Tag: Dasara inauguration

  • ಬಿಜೆಪಿಯಲ್ಲಿ ನಡೆಯಲಾರದ ನಾಣ್ಯಗಳು ಚಾಲ್ತಿಗೆ ಬರೋಕೆ ದಸರಾ ಬಗ್ಗೆ ಮಾತು – ಪ್ರಿಯಾಂಕ್ ಖರ್ಗೆ

    ಬಿಜೆಪಿಯಲ್ಲಿ ನಡೆಯಲಾರದ ನಾಣ್ಯಗಳು ಚಾಲ್ತಿಗೆ ಬರೋಕೆ ದಸರಾ ಬಗ್ಗೆ ಮಾತು – ಪ್ರಿಯಾಂಕ್ ಖರ್ಗೆ

    -ಬಿಜೆಪಿಯವರು ಯಾರಾದ್ರು ಒಬ್ಬರು ಹೋಗಿ ಬೂಕರ್ ಪ್ರಶಸ್ತಿ ತರಲಿ ನೋಡೋಣ ಎಂದು ಸವಾಲ್

    ಬೆಂಗಳೂರು: ಬಿಜೆಪಿಯಲ್ಲಿ (BJP) ನಡೆಯಲಾರದ ನಾಣ್ಯಗಳು ಚಾಲ್ತಿಗೆ ಬರೋಕೆ ದಸರಾ ಉದ್ಘಾಟನೆ (Dasara Inauguration) ವಿಚಾರವಾಗಿ ವಿವಾದ ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

    ಬಾನು ಮುಷ್ತಾಕ್ (Banu Mushtaq) ಅವರಿಂದ ದಸರಾ ಉದ್ಘಾಟನೆಗೆ ಬಿಜೆಪಿ ನಾಯಕರ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಮಾಜಿ ಸಂಸದರು, ಮಾಜಿ ಬಿಜೆಪಿ ಶಾಸಕರು ನಡೆಯಲಾರದ ನಾಣ್ಯಗಳು ಚಾಲ್ತಿಯಲ್ಲಿ ಬರೋಕೆ ಹೀಗೆ ಮಾತಾಡ್ತಿದ್ದಾರೆ. ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿಲ್ಲವಾ? ಬಿಜೆಪಿ ಸರ್ಕಾರ ಇದ್ದಾಗ ಅಬ್ದುಲ್ ಕಲಾಂ ಅವರನ್ನ ದಸರಾಗೆ ಕರೆದಿದ್ದರು. ಅವರು ಬಂದಿರಲಿಲ್ಲ. ಕಲಾಂ, ನಿಸಾರ್ ಅಹಮದ್ ಮುಸ್ಲಿಮರು ಅಂತ ಅವರನ್ನ ಕರೆಸಿದ್ದಾ? ಅವರ ಕೊಡುಗೆ, ಸಾಮರ್ಥ್ಯ ನೋಡಿ ಕರೆಸಿದ್ದಾ? ನಮ್ಮ ನಾಡಿಗೆ ಅವರು ಕೊಡುಗೆ ಕೊಟ್ಟಿರಲಿಲ್ಲವಾ? ಕನ್ನಡ ಪರವಾಗಿ ಬಾನು ಮುಷ್ತಾಕ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಬಾನು ಮುಷ್ತಾಕ್ ಅವರ ಸಾಧನೆ ನೋಡಿ ಮೆಚ್ಚಿ ನಾವು ಉದ್ಘಾಟನೆಗೆ ಕರೆಸಿದ್ದೇವೆ. ಅದರಲ್ಲಿ ತಪ್ಪೇನಿದೆ. ಮಾಜಿ ಸಂಸದರಿಗೆ ಏನು ಇದರಲ್ಲಿ ಅಷ್ಟು ಕಳಕಳಿ ಎಂದು ಪ್ರಶ್ನೆ ಮಾಡಿದರು.ಇದನ್ನೂ ಓದಿ: ಚೀನಾದಲ್ಲಿ ಪುಟಿನ್‌ ಜೊತೆ ಒಂದೇ ಕಾರಿನಲ್ಲಿ ಮೋದಿ ಪ್ರಯಾಣ

    ಟಿಪ್ಪು, ಹೈದರ್ ಅಲಿ ಇದ್ದಾಗಲು ದಸರಾ ನಡೆದಿತ್ತು. ನಿಂತಿರಲಿಲ್ಲ. ತಾಯಿ ಚಾಮುಂಡಿಯೇ ಏನು ಮಾತಾಡಲ್ಲ. ಇವರೇ ಚಾಮುಂಡೇಶ್ವರಿ ವಕ್ತಾರರ ತರಹ ಮಾತಾಡ್ತಾರೆ. ಯಾರು ಇವರೆಲ್ಲ ಮಾತಾಡೋಕೆ? ಬಿಜೆಪಿ ಅವರ ಕೊಡುಗೆ ಶೂನ್ಯ. ಕರ್ನಾಟಕ, ಭಾಷೆ, ನಾಡಿಗೆ ಕೊಡುಗೆ ಕೊಟ್ಟಿರೋರು ಉದ್ಘಾಟನೆ ಮಾಡಬಾರದು ಅಂದರೆ ಹೇಗೆ? ಇದು ಬಿಜೆಪಿ ಅವರ ರಾಜಕೀಯ ಅಷ್ಟೇ. ಇವರಿಗೆ ಕೆಲಸ ಇಲ್ಲ. ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳಲು ಹೀಗೆ ಮಾತಾಡ್ತಿದ್ದಾರೆ ಅಷ್ಟೆ. ಬಿಜೆಪಿ ಅವರು ಯಾರಾದ್ರು ಒಬ್ಬರು ಹೋಗಿ ಬೂಕರ್ ಪ್ರಶಸ್ತಿ ತರಲಿ ನೋಡೋಣ ಎಂದು ಸವಾಲು ಹಾಕಿದರು.

    ಚಾಮುಂಡೇಶ್ವರಿ ಹಿಂದೂಗಳ ಆಸ್ತಿಯಲ್ಲ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅನೇಕ ಕಡೆ ಕೋಮು ಸೌಹಾರ್ದತೆಗೋಸ್ಕರ ಒಟ್ಟಾಗಿ ಕೆಲಸ ಮಾಡ್ತಾರೆ. ಹಿಂದೂಗಳು ದರ್ಗಾಕ್ಕೆ ಹೋಗ್ತಾರೆ. ಮುಸ್ಲಿಮರು ದೇವಸ್ಥಾನಕ್ಕೆ ಹೋಗ್ತಾರೆ. ತಪ್ಪೇನು? ನಮ್ಮೂರಲ್ಲೂ ಇಂತಹ ಪದ್ಧತಿಗಳು ಈಗಲೂ ಇವೆ. ಎಲ್ಲಾ ದೇವರಿಗೆ ಈ ಬಿಜೆಪಿಯವರು ವಕ್ತಾರರಾಗಿದ್ದಾರೆ. ಇವರು ಮಾತಾಡೋಕೆ ಯಾರು? ಟಿಪ್ಪು, ಹೈದರ್, ಒಡೆಯರ ಕಾಲದಿಂದಲೂ ದಸರಾ ನಡೆದಿತ್ತು ಅಲ್ಲವಾ ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌ – ಎನ್‌ಐಎ ತನಿಖೆಗೆ ಬಿವೈವಿ ಒತ್ತಾಯ

  • ಮಾತಾಡೋರು ಮಾತಾಡಲಿ, ಸೂಕ್ತ ವೇದಿಕೆಯಲ್ಲಿ ನಾನು ಮಾತಾಡ್ತೀನಿ: ಬಾನು ಮುಷ್ತಾಕ್

    ಮಾತಾಡೋರು ಮಾತಾಡಲಿ, ಸೂಕ್ತ ವೇದಿಕೆಯಲ್ಲಿ ನಾನು ಮಾತಾಡ್ತೀನಿ: ಬಾನು ಮುಷ್ತಾಕ್

    ಬೆಂಗಳೂರು: ಮಾತನಾಡುವವರು ಮಾತಾಡಲಿ, ಸೂಕ್ತ ವೇದಿಕೆಯಲ್ಲಿ ನಾನು ಈ ಬಗ್ಗೆ ಮಾತನಾಡುತ್ತೇನೆ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ (Banu Mushataq) ಹೇಳಿದ್ದಾರೆ.

    `ಪಬ್ಲಿಕ್ ಟಿವಿ’ (PUBLiC TV) ಜೊತೆ ಮೈಸೂರು ದಸರಾ (Mysuru Dasara) ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಯಾರು ಏನು ಮಾತಾಡುತ್ತಾರೋ ಮಾತಾಡಲಿ. ನಾನು ಸೂಕ್ತ ಸಮಯದಲ್ಲಿ ಮಾತಾಡುತ್ತೇನೆ. ಈ ಹಿಂದೆ ನಾನು ಏನು ಮಾತಾಡಿದ್ದೇನೆ ಎಂದು ಸರಿಯಾಗಿ ತಿಳಿಕೊಂಡು ಮಾತಾಡಲಿ. ಯಾರೋ ವಿರೋಧ ಮಾಡಿದ್ರೆ ನಾನು ಉತ್ತರ ಕೊಡಬೇಕಾ? ಇದರ ಬಗ್ಗೆ ನಾನು ವಿವರವಾಗಿ ಮಾತಾಡ್ತೀನಿ ಎಂದಿದ್ದಾರೆ.ಇದನ್ನೂ ಓದಿ: ಈ ಬಾರಿ ಗಣೇಶೋತ್ಸವದಲ್ಲಿ ರಾರಾಜಿಸಲಿದೆ ಧರ್ಮಸ್ಥಳ

    ಸದ್ಯ ವಿರೋಧ ಮಾಡುವ ಬಗ್ಗೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ವಿರೋಧ ಮಾಡುವವರು ಮಾಡಲಿ ಅದು ಅವರ ಸ್ವಾತಂತ್ರ‍್ಯ. ನಾನು ಅದಕ್ಕೆ ಪ್ರತಿಕ್ರಿಯೆ ಕೊಡಲ್ಲ. ನಾನು ಸೂಕ್ತವಾದ ವೇದಿಕೆಯಲ್ಲಿ ಸಕ್ಷಮವಾಗಿ ಮಾತಾಡ್ತೀನಿ ಎಂದು ತಿಳಿಸಿದ್ದಾರೆ.

    2025ರ ಮೈಸೂರು ದಸರಾವನ್ನು ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಉದ್ಘಾಟಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಘೋಷಿಸಿದ್ದರು. ಅದಾದ ಬಳಿಕ ಮಾಜಿ ಸಂಸದ ಪ್ರತಾಪ ಸಿಂಹ ಹಾಗೂ ಶಾಸಕ ಯತ್ನಾಳ್ ವಿರೋಧಿಸಿದ್ದರು.ಇದನ್ನೂ ಓದಿ: AI ವೀಡಿಯೋಗೆ ಸಾಕ್ಷಿ ಕೊಡಲು ತಡಬಡಿಸಿದ ಬುರುಡೆ ಸಮೀರ್

  • ಚಾಮರಾಜನಗರ ದಸರಾ ಉದ್ಘಾಟನೆಯಲ್ಲಿ ಕಪ್ಪು ಬಾವುಟ ಪ್ರದರ್ಶನ: ವಿ. ಸೋಮಣ್ಣ ಕೆಂಡಾಮಂಡಲ

    ಚಾಮರಾಜನಗರ ದಸರಾ ಉದ್ಘಾಟನೆಯಲ್ಲಿ ಕಪ್ಪು ಬಾವುಟ ಪ್ರದರ್ಶನ: ವಿ. ಸೋಮಣ್ಣ ಕೆಂಡಾಮಂಡಲ

    ಚಾಮರಾಜನಗರ: ಜಿಲ್ಲೆಯ ದಸರಾ (Dasara) ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ ವೇಳೆ ಕಾಂಗ್ರೆಸ್ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ (R.P. Nanjundaswamy)ವೇದಿಕೆಯಲ್ಲೇ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರಿಂದ ಸಚಿವ ವಿ. ಸೋಮಣ್ಣನವರು (V. Somanna) ಕೆಂಡಾಮಂಡಲವಾಗಿದ್ದಾರೆ.

    ಚಾಮರಾಜೇಶ್ವರ ದೇವಾಲಯದ (Chamarajeshwara Temple) ಮುಂಭಾಗ ನಿರ್ಮಿಸಿರುವ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲು ವಿ. ಸೋಮಣ್ಣನವರು ವೇದಿಕೆ ಏರಿ ಕುಳಿತಂತೆ ಅಲ್ಲೇ ಇದ್ದ ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ ದೀಪಾಲಂಕಾರದ ಅವ್ಯವಸ್ಥೆ ಖಂಡಿಸಿ ಕಪ್ಪು ಬಾವುಟ ಪ್ರದರ್ಶಿಸಿದರು. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಚಿಕಿತ್ಸೆ ನೀಡಿದ ವೈದ್ಯ – ಆಸ್ಪತ್ರೆಯಲ್ಲಿ ಮಗು ಸಾವು

    ಬಳಿಕ ಅಲ್ಲಿಯೇ ಇದ್ದ ಪೊಲೀಸರು ನಂಜುಂಡಸ್ವಾಮಿ ಅವರನ್ನು ಹೊರಕ್ಕೆ ಎಳೆದೊಯ್ದರು. ಈ ಅನಿರೀಕ್ಷಿತ ಘಟನೆಯಿಂದ ಕೆಂಡಾಮಂಡಲರಾದ ಸೋಮಣ್ಣ ಅವರು, ಪೊಲೀಸರು ಏನು ಮಾಡುತ್ತಿದ್ದೀರಾ, ಯಾವ ರೀತಿ ವ್ಯವಸ್ಥೆ ಮಾಡಿದ್ದೀರಾ ಎಂದು ಕಿಡಿಕಾರಿದ್ದಾರೆ.  ಇದನ್ನೂ ಓದಿ: ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಕ್ಕಿಲ್ಲ ಅನ್ನೋ ನೋವಿದೆ, ಆದ್ರೆ ನಾನು ಹಿಂದೆ ಸರಿಯಲ್ಲ: ಶ್ರೀರಾಮುಲು

    Live Tv
    [brid partner=56869869 player=32851 video=960834 autoplay=true]

  • ನಮ್ಮಲ್ಲಿ ವ್ಯವಸಾಯ ಹಾಳಾಗುವುದಕ್ಕೂ ರಾಜಕಾರಣಿಗಳು ಕಾರಣ: ಎಸ್.ಎಲ್ ಭೈರಪ್ಪ

    ನಮ್ಮಲ್ಲಿ ವ್ಯವಸಾಯ ಹಾಳಾಗುವುದಕ್ಕೂ ರಾಜಕಾರಣಿಗಳು ಕಾರಣ: ಎಸ್.ಎಲ್ ಭೈರಪ್ಪ

    – ಚಾಮುಂಡಿ ಬೆಟ್ಟ ಟೂರಿಸ್ಟ್ ಸ್ಪಾಟಾ ಅಥವಾ ಧಾರ್ಮಿಕ ಕೇಂದ್ರವೇ?
    – ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನ ಕೊಟ್ಟಿದ್ದೇವೆ ಎಂದರು.

    ಮೈಸೂರು: ನಮ್ಮಲ್ಲಿ ವ್ಯವಸಾಯ ಹಾಳಾಗುವುದಕ್ಕೂ ರಾಜಕಾರಣಿಗಳು ಎಂದು ಎಸ್.ಎಲ್ ಭೈರಪ್ಪ ಹೇಳಿದ್ದಾರೆ.

    ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಉದ್ಘಾಟನಾ ಭಾಷಣ ಮಾಡಿದ ಅವರು, ಹಳ್ಳಿ ಕಡೆಯಲ್ಲಿ ಸ್ಪಲ್ಪ ತಂಪು ಇರುವಾಗ ಹೊಲದ ಕೆಲಸ ಮಗಿಸುತ್ತಾರೆ. ಆದರೆ ಚುನಾವಣೆ ಬಂದ ಮೇಲೆ ಆ ವ್ಯವಸ್ಥೆ ಬಹುತೇಕ ಕಡೆ ಮರೆಯಾಗಿದೆ. ಕಾಯಕ ನಿಷ್ಠೆ ಕಡಿಮೆಯಾಗುತ್ತಿದೆ. ಆದ್ದರಿಂದ ನಮ್ಮಲ್ಲಿ ವ್ಯವಸಾಯ ಹಾಳಾಗುತ್ತಿರುವುದಕ್ಕೆ ರಾಜಕಾರಣಿಗಳು ಕಾರಣ ಎಂದು ಹೇಳಿದರು. ಇದನ್ನೂ ಓದಿ: ಸಾಹಿತಿ ಎಸ್.ಎಲ್ ಭೈರಪ್ಪ ಅವರಿಗೆ ಅಗೌರವ

    ಬಸವಣ್ಣನವರು ಕಾಯಕ ನಿಷ್ಠೆ, ಜಾತಿ ವಿನಾಶ ಬಗ್ಗೆ ಮಾತಾಡಿದರು. ಅನ್ಯ ಜಾತಿ ನಡುವೆ ಮದುವೆ ಮಾಡಿದರು. ಜಾತಿ ವಿನಾಶದ ಕಲ್ಪನೆ ಬಹಳ ಒಳ್ಳೆಯದು. ಆದರೆ ಅವತ್ತಿನ ಕಾಲಕ್ಕೆ ಜನ ಅದನ್ನು ಒಪ್ಪಿಕೊಳ್ಳುವ ಸ್ಥಿತಿ ಇರಲಿಲ್ಲ. ಅವತ್ತು ಸಮಾಜ ಅದಕ್ಕೆ ಪಕ್ವ ಇರಲಿಲ್ಲ. ಆಗ ಗಂಡು ಹೆಣ್ಣಿನ ನಡುವೆ ಆರ್ಥಿಕ ಸಮಾನತೆ ಬಂದಿದೆ. ಈಗ ಜಾತಿ ಮೀರಿ ಪ್ರೀತಿಸಿ ಮದುವೆಗಳು ನಡೆಯುತ್ತಿವೆ. ಬಸವಣ್ಣನವರ ಜಾತಿ ವಿನಾಶದ ತತ್ವ ಪರಿಪಾಲನೆಗೆ ಈಗ ಕಾಲ ಪಕ್ವ ಆಗಿದೆ. ಹಾಗಂತ ಬಲವಂತವಾಗಿ ಅಂತರ್ಜಾತಿ ವಿವಾಹ ಮಾಡಿಸುತ್ತೇನೆ ಎಂದು ಯಾರು ಹೋಗಬಾರದು. ಸಾಹಿತಿಗಳು ಬಸವಣ್ಣನವರು ಆಲೋಚನೆ ಜಾರಿಗೆ ತರುವುದಕ್ಕೆ ಪ್ರಯತ್ನ ಮಾಡಬೇಕು. ಅದನ್ನು ಬಿಟ್ಟು ಲಿಂಗಾಯತ, ವೀರಶೈವ ಎಂದು ಚರ್ಚೆಗೆ ಇಳಿಯಬಾರದು ಎಂದು ಕಿವಿ ಮಾತು ಹೇಳಿದರು.

    ಚಾಮುಂಡಿ ಬೆಟ್ಟಕ್ಕೆ ಬರೋದು ದೇವರ ದರ್ಶನಕ್ಕೋ ಶಾಂಪಿಂಗ್‍ಗೋ? ಚಾಮುಂಡಿ ಬೆಟ್ಟ ಟೂರಿಸ್ಟ್ ಸ್ಪಾಟಾ ಅಥವಾ ಧಾರ್ಮಿಕ ಕೇಂದ್ರವಾ? ಶಾಂಪಿಂಗ್ ಮಾಡಲು ಮೈಸೂರು ನಗರದ ಒಳಗೆ ವ್ಯವಸ್ಥೆ ಇಲ್ವಾ ಎಂದು ಪ್ರಶ್ನಿಸಿದರು. ಶಾಂತಿಯಿಂದ ದೇವರನ್ನು ಪ್ರಾರ್ಥಿಸಲು ಅನುಕೂಲವಾಗಲಿ, ಮನಸ್ಸಿಗೆ ಶಾಂತಿ ಸಿಗಲಿ ಎಂದು ದೇವಸ್ಥಾನ, ಗುಡಿಗಳನ್ನು ಮಾಡಿದ್ದಾರೆ. ಆದರೆ ಈಗ ಹಲವಾರು ಕಡೆ ಧಾರ್ಮಿಕ ಕ್ಷೇತ್ರಗಳನ್ನು ಪ್ರವಾಸಿ ತಾಣವಾಗಿ ಮಾಡಿಬಿಟ್ಟಿದ್ದಾರೆ. ವಾಣಿಜ್ಯ ಮಳಿಗೆಗಳು, ಅದು, ಇದು ಎಂದು ಸಾಕಷ್ಟು ಅಂಗಡಿಗಳು, ಪ್ರವಾಸಿಗರು ಬರುತ್ತಾರೆ. ಈ ಗಲಾಟೆಯ ಮಧ್ಯೆ ಶಾಂತಿ ಎಲ್ಲಿ ಸಿಗುತ್ತೆ ಎಂದು ಚಾಮುಂಡಿ ಬೆಟ್ಟದಲ್ಲಿ ಹೊಸ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಭೈರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

    ಕೆಲವರು ನೀವು ವಿಚಾರವಾದಿಗಳು ದೇವರ ಮೇಲೆ ನಂಬಿಕೆ ಇಲ್ಲ ಎಂದಿದ್ದರು. ಆದರೆ ದೇವರ ಮೇಲೆ ನಂಬಿಕೆ ಇಲ್ಲ ಎಂದು ನಾನು ಎಂದೂ ಹೇಳಿಲ್ಲ. ದೇವರು ಇದ್ದನಾ? ಇಲ್ಲವಾ? ಎಂದು ತಿಳಿಸಲು ಒಂದು ಬಾಲಕ ಹಾಗೂ ಸೂಜಿಯ ಕಥೆ ಹೇಳಿದರು. ಬಳಿಕ ದೇವರಿಗೆ ಎಂದು ಲಿಂಗ ಭೇದ ಮಾಡಬಾರದು. ದೇವರು ಇದ್ದಾನೆಯೇ? ಇದ್ದಾಳೇಯೇ? ಎನ್ನುವುದಕ್ಕಿಂತ ದೇವರು ಇದೇಯೇ ಎಂದು ಕೇಳಬೇಕಿದೆ. ವಿಚಾರವಾದಿಗಳಿಗೆ ಕೇಳಿದರೆ ಇಲ್ಲ ಎಂದು ಹೇಳುತ್ತಾರೆ. ವಿಚಾರವಾದಿಗಳು ದೇವರು ಇಲ್ಲ ಅನ್ನೋದು ಉದ್ಧಟತನದ ಮಾತು ಎಂದು ದಸರಾ ಉದ್ಘಾಟಿಸಿ, ಭೈರಪ್ಪ ಅವರು ದೇವರ ಬಗ್ಗೆ ಉಲ್ಲೇಖಿಸಿದರು.

     

    ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ದೇವತೆ ಪ್ರಧಾನವಾದದ್ದು, ಪ್ರತಿ ಊರಲ್ಲೂ ಗ್ರಾಮದೇವತೆ ಇರುತ್ತೆ. ಹೆಣ್ಣನ್ನು ದೇವರ ರೂಪದಲ್ಲಿ ನೋಡುತ್ತೇವೆ ಎನ್ನುವುದು ಇದರ ಅರ್ಥ. ಮೊದಲು ತಾಯಿಗೆ ನಮಸ್ಕರಿಸಿ ನಂತರ ತಂದೆಗೆ ನಮಸ್ಕರಿಸುವ ಪದ್ಧತಿ ಇದೆ. ಆದರೂ, ನಮ್ಮ ದೇಶದಲ್ಲಿ ಹೆಣ್ಣಿಗೆ ಗೌರವ ಇಲ್ಲ ಎಂದು ಕೆಲವರು ಹೇಳುತ್ತಾರೆ. ಹೆಣ್ಣನ್ನು ತುಳಿಯುವ ಸಮಾಜವಿದು ಎಂದು ವಿನಾಃಕಾರಣ ಹೇಳುತ್ತಾರೆ. ಆದರೆ ನಮ್ಮಲ್ಲಿ ಪುರುಷ ದಬ್ಬಾಳಿಕೆ ಇಲ್ಲ. ನಮ್ಮ ಸಮಾಜದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನ ಕೊಟ್ಟಿದ್ದೇವೆ ಎಂದರು.

    ಇದೇ ವೇಳೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವಿಲ್ಲ ಎಂಬ ವಿಚಾರವಾಗಿ ಮಾತನಾಡಿ, ಅದು ಆ ದೇವಸ್ಥಾನದ ಆಚಾರ-ವಿಚಾರ. ಇದನ್ನು ಪ್ರಶ್ನಿಸಿ ಕೆಲವು ವಿಚಾರವಾದಿಗಳು ನ್ಯಾಯಾಲಯಕ್ಕೆ ಹೋದರು. ಕೆಲವರು ಬಲವಂತವಾಗಿ ಕೆಲ ಮಹಿಳೆಯರನ್ನು ದೇವಸ್ಥಾನದ ಒಳಗೆ ನುಗ್ಗಿಸಿದರು. ಆ ನುಗ್ಗಿಸಿದ ಮಹಿಳೆಯರಲ್ಲಿ ಒಬ್ಬ ಮುಸ್ಲಿಂ ಇದ್ದರು. ನಂತರ, ಆಕೆಗೆ ಆ ಧರ್ಮದಿಂದ ಹೊರಗೆ ಹಾಕ್ತಿವಿ ಎಂದು ಎಚ್ಚರಿಸಿದ್ದರು. ಸರ್ಕಾರ ಧಾರ್ಮಿಕ ವಿಚಾರಕ್ಕೆ ಏಕೆ ಹೋಗಬೇಕು? ಸಮಾನತೆ ಕಲ್ಪನೆ ಯಾವತ್ತೂ ಒಂದೇ ಥರದಲ್ಲಿ ಇರುವುದಿಲ್ಲ ಎಂದು ಹೇಳಿದರು.