Tag: Darling Krishna

  • ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬಕ್ಕೆ ಫಸ್ಟ್ ಗ್ಲಿಂಪ್ಸ್

    ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬಕ್ಕೆ ಫಸ್ಟ್ ಗ್ಲಿಂಪ್ಸ್

    ಮ್ಮ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿರುವ ಡಾರ್ಲಿಂಗ್ ಕೃಷ್ಣ ಅವರಿಗೆ ಜೂನ್ 12ರಂದು ಹುಟ್ಟುಹಬ್ಬದ ಸಂಭ್ರಮ.  ಪ್ರಸ್ತುತ ಕೃಷ್ಣ ಅವರು ನಾಯಕರಾಗಿ ನಟಿಸುತ್ತಿರುವ “ದಿಲ್ ಪಸಂದ್” ಚಿತ್ರದ ಫಸ್ಟ್ ಗ್ಲಿಂಪ್ಸ್ ಜೂನ್ 12ರ ಬೆ.11.14ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಲಿದೆ. ಈ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಮಾಡುವ ಮೂಲಕ “ದಿಲ್ ಪಸಂದ್” ಚಿತ್ರತಂಡ ಕೃಷ್ಣ ಅವರಿಗೆ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಲಿದೆ.

    ವಿಭಿನ್ನ ಕಥಾಹಂದರದ “ದಿಲ್ ಪಸಂದ್” ಚಿತ್ರದ ಮಾತಿನ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದೆ. ಹಾಡುಗಳ ಚಿತ್ರೀಕರಣ ಬಾಕಿಯಿದೆ. ರಶ್ಮಿ ಫಿಲಂಸ್ ಮೂಲಕ ಸುಮಂತ್ ಕ್ರಾಂತಿ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಶಿವ ತೇಜಸ್ ನಿರ್ದೇಶಿಸುತ್ತಿದ್ದಾರೆ.  ಕೆ.ಆರ್ .ರಂಗಸ್ವಾಮಿ  ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಿತ್ರದ ಸುಮಧುರ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ದಿಲ್ ಪಸಂದ್”ಗಿದೆ. ಇದನ್ನೂ ಓದಿ: ಮುಂಬೈಗೆ 725 ರನ್‍ಗಳ ದಾಖಲೆಯ ಜಯ – ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 129 ವರ್ಷಗಳ ಬಳಿಕ ರೆಕಾರ್ಡ್ ಬ್ರೇಕ್

    ಡಾರ್ಲಿಂಗ್ ಕೃಷ್ಣ ಅವರಿಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸುತ್ತಿದ್ದಾರೆ. ಮೇಘ ಶೆಟ್ಟಿ (ಜೊತೆಜೊತೆಯಲಿ ಖ್ಯಾತಿ), ಸಾಧುಕೋಕಿಲ, ರಂಗಾಯಣ ರಘು, ತಬಲ ನಾಣಿ, ಗಿರಿ, ಹರೀಶ್ ದೇವಿತಂದ್ರೆ, ಚಿತ್ಕಲ ಬಿರಾದಾರ್, ಅರುಣಾ ಬಾಲರಾಜ್ ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ತೆರೆಯ ಮೇಲೂ ಒಂದಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ

    ತೆರೆಯ ಮೇಲೂ ಒಂದಾದ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ

    ವ್ ಮಾಕ್ಟೈಲ್ ಚಿತ್ರದಲ್ಲಿ ಜೋಡಿಯಾಗಿ ಸಿನಿರಂಗವನ್ನು ರಂಜಿಸಿದ್ದ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್, ಈ ಸಿನಿಮಾದಲ್ಲಿ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲೂ ಅವರು ಜೊತೆಯಾದರು. ಸತಿ ಪತಿಯಾಗಿ ಒಂದೊಳ್ಳೆ ಜೀವನ ಸಾಗಿಸುತ್ತಿದ್ದಾರೆ. ಸಿನಿಮಾದಲ್ಲಿ ಪ್ರೇಮಿಯಾಗಿ ಪಾತ್ರ ಮಾಡಿದ್ದವರು, ನಿಜ ಜೀವನದಲ್ಲೂ ಅದನ್ನು ಮುಂದುವರೆಸಿಕೊಂಡು ಹೋಗಿ, ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾ

    ಲವ್ ಮಾಕ್ಟೈಲ್ ಇಬ್ಬರ ವೃತ್ತಿ ಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು. ಆನಂತರ ಅವರು ಲವ್ ಮಾಕ್ಟೈಲ್ 2 ನಲ್ಲೂ ಜೊತೆಯಾಗಿಯೇ ನಟಿಸಿದರು. ಬಾಕ್ಸ್ ಆಫೀಸಿನಲ್ಲಿ ಅದು ಅಷ್ಟೇನೂ ಸದ್ದು ಮಾಡದೇ ಇದ್ದರೂ, ಜೋಡಿಯು ನೋಡುಗರಿಗೆ ಇಷ್ಟವಾಯಿತು. ಈಗ ಅದನ್ನೇ ಮುಂದುವರೆಸುವ ನಿಟ್ಟಿನಲ್ಲಿ ನಿರ್ದೇಶಕ ಪಿ.ಸಿ.ಶೇಖರ್ ಮತ್ತೊಂದು ಹೊಸ ಸಿನಿಮಾವನ್ನು ಇದೇ ಜೋಡಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಅದಕ್ಕೆ ಬ್ಯುಟಿಫುಲ್ ಆಗಿರುವ ಶೀರ್ಷಿಕೆಯನ್ನೂ ಇಟ್ಟಿದ್ದಾರೆ. ಇದನ್ನೂ ಓದಿ : ‘ಕಾಳಿ’ ಟೈಟಲ್ ಧ್ರುವ ಸರ್ಜಾಗಾ? ಅಥವಾ ಅಭಿಷೇಕ್ ಅಂಬರೀಶ್ ಗಾ?

    ಪಿ.ಸಿ. ಶೇಖರ್ ಸಿನಿಮಾ ರಂಗದಲ್ಲಿ ಕೊಂಚ ಗ್ಯಾಪ್ ತಗೆದುಕೊಂಡು ಸಿನಿಮಾವೊಂದನ್ನು ನಿರ್ದೇಶನ ಮಾಡುತ್ತಿದ್ದು, ಈ ಚಿತ್ರಕ್ಕೆ ಲವ್ ಬರ್ಡ್ಸ್ ಎಂದು ಹೆಸರಿಟ್ಟಿದ್ದಾರೆ. ರಿಯಲ್ ಲೈಫ್‍ನ ಲವ್ ಬರ್ಡ್ಸ್ ಅನ್ನೇ ನಾಯಕ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಕಥೆಗೂ ಮತ್ತು ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಅವರ ಜೋಡಿಗೂ ಒಂದಾಣಿಕೆ ಆಗುತ್ತಿದ್ದರಿಂದ, ಇದೇ ಜೋಡಿಯನ್ನು ಆಯ್ಕೆ ಮಾಡಿಕೊಂಡು, ಸಿನಿಮಾ ಮಾಡುತ್ತಿದ್ದಾರೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ

    ಲವ್ ಬರ್ಡ್ಸ್ ಚಿತ್ರಕ್ಕೆ ಮಿಲನಾ ನಾಗರಾಜ್ ನಾಯಕಿಯಾದರೆ, ಡಾರ್ಲಿಂಗ್ ಕೃಷ್ಣ ನಾಯಕ. ಮದುವೆಯಾದ ಜೋಡಿಯ ನಂತರದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆಯಂತೆ. ದಾಂಪತ್ಯ ಜೀವನದ ಹಲವು ಸಂಗತಿಗಳನ್ನು ಈ ಸಿನಿಮಾದ ಮೂಲಕ ಹೇಳಲು ಹೊರಟಿದ್ದಾರಂತೆ ನಿರ್ದೇಶಕರು.

  • ಆದಿ ಹುಟ್ಟುಹಬ್ಬಕ್ಕೆ ನಿಧಿಮಾ ಸರ್ಪ್ರೈಸ್

    ಆದಿ ಹುಟ್ಟುಹಬ್ಬಕ್ಕೆ ನಿಧಿಮಾ ಸರ್ಪ್ರೈಸ್

    ಬೆಂಗಳೂರು: ಸ್ಯಾಂಡಲ್‍ವುಡ್ ಸೆನ್ಸೇಷನ್ ಜೋಡಿ ಎಂದೇ ಗುರುತಿಸಿಕೊಂಡಿರುವ, ಆದಿ-ನಿಧಿಮಾ ಎಂದೇ ಪ್ರಸಿದ್ಧಿ ಪಡೆದಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಸಿನಿಮಾ ಕೆಲಸಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆಯೇ ಪ್ರೀತಿ, ತುಂಟಾಟಗಳನ್ನು ಮುಂದುವರಿಸಿದ್ದಾರೆ. ಅಲ್ಲದೆ ಜೂನ್ 12ರಂದು ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬವಾಗಿದ್ದು, ಸರ್ಪ್ರೈಸ್ ನೀಡಿದ್ದಾರೆ.

    ಲಾಕ್‍ಡೌನ್ ಹಿನ್ನೆಲೆ ಹೆಚ್ಚು ಜನ ಸೇರುವ ಹಾಗಿಲ್ಲ. ಹೀಗಾಗಿ ಅಭಿಮಾನಿಗಳು ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕವೇ ಶುಭ ಕೋರುತ್ತಿದ್ದಾರೆ. ಆದರೆ ಡಾರ್ಲಿಂಗ್ ಕೃಷ್ಣ ಭಾವಿ ಪತ್ನಿ ಮಿಲನ ನಾಗರಾಜ್ ವಿಭಿನ್ನವಾಗಿ ಹಾಗೂ ವಿಶೇಷವಾಗಿ ಹುಟ್ಟುಹಬ್ಬಕ್ಕೆ ಸರ್ಪೈಸ್ ನೀಡಿ ಸೆಲೆಬ್ರೇಟ್ ಮಾಡಿದ್ದಾರೆ.

    ಹೌದು ಡಾರ್ಲಿಂಗ್ ಕೃಷ್ಣ ಹುಟ್ಟುಹಬ್ಬದ ಅಂಗವಾಗಿ ಲವ್‍ಮಾಕ್‍ಟೇಲ್ 2 ಚಿತ್ರದ ಟೈಟಲ್‍ನ ಪೋಸ್ಟರ್ ಬಿಡುಗಡೆಗೊಳಿಸಿದ್ದು, ಈ ಮೂಲಕ ಟೈಟಲ್ ಶೈಲಿಯನ್ನು ತಿಳಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಚಿತ್ರದೊಂದಿಗೆ ಸಿನಿಮಾ ಹೆಸರಿದ್ದು, ಸ್ಟೋರಿ ಟು ಬಿ ಕಂಟಿನ್ಯೂಡ್ ಎಂಬ ಸಬ್ ಟೈಟಲ್ ಬರೆಯಲಾಗಿದೆ. ಇದರ ಕೆಳಗೆ ಸಿನಿಮಾ ಹೆಸರಿದೆ. ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಮಿಲನ ನಾಗರಾಜ್, ವಿಶಿಂಗ್ ಎ ವೆರಿ ಹ್ಯಾಪಿ ಬರ್ತ್‍ಡೇ ಟು ಅವರ್ ಡಾರ್ಲಿಂಗ್ ಡೈರೆಕ್ಟರ್ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    Wishing a very happy birthday to our darling director @darling_krishnaa ❤️

    A post shared by Milana Nagaraj (@milananagaraj) on

    ಮಧ್ಯರಾತ್ರಿ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ ವಿಡಿಯೋವನ್ನು ಸಹ ಹಂಚಿಕೊಂಡಿದ್ದು, ಇದರಲ್ಲಿ ತಾವು ನೀಡಿದ ಸರ್ಪ್ರೈಸ್ ನ್ನು ತೋರಿಸಿದ್ದಾರೆ. ತಮ್ಮ ಸ್ನೇಹವನ್ನು ನೆನಪಿಸುವ ಹಾಗೂ ತಾವು ಭೇಟಿಯಾದ ಸುಂದರ ಕ್ಷಣಗಳ ಚಿತ್ರಗಳ ಗುಚ್ಛವನ್ನು ಗಿಫ್ಟ್ ನೀಡಿದ್ದಾರೆ. ಕೇವಲ ಮೂರ್ನಾಲ್ಕು ಜನರೊಂದಿಗೆ ಹುಟ್ಟುಹಬ್ಬ ಆಚರಿಸಿದ್ದಾರೆ.

     

    View this post on Instagram

     

    Thanks for joining us???? @sricrazymindzz @abhi_lash_abii @apoorva.ashok @kmajithkumar220 @v_suvarna_ @darling_krishnaa

    A post shared by Milana Nagaraj (@milananagaraj) on

    ಇದಕ್ಕೂ ಮೊದಲು ಇಬ್ಬರೂ ಚೇತಕ್ ಮೇಲೆ ಕುಳಿತಿರುವ ಫೋಟೋ ಹಾಕಿ ಭಾವನಾತ್ಮಕ ಸಾಲುಗಳನ್ನು ಬರೆದಿದ್ದು, ನೀನು ಪ್ರೀತಿಸಿದ ರೀತಿ ಮತ್ಯಾರು ನನ್ನನ್ನು ಪ್ರೀತಿಸಿಲ್ಲ. ನೀನೇ ಶ್ರೇಷ್ಠ, ನಾನೇ ಅದೃಷ್ಟವಂತೆ ಹ್ಯಾಪಿಯಸ್ಟ್ ಬರ್ತ್‍ಡೇ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    No one would have ever loved me the way you do. You are the best and I got lucky! Happiest Birthday my❤️@darling_krishnaa.

    A post shared by Milana Nagaraj (@milananagaraj) on

    ಈ ಜೋಡಿ ತಾವೇ ನಿರ್ದೇಶಿಸಿ, ನಿರ್ಮಿಸಿ ನಟಿಸಿದ್ದ ಲವ್ ಮಾಕ್‍ಟೇಲ್ ಚಿತ್ರ ಜನವರಿಯಲ್ಲಿ ತೆರೆ ಕಂಡಿತ್ತು. ಮೊದಲ ಪ್ರಯತ್ನದಲ್ಲೇ ಈ ಜೋಡಿ ಅಪಾರ ಜನ ಮನ್ನಣೆ ಗಳಿಸಿತು. ಹೀಗಾಗಿ ಇದೇ ಸಿನಿಮಾದ ಸೀಕ್ವೆಲ್ ತಯಾರಿಸುತ್ತಿದ್ದು, ಇದು ಯಾವ ರೀತಿ ಮೂಡಿ ಬರಲಿದೆ ಎಂಬುದು ಅಭಿಮಾನಿಗಳ ಸದ್ಯದ ಕುತೂಹಲವಾಗಿದೆ. ಲಾಕ್‍ಡೌನ್ ಸಮಯವನ್ನೇ ಬಳಸಿಕೊಂಡು ಈ ಜೋಡಿ ಈಗಾಗಲೇ ಸ್ಕ್ರಿಪ್ಟ್ ಬರೆದಿದ್ದು, ಇನ್ನೇನು ಚಿತ್ರೀಕರಣ ಆರಂಭಿಸುವಷ್ಟರ ಮಟ್ಟಿಗೆ ಸಿದ್ಧತೆ ಮಾಡಿಕೊಂಡಿದೆ. ಚಿತ್ರೀಕರಣಕ್ಕೆ ಅವಕಾಶ ಸಿಗುತ್ತಿದ್ದಂತೆ ತಂಡ ಚಿತ್ರೀಕರಣ ಆರಂಭಿಸಲಿದೆ.

  • ನಾನು ಅದೃಷ್ಟವಂತೆ- ಪ್ರಿಯತಮನಿಗೆ ಮಿಲನಾ ಶುಭಾಶಯ

    ನಾನು ಅದೃಷ್ಟವಂತೆ- ಪ್ರಿಯತಮನಿಗೆ ಮಿಲನಾ ಶುಭಾಶಯ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಡಾರ್ಲಿಂಗ್ ಕೃಷ್ಣ ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ಮಿಲನಾ ನಾಗರಾಜ್ ತಮ್ಮ ಪ್ರಿಯತಮನಿಗೆ ಶುಭಾಶಯ ತಿಳಿಸಿದ್ದಾರೆ.

    ನಟ ಕೃಷ್ಣ ಇಂದು 36ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅವರ ಪ್ರೇಯಸಿ ಮಿಲನಾ ಸೋಶಿಯಲ್ ಮೀಡಿಯಾದ ಮೂಲಕ ಶುಭಾಶಯವನ್ನು ಕೋರಿದ್ದಾರೆ. ಮಿಲನಾ ಅವರು ಇನ್‍ಸ್ಟಾಗ್ರಾಂನಲ್ಲಿ ತಮ್ಮ ಪ್ರಿಯಕರ ಕೃಷ್ಣನ ಜೊತೆ ಸ್ಕೂಟರ್ ಮೇಲೆ ಕುಳಿತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

    ಅಲ್ಲದೇ “ನೀವು ಪ್ರೀತಿಸುವಷ್ಟು ಬೇರೆ ಯಾರೂ ನನ್ನನ್ನೂ ಪ್ರೀತಿಸಲು ಸಾಧ್ಯವಿಲ್ಲ. ಹೀಗಾಗಿ ನೀವು ಉತ್ತಮ. ನಿಮ್ಮನ್ನು ಪಡೆದ ನಾನು ಅದೃಷ್ಟವಂತೆ. ನನ್ನ ಪ್ರಿಯತಮ ಡಾರ್ಲಿಂಗ್ ಕೃಷ್ಣನಿಗೆ ಜನ್ಮದಿನದ ಶುಭಾಶಯಗಳು” ಎಂದು ಪ್ರೀತಿಯಿಂದ ತಮ್ಮ ಭಾವಿ ಪತಿಗೆ ವಿಶ್ ಮಾಡಿದ್ದಾರೆ. ಮಿಲನಾ ವಿಶ್ ಮಾಡಿದ ತಕ್ಷಣ ಅಭಿಮಾನಿಗಳು ಕೂಡ ಕಮೆಂಟ್ ಮಾಡುವ ಮೂಲಕ ಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ.

    ಈ ಹಿಂದೆ ನಟಿ ಮಿಲನಾ ಹುಟ್ಟುಹಬ್ಬಕ್ಕೂ ಕೃಷ್ಣ ಪ್ರೀತಿಯಿಂದ ವಿಶ್ ಮಾಡಿದ್ದರು. “ನಿನ್ನ ಪ್ರೀತಿ ಪರಿಶುದ್ಧವಾಗಿದೆ. ನಿನ್ನ ಹೃದಯ ಪರಿಶುದ್ಧ. ನಿನ್ನ ನಗು ಕೂಡ ಪರಿಶುದ್ಧವಾಗಿದೆ. ನಿನ್ನನ್ನು ನನ್ನ ಬಾಳ ಸಂಗಾತಿಯಾಗಿ ಪಡೆಯಲು ನಾನು ಅದೃಷ್ಟ ಮಾಡಿದ್ದೆ. ನೀನು ನಿಜವಾದ ಸಂತೋಷ ಅಂದರೆ ಏನು ಎಂಬುದನ್ನು ನನಗೆ ತೋರಿಸಿದ್ದೀಯಾ. ಇದರಿಂದ ನನಗೆ ನಿಧಿಮಾ ಪಾತ್ರ ಬರೆಯಲು ಪ್ರೇರಣೆ ನೀಡಿತು. ಹುಟ್ಟುಹಬ್ಬದ ಶುಭಾಶಯಗಳು ಮಿಲನಾ ನಾಗರಾಜ್, ಐ ಲವ್ ಯೂ ಬೇಬೂ.” ಎಂದು ಪ್ರೀತಿಯಿಂದ ವಿಶ್ ಮಾಡಿದ್ದರು.

    https://www.instagram.com/p/CBT4kD6HJFd/?igshid=128ibi5sqrb69

    ‘ಲವ್ ಮಾಕ್‍ಟೇಲ್’ ಸಿನಿಮಾದಲ್ಲಿ ಆದಿ ಮತ್ತು ನಿಧಿ ಪಾತ್ರದಿಂದ ಕೃಷ್ಣ ಮತ್ತು ಮಿಲನಾ ನಾಗರಾಜ್ ಮನೆ ಮಾತಾಗಿದ್ದಾರೆ. ಅಲ್ಲದೇ ಈ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಈ ಜೋಡಿ ತಮ್ಮ ಮದುವೆಯ ಗುಟ್ಟನ್ನು ರಟ್ಟು ಮಾಡಿದ್ದರು. ಸದ್ಯಕ್ಕೆ ಕೃಷ್ಣ ಮತ್ತು ಮಿಲನಾ ನಾಗರಾಜ್ ‘ಲವ್ ಮಾಕ್‍ಟೇಲ್-2’ ಸಿನಿಮಾ ಸ್ಕ್ರಿಪ್ಟ್ ಬರೆಯುವುದರಲ್ಲಿ ಬ್ಯುಸಿಯಾಗಿದ್ದಾರೆ.

  • ಮೇಘನಾ, ಧ್ರುವ ಸ್ಥಿತಿ ನೋಡಿದ್ರೆ ನೋವಾಗುತ್ತೆ: ಡಾರ್ಲಿಂಗ್ ಕೃಷ್ಣ ಕಂಬನಿ

    ಮೇಘನಾ, ಧ್ರುವ ಸ್ಥಿತಿ ನೋಡಿದ್ರೆ ನೋವಾಗುತ್ತೆ: ಡಾರ್ಲಿಂಗ್ ಕೃಷ್ಣ ಕಂಬನಿ

    – ಫೇಕ್ ನ್ಯೂಸ್ ಎಂದುಕೊಂಡೆ

    ಬೆಂಗಳೂರು: ಚಿರಂಜೀವಿ ಸರ್ಜಾ ಅವರ ಸಾವಿನ ಸುದ್ದಿ ಬಂದಾಗ ಫೇಕ್ ನ್ಯೂಸ್ ಎಂದುಕೊಂಡಿದ್ದೆ. ನನಗೆ ನಂಬಲು ಸಾಧ್ಯವಾಗಿಲ್ಲ ಎಂದು ನಟ ಡಾರ್ಲಿಂಗ್ ಕೃಷ್ಣ, ಚಿರು ಸಾವಿಗೆ ಕಂಬನಿ ಮಿಡಿದಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಟ ಕೃಷ್ಣ, ಚಿರಂಜೀವಿ ಸರ್ಜಾ ಇನ್ನಿಲ್ಲ ಎಂದು ನನಗೆ ಮೆಸೇಜ್ ಬಂತು. ನಾನು ಇದು ಫೇಕ್ ನ್ಯೂಸ್ ಎಂದುಕೊಂಡೆ. ಆದರೆ 3-4 ಮೆಸೇಜ್ ಬಂತು. ಆಗ ನಾನು ಮತ್ತು ಮಿಲನಾ ಕಥೆ ಮಾಡುತ್ತಿದ್ದೆವು. ಈ ರೀತಿ ಸುದ್ದಿ ಬರುತ್ತಿದೆ ಎಂದು ಹೇಳಿದೆ. ಆ ಕ್ಷಣ ಇಬ್ಬರಿಗೂ ತುಂಬಾ ಶಾಕ್ ಆಯಿತು ಎಂದರು.

    ಇಷ್ಟು ಚಿಕ್ಕವಯಸ್ಸಿಗೆ ಹೃದಯಾಘಾತ ಎಂದಾಗ ನನಗೆ ನಂಬಲು ಸಾಧ್ಯವಾಗಿಲ್ಲ. ಚಿರು ಅವರ ಮೂರನೇ ಸಿನಿಮಾದಿಂದಲೂ ನನಗೆ ಗೊತ್ತು. ‘ದಂಡಂ ದಶಗುಣಂ’ ಸಿನಿಮಾದಿಂದ ಅವರ ಜೊತೆ ಕೆಲಸ ಮಾಡಿದ್ದೇನೆ. ಅಲ್ಲದೇ ಕೆಲ ಸಿನಿಮಾದಲ್ಲಿ ನಾನು ಅವರ ಜೊತೆ ಸ್ನೇಹಿತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಈ ಸುದ್ದಿಯನ್ನು ನಮಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಕೃಷ್ಣ ನೋವಿನಿಂದ ಹೇಳಿದರು.

    https://www.instagram.com/p/CBIp7-hg5jZ/?igshid=go18oxbwi2se

    ಇನ್ನೂ ಮೇಘನಾ, ಧ್ರುವ ಅವರ ಸ್ಥಿತಿ ನೋಡಿದರೆ ತುಂಬಾ ನೋವಾಗುತ್ತದೆ. ಧ್ರುವ ಮತ್ತು ಚಿರಂಜೀವಿ ತುಂಬಾ ಕ್ಲೋಸ್ ಆಗಿದ್ದರು. ಈಗ ಈ ನೋವನ್ನು ಬರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ. ತುಂಬಾ ಫಿಟ್ ಆಗಿರುವವರಿಗೆ ಈ ರೀತಿ ಆದರೆ ಇನ್ನೂ ಉಳಿದರು ನಮ್ಮ ಸ್ಥಿತಿ ಹೇಗೆ ಎಂದು ಆತಂಕಪಡುತ್ತಾರೆ ಎಂದರು.

  • ಲವ್‍ಮಾಕ್ಟೇಲ್-2 ಸ್ಕ್ರಿಪ್ಟ್ ಬರೆಯೋದ್ರಲ್ಲಿ ಡಾರ್ಲಿಂಗ್ ಕೃಷ್ಣ-ಮಿಲನ ನಾಗರಾಜ್ ಫುಲ್ ಬ್ಯುಸಿ

    ಲವ್‍ಮಾಕ್ಟೇಲ್-2 ಸ್ಕ್ರಿಪ್ಟ್ ಬರೆಯೋದ್ರಲ್ಲಿ ಡಾರ್ಲಿಂಗ್ ಕೃಷ್ಣ-ಮಿಲನ ನಾಗರಾಜ್ ಫುಲ್ ಬ್ಯುಸಿ

    ಬೆಂಗಳೂರು: ಲವ್ ಮಾಕ್‍ಟೇಲ್ ಸಕ್ಸಸ್ ಬಳಿಕ ಅದೇ ಸೀಕ್ವೆಲ್‍ನ ಮತ್ತೊಂದು ಸಿನಿಮಾ ಮಾಡಲು ನಟ, ನಿರ್ದೇಶಕ ಡಾರ್ಲಿಂಗ್ ನಿರ್ಧರಿಸಿರುವುದು ತಿಳಿದಿರುವ ವಿಚಾರ. ಆದರೆ ಅದರ ಕೆಲಸಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಡಾರ್ಲಿಂಗ್ ಕೃಷ್ಣ ನೀಡಿರಲಿಲ್ಲ. ಇದೀಗ ಆ ಗುಟ್ಟು ಹೊರ ಬಿದ್ದಿದ್ದು, ಲವ್ ಮಾಕ್‍ಟೇಲ್-2 ತಯಾರಿ ಭರದಿಂದ ಸಾಗಿದೆ.

    ಕನ್ನಡ ಚಿತ್ರರಂಗದಲ್ಲಿ ಲವ್ ಮಾಕ್‍ಟೇಲ್ ಮಾಡಿದ ಮೋಡಿ ಅಂತಿತದ್ದಲ್ಲ. ಇನ್ನೇನು ಎಲ್ಲ ಥೀಯೇಟರ್‍ಗಳಲ್ಲಿ ತೆಗೆಯಲಾಗಿದೆ ಎನ್ನುವಷ್ಟರಲ್ಲೇ ಕೇವಲ ಒಂದು ಚಿತ್ರಮಂದಿರಲ್ಲಿ ಒಂದೇ ಶೋ ನಡೆಯುತ್ತಿದ್ದ ಸಿನಿಮಾ, ಬರು ಬರುತ್ತ ಮಲ್ಟಿಫ್ಲೆಕ್ಸ್‍ಗಳಲ್ಲಿ ಸದ್ದು ಮಾಡಲು ಪ್ರಾರಂಭಿಸಿತು. ಥೀಯೇಟರ್‍ನಲ್ಲಿ ಸದ್ದು ಮಾಡಿದ್ದಲ್ಲದೇ ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ಸಹ ಫುಲ್ ಹವಾ ಸೃಷ್ಟಿಸಿತ್ತು. ಸಾಮಾಜಿಕ ಜಲತಾಣಗಳಲ್ಲಂತೂ ನಿಧಿಮಾ ಬಗ್ಗೆಯೇ ಮಾತು. ಹುಡುಗರು ಹೆಂಡತಿ ಇದ್ದರೆ ನಿಧಿಮಾ ರೀತಿ ಇರಬೇಕು ಎನ್ನುವಷ್ಟರ ಮಟ್ಟಿಗೆ ಚರ್ಚೆ ನಡೆದಿತ್ತು.

    ಸಿನಿಮಾ ಸೋತಿತು ಎನ್ನುವಷ್ಟರಲ್ಲಿ ಅದು ಗೆದ್ದ ಪರಿ ಹಾಗೂ ಜನಪ್ರಿಯತೆ ನಟ, ನಿರ್ದೇಶಕ, ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರಿಗೆ ಆಶ್ಚರ್ಯವನ್ನುಂಟು ಮಾಡಿತ್ತು. ಹೀಗಾಗಿ ಅದೇ ಮೂಡ್‍ನಲ್ಲಿದ್ದರು. ಈ ಹೊತ್ತಿನಲ್ಲಿ ಇನ್ನೊಂದು ಅಚ್ಚರಿಯ ಸುದ್ದಿಯೂ ಹೊರ ಬಿತ್ತು. ಅದೇ ಲವ್ ಮಾಕ್‍ಟೇಲ್-2 ಸಿನಿಮಾ ಮಾಡುವುದು. ಹೌದು ಡಾರ್ಲಿಂಗ್ ಕೃಷ್ಣ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದಾಗಿನಿಂದ ಅದರಲ್ಲೇ ಮಗ್ನರಾಗಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಸ್ಕ್ರಿಪ್ಟ್ ಬರೆಯಲು ಇದೇ ಉತ್ತಮ ಅವಕಾಶ ಎಂದು ಮನೆಯಲ್ಲೇ ಕುಳಿತು, ಸ್ಕ್ರಿಪ್ಟ್ ಬರೆಯುತ್ತಿದ್ದಾರೆ.

    ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್ ಆ್ಯಂಡ್ ಟೀಮ್ ಸಿನಿಮಾ ಸ್ಕ್ರಿಪ್ಟ್ ಬರೆಯುವ ಕಾರ್ಯದಲ್ಲಿ ಮಗ್ನರಾಗಿದ್ದು, ಹಗಲು ರಾತ್ರಿ ಎನ್ನದೆ, ಪೆನ್, ಪುಸ್ತಕ ಹಿಡಿದು ಕೆಲಸ ಮಾಡುತ್ತಿದ್ದಾರೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕಂಡಿದ್ದು, ಡಾರ್ಲಿಂಗ್ ಕೃಷ್ಣ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾಲುಗಳನ್ನು ಬರೆದಿದ್ದು, ಬ್ರೇನ್‍ಸ್ಟಾರ್ಮಿಂಗ್ ಫಾರ್ ಲವ್ ಮಾಕ್‍ಟೇಲ್-2 ವಿತ್ ಮೈ ಟೀಮ್ ಎಂದು ಲವ್ ಎಮೋಜಿ ಹಾಕಿದ್ದಾರೆ. ಅಲ್ಲದೆ ಹ್ಯಾಶ್ ಟ್ಯಾಗ್‍ನೊಂದಿಗೆ ಸ್ಕ್ರಿಪ್ಟಿಂಗ್, ಸಂಡೇ ಎಂದು ಬರೆದು, ಮಿಲನ ನಾಗರಾಜ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

     

    View this post on Instagram

     

    Brainstorming for Love mocktail 2 with my team♥️♥️ #scripting #Sunday @milananagaraj

    A post shared by Darling Krishna (@darling_krishnaa) on

    ಈ ಪೋಸ್ಟ್‍ಗೆ ಹಲವರು ಕಮೆಂಟ್ ಮಾಡುತ್ತಿದ್ದು, ವೇಟಿಂಗ್ ಫಾರ್ ಲವ್ ಮಾಕ್‍ಟೇಲ್-2 ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಮೈ ಫೇವರಿಟ್ ಕಪಲ್ಸ್ ಎಂದು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಲವ್ ಮಾಕ್‍ಟೇಲ್-2ಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

  • 6 ವರ್ಷದ ಸಂಭ್ರಮದಲ್ಲಿ ಕೃಷ್ಣ,ಮಿಲನಾ ಜೋಡಿ – ಖುಷಿ ಹಂಚಿಕೊಂಡ ನಟ

    6 ವರ್ಷದ ಸಂಭ್ರಮದಲ್ಲಿ ಕೃಷ್ಣ,ಮಿಲನಾ ಜೋಡಿ – ಖುಷಿ ಹಂಚಿಕೊಂಡ ನಟ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ‘ಲವ್ ಮಾಕ್‍ಟೇಲ್’ ಸಿನಿಮಾದಲ್ಲಿ ಆದಿ ಮತ್ತು ನಿಧಿಮಾ ಪಾತ್ರದಲ್ಲಿ ಕ್ಯೂಟ್ ಜೋಡಿಯಾಗಿ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಮಿಲನಾ ನಾಗರಾಜ್ ಕಾಣಿಸಿಕೊಂಡಿದ್ದರು. ಇದೀಗ ಆದಿ ಮತ್ತು ನಿಧಿಯಾ ಮಿಲನಕ್ಕೆ ಆರು ವರ್ಷಗಳು ಕಳೆದಿದ್ದು, ಈ ಖುಷಿಯನ್ನು ಡಾರ್ಲಿಂಗ್ ಕೃಷ್ಣ ಸೋಶಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದಾರೆ.

    ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಒಟ್ಟಿಗೆ ತಮ್ಮ ಜರ್ನಿಯನ್ನು ಶುರು ಮಾಡಿ ಮೇ 18ಕ್ಕೆ ಆರು ವರ್ಷವಾಗಿದೆ. ಅಂದರೆ ಇಬ್ಬರೂ ಒಟ್ಟಿಗೆ ಪ್ರೀತಂ ಗುಬ್ಬಿ ನಿರ್ದೇಶನದ ‘ನಮ್ ದುನಿಯಾ ನಮ್ ಸ್ಟೈಲ್’ ಸಿನಿಮಾದಲ್ಲಿ ಅಭಿನಯಿಸಿದ್ದರು. ನಂತರ ‘ಚಾರ್ಲಿ’ ಸಿನಿಮಾದಲ್ಲೂ ಕೂಡ ಮಿಲನಾ ಮತ್ತು ಕೃಷ್ಣ ಒಟ್ಟಿಗೆ ನಟಿಸಿದ್ದರು. ಇತ್ತೀಚೆಗೆ ‘ಲವ್ ಮಾಕ್‍ಟೇಲ್’ ಸಿನಿಮಾದಲ್ಲಿಯೂ ಈ ಜೋಡಿ ಒಟ್ಟಿಗೆ ಅಭಿನಯಿಸಿದ್ದಾರೆ. ಹೀಗಾಗಿ ಇವರ ಸಿನಿಮಾ ಜರ್ನಿ ಶುರುವಾಗಿ ಆರು ವರ್ಷಗಳು ಕಳೆದಿವೆ.

    ಈ ಹಿನ್ನೆಲೆಯಲ್ಲಿ ಡಾರ್ಲಿಂಗ್ ಕೃಷ್ಣ ಇನ್‍ಸ್ಟಾಗ್ರಾಂನಲ್ಲಿ ಜೊತೆಗಿರುವ ಆರು ಫೋಟೋಗಳನ್ನು ಫೋಸ್ಟ್ ಮಾಡುವ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ “ನಾವು ಒಟ್ಟಿಗೆ ಆರು ವರ್ಷಗಳನ್ನು ಕಳೆದಿದ್ದೇವೆ. ಈ ಆರು ವರ್ಷಗಳಲ್ಲಿ ಕಷ್ಟ, ನೋವು, ಬೇಸರ ಎಲ್ಲವನ್ನು ನೋಡಿದ್ದೇವೆ. ಮೊದಲ ಐದು ವರ್ಷದಲ್ಲಿ ವೃತ್ತಿ ಬದುಕಿನಲ್ಲಿ ಯಾವುದೂ ಚೆನ್ನಾಗಿರಲಿಲ್ಲ. ಆದರೆ ವೈಯಕ್ತಿಕವಾಗಿ ಅದು ಅತ್ಯುತ್ತಮ ದಿನಗಳು. ಆ ದಿನಗಳು ನನಗೆ ಜೀವನದಲ್ಲಿ ಅದ್ಭುತ ಪಾಠಗಳನ್ನು ಕಲಿಸಿದವು” ಎಂದು ಕೃಷ್ಣ ತಿಳಿಸಿದ್ದಾರೆ.

    ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಜೀವನದಲ್ಲಿ ಸಂತೋಷವಾಗಿದ್ದರೆ ವೃತ್ತಿ ಬದುಕಿನಲ್ಲಿ ಏನೇ ಆದರೂ ಆತ ಸಂತೋಷದಿಂದ ಇರಬಲ್ಲ ಎಂಬುದನ್ನು ನನಗೆ ತೋರಿಸಿದೆ. ನಾವು ಒಟ್ಟಿಗೆ ಹೋರಾಡಿದ್ದೇವೆ. ಒಟ್ಟಿಗೆ ಕೆಲಸ ಮಾಡಿದ್ದೇವೆ. ಹಾಗೆಯೇ ಒಟ್ಟಿಗೆ ಯಶಸ್ಸನ್ನು ಸಂಭ್ರಮಿಸಿದ್ದೇವೆ ಎಂದು ಮಿಲನಾ ಅವರೊಂದಿಗಿನ ಜರ್ನಿಯನ್ನು ಸುಂದರವಾಗಿ ಬರೆದುಕೊಂಡಿದ್ದಾರೆ.

    https://www.instagram.com/p/CAUoq1WAJEc/?igshid=1lm8l0fjzotzk

    ನಾನು ನಿನ್ನೊಂದಿಗೆ ಸಾಗಿರುವುದು ಸಣ್ಣ ಪ್ರಯಾಣದಲ್ಲಿ ಮಾತ್ರ, ಇನ್ನೂ ಬಹಳ ದೂರ ಸಾಗುವುದು ಇದೆ. ಈ ನಮ್ಮ ಪ್ರಯಾಣ ಬಹಳ ಸುದೀರ್ಘವಾಗಿರಬೇಕು ಎಂದು ನಾನು ಬಯಸುತ್ತೇನೆ. ಎಷ್ಟು ಸುರ್ದೀಘ ಎಂದರೆ ಅದಕ್ಕೆ ಅಂತ್ಯವೇ ಇರಬಾದರು. ಎಂದೆಂದಿಗೂ ನಿನ್ನನ್ನು ಪ್ರೀತಿಸುತ್ತೇನೆ ಎಂದು ಕೃಷ್ಣ ಪ್ರೀತಿಯಿಂದ ಹೇಳಿದ್ದಾರೆ.

    ‘ಲವ್ ಮಾಕ್‍ಟೇಲ್’ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿ ಈ ಜೋಡಿ ತಮ್ಮ ಮದುವೆಯ ಗುಟ್ಟನ್ನು ರಟ್ಟು ಮಾಡಿದ್ದರು. ಸಿನಿಮಾ ಚಟುವಟಿಕೆಗಳಲ್ಲಿ ಜೊತೆಯಾಗಿಯೇ ಪಾಲ್ಗೊಳ್ಳುತ್ತಿದ್ದ ಇಬ್ಬರ ಮಧ್ಯೆ ಉತ್ತಮ ಒಡನಾಟವಿತ್ತು. ಇವರಿಬ್ಬರು ‘ನಮ್ ದುನಿಯಾ ನಮ್ ಸ್ಟೈಲ್’ ಚಿತ್ರದಲ್ಲಿ ಮೊದಲು ಜೊತೆಯಾಗಿ ಕಾಣಿಸಿಕೊಂಡಿದ್ದರು. ಆ ಬಳಿಕ ‘ಲವ್ ಮಾಕ್‍ಟೇಲ್’ ಸಿನಿಮಾದಲ್ಲಿಯೂ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿ ಜರ್ನಿಯೇ ಇವರಿಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಳ್ಳಲು ಕಾರಣವಾಗಿತ್ತು.

  • ನನ್ನ ಪೇಜ್ ಹ್ಯಾಕ್ ಆಗಿತ್ತು ಎಂದ ಡಾರ್ಲಿಂಗ್ ಕೃಷ್ಣ

    ನನ್ನ ಪೇಜ್ ಹ್ಯಾಕ್ ಆಗಿತ್ತು ಎಂದ ಡಾರ್ಲಿಂಗ್ ಕೃಷ್ಣ

    ಬೆಂಗಳೂರು: ನನ್ನ ಪೇಜ್ ಹ್ಯಾಕ್ ಆಗಿತ್ತು ಎಂದು ಲವ್ ಮಾಕ್‍ಟೇಲ್ ಸಿನಿಮಾದ ನಾಯಕ ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.

    ಎಲ್ಲರಿಗೂ ನಮಸ್ಕಾರ ನನ್ನ ಪೇಜ್ ಅನ್ನು ಹ್ಯಾಕ್ ಮಾಡಲಾಗಿತ್ತು. ಆದ್ದರಿಂದ ಪೇಜ್‍ನಲ್ಲಿ ಏನನ್ನೂ ಪೋಸ್ಟ್ ಮಾಡಲು ಸಾಧ್ಯವಾಗಲಿಲ್ಲ. ಈಗ ಸರಿ ಹೋಗಿದೆ. ಮತ್ತೆ ನಿಮ್ಮೊಂದಿಗೆ ಪೋಸ್ಟ್ ಮೂಲಕ ಸಂಪರ್ಕದಲ್ಲಿರುತ್ತೇನೆ ಎಂದು ಡಾರ್ಲಿಂಗ್ ಕೃಷ್ಣ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    https://www.facebook.com/965308966815354/posts/3284389608240600/

    ಡಾರ್ಲಿಂಗ್ ಕೃಷ್ಣ ಇತ್ತೀಚಿಗೆ ಚಿತ್ರರಂಗಕ್ಕೆ ಬಂದು 10 ವರ್ಷಗಳಾಗಿದ್ದರಿಂದ ಸೋಶಿಯಲ್ ಮೀಡಿಯಾದಲ್ಲಿ ಅವರ ಕುರಿತು ಅಭಿಮಾನಿಗಳು ಒಂದು ಪೋಸ್ಟ್ ಹಾಕಿದ್ದರು. ‘ಜಾಕಿ’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿದ್ದರು. ‘ಹುಡುಗರು’ ಚಿತ್ರದಲ್ಲಿ ಸಂಭಾಷಣೆಯೇ ಇಲ್ಲದ ಪಾತ್ರದಲ್ಲಿ ನಟಿಸಿದ್ದರು. ನಂತರ ಹೀರೋ ಆಗಿ ನಟಿಸಿದ ‘ಚಾರ್ಲಿ’ ಸೋಲು ಕಂಡಿತ್ತು. ಇಷ್ಟು ವರ್ಷಗಳಿಂದ ತಾಳ್ಮೆಯಿಂದ ಕಾದಿದ್ದಕ್ಕೆ ಈಗ ಅವರಿಗೆ ‘ಲವ್ ಮಾಕ್‍ಟೇಲ್’ನಿಂದ ಗೆಲುವು ಕಂಡಿದ್ದಾರೆ ಎಂದು ಆ ಪೋಸ್ಟ್ ನಲ್ಲಿ ಬರೆಯಲಾಗಿತ್ತು.

    ಈ ಹಿಂದೆ ತಮಿಳು ಮತ್ತು ಮಲೆಯಾಳಂ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಶೋಭನಾ ಅವರ ಫೇಸ್‍ಬುಕ್ ಖಾತೆ ಏಪ್ರಿಲ್ ತಿಂಗಳಿನಲ್ಲಿ ಹ್ಯಾಕ್ ಆಗಿತ್ತು. ಈ ಬಗ್ಗೆ ನಟಿ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು. ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಹರಿ ಬಿಟ್ಟ ನಟಿ ಶೋಭನಾ, ಸ್ನೇಹಿತರೆ.. ಯಾರೋ ನನ್ನ ಫೇಸ್‍ಬುಕ್ ಅಫೀಶಿಯಲ್ ಖಾತೆಯನ್ನು ಬಳಕೆ ಮಾಡಿದ್ದಾರೆ. ಈ ಬಗ್ಗೆ ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ನಂತರ ಫೇಸ್‍ಬುಕ್ ಖಾತೆ ಸರಿಯಾಗಿದೆ. ನಿಮ್ಮ ಸಪೋರ್ಟ್ ಹೀಗೆ ಇರಲಿ ಧನ್ಯವಾದಗಳು ಎಂದು ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.

  • ಸಿನಿಮಾ ಬಿಡುಗಡೆಯ ಹಿಂದಿನ ದಿನ ಹೇಗಿತ್ತು? – ತಳಮಳ ಹಂಚಿಕೊಂಡ ಕೃಷ್ಣ

    ಸಿನಿಮಾ ಬಿಡುಗಡೆಯ ಹಿಂದಿನ ದಿನ ಹೇಗಿತ್ತು? – ತಳಮಳ ಹಂಚಿಕೊಂಡ ಕೃಷ್ಣ

    ಬೆಂಗಳೂರು: ಒಂದು ಸಿನಿಮಾವನ್ನು ನಿರ್ದೇಶನ ಮಾಡಿ, ನಟಿಸಿ ಬಿಡುಗಡೆಯ ಸಮಯ ಬಂದಾಗ ಚಿತ್ರ ಏನಾಗಬಹುದು ಎಂದು ಚಿತ್ರತಂಡಕ್ಕೆ ಒಂದು ರೀತಿ ಟೆನ್ಶನ್‍ನಲ್ಲಿ ಇರುತ್ತದೆ. ಅದೇ ರೀತಿ ಡಾರ್ಲಿಂಗ್ ಕೃಷ್ಣ ಕೂಡ ತಾವು ನಿರ್ದೇಶನ ಮಾಡಿ ನಟಿಸಿದ್ದ ‘ಲವ್ ಮಾಕ್‍ಟೇಲ್’ ಸಿನಿಮಾ ಬಿಡುಗಡೆಯ ಹಿಂದಿನ ದಿನ ಹೇಗಿತ್ತು ಎಂಬ ಕಳವಳವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ನಟ ಕೃಷ್ಣ ಇನ್‍ಸ್ಟಾಗ್ರಾಂನಲ್ಲಿ ನಟಿ ಮಿಲನಾ ನಾಗರಾಜ್ ಜೊತೆ ಊಟ ಮಾಡುತ್ತಿರುವ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಅದಕ್ಕೆ “ನಾವು ಲವ್ ಮಾಕ್‍ಟೇಲ್ ಸಿನಿಮಾ ಬಿಡುಗಡೆಯ ಹಿಂದಿನ ದಿನ ಡಿನ್ನರ್‌ಗೆ ಹೋಗಿದ್ದೆವು. ಒಂದು ವರ್ಷದ ಕಠಿಣ ಪರಿಶ್ರಮ ಅದು. ನಾಳೆ ಏನಾಗಬಹುದು ಎಂಬುದರ ಬಗ್ಗೆ ನಮಗೆ ಯಾವ ರೀತಿಯ ಐಡಿಯಾನೂ ಇರಲಿಲ್ಲ” ಎಂದು ಹೇಳಿಕೊಂಡಿದ್ದಾರೆ.

    ಅಲ್ಲದೇ “ಆ ದಿನಕ್ಕಾಗಿ ಮಿಲನಾ ನಾಗರಾಜ್‍ಗೆ ಧನ್ಯವಾದ ಹೇಳಲು ಬಯಸಿದ್ದೆ. ಆಕೆಯಲ್ಲಿ ಸುರಕ್ಷತೆ ಭಾವ ಮೂಡಿಸುವುದು ಮತ್ತು ಸಂತೋಷವಾಗಿ ನೋಡಿಕೊಳ್ಳಬೇಕಿತ್ತು. ಯಾಕೆಂದರೆ ನಾಳೆ ಎನ್ನವುದು ಅನಿಶ್ಚಿತವಾಗಿತ್ತು. ಆದರೂ ನಾವಿಬ್ಬರೂ ಅದನ್ನು ಖುಷಿಯಿಂದ ಎದುರಿಸಿದೆವು. ಅದಕ್ಕಾಗಿ ನಿಮಗೆಲ್ಲರಿಗೂ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

    ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‍ಟೇಲ್’ ಸಿನಿಮಾ ಥಿಯೇಟರ್‌ನಲ್ಲಿ ತಡವಾಗಿ ಸದ್ದು ಮಾಡಿದ್ದರೂ ಆನ್‍ಲೈಲ್ ಪ್ಲಾಟ್‍ಫಾರ್ಮ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈ ಚಿತ್ರವನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದು, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    https://www.instagram.com/p/B-zMYJ6giJB/

    ಅಷ್ಟೇ ಅಲ್ಲದೇ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ಅವರು ಇತ್ತೀಚೆಗೆ ಈ ಸಿನಿಮಾವನ್ನು ಆನ್‍ಲೈನ್‍ನಲ್ಲಿ ವೀಕ್ಷಿಸಿದ್ದಾರೆ. ಸಿನಿಮಾ ತುಂಬಾ ಇಷ್ಟವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  • ಲವ್ ಮಾಕ್‍ಟೇಲ್ ನೋಡಿ ಮೂಕವಿಸ್ಮಿತರಾದ ಅಲ್ಲು ಅರ್ಜುನ್ ಸೋದರ

    ಲವ್ ಮಾಕ್‍ಟೇಲ್ ನೋಡಿ ಮೂಕವಿಸ್ಮಿತರಾದ ಅಲ್ಲು ಅರ್ಜುನ್ ಸೋದರ

    ಹೈದರಾಬಾದ್: ಲವ್ ಮಾಕ್‍ಟೇಲ್ ಸಿನಿಮಾ ಥಿಯೇಟರ್ ನಲ್ಲಿ ತಡವಾಗಿ ಸದ್ದು ಮಾಡಿದರೂ ಆನ್‍ಲೈನ್ ಪ್ಲಾಟ್‍ಫಾರ್ಮ್‍ನಲ್ಲಿ ಹೈ ಸ್ಪೀಡ್‍ನಲ್ಲಿ ಓಡುತ್ತಿದೆ. ಇದಕ್ಕೆ ಸಾಕ್ಷಿ ತೆಲುಗು ನಟರು ಸೇರಿದಂತೆ ಬಹುತೇಕರು ಈ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಹಲವರು ತೆಲುಗು ಸಿನಿಮಾಗಳನ್ನು ನೋಡಿ ಮೆಚ್ಚುವುದು ಹೆಚ್ಚು. ಇಂತಹ ಸಂದರ್ಭದಲ್ಲಿ ತೆಲುಗು ನಟರೇ ಕನ್ನಡ ಸಿನಿಮಾವನ್ನು ಹಾಡಿಹೊಗಳಿದ್ದಾರೆ.

    ಲವ್ ಮಾಕ್‍ಟೇಲ್ ಸಿನಿಮಾ ಥಿಯೇಟರ್‍ಗಳಲ್ಲಿ ಮೊದಲು ಸದ್ದು ಮಾಡಲಿಲ್ಲ. ಅಲ್ಲದೆ ಕೇವಲ ಒಂದೇ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುವ ಹಂತಕ್ಕೆ ತಲುಪಿತ್ತು. ಇದಾದ ಬಳಿಕ ನಿರ್ಮಾಪಕ, ನಿರ್ದೇಶಕ, ನಾಯಕ ನಟ ಡಾರ್ಲಿಂಗ್ ಕೃಷ್ಣಾ ಅವರು ಮಲ್ಟಿಫ್ಲೆಕ್ಸ್ ಗಳ ಮಾಲೀಕರ ಬಳಿ ಗೋಗರೆದು ಸಿನಿಮಾ ದಿನಕ್ಕೊಂದು ಶೋಗೆ ಅವಕಾಶ ನೀಡುವಂತೆ ಕೇಳಿಕೊಂಡರು. ನಂತರ ಹಂತ ಹಂತವಾಗಿ ಥಿಯೇಟರ್ ಹಾಗೂ ಪ್ರದರ್ಶನಗಳ ಸಂಖ್ಯೆ ಹೆಚ್ಚುತ್ತ ಹೋಯಿತು. ಇದಾದ ಬಳಿಕ ಓಟಿಟಿ ಪ್ಲಾಟ್‍ಫಾರ್ಮ್ ಗೆ ಬಂತು.

    ಓಟಿಟಿ ಪ್ಲಾಟ್‍ಫಾರ್ಮ್ ನಲ್ಲಿ ಪ್ರೇಕ್ಷಕರು ಇನ್ನೂ ನೋಡಿ ಆನಂದಿಸುತ್ತಿದ್ದಾರೆ. ಅಲ್ಲದೆ ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಹಲವರು ಚಿತ್ರ ಮೆಚ್ಚಿ ಡಾರ್ಲಿಂಗ್ ಕೃಷ್ಣ ಅವರಿಗೆ ಹಣವನ್ನೂ ಕಳುಹಿಸುತ್ತಿದ್ದಾರಂತೆ. ಇಷ್ಟೆಲ್ಲ ಮೆಚ್ಚುಗೆಯನ್ನು ಲವ್ ಮಾಕ್‍ಟೇಲ್ ಗಳಿಸಿದೆ. ಕನ್ನಡದಲ್ಲಿ ಇತ್ತೀಚೆಗೆ ತೆರೆ ಕಂಡ ವಿಭಿನ್ನ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರದ ಯಶಸ್ಸನ್ನು ಕಂಡು ಡಾರ್ಲಿಂಗ್ ಕೃಷ್ಣಾ ಸಹ ಇದೇ ಕಥೆಯ ಹಂದರ ಇಟ್ಟುಕೊಂಡು ಭಾಗ-2 ಮಾಡಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಟೈಟಲ್ ಕೂಡ ರಿಜಿಸ್ಟರ್ ಮಾಡಿದ್ದಾರಂತೆ.

    ಇದೆಲ್ಲ ಇರಲಿ ಇದೀಗ ಪರಭಾಷೆಯ ನಟರೊಬ್ಬರು ಲವ್ ಮಾಕ್‍ಟೇಲ್ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಅದೂ ಬೇರೆ ಯಾರೂ ಅಲ್ಲ ತೆಲುಗಿನ ಸ್ಟಾರ್ ನಟ ಅಲ್ಲು ಅರ್ಜುನ್ ತಮ್ಮ ಅಲ್ಲು ಸಿರೀಶ್. ಹೌದು ಅಲ್ಲು ಸಿರೀಶ್ ಅವರು ಇತ್ತೀಚೆಗೆ ಈ ಸಿನಿಮಾವನ್ನು ಆನ್‍ಲೈನ್‍ನಲ್ಲಿ ವೀಕ್ಷಿಸಿದ್ದಾರೆ. ಸಿನಿಮಾ ತುಂಬಾ ಇಷ್ಟವಾಗಿದೆಯಂತೆ ಈ ಕುರಿತು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

    ಸಿನಿಮಾ ಕುರಿತು ಸಿನಿಮಾದ ಪೋಸ್ಟರ್ ಟ್ವೀಟ್ ಮಾಡಿರುವ ಅವರು, ಅಮೇಜಾನ್ ಪ್ರೈಮ್‍ನಲ್ಲಿ ‘ಲವ್ ಮಾಕ್‍ಟೇಲ್’ ಕನ್ನಡ ಚಿತ್ರವನ್ನು ನೋಡಿದೆ. ಸಿನಿಮಾ ತುಂಬಾ ಇಷ್ಟವಾಯಿತು. ಹೃದಯಕ್ಕೆ ಮುದ ನೀಡಿತು. 90 ಹಾಗೂ 2000ರ ಆಸುಪಾಸಿನ ಹುಡುಗರು ಈ ಸಿನಿಮಾವನ್ನು ಹೆಚ್ಚು ಪ್ರೀತಿಸುತ್ತಾರೆ. ಟ್ಯೂಶನ್ ಕ್ರಷಸ್, ಎಸ್‍ಎಂಎಸ್ ದಿನಗಳು, ಗಲ್ಲಿ ಕ್ರಿಕೆಟ್, ಪ್ರಿ ಸ್ಮಾರ್ಟ್ ಫೋನ್ ಲವ್ ಇವೆಲ್ಲವುಗಳು ನನ್ನನ್ನು ಹಿಂದಿನ ದಿನಗಳಿಗೆ ಕರೆದುಕೊಂಡು ಹೋದದವು ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಹಾರ್ಟ್ ಎಮೋಜಿಗಳನ್ನು ಹಾಕಿದ್ದಾರೆ.

    ಇದಕ್ಕೆ ಡಾರ್ಲಿಂಗ್ ಕೃಷ್ಣ ಅವರು ಪ್ರತಿಕ್ರಿಯೆ ನೀಡಿದ್ದು, ನಮ್ಮ ಸಿನಿಮಾ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ. ಇದಕ್ಕೆ ಅಲ್ಲು ಸಿರೀಶ್ ಪ್ರತಿಕ್ರಿಯಿಸಿ, ನಿರ್ದೇಶನ ಹಾಗೂ ನಟನೆಯನ್ನು ತುಂಬಾ ಚೆನ್ನಾಗಿ ಮಾಡಿದ್ದೀರಿ. ಇಂತಹ ಒಳ್ಳೆಯ ಚಿತ್ರ ಮಾಡಿದ್ದಕ್ಕೆ ನಾನೇ ನಿಮಗೆ ಧನ್ಯವಾದಗಳನ್ನು ಹೇಳಬೇಕು ಎಂದು ಕನ್ನಡದಲ್ಲೇ ತಿಳಿಸಿದ್ದಾರೆ.

    ಅಲ್ಲು ಸಿರೀಶ್ ಅವರಿಗೆ ಮೊದಲಿನಿಂದಲೂ ಕನ್ನಡದ ಸಿನಿಮಾಗಳ ಮೇಲೆ ಒಲವು. ಕನ್ನಡ ಚಿತ್ರರಂಗದ ಜೊತೆಗೆ ನಿಕಟ ಸಂಪರ್ಕವನ್ನೂ ಹೊಂದಿದ್ದಾರೆ. ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿರುತ್ತಾರೆ. ಹೀಗಾಗಿ ಕರ್ನಾಟಕ, ಕನ್ನಡ ಎಂದರೆ ವಿಶೇಷ ಆಸಕ್ತಿ. ಈಗ ಕನ್ನಡದ ಸಿನಿಮಾ ನೋಡಿ ಹಾಡಿ, ಹೊಗಳಿದ್ದಾರೆ.