Tag: Darling

  • ವಿಜಯ್ ದೇವರಕೊಂಡಗೆ ‘ಡಾರ್ಲಿಂಗ್’ ಎಂದು ವಿಶ್ ಮಾಡಿದ ರಶ್ಮಿಕಾ

    ವಿಜಯ್ ದೇವರಕೊಂಡಗೆ ‘ಡಾರ್ಲಿಂಗ್’ ಎಂದು ವಿಶ್ ಮಾಡಿದ ರಶ್ಮಿಕಾ

    ಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಡುವಿನ ಸ್ನೇಹದ ಬಗ್ಗೆ ಯಾರೂ ಅಲ್ಲಗಳೆಯುವಂತಿಲ್ಲ. ಈ ಜೋಡಿಯ ನಡುವಿನ ಸಂಬಂಧವನ್ನು ನಾನಾ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇಬ್ಬರೂ ಅನುಮಾನ ಬರುವಂತೆ ನಡೆದುಕೊಳ್ಳುತ್ತಲೇ ಇರುತ್ತಾರೆ. ಈ ಬಾರಿಯೂ ಅದೇ ಆಗಿದೆ.

    ವಿಜಯ್ ದೇವರಕೊಂಡ ನಟನೆಯ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ. ಈ ಸಂದರ್ಭದಲ್ಲಿ ಈ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಶುಭಾಶಯ ಕೋರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರು ಐ ವಿಶ್ ಮೈ ಡಾರ್ಲಿಂಗ್ಸ್ ಎಂದು ಬರೆದುಕೊಂಡಿದ್ದಾರೆ. ಇದು ಮತ್ತಷ್ಟು ಚರ್ಚಗೆ ಕಾರಣವಾಗಿದೆ.

    ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುವುದರ ಬದಲು ಅತಿಥಿ ಪಾತ್ರವನ್ನು ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ. ವಿಜಯ್ ದೇವರಕೊಂಡ (Vijay Devarakonda) ಹಾಗೂ ಮೃಣಾಲ್ (Mrunal) ಕಾಂಬಿನೇಷನ್ ನ ಫ್ಯಾಮಿಲಿ ಸ್ಟಾರ್  (Family Star) ಸಿನಿಮಾದಲ್ಲಿ ರಶ್ಮಿಕಾ ಅತಿಥಿ ಪಾತ್ರ ಮಾಡಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

    ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಮಿಂಚ್ತಿದ್ದಾರೆ. ಸದ್ಯ ಬಾಲಿವುಡ್‌ನ ‘ಅನಿಮಲ್’ (Animal) ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ತಂಡದ ಜೊತೆ ನಟಿ ಬೆಂಗಳೂರಿಗೆ ಬಂದಿದ್ದರು. ಸಿನಿಮಾ ಬಗ್ಗೆ ಹಲವು ವಿಚಾರಗಳ ಮಾತನಾಡಿದರು. ಈ ವೇಳೆ, ಮತ್ತೆ ಕನ್ನಡ ಸಿನಿಮಾದಲ್ಲಿ ರಶ್ಮಿಕಾ ನಟಿಸಲಿದ್ದಾರಾ ಎಂಬ ಮಾತು ತೂರಿ ಬಂತು.

     

    ಈ ಕುರಿತು ಮಾತನಾಡಿರುವ ರಶ್ಮಿಕಾ, ನಾನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವಾಗ ಕನ್ನಡದಲ್ಲಿ ಡಬ್ ಮಾಡುವ ಅವಕಾಶ ಸಿಕ್ಕರೆ, ಖಂಡಿತಾ ಮಾಡ್ತೀನಿ. ಇನ್ನೂ ನನಗೆ ಅನಿಸುತ್ತಾ ಇಲ್ಲ, ನಾನು ಕನ್ನಡ ಇಂಡಸ್ಟ್ರಿಯಿಂದ ದೂರ ಇದ್ದೀನಿ ಅಂತ. ಅದರಲ್ಲೂ ಕನ್ನಡದ ಸಿನಿಮಾ ಬಗ್ಗೆ ಇದೀಗ ಮಾತುಕತೆ ನಡೆಯುತ್ತಿದೆ. ಅದರ ಬಗ್ಗೆ ಸದ್ಯದಲ್ಲೇ ಮಾಹಿತಿ ಕೊಡ್ತೀನಿ. ಅವಕಾಶ ಸಿಕ್ಕರೆ ಕಂಡಿತಾ ಕನ್ನಡದ ಸಿನಿಮಾದಲ್ಲಿ ನಟಿಸುತ್ತೇನೆ ಎಂದಿದ್ದಾರೆ.