Tag: Dasara Celebration

  • ಭಾರತದ ರಾಜ್ಯಗಳಲ್ಲಿ ಆಚರಿಸಲಾಗುವ ವಿಭಿನ್ನ ರೀತಿಯ ದಸರಾ ಹೇಗಿರುತ್ತೆ?

    ಭಾರತದ ರಾಜ್ಯಗಳಲ್ಲಿ ಆಚರಿಸಲಾಗುವ ವಿಭಿನ್ನ ರೀತಿಯ ದಸರಾ ಹೇಗಿರುತ್ತೆ?

    ಸರಾ ಹಿಂದೂಗಳು ಆಚರಿಸುವ ವಿಶಿಷ್ಟ ಹಬ್ಬಗಳಲ್ಲಿ ಒಂದು. ಇದು ವಿಜಯದ ಸಂಕೇತ ಹಾಗೂ ಸಂಭ್ರಮವನ್ನು ಎತ್ತಿ ಹಿಡಿಯುತ್ತದೆ. ಒಂದೇ ಹಬ್ಬವನ್ನು ದೇಶಾದ್ಯಂತ ವಿಭಿನ್ನ ರೀತಿಯಲ್ಲಿ ಆಚರಿಸಲಾಗುವ ಹಬ್ಬ ಎಂದರೆ ತಪ್ಪಾಗಲಾರದು. ಕೆಲವು ಕಡೆ 9 ದಿನಗಳ ಉಪವಾಸದಿಂದ ಅಂತ್ಯವಾದರೆ, ಇನ್ನೊಂದು ಕಡೆ ದೊಡ್ಡ ಆಚರಣೆಗಳಿಂದ ಅಂತ್ಯವಾಗುತ್ತದೆ. ಈ ಹಬ್ಬವನ್ನು ರಾಮನಿಂದ ರಾವಣನನ್ನು ಸೋಲಿಸಿದ ದಿನವಾಗಿಯೂ, ದುರ್ಗಾದೇವಿ ಮಹಿಸಾಸುರ ನಾಶ ಮಾಡಿದ ದಿನವಾಗಿಯೂ ಆಚರಿಸುತ್ತಾರೆ.

    ಭಾರತದ ರಾಜ್ಯಗಳಲ್ಲಿ ದಸರಾ ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಈ ಕುರಿತು ಕೆಲವು ರಾಜ್ಯಗಳಲ್ಲಿ ಆಚರಿಸುವ ವಿಧಾನ ಇಲ್ಲಿದೆ.
    ಪಶ್ಚಿಮ ಬಂಗಾಳ:
    ಪಶ್ಚಿಮ ಬಂಗಾಳದ ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಈ ಹಬ್ಬವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಇಲ್ಲಿ ಗಣೇಶ, ಲಕ್ಷ್ಮಿ ಮತ್ತು ಸರಸ್ವತಿ ಸೇರಿದಂತೆ ಇತರ ದೇವತೆಗಳ ಜೊತೆಗೆ ದುರ್ಗಾದೇವಿಯ ಅದ್ಭುತ ವಿಗ್ರಹಗಳನ್ನು 5 ದಿನಗಳವರೆಗೆ ಪೂಜಿಸಲಾಗುತ್ತದೆ. ದಸರಾ ಸಂದರ್ಭದಲ್ಲಿ ದುರ್ಗಾಪೂಜೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ದುರ್ಗಾಮಾತೆಯನ್ನು ಪೂಜಿಸುವ ಉತ್ಸುಕತೆ ಭಾರತದಲ್ಲಿ ಎಲ್ಲಿಯೂ ಕಾಣುವುದಿಲ್ಲ.

    ಗುಜರಾತ್:
    ಗುಜರಾತ್‌ನಲ್ಲಿ ದಸರಾವನ್ನು ನವರಾತ್ರಿ ಎಂದು ಆಚರಿಸಲಾಗುತ್ತದೆ. ಇಲ್ಲಿನ ಪ್ರಸಿದ್ಧ ಜಾನಪದ ನೃತ್ಯವಾಗಿರುವ ಗರ್ಬಾ ಈ ಹಬ್ಬದ ಪ್ರಧಾನ ಅಂಶವಾಗಿದೆ. ಈ ಹಬ್ಬದ ಸಂದರ್ಭದಲ್ಲಿ ಗರ್ಬಾ ಹಾಗೂ ಬಣ್ಣ ಬಣ್ಣದ ಕೋಲಾಟದೊಂದಿಗೆ ಜನರನ್ನು ಆಕರ್ಷಿಸುತ್ತದೆ. ದುರ್ಗಾದೇವಿಯನ್ನು ಪೂಜಿಸಿದ ನಂತರ ರಾತ್ರಿಯಿಡೀ ಗರ್ಬಾವನ್ನು ನೃತ್ಯ ಮಾಡಲಾಗುತ್ತದೆ. ಈ ಸಮಯದಲ್ಲಿ ಗರ್ಬಾ ನೃತ್ಯಕ್ಕಾಗಿ ಪುರುಷರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಉಡುಗೆಯನ್ನು ಧರಿಸುತ್ತಾರೆ.

    ಹಿಮಾಚಲ ಪ್ರದೇಶ:
    ರಾಜ್ಯದ ಕುಲು ಪ್ರದೇಶದಲ್ಲಿ ಭಗವಾನ್ ರಘುನಾಥನ ಭವ್ಯ ಮೆರವಣಿಗೆಯೊಂದಿಗೆ ದಸರಾ ಆಚರಿಸಲಾಗುತ್ತದೆ. ಕುಲು ಪಟ್ಟಣದಲ್ಲಿ ದಸರಾ ವಿಶೇಷ ಮಹತ್ವವನ್ನು ಹೊಂದಿದ್ದು, ಇದನ್ನು ಬಹಳ ಉತ್ಸಾಹದಿಂದ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ಒಟ್ಟು 7 ದಿನಗಳ ಕಾಲ ನಡೆಯುತ್ತದೆ. ಕುಲುವಿನ ಜನರು ಧಾಲ್ಪುರ್ ಮೈದಾನದ ಜಾತ್ರೆಯ ಮೈದಾನದಲ್ಲಿ ಭಗವಾನ್ ರಘುನಾಥನನ್ನು ಪೂಜಿಸುತ್ತಾರೆ. ಈ ಮೆರವಣಿಗೆ ಸಮಯದಲ್ಲಿ ಸ್ಥಳೀಯರು ದೇವತೆಗಳ ಪ್ರತಿಮೆಯನ್ನು ತಂದು ಪೂಜಿಸುತ್ತಾರೆ.

    ದೆಹಲಿ:
    ದೆಹಲಿಯಲ್ಲಿ ದಸರಾವನ್ನು ರಾಮ್ ಲೀಲಾದೊಂದಿಗೆ ಹಾಗೂ ರಾಮನಿಂದ ರಾವಣನನ್ನು ಸೋಲಿಸಿದ ದಿನವೆಂದು ಆಚರಿಸುತ್ತದೆ. ಈ ಸಮಯದಲ್ಲಿ ದೇವಾಲಯಗಳನ್ನು ಅದ್ಭುತವಾಗಿ ಅಲಂಕರಿಸಲಾಗುತ್ತದೆ. ರಾಮ್ ಲೀಲಾವು ನಗರದಲ್ಲಿ ಇದನ್ನು ಅದ್ಭುತವಾಗಿ ಆಚರಿಸಲಾಗುತ್ತದೆ. ರಾವಣ, ಮೇಘನಾದ ಮತ್ತು ಕುಂಭಕರನ್ ಸೇರಿದಂತೆ ಎಲ್ಲಾ ಮೂರು ರಾಕ್ಷಸರ ವಿಗ್ರಹಗಳನ್ನು ನಗರದ ವಿವಿಧ ಸ್ಥಳಗಳಲ್ಲಿ ಬೆಂಕಿ ಹಚ್ಚಲಾಗುತ್ತದೆ. ಈ ನಗರದಲ್ಲಿ ಹೆಚ್ಚಿನ ಜನರು 9 ದಿನಗಳ ಉಪವಾಸವನ್ನು ಮಾಡುತ್ತಾರೆ. ದೆಹಲಿಯಲ್ಲಿ ರಾಮಲೀಲಾ – ರಾಮಾಯಣದ ನಾಟಕೀಯ ಆವೃತ್ತಿಯನ್ನು ನೋಡುವುದು ಒಂದು ಸುಂದರ ಅನುಭವವಾಗಿದೆ.

    ಪಂಜಾಬ್:
    ಪಂಜಾಬ್‌ದಲ್ಲಿ 9 ದಿನದ ಉಪವಾಸ ಹಾಗೂ ಶಕ್ತಿಯ ಆರಾಧನೆಯೊಂದಿಗೆವ ದಸರಾ ಆಚರಿಸಲಾಗುತ್ತದೆ. ಇಲ್ಲಿ ಶಕ್ತಿದೇವಿಯನ್ನು ಪೂಜಿಸುತ್ತಾರೆ. ನವರಾತ್ರಿಯ ಸಮಯದಲ್ಲಿ ಅನೇಕ ಸ್ಥಳಗಳಲ್ಲಿ 7 ದಿನಗಳ ಉಪವಾಸವನ್ನು ಆಚರಿಸುತ್ತಾರೆ. ಜಾಗ್ರತಾ ಎಂದು ಕರೆಯಲ್ಪಡುವ ಭಕ್ತಿಗೀತೆಗಳನ್ನು ಹಾಡುವ ಮೂಲಕ ಇಡೀ ರಾತ್ರಿ ಎಚ್ಚರಗೊಂಡಿರುತ್ತಾರೆ. 8ನೇ ದಿನ ಕಂಜಿಕಾ ಎಂದು ಕರೆಯಲ್ಪಡುವ 9 ಬಾಲಕಿಯರಿಗೆ ಭಂಡಾರವನ್ನು ಆಯೋಜಿಸುವುದರ ಜೊತೆಗೆ ತಮ್ಮ ಉಪವಾಸವನ್ನು ಮುಗಿಸುತ್ತಾರೆ.

    ತಮಿಳುನಾಡು:
    ತಮಿಳುನಾಡಿನಲ್ಲಿ ದೇವತೆಗಳ ಆರಾಧನೆಯೊಂದಿಗೆ ಹಾಗೂ ಇಲ್ಲಿ ಸಂಪೂರ್ಣ ವಿಭಿನ್ನ ರೀತಿಯಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿ ದೇವಿಯರನ್ನು ಪೂಜಿಸುವ ಮೂಲಕ ಈ ಹಬ್ಬದಲ್ಲಿ ವಿಶೇಷ ಧಾರ್ಮಿಕ ಭಾವನೆಯನ್ನು ತರುತ್ತಾರೆ. ಈ ಸಮಯದಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಜನಪ್ರಿಯ ಗೊಂಬೆ ಪ್ರದರ್ಶನಗಳನ್ನು ಏರ್ಪಡಿಸುತ್ತದೆ. ಕುಲಶೇಖರಪಟ್ಟಿನಂನಲ್ಲಿ ಆಚರಿಸುವ ದಸರಾ ವಿಭಿನ್ನ ವಿಧಾನವಾಗಿದೆ. 10 ದಿನಗಳ ಕಾಲ ಆಚರಿಸಲಾಗುತ್ತದೆ. ಮುತ್ತರಮ್ಮನ್ ದೇವಾಲಯದ ಸುತ್ತಲೂ ಅದ್ಭುತವಾದ ರೋಮಾಂಚಕ ವೇಷಭೂಷಣಗಳನ್ನು ಪ್ರದರ್ಶಿಸಲಾಗುತ್ತದೆ. ವಿವಾಹಿತ ಮಹಿಳೆಯರು ಸಂಜೆಯ ಸಮಯದಲ್ಲಿ ಪ್ರತಿಯೊಬ್ಬರನ್ನು ತಮ್ಮ ಮನೆಗೆ ಆಹ್ವಾನಿಸುವ ಮೂಲಕ ವೈವಾಹಿಕ ಚಿಹ್ನೆಗಳಿಗೆ ಸಂಬಂಧಿಸಿದ ಬಿಡಿಭಾಗಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಪರಸ್ಪರ ತೆಂಗಿನಕಾಯಿ, ವೀಳ್ಯದೆಲೆ ಹಾಗೂ ಹಣವನ್ನೂ ಅರ್ಪಿಸುತ್ತಾರೆ.

    ಉತ್ತರಪ್ರದೇಶ:
    ಉತ್ತರಪ್ರದೇಶದಲ್ಲಿ ರಾವಣನ ಪ್ರತಿಮೆಗೆ ರಾಮನು ಬೆಂಕಿಯಿಡುವ ಮೂಲಕ ದಸರಾವನ್ನು ಆಚರಿಸಲಾಗುತ್ತದೆ. ಇದು ವಿಜಯದ ಸಂಕೇತವನ್ನು ಸೂಚಿಸುತ್ತದೆ. ವಾರಣಾಸಿ, ಲಕ್ನೋ ಮತ್ತು ಕಾನ್ಪುರದಂತಹ ನಗರಗಳಲ್ಲಿ ರಾಮ್ ಲೀಲಾವನ್ನು ಭವ್ಯವಾದ ಮಟ್ಟದಲ್ಲಿ ಪ್ರದರ್ಶಿಸಲಾಗುತ್ತದೆ. ಹಾಗೆಯೇ ರಾಮ, ಲಕ್ಷ್ಮಣ ಮತ್ತು ಹನುಮಾನ್ ಅವರ ವೇಷಭೂಷಣದಲ್ಲಿರುವ ನಟರು ಆಡಿಯೊ, ದೃಶ್ಯ ಸಾಧನಗಳನ್ನು ಬಳಸಿಕೊಂಡು ಮಹಾಕಾವ್ಯದ ಸಾಹಸವನ್ನು ಪ್ರದರ್ಶಿಸುತ್ತಾರೆ. ರಾವಣ, ಕುಂಭಕರನ್ ಮತ್ತು ಮೇಘನಾಥನ ವಿಗ್ರಹಗಳನ್ನು ವಧಿಸುವಾಗ ಪ್ರೇಕ್ಷಕರು ಅವರನ್ನು ನೋಡಲು ರೋಮಾಂಚನಗೊಳ್ಳುತ್ತಾರೆ.

    ಛತ್ತೀಸ್‌ಗಢ
    ಛತ್ತೀಸ್‌ಗಢದಲ್ಲಿ ವಿಶಿಷ್ಟ ರೀತಿಯ ದಸರಾವನ್ನು ಆಚರಿಸಲಾಗುತ್ತದೆ. ಅದು ಪ್ರಕೃತಿ, ಆಧ್ಯಾತ್ಮಿಕತೆ ಮತ್ತು ರಾಜ್ಯದ ಪ್ರಧಾನ ದೇವತೆಯನ್ನು ಸಂತೋಷಪಡಿಸುವ ಅಂಶವನ್ನು ಒಳಗೊಂಡಿದೆ. ಅವರು ಬಸ್ತರ್‌ನ ಪ್ರಧಾನ ದೇವತೆಯಾದ ದಂತೇಶ್ವರಿಯನ್ನು ಪೂಜಿಸುತ್ತಾರೆ. ಈ ರಾಜ್ಯದಲ್ಲಿ ದಸರಾದಂದು ಆಚರಿಸುವ ವಿಶಿಷ್ಟ ಆಚರಣೆಗಳೆಂದರೆ ಪಟ ಜಾತ್ರೆ (ಮರದ ಪೂಜೆ), ದೇರಿ ಗಧೈ (ಕಲಶ ಸ್ಥಾಪನೆ), ಕಚನ್ ಗಾಡಿ (ದೇವಿ ಕಚನ ಸಿಂಹಾಸನದ ಪ್ರತಿಷ್ಠಾಪನೆ), ನಿಶಾ ಜಾತ್ರಾ (ರಾತ್ರಿಯ ಉತ್ಸವ), ಮುರಿಯಾ ದರ್ಬಾರ್ (ಸಮ್ಮೇಳನ). ಬುಡಕಟ್ಟು ಮುಖ್ಯಸ್ಥರ) ಮತ್ತು ಓಹಡಿ (ದೇವತೆಗಳಿಗೆ ವಿದಾಯ) ಎಂದು ಆಚರಿಸಲಾಗುತ್ತದೆ.

    ಕರ್ನಾಟಕ:
    ಮೈಸೂರಿನಲ್ಲಿ ಆನೆಯು ಅಂಬಾರಿಯನ್ನು ಹೊತ್ತುಕೊಂಡು ಹೋಗುವ ಮೂಲಕ ಭವ್ಯವಾದ ಮೆರವಣಿಗೆ ಸಾಗುತ್ತದೆ. ಜೊತೆಗೆ ಕರ್ನಾಟಕದಾದ್ಯಂತ ದೇವಿಯ ಪೂಜೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮೈಸೂರು ಸೇರಿದಂತೆ ಮಡಿಕೇರಿ, ಮಂಗಳೂರು ಹೀಗೆ ಹಲವಾರು ಕಡೆ ವಿಭಿನ್ನ ರೀತಿಯಲ್ಲಿ ದಸರಾ ಆಚರಿಸಲಾಗುತ್ತದೆ. ಕೆಲವು ಕಡೆ 9 ದಿನದ ಉಪವಾಸ ಮಾಡುತ್ತಾರೆ. ಆಯುಧ ಪೂಜೆಯ ದಿನ ಬನ್ನಿಯನ್ನು ನೀಡಲಾಗುತ್ತದೆ. ಜೊತೆಗೆ ಗೊಂಬೆಗಳನ್ನು ಕೂರಿಸುವ ಸಂಪ್ರದಾಯವು ಇಲ್ಲಿದೆ. ಕೂರ್ಗ್ನ ಶಾಂತಿಯುತ ಪರಿಸರದ ಮಧ್ಯೆ, ಮಡಿಕೇರಿಯ ದಸರಾವನ್ನು ಕರ್ನಾಟಕದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದು ಹಾಲೇರಿ ರಾಜರ ಆಳ್ವಿಕೆಗೆ ಸೇರಿದ ಸುದೀರ್ಘ ಮತ್ತು ಆಕರ್ಷಕ ಇತಿಹಾಸವನ್ನು ಹೊಂದಿದೆ. ಈ ರೋಮಾಂಚಕ ಹಬ್ಬವನ್ನು ಮಾರಿಯಮ್ಮ ಹಬ್ಬ ಎಂದೂ ಕರೆಯಲಾಗುತ್ತದೆ. ಜನರು ದ್ರೌಪದಿಗೆ ಮೀಸಲಾಗಿರುವ ಜಾನಪದ ನೃತ್ಯಗಳನ್ನು ಮಾಡುತ್ತಾರೆ. ಇದು ದಸರಾ ಆಚರಿಸುವ ವಿಭಿನ್ನ ವಿಧಾನವಾಗಿದೆ.

  • ಉಮೇಶ್ ಕತ್ತಿ ನಿಧನ ಹಿನ್ನೆಲೆ ಅದ್ದೂರಿ ದಸರಾ ಆಚರಣೆ ಇಲ್ಲ : ಹುಕ್ಕೇರಿ ಹಿರೇಮಠ ಶ್ರೀ

    ಉಮೇಶ್ ಕತ್ತಿ ನಿಧನ ಹಿನ್ನೆಲೆ ಅದ್ದೂರಿ ದಸರಾ ಆಚರಣೆ ಇಲ್ಲ : ಹುಕ್ಕೇರಿ ಹಿರೇಮಠ ಶ್ರೀ

    ಚಿಕ್ಕೋಡಿ: ಹುಕ್ಕೇರಿ ಮತಕ್ಷೇತ್ರದ ಶಾಸಕ ಹಾಗೂ ಸಚಿವರಾಗಿದ್ದ ಉಮೇಶ್ ಕತ್ತಿ (Umesh Katthi) ಅವರು ಅಕಾಲಿಕ ನಿಧನರಾದ ಹಿನ್ನೆಲೆ ಹುಕ್ಕೇರಿ ಹಿರೇಮಠದ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹುಕ್ಕೇರಿ ಹಿರೇಮಠದ (Hukkeri Hiremath) ಚಂದ್ರಶೇಖರ್ ಶಿವಾಚಾರ್ಯ ಮಹಾಸ್ವಾಮಿಗಳು (Chandrasekhar Shivacharya Mahaswami) ತಿಳಿಸಿದರು.

    ಹುಕ್ಕೇರಿ ಹಿರೇಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು (Mysuru) ನಂತರದಲ್ಲಿ ಹುಕ್ಕೇರಿ ಹಿರೇಮಠ ದಸರಾ ಉತ್ಸವ ಉತ್ತರ ಕರ್ನಾಟಕ (UttarKarnataka) ಭಾಗದಲ್ಲಿ ಹೆಸರಾಗಿದೆ. ಪ್ರತಿ ವರ್ಷ ವಿಭಿನ್ನವಾದ ಕಾರ್ಯಕ್ರಮದ ಮೂಲಕ ಹಿರೇಮಠದ ದಸರಾ ಉತ್ಸವ ವೈಶಿಷ್ಟ್ಯ ಹಾಗೂ ಅದ್ದೂರಿಯಾಗಿ ನಡೆದು ಬಂದಿತ್ತು. ದಿವಂಗತ ಉಮೇಶ್ ಕತ್ತಿ ಅವರು ಹಿರೇಮಠದ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿದ್ದರು. ಆದರೆ ಇದೀಗ ಅವರ ನಿಧನದ ಹಿನ್ನೆಲೆ ಸರಳವಾಗಿ ದಸರಾ ಆಚರಣೆಗೆ (Dasara celebration) ನಿರ್ಧರಿಸಲಾಗಿದೆ. ಇದನ್ನೂ ಓದಿ: ಚಾಮುಂಡಿ ತಾಯಿಯ ದರ್ಶನ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ ಪತ್ನಿ

    ಧಾರ್ಮಿಕವಾಗಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರ ನವರಾತ್ರಿ ಉತ್ಸವ ಸರಳವಾಗಿ ಜರುಗಲಿದೆ. ಶ್ರೀ ಮಠದಲ್ಲಿ 108 ವಟುಗಳು, ಪುರೋಹಿತರು ಹಾಗೂ ಭಕ್ತರಿಂದ ಸಾಮೂಹಿಕ ಇಷ್ಟಲಿಂಗ ಪೂಜೆ ಸೇರಿದಂತೆ ಹಲವು ಧಾರ್ಮಿಕ ವಿಧಿ, ವಿಧಾನಗಳು ಜರುಗಲಿವೆ. ವಿಶೇಷವಾಗಿ ಬ್ರಾಹ್ಮಣ ಹಾಗೂ ವೀರಶೈವ ಪುರೋಹಿತರು ಸೇರಿಕೊಂಡು ಒಂಭತ್ತು ದಿನಗಳ ಕಾಲ ಚಂಡಿಕಾಯಾಗ ನಡೆಸಲಿದ್ದಾರೆ ಎಂದರು. ಇದನ್ನೂ ಓದಿ: ವಿವಾಹಿತ ಬಾಯ್‌ಫ್ರೆಂಡ್‌ಗೆ ಹಾಸ್ಟೆಲ್‌ಮೇಟ್ಸ್ ಬೆತ್ತಲೆ ವೀಡಿಯೋ ಕಳಿಸಿದ BED ಪದವೀಧರೆ- ಇಬ್ಬರೂ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

    ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

    ಸರಾ ಕರ್ನಾಟಕ ರಾಜ್ಯದ ನಾಡ ಹಬ್ಬ. ಹಿಂದೂ ಧರ್ಮದವರಿಗೆ ಇದೊಂದು ಪ್ರಮುಖ ಹಬ್ಬ. ವಿಜಯನಗರದ ಅರಸರ ಕಾಲದಿಂದಲೇ ‘ನವರಾತ್ರಿ’ ಅಥವಾ ‘ದಸರಾ ಹಬ್ಬ’ ಚಾಲ್ತಿಗೆ ಬಂದಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಬ್ಬವನ್ನು ಭಾರತದ ಉತ್ತರ ಭಾಗಗಳಲ್ಲಿ ‘ದಶೇರ’ವಾಗಿಯೂ, ‘ದುರ್ಗಾ ಪೂಜೆ’ಯಾಗಿಯೂ ಆಚರಿಸುತ್ತಾರೆ.

    ಮೈಸೂರು: ಆಯುಧ ಪೂಜೆ, ವಿಜಯದಶಮಿ ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ಮೈಸೂರು ಪ್ರಾಂತ್ಯದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆ ದೀಪಾಲಂಕಾರದಿಂದ ಕಂಗೊಳಿಸುತ್ತದೆ. ಮೈಸೂರನ್ನು ಆಳಿದ ರಾಜಮನೆತನ ಒಡೆಯರ ಕುಲ ದೇವತೆಯಾದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೇ ವಿಜಯದಶಮಿಯಂದು ಆನೆಯ ಮೇಲೆ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಕುಳ್ಳಿರಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ.

    ಮಂಗಳೂರು: ಮಂಗಳೂರಲ್ಲಿ ನವರಾತ್ರಿ ಎಂದು ಕರೆಯುವ ಈ ಹಬ್ಬದಲ್ಲಿ ಹುಲಿಯ ನೃತ್ಯ, ಕರಡಿಯ ನೃತ್ಯ ಹಾಗೂ ಸಿಂಹ ನೃತ್ಯ ಮಾಡುತ್ತಾರೆ. ಹತ್ತು ದಿನದ ಆಚರಣೆಯಲ್ಲಿ ಇಡೀ ನಗರವನ್ನು ಬೆಳಕಿನಿಂದ ಅಲಂಕರಿಸಲಾಗುತ್ತದೆ. ಹುಲಿ ವೇಷ, ದಸರಾದಲ್ಲಿ ಮಾಡುವ ಜನಪದ ನೃತ್ಯವಾಗಿದ್ದು, ಯುವಕರು ಐದರಿಂದ ಹತ್ತು ಪಡೆಗಳನ್ನು ಮಾಡಿಕೊಳ್ಳುತ್ತಾರೆ. ಅವರು ಹುಲಿಗಳಂತೆ ವೇಷ ಹಾಕಿಕೊಂಡು ಇಬ್ಬರಿಂದ ಮೂರು ಜನ ಡೋಲು ವಾದ್ಯದವರನ್ನು ಬಳಸಿ ಊರೆಲ್ಲಾ ತಿರುಗಾಡುತ್ತಾರೆ. ಶಾರದಾ ದೇವಿಗೆ ಹುಲಿ ವಾಹನ ಆದ್ದರಿಂದ ಅವಳಿಗೆ ಗೌರವ ಸೂಚಿಸಲು ಹುಲಿ ವೇಷ ಧರಿಸುತ್ತಾರೆ.

    ಮಂಗಳೂರಿನಲ್ಲಿ ಜನರು ತಮ್ಮ ಮನೆಗಳನ್ನು, ಅಂಗಡಿಗಳನ್ನು, ಉಪಹಾರ ಕೇಂದ್ರಗಳನ್ನು ಅಲಂಕರಿಸುತ್ತಾರೆ. ನವದುರ್ಗೆಯರ, ಮಹಾಗಣಪತಿಯ ಹಾಗೂ ಶಾರದೆಯ ಮೂರ್ತಿಗಳನ್ನು ಮೆರವಣಿಗೆ ಮಾಡಿ ಹೂಗಳಿಂದ ಅಲಂಕರಿಸಿದ ಛತ್ರಿ, ವರ್ಣ ಚಿತ್ರ, ಜಾನಪದ ನೃತ್ಯ, ಯಕ್ಷಗಾನ ಪಾತ್ರ, ಡೊಳ್ಳು ಕುಣಿತ, ಹುಲಿವೇಶ ಹಾಗು ಇನ್ನಿತರ ಸಾಂಪ್ರದಾಯಿಕ ಕಲಾ ರೂಪ ಈ ಹಬ್ಬಕ್ಕೆ ಮೆರಗು ನೀಡುತ್ತದೆ.

    ಮಡಿಕೇರಿ: ಮಡಿಕೇರಿಯಲ್ಲಿ ಹತ್ತು ದಿನಗಳ ನವರಾತ್ರಿ ಹಬ್ಬದ ಆಚರಣೆ ನಡೆಯುತ್ತದೆ. ಇಲ್ಲಿ ನಡೆಯುವ ದಸರಾಗೆ ನೂರು ವರ್ಷಗಳ ಇತಿಹಾಸವಿದ್ದು, ಇದರಲ್ಲಿ ಅಸುರರನ್ನು ಕೊಲ್ಲುತ್ತಿರುವ ಸುರರನ್ನು ಚಿತ್ರಿಸಿರುವ 10 ಮಂಟಪಗಳಿರುತ್ತವೆ. ಒಂದು ಮಂಟಪದಲ್ಲಿರುವ ಮೂರ್ತಿಗಳು ಸುಮಾರು 8 ರಿಂದ 15 ಅಡಿ ಎತ್ತರವಿದ್ದು, ಒಂದು ಮಂಟಪದ ವೆಚ್ಚ 3 ರಿಂದ 5 ಲಕ್ಷಗಳಾಗುತ್ತವೆ.

    ದಂತ ಕಥೆಗಳ ಪ್ರಕಾರ, ಬಹಳ ವರ್ಷಗಳ ಹಿಂದೆ ಮಡಿಕೇರಿಯ ಜನ ರೋಗ ಋಜಿನಗಳಿಂದ ನರಳುತ್ತಿದ್ದಾಗ ಮಡಿಕೇರಿಯ ರಾಜನು ಆಗಿನಿಂದ ಮಾರಿಯಮ್ಮ ಹಬ್ಬವನ್ನು ಆಚರಿಸಲು ಆರಂಭಿಸಿದನು. ಆಗಿನಿಂದ ಮಹಾಲಯ ಅಮಾವಾಸ್ಯೆಯ ನಂತರ ದಸರಾ ದಿನದಿಂದ ಮಾರಿಯಮ್ಮ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿ ಜಿಲ್ಲೆಯಲ್ಲಿ ವ್ಯಾಪಕ ನೆರೆ ಬಂದ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲು ಜನ ತೀರ್ಮಾನಿಸಿದ್ದಾರೆ.

    ಕೇರಳ: ಕೇರಳದಲ್ಲಿ ನವರಾತ್ರಿಯ ಕೊನೆಯ ಮೂರು ದಿನಗಳ ಕಾಲ ಮಾತ್ರ ದೇವಿಯ ಆರಾಧನೆ ನಡೆಯುತ್ತದೆ. ಅಷ್ಟಮಿ, ನವಮಿ ಮತ್ತು ದಶಮಿಯ ದಿನ ಕೇರಳದಲ್ಲಿ ತಾಯಿ ಸರಸ್ವತಿಯ ಪೂಜೆ ನಡೆಸಲಾಗುತ್ತದೆ. ಕಲೆಯನ್ನು ಸರಸ್ವತಿ ಎಂದೇ ಪರಿಗಣಿಸುವ ಕೇರಳದ ಜನರು ಮನೆಯಲ್ಲಿರುವ ಸಂಗೀತ ಸಲಕರಣೆಗಳು, ಪುಸ್ತಕಗಳು ಎಲ್ಲವನ್ನೂ ಸರಸ್ವತಿಯ ಮೂರ್ತಿಯ ಮುಂದೆ ಇಟ್ಟು ಪೂಜಿಸುತ್ತಾರೆ. ನವರಾತ್ರಿಯ ಕೊನೆಯ ದಿನವಾದ ವಿಜಯ ದಶಮಿಯ ದಿನ ಪೂಜೆಗಿಟ್ಟ ಪುಸ್ತಕಗಳನ್ನು ತೆಗೆದು ಓದುತ್ತಾರೆ. ವಿದ್ಯಾದಶಮಿ ಎಂದು ಕರೆಯಲ್ಪಡುವ ಅಂದು ಅಧ್ಯಯನ ಮಾಡುವುದರಿಂದ ಸರಸ್ವತಿ ಒಲಿಯುತ್ತಾಳೆ ಎಂಬ ನಂಬಿಕೆ ಕೇರಳದಲ್ಲಿದೆ.

    ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿ ನವರಾತ್ರಿಗೆ `ಬತುಕಾಮ್ಮ ಪಾಂಡುಗ’ ಎಂದು ಕರೆಯುತ್ತಾರೆ. ತೆಲಂಗಾಣ ಪ್ರದೇಶದಲ್ಲಿ ವಿಶೇಷವಾಗಿ ಈ ಬತುಕಾಮ್ಮ ಪಾಂಡುಗವನ್ನು ಆಚರಿಸುತ್ತಾರೆ. ಬತುಕಾಮ್ಮ ಪಾಂಡುಗ ಎಂದರೆ ತಾಯಿ ದುರ್ಗೆಗೆ ನೀಡುವ ಆಹ್ವಾನ. ನವರಾತ್ರಿಯ ಸಂದರ್ಭದಲ್ಲಿ ದೇವಿಯ ಆರಾಧನೆಗಾಗಿ ಮನೆ ಮನೆಯಲ್ಲಿ ಮಹಿಳೆಯರು ಬತುಕಾಮ್ಮನನ್ನು ಹೂವಿನಿಂದ ತಯಾರಿಸುತ್ತಾರೆ. ಕುಂಭದ ಆಕೃತಿಯಲ್ಲಿ ಬತುಕಾಮ್ಮನನ್ನು ತಯಾರಿಸಿ ಪೂಜಿಸುತ್ತಾರೆ. ನವರಾತ್ರಿಯ 9 ದಿನಗಳು ಸಂಜೆ ದೇವಿಗೆ ಪೂಜೆ ನಡೆಸಿ ಭಕ್ತಿ ಗೀತೆಗಳನ್ನು ಹಾಡಿ, ಬತುಕಾಮ್ಮನ ಸುತ್ತ ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ನಂತರ ವಿದ್ಯಾದಶಮಿಯ ದಿನ ಹೂವಿನಿಂದ ತಯಾರು ಮಾಡಲಾಗಿದ್ದ ಬತುಕಾಮ್ಮನನ್ನು ನೀರಿನಲ್ಲಿ ತೇಲಿಬಿಡುತ್ತಾರೆ.

    ಪಂಜಾಬ್: ಪಂಜಾಬ್‍ನಲ್ಲಿ ನವರಾತ್ರಿಯ ಮೊದಲ ಏಳು ದಿನಗಳ ಕಾಲ ಹೆಚ್ಚಿನ ಪಂಜಾಬಿ ಜನರು ಹಗಲಿನಲ್ಲಿ ಉಪವಾಸ ಮಾಡಿ ದೇವಿಯನ್ನು ಪೂಜಿಸುತ್ತಾರೆ. ಪ್ರತಿ ರಾತ್ರಿ ದೇವಿಯ ಭಜನೆ ಮಾಡಿ ಪೂಜೆ ನೆರವೇರಿಸುತ್ತಾರೆ. ಅಷ್ಟಮಿಯ ದಿನ ಉಪವಾಸ ವ್ರತವನ್ನು ಕೈಬಿಟ್ಟು ವಿಜಯ ದಶಮಿಯ ತನಕ ನೆರೆಹೊರೆಯ ಒಂಬತ್ತು ಯುವತಿಯರನ್ನು ಆಮಂತ್ರಿಸಿ ಅವರಿಗೆ ಹಣ, ಸಿಹಿ ತಿಂಡಿಗಳನ್ನು ನೀಡಿ ಉಡುಗೊರೆಗಳನ್ನು ಕೊಟ್ಟು ಗೌರವಿಸಲಾಗುತ್ತದೆ. ಮನೆಗೆ ಆಹ್ವಾನಿಸುವ ಹೆಣ್ಣುಮಕ್ಕಳನ್ನು ದುರ್ಗೆಯ ಅವತಾರಗಳು ಎಂದು ಪರಿಗಣಿಸಲಾಗುತ್ತದೆ.

    ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ದಸರಾದಂದು ದುರ್ಗೆಯ ಪೂಜೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಆ ಸಮಯದಲ್ಲಿ ಕೋಲ್ಕತ್ತಾದಲ್ಲಿ ವಿಪರೀತವಾದ ಜನಸಂದಣಿ ಸೇರುತ್ತದೆ. ಅಲ್ಲದೇ ಸಾರ್ವಜನಿಕವಾಗಿ ದೇವಿ ಪೂಜೆಯನ್ನು ನಡೆಸುವ ಪರಿಪಾಠವೂ ಇದೆ. ಸಿಂಹದ ಮೇಲೆ ಕುಳಿತು ವಿವಿಧ ಬಗೆಯ ಆಯುಧಗಳನ್ನು ಹಿಡಿದಿರುವ ದೇವಿಯ ದೊಡ್ಡ ಮೂರ್ತಿಯನ್ನು ಇರಿಸಿ ಬೆಳಗ್ಗೆ ಸಂಜೆಗಳಲ್ಲಿ ಪೂಜೆ ಭಜನೆಗಳನ್ನು ಅರ್ಪಿಸುತ್ತಾರೆ. ಗಣೇಶ ಚತುರ್ಥಿಯಂತೆ ಸಾಮಾನ್ಯವಾಗಿ ಪಶ್ಚಿಮ ಬಂಗಾಳದಾದ್ಯಂತ ದುರ್ಗೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ ನಂತರ ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

    ಕೋಲ್ಕತ್ತಾದಲ್ಲಿ 10 ದಿನಗಳ ಕಾಲ ಬಣ್ಣ, ಭಾರೀ ಶಬ್ಧ, ದೀಪಾಲಂಕಾರ ಹಾಗೂ ವಿವಿಧ ರೀತಿಯ ಆಹಾರಗಳನ್ನು ತಯಾರಿಸುತ್ತಾರೆ. ಅಲ್ಲದೇ ಇಲ್ಲಿನ ಜನರು ಹಬ್ಬದಂದು ತೆಂಗಿನ ಸಿಪ್ಪೆಯೊಳಗೆ ಬೆಂಕಿ ಹಾಕಿ ಅದನ್ನು ಕೈಯಲ್ಲಿ ಹಿಡಿದು ನೃತ್ಯ ಮಾಡುತ್ತಾರೆ. ದಸರಾದಂದು ಈ ರಾಜ್ಯದ ಮುತ್ತೈದೆಯರು ದೇವರ ಮೇಲೆ ಕುಂಕುಮ ಹಾಕುತ್ತಾರೆ. ಆ ದಿನ ದೇವಿ ತನ್ನ ಪತಿಯ ಮನೆಗೆ ಹಿಂದಿರುತ್ತಿದ್ದಾಳೆ ಎಂದು ಅಲ್ಲಿನ ಜನರು ನಂಬುತ್ತಾರೆ. ದೇವಿಗೆ ಕುಂಕುಮ ಹಾಕಿದ್ದ ನಂತರ ಮುತ್ತೈದೆಯರು ಒಬ್ಬರಿಗೊಬ್ಬರು ತಮ್ಮ ಮೇಲೆ ಕುಂಕುಮ ಎರಚಿಕೊಳ್ಳುತ್ತಾರೆ. ತಮ್ಮ ಪತಿಯ ಆಯಸ್ಸು ವೃದ್ಧಿಗಾಗಿ ಈ ರೀತಿ ಆಚರಣೆ ಮಾಡುತ್ತಾರೆ.

    ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲೂ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ರಾಮಾಯಣ ನಾಟಕವನ್ನು ಮಾಡುತ್ತಾರೆ. ಸಾಂಸ್ಕೃತಿಕ ಉಡುಗೆ ತೊಟ್ಟು ರಾಮಾಯಣದ ನಾಟಕವನ್ನು ಮಾಡುತ್ತಾರೆ. ಅಲ್ಲದೇ ರಾವಣ, ಕುಂಭಕರ್ಣ, ಮೇಘನಾದ ದೊಡ್ಡ ಪ್ರತಿಕೃತಿಯನ್ನು ರಾಮ ಹಾಗೂ ಲಕ್ಷ್ಮಣ ವೇಷಧಾರಿ ತಮ್ಮ ಬಾಣಕ್ಕೆ ಬೆಂಕಿಗೆ ಹಚ್ಚಿ ಪ್ರತಿಕೃತಿಯನ್ನು ಸುಟ್ಟು ಹಾಕುತ್ತಾರೆ.

    ಗುಜರಾತ್: ಗುಜರಾತ್ ನಲ್ಲಿ ನವರಾತ್ರಿಯಂತೂ ಅತ್ಯಂತ ಅದ್ಧೂರಿಯಿಂದ ನಡೆಯುತ್ತದೆ. ಈ ಹಬ್ಬದಂದು ಮಹಿಳೆಯರು ಹಾಗೂ ಪುರುಷರು ಸೇರಿ ಗರ್ಭಾ ನೃತ್ಯ ಮಾಡುತ್ತಾರೆ. ಈ ಹಬ್ಬದಂದು ಗುಜರಾತಿನ ತುಂಬ ದಾಂಡಿಯಾ ಕೋಲು ಮತ್ತು ಡೋಲಿನ ಶಬ್ಧವೇ ಕೇಳಿಸುತ್ತದೆ. ಸಂಪ್ರದಾಯಸ್ಥರು 9 ದಿನಗಳ ಕಾಲವೂ ಉಪವಾಸ ಮಾಡಿ ಸಂಜೆಯ ವೇಳೆ ದುರ್ಗೆಯ ಪೂಜೆ ಮಾಡಿ ನಂತರ ಊಟ ಮಾಡುತ್ತಾರೆ. ಸಂಜೆ ಹೊತ್ತಿನಲ್ಲಿ ದೇವಿಗೆ ಆರತಿ ಬೆಳಗಿ ದೇವಿಯ ಮುಂದೆ ಗರ್ಭಾ ಅಥವಾ ದಾಂಡಿಯಾ ಎಂದು ಕರೆಯಲ್ಪಡುವ ವಿಶಿಷ್ಟ ನೃತ್ಯ ಮಾಡಿ ಸಂಭ್ರಮಿಸುತ್ತಾರೆ.

    ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ನವರಾತ್ರಿಯನ್ನು ಹಬ್ಬವನ್ನು ವಿಜೃಂಭಣೆಯಿಂದ ಅತ್ಯಂತ ವೈಭವವಾಗಿ ಆಚರಿಸಲಾಗುತ್ತದೆ. ಇಲ್ಲಿ ಮಣ್ಣಿನ ಪಾತ್ರೆಯಲ್ಲಿ ಧ್ಯಾನಗಳ ಬೀಜವನ್ನು ತುಂಬಿ ಅದರ ಮೇಲೆ ಜೋಳದ ತೆನೆಗಳನ್ನು ಇಡಲಾಗುತ್ತದೆ, ನಂತರ ಆ ಮಡಿಕೆಯನ್ನು ಅದರೊಳಗಿನ ಬೀಜಗಳು ಮೊಳಕೆಯೊಡೆದು ಬರುವವರೆಗೂ ಸತತವಾಗಿ 9 ದಿನಗಳ ಕಾಲ ಭಕ್ತಿಯಿಂದ ಪೂಜಿಸುತ್ತಾರೆ. ಅಲ್ಲದೇ ಮಹಾರಾಷ್ಟ್ರದಲ್ಲಿ ನವರಾತ್ರಿ ಹಬ್ಬವನ್ನು ಹೊಸದಾಗಿ ಪ್ರಾರಂಭ ಮಾಡಲು ಇರುವ ಶುಭ ಸಂದರ್ಭವಾಗಿ ಪರಿಗಣಿಸಲಾಗುತ್ತದೆ. ಹೊಸ ಮನೆ ಅಥವಾ ಕಾರನ್ನು ಖರೀದಿಸುವುದು ಹೀಗೆ ಹೊಸ ಆರಂಭವನ್ನು ನವರಾತ್ರಿಯಿಂದಲೇ ಆರಂಭಿಸಬೇಕು ಎನ್ನುವ ನಂಬಿಕೆಯನ್ನು ಮರಾಠಿಗರು ಇಟ್ಟುಕೊಂಡಿದ್ದಾರೆ.

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

    6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

    7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv