Tag: darshan

  • ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ: ದರ್ಶನ್ ಪರ ವಕೀಲ ಸುನೀಲ್

    ಜೈಲು ಅಧಿಕಾರಿಗಳಿಗೆ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ: ದರ್ಶನ್ ಪರ ವಕೀಲ ಸುನೀಲ್

    ಬೆಂಗಳೂರು: ನಟ ದರ್ಶನ್‌ಗೆ (Darshan) ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡಿಲ್ಲ ಅಂತಾ ಆರೋಪಿಸಿ ದರ್ಶನ್ ಪರ ವಕೀಲರು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ರು. ಕಳೆದ ಎರಡೂವರೆ ತಿಂಗಳಿನಿಂದ ವಾದ ಪ್ರತಿವಾದ ಅಲಿಸಿದ್ದ ಕೋರ್ಟ್, ದರ್ಶನ್ ಗೆ ಜೈಲಿನ ಮ್ಯಾನ್ಯುಯಲ್ (Jail Manual) ಪ್ರಕಾರ ಕನಿಷ್ಠ ಸೌಲಭ್ಯ ನೀಡುವಂತೆ ಸೂಚಿಸಿತ್ತು. ಇಂದು ಈ ಸಂಬಂಧ ಅದೇಶ ನೀಡಿದ್ದು, ದರ್ಶನ್‌ಗೆ ಮ್ಯಾನ್ಯುಯಲ್ ಪ್ರಕಾರ ಸೌಲಭ್ಯ ನೀಡಿಕೆಗೆ ಸೂಚನೆ ನೀಡಿದೆ.

    ತಿಂಗಳಿಗೆ ಒಂದು ಸಾರಿ ಹೊಸ ಕಂಬಳಿ ನೀಡುವಂತೆ ಸೂಚಿಸಿ ಇದೇ 31 ರಂದು ಚಾರ್ಜಸ್‌ಫ್ರೇಮ್‌ ಮಾಡೋದಾಗಿ ಸೂಚಿಸಿದೆ. ಇದೇ ವೇಳೆ ಮಾತಾಡಿದ ದರ್ಶನ್ ಪರ ವಕೀಲ ಸುನೀಲ್, ಇದು ಬರೇ ಹಾಸಿಗೆ ತಲೆ ದಿಂಬು ವಿಚಾರ ಅಲ್ಲ. ಜೈಲಿನಲ್ಲಿ ಕನಿಷ್ಠ ಸೌಲಭ್ಯ ನೀಡಬೇಕು ಅಂತಾ ಕೋರ್ಟ್ ಅದೇಶ ನೀಡಿತ್ತು. ಆದರೆ ಜೈಲು ಅಧಿಕಾರಿಗಳು ಅದೇಶ ಉಲ್ಲಂಘನೆ ಮಾಡಿದ್ರು. ಹಾಗಾಗಿ ಕೋರ್ಟ್ ಇವತ್ತು ಜೈಲು ಅಧಿಕಾರಿಗಳಿಗೆ ಛೀಮಾರಿ ಹಾಕಿದೆ ಅಂತ ತಿಳಿಸಿದ್ರು. ಇದನ್ನೂ ಓದಿ: ಏರ್‌ ಇಂಡಿಯಾ 4,000 ಕೋಟಿ ನಷ್ಟ ಅನುಭವಿಸಲು ಪಾಕಿಸ್ತಾನ ಕಾರಣ – ಸಿಇಒ ಸ್ಪೋಟಕ ಮಾಹಿತಿ

    ಜೈಲು ಮ್ಯಾನ್ಯುಯಲ್ ಫಾಲೋ ಮಾಡಿ, ಕನಿಷ್ಠ ಸೌಲಭ್ಯ ನೀಡಿ ಅಂತಾ ಆದೇಶ ನೀಡಿದೆ. ದರ್ಶನ್‌ಗೆ ಹಳೇ ಚಾದರ್ ನೀಡಲಾಗಿದೆ. ತಿಂಗಳಿಗೆ ಒಮ್ಮೆ ಅದನ್ನು ಬದಲಾವಣೆ ಮಾಡಿ ಅಂತಾ ಹೇಳಿದೆ ಎಂದರು.

    ಇನ್ನೂ ಸರ್ಕಾರಿ ಪರ ವಕೀಲರು, ಟ್ರಯಲ್ ತಡ ಮಾಡ್ತಿದ್ದಾರೆ ಅಂತಾ ಆರೋಪ ಮಾಡಿದ್ರು. ಇದು ಸತ್ಯಕ್ಕೆ ದೂರವಾದ ವಿಚಾರ, ಸುಪ್ರೀಂ ಕೋರ್ಟ್ ಅದಷ್ಟು ಬೇಗ ಟ್ರಯಲ್ ಶುರು ಮಾಡಿ ಅಂತಾ ಹೇಳಿದೆ. ಹೊರತುಪಡಿಸಿ, ಇಷ್ಟೇ ದಿನದಲ್ಲಿ ಟ್ರಯಲ್ ಮಾಡಿ ಅಂತಾ ಹೇಳಿಲ್ಲ ಅಂತ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ 3 ಸಾವಿರ ಕೋಟಿ ದೇಣಿಗೆ; 1500 ಕೋಟಿ ರೂ. ಖರ್ಚು

  • ಬೆನ್ನು ನೋವಿದ್ರೂ ನನ್ನನ್ನ ಎತ್ತಿಕೊಳ್ಳುವ ದೃಶ್ಯ ಮಾಡಲು ಒಪ್ಪಿಕೊಂಡಿದ್ರು – ರಚನಾ ರೈ

    ಬೆನ್ನು ನೋವಿದ್ರೂ ನನ್ನನ್ನ ಎತ್ತಿಕೊಳ್ಳುವ ದೃಶ್ಯ ಮಾಡಲು ಒಪ್ಪಿಕೊಂಡಿದ್ರು – ರಚನಾ ರೈ

    – ದರ್ಶನ್‌ಗೆ ಬೆನ್ನುನೋವಿರೋದು ನಿಜ ಎಂದ `ಡೆವಿಲ್’ ನಾಯಕಿ

    ದರ್ಶನ್‌ ಅವರಿಗೆ ಬೆನ್ನು ನೋವಿದ್ದಿದ್ದು (Back pain) ನಿಜ, ಶೂಟಿಂಗ್‌ ಸೆಟ್‌ನಲ್ಲಿ ನನ್ನನ್ನ ಎತ್ತಿಕೊಳ್ಳುವ ದೃಶ್ಯ ಮಾಡುವಾಗ ನೆಲದ ಮೇಲೆ ಬಿದ್ದು ಮಲಗಿಬಿಟ್ಟಿದ್ರು ಅಂತ ಡೆವಿಲ್‌ ಸಿನಿಮಾ ನಾಯಕಿ ರಚನಾ ರೈ (Rachana Rai) ಹೇಳಿದ್ದಾರೆ.

    ಸದ್ಯ ಪರಪ್ಪನ ಅಗ್ರಹಾರ ಜೈಲಲ್ಲಿರುವ ನಟ ದರ್ಶನ್ (Darshan) ಈ ಹಿಂದೆ ಬೆನ್ನುನೋವಿಗೆ ಸರ್ಜರಿ ಮಾಡಿಸಿಕೊಳ್ಳಬೇಕೆಂದು ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಬಳಿಕ ರೆಗ್ಯುಲರ್ ಬೇಲ್ ಕೂಡ ಸಿಕ್ಕಿತ್ತು. ಇದಾದ ಕೆಲ ದಿನಗಳಲ್ಲೇ ಸುಪ್ರೀಂ ಕೋರ್ಟ್‌ ಜಾಮೀನು ರದ್ದುಗೊಳಿಸಿತು. ಬೇಲ್‌ ರದ್ದುಗೊಳಿಸಿದ ಬಳಿಕ ʻಡೆವಿಲ್‌ʼ ಸಿನಿಮಾ ಶೂಟಿಂಗ್ ‌ವೇಳೆ ದರ್ಶನ್‌ ಬೆನ್ನುನೋವಿನಿಂದ ಬಳಲುತ್ತಿದ್ದ ವಿಡಿಯೋ ಕೂಡ ವೈರಲ್‌ ಆಗಿತ್ತು. ಇದೀಗ ದರ್ಶನ್‌ಗೆ ಬೆನ್ನುನೋವು ಇರೋ ಬಗ್ಗೆ `ಡೆವಿಲ್’ ಚಿತ್ರದ ನಾಯಕಿ ರಚನಾ ರೈ ʻಪಬ್ಲಿಕ್ ಟಿವಿʼ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.

    ದರ್ಶನ್ ಬೆನ್ನುನೋವಿನ ನಾಟಕವಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿದ್ದು ಸಿನಿಮಾ ಸೆಟ್ಟಲ್ಲಿ ಬೆನ್ನುನೋವಿರಲಿಲ್ವಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ರಚನಾ, ʻದರ್ಶನ್ ಸರ್‌ಗೆ ಆಗಾಗ ತುಂಬಾ ಬೆನ್ನುನೋವು ಕಾಣಿಸಿಕೊಳ್ತಿತ್ತು, ನಾನೇ ಪ್ರತ್ಯಕ್ಷಸಾಕ್ಷಿ. ಅವರು ಟ್ಯಾಬ್ಲೆಟ್ ತಗೊಳ್ತಾ ಇದ್ರು. ಜ್ವರ ಬಂದಿದ್ರೂ, ವಾಮಿಟ್ ಮಾಡ್ತಿದ್ರೂ, ಶೂಟಿಂಗ್‌ಗೆ ತೊಂದ್ರೆ ಆಗಬಾರದು ಅಂತ ರೆಸ್ಟ್ ಮಾಡದೆ ಕ್ಯಾಮೆರಾ ಮುಂದೆ ಬರ್ತಿದ್ರು. ಅವರು ಬೆನ್ನುನೋವಿರೋದು ನಿಜ. ಬೆನ್ನುನೋವಿಂದ ಒದ್ದಾಡಿದ್ದಾರೆ ಎಂದಿದ್ದಾರೆ.

    ಜೊತೆಗೆ ಶೂಟಿಂಗ್‌ ಸೆಟ್‌ನಲ್ಲಿ ದರ್ಶನ್‌ ಬೆನ್ನುನೋವು ಕಾಣಿಸಿಕೊಂಡಿದ್ದ ವಿಡಿಯೋ ಬಗ್ಗೆ ಮಾತನಾಡಿ, ದೃಶ್ಯವೊಂದರ ಶೂಟಿಂಗ್ ಆಗ್ತಿತ್ತು. ನನ್ನನ್ನ ಎತ್ತಿಕೊಳ್ಳುವ ದೃಶ್ಯ ಚಿತ್ರೀಕರಣ ಮಾಡಬೇಕಿತ್ತು. ಆಗ ಬೆನ್ನುನೋವು ಕಾಣಿಸಿಕೊಂಡಿತ್ತು. ನಿರ್ದೇಶಕರು ಆಗಲ್ಲ, ಅಂದ್ರೆ ಬೇಡ ಅಂದ್ರು, ನಾನು ಮಾಡ್ತೀನಿ ಅಂತ ಒಪ್ಪಿಕೊಂಡ್ರು. ಕಟ್ ಹೇಳಿದ ಬಳಿಕ ನನ್ನನ್ನ ಹಾಗೆ ಕೆಳಕ್ಕಿಳಿಸಿ ಬೆನ್ನುನೋವಾಗಿ ಹಾಗೇ ನೆಲದ ಮೇಲೆ ಬಿದ್ದು ಮಲಗಿಬಿಟ್ರು. ದರ್ಶನ್ ಅವರಿಗೆ ಬೆನ್ನೊನೋವಿರೋದು ನಿಜ ಅಂತ ಸತ್ಯ ಬಹಿರಂಗಪಡಿಸಿದ್ರು ನಟಿ ರಚನಾ ರೈ.

  • ಹಾಸಿಗೆ ದಿಂಬು ಕೇಳಿದ್ದ ದರ್ಶನ್‌ಗೆ ಡಬಲ್ ಶಾಕ್

    ಹಾಸಿಗೆ ದಿಂಬು ಕೇಳಿದ್ದ ದರ್ಶನ್‌ಗೆ ಡಬಲ್ ಶಾಕ್

    ಬೆಂಗಳೂರು: ಹಾಸಿಗೆ, ದಿಂಬು ಕೇಳಿದ್ದ ದರ್ಶನ್‌ಗೆ (Darshan) ಕೋರ್ಟ್‌ ಡಬಲ್‌ ಶಾಕ್‌ ನೀಡಿದೆ. ತಿಂಗಳಿಗೊಮ್ಮೆ ಬಟ್ಟೆ, ಹೊದಿಕೆ ಒದಗಿಸಲು ಮಾತ್ರ 57ನೇ ಸಿಸಿಹೆಚ್ ಕೋರ್ಟ್ ಆದೇಶಿಸಿದೆ.

    ಪರಪ್ಪನ ಅಗ್ರಹಾರದಲ್ಲಿರುವ ಕ್ವಾರಂಟೈನ್ ಸೆಲ್‌ನಿಂದ ಮುಖ್ಯ ಸೆಲ್‌ಗೆ ವರ್ಗಾವಣೆ ಕೋರಿದ ವಿಚಾರಕ್ಕೆ ಸಂಬಂಧಿಸಿದಂತೆ ಜೈಲಾಧಿಕಾರಿಗಳಿಗೆ ಕೋರ್ಟ್‌ ಅವಕಾಶ ನೀಡಿದೆ.

    ರೇಣುಕಾಸ್ವಾಮಿ ಪ್ರಕರಣದ (Renukaswamy Murder Case) ಶೀಘ್ರ ವಿಚಾರಣೆ ಕೋರಿದ ಎಸ್‌ಪಿಪಿ ಅರ್ಜಿಯನ್ನು ಕೋರ್ಟ್‌ ಮಾನ್ಯ  ಮಾಡಿದೆ. ಅ.31 ರಂದು ದೋಷಾರೋಪ ನಿಗದಿಗೆ ಕೋರ್ಟ್ ಸೂಚನೆ ನೀಡುವ ಮೂಲಕ ದರ್ಶನ್‌ಗೆ  ಡಬಲ್‌ ಶಾಕ್‌ ಕೊಟ್ಟಿದೆ.  ಇದನ್ನೂ ಓದಿ:  ನಾಲ್ಕೇ ವಾರದಲ್ಲಿ ಒಟಿಟಿಯಲ್ಲಿ ಕಾಂತಾರ ರಿಲೀಸ್ ಯಾಕೆ? – ಒಪ್ಪಂದದ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಪ್ರತಿಕ್ರಿಯೆ

    ದರ್ಶನ್ ಮತ್ತು ಪವಿತ್ರ ಗೌಡ (Pavithra Gowda) ಸೇರಿದಂತೆ 6 ಜನ ಆರೋಪಿಗಳು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಹಾಜರಾಗಿದ್ದರೆ ಉಳಿದ ಆರೋಪಿಗಳು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಿದ್ದರು.

     

    ದರ್ಶನ್‌ ಅರ್ಜಿಯಲ್ಲಿ ಏನಿತ್ತು?
    ನನ್ನನ್ನು ಕ್ವಾರಂಟೈನ್‌ ಸೆಲ್‌ನಲ್ಲೇ ಇರಿಸಲಾಗಿದೆ. ಬಿಸಿಲು ಬೀಳದ ಜಾಗದಲ್ಲಿ ವಾಕಿಂಗ್‌ಗೆ ಅವಕಾಶ ನೀಡಲಾಗಿದೆ. ಇದರಿಂದ ನನ್ನ ಆರೋಗ್ಯದಲ್ಲಿ ಮತ್ತಷ್ಟು ವ್ಯತ್ಯಾಸವಾಗಿದೆ. ಈ ಹಿಂದೆ ನ್ಯಾಯಾಲಯವು ನೀಡಿದ್ದ ಆದೇಶಕ್ಕೂ ಜೈಲಿನ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ

    ಜೈಲಿನಲ್ಲಿ ಕನಿಷ್ಠ ಮೂಲ ಸೌಲಭ್ಯಗಳನ್ನೂ ನೀಡುತ್ತಿಲ್ಲ. ಬ್ಯಾರಕ್‌ನಿಂದ ಹೊರಗೆ ಬರುವುದಕ್ಕೂ ಬಿಡುತ್ತಿಲ್ಲ. ಮೈಮೇಲೆ ಬಿಸಿಲು ಬಿದ್ದು ಹಲವು ದಿನಗಳೇ ಆಗಿವೆ. ಕೈಯಲ್ಲಿ ಫಂಗಸ್‌ ಕಾಣಿಸಿಕೊಂಡಿದೆ. ನಾನು ಬೆನ್ನು ನೋವಿನಿಂದ ಬಳಲುತ್ತಿದ್ದೇನೆ. ಹೀಗಾಗಿ ತಲೆ ದಿಂಬು, ಬೆಡ್ ಶೀಟ್, ಹಾಸಿಗೆ ನೀಡುವಂತೆ ದರ್ಶನ್‌ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು.

  • ಸಂಡೆ ಸ್ಪೆಷಲ್ ಅಪ್‌ಡೇಟ್ ಕೊಟ್ಟ ದರ್ಶನ್ ಪತ್ನಿ – ಸ್ಪೆಷಲ್ ಏನು?

    ಸಂಡೆ ಸ್ಪೆಷಲ್ ಅಪ್‌ಡೇಟ್ ಕೊಟ್ಟ ದರ್ಶನ್ ಪತ್ನಿ – ಸ್ಪೆಷಲ್ ಏನು?

    ಪ್ರತಿ ಭಾನುವಾರ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮಿ (Vijayalakshmi) ಫಾರ್ಮ್‌ಹೌಸ್‌ಗೋ ಅಥವಾ ದೇವಸ್ಥಾನಕ್ಕೋ ಭೇಟಿ ಕೊಡ್ತಾರೆ. ಅದರಂತೆ ಈ ಭಾನುವಾರ ದೇವಸ್ಥಾನವೊಂದಕ್ಕೆ ಭೇಟಿ ಕೊಟ್ಟು ತೆಂಗಿನಕಾಯಿ ಪ್ರಸಾದದ ಜೊತೆ ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ದರ್ಶನ್ ಜೈಲಲ್ಲಿರುವ ಕಾರಣಕ್ಕೆ ಇದೀಗ ದರ್ಶನ್ ವ್ಯವಹಾರಗಳನ್ನೆಲ್ಲಾ ನೋಡಿಕೊಳ್ತಿರುವ ವಿಜಯಲಕ್ಷ್ಮಿ ಹೆಚ್ಚಾಗಿ ಫಾರ್ಮ್‌ಹೌಸ್‌ನ ಕೆಲಸಗಳನ್ನೆಲ್ಲಾ ಖುದ್ದಾಗಿ ಭೇಟಿಕೊಟ್ಟು ಪರಿಶೀಲಿಸುತ್ತಾರೆ. ವಾರದ ಮಧ್ಯೆ ದರ್ಶನ್‌ರನ್ನು ಭೇಟಿ ಮಾಡಲು ಜೈಲಿಗೆ ತೆರಳುವುದು. ಕೋರ್ಟ್ ಕಚೇರಿ ಕೆಲಸಗಳು ಹಾಗೂ ಮಗನ ವಿದ್ಯಾಭ್ಯಾಸದ ಕೆಲಸದಲ್ಲಿ ಬ್ಯುಸಿ ಇರ್ತಾರೆ. ಆದರೆ ವಾರಕ್ಕೊಮ್ಮೆಯಾದ್ರೂ ದೇವಸ್ಥಾನಗಳಿಗೆ ಭೇಟಿ ಕೊಡೋದನ್ನ ವಿಜಯಲಕ್ಷ್ಮಿಯವರು ಮಿಸ್ ಮಾಡೋದಿಲ್ಲ ಎನ್ನಲಾಗುತ್ತಿದೆ. ಇದನ್ನೂ ಓದಿ: ಬಿಗ್‌ಬಾಸ್ ಪ್ರಣಯ ಹಕ್ಕಿಗಳ ಪ್ರೇಮಕಥೆ ಪೀಕ್‌ಗೆ ತಲುಪಿತೇ?

    ಕಷ್ಟದಲ್ಲೂ ನಗುತ್ತಿರಬೇಕು ಎಂಬ ಸಂದೇಶವನ್ನ ವಿಜಯಲಕ್ಷ್ಮಿ ಸದಾ ಪಾಲಿಸುತ್ತಾರೆ. ಒಂಟಿಯಾಗಿ ಹೋರಾಡುತ್ತಿದ್ದಾರೆ. ತಾವಾಯ್ತು ತಮ್ಮ ಕೆಲಸವಾಯ್ತು ಎಂದು ತಮ್ಮ ಪಾಡಿಗೆ ತಾವು ಇದ್ದುಬಿಡುತ್ತಾರೆ. ಇದೀಗ ದರ್ಶನ್‌ರ ಡೆವಿಲ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಮುಂದಿನ ಬಿರುಸಿನ ಪ್ರಚಾರದ ರೂಪುರೇಷೆ ಸಿದ್ಧ ಮಾಡೋದ್ರಲ್ಲೂ ತೊಡಗಿದ್ದಾರೆ ವಿಜಯಲಕ್ಷ್ಮಿ.

  • ಒಂದೇ ದಿನದಲ್ಲಿ ಟ್ರಯಲ್‌ ನಡೆದು ಜೀವಾವಧಿ ಶಿಕ್ಷೆ ಬೇಕಾದ್ರೂ ವಿಧಿಸಿ – ದರ್ಶನ್‌ ಪರ ವಕೀಲರ ಖಡಕ್‌ ವಾದ ಏನು?

    ಒಂದೇ ದಿನದಲ್ಲಿ ಟ್ರಯಲ್‌ ನಡೆದು ಜೀವಾವಧಿ ಶಿಕ್ಷೆ ಬೇಕಾದ್ರೂ ವಿಧಿಸಿ – ದರ್ಶನ್‌ ಪರ ವಕೀಲರ ಖಡಕ್‌ ವಾದ ಏನು?

    – ಜೈಲಲ್ಲಿ ಅಧಿಕಾರಿಗಳನ್ನ ಮಾತಾಡಿಸಿದ್ದೇ ತಪ್ಪು ಎಂದ ದರ್ಶನ್ ಪರ ವಕೀಲರು

    ಟ ದರ್ಶನ್‌ಗೆ ಜೈಲಲ್ಲಿ ಹಾಸಿಗೆ ದಿಂಬು ನೀಡದ ವಿಚಾರ ಇನ್ನೂ ನಿಂತಿಲ್ಲ. ಕಾನೂನು ಸೇವಾ ಪ್ರಾಧಿಕಾರದ ಸೆಕ್ರೇಟರಿ ಪರಪ್ಪನ ಅಗ್ರಹಾರ ಜೈಲಲ್ಲಿ ಜೈಲು ಸಿಬ್ಬಂದಿಯ ಹೇಳಿಕೆಯನ್ನ ಪಡೆದಿದ್ದೇ ತಪ್ಪು ಅಂತಾ ದರ್ಶನ್ (Darshan) ಪರ ವಕೀಲರು ಇಂದು ಕೋರ್ಟ್‌ನಲ್ಲಿ ವಾದ ಮಾಡಿದ್ದಾರೆ.

    ನಟ ದರ್ಶನ್‌ಗೆ ಇನ್ನೂ ಹಾಸಿಗೆ ದಿಂಬು ಸಿಕ್ಕಿಲ್ಲ. ಹೀಗಾಗಿ ಹಾಸಿಗೆ, ದಿಂಬು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೀತು. ವಿಚಾರಣೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ವರದಿ ಮೇಲೆ ದರ್ಶನ್ ಪರ ವಕೀಲ ಸುನೀಲ್ ವಾದ ಮಂಡನೆ ಮಾಡಿದರು. ಜೈಲು ಅಧಿಕಾರಿಗಳು ಕಾನೂನು ಸೇವಾ ಪ್ರಾಧಿಕಾರದ ಸದಸ್ಯರನ್ನ ಮೀಸ್‌ಲೀಡ್ ಮಾಡಿದ್ದಾರೆ. ಆದೇಶದಲ್ಲಿ ಎಲ್ಲೂ ಜೈಲು ಅಧಿಕಾರಿಗಳಿಂದ ಮಾಹಿತಿ ಕೇಳಿ ಅಂತೇಳಿಲ್ಲ. ಗುಬ್ಬಚ್ಚಿ ಸೀನಾ ಬರ್ತ್‌ಡೆಯನ್ನು ಜೈಲಿನಲ್ಲಿ ಆಚರಣೆ ಮಾಡಿಕೊಂಡಿದ್ದಾರೆ. ಒಬ್ಬರಿಗೂ ಒಂದು ಕಾನೂನು ಮತ್ತೊಬ್ಬರಿಗೆ ಮತ್ತೊಂದು ಕಾನೂನು. ಕ್ವಾರಂಟೈನ್ ಸೆಲ್‌ನಿಂದ ಮೈನ್ ಸೆಲ್‌ಗೆ ಶಿಫ್ಟ್ ಮಾಡಿ, ನಾವು ಟ್ರಯಲ್‌ಗೆ ಸಿದ್ಧರಿದ್ದೇವೆ. ಒಂದೇ ದಿನದಲ್ಲಿ ಟ್ರಯಲ್ ನಡೆದು ಜೀವಾವಧಿ ಶಿಕ್ಷೆ ಬೇಕಿದ್ರೂ ವಿಧಿಸಿ ಎಂದು ವಾದಿಸಿದರು. ಇದನ್ನೂ ಓದಿ: ಕೊಲೆ ಆರೋಪಿ ದರ್ಶನ್‌ಗೆ ಮಾಸ್ಟರ್ ಸ್ಟ್ರೋಕ್‌; ಫಂಗಸ್ ನಾಟಕಕ್ಕೂ ಕಾನೂನು ಪ್ರಾಧಿಕಾರ ವರದಿಯಲ್ಲಿ ಉತ್ತರ

    ದರ್ಶನ್ ವಾದಕ್ಕೆ ಪ್ರತಿವಾದ ಮಾಡಿದ ಎಸ್‌ಪಿಪಿ ಸಚಿನ್, ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಜೈಲಿನ ಅಧಿಕಾರಿಗಳು, ಆರೋಪಿಗಳ ಬಳಿ ಎರಡು ಕಡೆ ಮಾಹಿತಿ ಪಡೆದು ವರದಿ ಸಲ್ಲಿಕೆ ಮಾಡಿದ್ದಾರೆ. ದರ್ಶನ್‌ಗೆ ಪಂಗಸ್ ಇನ್ಪೆಕ್ಷನ್ ಆಗಿಲ್ಲ. ಕಾಲು ಒಡೆದಿದೆ ಅಷ್ಟೆ. ಅದನ್ನೇ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಭದ್ರತೆ ವಿಚಾರಕ್ಕೆ ಬಂದರೆ, ಮೊನ್ನೆ ಕೋರ್ಟ್ ಆವರಣದಲ್ಲೇ ಆರೋಪಿಯೊಬ್ಬ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದರ್ಶನ್ ಒಬ್ಬ ನಟ. ಹೀಗಾಗಿ, ಸರ್ವೆ ಸಾಮಾನ್ಯವಾಗಿ ಹೈಪ್ರೊಫೈಲ್ ಕೇಸ್, ಫ್ಯಾನ್ಸ್ ಫಾಲೋ ಇದೆ. ಜೈಲಿನ ನಿಯಮಾವಳಿಗಳ ಪ್ರಕಾರವೇ ನಡೀಬೇಕು ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಇದೇ ಅ.29ಕ್ಕೆ ಹಾಸಿಗೆ ದಿಂಬಿನ ಅರ್ಜಿಯ ವಿಚಾರಣೆಯನ್ನ ಮುಂದೂಡಿದ್ದಾರೆ.

  • ಸಿಂಪಲ್‌ ಆಗಿ ದೀಪಾವಳಿ ಆಚರಿಸಿದ ವಿಜಯಲಕ್ಷ್ಮಿ

    ಸಿಂಪಲ್‌ ಆಗಿ ದೀಪಾವಳಿ ಆಚರಿಸಿದ ವಿಜಯಲಕ್ಷ್ಮಿ

    ಟ ದರ್ಶನ್ (Darshan) ಅನುಪಸ್ಥಿತಿಯಲ್ಲಿ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ದೀಪಾವಳಿ (Deepavali) ಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ಸುರ್‌ಸುರ್‌ ಬತ್ತಿ ಹಿಡಿದ ಫೋಟೋ ಹಿಡಿದು ಫೋಟೋವನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನಲ್ಲಿ “ಜಗತ್ತು ನಿಮ್ಮನ್ನು ಕೀಳಾಗಿ ಕಾಣುವಾಗ ಇನ್ನಷ್ಟು ಪ್ರಜ್ವಲಿಸಿ” ಎಂಬ ಸಂದೇಶ ಹಂಚಿಕೊಂಡಿದ್ದಾರೆ.

    ಮನೆಯಲ್ಲಿದ್ದಿದ್ದರೆ ನಟ ದರ್ಶನ್ ಪ್ರತಿ ಬಾರಿಯಂತೆ ಈ ಬಾರಿಯೂ ಅದ್ದೂರಿಯಾಗಿ ದೀಪಾವಳಿ ಹಬ್ಬ ಆಚರಿಸುತ್ತಿದ್ದರು. ಆದರೆ ಪರಪ್ಪನ ಅಗ್ರಹಾರ ಜೈಲಲ್ಲಿರುವ ದರ್ಶನ್‍ಗೆ ಯಾವುದೇ ಹಬ್ಬದ ಸಂಭ್ರಮವಿಲ್ಲ. ಕಳೆದ ಬಾರಿ ದೀಪಾವಳಿ ಹಬ್ಬಕ್ಕೆ ದರ್ಶನ್ ಮಧ್ಯಂತರ ಜಾಮೀನು ಪಡೆದುಕೊಂಡು ಮನೆಗೆ ಬಂದಿದ್ದರು. ಆದರೆ ಈ ಬಾರಿ ಜೈಲೇ ಗತಿಯಾಗಿದೆ. ಇದನ್ನೂ ಓದಿ: ಪವನ್ ವೆಂಕಟೇಶ್ ನಿರ್ದೇಶನದಲ್ಲಿ ʻಫಸ್ಟ್ ಸ್ಯಾಲರಿʼ – ಕಿರುಚಿತ್ರದ ಪೋಸ್ಟರ್‌ ರಿಲೀಸ್‌

    ಮೂಲಗಳ ಪ್ರಕಾರ ದರ್ಶನ್ ಪ್ರತಿ ದೀಪಾವಳಿ ಹಬ್ಬದಂದೇ ವಾಹನ ಪೂಜೆ ಮಾಡುವ ಪದ್ಧತಿ ಪಾಲಿಸಿಕೊಂಡು ಬಂದಿದ್ದರಂತೆ. ಆದರೆ ಈ ಬಾರಿ ವಿಜಯಲಕ್ಷ್ಮಿ ಕಳೆದ ದಸರಾ ಹಬ್ಬದಂದೇ ವಾಹನ ಪೂಜೆ ಮಾಡಿ ಮುಗಿಸಿದ್ದಾರೆ. ಇದನ್ನೂ ಓದಿ: ಹುಡ್ಗೀರು ಬ್ರೇಕಪ್ ನೋವನ್ನ ಬೇಗ ಮರೆಯುತ್ತಾರೆ – ಮೌನ ಮುರಿದ ʻಶ್ರೀವಲ್ಲಿʼ

  • ಕೊಲೆ ಆರೋಪಿ ದರ್ಶನ್‌ಗೆ ಮಾಸ್ಟರ್ ಸ್ಟ್ರೋಕ್‌; ಫಂಗಸ್ ನಾಟಕಕ್ಕೂ ಕಾನೂನು ಪ್ರಾಧಿಕಾರ ವರದಿಯಲ್ಲಿ ಉತ್ತರ

    ಕೊಲೆ ಆರೋಪಿ ದರ್ಶನ್‌ಗೆ ಮಾಸ್ಟರ್ ಸ್ಟ್ರೋಕ್‌; ಫಂಗಸ್ ನಾಟಕಕ್ಕೂ ಕಾನೂನು ಪ್ರಾಧಿಕಾರ ವರದಿಯಲ್ಲಿ ಉತ್ತರ

    – ದರ್ಶನ್‌ಗೆ ಕಾಲಿನಲ್ಲಿ ಫಂಗಸ್ ಆಗಿಲ್ಲ, ಚರ್ಮ ಒಡೆದಿದೆ ಅಷ್ಟೇ
    – ಎಲ್ಲಾ ಖೈದಿಗಳಿಗೆ ಟಿವಿ ಕೊಡೋಕಾಗಲ್ಲ; ಸೊಳ್ಳೆಬತ್ತಿ, ಬಾಚಣಿಗೆಯೂ ಕೊಡುವಂತಿಲ್ಲ

    ಬೆಂಗಳೂರು: ಹಾಸಿಗೆ, ದಿಂಬು ಸೇರಿದಂತೆ ಜೈಲಿನಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವಂತೆ ಕೇಳಿಕೊಂಡಿದ್ದ ಕೊಲೆ ಆರೋಪಿ, ನಟ ದರ್ಶನ್‌ಗೆ ಕಾನೂನು ಸೇವಾ ಪ್ರಾಧಿಕಾರದ (Legal Services Authority) ವರದಿ ಮಾಸ್ಟರ್‌ ಸ್ಟ್ರೋಕ್‌ ಕೊಟ್ಟಿದೆ. ದರ್ಶನ್‌ಗೆ ಬಿಸಿಲು ಹೊರತುಪಡಿಸಿದ್ರೆ ಜೈಲು ಮ್ಯಾನ್ಯುವಲ್‌ ಪ್ರಕಾರ, ಉಳಿದೆಲ್ಲ ಸೌಲಭ್ಯಗಳು ಸಿಗುತ್ತಿವೆ ಎಂದು ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ. ದರ್ಶನ್‌ (Darshan) ಫಂಗಸ್‌ ನಾಟಕಕ್ಕೂ ವರದಿಯಲ್ಲಿ ಉತ್ತರ ಕೊಡಲಾಗಿದೆ.

    ಪ್ರಾಧಿಕಾರದ ವರದಿಯಲ್ಲಿ ಏನಿದೆ…? ದರ್ಶನ್‌ಗೆ ಏನು ಸೌಲಭ್ಯ ಸಿಕ್ಕಿದೆ…?
    ದರ್ಶನ್ ಇರುವ ಬ್ಯಾರಕ್‌ನಲ್ಲಿ 1 ಇಂಡಿಯನ್‌ ಟಾಯ್ಲೆಟ್‌, 2 ವೆಸ್ಟ್ರನ್ ಟಾಯ್ಲೆಟ್ ಇದೆ. ದರ್ಶನ್ 2 ಬಾತ್ ರೂಂಗಳು (ಸ್ನಾನಗೃಹ) ಇವೆ. ದರ್ಶನ್ ಬ್ಯಾರಕ್‌ನಲ್ಲಿ ಸಿಬ್ಬಂದಿಯ ಬಾಡಿ ಓರ್ನ್ ಕ್ಯಾಮೆರಾ ಕೂಡ ಪರಿಶೀಲಿಸಲಾಗಿದೆ. ದರ್ಶನ್ ಇರುವ ಬ್ಯಾರಕ್‌ನಲ್ಲಿ ಅಗತ್ಯ ಬೆಳಕಿನ ವ್ಯವಸ್ಥೆ ಇದೆ ಎಂದು ಹೇಳಿದೆ.

    ಇನ್ನೂ ಇಡೀ ರಾತ್ರಿ ಲೈಟ್ ಇರೋದ್ರಿಂದ ನಿದ್ರೆಗೆ ಸಮಸ್ಯೆಯಾಗ್ತಿದೆ. ಸಂಜೆ 6 ಗಂಟೆಗೆ ಲೈಟ್ ಹಾಕೋದ್ರಿಂದ ನಿದ್ರೆ ಮಾಡೋದಕ್ಕೆ ಆಗ್ತಿಲ್ಲ ಅನ್ನೋದು ದರ್ಶನ್‌ ಆರೋಪ. ಆದ್ರೆ ಕೈದಿಗಳ (Prisoners) ಭದ್ರತೆಯ ಕಾರಣಕ್ಕೆ ಇಡೀ ರಾತ್ರಿ ಲೈಟ್ ಹಾಕಲಾಗುತ್ತೆ.

    ದರ್ಶನ್‌ ದಿಂಬು ಹಾಸಿಗೆ ಕೇಳಿದ್ದಾರೆ. ಶಿಕ್ಷಿತ ಅಪರಾಧಿಗಳಿಗೆ (ಸಜಾ ಖೈದಿ) ಮಾತ್ರ ಹಾಸಿಗೆ, ದಿಂಬು ಹೊದಿಕೆ ನೀಡಲು ಅವಕಾಶ ಇದೆ. ವಿಚಾರಾಣಾಧೀನ ಕೈದಿಗೆ ಹಾಸಿಗೆ, ದಿಂಬು ನೀಡಲು ಜೈಲ್‌ ಮ್ಯಾನುವಲ್‌ನಲ್ಲಿ ಅವಕಾಶ ಇಲ್ಲ. ಅಲ್ಲದೇ ದರ್ಶನ್ ಸೆಲೆಬ್ರಿಟಿ ಆಗಿರೋದ್ರಿಂದ ಕಾರಿಡಾರ್‌ನಲ್ಲಿ ವಾಕಿಂಗ್ ಮಾಡುವಾಗ ಇತರೆ ಕೈದಿಗಳು ಕಿರುಚುತ್ತಾರೆ. ಅಕ್ಕಪಕ್ಕದ ಅಪಾರ್ಟ್‌ಮೆಂಟ್‌ಗಳಿಂದ ದರ್ಶನ್ ಫೋಟೋ ತೆಗೆಯುವ ಸಾಧ್ಯತೆ ಇದೆ. ಆದ್ದರಿಂದ ಜೈಲು ಮ್ಯಾನುವಲ್ ಪ್ರಕಾರ 1 ಗಂಟೆಗೆ ವಾಕಿಂಗ್‌ಗೆ, ಆಟಕ್ಕೆ ಅವಕಾಶ ಕೊಡಲಾಗಿದೆ. ಎಲ್ಲ ಸೌಲಭ್ಯಗಳನ್ನ ನೀಡಲಾಗಿದೆ. ಅಗತ್ಯಬಿದ್ದರೆ ಜೈಲಿನಲ್ಲಿ ಶಿಸ್ತುಪಾಲನೆ, ನಿರ್ವಹಣೆಗಾಗಿ ವಾಕಿಂಗ್/ಆಟಕ್ಕೂ ನಿರ್ಬಂಧ ಏರಬಹುದು ಎಂದು ಕೂಡ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಟಿವಿ, ಕನ್ನಡಿ, ಬಾಚಣಿಗೆ ಕೊಡೋಕಾಗಲ್ಲ
    ದರ್ಶನ್ ಟಿವಿ ಕೇಳಿದ್ದಾನೆ, ಆದ್ರೆ ಎಲ್ಲಾ ಖೈದಿಗಳಿಗೂ ಟಿವಿ ನೀಡಲು ಅವಕಾಶ ಇಲ್ಲ. ಎಲ್ಲಾ ಬ್ಯಾರಕ್ ಅಲ್ಲಿ ಕೂಡ ಟಿವಿ ಸೌಲಭ್ಯ ಮಾಡಲು ಸಾಧ್ಯವಿಲ್ಲ. ಫೋನ್‌ನಲ್ಲಿ ಮಾತಾಡುವಾಗ ಸ್ಪೀಕರ್ ಆನ್ ಮಾಡ್ತಾರೆ ಎಂಬ ಆರೋಪವನ್ನು ದರ್ಶನ್‌ ಮಾಡಿದ್ದಾರೆ. ಆರೋಪಿಗಳ ಸುರಕ್ಷತೆ ದೃಷ್ಟಿಯಿಂದ ಸ್ಪೀಕರ್ ಆನ್ ಮಾಡುವುದು ನಿಯಮ. ಏಕೆಂದ್ರೆ ಖೈದಿಗಳಿಗೆ ಹೇಳಿ ಫೋನ್‌ಕಾಲ್‌ ರೆಕಾರ್ಡ್ ಮಾಡುವ ಅವಕಾಶ ಇದೆ.

    ಫಂಗಸ್‌ ನಾಟಕಕ್ಕೂ ಉತ್ತರ
    ಇನ್ನೂ ದರ್ಶನ್‌ ಕಾಲಿನಲ್ಲಿ ಫಂಗಸ್‌ ಬಂದಿದೆ ಅಂತ ದರ್ಶನ್‌ ಆರೋಪ ಮಾಡಿದ್ದಾರೆ. ಆದ್ರೆ ಅದು ಫಂಗಸ್ ಅಲ್ಲ, ಚರ್ಮ ಒಡೆದಿರೋದು (ಕಾಲಿನಲ್ಲಿ ಆಗಿರೋ ಬಿರುಕು) ಅಷ್ಟೇ. ಚರ್ಮರೋಗ ತಜ್ಞೆ ಡಾ.ಜ್ಯೋತಿ ಬಾಯ್ ಅವರಿಂದ ದರ್ಶನ್‌ಗೆ ಚಿಕಿತ್ಸೆ ಕೊಡಿಸಲಾಗಿದೆ. ಜೊತೆಗೆ ಜೈಲಿನ ವೈದ್ಯರಿಂದ ಫಿಸಿಯೋ ತೆರಪಿ ಕೂಡ ಮಾಡಿಸಲಾಗಿದೆ. ಸೊಳ್ಳೆಬತ್ತಿ, ಕನ್ನಡಿ ಮತ್ತು ಬಾಚಣಿಗೆ ನೀಡಿಲ್ಲ ಎಂಬುದು ದರ್ಶನ್‌ ಆರೋಪ, ಶಿಕ್ಷಿತ ಅಪರಾಧಿಗೆ ಮಾತ್ರ ಇದೆಲ್ಲ ನೀಡಲು ಅವಕಾಶ ಇದೆ. ವಿಚಾರಾಣಾಧೀನ ಖೈದಿಗಳಿಗೆ ನೀಡಲು ಅವಕಾಶ ಇಲ್ಲ. ಅಲ್ಲದೇ ಕನ್ನಡಿ ಬಾಚಣಿಗೆ ನೀಡಿದ್ರೆ ಅನಾಹುತ ಆಗುವ ಸಾಧ್ಯತೆ ಇದೆ. ಹಾಗಾಗಿ ಹೆಚ್ಚುವರಿ ಸೌಲಭ್ಯ ನೀಡೋಕಾಗೋದಿಲ್ಲ ಎಂದು ಕಾನೂನು ಸೇವಾ ಪ್ರಾಧಿಕಾರ ಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

  • ನಾನು ಭೇಟಿಯಾದ ಅದ್ಭುತ ವ್ಯಕ್ತಿಗಳಲ್ಲಿ ದರ್ಶನ್ ಸಹ ಒಬ್ಬರು – ಡೆವಿಲ್ ನಾಯಕಿ ರಚನಾ ರೈ

    ನಾನು ಭೇಟಿಯಾದ ಅದ್ಭುತ ವ್ಯಕ್ತಿಗಳಲ್ಲಿ ದರ್ಶನ್ ಸಹ ಒಬ್ಬರು – ಡೆವಿಲ್ ನಾಯಕಿ ರಚನಾ ರೈ

    – ದರ್ಶನ್ ಜೊತೆ ನಟಿಸಿದ ಅನುಭವ ಒಂದು ಪಾಠ

    ರ್ಶನ್ ಅಭಿನಯದ ಡೆವಿಲ್ (Devil )ಸಿನಿಮಾದ ಎರಡನೇ ಹಾಡು ರಿಲೀಸ್ ಆಗಿ ಅಪಾರ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಸಿನಿಮಾದ ನಾಯಕಿ ರಚನಾ ರೈ (Rachana Rai) ಹಾಡಿನ ಸ್ಟಿಲ್‍ಗಳನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಅದರ ಜೊತೆಗೆ ನಟ ಚಾಲೆಂಜಿಂಗ್‍ಸ್ಟಾರ್ ದರ್ಶನ್ (Darshan) ಜೊತೆ ನಟಿಸಿದ ಅನುಭವ, ಶೂಟಿಂಗ್ ಸೆಟ್‍ನಲ್ಲಿ ದರ್ಶನ್ ನಡೆದುಕೊಂಡ ರೀತಿಯ ಬಗ್ಗೆ ಹಂಚಿಕೊಂಡಿದ್ದಾರೆ.

    ಸಾಮಾಜಿಕ ಪೋಸ್ಟ್ ಹಂಚಿಕೊಂಡಿರುವ ರಚನಾ ರೈ, `ನಿಮ್ಮಂಥಹಾ ಸೂಪರ್ ಸ್ಟಾರ್ ಜೊತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಅದೃಷ್ಟ. ಸೆಟ್‍ನಲ್ಲಿ ನಿಮ್ಮ ಏಕಾಗ್ರತೆ, ನಿಮ್ಮ ತಾಳ್ಮೆ ಮತ್ತು ನಿಮ್ಮ ಅಚಲ ಸಮರ್ಪಣೆ, ಪಾತ್ರಗಳಿಗೆ ಜೀವ ತುಂಬುವ ನಿಮ್ಮ ಆ ಪ್ರಕ್ರಿಯೆಗಳನ್ನು ಪ್ರತಿದಿನವೂ ಸೆಟ್‍ನಲ್ಲಿ ನೋಡುವುದು ನನಗೆ ಒಂದು ಅದ್ಭುತ ಪಾಠವಾಯ್ತು. ಕ್ಯಾಮೆರಾ ಮುಂದೆ ಮಾತ್ರವಲ್ಲದೆ ಕ್ಯಾಮೆರಾ ಹಿಂದೆ ನಿಮ್ಮ ಪ್ರೀತಿ, ಆಪ್ತತೆ, ದಯೆ ನಿಮ್ಮ ವ್ಯಕ್ತಿತ್ವ ಇತರರಲ್ಲಿ ದೊಡ್ಡ ಛಾಪು ಮೂಡಿಸುತ್ತದೆ. ನಾನು ಭೇಟಿ ಆಗಿರುವ ಅದ್ಭುತ ವ್ಯಕ್ತಿಗಳಲ್ಲಿ ನೀವೂ ಒಬ್ಬರು. ಒಬ್ಬ ಅದ್ಭುತ ಸಹನಟ ಆಗಿದ್ದಕ್ಕೆ ನಿಮಗೆ ಧನ್ಯವಾದಗಳು. ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಅದ್ಭುತ ವ್ಯಕ್ತಿಯಾಗಿ ಜೊತೆಗಿದ್ದಿದ್ದಕ್ಕೆ ನಿಮಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಚನಾ ರೈ ಹಂಚಿಕೊಂಡ ಈ ಪೋಸ್ಟ್‍ಗೆ ದರ್ಶನ್ ಅಭಿಮಾನಿಗಳು ಅಪಾರ ಮೆಚ್ಚುಗೆಯನ್ನ ವ್ಯಕ್ತಪಡಿಸುತ್ತಿದ್ದಾರೆ. ಡೆವಿಲ್ ಸಿನಿಮಾದ ಎರಡನೇ ಹಾಡು ಬಿಡುಗೆಯಾಗಿದೆ. ಎಲ್ಲೆಲ್ಲೂ ಒಂದೇ ಒಂದು ಸಲಾ ಅಂತಾ ರಿಂಗಣಿಸುತ್ತಿದೆ. ಡಿಸೆಂಬರ್ 12ಕ್ಕೆ ರಾಜ್ಯಾದ್ಯಂತ ಡೆವಿಲ್ ಸಿನಿಮಾ ರಿಲೀಸ್ ಆಗಲಿದೆ. ಈ ನಿಟ್ಟಿನಲ್ಲಿ ಒಂದೊಂದೇ ಕಂಟೆಂಟ್ ರಿಲೀಸ್ ಮಾಡುವ ಮೂಲಕ ಪ್ರಚಾರ ಕಾರ್ಯವನ್ನ ಮುಂದುವರೆಸಿದೆ.

    ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ದರ್ಶನ್ ಅನುಪಸ್ಥಿತಿಯಲ್ಲಿ ಸಿನಿಮಾ ಕೂಡಾ ಡಿಸೆಂಬರ್‍ಗೆ ತೆರೆಗೆ ಬರಲಿದೆ. ಶೂಟಿಂಗ್ ದಿನಗಳಲ್ಲಿ ರಚನಾ ರೈಗೆ, ಹೊಸ ಪ್ರತಿಭೆಗೆ ನಟ ದರ್ಶನ್ ತೋರಿದ ಕಾಳಜಿ, ನೀಡಿದ ಪ್ರೋತ್ಸಾಹ, ಪ್ರೀತಿಯ ಬಗ್ಗೆ ಮೆಲುಕು ಹಾಕಿದ್ದಾರೆ.

  • ದರ್ಶನ್‌ಗೆ ದಿಂಬು, ಹಾಸಿಗೆ – ಪರಪ್ಪನ ಅಗ್ರಹಾರಕ್ಕಿಂದು ಕಾನೂನು ಸೇವಾ ಪ್ರಾಧಿಕಾರ ಸದಸ್ಯರ ಭೇಟಿ

    ದರ್ಶನ್‌ಗೆ ದಿಂಬು, ಹಾಸಿಗೆ – ಪರಪ್ಪನ ಅಗ್ರಹಾರಕ್ಕಿಂದು ಕಾನೂನು ಸೇವಾ ಪ್ರಾಧಿಕಾರ ಸದಸ್ಯರ ಭೇಟಿ

    ಬೆಂಗಳೂರು: ನಟ ದರ್ಶನ್‌ಗೆ (Darshan) ಜೈಲಿನಲ್ಲಿ ಅಗತ್ಯ ಸೌಲಭ್ಯ ಒದಗಿಸಲಾಗಿದೆಯೇ ಅಂತ ಪರಿಶೀಲಿಸುವಂತೆ ಕೋರ್ಟ್ ಸೂಚನೆ ಹಿನ್ನೆಲೆ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮತ್ತು ಸದಸ್ಯರು ಇಂದು ಪರಪ್ಪನ ಅಗ್ರಹಾರ ಜೈಲಿಗೆ (Parappana Agrahara Jail) ಭೇಟಿ ನೀಡಲಿದ್ದಾರೆ.

    ಎರಡನೇ ಬಾರಿಗೆ ಜೈಲು ಸೇರಿರುವ ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲು ನರಕವಾಗಿದೆ. ಜೈಲಿನಲ್ಲಿ ಅಧಿಕಾರಿಗಳು ಅಗತ್ಯ ಸೌಲಭ್ಯ ನೀಡಿಲ್ಲ ಎಂದು ದರ್ಶನ್ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ದರ್ಶನ್ ಅರ್ಜಿ ಪುರಸ್ಕರಿಸಿದ ಕೋರ್ಟ್ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಿಗೆ ಜೈಲಿಗೆ ಭೇಟಿ ಪರಿಶೀಲಿಸುವಂತೆ ಸೂಚನೆ ನೀಡಿತ್ತು. ಇದನ್ನೂ ಓದಿ: ದರ್ಶನ್‌ಗೆ ಜೈಲಲ್ಲಿ ಹಾಸಿಗೆ, ದಿಂಬು ನೀಡದ ವಿಚಾರ – ‘ಜೈಲು ಪರಿಶೀಲಿಸಿ ರಿಪೋರ್ಟ್‌ ಕೊಡಿ’: ಕಾನೂನು ಪ್ರಾಧಿಕಾರಕ್ಕೆ ಕೋರ್ಟ್ ಆದೇಶ

    ಕೋರ್ಟ್ ಸೂಚನೆ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ. ಅಲ್ಲದೇ ದರ್ಶನ್ ಇರುವ ಕ್ವಾರೆಂಟೈನ್ ಸೆಲ್‌ನ ಪರಿಶೀಲನೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಜೈಲಿನಲ್ಲಿ ದರ್ಶನ್‌ಗೆ ತಲೆ ದಿಂಬು, ಹಾಸಿಗೆ ನೀಡಲಾಗಿದ್ಯಾ? ಜೈಲಿನ ಮ್ಯಾನ್ಯುವಲ್ ಅಡಿ ನೀಡಲಾಗಿರುವ ವಸ್ತುಗಳು ಯವ್ಯಾವು? ಹೀಗೆ ಅಧಿಕಾರಿಗಳು ಎಲ್ಲದರ ವರದಿ ಪಡೆಯಲಿದ್ದಾರೆ.

    ಆ ಬಳಿಕ ಕಾನೂನು ಸೇವಾ ಅಧಿಕಾರಿಯು ದರ್ಶನ್ ಹೇಳಿಕೆ ಪಡೆಯಲಿದ್ದಾರೆ. ಈ ವರದಿಯನ್ನು ಅ.18ರ ಒಳಗೆ ಅಧಿಕಾರಿಗಳು ಕೋರ್ಟ್ಗೆ ಸಲ್ಲಿಸಲಿದ್ದಾರೆ. ಹೀಗಾಗಿ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ, ವರದಿ ಸಿದ್ಧಪಡಿಸಲು ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ.

  • ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಆಗಿದ್ದ ದರ್ಶನ್ ಸಾಂಗ್ ರಿಲೀಸ್

    ಥೈಲ್ಯಾಂಡ್‌ನಲ್ಲಿ ಶೂಟಿಂಗ್ ಆಗಿದ್ದ ದರ್ಶನ್ ಸಾಂಗ್ ರಿಲೀಸ್

    ರ್ಶನ್ ಅಭಿನಯದ `ಡೆವಿಲ್’ (The Devil) ಸಿನಿಮಾದ ಎರಡನೇ ಹಾಡು ರಿಲೀಸ್ ಆಗಿದೆ. ಥೈಲ್ಯಾಂಡ್‌ನಲ್ಲಿ ಚಿತ್ರೀಕರಿಸಿರುವ ಹಾಡು ಇದಾಗಿದ್ದು, ನಟಿ ರಚನಾ ರೈ (Rachana Rai) ಜೊತೆ ದರ್ಶನ್ (Darshan) ರೊಮ್ಯಾಂಟಿಕ್ ಸ್ಪೆಪ್ ಹಾಕಿದ್ದಾರೆ.

    ಕಳೆದ ಜುಲೈ ತಿಂಗಳಲ್ಲಿ ಕೋರ್ಟ್ ಅನುಮತಿ ಪಡೆದುಕೊಂಡು ದರ್ಶನ್ ಥೈಲ್ಯಾಂಡ್‌ಗೆ ತೆರಳಿದ್ದರು. ಇದೀಗ ಅಲ್ಲಿ ಚಿತ್ರೀಕರಣವಾದ `ಒಂದೇ ಒಂದು ಸಲ’ ಹಾಡು ರಿಲೀಸ್ ಆಗಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನಕ್ಕೆ ಪ್ರಮೋದ್ ಮರವಂತೆ ಸಾಹಿತ್ಯವಿದೆ. ಹಾಡು ಕಪಿಲ್ ಕಪಿಲನ್ ಹಾಗೂ ಚಿನ್ಮಯಿ ಶ್ರೀಪಾದ ಧ್ವನಿಯಲ್ಲಿ ಮೂಡಿಬಂದಿದೆ. ಇದನ್ನೂ ಓದಿ: ದರ್ಶನ್‌ಗೆ ಜೈಲಲ್ಲಿ ಹಾಸಿಗೆ, ದಿಂಬು ನೀಡದ ವಿಚಾರ – ‘ಜೈಲು ಪರಿಶೀಲಿಸಿ ರಿಪೋರ್ಟ್‌ ಕೊಡಿ’: ಕಾನೂನು ಪ್ರಾಧಿಕಾರಕ್ಕೆ ಕೋರ್ಟ್ ಆದೇಶ

    ಈ ಹಾಡಿನ ಮೂಲಕ ದರ್ಶನ್ ಹಾಗೂ ರಚನಾ ರೈ ಆನ್‌ಸ್ಕ್ರೀನ್ ಜೋಡಿ ಮೊದಲ ಬಾರಿ ಒಟ್ಟಿಗೆ ಕಾಣಿಸ್ಕೊಂಡಿದೆ. ಸಂತು ಮಾಸ್ಟರ್ ಕೊರಿಯೋಗ್ರಫಿ ಮಾಡಿರುವ ಹಾಡು ಇದಾಗಿದ್ದು‌, ವಿವಿಧ ಆಕರ್ಷಕ ಕಾಸ್ಟ್ಯೂಮ್‌ನಲ್ಲಿ ದರ್ಶನ್ ಮಿಂಚಿದ್ದಾರೆ.

    ಸಾಮಾನ್ಯವಾಗಿ ದರ್ಶನ್ ಸಿನಿಮಾಗಳಲ್ಲಿ ಮೆಲೋಡಿ ಹಾಡಿಗೂ ಹೆಚ್ಚಿನ ಪ್ರಧಾನ್ಯತೆ ಇರುತ್ತೆ. ಅದನ್ನ ಗಮನದಲ್ಲಿಟ್ಟುಕೊಂಡೇ ಈ ಹಾಡನ್ನ ರಚಿಸಿದಂತಿದೆ. ಇನ್ನು ಪ್ರಕಾಶ್ ವೀರ್ ನಿರ್ದೇಶನದ `ದಿ ಡೆವಿಲ್’ ಚಿತ್ರ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗೋದಕ್ಕೆ ಅನೌನ್ಸ್ ಆಗಿದೆ. ಇದನ್ನೂ ಓದಿ: Fraud Case | ನೋಟು ಅಮಾನ್ಯೀಕರಣದಿಂದಾಗಿ ಸಾಲ ಪಾವತಿಸಲು ಆಗಿರಲಿಲ್ಲ: ಶಿಲ್ಪಾ ಶೆಟ್ಟಿ ಪತಿ