Tag: Dasara Festival

  • ನಾಡಹಬ್ಬ ದಸರಾ ಸಂಭ್ರಮ – ಗಗನಕ್ಕೇರಿದ ಹೂವು, ಹಣ್ಣುಗಳ ಬೆಲೆ

    ನಾಡಹಬ್ಬ ದಸರಾ ಸಂಭ್ರಮ – ಗಗನಕ್ಕೇರಿದ ಹೂವು, ಹಣ್ಣುಗಳ ಬೆಲೆ

    • ಆಯೂಧ ಪೂಜೆಗೆ ಖರೀದಿ ಭರಾಟೆ ಜೋರು

    ಬೆಂಗಳೂರು: ದೇಶದೆಲ್ಲೆಡೆ ದಸರಾ (Dasara) ಸಂಭ್ರಮ ವಿಜೃಂಭಣೆಯಿಂದ ಸಾಗುತ್ತಿದ್ದು, ಬುಧವಾರ ಆಯುಧ ಪೂಜೆ ಹಿನ್ನೆಲೆ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ.

    ಸಿಲಿಕಾನ್ ಸಿಲಿಕಾನ್ ಜನರು ಆಯುಧ ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹಣ್ಣು, ಹೂವು ಸೇರಿದಂತೆ ಇನ್ನಿತರ ವಸ್ತುಗಳ ಖರೀದಿಗಾಗಿ ಮುಗಿಬಿದ್ದಿದ್ದಾರೆ. ಹಬ್ಬದ ಹಿನ್ನೆಲೆ ಹೂವು, ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ.ಇದನ್ನೂ ಓದಿ: Ayudha Puja 2025 | ವಿಜಯದಶಮಿ ಮುನ್ನಾದಿನ ಆಯುಧ ಪೂಜೆ ಆಚರಣೆ ಮಾಡುವುದೇಕೆ? ಈ ವರ್ಷ ಶುಭ ಮುಹೂರ್ತ ಯಾವಾಗ?

    ಯಾವುದೇ ಹಬ್ಬ ಬಂತೆಂದರೆ ಸಾಕು, ವಿವಿಧ ಬಗೆಯ ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗಾಗಿ ಜನರು ಮಾರ್ಕೆಟ್‌ಗೆ ಮುಗಿಬೀಳುತ್ತಾರೆ. ಅದರಂತೆ ವಸ್ತುಗಳ ಬೆಲೆಯೂ ದುಪ್ಪಟ್ಟಾಗಿದೆ.

    ಕೆ.ಜಿಗೆ                     ಇಂದಿನ ದರ             –         ಹಳೆಯ ದರ
    ಸೇವಂತಿ               300-400 ರೂ.                      50-60 ರೂ.
    ಕನಕಾಂಬರ           2000-2500 ರೂ.             1000-1500 ರೂ.
    ಮಲ್ಲಿಗೆ                   1500-2000 ರೂ.              700-1000 ರೂ.
    ಗುಲಾಬಿ                    400-450 ರೂ.                   200-250 ರೂ.
    ಕಾಕಡ                      800 ರೂ.                            600 ರೂ.
    ಬಾಳೆಕಂಬ ಜೋಡಿ    60-100ರೂ.                         30-40 ರೂ.
    ಕುಂಬಳಕಾಯಿ            50-60ರೂ                        20-30 ರೂ.

  • ರಾಜ, ರಾಜಕಾರಣಿಯಾಗಿ ಮೈಸೂರು ದಸರಾದಲ್ಲಿ ಭಾಗಿ – ಪರಂಪರೆ ಮುಂದುವರಿಸಿದ ಯದುವೀರ್

    ರಾಜ, ರಾಜಕಾರಣಿಯಾಗಿ ಮೈಸೂರು ದಸರಾದಲ್ಲಿ ಭಾಗಿ – ಪರಂಪರೆ ಮುಂದುವರಿಸಿದ ಯದುವೀರ್

    – ಸಂಸದರಾಗಿ ದಸರಾಗೆ ಸಾಕ್ಷಿಯಾಗಿದ್ದ ಶ್ರೀಕಂಠದತ್ತ ಒಡೆಯರ್
    – ಮೂರು ವರ್ಷ ಖಾಸಗಿ ದರ್ಬಾರ್ ನಡೆಸಲು ನಿರಾಕರಿಸಿದ್ದ ಜಯಚಾಮರಾಜ ಒಡೆಯರ್

    ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಅ.3 ರಂದು ಅದ್ಧೂರಿ ಚಾಲನೆ ಸಿಕ್ಕಿದೆ. ಸಾಂಸ್ಕೃತಿಕ ನಗರಿಯಲ್ಲಿ ವಿವಿಧ ಕಾರ್ಯಕ್ರಮಗಳು, ಮೇಳಗಳು ನಡೆಯುತ್ತಿವೆ. ಇದೇ ಅ.12 ರಂದು ಜಂಬೂಸವಾರಿ ನಡೆಯಲಿದೆ. ದಸರಾ ವೈಭವವನ್ನು ನೋಡಲು ದೇಶ-ವಿದೇಶಗಳಿಂದ ಜನರು ಮೈಸೂರಿಗೆ ಆಗಮಿಸುತ್ತಿದ್ದಾರೆ. ಅರಮನೆ, ರಾಜಮನೆತನವೇ ಕೇಂದ್ರವಾಗಿರುವ ಮೈಸೂರು ದಸರಾ ಈ ಬಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ವಿಶೇಷವಾದದ್ದು. ರಾಜನಾಗಿಯೂ, ಜನಪ್ರತಿನಿಧಿಯಾಗಿಯೂ ಎರಡು ಗುರುತರ ಜವಾಬ್ದಾರಿಗಳೊಂದಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿರುವುದು ಅವರ ಪಾಲಿಗೆ ವಿಶೇಷ.

    ಹಾಗಂತ ಇದೇನು ಹೊಸದಲ್ಲ. ಈ ಪರಂಪರೆಗೂ ಹಿನ್ನೆಲೆ ಇದೆ. ಮೈಸೂರು ಒಡೆಯರಿಗೂ ರಾಜಕೀಯಕ್ಕೂ ಅವಿನಾಭಾವ ಸಂಬಂಧ ಇದೆ. ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್ ಮತ್ತು ಅವರ ಪುತ್ರ ಶ್ರೀಕಂಠದತ್ತ ಚಾಮರಾಜ ಒಡೆಯರ್ ಕೂಡ ಜನಪ್ರತಿನಿಧಿಗಳೂ ಆಗಿ ದಸರಾಗೆ ಸಾಕ್ಷಿಯಾಗಿದ್ದರು. ಆ ಪರಂಪರೆಯನ್ನು ಯದುವೀರ್ ಅವರು ಮುಂದುವರಿಸಿದ್ದಾರೆ.

    ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್
    2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್ ಅವರು ಮೈಸೂರು-ಕೊಡಗು ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದರು. ಜಿದ್ದಾಜಿದ್ದಿನ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ವಿರುದ್ಧ 32ರ ಹರೆಯದ ಯುವರಾಜ 1,39,262 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದರು. ಈಗ ಸಂಸದರಾಗಿ ಜನಸೇವೆಯಲ್ಲಿ ತೊಡಗಿದ್ದಾರೆ. ಯದುವೀರ್ ಅವರು ಶ್ರೀಕಂಠದತ್ತ ಅವರಂತೆಯೇ ಮೊದಲ ಯತ್ನದಲ್ಲೇ ಲೋಕಸಭೆ ಪ್ರವೇಶಿಸಿದ್ದಾರೆ. ಇದಾದ ಕೆಲ ತಿಂಗಳಲ್ಲೇ ರಾಜ ಹಾಗೂ ಜನಪ್ರತಿನಿಧಿಯೂ ಆಗಿ ದಸರಾದಲ್ಲಿ ಪಾಲ್ಗೊಳ್ಳುವ ಸೌಭಾಗ್ಯವೂ ಯದುವೀರ್ ಅವರಿಗೆ ಲಭಿಸಿದೆ.

    10ನೇ ಖಾಸಗಿ ದರ್ಬಾರ್ ನಡೆಸಿದ ಯದುವೀರ್
    ಮೈಸೂರು ಅರಮನೆಯ ದರ್ಬಾರ್ ಅಂಗಳದಲ್ಲಿ ಶರನ್ನವರಾತ್ರಿ ಪ್ರಯುಕ್ತ ಗುರುವಾರ ರಾಜವಂಶಸ್ಥ ಯದುವೀರ್ ಒಡೆಯರ್ 10ನೇ ಬಾರಿಗೆ ಖಾಸಗಿ ದರ್ಬಾರ್ ನಡೆಸಿದರು. ಸಂಸದರಾದ ಬಳಿಕ ಇದೇ ಮೊದಲ ದರ್ಬಾರ್ ಆಗಿದೆ. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಒಂಟೆಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಅರಮನೆಯಲ್ಲಿ ಸಿಂಹಾಸನಾರೂಢರಾಗಿ ಖಾಸಗಿ ದರ್ಬಾರ್ ನಡೆಸಿದರು. ಪ್ರಮೋದಾದೇವಿ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್ ಹಾಗೂ ಆದ್ಯವೀರ ನರಸಿಂಹರಾಜ ಒಡೆಯರ್ ಕೂಡ ಪಾಲ್ಗೊಂಡಿದ್ದರು.

    ಶ್ರೀಕಂಠದತ್ತ ನರಸಿಂಹರಾಜ ಒಡೆಯರ್
    1974ರಲ್ಲಿ ತಂದೆ ಚಾಮರಾಜ ಒಡೆಯರ್ ಮರಣ ನಂತರ ಶ್ರೀಕಂಠದತ್ತ ಚಾಮರಾಜ ಒಡೆಯರ್ ಅವರು ಯದುವಂಶದ ಮುಖ್ಯಸ್ಥರಾದರು. 1974ರಿಂದ 2013ರ ವರೆಗೂ ಮೈಸೂರು ದಸರಾ ಸೇರಿದಂತೆ ರಾಜಮನೆತನದ ಸಾಂಪ್ರದಾಯಿಕ ಪದ್ಧತಿಗಳನ್ನು ಮುಂದುವರಿಸಿದರು. ಶ್ರೀಕಂಠದತ್ತರು ಕಾಂಗ್ರೆಸ್ ಪಕ್ಷದ ದೀರ್ಘಕಾಲದ ಸದಸ್ಯರಾಗಿದ್ದರು. 1984ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಸದರಾದರು. ಹೀಗೆ ನಾಲ್ಕು ಬಾರಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ಅವಧಿಯಲ್ಲಿ ಸಂಸದರಾಗಿ ಮೈಸೂರು ದಸರಾದಲ್ಲಿ ಪಾಲ್ಗೊಂಡಿದ್ದರು.

    yaduveer

    ಜಯಚಾಮರಾಜ ಒಡೆಯರ್
    ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್. ಇವರು 1940ರಿಂದ 1950ರ ವರೆಗೂ ರಾಜ್ಯಬಾರ ನಡೆಸಿದರು. 1950ರಲ್ಲಿ ಭಾರತವು ಗಣರಾಜ್ಯವಾದಾಗ ಮೈಸೂರು ರಾಜ್ಯದ ಪ್ರಮುಖರಾಗಿ 1956ರ ವರೆಗೂ ಸೇವೆ ಸಲ್ಲಿಸಿದರು. ಕರ್ನಾಟಕ ಸ್ಥಾಪನೆಯ ನಂತರ 1964 ರ ವರೆಗೂ ರಾಜ್ಯಪಾಲರಾಗಿದ್ದರು. ರಾಜ್ಯ ರಾಜಕೀಯ ವ್ಯವಸ್ಥೆಯಲ್ಲಿದ್ದುಕೊಂಡು ಚಾಮರಾಜ ಒಡೆಯರ್ ರಾಜಮನೆತನದ ಸಾಂಪ್ರದಾಯಿಕ ಪದ್ಧತಿಗಳನ್ನು ಮುಂದುವರಿಸಿದ್ದರು. ಈ ಅವಧಿಯಲ್ಲಿ ಮೈಸೂರು ದಸರಾಗೆ ಸಾಕ್ಷಿಯಾಗಿದ್ದರು.

    ಖಾಸಗಿ ದರ್ಬಾರ್ ತಿರಸ್ಕರಿಸಿದ್ದ ಮಹಾರಾಜ
    1970ರಲ್ಲಿ ಅಂದಿನ ಸರ್ಕಾರ ಮಹಾರಾಜ ಚಾಮರಾಜ ಒಡೆಯರ್ ಅವರಿಗಿದ್ದ ಅಧಿಕಾರ ಮೊಟಕುಗೊಳಿಸಿತ್ತು. ಇದರಿಂದ ಬೇಸರಗೊಂಡಿದ್ದ ಒಡೆಯರ್ 1971ರಲ್ಲಿ ದಸರಾ ಮಹೋತ್ಸವದಲ್ಲಿ ಖಾಸಗಿ ದರ್ಬಾರ್ ನಡೆಸದಿರಲು ತೀರ್ಮಾನಿಸಿದ್ದರು. 1971ರಿಂದ 73 ರ ವರೆಗೂ ರಾಜರು ಖಾಸಗಿ ದರ್ಬಾರ್‌ನಲ್ಲಿ ಪಾಲ್ಗೊಳ್ಳಲಿಲ್ಲ. ಈ ಅವಧಿಯಲ್ಲಿ ಸಿಂಹಾಸನದ ಮೇಲೆ ಪಟ್ಟದ ಕತ್ತಿ ಇಟ್ಟು ಖಾಸಗಿ ದರ್ಬಾರ್ ನಡೆಸಲಾಗಿತ್ತು. ಜಯಚಾಮರಾಜ ಒಡೆಯರ್ ನಿಧನರಾದ ಬಳಿಕ, ಯುವರಾಜನಾಗಿದ್ದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಪ್ರತಿ ವರ್ಷ ಖಾಸಗಿ ದರ್ಬಾರ್ ನಡೆಸಿದರು.

  • ವಿಜಯನಗರ ಸಾಮ್ರಾಜ್ಯದಿಂದ ಮೈಸೂರಿಗೆ ದಸರಾ ಸಾಗಿಬಂದ ಹಾದಿ – ನಾಡಹಬ್ಬ ಸಂಸ್ಕೃತಿ ನಿಮಗೆಷ್ಟು ಗೊತ್ತು?

    ವಿಜಯನಗರ ಸಾಮ್ರಾಜ್ಯದಿಂದ ಮೈಸೂರಿಗೆ ದಸರಾ ಸಾಗಿಬಂದ ಹಾದಿ – ನಾಡಹಬ್ಬ ಸಂಸ್ಕೃತಿ ನಿಮಗೆಷ್ಟು ಗೊತ್ತು?

    ಮೈಸೂರು ದಸರಾ ಮತ್ತೆ ಬಂದಿದೆ. ಕೇಡಿನ ವಿರುದ್ಧ ಒಳಿತಿನ ಜಯವೆಂಬ ‘ವಿಜಯದಶಮಿ’ ಇದು. ದಸರಾ ಮಹೋತ್ಸವ ಕರುನಾಡಿನ ಸಾಂಸ್ಕೃತಿಕ ಪರಂಪರೆಗೆ ಹಿಡಿದ ಕೈಗನ್ನಡಿ. ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯದ ಸಮ್ಮಿಶ್ರಣದೊಂದಿಗೆ ಕರ್ನಾಟಕದ ಶ್ರೀಮಂತ ಪರಂಪರೆ ನಾಡಹಬ್ಬದಲ್ಲಿ ಅನಾವರಣಗೊಳ್ಳುತ್ತದೆ. ರಾಜವೈಭೋಗ ಮರುಕಳುಸುತ್ತದೆ. ನವರಾತ್ರಿ ನವದುರ್ಗೆಯರ ಪೂಜೆ, ನಾಡ ಅಧಿದೇವತೆ ಚಾಮುಂಡೇಶ್ವರಿಯನ್ನು ಭಕ್ತಿ-ಭಾವದಿಂದ ಸ್ಮರಿಸಲಾಗುತ್ತದೆ. ದಸರಾಗೂ ನಾಡಿನ ಜನತೆಗೂ ಭಾವನಾತ್ಮಕ ನಂಟಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಜನರು ಬರುತ್ತಾರೆ.

    ದಸರಾ ಹಬ್ಬಕ್ಕೂ ಹಿನ್ನೆಲೆ, ಪರಂಪರೆ ಇದೆ. ದಸರಾ ಹಬ್ಬ ಮೊದಲು ಆರಂಭವಾಗಿದ್ದು ವಿಜಯನಗರ ಸಾಮ್ರಾಜ್ಯದಿಂದ. ಅಲ್ಲಿಂದ ಶ್ರೀರಂಗಪಟ್ಟಣ ಹಾಗೂ ಮೈಸೂರಿಗೆ ಬಂದಿತು. ಕೃಷ್ಣದೇವರಾಯ ಶಕ್ತಿ, ಸಾಮರ್ಥ್ಯದ ಆಧಾರದ ಮೇಲೆ ವಿಜಯದಶಮಿ ವಿಶ್ವವಿಖ್ಯಾತಿಯಾಯಿತು. ವಿಜಯದಶಮಿ ದಿನ ಕೃಷ್ಣದೇವರಾಯ ಕುದುರೆ ಮೇಲೆ ಕುಳಿತು ಜನಸ್ತೋಮದ ನಡುವೆ ಸಾಗುತ್ತಿದ್ದರೆ, ಆತನ ಸಾಮ್ರಾಜ್ಯದ ಸುತ್ತಲ ಆಸ್ತಿಕ ರಾಜರು ತಮ್ಮ ಸೈನ್ಯವನ್ನು ಕರೆತಂದು ನಮಸ್ಕರಿಸುತ್ತಿದ್ದರು ಎಂದು ಆಗಿನ ಪರ್ಷಿಯನ್ ರಾಯಭಾರಿ ಅಬ್ದುಲ್ ರಝಾಕ್ ಬರೆದುಕೊಂಡಿದ್ದಾರೆ. 14 ರಿಂದ 17ನೇ ಶತಮಾನದ ಮಧ್ಯಭಾಗದವರೆಗೆ ಸುಮಾರು 300 ವರ್ಷಗಳ ಕಾಲ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯು ಇತ್ತು. ಈ ಸಾಮ್ರಾಜ್ಯದ ಪದ್ಧತಿಗಳು, ಸಾಂಸ್ಕೃತಿಕ ಆಚರಣೆಗಳ ಪರಂಪರೆಯನ್ನು ಮೈಸೂರು ಒಡೆಯರು ಮುಂದುವರಿಸಿದರು.

    ಮೈಸೂರು ಒಡೆಯರ್‌ಗೆ ಬಂದಿದ್ದು ಹೇಗೆ?

    ಒಡೆಯರ್‌ಗಳು ವಿಜಯನಗರ ಅರಸರ ಸಾಮಂತರಾಗಿದ್ದರು. ವಿಜಯನಗರ ಸಾಮ್ರಾಜ್ಯದ ಪತನ ನಂತರ, ರಾಜ ಒಡೆಯರ್ 1610 ರಲ್ಲಿ ಶ್ರೀರಂಗಪಟ್ಟಣದಲ್ಲಿ ರಾಜಧಾನಿ ಮಾಡಿ ರಾಜತ್ವವನ್ನು ವಹಿಸಿಕೊಂಡರು. ಆ ಸಂದರ್ಭದಲ್ಲಿ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಬೇಕು ಎಂದು ಘೋಷಿಸಿದರು. 1799 ರಲ್ಲಿ 4ನೇ ಆಂಗ್ಲೋ-ಮೈಸೂರು ಯುದ್ಧದ ನಂತರ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ವರ್ಗಾಯಿಸಲಾಯಿತು. ಬಳಿಕ ಮುಮ್ಮಡಿ ಕೃಷ್ಣರಾಜ ಒಡೆಯರ್ ಈ ದಸರಾ ಹಬ್ಬ ಪರಂಪರೆಯನ್ನು ಮುಂದುವರಿಸಿದರು.

    1442-1443ರ ನಡುವೆ ವಿಜಯನಗರಕ್ಕೆ ಪರ್ಷಿಯಾದ ಅಬ್ದುಲ್ ರಝಾಕ್ ಮತ್ತು ಪೋರ್ಚುಗೀಸ್‌ನ ಡೊಮಿಂಗೊ ಫಯಾಸ್ (1520-22) ಭೇಟಿ ನೀಡಿದ್ದರು. ವಿಜಯನಗರದಲ್ಲಿ ನವರಾತ್ರಿ ಹಬ್ಬದ ವೈಭವವನ್ನು ತಮ್ಮ ಕೃತಿಗಳಲ್ಲಿ ಸೊಗಸಾಗಿ ವಿವರಿಸಿದ್ದಾರೆ. ರಾಜರು ನವರಾತ್ರಿ ಸಮಯದಲ್ಲಿ ಸಶಸ್ತ್ರ ಪಡೆಗಳ ಮೆರವಣಿಗೆ ವೀಕ್ಷಿಸುತ್ತಿದ್ದರು. ಈ ಆಚರಣೆ ಐತಿಹಾಸಿಕತೆಗೆ ಸಾಕ್ಷಿಯಾಗಿದೆ. ಕಾಲಾನಂತರ ಹಬ್ಬಗಳ ಆಚರಣೆ ಉದ್ದೇಶ ಬದಲಾಗಿದೆ. ಈಗ ನಾಡಹಬ್ಬ ಮೈಸೂರು ದಸರಾ ಪ್ರವಾಸೋದ್ಯಮ ಉತ್ತೇಜಿಸಲು ಒಂದು ಆಧಾರವಾಗಿದೆ.

    ಒಡೆಯರ ಸೇವೆ ಸ್ಮರಿಸುವ ಜನ!

    ನಾವೀಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ಆದರೂ ಮೈಸೂರು ಸಾಮ್ರಾಜ್ಯದ ಒಡೆಯರ್ ತಮ್ಮ ಪ್ರಜೆಗಳಿಗೆ ನೀಡಿದ ಸೇವೆಯನ್ನು ಜನ ಈಗಲೂ ಸ್ಮರಿಸುತ್ತಾರೆ. ಮೈಸೂರು ಎಂದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅಂತಾ ಈಗಲೂ ಕೊಂಡಾಡುತ್ತಾರೆ. ಆದ್ದರಿಂದ ದಸರಾ ಸಂದರ್ಭದಲ್ಲಿ ರಾಜಪರಂಪರೆಯನ್ನು ಬಿಂಬಿಸುವ ಖಾಸಗಿ ದರ್ಬಾರ್ ಕೂಡ ನಡೆಯಲಿದೆ. ದಸರಾ ಆಚರಣೆಗಳಲ್ಲಿ ಆಡಳಿತ ವ್ಯವಸ್ಥೆಯ ಪ್ರತಿನಿಧಿಗಳೊಂದಿಗೆ ರಾಜರೂ ಪಾಲ್ಗೊಳ್ಳುತ್ತಾರೆ.

    ದಸರಾಗೆ ಧಾರ್ಮಿಕ ನಂಟು

    ಮೈಸೂರು ದಸರಾವನ್ನು ತಾತ್ವಿಕ ಮತ್ತು ಧಾರ್ಮಿಕ ತಳಹದಿಯಲ್ಲೂ ನೋಡಬಹುದು. ಚಾಮುಂಡೇಶ್ವರಿ ದೇವಿಯು ರಾಕ್ಷಸ ಮಹಿಷಾಸುರನನ್ನು ಕೊಲ್ಲುವುದು ಕೆಡುಕಿನ ವಿರುದ್ಧ ಒಳಿತಿನ ವಿಜಯವನ್ನು ಸಂಕೇತಿಸುತ್ತದೆ. ಹೀಗಾಗಿ ಒಂಬತ್ತು ದಿನ ನಡೆಯುವ ಉತ್ಸವದಲ್ಲಿ ನವದುರ್ಗೆಯರ ಪೂಜೆ ಇರುತ್ತದೆ. ವಿಜಯದಶಮಿಯಂದು ಆನೆ ಹೊತ್ತ ಅಂಬಾರಿ ಮೇಲೆ ನಾಡದೇವಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಗುತ್ತದೆ. ಮೈಸೂರಿನ ಈ ಉತ್ಸವವು ಶಾಸ್ತ್ರೀಯ ಮತ್ತು ಜನಪದ ಸಂಪ್ರದಾಯಗಳನ್ನು ಪ್ರದರ್ಶಿಸಲು ಒಂದು ವೇದಿಕೆಯಾಗಿದೆ.

    ಮೈಸೂರು ಝಗಮಗ

    ದಸರಾ ಸಂದರ್ಭದಲ್ಲಿ ಮೈಸೂರು ನಗರ ಝಗಮಗಿಸುತ್ತದೆ. ಆಕರ್ಷಣೀಯ ಕೇಂದ್ರ ಅರಮನೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳು, ವೃತ್ತಗಳು ಮತ್ತು ಪಾರಂಪರಿಕ ಕಟ್ಟಡಗಳು ರಾತ್ರಿ ಸಮಯದಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತವೆ. ದೀಪಾಲಂಕಾರದಿಂದ ಕಂಗೊಳಿಸುವ ಸಾಂಸ್ಕೃತಿಕ ರಾಜಧಾನಿಯನ್ನು ನೋಡುವುದೇ ಚೆಂದ. ದಸರಾ ವೇಳೆ ರಾತ್ರಿ ಹೊತ್ತಿನಲ್ಲಿ ಮೈಸೂರನ್ನು ಸುತ್ತಿ ಪ್ರವಾಸಿಗರು ಪುಳಕಿತರಾಗುತ್ತಾರೆ. ಡಬಲ್ ಡೆಕ್ಕರ್, ಟಾಂಗಾ ಸವಾರಿ ಜನರಿಗೆ ವಿಶೇಷ ಅನುಭೂತಿ ನೀಡುತ್ತದೆ. ದೀಪಗಳಿಂದ ಅರಮನೆ ಕಂಗೊಳಿಸುವುದನ್ನು ನೋಡಲು ಎರಡು ಕಣ್ಣು ಸಾಲದು.

    ದಸರಾದಲ್ಲಿ ಏನಿರುತ್ತೆ?

    ಮೈಸೂರು ದಸರಾ ಎಂದರೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹೋತ್ಸವ. 9 ದಿನಗಳ ಕಾಲ ಧಾರ್ಮಿಕ ಆಚರಣೆಗಳು, ವಿವಿಧ ಕಾರ್ಯಕ್ರಮಗಳು ಜರುಗುತ್ತವೆ. ಅರಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗುತ್ತವೆ. ರಾಜರ ಖಾಸಗಿ ದರ್ಬಾರ್ ಕೂಡ ನಡೆಯುತ್ತದೆ. ದಸರಾ ಆನೆಗಳು ಸಹ ಇದರಲ್ಲಿ ಪಾಲ್ಗೊಳ್ಳಲಿವೆ. ಯುವಜನರಿಗಾಗಿ ಯುವದಸರಾ, ಯುವಸಂಭ್ರಮದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರವಾಸಿಗರನ್ನು ಸೆಳೆಯಲು ಫಲಪುಷ್ಪ ಪ್ರದರ್ಶನ, ಆಹಾರ ಮೇಳಗಳು ನಡೆಯುತ್ತವೆ. ಮನೆ ಮನೆಯಲ್ಲೂ ಗೊಂಬೆಗಳನ್ನು ಕೂರಿಸಿ ಜನ ದಸರಾ ಆಚರಿಸುತ್ತಾರೆ. ಕಲಾಸಕ್ತರನ್ನು ಆಕರ್ಷಿಸಲು ಚಲಚಿತ್ರೋತ್ಸವ, ಅರಮನೆಯಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಜರುಗುತ್ತವೆ.

    ಜಂಬೂಸವಾರಿ ಎಂಬ ಆಕರ್ಷಣೆ

    ವಿಶ್ವವಿಖ್ಯಾತ ದಸರಾ ಕೇಂದ್ರಬಿಂದು ಎಂದರೆ ಅದು ಜಂಬೂಸವಾರಿ. ದಸರಾ ಆನೆಗಳನ್ನು ಸಿಂಗರಿಸಿ, ಅಲಂಕರಿಸಿದ ಚಿನ್ನದಂಬಾರಿಯನ್ನು ಗಜಪಡೆಯ ಕ್ಯಾಪ್ಟನ್ ಮೇಲೆ ಹೊರಿಸಲಾಗುತ್ತದೆ. ಅಂಬಾರಿಯಲ್ಲಿ ಅಲಂಕಾರಭೂಷಿತಳಾಗಿ ದೇವಿ ಚಾಮುಂಡೇಶ್ವರಿ ವಿರಾಜಮಾನಳಾಗುತ್ತಾಳೆ. ಚಿನ್ನದಂಬಾರಿ ಹೊತ್ತ ಗಜಪಡೆ ಸಾಲಾಗಿ ಅರಮನೆಯಿಂದ ಬನ್ನಿಮಂಪಟದ ವರೆಗೆ ಸಾಗುವ ಮೆರವಣಿಗೆ ಸಾಗುತ್ತದೆ. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಪ್ರಾದೇಶಿಕ ಪರಂಪರೆಯನ್ನು ಬಿಂಬಿಸುವ ಸ್ತಬ್ದಚಿತ್ರಗಳು ಇರುತ್ತವೆ. ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಜನ ಹಿಂದಿನ ದಿನವೇ ಬಂದು ಮೆರವಣಿಗೆ ಮಾರ್ಗದುದ್ದಕ್ಕೂ ಕಾದು ಕುಳಿತಿರುತ್ತಾರೆ. ಬಿಸಿಲು, ಮಳೆಯನ್ನೂ ಲೆಕ್ಕಿಸದೇ ಮೆರವಣಿಗೆ ವೀಕ್ಷಿಸುತ್ತಾರೆ.

  • Navratri 2023: ನವರಾತ್ರಿಗೆ ನವರಂಗು – ಒಂದೊಂದು ಬಣ್ಣದಲ್ಲೂ ಅಡಗಿದೆ ದುರ್ಗೆಯ ಶಕ್ತಿ

    Navratri 2023: ನವರಾತ್ರಿಗೆ ನವರಂಗು – ಒಂದೊಂದು ಬಣ್ಣದಲ್ಲೂ ಅಡಗಿದೆ ದುರ್ಗೆಯ ಶಕ್ತಿ

    ದೇಶಾದ್ಯಂತ ವಿವಿಧೆಡೆ ವಿವಿಧ ರೀತಿಯಲ್ಲಿ ನವರಾತ್ರಿ ಹಬ್ಬ (Navaratri Festival) ಆಚರಿಸಲಾಗುತ್ತದೆ. 9 ದಿನಗಳ ಕಾಲ ಆಚರಿಸುವ ಪ್ರಮುಖ ಹಿಂದೂ ಹಬ್ಬಗಳಲ್ಲಿ ಇದೂ ಒಂದು. ಆ 9 ದಿನಗಳು ನವದುರ್ಗೆಯರಿಗೆ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗುತ್ತವೆ. ಎಲ್ಲೆಲ್ಲೂ ರಂಗುರಂಗಾದ ಬಣ್ಣಗಳು ಹಬ್ಬದಲ್ಲಿ ಮೇಳೈಸುತ್ತವೆ. ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿರುತ್ತವೆ. ನವರಾತ್ರಿಯ 9 ಬಣ್ಣಗಳ ವಿಶೇಷತೆ ಏನು ಎಂಬುದನ್ನು ಯೋಚಿಸಿದ್ದೀರಾ? ಹೌದು, ನವರಾತ್ರಿಯ 9 ಬಣ್ಣಗಳಿಗೆ ಒಂದೊಂದು ಅರ್ಥವಿದೆ. ಆ ಒಂದೊಂದು ಬಣ್ಣಗಳು ನವದುರ್ಗೆಯರನ್ನು ಪ್ರತಿನಿಧಿಸುತ್ತವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ…..

    ಮೊದಲ ದಿನ
    ನವರಾತ್ರಿಯ ಮೊದಲ ದಿನ ಹಳದಿ ಬಣ್ಣದ ಸಂಕೇತವಾಗಿರುತ್ತದೆ. ಪರ್ವತಗಳ ತಾಯಿ ಶೈಲಪುತ್ರಿಯನ್ನು ಈ ಬಣ್ಣ ಪ್ರತಿನಿಧಿಸುತ್ತದೆ. ತಾಯಿ ಶೈಲಪುತ್ರಿ ದೇವಿಯು ಪರಿಸರದ ತಾಯಿಯಾಗಿದ್ದು ಶಕ್ತಿ ಸ್ವರೂಪಿಣಿ ಕೂಡ ಹೌದು. ಹಳದಿಯು ಉಜ್ವಲತೆ, ಖುಷಿ ಮತ್ತು ಉತ್ಸಾಹದ ಸಂಕೇತ. ನವರಾತ್ರಿಯ ಶುಭಾರಂಭಕ್ಕೆ ಹಳದಿಯು ಒಂದು ಶಕ್ತಿಯಾಗಿದೆ.

    2ನೇ ದಿನ
    ನವರಾತ್ರಿಯ 2ನೇ ದಿನವು ಬ್ರಹ್ಮಚಾರಿಣಿ ಮಾತೆಗೆ ಅರ್ಪಣೆ. ಪಾರ್ವತಿಯಾಗಿ ಹಿಮಾಲಯನ ಪುತ್ರಿಯಾಗಿ ಜನಿಸಿದ ದೇವಿಯು ಶಿವನನ್ನು ಪತಿಯಾಗಿ ಪಡೆಯಲು ನಾರದರ ಉಪದೇಶದಂತೆ ಕಠಿಣ ತಪಸ್ಸನ್ನು ಮಾಡುತ್ತಾಳೆ. ಕಠಿಣ ತಪಸ್ಸು ಮಾಡಿದ್ದರಿಂದ ದೇವಿಗೆ ತಪಶ್ಚಾರಿಣೀ ಅರ್ಥಾತ್‌ ಬ್ರಹ್ಮಚಾರಿಣೀ ಎನ್ನುವ ಹೆಸರು ಬಂತು. ಬ್ರಹ್ಮಚಾರಿಣಿಯ ತಪಸ್ಸಿಗೆ ಮೆಚ್ಚಿ ಶಿವನು ಒಲಿಯುತ್ತಾನೆ. ಈ ದಿನ ಬಿಳಿ ಬಣ್ಣದ ಸಂಕೇತವಾಗಿದೆ. ಶ್ವೇತ ವರ್ಣವು ಶಾಂತಿಯನ್ನು ಸೂಚಿಸುತ್ತದೆ.

    3ನೇ ದಿನ
    ನವರಾತ್ರಿಗಳಲ್ಲಿ ಬರುವ 9 ವರ್ಣಗಳಲ್ಲಿ ಕೆಂಪು ಬಣ್ಣ ಅತ್ಯಂತ ಶಕ್ತಿಶಾಲಿ. ಈ ದಿನದಂದು ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಪ್ರಕಾಶಮಾನವಾದ ಕೆಂಪು ಹೂವುಗಳಿಂದ ಮನೆಯನ್ನು ಅಲಂಕರಿಸಬಹುದು. ಜೊತೆಗೆ ಕೆಂಪು ಬಣ್ಣದ ಹಣ್ಣುಗಳನ್ನ ಪ್ರಸಾದವಾಗಿ ಅರ್ಪಿಸಬೇಕು. ಕೆಂಪು ಬಣ್ಣವು ಕೋಪದ ಸಂಕೇತ.

    4ನೇ ದಿನ
    ಕೂಷ್ಮಾಂಡ ದೇವಿಗೆ ನವರಾತ್ರಿಯ 4ನೇ ದಿನ ಅರ್ಪಣೆ. ಅಂದು ನೀಲಿ ಬಣ್ಣದ ಬಟ್ಟೆ ಧರಿಸಬೇಕು. ಈ ವರ್ಣವನ್ನು ಕೂಷ್ಮಾಂಡ ದುರ್ಗಾದೇವಿ ಮೆಚ್ಚಿಸಲು ಬಳಸಲಾಗುತ್ತದೆ. ನವರಾತ್ರಿಯಲ್ಲಿ ನೀಲಿ ಬಣ್ಣದ ಬಟ್ಟೆ ಧರಿಸಿ ದೇವಿಯನ್ನ ಪೂಜಿಸುವುದರಿಂದ ಆರೋಗ್ಯ, ಆಯಸ್ಸು, ಸಂಪತ್ತು ಲಭಿಸುತ್ತದೆ ಅನ್ನುವುದು ನಂಬಿಕೆ.

    5ನೇ ದಿನ
    ನವರಾತ್ರಿಯ 5ನೇ ದಿನವು ತಾಯಿ ಸ್ಕಂದಮಾತೆಗೆ ಅರ್ಪಣೆ. ಕಾರ್ತಿಕೇಯ ಅಥವಾ ಸ್ಕಂದನ ತಾಯಿಯೇ ಸ್ಕಂದ ಮಾತೆ. ಯುದ್ಧದ ಸಮಯದಲ್ಲಿ ಪೂಜಿಸುವ ದೇವಿ ಇವಳು. ಕೇಸರಿ ಬಣ್ಣವು ಖುಷಿ ಹಾಗೂ ಶಕ್ತಿಯ ಸಂಕೇತವಾಗಿರುವುದರಿಂದ ಅಂದು ಕೇಸರಿ ಬಣ್ಣವನ್ನು ಬಳಸಿದರೆ ಒಳಿತು.

    6ನೇ ದಿನ
    ನವರಾತ್ರಿಯ 6ನೇ ದಿನವು ಕಾತ್ಯಾಯನಿ ದೇವಿಗೆ ಮೀಸಲು. ಈ ದೇವಿಯ ಪ್ರಕಾಶಮಾನವಾದ ನಗುವು ಸೂರ್ಯನಿಗೆ ಭೂಮಿಯನ್ನು ಬೆಳಗುವ ಶಕ್ತಿ ನೀಡುತ್ತದೆ. ಸೂರ್ಯನು ಜೀವಂತವಾಗಿರುವಂತೆ ಈ ತಾಯಿ ನೋಡಿಕೊಳ್ಳುತ್ತಾಳೆ ಎಂಬ ನಂಬಿಕೆಯಿದೆ. ಅಂದು ಹಸಿರು ಬಣ್ಣದ ಬಟ್ಟೆ ಧರಿಸಬೇಕು. ಹಸಿರು ಪ್ರಕೃತಿ, ಶಕ್ತಿ, ಪರಿಸರ ಹಾಗೂ ಬೆಳವಣಿಗೆಯ ಸಂಕೇತ.

    7ನೇ ದಿನ
    ನವರಾತ್ರಿಯ 7ನೇ ದಿನವನ್ನು ತಾಯಿ ಕಾಳರಾತ್ರಿಗೆ ಅರ್ಪಿಸಲಾಗುತ್ತದೆ. ಅಂದು ಬೂದು ಬಣ್ಣ ಹೆಚ್ಚು ಸೂಕ್ತ. ಬೂದು ಬಣ್ಣವು ನಮ್ಮ ಮನಸ್ಸಿನ ಭಾವನೆಗಳ ಸಂಕೇತವಾಗಿದೆ. ಮನಸ್ಸಿನಲ್ಲಿರುವ ಕೆಟ್ಟ ವಿಷಯಗಳನ್ನು ತಾಯಿ ತೊಡೆದುಹಾಕುತ್ತಾಳೆ ಎಂಬುದು ಭಕ್ತರ ನಂಬಿಕೆ.

    8ನೇ ದಿನ
    ನವರಾತ್ರಿ 8ನೇ ದಿನ ತಾಯಿ ಮಹಾಗೌರಿಗೆ ಮೀಸಲಾಗಿದೆ. ಮಹಾಗೌರಿ ಆಧ್ಯಾತ್ಮಿಕ ಶಕ್ತಿಯೊಂದಿಗೆ ಜನರನ್ನು ಆಶೀರ್ವದಿಸುತ್ತಾಳೆ ಎಂಬ ನಂಬಿಕೆ ಇಂದಿಗೂ ಭಕ್ತರಲ್ಲಿ ಇದೆ. ಅಂದು ದೇವಿಗೆ ಪ್ರಿಯವಾದ ಗುಲಾಬಿ ಬಣ್ಣ ಧರಿಸುವುದು ಒಳಿತು. ಗುಲಾಬಿ ಬಣ್ಣವು ಶಾಂತಿ ಮತ್ತು ಬುದ್ಧಿವಂತಿಕೆಯ ಬಣ್ಣವಾದ್ದರಿಂದ ಅಂದು ದೇವಿ ಅಲಂಕಾರಕ್ಕೆ ಬಳಸಲಾಗುತ್ತದೆ.

    9ನೇ ದಿನ
    ನವರಾತ್ರಿಯ 9ನೇ ದಿನವು ತಾಯಿ ಸಿದ್ಧಿಧಾತ್ರಿಗೆ ಅರ್ಪಣೆ. ದೇವಿಯು ಜ್ಞಾನವನ್ನು ಕರುಣಿಸುತ್ತಾಳೆ. ಜೊತೆಗೆ ನಮ್ಮೆಲ್ಲರ ಗುರಿ ಮುಟ್ಟಲು ನೆರವಾಗುತ್ತಾಳೆ. ಅಂದು ದೇವಿಗೆ ಪ್ರಿಯವಾದ ನೇರಳೆ ಬಣ್ಣ ಧರಿಸಬೇಕು. ನೇರಳೆ ಬಣ್ಣವು ಆಕಾಂಕ್ಷೆಗಳ ಹಾಗೂ ಶಕ್ತಿಯ ಸಂಕೇತವಾಗಿರುತ್ತದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೆ.26ರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ

    ಸೆ.26ರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ

    ಮೈಸೂರು: ಇದೇ ಸೋಮವಾರದಿಂದ ವಿಶ್ವವಿಖ್ಯಾತ ಮೈಸೂರು (Mysuru) ದಸರಾ ಮಹೋತ್ಸವ (Dasara festival) ಉದ್ಘಾಟನೆಯಾಗಲಿದೆ. ಇದೇ ಮೊದಲ ಬಾರಿಗೆ ರಾಷ್ಟ್ರಪತಿಯೊಬ್ಬರು ದಸರಾ ಉದ್ಘಾಟನೆ ಮಾಡುತ್ತಿರುವುದು ವಿಶೇಷ.

    ಸೆಪ್ಟೆಂಬರ್ 26 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ದಸರಾ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರಪತಿ ಅವರನ್ನು ಸ್ವಾಗತಿಸಲು ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಾರ್ಯಕ್ರಮದ ವಿವರ ಬಿಡುಗಡೆ ಮಾಡಿದೆ. ಇದನ್ನೂ ಓದಿ : 11 ಮಂದಿ ಮಕ್ಕಳಿದ್ರೂ ತಾಯಿಗೆ ಊಟ ಹಾಕುವವರಿಲ್ಲ- ದಯಾಮರಣಕ್ಕೆ ಮನವಿ ಸಲ್ಲಿಸಿದ ವೃದ್ಧೆ

    ಸೆಪ್ಟೆಂಬರ್ 6 ರಂದು ಸೋಮವಾರ ಬೆಳಗ್ಗೆ 6:15ಕ್ಕೆ ರಾಷ್ಟ್ರಪತಿ ಅವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಹೊರಟು ನೇರವಾಗಿ ಬೆಳಗ್ಗೆ 9 ಗಂಟೆಗೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ (Mandakalli Airport) ಆಗಮಿಸಲಿದ್ದಾರೆ. ಬಳಿಕ ಅಲ್ಲಿಂದ ನೇರವಾಗಿ ಚಾಮುಂಡಿಬೆಟ್ಟಕ್ಕೆ (Chamundi Hills) ತಲುಪಿ, ಬೆಳಗ್ಗೆ 10ಕ್ಕೆ ನಾಡದೇವತೆ ಚಾಮುಂಡೇಶ್ವರಿಗೆ (Chamundeshwari) ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಮಹೋತ್ಸವದ ಉದ್ಘಾಟನೆ ನೆರವೇರಿಸಲಿದ್ದಾರೆ. ನಂತರ ಬೆಳಗ್ಗೆ 11:15ಕ್ಕೆ ಮೈಸೂರಿನಿಂದ ಹುಬ್ಬಳ್ಳಿಗೆ (Hubballi) ಪ್ರಯಾಣ ಮಾಡಲಿದ್ದಾರೆ. ಇದನ್ನೂ ಓದಿ : ಉತ್ಸವ ಮೂರ್ತಿಯ ಗುಜ್ಜುಕೋಲನ್ನು ಮುಟ್ಟಿದ್ದಕ್ಕೆ ದಲಿತ ಕುಟುಂಬದ ಮೇಲೆ ದೌರ್ಜನ್ಯ – 8 ಮಂದಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಹಬ್ಬದಂದು ಹಳೆಯ ಫೋಟೋ ಹಂಚಿಕೊಂಡ ರಮ್ಯಾ- ಅಭಿಮಾನಿಗಳು ಹೇಳಿದ್ದೇನು?

    ಹಬ್ಬದಂದು ಹಳೆಯ ಫೋಟೋ ಹಂಚಿಕೊಂಡ ರಮ್ಯಾ- ಅಭಿಮಾನಿಗಳು ಹೇಳಿದ್ದೇನು?

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಮೋಹಕ ತಾರೆ ರಮ್ಯಾ ಸಿನಿಮಾದಿಂದ ದೂರ ಉಳಿದಿದ್ದಾರೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ದಸರಾ ಹಬ್ಬಕ್ಕೆ ಕ್ಯೂಟ್ ಆಗಿರುವ ಫೋಟೋವನ್ನು ಹಂಚಿಕೊಳ್ಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ದಸರಾ ಅಥವಾ ದೀಪಾವಳಿ ಹಬ್ಬಕ್ಕೆ ಈ ಫೋಟೋಶೂಟ್ ಮಾಡಿಸಿದ್ದೇವಾ ಎಂದು ನನಗೆ ಸರಿಯಾಗಿ ನೆನೆಪು ಆಗುತ್ತಿಲ್ಲ. 2016 ರಲ್ಲಿ ತೆಗೆದಿರುವ ಫೋಟೋ ಎನ್ನಿಸುತ್ತದೆ. ನನಗೆ ಯಾವಾಗ ಎಂದು ಸರಿಯಾಗಿ ಗೊತ್ತಾಗುತ್ತಿಲ್ಲ ಎಂದು ಬರೆದುಕೊಂಡು ಅವರು 2016ರಲ್ಲಿ ತೆಗೆಸಿರುವ ಮುದ್ದಾದ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಭರ್ಜರಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ:   ತಾಯಿ ಆಗಲು ಸಮಂತಾ ಬಯಸಿದ್ರು-ನಿರ್ದೇಶಕರ ಪುತ್ರಿ ಬಿಚ್ಚಿಟ್ಟರು ವಿಚ್ಛೇದನದ ಗುಟ್ಟು

     

    View this post on Instagram

     

    A post shared by Ramya/Divya Spandana (@divyaspandana)

    ವಾಸುಕಿ ವೈಭವ್, ಅದ್ವಿತಿ ಶೆಟ್ಟಿ, ಚೈತ್ರಾ ರೈ ಸೇರಿದಂತೆ ಹಲವು ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಕ್ಯೂಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ರಮ್ಯಾ ಅವರು ಸಿನಿಮಾದಿಂದ ದೂರವಾಗಿ ಹಲವು ವರ್ಷ ಕಳೆದಿದೆ. ಆದರೆ ಇವರ ಅಭಿಮಾನಿಗಳ ಬಳಗ ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ. ಪದ್ಮಾವತಿಯನ್ನು ತೆರೆ ಮೇಲೆ ನೋಡಲು ಸಿನಿಮಾ ಅಭಿಮಾನಿಗಳು ಕಾತುರರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು.

    ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದಾರೆ. ಅವರನ್ನು ಮತ್ತೆ ತೆರೆಮೇಲೆ ನೋಡಬೇಕು ಎಂದು ಅಪಾರ ಸಂಖ್ಯೆಯ ಅಭಿಮಾನಿಗಳ ಬಳಗ ಕಾಯುತ್ತಿದೆ. ಆದರೂ ಕೂಡ ಅವರು ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಆದರೆ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕ ಘಟನೆಗಳಿಗೆ ಅವರು ಪ್ರತಿಕ್ರಿಯೆ ನೀಡುತ್ತಾ ಅಭಿಮಾನಿಗಳ ಜೊತೆಯಲ್ಲಿ ನಿರಂತರ ಸಂಪರ್ಕದಲ್ಲಿ ಇರುತ್ತಾರೆ.

  • ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ ಚಂದ್ರಶೇಖರ್ ಶ್ರೀ

    ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ ಚಂದ್ರಶೇಖರ್ ಶ್ರೀ

    ಚಿಕ್ಕೋಡಿ: ದಸರಾ ಉತ್ಸವದಲ್ಲಿ 9 ದಿನ ಆದಿಶಕ್ತಿ ದುರ್ಗಾಮಾತೆಗೆ ವಿಭಿನ್ನದ ಜೊತೆಗೆ ವಿಶೇಷವಾಗಿ ಪೂಜೆ ಮಾಡುವುದು ವಾಡಿಕೆ. ಆದರೆ ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ನಮ್ಮನ್ನ ಕಾಪಾಡುವ ದುರ್ಗಾಮಾತೆಯರು ಎಂದು ಪೌರ ಕಾರ್ಮಿಕ ಮಹಿಳೆಯರಿಗೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಪೂಜೆ ಸಲ್ಲಿಸಿ ಮಾದರಿಯಾಗಿದ್ದಾರೆ.

    ಉತ್ತರ ಕರ್ನಾಟಕದಲ್ಲೆ ಭಾವೈಕ್ಯತೆಯ ಸಂಕೇತವಾಗಿ ಅದ್ದೂರಿಯಾಗಿ ಆಚರಿಸುವ ಹುಕ್ಕೇರಿ ಹಿರೇಮಠದ ದಸರಾ ಉತ್ಸವದಲ್ಲಿ ಪೌರ ಕಾರ್ಮಿಕ ಮಹಿಳೆಯರಿಗೆ ವಿಶೇಷವಾಗಿ ಗೌರವ ಸಲ್ಲಿಸಲಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು ಪೌರ ಕಾರ್ಮಿಕ ಮಹಿಳೆಯರಿಗೆ ಉಡಿ ತುಂಬಿ, ದೀಪ ಬೆಳಗಿ ವಿಶೇಷವಾದ ಪೂಜೆ ಸಲ್ಲಿಸಿದರು. ಸ್ವಾಮೀಜಿ ಅವರಿಗೆ ವಿಧಾನಸಭೆಯ ಉಪಸಭಾಪತಿ ಆನಂದ್ ಮಾಮನಿ, ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ದಂಪತಿ ಸಾಥ್ ನೀಡಿದರು. ಇದನ್ನೂ ಓದಿ: ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಟಾಂಗಾದಲ್ಲಿ ಆಗಮಿಸಿದ ಸೋಮಶೇಖರ್

    ನಗರವನ್ನು ಸ್ವಚ್ಛಂದವಾಗಿಡುವ ಮಹಿಳಾ ಪೌರ ಕಾರ್ಮಿಕರಿಗೆ ಹಾಗೂ ಪುರುಷ ಪೌರ ಕಾರ್ಮಿಕರ ಪತ್ನಿಯರಿಗೆ ಈ ಸಂದರ್ಭದಲ್ಲಿ ಪೂಜೆ ಸಲ್ಲಿಸಲಾಯಿತು. ಸೀರೆ ನೀಡಿ, ಉಡಿ ತುಂಬುವದರ ಜೊತೆಗೆ ಆರತಿ ಮಾಡಿ ವಿಶೇಷವಾದ ಗೌರವ ನೀಡಲಾಯಿತು. ಕೊರೊನಾ ಮಹಾಮಾರಿ ಸಂದರ್ಭದಲ್ಲಿ ನಗರ ಹಾಗೂ ಗ್ರಾಮಗಳನ್ನು ಸ್ವಚ್ಛವಾಗಿಟ್ಟು, ಜನರ ಆರೋಗ್ಯವನ್ನ ಕಾಪಾಡಿದ ಪೌರ ಕಾರ್ಮಿಕರಿಗೆ ಈ ರೀತಿಯಾದ ಸನ್ಮಾನ ಮಾಡಿದ ಕಾರ್ಯವನ್ನು ವಿಧಾನಸಭೆಯ ಉಪಸಭಾಪತಿ ಶ್ಲಾಘಿಸಿದರು.

    ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಗುರುತಿಸಿ ದಸರೆಯ ಸಂದರ್ಭದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿ, ಗೌರವ ಸಲ್ಲಿಸಿದ ಹುಕ್ಕೇರಿ ಹಿರೇಮಠದ ಕಾರ್ಯಕ್ಕೆ ಸಾರ್ವಜನಿಕ ಪ್ರಶಂಸೆ ವ್ಯಕ್ತವಾಗುವುದರ ಜೊತೆಗೆ ರಾಜ್ಯದ ವಿವಿಧ ಮಠಾಧೀಶರಿಗೆ ಹುಕ್ಕೇರಿ ಶ್ರೀಗಳ ಕಾರ್ಯ ಮಾದರಿಯಾಗಿದೆ. ಇದನ್ನೂ ಓದಿ: 550 ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ವ್ಯಕ್ತಿ – ವೀಡಿಯೋ ವೈರಲ್

  • ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ

    ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡುವ 6ನೇ ಅವತಾರ ಕಾತ್ಯಾಯನೀ

    ಗನ್ಮಾತೆ ದುರ್ಗೆಯ ಆರನೇ ಸ್ವರೂಪದ ಹೆಸರು ಕಾತ್ಯಾಯನೀ. ಕಾತ್ಯಾಯನೀ ಹೆಸರು ಬರಲು ಒಂದು ಪುರಾಣ ಕಥೆಯಿದೆ. ಭಗವತಿಯೂ ತನ್ನ ಪುತ್ರಿಯ ಅವತಾರದಲ್ಲಿ ಜನಿಸಬೇಕೆಂದು ಕಾತ್ಯಯನ ಮಹರ್ಷಿ ಹಲವು ವರ್ಷಗಳ ಕಾಲ ಕಠಿಣ ತಪಸ್ಸನ್ನು ಆಚರಿಸಿದ್ದರು. ಕಾತ್ಯಯನ ಭಕ್ತಿಗೆ ಮೆಚ್ಚಿ ಭಗವತಿಯು ಅವರ ಈ ಪ್ರಾರ್ಥನೆಯನ್ನು ನಡೆಸಿಕೊಟ್ಟಳು.

    ಕೆಲ ಕಾಲಾಂತರದಲ್ಲಿ ಭೂಮಿಯಲ್ಲಿ ಮಹಿಷಾಸುರನ ಉಪಟಳ ಹೆಚ್ಚಾಗತೊಡಗಿತು. ಈ ಸಮಯದಲ್ಲಿ ಬ್ರಹ್ಮ, ವಿಷ್ಣು, ಈಶ್ವರ ಮತ್ತು ಎಲ್ಲ ದೇವತೆಗಳು ತಮ್ಮ-ತಮ್ಮ ತೇಜದ ಅಂಶವನ್ನಿತ್ತು ಮಹಿಷಾಸುರನ ವಿನಾಶಕ್ಕಾಗಿ ಓರ್ವ ದೇವಿಯನ್ನು ಸೃಷ್ಟಿಸಿದರು. ಬಳಿಕ ಆ ದೇವಿಯನ್ನು ಮಹರ್ಷಿ ಕಾತ್ಯಾಯನರು ಮೊಟ್ಟಮೊದಲ ಬಾರಿಗೆ ಪೂಜೆ ಮಾಡಿದರು. ಭಾದ್ರಪದ ಕೃಷ್ಣ ಚತುದರ್ಶಿಯಂದು ಆಶ್ವೀನ ಶುಕ್ಲ ಸಪ್ತಮಿ, ಅಷ್ಟಮಿ, ನವಮಿಯವರೆಗೆ ಮೂರು ದಿನ ಕಾತ್ಯಾಯನ ಋಷಿಯ ಪೂಜೆಯನ್ನು ಸ್ವೀಕರಿಸಿ ನಂತರ ದಶಮಿಯಂದು ಮಹಿಷಾಸುರನ್ನು ದೇವಿ ಸಂಹರಿಸಿದ್ದಳು. ಕಾತ್ಯಾಯನರು ಮೊದಲ ಪೂಜೆ ಮಾಡಿದ ಹಿನ್ನೆಲೆಯಲ್ಲಿ ದೇವಿಯನ್ನು ಕಾತ್ಯಾಯನೀ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

    ಭಗವಾನ್ ಕೃಷ್ಣನನ್ನು ಪತಿಯಾಗಿ ಪಡೆಯಲು ಗೋಪಿಕೆಯರು ಕಾಳಿಂದಿ-ಯಮುನೆಯ ತೀರದಲ್ಲಿ ಕಾತ್ಯಾಯನಿಯನ್ನು ಪೂಜಿಸಿದ್ದರು. ಇವಳು ವ್ರಜಮಂಡಲದ ಅಧಿಷ್ಠಾತ್ರಿ ದೇವಿಯಾಗಿ ಪ್ರತಿಷ್ಠಿತವಾಗಿದ್ದಾಳೆ. ಇವಳ ಸ್ವರೂಪವು ಅತ್ಯಂತ ಭವ್ಯ ಹಾಗೂ ದಿವ್ಯವಾಗಿದೆ. ಇವಳ ಬಣ್ಣವು ಬಂಗಾರದಂತೆ ಹೊಳೆಯುತ್ತದೆ. ಇವಳಿಗೆ ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಕೈಯು ಅಭಯ ಮುದ್ರೆಯಲ್ಲಿದೆ, ಕೆಳಗಿನ ಕೈಯು ವರಮುದ್ರೆಯಲ್ಲಿದೆ, ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವಿದೆ, ಕೆಳಗಿನ ಕೈಯಲ್ಲಿ ಕಮಲಪುಷ್ಪವಿದ್ದು ಇವಳ ವಾಹನ ಸಿಂಹವಾಗಿದೆ. ಇದನ್ನೂ ಓದಿ: ನವರಾತ್ರಿ ಸ್ಪೆಷಲ್ ತುಪ್ಪದ ಜಿಲೇಬಿ ಮಾಡೋದು ಹೇಗೆ?

    ಈ ದೇವಿಯ ಪೂಜೆಯ ದಿನದಂದು ಸಾಧಕನ ಮನಸ್ಸು ‘ಆಜ್ಞಾ’ ಚಕ್ರದಲ್ಲಿ ನೆಲೆಗೊಳ್ಳುತ್ತದೆ. ಯೋಗಸಾಧನೆಯಲ್ಲಿ ಈ ಆಜ್ಞಾ ಚಕ್ರದ ಸ್ಥಾನ ಅತ್ಯಂತ ಮಹತ್ವ ಪೂರ್ಣಸ್ಥಾನವಿದೆ. ಈ ಚಕ್ರದಲ್ಲಿ ಸ್ಥಿತವಾದ ಮನಸ್ಸುಳ್ಳ ಸಾಧಕನು ತಾಯಿ ಕಾತ್ಯಾಯನಿಯ ಚರಣಗಳಲ್ಲಿ ತನ್ನ ಸರ್ವಸ್ವವನ್ನು ಅರ್ಪಿಸಿಕೊಳ್ಳುತ್ತಾನೆ. ಪೂರ್ಣವಾಗಿ ಆತ್ಮಸಮರ್ಪಣ ಮಾಡುವ ಇಂತಹ ಭಕ್ತನಿಗೆ ಸಹಜಭಾವದಿಂದ ಕಾತ್ಯಾಯನೀ ದೇವಿಯ ದರ್ಶನ ಪ್ರಾಪ್ತವಾಗುತ್ತದೆ. ಇದನ್ನೂ ಓದಿ: ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ಕಾತ್ಯಾಯನಿಯ ಭಕ್ತಿ ಮತ್ತು ಉಪಾಸನೆಯ ಮೂಲಕ ಮನುಷ್ಯನಿಗೆ ಸುಲಭವಾಗಿ ಅರ್ಥ, ಧರ್ಮ, ಕಾಮ, ಮೋಕ್ಷವೆಂಬ ನಾಲ್ಕು ಫಲಗಳ ಪ್ರಾಪ್ತಿಯಾಗುತ್ತದೆ. ಅವನು ರೋಗ, ಶೋಕ, ಸಂತಾಪ, ಭಯ ಮುಂತಾದವುಗಳು ಪೂರ್ಣವಾಗಿ ನಾಶವಾಗುತ್ತದೆ. ಜನ್ಮ-ಜನ್ಮಾಂತರದ ಪಾಪಗಳನ್ನು ನಾಶಮಾಡಲು ಕಾತ್ಯಾಯನಿಯ ಉಪಾಸನೆಗಿಂತ ಸುಗಮ ಹಾಗೂ ಸರಳವಾದ ಮಾರ್ಗವು ಮತ್ತೊಂದಿಲ್ಲ. ಇವಳ ಉಪಾಸಕ ಯಾವಾಗಲೂ ಇವಳ ಸಾನ್ನಿಧ್ಯಲ್ಲಿ ಇದ್ದು ಪರಮಪದದ ಅಧಿಕಾರಿಯಾಗುತ್ತಾನೆ ಎನ್ನುವ ನಂಬಿಕೆಯಿದೆ.

     

  • ದಸರಾ ಸ್ತಬ್ಧಚಿತ್ರಗಳ ಸಿದ್ಧತೆ ಪರಿಶೀಲಿಸಿದ ಸಚಿವ ಎಸ್‍ಟಿಎಸ್

    ದಸರಾ ಸ್ತಬ್ಧಚಿತ್ರಗಳ ಸಿದ್ಧತೆ ಪರಿಶೀಲಿಸಿದ ಸಚಿವ ಎಸ್‍ಟಿಎಸ್

    ಮೈಸೂರು:ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧಚಿತ್ರಗಳ ನಿರ್ಮಾಣದ ಸಿದ್ಧತಾ ಕಾರ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪರಿಶೀಲಿಸಿದ್ದಾರೆ.

    ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ರಂಗಮಂದಿರ ಮಂಟಪದ ಎದುರಿನ ಮಳಿಗೆಯಲ್ಲಿ ನಿರ್ಮಿಸುತ್ತಿರುವ ಸ್ತಬ್ಧಚಿತ್ರ ಪರಿಶೀಲನೆ ಮಾಡಿದ್ದಾರೆ. ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದ ಕಲಾವಿದರ ಜೊತೆಗೆ ಸಮಾಲೋಚಿಸಿ ಮಾಹಿತಿ ಪಡೆದರು. ಇದನ್ನೂ ಓದಿ: ಹಣವೇ ಇಲ್ಲ ಲಾಕ್ ಮಾಡುವ ಅವಶ್ಯಕತೆ ಇತ್ತಾ?- ಮಾಲೀಕನಿಗೆ ಪತ್ರ ಬರೆದ ಕಳ್ಳರು

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತಮಟ್ಟದ ಸಮಿತಿ ತೀರ್ಮಾನದಂತೆ ಸ್ತಬ್ಧಚಿತ್ರಗಳನ್ನು ಕಡಿಮೆ ಮಾಡಬೇಕು ಎನ್ನುವ ಕಾರಣಕ್ಕಾಗಿ ಈ ಬಾರಿ 6 ಸ್ತಬ್ಧಚಿತ್ರ ಪಾಲ್ಗೊಳ್ಳಲಿವೆ. ಅ.13ರ ಸಂಜೆ ಹೊತ್ತಿಗೆ ಸಂಪೂರ್ಣ ಸಿದ್ಧವಾಗಲಿದೆ. ಕಲಾತಂಡ ಭಾಗವಹಿಸಲಿವೆ. ದಸರಾ ಮಹೋತ್ಸವದ ಎಲ್ಲ ಸಿದ್ಧತೆ ಮುಗಿಯುತ್ತಿವೆ. ತಾಲೀಮಿಗೆ ಆನೆಗಳು ಸಜ್ಜಾಗಿವೆ ಎಂದರು. ಇದನ್ನೂ ಓದಿ: ಮದುವೆಗಾಗಿ ಮತಾಂತರ ತಪ್ಪು: ಮೋಹನ್ ಭಾಗವತ್

    ಸರಳ ದಸರಾ ಮಹೋತ್ಸವ ಆಚರಣೆಯಾಗಿದ್ದರಿಂದ ಅಧಿಕಾರೇತರ ಸದಸ್ಯರನ್ನು ರಚನೆ ಮಾಡದೆ ಅಧಿಕಾರಿಗಳು ನಿರ್ವಹಣೆ ಮಾಡಿದ್ದಾರೆ. ದಸರಾ ಕಾರ್ಯಕ್ರಮಗಳು ಸುಲಲಿತವಾಗಿ ಜರುಗುತ್ತಿವೆ ಎಂದು ಹೇಳಿದರು.

  • ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

    ನವರಾತ್ರಿ ವಿಶೇಷ – ಸ್ಕಂದಮಾತೆಯನ್ನ ಪೂಜಿಸುವುದು ಏಕೆ?

    ಗನ್ಮಾತೆ ದುರ್ಗೆಯ ಐದನೇ ಸ್ವರೂಪವನ್ನು ‘ಸ್ಕಂದಮಾತಾ’ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈ ಭಗವಾನ್ ಸ್ಕಂದನು ‘ಕುಮಾರ ಕಾರ್ತಿಕೇಯ’ ಎಂಬ ಹೆಸರಿನಿಂದಲೂ ತಿಳಿಯಲ್ಪಡುತ್ತಾನೆ. ಇವನು ಪ್ರಸಿದ್ಧ ತಾರಕನ ಜೊತೆಗಿನ ಸಂಗ್ರಾಮದಲ್ಲಿ ದೇವತೆಗಳ ಸೇನಾಪತಿಯಾಗಿದ್ದನು. ಪುರಾಣಗಳಲ್ಲಿ ಇವನನ್ನು ಕುಮಾರ ಹಾಗೂ ಶಕ್ತಿಧರ ಎಂದು ಹೇಳಿ ಇವನ ಮಹಿಮೆಯನ್ನು ವರ್ಣಿಸಲಾಗಿದೆ. ನವಿಲನ್ನು ವಾಹನವಾಗಿ ಬಳಸುವ ಕಾರಣ ಈತನನ್ನು ‘ಮಯೂರವಾಹನ’ ಎಂದೂ ಕರೆಯುತ್ತಾರೆ.

    ಸ್ಕಂದನ ತಾಯಿಯಾದ್ದರಿಂದ ದುರ್ಗೆಯ ಈ ಐದನೇ ಸ್ವರೂಪವನ್ನು ‘ಸ್ಕಂದಮಾತಾ’ ಎಂದು ಕರೆಯಲಾಗುತ್ತದೆ. ನವರಾತ್ರಿಯ ಐದನೇ ದಿನ ಇವಳ ಉಪಾಸನೆ ಮಾಡಲಾಗುತ್ತದೆ. ಈ ದಿನ ಸಾಧಕನ ಮನಸ್ಸು ವಿಶದ್ಧ ಚಕ್ರದಲ್ಲಿ ನೆಲೆ ನಿಲ್ಲುತ್ತದೆ. ಇವಳ ವಿಗ್ರಹದಲ್ಲಿ ಭಗವಾನ್ ಸ್ಕಂದನು ಬಾಲರೂಪದಲ್ಲಿ ಇವಳ ತೊಡೆಯಲ್ಲಿ ಕುಳಿತ್ತಿದ್ದಾನೆ. ಇದನ್ನೂ ಓದಿ: ನವರಾತ್ರಿ ವಿಶೇಷ- ನಾಲ್ಕನೇ ದಿನ ಕೂಷ್ಮಾಂಡ ದೇವಿ ಆರಾಧನೆ ಮಾಡೋದು ಯಾಕೆ ಗೊತ್ತಾ?

    ಸ್ಕಂದಮಾತೆಯಾದ ಇವಳಿಗೆ ನಾಲ್ಕು ಭುಜಗಳಿರುತ್ತವೆ. ಇವಳು ಬಲಗಡೆಯ ಮೇಲಿನ ಕೈಯಿಂದ ಸ್ಕಂದನ್ನು ತೊಡೆಯಲ್ಲಿ ಹಿಡಿದುಕೊಂಡಿದ್ದಾಳೆ. ಮೇಲಕ್ಕಿತ್ತಿರುವ ಕೆಳಗಿನ ಬಲ ಕೈಯಲ್ಲಿ ಕಮಲ ಪುಷ್ಪವನ್ನು ಹಿಡಿದಿದ್ದಾಳೆ. ಎಡಗಡೆಯ ಮೇಲಿನ ಕೈಯಲ್ಲಿ ವರಮುದ್ರೆ ಮತ್ತು ಮೇಲಕ್ಕೆತ್ತಿರುವ ಎಡಗೈಯಲ್ಲಿಯೂ ಕಮಲವಿದೆ. ಇವಳ ಶರೀರದ ಬಣ್ಣವೂ ಪೂರ್ಣವಾಗಿ ಬೆಳ್ಳಗಿದ್ದು, ಕಮಲದ ಆಸನದಲ್ಲಿ ವಿರಾಜಮಾನಳಾಗಿದ್ದಾಳೆ. ಇದೇ ಕಾರಣದಿಂದ ಇವಳನ್ನು ಪದ್ಮಸನಾದೇವೀ ಎಂದೂ ಹೇಳುತ್ತಾರೆ. ಸಿಂಹವೂ ಇವಳ ವಾಹನವಾಗಿದೆ. ಇದನ್ನೂ ಓದಿ: ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ನವರಾತ್ರಿಯ ಪೂಜೆಯಲ್ಲಿ ಐದನೇ ದಿನದ ಮಹತ್ವ ಶಾಸ್ತ್ರಗಳಲ್ಲಿ ತುಂಬಾ ಹೇಳಲಾಗಿದೆ. ವಿಶುದ್ಧ ಚಕ್ರದಲ್ಲಿ ನೆಲೆಸಿದ ಮನಸ್ಸುಳ್ಳ ಸಾಧಕನ ಸಮಸ್ತ ಬಾಹ್ಯ ಕ್ರಿಯೆಗಳು ಹಾಗೂ ಚಿತ್ತವೃತ್ತಿಗಳು ಲೋಪವಾಗುತ್ತವೆ. ಅವನು ವಿಶುದ್ಧ ಚೈತನ್ಯ ಸ್ವರೂಪದತ್ತು ಮುಂದುವರಿಯುತ್ತವೆ. ಅವನ ಮನಸ್ಸು ಎಲ್ಲ ಲೌಕಿಕ, ಸಾಂಸಾರಿಕ ಬಂಧನಗಳಿಂದ ಮುಕ್ತವಾಗಿ ಪದ್ಮಾಸನಾ ಸ್ಕಂದಮಾತೆಯ ಸ್ವರೂಪದಲ್ಲಿ ಪೂರ್ಣವಾಗಿ ತಲ್ಲೀನವಾಗುತ್ತದೆ. ಈ ಸಮಯದಲ್ಲಿ ಸಾಧಕನು ಹೆಚ್ಚಿನ ಎಚ್ಚರಿಕೆಯಿಂದ ಉಪಾಸನೆಯಲ್ಲಿ ಮುಂದರಿಯಬೇಕು. ಅವನು ತನ್ನ ಎಲ್ಲ ಧ್ಯಾನ- ವೃತ್ತಿಗಳನ್ನು ಏಕಾಗ್ರವಿರಿಸಿಕೊಂಡು ಸಾಧನೆಯ ಪಥದಲ್ಲಿ ಮುಂದೆ ಹೋಗಬೇಕು. ಇದನ್ನೂ ಓದಿ: ನವರಾತ್ರಿ ವಿಶೇಷ – ಮೂರನೇ ದಿನ ಚಂದ್ರಘಂಟಾ ದೇವಿಯ ಪೂಜೆ ಮಾಡೋದು ಯಾಕೆ?

    ಜಗಜ್ಜನನಿ ಸ್ಕಂದಮಾತೆಯ ಉಪಾಸನೆಯಿಂದ ಭಕ್ತನ ಎಲ್ಲ ಇಚ್ಛೆಗಳು ಪೂರ್ಣವಾಗುತ್ತವೆ. ಈ ಮತ್ರ್ಯಲೋಕದಲ್ಲೇ ಅವನಿಗೆ ಪರಮ ಶಾಂತಿ ಮತ್ತು ಸುಖದ ಅನುಭವವಾಗ ತೊಡಗುತ್ತದೆ. ಅವನಿಗಾಗಿ ಮೋಕ್ಷದ ಬಾಗಿಲು ತಾನಾಗಿ ಸುಲಭವಾಗುತ್ತದೆ ಎನ್ನುವ ನಂಬಿಕೆಯಿದೆ. ಸ್ಕಂದಮಾತೆಯ ಉಪಾಸನೆಯಿಂದ ಬಾಲರೂಪೀ ಭಗವಾನ್ ಸ್ಕಂದನ ಉಪಾಸನೆಯೂ ಕೂಡ ತಾನಾಗಿಯೇ ಆಗುತ್ತದೆ.