Tag: Darshan Birthday

  • ದರ್ಶನ್ ಬರ್ತ್‌‌ಡೇ ಸಂಭ್ರಮ; ಆಪ್ತರಿಗಷ್ಟೇ ಆಹ್ವಾನ ನೀಡಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ

    ದರ್ಶನ್ ಬರ್ತ್‌‌ಡೇ ಸಂಭ್ರಮ; ಆಪ್ತರಿಗಷ್ಟೇ ಆಹ್ವಾನ ನೀಡಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿ

    – ಸಾಗರದಷ್ಟು ಸವಾಲು ಎದುರಾದರೂ ಮೆಟ್ಟಿ ನಿಲ್ಲುವ ಶಕ್ತಿ ನಿನ್ನಲ್ಲಿದೆ – ಸುಮಲತಾ ವಿಶ್‌

    ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan), ಅಭಿಮಾನಿಗಳ ಪಾಲಿನ ʻಡಿ ಬಾಸ್ʼಇಂದು 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

    ಸಾಮಾನ್ಯವಾಗಿ ದರ್ಶನ್ ಹುಟ್ಟುಹಬ್ಬವೆಂದರೆ ಅವರ ಅಭಿಮಾನಿಗಳಿಗೆ ಸಡಗರ, ಅಂದು ಅನೇಕ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುತ್ತಿದ್ದರು. ಮನೆಯ ಮುಂದೆ ಹಬ್ಬದ ವಾತಾವರಣ ಇರುತ್ತಿತ್ತು. ಆದರೆ ಈ ಬಾರಿ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಇತ್ತೀಚೆಗಷ್ಟೇ ವಿಡಿಯೋ ಮಾಡಿ ತಮ್ಮ ಅಭಿಮಾನಿಗಳಿಗೆ ದರ್ಶನ್ ವಿನಂತಿ ಮಾಡಿಕೊಂಡಿದ್ದರು.

    ಆತ್ಯಾಪ್ತರಿಗಷ್ಟೇ ಆಹ್ವಾನ:
    ದರ್ಶನ್‌ ಹುಟ್ಟುಹಬ್ಬದ ಸರಳ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅತ್ಯಾಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು. ದರ್ಶನ್ ಪತ್ನಿ ವಿಜಯಲಕ್ಷ್ಮಿ ಆತ್ಮೀಯರಿಗಷ್ಟೇ ಆಹ್ವಾನ ನೀಡಿದ್ದರು. ರಾತ್ರಿ ದರ್ಶನ್‌ ನಿವಾಸದಲ್ಲೇ ನಡೆದ ಹುಟ್ಟುಹಬ್ಬದ ಸರಳ ಸಂಭ್ರಮದಲ್ಲಿ ನಿರ್ಮಾಪಕಿ ಶೈಲಜಾ ನಾಗ್, ಸಂಗೀತ ನಿರ್ದೇಶಕ ಹರಿಕೃಷ್ಣ, ನಟಿ ರಕ್ಷಿತಾ ಪ್ರೇಮ್, ನಟ ಧನ್ವಿರ್, ದರ್ಶನ್ ಸಹೋದರ ದಿನಕರ್ ತೂಗುದೀಪ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕೇಕ್‌ ಕತ್ತರಿಸಿ, ದರ್ಶನ್‌ಗೆ ಶುಭ ಹಾರೈಸಿದರು.

    ಪ್ರೀತಿಯ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ….
    ಇನ್ನೂ ದರ್ಶನ್‌ ಹುಟ್ಟುಹಬ್ಬಕ್ಕೆ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಸಹ ಶುಭಾಶಯಗ ಕೋರಿದ್ದಾರೆ. ಈ ಸಂದೇಶವನ್ನು ತಮ್ಮ ಎಕ್ಸ್‌ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸಾಧನೆಯ ಶಿಖರವೇರುತ್ತಿರುವಾಗ ಸಾಗರದಷ್ಟು ಸವಾಲು ಎದುರಾದರೂ ಮೆಟ್ಟಿ ನಿಲ್ಲುವ ಶಕ್ತಿ ನಿನ್ನಲ್ಲಿದೆ. ಸದಾ ಸಂತೋಷ ಹಾಗೂ ಯಶಸ್ಸಿನ ಜೀವನ ನಿನ್ನದಾಗಲಿ ಎಂದು ಶುಭ ಹಾರೈಸುವೆ ಎಂದು ಬರೆದುಕೊಂಡಿದ್ದಾರೆ.

    ಅಲ್ಲದೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ್ದ ಸಂದರ್ಭದಿಂದಲೂ ಜೊತೆಯಾಗಿದ್ದ ನಟ ಧನ್ವೀರ್ (Dhanveer) ಸಹ ಶುಭಾಶಯ ತಿಳಿಸಿದ್ದಾರೆ. ಧನ್ವೀರ್ ದರ್ಶನ್ ಜೊತೆಗಿನ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿ, ಸಂತೋಷ ಮತ್ತು ಯಶಸ್ಸು ಸದಾ ನಿಮ್ಮ ಜೊತೆಗಿರಲಿ. ನೀವು ನಡೆವ ಪ್ರತಿ ಹೆಜ್ಜೆಯೂ ಯಶಸ್ಸಿನ ಪಥವಾಗಲಿ. ಹುಟ್ಟುಹಬ್ಬದ ಶುಭಾಶಯಗಳು ಅಣ್ಣ (ಬಾಸ್) #ಉಸಿರಿರುವವರೆಗೂ ಇರ್ತಿವಿ ನಿಮ್ಮಿಂದೆ ಎಂದು ಬರೆದುಕೊಂಡಿದ್ದಾರೆ.

  • ದರ್ಶನ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್ – ‘ಡೆವಿಲ್’ ಸಿನಿಮಾದ ಟೀಸರ್ ರಿಲೀಸ್

    ದರ್ಶನ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್ – ‘ಡೆವಿಲ್’ ಸಿನಿಮಾದ ಟೀಸರ್ ರಿಲೀಸ್

    ಟ ದರ್ಶನ್ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ದರ್ಶನ್ (Darshan) ಅಭಿನಯದ ‘ಡೆವಿಲ್’ (The Devil) ಸಿನಿಮಾದ ಟೀಸರ್ ಭಾನುವಾರ ಬಿಡುಗಡೆಯಾಗಿದೆ.

    ಮಿಲನ ಪ್ರಕಾಶ್ ನಿರ್ದೇಶಿಸಿ ನಿರ್ಮಿಸಿರುವ ಚಿತ್ರ ಇದಾಗಿದೆ. ಫೈಟ್ ದೃಶ್ಯಗಳನ್ನೇ ಒಳಗೊಂಡಿರುವ ಟೀಸರ್ ರಿಲೀಸ್ ಆಗಿದೆ. ನನಗೇ ‘ಚಾಲೆಂಜ್’ ಎನ್ನುವಂತೆ ಡೈಲಾಗ್ ಹೊಡೆದಿರುವ ಡೆವಿಲ್, ಫ್ಯಾನ್ಸ್‌ಗೆ ಥ್ರಿಲ್ ನೀಡಿದ್ದಾರೆ.

    ಪ್ರಕಾಶ್ ವೀರ್ ನಿರ್ದೇಶನದ ‘ದಿ ಡೆವಿಲ್’ ಚಿತ್ರದಲ್ಲಿ ದರ್ಶನ್ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದೊಂದು ರೋಮಾಂಚನಕಾರಿ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಈ ಚಿತ್ರದಲ್ಲಿ ರಚನಾ ರೈ, ಮಹೇಶ್ ಮಂಜ್ರೇಕರ್ ಮತ್ತು ವಿನಯ್ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  • ನಿಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಶುಭಹಾರೈಸುತ್ತೇನೆ: ದರ್ಶನ್‌ ಹುಟ್ಟುಹಬ್ಬಕ್ಕೆ ರಕ್ಷಿತಾ ಪ್ರೇಮ್‌ ವಿಶ್‌

    ನಿಮ್ಮ ಜೀವನದ ಪ್ರತಿ ಹೆಜ್ಜೆಯಲ್ಲೂ ಶುಭಹಾರೈಸುತ್ತೇನೆ: ದರ್ಶನ್‌ ಹುಟ್ಟುಹಬ್ಬಕ್ಕೆ ರಕ್ಷಿತಾ ಪ್ರೇಮ್‌ ವಿಶ್‌

    – ಇವತ್ತು ಸ್ಪೆಷಲ್‌ ಡೇ, ನನ್ನ ಡಿಯರೆಸ್ಟ್‌ ಫ್ರೆಂಡ್‌ ಬರ್ತ್‌ಡೇ ಎಂದು ಖುಷಿ ಹಂಚಿಕೊಂಡ ನಟಿ

    ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್‌ (Darshan) ಅವರಿಗೆ ಇಂದು 48ನೇ ಹುಟ್ಟುಹಬ್ಬದ ಸಂಭ್ರಮ. ಸಹಜವಾಗಿ ಆಪ್ತರು, ಸಿನಿ ತಾರೆಯರು, ಅಭಿಮಾನಿಗಳು ನಟ ದರ್ಶನ್‌ಗೆ ವಿಶ್‌ ಮಾಡುತ್ತಿದ್ದಾರೆ. ನಟಿ ರಕ್ಷಿತಾ ಪ್ರೇಮ್ (Rakshitha Prem) ಕೂಡ ಫ್ರೆಂಡ್‌ ದರ್ಶನ್‌ಗೆ ವಿಶ್‌ ಮಾಡಿ ಇನ್‌ಸ್ಟಾಗ್ರಾಂ ಪೋಸ್ಟ್‌ ಹಾಕಿದ್ದಾರೆ.

    ದರ್ಶನ್ ಹುಟ್ಟುಹಬ್ಬಕ್ಕೆ ನಟಿ ರಕ್ಷಿತಾ ಪ್ರೇಮ್ ವಿಶೇಷವಾಗಿ ಶುಭಕೋರಿದ್ದಾರೆ. ‘ಇವತ್ತು ವಿಶೇಷ ದಿನ‌, ಯಾಕ್ ಗೊತ್ತಾ? ಇವತ್ತು ನನ್ನ ಬೆಸ್ಟ್ ಫ್ರೆಂಡ್ ಬರ್ತ್‌ಡೇ. ಇವರು ಯಾವಾಗಲೂ ಕಷ್ಟ-ಸುಖದಲ್ಲಿ ಒಂದೇ ರೀತಿಯಲ್ಲಿ ಜೊತೆಗಿದ್ದವರು. ಇವರು ಜೊತೆಗಿರುವ ಜೀವನ‌ ಯಾವಾಗಲೂ ಉತ್ತಮವಾಗಿರುತ್ತದೆ. ನೀವು ನನಗೆ ಸ್ಪೆಷಲ್‌. ನಿಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ಶುಭ ಹಾರೈಸುತ್ತೇನೆ. ಯಾವಾಗಲೂ ಸ್ಪೆಷಲ್ ಆಗೇ ಇರ್ತೀಯ, ಲವ್ ಯೂ’ ಎಂದು ಶುಭಹಾರೈಸಿದ್ದಾರೆ. ಇದನ್ನೂ ಓದಿ: Dhananjay Wedding | ಡಾಲಿ ಆರತಕ್ಷತೆಯಲ್ಲಿ ಸೆಲೆಬ್ರಿಟಿಗಳ ದಂಡು – ಮೈಸೂರಿಗೆ ಬಂದ ‘ಪುಷ್ಪ’ ನಿರ್ದೇಶಕ ಸುಕುಮಾರ್

     

    View this post on Instagram

     

    A post shared by Rakshita???? (@rakshitha__official)

    ಶುಭ ಸಂದೇಶ ಹಾಗೂ ದರ್ಶನ್ ಜೊತೆಗಿನ‌ ಫೋಟೊ ಪೋಸ್ಟ್ ಮಾಡಿರುವ ರಕ್ಷಿತಾ ಪ್ರೇಮ್ ಬರ್ತ್‌ಡೇ ವಿಶ್‌ ಮಾಡಿದ್ದಾರೆ.

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌, ಪವಿತ್ರಾ ಗೌಡ ಸೇರಿ ಅನೇಕರು ಜೈಲು ಪಾಲಾಗಿದ್ದರು. ಹಲವು ತಿಂಗಳು ಜೈಲುವಾಸ ಅನುಭವಿಸಿದ್ದ ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ನೀಡಿತು. ಜೈಲಲ್ಲಿದ್ದಾಗ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ದರ್ಶನ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಇದನ್ನೂ ಓದಿ: ಧಾರ್ಮಿಕ ವಿಚಾರದಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದೂಗಳಲ್ಲ: ಪ್ರಕಾಶ್‌ ರಾಜ್‌

    ಬೆನ್ನುನೋವು ಇನ್ನೂ ಇರುವ ಕಾರಣ ಈ ಬಾರಿ ಅಭಿಮಾನಿಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ ಎಂದು ವೀಡಿಯೋ ಮಾಡಿ ದರ್ಶನ್‌ ತಿಳಿಸಿದ್ದರು. ನೀವು ಇದ್ದಲ್ಲಿಂದಲೇ ವಿಶ್‌ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.