Tag: Darshan Thoogudeep

  • ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲೆಬ್ರಿಟಿ ಚಾಲೆಂಜ್

    ಅಭಿಮಾನಿಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲೆಬ್ರಿಟಿ ಚಾಲೆಂಜ್

    ಬೆಂಗಳೂರು: ಇಂದು ಬೆಳಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದರು. ಇದೀಗ ತಮ್ಮ ಅಭಿಮಾನಿಗಳಿಗೆ ದರ್ಶನ್ ಚಾಲೆಂಜ್ ಹಾಕಿದ್ದಾರೆ.

    ದರ್ಶನ್ ಚಾಲೆಂಜ್ ಏನು?
    ನಾಡಿನ ಜನತೆ ನನ್ನನ್ನು ಸೆಲೆಬ್ರಟಿ ಎಂದು ಕರೆಯುತ್ತೀರಿ. ನನಗೆ ಅಭಿಮಾನಿಗಳಿಗೆ ದೊಡ್ಡ ಸೆಲೆಬ್ರಿಟಿಗಳು. ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಲಿದೆ. ದೊಡ್ಡ ತಾರಾಗಣವನ್ನು ಒಳಗೊಂಡಿರುವ ಸಿನಿಮಾವನ್ನು ನಿರ್ಮಾಪಕ ಮುನಿರತ್ನ ಮಾಡಿದ್ದಾರೆ. ಚಿತ್ರದಲ್ಲಿ ಅಪ್ಪಾಜಿ (ಅಂಬರೀಶ್), ರವಿಚಂದ್ರನ್, ಅರ್ಜುನ್ ಸರ್ಜಾ, ಶ್ರೀನಿವಾಸ್ ಮೂರ್ತಿ ನಿಖಿಲ್ ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿದೆ. ಹಾಗಾಗಿ ಟಿಕೆಟ್ ನಲ್ಲಿ ಫೋಟೋ ಹಾಕಿಲ್ಲ, ಕಟೌಟ್ ಹಾಕಿಲ್ಲ ಎಂದು ಬೇಜಾರು ಮಾಡಿಕೊಳ್ಳಬೇಡಿ. ನನಗೆ ಏನು ಗೌರವ ಕೊಡುತ್ತೀರಿ, ಅದೇ ಗೌರವವನ್ನು ಸಿನಿಮಾದ ಎಲ್ಲ ಕಲಾವಿದರಿಗೆ ನೀಡಬೇಕು. ಒರ್ವ ಕರ್ಣ, ಅರ್ಜುನ, ದುರ್ಯೋಧನನ್ನು ಹೇಗೆ ನೋಡುತ್ತೀರಿ ಎಂಬುವುದು ನನ್ನ ಅಭಿಮಾನಿಗಳಿಗೆ ಚಾಲೆಂಜ್ ಎಂದು ಹೇಳಿದ್ದಾರೆ.

    ಬೆಳಗ್ಗೆ ಟ್ವೀಟ್ ನಲ್ಲಿ ಏನಿತ್ತು?
    ಒಬ್ಬ ಸೆಲೆಬ್ರಿಟಿಯಿಂದ ಇನ್ನೊಬ್ಬ ಸೆಲೆಬ್ರಿಟಿಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್‍ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ. ನಿಮ್ಮ ದಾಸ ದರ್ಶನ್ ಎಂದು ಬರೆದು ಡಿ ಬಾಸ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದ್ದರು.

    ಸೋಮವಾರ ದರ್ಶನ್, ಕುರುಕ್ಷೇತ್ರ ಎನ್ನುವುದು ಬಹುತಾರಾಗಣದ ಚಿತ್ರ. ಎಲ್ಲರನ್ನು ಸಮಾನಕಾರವಾಗಿ ಕಾಣಬೇಕೆಂಬ ಸದುದ್ದೇಶದಿಂದ ಯಾವ ತಾರೆಯ ಫೋಟೋಗಳನ್ನು ಪಾಸ್ ಗಳ ಮೇಲೆ ಪ್ರಿಂಟ್ ಮಾಡಿಲ್ಲ. ಇಂತಹ ಚಿಕ್ಕ ವಿಷಯಗಳಿಗೆಲ್ಲ ಬೇಸರವನ್ನು ವ್ಯಕ್ತಪಡಿಸುವ ಅವಶ್ಯಕತೆ ಇಲ್ಲ. ಚಿತ್ರದಲ್ಲಿ ಎಲ್ಲರಿಗೂ ತಕ್ಕ ನ್ಯಾಯವನ್ನು ಒದಗಿಸಲಾಗಿದೆ. ಆರಾಮಾಗಿ ಆಡಿಯೋ ಬಿಡುಗಡೆಯಲ್ಲಿ ಪಾಲ್ಗೊಳ್ಳಿ ಎಂದು ಬರೆದು ಟ್ವೀಟ್ ಮಾಡಿದ್ದರು.

  • ಸಿಎಂ ವಿರುದ್ಧ ದರ್ಶನ್ ತೂಗುದೀಪ್ ಫೇಕ್ ಅಕೌಂಟ್‍ನಲ್ಲಿ ಅವಹೇಳನಕಾರಿ ಪೋಸ್ಟ್!

    ಸಿಎಂ ವಿರುದ್ಧ ದರ್ಶನ್ ತೂಗುದೀಪ್ ಫೇಕ್ ಅಕೌಂಟ್‍ನಲ್ಲಿ ಅವಹೇಳನಕಾರಿ ಪೋಸ್ಟ್!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ನಕಲಿ ಫೇಸ್‍ಬುಕ್ ಅಕೌಂಟ್ ಓಪನ್ ಮಾಡಿ ಸಿಎಂ ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಲಾಗಿದೆ.

    ದರ್ಶನ್ ಅವರ ಹೆಸರಿನಲ್ಲಿರುವ ಫೇಕ್ ಅಕೌಂಟ್ ಓಪನ್ ಮಾಡಿದ್ದು, ಸಿಎಂ ವಿರುದ್ಧ ದರ್ಶನ್ ತೂಗುದೀಪ್ ಫೇಕ್ ಅಕೌಂಟ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ವಿರೋಧಿಸಿ ಅಖಿಲ ಕರ್ನಾಟಕ ಹೆಚ್ಡಿಕೆ ಅಭಿಮಾನಿಗಳ ಸೇವಾ ಸಂಘ ದೂರು ನೀಡಿದ್ದಾರೆ.

    ಈ ಸಲ ಕಪ್ಪು ನಮ್ದೆ ಕಪ್ಪು ನಮ್ದೆ ಅಂತಿದ್ದವ್ರು, ಆ ಕಪ್ಪು ಇದು ಅಂತ ಹೇಳೋಕೇನಾಗಿತ್ರೋ ಎಂದು ಕುಮಾರಸ್ವಾಮಿ ಅವರನ್ನು ಟಾರ್ಗೇಟ್ ಮಾಡಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ. ಸದ್ಯ ಸಿಎಂ ಕುಮಾರಸ್ವಾಮಿ ಅಭಿಮಾನಿಗಳು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.