, ಇಂದು ಏಕಾಏಕಿ ಬಂದು ಮನೆಯ ವಸ್ತುಗಳನ್ನು ಹೊರಹಾಕಿದ್ದಾರೆ. ನಾವು ಮನೆಯಿಂದ ಹೋಗಲ್ಲ ಸಾಯ್ತೀವಿ ಅಂತ ಇಬ್ಬರು ಮಹಿಳೆಯರ ಗಲಾಟೆ ಮಾಡಿದ್ದು, ಇವರ ಮಧ್ಯೆ ಮಗುವೊಂದು ಕಣ್ಣೀರು ಹಾಕುತ್ತಿರುವುದು ಮನಕಲಕುವಂತಿತ್ತು.

    ಫೆಬ್ರವರಿಯಲ್ಲಿ ಕೋರ್ಟ್ ಮೊರೆ ಹೋಗಲು ಕುಟುಂಬ ರೆಡಿಯಾಗಿತ್ತು. ಆದರೆ ಈ ಮಧ್ಯೆ ಏಕಾಏಕಿ ಮನೆ ತೆರವು ಮಾಡಲಾಗುತ್ತಿದೆ. ನಾವು ಮನೆಯಿಂದ ಕದಲಲ್ಲ, ಬಿಲ್ಡಿಂಗ್ ಮೇಲಿಂದ ಹಾರ್ತೀವಿ ಅಂತ ನಿವಾಸಿಗಳು ಪೊಲೀಸರಿಗೆ ಗದರಿಸಿರುವ ಪ್ರಸಂಗ ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

  • ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾದ ಐಶಾರಾಮಿ ಕಾರು

    ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾದ ಐಶಾರಾಮಿ ಕಾರು

    ನೆಲಮಂಗಲ: ಐಶಾರಾಮಿ ಬಿಎಂಡಬ್ಲ್ಯೂ ಕಾರು ನೋಡ ನೋಡುತ್ತಿದ್ದಂತೆ ಬೆಂಕಿಗೆ ಆಹುತಿಯಾದ ಘಟನೆ ಬೆಂಗಳೂರು ಹೊರವಲಯ ದಾಸರಹಳ್ಳಿ ಸಮೀಪದ 8ನೇ ಮೈಲಿಯ ಬಳಿ ನಡೆದಿದೆ.

    ದಾಸರಹಳ್ಳಿ ಸಮೀಪದ 8ನೇ ಮೈಲಿಯ ರಸ್ತೆ ಬದಿಯಲ್ಲಿ ದೆಹಲಿ ನೋಂದಣಿ ನಂಬರ್‍ನ ಬಿಎಂಡಬ್ಲ್ಯೂ ಕಾರನ್ನು ನಿಲ್ಲಿಸಲಾಗಿತ್ತು. ಈ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕಾರು ಹೊತ್ತಿ ಉರಿದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಕ್ಷಣಾರ್ಧದಲ್ಲಿ ಪಾರಾಗಿದ್ದಾರೆ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದನ್ನು ನೋಡುತ್ತಿದ್ದಂತೆ ಸಮೀಪದಲ್ಲಿದ್ದ ಜನರು ಆತಂಕದಿಂದ ಓಡಿಹೋಗಿದ್ದಾರೆ. ಈ ಕುರಿತು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೀಣ್ಯ ಅಗ್ನಿಶಾಮಕ ದಳವು ಬೆಂಕಿಯನ್ನು ನಂದಿಸಿದೆ.

    ಈ ಘಟನೆಯಿಂದಾಗಿ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಹೊತ್ತು ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.