Tag: darsh chandrappa

  • ಅಕ್ಕತಂಗಿಯರ ನಡುವಿನ ವಿಭಿನ್ನ ಕಥೆ ‘ಗಂಗೆ ಗೌರಿ’

    ಅಕ್ಕತಂಗಿಯರ ನಡುವಿನ ವಿಭಿನ್ನ ಕಥೆ ‘ಗಂಗೆ ಗೌರಿ’

    ಹೊಸ ತರಹದ ಮತ್ತು ವಿಭಿನ್ನ ಕಥೆಯ ಮೂಲಕ ವೀಕ್ಷಕರ ಮನಗೆಲ್ಲುವಲ್ಲಿ ಉದಯ ಟಿವಿ ಯಾವಾಗಲೂ ಮುಂದು. ಈಗ ಅಕ್ಕ ತಂಗಿಯರ ಅಪೂರ್ವ ಬಾಂಧವ್ಯದ ಕಥೆ ಹೇಳುವ ʻಗಂಗೆ ಗೌರಿʼ ಧಾರಾವಾಹಿಯ ಮೂಲಕ ಜನರ ಮನರಂಜಿಸಲು ಉದಯ ಟಿವಿ ಸಜ್ಜಾಗಿದೆ.  ಈಗಾಗಲೇ ಕನ್ಯಾದಾನ, ಆನಂದರಾಗ, ಅಣ್ಣತಂಗಿ, ಸೇವಂತಿ, ಜನನಿ, ರಾಧಿಕಾ, ಜನನಿ, ನಯನತಾರಾ, ಗೌರಿಪುರದ ಗಯ್ಯಾಳಿಗಳು ಇತ್ಯಾದಿ ಕೌಟುಂಬಿಕ ಧಾರವಾಹಿಗಳು (Serial) ವೀಕ್ಷಕರ ಮನ ಗೆದ್ದಿವೆ. ಈಗ ʻಗಂಗೆ ಗೌರಿʼ(Gange Gowri) ವಿಶೇಷ ನಿರೂಪಣಾ ಶೈಲಿಯೊಂದಿಗೆ ಟಿವಿ ಮನೋರಂಜನಾ ಲೋಕಕ್ಕೆ ಲಗ್ಗೆ ಇಡಲಿದೆ.

    ಹಸಿರು ಮಲೆನಾಡ ಪುಟ್ಟ ಹಳ್ಳಿಯಲ್ಲಿ ಗಂಗೆ ಗೌರಿ ಎನ್ನುವ ಅಕ್ಕತಂಗಿಯರು. ಯಾರಿಗೂ ಜಗ್ಗದ ಬಗ್ಗದ, ಮಾತಿಗಿಂತ ಏಟೇ ಸರಿ ಎನ್ನುವ ಹುಡುಗಿ ತಂಗಿ ಗಂಗೆಯಾದರೆ, ಮೃದು ಮಾತಲ್ಲೇ ಎಲ್ಲರ ಮನ ಗೆಲ್ಲುವ ಶಾಂತ ಮೃದು ಸ್ವಭಾವದ ಅಕ್ಕ ಗೌರಿ. ಸ್ವಭಾವ ಬೇರೆಯಾದರೂ ಒಬ್ಬರನ್ನೊಬ್ಬರು ಅಗಲಿ ಇರಲಾರದಷ್ಟು ಅನ್ಯೋನ್ಯತೆ. ಇವರ ನಡುವೆ ಹುಡುಗನೊಬ್ಬ ಬಂದರೆ ಏನಾಗಬಹುದು? ಅವರ ಜೀವನದಲ್ಲಿ ಯಾವ ಥರಹದ ಬದಲಾವಣೆಗಳು ಆಗುತ್ತವೆ? ತಂಗಿಗೋಸ್ಕರ ಅಕ್ಕ ಗೌರಿ ಪ್ರೀತಿಯನ್ನು ತ್ಯಾಗ ಮಾಡುತ್ತಾಳಾ ಅಥವಾ ಅಕ್ಕ ಮತ್ತು ಪ್ರೀತಿಯ ನಡುವೆ ಗಂಗೆಯ ಆಯ್ಕೆ ಏನು? ಇವೆಲ್ಲ ಮೀರಿ ದೈವೇಚ್ಛೆ ಏನು? ಎನ್ನುವುದರ ಸುತ್ತ ಕುತೂಹಲ ಭರಿತ ತಿರುವುಗಳ ಕಥಾಹಂದರ ಇದಾಗಿದೆ.

    ಕಳಸದ ಹಸಿರಿನ ನಡುವೆ, ಮಲೆನಾಡ ಸುಂದರ ಹಳ್ಳಿ ಬದುಕಿನ ಹಿನ್ನೆಲೆಯ ಈ ಕಥೆ ನೋಡುಗರ ಮನಗೆಲ್ಲುವುದರಲ್ಲಿ ಸಂದೇಹವೇ ಇಲ್ಲ. ಈಗಾಗಲೇ ಅನೇಕ ಕನ್ನಡ ಅದ್ಭುತ ಸೀರಿಯಲ್ಗಳನ್ನು ನಿರ್ಮಾಣ ಮಾಡಿದ ವೃದ್ಧಿ ಕ್ರಿಯೇಶನ್ ಈ ಧಾರಾವಾಹಿಯ ನಿರ್ಮಾಣದ ಹೊಣೆ ಹೊತ್ತಿದೆ. ಅನುಭವಿ ನಿರ್ದೇಶಕ ವಿನೋದ್ ದೋಂಡಾಳೆ ನಿರ್ದೇಶನದಲ್ಲಿ ಗಂಗೆ ಗೌರಿ ಮೂಡಿಬರುತ್ತಿದೆ.

    ದರ್ಶ್ ಚಂದ್ರಪ್ಪ (Darsh Chandrappa), ಶ್ರೀವಿದ್ಯಾ ಶಾಸ್ತ್ರಿ (Srividya), ದರ್ಶಿನಿ ಗೌಡ (Darshini Gowda), ರೇಣುಕಾ ಬಾಲಿ, ಹೇಮಾ ಬೆಳ್ಳೂರು, ಅಪೂರ್ವ ಭಾರಧ್ವಾಜ್, ರೋಹಿತ್ ಶ್ರೀನಾಥ್, ಅಭಿಜಿತ್, ಲಕ್ಷ್ಮೀ ಸಿದ್ದಯ್ಯ ಅವರಂತಹ ಖ್ಯಾತ ಕಲಾವಿದರ ದಂಡೇ ಈ ಧಾರಾವಾಹಿಯಲ್ಲಿದೆ.

     

    ʻಗಂಗೆ ಗೌರಿʼನಮ್ಮ ಹೆಮ್ಮೆಯ ನಿರ್ಮಾಣ . ಇದು ಬೇರೆ ಸೀರಿಯಲ್ಗಳಿಗಿಂತ ವಿಭಿನ್ನವಾಗಿದೆ. ಮಲೆನಾಡಿನ ಸುಂದರ ತಾಣಗಳಿಗೆ ಹೋಗಿ ಶೂಟ್ ಮಾಡಿಕೊಂಡು ಬಂದಿದ್ದೇವೆ. ಸೀರಿಯಲ್ ನಡುವೆ ಕನ್ನಡ ಭಾವಗೀತೆಗಳನ್ನು ಬಳಸಿದ್ದೇವೆ. ಕನ್ನಡತನ ಇದರಲ್ಲಿ ಎದ್ದು ಕಾಣಿಸುತ್ತೆ. ಖಂಡಿತ ಇದು ನಮ್ಮ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ’ ಎನ್ನುತ್ತಾರೆ ನಿರ್ಮಾಪಕ ವರ್ಧನ್ ಹರಿ ಗಂಗೆ ಗೌರಿ ಇದೇ ಡಿಸೆಂಬರ್‌ 11 ರಿಂದ ಸೋಮವಾರದಿಂದ ಶನಿವಾರ ಸಂಜೆ 6.30ಕ್ಕೆ ಉದಯ ಟಿವಿ ಯಲ್ಲಿ ಪ್ರಸಾರವಾಗಲಿದೆ.

  • ಈ ವಾರ ಬಿಗ್ ಬಾಸ್ ಮನೆಯಿಂದ ದರ್ಶ್ ಚಂದ್ರಪ್ಪ ಔಟ್

    ಈ ವಾರ ಬಿಗ್ ಬಾಸ್ ಮನೆಯಿಂದ ದರ್ಶ್ ಚಂದ್ರಪ್ಪ ಔಟ್

    ದುರ್ಗಾ, ಸೀತಾ ವಲ್ಲಭ, ಸೀರಿಯಲ್ ಮೂಲಕ ಮೋಡಿ ಮಾಡಿದ್ದ ದರ್ಶ್ ಚಂದ್ರಪ್ಪ ಬಿಗ್ ಬಾಸ್ ಸೀಸನ್ 9 (Bigg Boss Season 9) ಕ್ಕೆ ಕಾಲಿಟ್ಟಿದ್ದರು. ತಮ್ಮ ನೇರ ಮಾತಿನ ಮೂಲಕ ಹೈಲೆಟ್ ಆಗಿದ್ದ ದರ್ಶ್ ಇದೀಗ ಮೂರನೇ ವಾರಕ್ಕೆ ದೊಡ್ಮನೆಯಿಂದ ಹೊರ ನಡೆದಿದ್ದಾರೆ.

    ನಟನೆಯ ಜೊತೆಗೆ ಉದ್ಯಮ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದ ದರ್ಶ್ ಚಂದ್ರಪ್ಪ (Darsh Chandrappa) ಬಿಗ್ ಬಾಸ್ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡಿದ್ದರು. ತಮ್ಮ ಖಡಕ್ ಮಾತಿನ ಮೂಲಕ ಮನೆಯವರ ಕೆಂಗಣ್ಣಿಗೆ ಗುರಿಯಾಗಿದ್ದು ಕೂಡ ಇದೆ. ಚಿನ್ನದ ಗಣಿ ಟಾಸ್ಕ್‍ನಲ್ಲಿ ಉತ್ತಮವಾಗಿ ಆಟವಾಡಿ ದರ್ಶ್ ಸೈ ಎನಿಸಿಕೊಂಡಿದ್ದರು. ಆದರೆ ಇದೀಗ ಪ್ರೇಕ್ಷಕರ ವೋಟ್ ದರ್ಶ್ ಕೈಹಿಡಿಯಲಿಲ್ಲ. ಬಿಗ್ ಬಾಸ್ ನ ಮೂರನೇ ವಾರದ ಆಟದಲ್ಲಿ ದರ್ಶ್ ಎಲಿಮಿನೇಟ್ ಆಗಿದ್ದಾರೆ.

    ಮೊದಲ ವಾರ ಹೆಣ್ಣು ಮಕ್ಕಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎಂದು ದಿವ್ಯಾ ಉರುಡುಗ (Divya Uruduga) ಅವರ ಪರ ನಿಂತು ದರ್ಶ್ ಅವರು ಸಂಬರ್ಗಿಗೆ (Prashanth Sambargi) ಸಖತ್ ಕ್ಲಾಸ್ ತೆಗೆದುಕೊಂಡಿದ್ದರು. ದರ್ಶ್ ಅವರ ಈ ಮಾತುಗಳು ಪ್ರೇಕ್ಷಕ ಪ್ರಭುಗಳಿಗೆ ಇಷ್ಟವಾಗಿತ್ತು. ಐಶ್ವರ್ಯಾ ಪಿಸ್ಸೆ, ನವಾಜ್ ನಂತರ ಇದೀಗ ದರ್ಶ್ ಗೆ ಬಿಗ್ ಬಾಸ್ ಮನೆಯ ಆಟ ಅಂತ್ಯವಾಗಿದೆ.

    ಪ್ರತಿಭಾವಂತ ನಟ ದರ್ಶ್‍ಗೆ, ಬಿಗ್ ಬಾಸ್ ನಂತರ ಒಂದೊಳ್ಳೆ ಅವಕಾಶಗಳು ಸಿಗಲಿ, ಚಿತ್ರರಂಗದಲ್ಲಿ ಉತ್ತುಂಗಕ್ಕೆ ಏರಲಿ ಎಂಬುದೇ ಅಭಿಮಾನಿಗಳ ಆಶಯ. ಇದನ್ನೂ ಓದಿ: ‘ಬಿಗ್ ಬಾಸ್ ಸೀಸನ್ 9’ರ ಮೊದಲ ಮಹಿಳಾ ಕ್ಯಾಪ್ಟನ್ ಆಗಿ ದೀಪಿಕಾ ದಾಸ್ ಆಯ್ಕೆ

    Live Tv
    [brid partner=56869869 player=32851 video=960834 autoplay=true]

  • ಪ್ರಾಂಕ್ ಮಾಡಿದವರಿಗೆ ಬಿಗ್ ಶಾಕ್ ಕೊಟ್ರು ಬಿಗ್ ಬಾಸ್: ದೊಡ್ಮನೆ ಶೇಕ್

    ಪ್ರಾಂಕ್ ಮಾಡಿದವರಿಗೆ ಬಿಗ್ ಶಾಕ್ ಕೊಟ್ರು ಬಿಗ್ ಬಾಸ್: ದೊಡ್ಮನೆ ಶೇಕ್

    ದೊಡ್ಮನೆಯಲ್ಲಿ ನಗು, ಅಳು, ಜಗಳ ಜೊತೆಗೆ ಪ್ರಾಂಕ್ ಕೂಡ ಅಷ್ಟೇ ಹೈಲೆಟ್ ಆಗುತ್ತಿದೆ. ಈ ಹಿಂದೆ ಟೂತ್ ಪೇಸ್ಟ್ ಮುಕ್ಕಳಿಸಿ ಫಿಟ್ಸ್ ಬಂದಿರುವ ರೀತಿ ಅಭಿನಯಿಸಿ ರಾಕೇಶ್ ಅಡಿಗ(Rakesh Adiga) ಪ್ರಾಂಕ್ ಮಾಡಿದ್ದರು. ಇದರಿಂದ ಎಲ್ಲರೂ ಆಘಾತಗೊಂಡಿದ್ದರು. ಈ ತರಹದ ಪ್ರಾಂಕ್‌ಗಳು ಬೇಡ ಎಂದು ಕಿಚ್ಚ ಸುದೀಪ್ ಕೂಡ ಕಿವಿ ಹಿಂಡಿದ್ದರು. ಇಷ್ಟಾದರೂ, ಪ್ರಾಂಕ್ ಮಾಡೋದನ್ನ ನಿಲ್ಲಿಸಿಲ್ಲ. ರಾಕೇಶ್ ಅಡಿಗ ಮತ್ತು ಅನುಪಮಾ ಮಾಡಿದ ಪ್ರಾಂಕ್‌ಗೆ ಬಿಗ್ ಬಾಸ್ (Bigg Boss)  ಖಡಕ್ ಪಾಠ ಕಲಿಸಿದ್ದಾರೆ.

    ಎರಡನೇ ವಾರದ ಟಾಸ್ಕ್ ನಲ್ಲಿ ದೀಪಿಕಾ ದಾಸ್(Deepika Das) ಟೀಮ್ ವಿರುದ್ಧ ಅನುಪಮಾ ಗೌಡ(Anupama Gowda) ತಂಡ ಜಯಗಳಿಸಿದರು. ಇದೇ ಜೋಶ್ ನಲ್ಲಿ ಒಂದು ಹೆಜ್ಜೆ ಮುಂದಕ್ಕೆ ಹೋದ ರಾಕೇಶ್ ಅಡಿಗ ಮತ್ತು ಅನುಪಮಾ ಗೌಡ ತಮ್ಮ ಪ್ರಾಂಕ್‌ನಲ್ಲಿ ಬಿಗ್ ಬಾಸ್‌ ಹೆಸರನ್ನೂ ಬಳಸಿಕೊಂಡರು. ರೂಲ್ ಬುಕ್, ನಿಯಮ ಅಂತಾ ಹೇಳಿ ಗುರೂಜಿರನ್ನ ಏಮಾರಿಸಿದರು. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ 8 ಮಂದಿ ಪೈಕಿ 4 ಮಂದಿಯನ್ನ ಆಯ್ಕೆ ಮಾಡಬೇಕು ಅಂತ ಗುರೂಜಿಗೆ ಫೂಲ್ ಮಾಡಿದರು. ಈಗ ಇದೇ ಪ್ರಾಂಕ್ ಬ್ಯಾಕ್ ಫೈಯರ್ ಆಗಿದೆ. ಇದನ್ನೂ ಓದಿ: ಜೋಗಿ ಪ್ರೇಮ್- ಧ್ರುವ ಸರ್ಜಾ ಚಿತ್ರದ ಟೈಟಲ್ ಟೀಸರ್ ಕಾರ್ಯಕ್ರಮಕ್ಕೆ ಮೋಹನ್ ಲಾಲ್

    ಕ್ಯಾಪ್ಟನ್ ವಿಚಾರವಾಗಿ ಗುರೂಜಿಗೆ ಪ್ರಾಂಕ್ ಮಾಡಲು ರಾಕೇಶ್ ಮತ್ತು ಅನುಪಮಾ ಮುಂದಾದರು. ಪ್ರಾಂಕ್ ಐಡಿಯಾ ಕೊಟ್ಟಿದ್ದು ರಾಕೇಶ್ ಅಡಿಗ ಅವರದಾಗಿದ್ದು, ರೂಲ್ ಬುಕ್ ಕೂಡ ಈ ವೇಳೆ ಬಳಕೆ ಮಾಡಿಕೊಂಡಿದ್ದಾರೆ. ಟಾಸ್ಕ್‌ಗೆ 8 ಜನರಲ್ಲಿ 4 ಜನ ಕ್ಯಾಪ್ಟನ್‌ ಟಾಸ್ಕ್‌ಗೆ ಆಯ್ಕೆ ಮಾಡಬೇಕು ಅಂತ ಓದಿದ್ದಾರೆ. ಯಾರೂ ಗುರೂಜಿ ಅವರ ಹೆಸರನ್ನ ಹೇಳೋದು ಬೇಡ. ನಾವು ನಾವೇ ಕಿತ್ತಾಡೋಣ ಎಂದು ಅನುಪಮಾ ಗೌಡಗೆ ರಾಕೇಶ್ ಅಡಿಗ ಈ ಮೊದಲೇ ಮಾತನಾಡಿಕೊಂಡಿದ್ದಾರೆ.

    8 ಜನರ ಪೈಕಿ ವೋಟಿಂಗ್ ತೆಗೆದುಕೊಂಡಾಗ, ಯಾರೂ ಗುರೂಜಿ ಹೆಸರು ಹೇಳಲಿಲ್ಲ. ಇದರಿಂದ ಬೇಸರಗೊಂಡ ಗುರೂಜಿ, ನನಗೆ ಒಂದೂ ವೋಟ್ ಬಿದ್ದಿಲ್ಲ. ನಾನು ಯಾರಿಗೂ ವೋಟ್ ಕೊಡಲ್ಲ. ನಿಮ್ಮ ವೋಟ್‌ಗಳನ್ನ ನೀವೇ ಹಂಚಿಕೊಳ್ಳಿ ಎಂದು ರಾಂಗ್ ಆಗಿದ್ದಾರೆ. ಈ ವೇಳೆ ಎಲ್ಲರೂ ನಗಲು ಆರಂಭಿಸಿದರು. ಬಳಿಕ ಇದು ಪ್ರಾಂಕ್ ಎಂದು ಆರ್ಯವರ್ಧನ್ ಗುರೂಜಿ ಅರಿತರು.

    ಕ್ಯಾಪ್ಟನ್ಸಿ ಟಾಸ್ಕ್ ಆಯ್ಕೆ ವಿಚಾರವಾಗಿ ನಡೆದ ಪ್ರಾಂಕ್ ಇದೀಗ ಬ್ಯಾಕ್ ಫೈಯರ್ ಆದಂತಿದೆ. ಪ್ರಾಂಕ್ ಮಾಡಿದವರಿಗೆ ಬಿಗ್ ಬಾಸ್ ಬಿಗ್ ಶಾಕ್ ಕೊಟ್ಟಿದ್ದಾರೆ. ಪ್ರಾಂಕ್‌ನಲ್ಲಿ ಆಯ್ಕೆ ಆದ ನಾಲ್ಕು ಮಂದಿ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆಗಿದ್ದಾರೆ ಎಂದು ಬಿಗ್ ಬಾಸ್ ಘೋಷಿಸಿದ್ದಾರೆ. ದರ್ಶ್ ,ಮಯೂರಿ, ಅನುಪಮಾ, ರಾಕೇಶ್ ಅಡಿಗ ಇಷ್ಟು ಜನ ಕ್ಯಾಪ್ಟನ್ ಟಾಸ್ಕ್ ಆಯ್ಕೆ ಆಗಿದ್ದಾರೆ ಎಂದು ಘೋಷಿಸಿ, ಬಿಗ್ ಬಾಸ್ ಶಾಕ್ ಕೊಟ್ಟಿದ್ದಾರೆ. ಬಿಗ್ ಬಾಸ್ ಹೆಸರು ಬಳಕೆ ಮಾಡಿ ಪ್ರಾಂಕ್ ಮಾಡಿದ್ದಕ್ಕೆ ಬಿಗ್ ಬಾಸ್ ಈ ಮೂಲಕ ಮನೆ ಮಂದಿಗೆ ಪಾಠ‌ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]