Tag: Dasara Film

  • Nani 33: ಸಿಗರೇಟ್ ಹಿಡಿದು ರಗಡ್ ಆಗಿ ಎಂಟ್ರಿ ಕೊಟ್ಟ ನಾನಿ

    Nani 33: ಸಿಗರೇಟ್ ಹಿಡಿದು ರಗಡ್ ಆಗಿ ಎಂಟ್ರಿ ಕೊಟ್ಟ ನಾನಿ

    ಟಾಲಿವುಡ್ ನಟ ನಾನಿ (Nani) ಸಿಗರೇಟ್ ಹಿಡಿದು ರಗಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ನಾನಿ ನಟನೆಯ 33ನೇ ಚಿತ್ರವನ್ನು ಇಂದು (ಮಾ.30) ಘೋಷಣೆ ಮಾಡಿದ್ದಾರೆ. ‘ದಸರಾ’ (Dasara) ಸಿನಿಮಾ ರಿಲೀಸ್ ಆದ ದಿನದಂದೇ ಹೊಸ ಚಿತ್ರದ ಬಗ್ಗೆ ನಾನಿ ಮಾಹಿತಿ ನೀಡಿದ್ದಾರೆ.

    ‘ದಸರಾ’ ಸಿನಿಮಾದ ನಿರ್ದೇಶಕ ಶ್ರೀಕಾಂತ್ ಒಡೆಲಾ ಜೊತೆ ನಾನಿ ಕೈಜೋಡಿಸಿದ್ದಾರೆ. ಸಿಗರೇಟ್ ಹಿಡಿದು ಹೊಸ ಗೆಟಪ್‌ನಲ್ಲಿ ಬಂದಿದ್ದಾರೆ. ದಸರಾ ನಂತರ ಮತ್ತೆ ಹೊಸ ರೀತಿಯ ಶೇಡ್‌ನಲ್ಲಿ ಬರುವ ಬಗ್ಗೆ ನಾನಿ ಪೋಸ್ಟರ್‌ನಲ್ಲಿ ಸುಳಿವು ನೀಡಿದ್ದಾರೆ. ಇದನ್ನೂ ಓದಿ:‘ಪಂಚೇಂದ್ರಿಯಂ’ ಟೀಸರ್ ರಿಲೀಸ್ ಮಾಡಿದ ನಾಗೇಂದ್ರ ಪ್ರಸಾದ್

     

    View this post on Instagram

     

    A post shared by Nani (@nameisnani)

    ಇಂದಿಗೆ ‘ದಸರಾ’ ಸಿನಿಮಾ ತೆರೆಕಂಡು ಒಂದು ವರ್ಷವಾಗಿದೆ. ಮತ್ತೆ ಶ್ರೀಕಾಂತ್ ಒಡೆಲಾ (Srikanth Odela) ಜೊತೆಗಿನ ಕ್ರೇಜಿ ಕಾಂಬಿನೇಷನ್‌ನಲ್ಲಿ ಸಿನಿಮಾ ಬರೋದಾಗಿ ನಾನಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

    ಕಳೆದ ವರ್ಷ ಮಾ.30ಕ್ಕೆ ರಿಲೀಸ್‌ ಆಗಿರುವ ‘ದಸರಾ’ (Dasara) ಸಿನಿಮಾದಲ್ಲಿ ನಾನಿ ನಟಿಸಿದ್ದರು. ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ನಾನಿ ಜೊತೆ ಕೀರ್ತಿ ಸುರೇಶ್, ಕನ್ನಡದ ನಟ ದೀಕ್ಷಿತ್ ಶೆಟ್ಟಿ (Dheekshith Shetty) ನಟಿಸಿ ಗೆದ್ದಿದ್ದರು. ಈಗ ಈ ಚಿತ್ರದ ನಿರ್ದೇಶಕನ ಜೊತೆ ಹೊಸ ಪ್ರಾಜೆಕ್ಟ್ ಮಾಡಲು ನಾನಿ ಮುಂದಾಗಿದ್ದಾರೆ. ಸದ್ಯ ನಾನಿ ಸಿನಿಮಾದ ಹೊಸ ಅಪ್‌ಡೇಟ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ವರುಣ್ ಧವನ್ ಜೊತೆ ಕೀರ್ತಿ ಸುರೇಶ್ ರೊಮ್ಯಾನ್ಸ್

    ವರುಣ್ ಧವನ್ ಜೊತೆ ಕೀರ್ತಿ ಸುರೇಶ್ ರೊಮ್ಯಾನ್ಸ್

    ಸೌತ್ ಬ್ಯೂಟಿ ಕೀರ್ತಿ ಸುರೇಶ್ (Keerthy Suresh) ಅವರು ಪಾತ್ರಗಳನ್ನ ಆಯ್ಕೆ ಮಾಡುವಾಗ ತಮಗೆ ಡಿಫರೆಂಟ್ ಎನಿಸುವಂತಹ ರೋಲ್‌ಗಳ ಮೂಲಕ ಗಮನ ಸೆಳೆಯುತ್ತಾರೆ. ಇದೀಗ ಬಾಲಿವುಡ್‌ಗೆ (Bollywood) ನಟಿ ಹಾರಿದ್ದಾರೆ. ವರುಣ್ ಧವನ್ ಜೊತೆ ರೊಮ್ಯಾನ್ಸ್ ಮಾಡಲು ಸಜ್ಜಾಗಿದ್ದಾರೆ.

    ಸ್ಟಾರ್‌ ನಟ ನಾನಿ (Nani) ಜೊತೆ ‌ʻದಸರಾʼ ಸಿನಿಮಾ ಮೂಲಕ ತೆರೆಯ ಮೇಲೆ ಅಬ್ಬರಿಸಿದ ಮೇಲೆ ಈಗ ಬಾಲಿವುಡ್‌ನತ್ತ (Bollywood) ಮಹಾನಟಿ ಕೀರ್ತಿ ಮುಖ ಮಾಡಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತೆ ನಾಯಕಿ ಹೊಸ ಬಗೆಯ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ತನಗೆ ಒಪ್ಪುವ ಪಾತ್ರ ಸಿಕ್ಕ ಕಾರಣ ಬಾಲಿವುಡ್‌ಗೆ ನಟಿ ಲಗ್ಗೆ ಇಟ್ಟಿದ್ದಾರೆ.

    ಬಾಲಿವುಡ್‌ನ ಲವರ್ ಬಾಯ್ ವರುಣ್ ಧವನ್ (Varun Dhawan) ಜೊತೆ ಮೊದಲ ಬಾರಿಗೆ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ವರುಣ್ 18ನೇ ಚಿತ್ರಕ್ಕೆ ಪ್ರಮುಖ ನಾಯಕಿಯಾಗಿ ಕೀರ್ತಿ ಸುರೇಶ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಮೊದಲ ನಾಯಕಿಯಾಗಿ ಕೀರ್ತಿ ಫೈನಲ್‌ ಆಗಿದ್ದು, 2ನೇ ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ.

    ಈ ಸಿನಿಮಾ ಪಕ್ಕ ಆಕ್ಷನ್-ಪ್ಯಾಕ್ಡ್ ಆಗಿರಲಿದೆಯಂತೆ. ಈ ಚಿತ್ರದಲ್ಲಿ ವರುಣ್ ಧವನ್ ಪೊಲೀಸ್ ಅಧಿಕಾರಿಯಾಗಿ ನಟಿಸಲಿದ್ದಾರೆ. ಈ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ಕುಮಾರ್ ಪತ್ನಿ ಪ್ರಿಯಾ ಅಟ್ಲೀ (Priya Atlee) ನಿರ್ಮಾಣ ಮಾಡುತ್ತಿದ್ದಾರೆ. ‘ಜವಾನ್’ (Jawan) ನಿರ್ದೇಶಕ ಅಟ್ಲಿ ಕುಮಾರ್ ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇದನ್ನೂ ಓದಿ:2 ಸಾವಿರಕ್ಕೆ ʼಆಪನ್ ಹೈಮರ್’ ಚಿತ್ರದ ಟಿಕೆಟ್ ಸೇಲ್- ಬೆಂಗಳೂರಿನಲ್ಲಿ ಹೆಚ್ಚಿದ ಡಿಮ್ಯಾಂಡ್

    ಇತ್ತೀಚಿಗೆ ಕೀರ್ತಿ ಸುರೇಶ್ ಹೆಚ್ಚಾಗಿ ತಮ್ಮ ಮದುವೆ ವಿಚಾರವಾಗಿಯೇ ಸುದ್ದಿಯಾಗುತ್ತಿದ್ದರು. ಬಳಿಕ ಮದುವೆ ಸುದ್ದಿಗೆ ನಟಿ ಸ್ಪಷ್ಟನೆ ನೀಡಿದ್ದರು. ಸದ್ಯಕ್ಕೆ ನಾನು ಮದುವೆಯಾಗೋದಿಲ್ಲ. ಸಿನಿಮಾ ಕೆರಿಯರ್ ಕಡೆ ಗಮನ ಕೊಡುತ್ತೇನೆ ಅಂತಾ ಗಾಸಿಪ್‌ಗೆ ನಟಿ ಬ್ರೇಕ್ ಹಾಕಿದ್ರು. ಈಗ ಸೌತ್- ಬಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾ ಮಾಡ್ತಾ ಇದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಯ್‌ಫ್ರೆಂಡ್ ಪರಿಚಯಿಸಿದ ಕೀರ್ತಿ ಸುರೇಶ್- ಹುಡುಗ ಯಾರು?

    ಬಾಯ್‌ಫ್ರೆಂಡ್ ಪರಿಚಯಿಸಿದ ಕೀರ್ತಿ ಸುರೇಶ್- ಹುಡುಗ ಯಾರು?

    ನಟಿ ಕೀರ್ತಿ ಸುರೇಶ್ (Keerthy Suresh) ಮಹಾನಟಿಯಾಗಿ ಸಕ್ಸಸ್ ಕಂಡಿದ್ದಾರೆ. ಸೌತ್ ಸಿನಿಮಾರಂಗದಲ್ಲಿ ಗಟ್ಟಿ ನಾಯಕಿಯಾಗಿ ನೆಲೆ ಗಿಟ್ಟಿಸಿಕೊಂಡಿದ್ದಾರೆ. ಕೀರ್ತಿ ಸುರೇಶ್ ಅವರು ಆಗಾಗ ಮದುವೆ (Wedding) ವಿಷ್ಯವಾಗಿ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೆ ಮದುವೆ ವಿಚಾರದಲ್ಲಿ ಚಾಲ್ತಿಯಲ್ಲಿದೆ.

    ದಳಪತಿ ವಿಜಯ್ (Thalapathy Vijay) ಜೊತೆ ಕೀರ್ತಿ ಸುರೇಶ್ ಮದುವೆ ಎಂದು ಹೇಳಲಾಗಿತ್ತು. ಈ ಎಲ್ಲಾ ಊಹಾಪೋಹಗಳಿಗೂ ಕೀರ್ತಿ ತಾಯಿ ಬ್ರೇಕ್ ಹಾಕಿದ್ದರು. ಈಗ ಉದ್ಯಮಿಯೊಬ್ಬರ ಜೊತೆ ಕೀರ್ತಿ ಸುರೇಶ್ ಇರುವ ಫೋಟೋ ಎಲ್ಲೆಡೆ ಸದ್ದು ಮಾಡ್ತಿದೆ. ಬಾಯ್‌ಫ್ರೆಂಡ್‌ನ ಪರಿಚಯಿಸಿದ್ರಾ? ಎಂಬ ಅನುಮಾನ ಅಭಿಮಾನಿಗಳಿಗೆ ಕಾಡುತ್ತಿದೆ.

    ಕೀರ್ತಿ ಸುರೇಶ್ ಪ್ರೀತಿಲಿ ಬಿದ್ದಿದ್ದಾರೆ ಅನ್ನುವ ಸುದ್ದಿ ಇದೀಗ ವೈರಲ್ ಆಗ್ತಿದೆ. ಇತ್ತೀಚೆಗೆ ಆಕೆ ಹಂಚಿಕೊಂಡಿದ್ದ ಫೋಟೊವೊಂದು ಇಂತಹದ್ದೊಂದು ಚರ್ಚೆ ಹುಟ್ಟಾಕಿದೆ. ಒಬ್ಬರ ಜೊತೆ ಕೀರ್ತಿ ಬಹಳ ಆತ್ಮೀಯವಾಗಿ ಕಾಣಿಸಿಕೊಂಡಿದ್ದಾರೆ. ಆತನ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಆತನೊಟ್ಟಿಗೆ ಇರುವ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನಟಿ ಶುಭಾಶಯ ಕೋರಿದ್ದಾರೆ. ಫೋಟೊ ವೈರಲ್ ಆಗ್ತಿದ್ದಂತೆ ಕೀರ್ತಿ ಜೊತೆಗಿರುವ ಆ ವ್ಯಕ್ತಿ ಯಾರು ಎಂದು ಕೆಲವರು ಹುಡುಕಾಟ ಶುರು ಮಾಡಿದ್ದಾರೆ. ಇದನ್ನೂ ಓದಿ:ಗರ್ಲ್‌ಫ್ರೆಂಡ್ ಸಬಾ ಜೊತೆ ವಾಸಿಸಲು ದುಬಾರಿ ಮನೆ ಖರೀದಿಸಿದ ಹೃತಿಕ್ ರೋಷನ್

    ಆತನ ಹೆಸರು ಫರ್ಹಾನ್ ಬಿನ್ ಲೈತ್. ರಿಯಲ್ ಎಸ್ಟೇಟ್ ಉದ್ಯಮಿ. ರೆಸ್ಟೋರೆಂಟ್ ಒಡೆಯ. ಆಸ್ತಿ ಅಂತಸ್ತಿನಲ್ಲಿ ಕೀರ್ತಿಗೆ ಹೇಳಿ ಮಾಡಿಸಿದ ಜೋಡಿ. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ. ಶೀಘ್ರದಲ್ಲೇ ಮದುವೆ ಎಂದು ಹೇಳಲಾಗುತ್ತಿದೆ.

  • ತಮಿಳು ಸಿನಿಮಾ ನಿರ್ಮಾಪಕಿಯಾದ `ಗಾಳಿಪಟ 2′ ನಟಿ ಶರ್ಮಿಳಾ ಮಾಂಡ್ರೆ

    ತಮಿಳು ಸಿನಿಮಾ ನಿರ್ಮಾಪಕಿಯಾದ `ಗಾಳಿಪಟ 2′ ನಟಿ ಶರ್ಮಿಳಾ ಮಾಂಡ್ರೆ

    `ಗಾಳಿಪಟ 2′ (Galipata 2) ಸಕ್ಸಸ್ ನಂತರ ಶರ್ಮಿಳಾ ಮಾಂಡ್ರೆ (Sharmiela Mandre) ಮತ್ತೆ ಸುದ್ದಿಯಲ್ಲಿದ್ದಾರೆ. ಕನ್ನಡದ `ದಸರಾ’ ಚಿತ್ರದ ನಿರ್ಮಾಣದ ನಂತರ ತಮಿಳು ಸಿನಿಮಾ ನಿರ್ಮಾಪಕಿಯಾಗಿ ಶರ್ಮಿಳಾ ಕಾಲಿವುಡ್‌ನತ್ತ ಮುಖ ಮಾಡಿದ್ದಾರೆ.

    `ಸಜನಿ’ (Sajani) ಚಿತ್ರದ ಮೂಲಕ ಧ್ಯಾನ್‌ಗೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಲಗ್ಗೆಯಿಟ್ಟ ನಟಿ ಶರ್ಮಿಳಾ ಮಾಂಡ್ರೆ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಾಯಕಿಯಾಗಿ ಗುರುತಿಸಿಕೊಂಡಿದ್ದ ನಟಿ, ದಸರಾ ಚಿತ್ರಕ್ಕೆ ನಿರ್ಮಾಣದ ಜತೆ ನಾಯಕಿಯಾಗಿ ಕೂಡ ನಟಿಸಿದ್ದಾರೆ. `ಗಾಳಿಪಟ 2′ ಚಿತ್ರದ ಸಕ್ಸಸ್ ನಂತರ ತಮಿಳು ಸಿನಿಮಾಗೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

    ತಮಿಳಿನ `ಕಾಧಲ್ ಕೊಂಜಂ ತೂಕಲ’ ಚಿತ್ರ ನಿರ್ಮಾಣಕ್ಕೆ ನಟಿ ಶರ್ಮಿಳಾ ಮಾಂಡ್ರೆ ಮುಂದಾಗಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಮಲಾ ಪೌಲ್ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಲಂಡನ್‌ನಲ್ಲಿ ನಡೆಯುತ್ತಿರುವುದು ವಿಶೇಷ. ಶರ್ಮಿಳಾ ನಿರ್ಮಾಣದ ಈ ಚಿತ್ರಕ್ಕೆ ಬಾಲಾಜಿ ಮೋಹನ್ ನಿರ್ದೇಶನ ಮಾಡಲಿದ್ದಾರೆ. ಇದನ್ನೂ ಓದಿ:ನಾಗಚೈತನ್ಯ- ಸಮಂತಾ ಬ್ರೇಕಪ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಾರ್ಜುನ್

    ಇನ್ನು ಸಿನಿಮಾ ನಿರ್ಮಾಣದ ಜೊತೆ ನಟನೆಯನ್ನು ಕೂಡ ಶರ್ಮಿಳಾ ಸರಿದೂಗಿಸಿಕೊಂಡು ಹೋಗಲಿದ್ದಾರೆ. ನಟಿಯಾಗಿ ಗುರುತಿಸಿಕೊಂಡಿದ್ದ ಶರ್ಮಿಳಾ, ನಿರ್ಮಾಪಕಿಯಾಗಿ ಕೂಡ ಸಕ್ಸಸ್ ಕಾಣುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?

    ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?

    ಪ್ಯಾನ್ ಇಂಡಿಯಾ ಸಿನಿಮಾ ಅಂದಾಕ್ಷಣ ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ ಎನ್ನುವುದಕ್ಕೆ ಈ ಪೋಸ್ಟರ್ ಮೊದಲ ಬಾರಿಗೆ ಸಾಕ್ಷಿಯಾಗಿ ನಿಂತಿದೆ. ಒಂದು ತೆಲುಗಿನ ನಾನಿ ನಟನೆಯ ಚಿತ್ರ. ಇದಕ್ಕೆ ತೆಲುಗು ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಇವರು ಇಟ್ಟಿರುವ ಹೆಸರು ‘ದಸರಾ’. ಮತ್ತೊಂದು ಅಪ್ಪಟ ಕನ್ನಡದ್ದೆ ಚಿತ್ರ. ನೀನಾಸಂ ಸತೀಶ್ ನಾಯಕನಾಗಿ ನಟಿಸುತ್ತಿರುವ ಚಿತ್ರ. ಈ ಸಿನಿಮಾಗೂ ‘ದಸರಾ’ ಎಂದೇ ಹೆಸರಿಡಲಾಗಿದೆ.

    ಎರಡೂ ಚಿತ್ರಗಳೂ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿವೆ. ಹೀಗಾಗಿ ಯಾರಿಗೆ ಈ ಟೈಟಲ್ ಉಳಿಯುತ್ತದೆ ಎನ್ನುವ ಚರ್ಚೆ ಶುರುವಾಗಿದೆ. ನೀನಾಸಂ ಸತೀಶ್ ನಟನೆಯ ‘ದಸರಾ’ ಸಿನಿಮಾದ ಶೂಟಿಂಗ್ ಈಗಾಗಲೇ ಕಂಪ್ಲಿಟ್ ಆಗಿದೆ. ತೆಲುಗಿನ ‘ದಸಾರ’ ಕೇವಲ ಫಸ್ಟ್ ಲುಕ್ ಮಾತ್ರ ಬಿಡುಗಡೆ ಮಾಡಿದೆ. ಹಾಗಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಯಾರ ಪರವಾಗಿ ನಿಲ್ಲುತ್ತದೆ ಎನ್ನುವ ಪ್ರಶ್ನೆ ಎದ್ದಿದೆ. ಇದನ್ನೂ ಓದಿ : ಸುದೀಪ್, ಉಪ್ಪಿ ಕಾಂಬಿನೇಷನ್ ‘ಕಬ್ಜ’ ಚಿತ್ರಕ್ಕೆ ಇಬ್ಬರು ದಕ್ಷಿಣ ತಾರೆಯರ ಎಂಟ್ರಿ

    ಯಾರೇ ಸಿನಿಮಾ ಮಾಡಲಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರನ್ನು ನೋಂದಾಯಿಸಬೇಕು ಎನ್ನುವ ನಿಯಮವಿದೆ. ಯಾರು ಮೊದಲು ಹೆಸರನ್ನು ನೋಂದಾಯಿಸಿಕೊಳ್ಳುತ್ತಾರೋ ಅವರಿಗೆ ಶೀರ್ಷಿಕೆಗಳು ಸಿಗುತ್ತವೆ. ‘ದಸರಾ’ ಸಿನಿಮಾವನ್ನು ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕಿ, ನಟಿ ಶರ್ಮಿಳಾ ಮಾಂಡ್ರೆ ನೋಂದಾಯಿಸಿಕೊಂಡಿದ್ದಾರೆ. ಹೀಗಾಗಿ ನಿಯಮದ ಪ್ರಕಾರ ಇದೇ ತಂಡಕ್ಕೆ ‘ದಸರಾ’ ಟೈಟಲ್ ಬಳಸಿಕೊಳ್ಳುವ ಹಕ್ಕಿದೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ನಾನಿ ನಟನೆಯ ತೆಲುಗಿನ ಸಿನಿಮಾ ಡಬ್ ಆಗಿ ಕನ್ನಡದಲ್ಲೂ ರಿಲೀಸ್ ಆಗಲಿದೆ. ಹಾಗಾಗಿ ಕನ್ನಡದಲ್ಲಿ ತಮ್ಮ ಸಿನಿಮಾದ ಟೈಟಲ್ ಅನ್ನು ಬದಲಿಸುವುದು ಅನಿವಾರ್ಯವಾಗಬಹುದು. ಅದನ್ನು ಸಿನಿಮಾ ತಂಡ ಒಪ್ಪಿಕೊಳ್ಳುತ್ತಾ ಅಥವಾ ಕಾನೂನಿನಲ್ಲಿ ಮತ್ತೊಂದು ದಾರಿಯೂ ಇದೆ. ಅದನ್ನು ಬಳಸಿಕೊಳ್ಳುತ್ತಾ ಅನ್ನುವುದು ಸದ್ಯಕ್ಕಿರುವ ಪ್ರಶ್ನೆ. ಇದನ್ನೂ ಓದಿ : ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿರುವ ಎಷ್ಟೋ ಶೀರ್ಷಿಕೆಯನ್ನು ಸೆನ್ಸಾರ್ ಮಂಡಳಿ ಒಪ್ಪಿಕೊಂಡಿಲ್ಲ. ಕೆಲವು ಬಾರಿ ಕೋರ್ಟಿಗೂ ಹೋಗಿ ತಮಗಿಷ್ಟದ ಟೈಟಲ್ ಪಡೆದುಕೊಂಡ ಉದಾಹರಣೆಯೂ ಇದೆ. ಯಾರ ಸಿನಿಮಾ ಮೊದಲು ಸೆನ್ಸಾರ್ ಆಗುತ್ತದೆಯೋ, ಆ ಟೈಟಲ್ ಗೆ ಮೊದಲ ಆದ್ಯತೆ ಎನ್ನುವ ಮತ್ತೊಂದು ನಿಯಮವಿದೆ. ಈ ಎಲ್ಲ ಗೊಂದಲಗಳ ಮಧ್ಯೆ ಯಾವ ಚಿತ್ರತಂಡಕ್ಕೆ ‘ದಸರಾ’ ಟೈಟಲ್ ಸಿಗುತ್ತದೆಯೋ ಕಾದು ನೋಡಬೇಕು.