Tag: Dasara

  • ಮೈಸೂರು ದಸರೆಗೆ ಬಲೂನ್‌ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆ – ರೇಪ್‌ & ಮರ್ಡರ್‌ ಶಂಕೆ

    ಮೈಸೂರು ದಸರೆಗೆ ಬಲೂನ್‌ ಮಾರಲು ಬಂದಿದ್ದ ಬಾಲಕಿಯ ಶವ ಪತ್ತೆ – ರೇಪ್‌ & ಮರ್ಡರ್‌ ಶಂಕೆ

    ಮೈಸೂರು: ವಸ್ತುಪ್ರದರ್ಶನ ಮೈದಾನದಲ್ಲಿ ದಸರಾದಲ್ಲಿ (Mysuru Dasara) ಬಲೂನ್ ಮಾರಲು ಬಂದಿದ್ದ 10 ವರ್ಷದ ಬಾಲಕಿಯ (Girl) ಶವ ಪತ್ತೆಯಾಗಿದೆ. ಬಾಲಕಿಯ ದೇಹದ ಮೇಲೆ ಬಟ್ಟೆ ಇಲ್ಲದೆ ಮೃತದೇಹ ಪತ್ತೆಯಾದ ಕಾರಣ ಅತ್ಯಾಚಾರ ಎಸಗಿ ಕೊಲೆ (Rape and Murder) ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

    ದಸರಾ ಸಮಯದಲ್ಲಿ ಬಲೂನ್ ವ್ಯಾಪಾರಕ್ಕಾಗಿ ಕಲಬುರಗಿ (Kalaburagi) ಕಡೆಯಿಂದ ಮೈಸೂರಿಗೆ ಹಕ್ಕಿಪಿಕ್ಕಿ ಜನಾಂಗದ 50 ಕ್ಕೂ ಹೆಚ್ಚು ಕುಟುಂಬ ಬಂದಿವೆ. ಇವರು ದೊಡ್ಡಕೆರೆ ಮೈದಾನದ ಸುತ್ತಲಿನ ರಸ್ತೆಯಲ್ಲಿ ನೆಲೆಸಿದ್ದರು. ಬುಧವಾರ ಚಾಮುಂಡೇಶ್ವರಿ ದೇವಾಲಯದ ತೆಪ್ಪೋತ್ಸವ ಮುಗಿಸಿ, ಗುರುವಾರ ಬೇರೆ ಕಡೆ ತೆರಳಲು  ಸಿದ್ಧತೆ ನಡೆಸಿದ್ದರು.

     

    ರಾತ್ರಿ ವ್ಯಾಪಾರ ಮುಗಿಸಿ ಬಂದ ಬಾಲಕಿ ತಂದೆ, ತಾಯಿಯೊಂದಿಗೆ ಮಲಗಿದ್ದಳು. ಮುಂಜಾನೆ ಮಳೆ ಬಂದು ಎಲ್ಲರೂ ಎದ್ದಾಗ ಬಾಲಕಿ ಸ್ಥಳದಿಂದ ನಾಪತ್ತೆಯಾಗಿದ್ದಳು. ಹುಡುಕಾಡಿದಾಗ ಟೆಂಟ್‌ನಿಂದ 50 ಮೀ ದೂರದಲ್ಲಿರುವ ಮಣ್ಣಿನ ರಾಶಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಇದನ್ನೂ ಓದಿ:  ರಮ್ಯಾಗೆ ಅವಹೇಳನ| ದರ್ಶನ್‌ ಅಭಿಮಾನಿಗಳ ವಿರುದ್ಧ 380 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

    ಕೇವಲ ಎರಡೇ ದಿನಗಳ ಬಾಲಕಿ ಶವ ಪತ್ತೆಯಾದ ಜಾಗದ ಬಳಿ ರೌಡಿಶೀಟರ್‌ನ ಸಹರ್ವತಿಯ ಕೊಲೆ ನಡೆದಿತ್ತು. ಈಗ ಅದೇ ಜಾಗದ ಸಮೀಪ ಬಾಲಕಿಯ ಮೃತದೇಹ ಸಿಕ್ಕಿದೆ. ವ್ಯಾಪಾರಕ್ಕೆ ಆಗಮಿಸಿದ್ಧ 50 ಹಕ್ಕಿಪಿಕ್ಕಿ ಕುಟುಂಬಸ್ಥರನ್ನು ಪೊಲೀಸರು ಈಗ ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಶ್ವಾನ ದಳ ಆಗಮಿಸಿದ್ದು, ಪೊಲೀಸರು ಸಿಸಿಟಿವಿ ಪರಿಶೀಲನೆ ಮಾಡುತ್ತಿದ್ದಾರೆ.

  • ನವರಾತ್ರಿಯ ದಿನ ನವ ಕನ್ಯೆಯರ ಪೂಜೆ ನೆರವೇರಿಸಿದ ರಾಗಿಣಿ

    ನವರಾತ್ರಿಯ ದಿನ ನವ ಕನ್ಯೆಯರ ಪೂಜೆ ನೆರವೇರಿಸಿದ ರಾಗಿಣಿ

    ಪ್ರತಿ ವರ್ಷದಂತೆ ಈ ವರ್ಷವೂ ನಟಿ ರಾಗಿಣಿ ದ್ವಿವೇದಿ ದಸರಾ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಿದ್ದಾರೆ. ಈ ವಿಡಿಯೋಗಳನ್ನು ಇದೀತ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಪಂಜಾಬ್ ಮೂಲದವರಾದ ಅವರ ಕುಟುಂಬದ ಸಂಪ್ರದಾಯದ ಪ್ರಕಾರ ನವರಾತ್ರಿ ಹಬ್ಬದಲ್ಲಿ ಕನ್ಯೆಯರ ಪೂಜೆ ವಿಶೇಷ. ಹೀಗಾಗಿ ಪ್ರತಿ ವರ್ಷ ಮನೆಗೆ ಬಡ ಕುಟುಂಬದ ಹೆಣ್ಣುಮಕ್ಕಳನ್ನ ಕರೆದು ಹೂ ಮುಡಿಸಿ, ಬಳೆ ತೊಡಿಸಿ, ಊಟ ತಿಂಡಿ ಕೊಟ್ಟು ಗಿಫ್ಟ್ ಕೊಟ್ಟು ಕಳಿಸುತ್ತಾರೆ. ಈ ಪದ್ಧತಿಯನ್ನ ಕಣಜಕ್ ಪೂಜೆ ಎಂದು ಕರೆಯಲಾಗುತ್ತೆ. ಇದನ್ನೂ ಓದಿ: BBK 12| ಬಂದ ದಿನವೇ ಔಟಾಗಿದ್ದ ರಕ್ಷಿತಾ ಶೆಟ್ಟಿ ವಾಪಸ್ – ಕಿಚ್ಚಿನೊಂದಿಗೆ ರೀ ಎಂಟ್ರಿ ಕೊಟ್ಟ ಕರಾವಳಿ ಬೆಡಗಿ

    ನವರಾತ್ರಿ ಉಪವಾಸದ 9ನೇ ದಿನ 9 ಕನ್ಯೆಯರು ಹಾಗೂ 9 ಮುತೈದೆಯರಿಗೆ ಬಳೆ ಕೊಟ್ಟು ಉಡುಗೊರೆ ನೀಡಿ ಊಟ ಬಡಿಸಿ ಅವರು ಊಟ ಮಾಡಿದ ಬಳಿಕವೇ ಉಪವಾಸ ತೊರೆಯುವ ಪದ್ಧತಿ ಇರುತ್ತೆ. ಹೀಗಾಗಿ ಕುಟುಂಬದ ಸಂಪ್ರದಾಯಂತೆ ಈ ಬಾರಿಯೂ ರಾಗಿಣಿ ತಮ್ಮ ನಿವಾಸದಲ್ಲಿ 9 ಬಡ ಕುಟುಂಬದ ಹೆಣ್ಣುಮಕ್ಕಳನ್ನ ಕರೆದು ಕಣಜಕ್ ಪೂಜಾ ಕಾರ್ಯ ಪೂರೈಸಿದ್ದಾರೆ. ಇದನ್ನೂ ಓದಿ: ‘ಕಾಂತಾರ’ಗೆ ಟಿಕೆಟ್‌ ಸಿಗದ ಕಾರ್ಯಕರ್ತರಿಗೆ ಸೋಮವಾರ ವ್ಯವಸ್ಥೆ ಮಾಡುತ್ತೇನೆ: ಪ್ರತಾಪ್‌ ಸಿಂಹ

  • ಮೈಸೂರು ಅರಮನೆ ಪೇಂಟಿಂಗ್‌ ಮುಂದೆ ದಸರಾ ಗೊಂಬೆಯಂತೆ ಕಂಗೊಳಿಸಿದ ರಮ್ಯಾ!

    ಮೈಸೂರು ಅರಮನೆ ಪೇಂಟಿಂಗ್‌ ಮುಂದೆ ದಸರಾ ಗೊಂಬೆಯಂತೆ ಕಂಗೊಳಿಸಿದ ರಮ್ಯಾ!

    – ರಾಣಿಯಂತೆ ಪೋಸ್ ಕೊಟ್ಟ ಸ್ಯಾಂಡಲ್‌ವುಡ್‌ ಕ್ವೀನ್‌! 

    ಮೋಹಕ ತಾರೆ ರಮ್ಯಾ (Actress Ramya) ದಸರಾ (Dasara) ಹಾಗೂ ವಿಜಯದಶಮಿ (Vijayadashami) ಆಚರಣೆ ಮಾಡಿ ಗೋಲ್ಡನ್‌ ಕಲರ್‌ ಸ್ಯಾರಿಯಲ್ಲಿ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದ್ದಾರೆ. ಮೈಸೂರು ದಸರಾ ಜಂಬೂ ಸವಾರಿ ಹಾಗೂ ಅರಮನೆಯ ಪೇಂಟಿಂಗ್‌ (Mysuru Palace) ಮುಂದೆ ದಸರಾ ಗೊಂಬೆಯಂತೆ ಪೋಸ್‌ ಕೊಟ್ಟಿದ್ದಾರೆ!

    ಈ ಫೋಟೋಗಳನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿರುವ ರಮ್ಯಾ, ಚೆಂದದ ಸಾಲೊಂದನ್ನು ಕ್ಯಾಪ್ಷನ್‌ ಕೊಟ್ಟಿದ್ದಾರೆ. ಒಳ್ಳೆಯದು ಮತ್ತು ಕೆಟ್ಟದು, ಸರಿ ಮತ್ತು ತಪ್ಪು ಎಂಬ ದ್ವಂದ್ವತೆಯನ್ನು ಮೀರಿ ದೈವಿಕತೆಯನ್ನು ಮಾತ್ರ ಕಂಡುಕೊಳ್ಳೋಣ ಎಂದು ಬರೆದುಕೊಂಡಿದ್ದಾರೆ. ಫೋಟೋಗಳಿಗೆ ಮನಸೋತ ಫ್ಯಾನ್ಸ್‌ ʻಅರೆರೆ ಅಪ್ಸರೆʼ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಇದನ್ನೂ ಓದಿ: 2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, ಹೌಸ್‌ಫುಲ್‌ ಶೋಗಳ ಈ ಅದ್ಭುತ ಪಯಣ: ಜನತೆಗೆ ರಿಷಬ್‌ ಕೃತಜ್ಞತೆ

    ಫೋಟೋ ಅಪ್ಲೋಡ್‌ ಆಗಿ 30 ನಿಮಿಷದಲ್ಲೇ ಸುಮಾರು 14,500 ಮಂದಿಯ ಲೈಕ್‌ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ದಸರಾ ಮೆರವಣಿಗೆ ವೇಳೆ ತಮಟೆ ಸದ್ದಿಗೆ ಸ್ಟೇಪ್ ಹಾಕಿದ ಶಿವಣ್ಣ

  • ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಅದ್ಧೂರಿ ತೆರೆ

    ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಅದ್ಧೂರಿ ತೆರೆ

    ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ (Mysuru Dasara) ಅದ್ಧೂರಿ ತೆರೆ ಬಿದ್ದಿದೆ. 6ನೇ ಬಾರಿಗೆ ಅಭಿಮನ್ಯು ಯಶಸ್ವಿಯಾಗಿ ಜಂಬೂಸವಾರಿ ಮುಗಿಸಿದ್ದು, ಎಲ್ಲಾ ಕಾರ್ಯಗಳು ಅಭೂತಪೂರ್ವ ಯಶಸ್ಸು ಕಂಡಿದೆ.

    415ನೇ ದಸರಾ ಮಹೋತ್ಸವದ ಎಲ್ಲಾ ಕಾರ್ಯಗಳಿಗೆ ವಿಧ್ಯುಕ್ತವಾಗಿ ತೆರೆ ಬಿದ್ದಿದ್ದು, ಎಲ್ಲವೂ ಕೂಡ ಸಾಂಪ್ರದಾಯಿಕವಾಗಿ ಮತ್ತು ಯಶಸ್ವಿಯಾಗಿ ಪೂರ್ಣಗೊಂಡಿದೆ. ಕಳೆದ 11 ದಿನಗಳಿಂದ ಮೈಸೂರಿನಲ್ಲಿ ನಡೆದ ದಸರಾ ಮಹೋತ್ಸವ ಸಂಪನ್ನವಾಗಿದೆ. 22ನೇ ತಾರೀಖು ವಿಜೃಂಭಣೆಯಿಂದ ಆರಂಭಗೊಂಡಿದ್ದ ದಸರಾ ಅನೇಕ ಅದ್ಧೂರಿ ಕಾರ್ಯಕ್ರಮಗಳೊಂದಿಗೆ ಸಾಗಿ, ಯಶಸ್ವಿ ಜಂಬೂಸವಾರಿಯೊಂದಿಗೆ ತೆರೆ ಬಿದ್ದಿದೆ. ಗುರುವಾರ (ಅ.2) ವಿಜಯದಶಮಿ ಹಿನ್ನೆಲೆ ಬೆಳಗ್ಗೆ 12 ಗಂಟೆಗೆ ಬನ್ನಿ ಪೂಜೆಯೊಂದಿಗೆ ಅರಮನೆ ದಸರಾ ಮುಕ್ತಾಯವಾಯಿತು. ಬಳಿಕ ಸಿಎಂ ನಂದಿಧ್ವಜ ಪೂಜೆ ಬಳಿಕ ಮೆರವಣಿಗೆಗೆ ಚಾಲನೆ ನೀಡಿದರು. ಕಲಾ ತಂಡಗಳು ಮತ್ತು ಆನೆ ಮೆರವಣಿಗೆ ಬಳಿಕ 4.41ಕ್ಕೆ ಸಿಎಂ ಮತ್ತು ಗಣ್ಯರು ಜಂಬೂಸವಾರಿಗೆ ಚಾಲನೆ ನೀಡಿದರು. ಕ್ಯಾಪ್ಟನ್ ಅಭಿಮನ್ಯು 6ನೇ ಬಾರಿಗೆ ಯಶಸ್ವಿಯಾಗಿ ಜಂಬೂಸವಾರಿ ಹೊತ್ತು ತನ್ನ ಜವಾಬ್ದಾರಿ ಮೆರೆದ.ಇದನ್ನೂ ಓದಿ:ಚಿತ್ರಗಳಲ್ಲಿ ಮೈಸೂರು ಜಂಬೂಸವಾರಿ ನೋಡಿ

    ಇನ್ನೂ ಜಂಬೂಸವಾರಿ ಬಳಿಕ ಬನ್ನಿಮಂಟಪ ಮೈದಾನದಲ್ಲಿ ಚಿತ್ತಾಕರ್ಷಕ ಪಂಜಿನ ಕವಾಯತು ನಡೆಯಿತು. ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಸಿಎಂ, ಡಿಸಿಎಂ ಸೇರಿದಂತೆ ಸಚಿವರು ಕೂಡ ದಸರಾ ಮುಕ್ತಾಯ ಪಂಜಿನ ಮೆರವಣಿಗೆಯಲ್ಲಿ ಭಾಗಿಯಾದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭವಾದ ಕಾರ್ಯಕ್ರಮ ಅಶ್ವದಳ ತಂಡದ ಸಾಹಸ ಪ್ರದರ್ಶನ ಮೈನವಿರೆಳುಸುವಂತಿತ್ತು. ಬಳಿಕ ಅಂತಿಮ ಡ್ರೋಣ್ ಶೋ ನೆರೆದಿದ್ದವರ ಕಣ್ಮನ ತಣಿಸಿತು. ಕೊನೆಯಲ್ಲಿ ಪೊಲೀಸ್ ತಂಡ, ರೈಲ್ವೆ ತಂಡಗಳಿಂದ ಮೂಡಿಬಂದ ಪಂಜಿನ ಕವಾಯತು ನೆರೆದಿದ್ದವರನ್ನ ಮತ್ತಷ್ಟು ರಂಜಿಸಿತು. ಈ ಮೂಲಕ 2025ರ ದಸರಾ ಮಹೋತ್ಸವಕ್ಕೆ ಅದ್ದೂರಿ ತೆರೆ ಬಿತ್ತು

    ಒಟ್ಟಾರೆ ಯಶಸ್ವಿಯಾಗಿ ದಸರಾ ಮುಕ್ತಾಯವಾಗಿದ್ದು, ಮುಂದಿನ ನಾಲ್ಕೈದು ದಿನ ನಗರದಲ್ಲಿ ದಸರಾ ಕಲರವ ಮುಂದುವರೆಯಲಿದೆ. ಲೈಟಿಂಗ್ ಸೇರಿದಂತೆ ಹಲವು ಕಾರ್ಯಗಳು ಈ ವಾರ ಪೂರ್ತಿ ಮುಂದುವರೆಯಲಿದೆ.ಇದನ್ನೂ ಓದಿ:ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ

  • ತುಮಕೂರು ದಸರಾ – ಜಂಬೂ ಸವಾರಿ ಸಂಪನ್ನ

    ತುಮಕೂರು ದಸರಾ – ಜಂಬೂ ಸವಾರಿ ಸಂಪನ್ನ

    ತುಮಕೂರು: ತುಮಕೂರಿನ ಎರಡನೇ ವರ್ಷದ ದಸರಾ (Tumakuru Dasara) ವಿಜೃಂಭಣೆಯಿಂದ ನಡೆಯಿತು. ಅಂಬಾರಿ ಹೊತ್ತ ಆನೆ ಶ್ರೀರಾಮ ಶಾಂತತೆಯಿಂದ ಹೆಜ್ಜೆ ಹಾಕಿ ಎಲ್ಲರ ಕಣ್ಮನ ಸೆಳೆಯಿತು.

    ಮಧ್ಯಾಹ್ನ 12 ಗಂಟೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ನಂದಿ ಧ್ವಜಕ್ಕೆ ಪೂಜೆ ನೆರವೇರಿಸುವ ಮೂಲಕ ದಸರಾ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಕಲಾತಂಡಗಳು, 50ಕ್ಕೂ ಹೆಚ್ಚು ದೇವರುಗಳು, ಪೊಲೀಸ್ ಕುದುರೆ ಸವಾರಿ, ನಾಟಿ ಎತ್ತುಗಳ ಮೆರವಣಿಗೆಯು ನಗರದ ಬಿಜಿಎಸ್ (ಟೌನ್ ಹಾಲ್ ವೃತ್ತ) ವೃತ್ತದಿಂದ ಪ್ರಾರಂಭಗೊಂಡಿತು. ಇದನ್ನೂ ಓದಿ: 5 ವರ್ಷದ ಬಳಿಕ ಭಾರತ, ಚೀನಾ ಮಧ್ಯೆ ನೇರ ವಿಮಾನ ಸೇವೆ ಆರಂಭ

    ಎರಡು ಲಕ್ಷ್ಮಿ ಆನೆಗಳ ಜೊತೆ ಅಂಬಾರಿ ಹೊತ್ತು ಬಂದ ಶ್ರೀರಾಮ ಆನೆಯ ಮೇಲೆ ನಾಡದೇವತೆಗೆ ಗೃಹ ಸಚಿವ ಪರಮೇಶ್ವರ್ ಪುಷ್ಪಾರ್ಚನೆ ಮಾಡುವ ಮೂಲಕ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದರು. ಇದನ್ನೂ ಓದಿ: ಬೆಂಬಲ ಬೆಲೆಯಲ್ಲಿ ಸೋಯಾಬಿನ್, ಶೇಂಗಾ ಖರೀದಿ: ನೋಂದಣಿ, ಖರೀದಿ ಏಕಕಾಲಕ್ಕೆ ಆರಂಭಿಸಲು ಶಿವಾನಂದ ಪಾಟೀಲ್ ಸೂಚನೆ

    ಅಂಬಾರಿ ಮೆರವಣಿಗೆಯು ಬಿಜಿಎಸ್ ವೃತ್ತದಿಂದ ಕೋಟೆ ಆಂಜನೇಯ ಸ್ವಾಮಿ ಸರ್ಕಲ್‌ನಿಂದ ಕೋತಿತೋಪು, ಅಲ್ಲಿಂದ ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್‌ನಿಂದ ನಗರದ ಹೈಸ್ಕೂಲ್ ಮೈದಾನವನ್ನು ತಲುಪಿತು. ಇದನ್ನೂ ಓದಿ: Anekal | ವಿಜೃಂಭಣೆಯಿಂದ ಜರುಗಿದ ಚೌಡೇಶ್ವರಿ ಜಂಬೂಸವಾರಿ – ಪುಳಕಿತರಾದ ಭಕ್ತ ಸಾಗರ

  • Anekal | ವಿಜೃಂಭಣೆಯಿಂದ ಜರುಗಿದ ಚೌಡೇಶ್ವರಿ ಜಂಬೂಸವಾರಿ – ಪುಳಕಿತರಾದ ಭಕ್ತ ಸಾಗರ

    Anekal | ವಿಜೃಂಭಣೆಯಿಂದ ಜರುಗಿದ ಚೌಡೇಶ್ವರಿ ಜಂಬೂಸವಾರಿ – ಪುಳಕಿತರಾದ ಭಕ್ತ ಸಾಗರ

    ಆನೇಕಲ್: ಮಿನಿ ಮೈಸೂರು ಖ್ಯಾತಿಯ ಆನೇಕಲ್ (Anekal) ಪಟ್ಟಣದಲ್ಲಿ ಶಕ್ತಿ ದೇವತೆ ಚೌಡೇಶ್ವರಿ ದೇವಿ (Chowdeshwari) ವಿಜಯದಶಮಿ (Vijayadashami) ದಸರಾ ಉತ್ಸವ ಮತ್ತು ಜಂಬೂಸವಾರಿ (Jamboo Savari) ವಿಜೃಂಭಣೆಯಿಂದ ಆಚರಿಸಲಾಯಿತು. ನಾಡ ಹಬ್ಬ ಮೈಸೂರು ದಸರಾದಲ್ಲಿ ಚಾಮುಂಡೇಶ್ವರಿಯ ಅಂಬಾರಿ ಹೊತ್ತು ಕ್ಯಾಪ್ಟನ್ ಅಭಿಮನ್ಯು ಹೆಜ್ಜೆ ಹಾಕಿದ್ರೆ ಆನೇಕಲ್‌ನಲ್ಲಿ ಕೇರಳದ ಕೊಚ್ಚಿಯ ಶೇಖರ್ ಆನೆ ಚೌಡೇಶ್ವರಿ ದೇವಿ ಉತ್ಸವ ಮೂರ್ತಿ ಅಂಬಾರಿ ಹೊತ್ತು ಹೆಜ್ಜೆ ಹಾಕಿತು.

    ಮೈಸೂರಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿ ಜಂಬೂಸವಾರಿ ನಡೆಸಿದಂತೆ ಆನೇಕಲ್‌ನಲ್ಲಿ ನಾಡಹಬ್ಬ ದಸರಾ (Dasara) ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದಾರೆ. ನಗರದ ಆದಿ ದೇವತೆ ಚೌಡೇಶ್ವರಿ ದೇವಿ ಅಂಬಾರಿಯನ್ನು ಹೊತ್ತ ಕೇರಳದ ಕೊಚ್ಚಿಯ ಶೇಖರ್ ಆನೆ ಪಟ್ಟಣದ ತಾಲೂಕು ಕಚೇರಿಯಿಂದ ತಿಲಕ್ ವೃತ್ತದ ಚೌಡೇಶ್ವರಿ ದೇವಾಲಯದ ಬಳಿ ಬರುತ್ತಿದ್ದಂತೆ ಜನಸಾಗರ ತುಂಬಿತ್ತು. ಗಣ್ಯರು ಜಂಬೂಸವಾರಿ ಹೊರಟಿದ್ದ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿದ್ದಾರೆ. ಬಳಿಕ ಆನೇಕಲ್ ನಗರದ ಪ್ರಮುಖ ಬೀದಿಗಳಲ್ಲಿ ಜಂಬೂಸವಾರಿ ಗಜಗಾಂಭೀರ್ಯವಾಗಿ ಸಾಗಿದೆ. ಇದನ್ನೂ ಓದಿ: ದಾವಣಗೆರೆಯಲ್ಲಿ ವಿಜಯದಶಮಿ ಶೋಭಾಯಾತ್ರೆ – 50,000 ಮಂದಿ ಭಾಗಿ, ಕಣ್ಮನ ಸೆಳೆಯುತ್ತಿರುವ ಟ್ಯಾಬ್ಲೋಗಳು

    ಇದಕ್ಕೂ ಮೊದಲು ತಿಲಕ್ ವೃತ್ತದ ಬಳಿ ಚೌಡೇಶ್ವರಿ ದೇವಿ ಅಂಬಾರಿ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪಕ್ಕದ ತಮಿಳುನಾಡು, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಂದ ಆಪಾರ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಚೌಡೇಶ್ವರಿ ದೇವಿ ಅಂಬಾರಿ ಹೊತ್ತು ಸಾಗಿದ ಶೇಖರ್ ಆನೆಯನ್ನು ಕಂಡು ಭಕ್ತರು ರೋಮಾಂಚನಗೊಂಡಿದ್ದಾರೆ. ಇದನ್ನೂ ಓದಿ: ಚಿತ್ರಗಳಲ್ಲಿ ಮೈಸೂರು ಜಂಬೂಸವಾರಿ ನೋಡಿ

    ಆನೇಕಲ್ ಪಟ್ಟಣದ ಚೌಡೇಶ್ವರಿ ದೇವಿ ದಸರಾ ಮಹೋತ್ಸವ ನೋಡಲು ಕಳೆದ ಮೂರು ವರ್ಷದಿಂದ ಇಲ್ಲಿಗೆ ಬರುತ್ತೆವೆ. ಈ ಬಾರಿಯು ಕುಟುಂಬ ಸಮೇತ ಆಗಮಿಸಿದ್ದು, ತಾಯಿ ಚೌಡೇಶ್ವರಿ ಜಂಬೂ ಸವಾರಿಯನ್ನು ನೋಡಲು ತುಂಬಾ ಖುಷಿಯಾಯಿತು. ತುಂಬಾ ವಿಜೃಂಭಣೆಯಿಂದ ಈ ಬಾರಿ ದಸರಾ ಆಚರಣೆ ಮಾಡಿದ್ದಾರೆ. ಸಾವಿರಾರು ಮಂದಿ ಭಕ್ತರು ಆಗಮಿಸಿದ್ದು, ದೇವಿಯ ದರ್ಶನ ಪಡೆದಿದ್ದಾರೆ. ವಿಶ್ವ ವಿಖ್ಯಾತ ಮೈಸೂರು ದಸರಾ ನೋಡಲು ಸಾದ್ಯವಾಗದ ಭಕ್ತರು ಆನೇಕಲ್ ದಸರಾ ನೋಡಿ ಕಣ್ತುಂಬಿಕೊಳ್ಳುತ್ತಾರೆ. ಜೊತೆಗೆ ವಿವಿಧ ಕಡೆಯಿಂದ ಆಗಮಿಸಿದ್ದ ಆಕರ್ಷಕ ಕಲಾತಂಡಗಳು ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ನೆರೆದಿದ್ದ ಜನರನ್ನು ರಂಜಿಸಿವೆ ಎಂದು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ದಸರಾ | ಜಂಬೂ ಸವಾರಿಗೆ ಅದ್ದೂರಿ ಚಾಲನೆ

  • ಚಿತ್ರಗಳಲ್ಲಿ ಮೈಸೂರು ಜಂಬೂಸವಾರಿ ನೋಡಿ

    ಚಿತ್ರಗಳಲ್ಲಿ ಮೈಸೂರು ಜಂಬೂಸವಾರಿ ನೋಡಿ

    ವಿಜಯದಶಮಿಯ ಪ್ರಮುಖ ಆಕರ್ಷಣೆ, ಮೈಸೂರು ದಸರಾದ ವಿಶ್ವವಿಖ್ಯಾತ ಜಂಬೂಸವಾರಿ ಅದ್ಧೂರಿಯಾಗಿ ನಡೆದಿದೆ. 750 ಕೆಜಿ ತೂಕದ ಬಂಗಾರ ಅಂಬಾರಿಯನ್ನು 6ನೇ ಬಾರಿ ಹೊತ್ತ ಕ್ಯಾಪ್ಟನ್ ಅಭಿಮನ್ಯು ಗಂಭೀರವಾಗಿ ಹೆಜ್ಜೆ ಹಾಕಿದ್ದಾನೆ. ಅಭಿಮನ್ಯುಗೆ ಕುಮ್ಕಿ ಆನೆಗಳಾದ ಕಾವೇರಿ, ರೂಪ ಜೊತೆಗಿದ್ದವು. ಸಂಜೆ 4:42ರಿಂದ 5:06 ಗಂಟೆಯ ಕುಂಭಲಗ್ನದಲ್ಲಿ ತಾಯಿ ಚಾಮುಂಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪಾರ್ಚನೆ ಮಾಡಿ ಜಂಬೂ ಸವಾರಿಗೆ ಚಾಲನೆ ನೀಡಿದರು.

    ಜಂಬೂಸವಾರಿಗೆ ಚಾಲನೆ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ

     

     

    ಜಂಬೂಸವಾರಿ ವೀಕ್ಷಿಸಲು ಅರಮನೆ ಮುಂಭಾಗ ಸೇರಿದ ಜನ

    750 ಕೆಜಿ ಚಿನ್ನದ ಅಂಬಾರಿ ಹೊತ್ತು ಸಾಗುತ್ತಿರುವ ಅಭಿಮನ್ಯು

    ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ

    ದೊಡ್ಡ ಗಡಿಯಾರ ತಿರುವು, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ಸೇರಿದ ಜನ

    ಅಭಿಮನ್ಯುವಿಗೆ ಸಾಥ್‌ ನೀಡಿದ ಕಾವೇರಿ, ರೂಪ

    ಅಭಿಮಾನಿಗಳಿಗೆ ಕೈ ಬೀಸಿದ ಅಭಿಮನ್ಯು ಮಾವುತ ಜೆ.ಎಸ್‌.ವಸಂತ

    ಜಂಬೂಸವಾರಿ ವೀಕ್ಷಿಸಲು ರಸ್ತೆ ಬದಿಯಲ್ಲಿ ಕಾದು ಕುಳಿತಿರುವ ಜನರು

  • ಶಿವಮೊಗ್ಗ ದಸರಾ | ಜಂಬೂ ಸವಾರಿಗೆ ಅದ್ದೂರಿ ಚಾಲನೆ

    ಶಿವಮೊಗ್ಗ ದಸರಾ | ಜಂಬೂ ಸವಾರಿಗೆ ಅದ್ದೂರಿ ಚಾಲನೆ

    ಶಿವಮೊಗ್ಗ: ನಗರದಲ್ಲಿ (Shivamogga) ದಸರಾ (Dasara) ಜಂಬೂ ಸವಾರಿ ಆರಂಭಗೊಂಡಿದೆ. ಜಂಬೂ ಸವಾರಿಗೆ (Jamboo Savari) ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು. ನಾಡದೇವಿ ಚಾಮುಂಡೇಶ್ವರಿಯನ್ನು ಬೆಳ್ಳಿ ಅಂಬಾರಿಯಲ್ಲಿ ಹೊತ್ತು ಸಾಗರ ಆನೆ ಮೆರವಣಿಗೆಯಲ್ಲಿ ಸಾಗಿತು.

    ಇದಕ್ಕೂ ಮೊದಲು ಶಿವಪ್ಪನಾಯಕ ಅರಮನೆ ಮುಂಭಾಗ ನಂದಿ ಕೋಲಿಗೆ ಸಚಿವ ಮಧು ಬಂಗಾರಪ್ಪ, ಶಾಸಕ ಎಸ್‌.ಎನ್.ಚನ್ನಬಸಪ್ಪ ಅವರು ಪೂಜೆ ಸಲ್ಲಿಸಿದರು. ಬಳಿಕ ದೇವಿಗೆ ಪುಷ್ಪ ನಮನ ಸಲ್ಲಿಸಿದರು. ಇದನ್ನೂ ಓದಿ: ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ

    ಈ ಬಗ್ಗೆ ಮಾತನಾಡಿದ ಸಚಿವರು, ಉಸ್ತುವಾರಿ ಸಚಿವನಾಗಿ ಇದು ಮೂರನೇ ವರ್ಷದ ದಸರಾದಲ್ಲಿ ಭಾಗವಹಿಸುತ್ತಿದ್ದೇನೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಅದ್ಧೂರಿಯಾಗಿ ದಸರಾ ಆಚರಣೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ಕಲ್ಯಾಣ ಕರ್ನಾಟಕ ದಸರಾ ಎಂದೇ ಖ್ಯಾತಿಯಾದ ಹೇಮಗುಡ್ಡದಲ್ಲಿ ರಂಗೇರಿದ ಜಂಬೂಸವಾರಿ

  • ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ

    ಮೈಸೂರು ದಸರಾ ಜಂಬೂಸವಾರಿಗೆ ಚಾಲನೆ

    – ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡ ಅಧಿದೇವತೆ ಚಾಮುಂಡೇಶ್ವರಿ
    – ಗಜಗಾಂಭೀರ್ಯದಿಂದ ಹೆಜ್ಜೆ ಹಾಕಿದ ಕ್ಯಾಪ್ಟನ್‌ ಅಭಿಮನ್ಯು

    ಮೈಸೂರು: ಲಕ್ಷಾಂತರ ಜನರು ಕಾತುರದಿಂದ ಕಾದಿದ್ದ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಜಂಬೂಸವಾರಿಗೆ(Jambusavari) ಅದ್ದೂರಿ ಚಾಲನೆ ಸಿಕ್ಕಿದೆ.

    ಸಂಜೆ 4.42ರಿಂದ 5.06 ಅವಧಿಯ ಶುಭ ಕುಂಭ ಲಗ್ನದಲ್ಲಿ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.  ಸಿಎಂ ಜೊತೆ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹದೇವಪ್ಪ, ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ತಂಗಡಗಿ, ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀಕಾಂತ ರೆಡ್ಡಿ, ಪೊಲೀಸ್ ಆಯುಕ್ತೆ ಸೀಮಾಲಾಟ್ಕರ್ ಪುಷ್ಪಾರ್ಚನೆ ಮಾಡಿದರು.

    ಅಲಂಕೃತಗೊಂಡ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ನಾಡ ಅಧಿದೇವತೆ ಚಾಮುಂಡಿತಾಯಿಯನ್ನು (Chamundeshwari) ಹೊತ್ತು 6ನೇ ಬಾರಿ ಅಭಿಮನ್ಯು (Abhimnyu) ರಾಜಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿದ್ದಾನೆ.

     

    ದಸರಾ ಮೆರವಣಿಗೆಯಲ್ಲಿ ನಿಶಾನೆ ಆನೆಯಾಗಿ ಧನಂಜಯ ಹೆಜ್ಜೆ ಹಾಕಿದರೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ರೂಪ, ನೌಫತ್‌ ಆನೆಯಾಗಿ ಗೋಪಿ, ಪಟ್ಟದ ಆನೆಯಾಗಿ ಶ್ರೀಕಂಠ ಮತ್ತು ಲಕ್ಷ್ಮಿ ಹೆಜ್ಜೆ ಹಾಕುತ್ತಿವೆ. ಸಾಲಾನೆಯಾಗಿ ಮಹೇಂದ್ರ, ಭೀಮ, ಕಂಜನ್, ಏಕಲವ್ಯ, ಪ್ರಶಾಂತ, ಸುಗ್ರೀವ, ಹೇಮಾವತಿ ಈ ಆನೆಗಳು ಅಭಿಮನ್ಯುವಿಗೆ ಸಾಥ್‌ ನೀಡುತ್ತಿವೆ.

    ಅಂಬಾರಿಯಲ್ಲಿ ವಿರಾಜಮಾನಳಾಗಿದ್ದ ಚಾಮುಂಡಿತಾಯಿಯನ್ನು ಕಣ್ತುಂಬಿಕೊಂಡು ಜನರು ಧನ್ಯತಾ ಭಾವ ಮೆರೆದರು. ದಸರಾ ಜಂಬೂಸವಾರಿ ವೀಕ್ಷಿಸಲು ಅರಮನೆ ಅಂಗಳದಲ್ಲಿ 48 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿತ್ತು.

     

    ದಸರಾ ಜಂಬೂಸವಾರಿಗೆ ಸ್ತಬ್ಧಚಿತ್ರ ಹಾಗೂ ವಿವಿಧ ಕಲಾತಂಡಗಳು ಮೆರುಗು ನೀಡುತ್ತಿವೆ.  ಒಟ್ಟು 57 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ. ಮೆರವಣಿಗೆಯಲ್ಲಿ ಸಾಗುವ ದಾರಿಯಲ್ಲಿ 140ಕ್ಕೂ ಹೆಚ್ಚು ಕಲಾ ತಂಡಗಳು ಭಾಗಿಯಾಗಿವೆ.

    ಉತ್ತರ ದ್ವಾರದ ಮೂಲಕ ತೆರಳಿರುವ ಜಂಬೂಸವಾರಿ ಮೆರವಣಿಗೆ ಕೆ.ಆರ್ ಸರ್ಕಲ್, ಸಯ್ಯಾಜಿರಾವ್ ರಸ್ತೆ, ಸರ್ಕಾರಿ ಆಯುರ್ವೇದ ಸರ್ಕಲ್, ಬಂಬೂ ಬಜಾರ್, ಹೈವೇ ಸರ್ಕಲ್ ಮೂಲಕ ಸಾಗಿ ಸಂಜೆ ವೇಳೆಗೆ ಬನ್ನಿಮಂಟಪ ಪಂಜಿನ ಕವಾಯತು ಮೈದಾನ ತಲುಪಲಿದೆ.

  • ವಿಜಯದಶಮಿಗೂ ರಾಮಾಯಣಕ್ಕೂ ಇದೆ ನಂಟು- ಪಾಂಡವರಿಗೆ ಏನು ಸಂಬಂಧ?

    ವಿಜಯದಶಮಿಗೂ ರಾಮಾಯಣಕ್ಕೂ ಇದೆ ನಂಟು- ಪಾಂಡವರಿಗೆ ಏನು ಸಂಬಂಧ?

    ಶ್ವಯುಜ ಶುಕ್ಲಪಾಡ್ಯದಂದು ಆರಂಭಗೊಂಡು ನವರಾತ್ರಿ (Navarathri)  ಹಬ್ಬದ ಒಂಭತ್ತು ದಿನಗಳು ಕಳೆದ ನಂತರ ಬರುವ ಹತ್ತನೇ ದಿನವೇ ‘ದಶಮಿ’. ಇದನ್ನೇ ವಿಜಯ ದಶಮಿ (Vijaya Dashmi) ಎಂದು ಕರೆಯುತ್ತಾರೆ. ಈ ದಿನ ಸಂತೋಷದ ಸಾಂಸ್ಕೃತಿಕ, ಧಾರ್ಮಿಕ, ವೈಭವದ ಮೆರವಣಿಗೆ ದೇಶದೆಲ್ಲೆಡೆ ನಡೆಯುತ್ತದೆ.

    ವಿಜಯದಶಮಿಯ ಹಿನ್ನೆಲೆ ಏನು?
    ಕಾಡೆಮ್ಮೆ ರೂಪದ ಮಹಿಷಾಸುರ (Mahishura) ದೀರ್ಘ ತಪಸ್ಸು ಮಾಡಿ, ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂಹರಿಸಲು ಸಾಧ್ಯವಾಗಬಾರದು ಎಂದು ಬ್ರಹ್ಮನಿಂದ ವರವನ್ನು ಪಡೆದಿದ್ದನು. ವರ ಸಿಕ್ಕಿದ ಕೂಡಲೇ ಅಹಂಕಾರದಿಂದ ಜನರಿಗೆ ಮತ್ತು ದೇವತೆಗಳಿಗೆ ತೊಂದರೆ ಕೊಡಲು ಆರಂಭಿಸಿದ. ಈತನ ಉಪಟಳವನ್ನು ತಾಳಲಾರದೇ ದೇವತೆಗಳು ಆದಿಶಕ್ತಿಯನ್ನು ಪೂಜಿಸಿ ಮಹಿಷನನ್ನು ಹತ್ಯೆ ಮಾಡುವಂತೆ ಬೇಡಿಕೊಳ್ಳುತ್ತಾರೆ. ಪ್ರಾರ್ಥನೆ ಕೇಳಿದ ದೇವಿ ದುರ್ಗೆಯಾಗಿ ಸಿಂಹದ ಮೇಲೆ ಕುಳಿತು, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಧರೆಗಿಳಿದಳು. ರಾಕ್ಷಸನಾದ ಮಹಿಷಾಸುರನನ್ನು ದಶಮಿಯ ದಿನ ಸಂಹಾರ ಮಾಡಿದಳು. ಅಂದಿನಿಂದ ದಶಮಿಯಂದು ಮಹಿಷಾಸುರನ್ನು ಕೊಂದು ವಿಜಯ ಸಿಕ್ಕಿದ್ದಕ್ಕೆ `ವಿಜಯದಶಮಿ’ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ.

    ರಾಮಾಯಣಕ್ಕೆ ಏನು ಸಂಬಂಧ?
    ರಾವಣನನ್ನು ಸಂಹಾರ ಮಾಡುವ ಮೊದಲು ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ ಯುದ್ಧದಲ್ಲಿ ರಾವಣನನ್ನು ವಧಿಸಿದನು. ‘ದಶಹರ’ದಂದು ದಶಕಂಠನಾಗಿದ್ದ ರಾವಣನನ್ನು ಶ್ರೀರಾಮನು ಸಂಹರಿಸಿದ ಬಳಿಕ ವಿಜಯೋತ್ಸವ ನಡೆಯಿತು ಎನ್ನುವ ಪ್ರತೀತಿ ಇದೆ. ಹೀಗಾಗಿ ಉತ್ತರಭಾರತ ಕಡೆ ದಸರಾ ಸಮಯದಲ್ಲಿ 10 ದಿನಗಳ ಕಾಲ ರಾಮನ ವಿವಿಧ ಘಟನೆಗಳನ್ನು ವಿವರಿಸುವ ರಾಮಲೀಲಾ ಕಥನ ನಡೆಯುತ್ತದೆ. ದಶಮಿಯಂದು ರಾವಣನ ಆಕೃತಿಯನ್ನು ಸುಡಲಾಗುತ್ತದೆ. ದೆಹಲಿಯಲ್ಲಿ ರಾಷ್ಟ್ರೀಯ ಮಹತ್ವ ಇರುವ ಹಬ್ಬ ಎಂಬಂತೆ ಆಚರಿಸಲಾಗುತ್ತದೆ. ರಾಮಲೀಲಾ ಮೈದಾನದಲ್ಲಿ ಈ ಹಬ್ಬಕ್ಕಾಗಿ ಭಾರೀ ಏರ್ಪಾಡು ನಡೆಯುತ್ತದೆ.

    ಪಾಂಡವರಿಗೂ ಏನು ಸಂಬಂಧ?
    ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ಪಾಂಡವರು ಒಂದು ವರ್ಷದ ಅಜ್ಞಾತವಾಸವನ್ನು ಮತ್ಸ್ಯದೇಶದಲ್ಲಿ ಕಳೆಯಲು ಮುಂದಾಗುತ್ತಾರೆ. ಈ ದೇಶದ ರಾಜನಾದ ವಿರಾಟನ ಆಸ್ಥಾನದಲ್ಲಿ ಆಗ ಧರ್ಮರಾಜ ಕಂಕಭಟ್ಟನಾದರೆ, ಭೀಮ ಬಾಣಸಿಗನಾದ ವಲಲನಾಗಿ ವೇಷ ಬದಲಾಯಿಸುತ್ತಾರೆ. ಅರ್ಜುನ ಬೃಹನ್ನಳೆಯಾಗಿ ನೃತ್ಯ ಶಿಕ್ಷಕಿಯಾಗಿ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟನ ಪತ್ನಿಯಾದ ಸುದೇಷ್ಣೆಯ ಸೇವೆಯಲ್ಲಿ ನಿಂತಳು. ಅಜ್ಞಾತವಾಸದ ಕೊನೆಯಲ್ಲಿ ಕುರುಸೇನೆ ವಿರಾಟನ ರಾಜ್ಯದಲ್ಲಿರುವ ಗೋವುಗಳನ್ನು ಅಪಹರಿಸಿತ್ತು. ಈ ಸಮಯದಲ್ಲಿ ವಿರಾಟನ ಪುತ್ರನಾದ ಉತ್ತರಕುಮಾರ ನಾನು ಕುರುಸೇನೆಯನ್ನು ಸೆದೆ ಬಡಿಯುತ್ತೇನೆ ಎಂದು ಹೇಳಿ ಜಂಬ ಕೊಚ್ಚಿಕೊಂಡು ಯುದ್ಧಕ್ಕೆ ಹೊರಟಿದ್ದ. ಬೃಹನ್ನಳೆಯನ್ನು ಸಾರಥಿಯನ್ನಾಗಿ ಮಾಡಿ ಯುದ್ಧಕ್ಕೆ ಕರೆದುಕೊಂಡು ಹೋದ. ಯುದ್ಧದಲ್ಲಿ ಸೋಲು ಸಮೀಪವಾಗುತ್ತಿದೆ ಎಂದಾಗ  ಉತ್ತರ ಕುಮಾರ ಯುದ್ಧದಿಂದ ಹಿಂದಕ್ಕೆ ಸರಿಯುತ್ತೇನೆ. ದಯವಿಟ್ಟು ಇಲ್ಲಿಂದ ತೆರಳೋಣ ಎಂದು ಹೇಳುತ್ತಾನೆ.  ಈ ವೇಳೆ ಬೃಹನ್ನಳೆ ರೂಪದಲ್ಲಿದ್ದ ಅರ್ಜುನ ಅಜ್ಞಾತವಾಸದ ಸಮಯದಲ್ಲಿ ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ಶಸ್ತ್ರಾಸ್ತ್ರವನ್ನು ತೆಗೆದು ವಿರಾಟರಾಜನ ಶತ್ರುಗಳನ್ನು ಸೋಲಿಸುತ್ತಾನೆ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಕುರುಸೇನೆಯನ್ನು ವಿರಾಟ ಸೇನೆ ಸೋಲಿಸುತ್ತದೆ. ಈ ವಿಜಯದ ಕುರುಹಾಗಿ ಒಂಭತ್ತನೇ ದಿನ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ.

    ಕಲಿಯುಗದಲ್ಲೂ ಆಚರಣೆ:
    ನವಮಿಯಂದು ಆಯುಧಗಳಿಗೆ ಪೂಜೆ ಮಾಡಿ ದಶಮಿಯಂದು ದಂಡಯಾತ್ರೆಗೆ ಹೊರಟರೆ ವಿಜಯ ಸಿದ್ಧಿ ಎನ್ನುವ ನಂಬಿಕೆ ಈ ಹಿಂದೆ ರಾಜರಲ್ಲಿತ್ತು. ಹೀಗಾಗಿ ದಶಮಿಯಂದೇ ಪೂಜೆ ಸಲ್ಲಿಸಿ ದಂಡಯಾತ್ರೆಗೆ ಹೊರಡುತ್ತಿದ್ದರು. ಈ ಪದ್ದತಿ ಈಗಲೂ ಉಳಿದುಕೊಂಡಿದ್ದು, ಸಾಂಕೇತಿಕವಾಗಿ ಕೆಲ ರಾಜವಂಶಸ್ಥರು ಸಾಂಕೇತಿಕವಾಗಿ ತಮ್ಮ ರಾಜ್ಯದ ಗಡಿಯನ್ನು ದಾಟಿ ಮತ್ತೆ ಹಿಂದಿರುಗುತ್ತಾರೆ. ವಿಜಯನಗರಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಸೀಮೋಲ್ಲಂಘನ ಮೈಸೂರಿನ ಒಡೆಯರ ಕಾಲದಲ್ಲಿ ಮುಂದುವರಿದಿದೆ.