Tag: darga

  • ಮುಸ್ಲಿಂ ಕುಟುಂಬದ ಯಜಮಾನನ ಕನಸಲ್ಲಿ ದೇವಿ- ದರ್ಗಾ ಪಕ್ಕದಲ್ಲೇ ದೇಗುಲ ನಿರ್ಮಿಸಿ, ಪೂಜೆ

    ಮುಸ್ಲಿಂ ಕುಟುಂಬದ ಯಜಮಾನನ ಕನಸಲ್ಲಿ ದೇವಿ- ದರ್ಗಾ ಪಕ್ಕದಲ್ಲೇ ದೇಗುಲ ನಿರ್ಮಿಸಿ, ಪೂಜೆ

    ಕೊಪ್ಪಳ: ಮುಸ್ಲಿಂ ಸಮುದಾಯದಕ್ಕೆ ಸೇರಿದ ವ್ಯಕ್ತಿಯೊಬ್ಬರು ವೀಕಲಚೇತನರಾಗಿದ್ದು, ಪಂಕ್ಚರ್ ಹಾಕಿ ಜೀವನ ಮಾಡುತ್ತಿದ್ದಾರೆ. ಆದರೆ ಇದೀಗ ಅವರು ಮಾಡುವ ಕಾರ್ಯಕ್ಕೆ ಇಡೀ ಆ ಗ್ರಾಮದಲ್ಲಿ ಭಾವೈಕ್ಯ ಮೂಡಿದೆ. ಹಿದೂ ದೇವಾಲಯ ಕಟ್ಟಿಸಿರೋ ಅವರು ದೇವಸ್ಥಾನದಲ್ಲಿ ನಿತ್ಯ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯದ ಸಂದೇಶ ಸಾರಿದ್ದಾರೆ.

    ಹೌದು. ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಭಾವೈಕ್ಯ ಸಂದೇಶ ಸಾರುತ್ತಿರೋ ಅಬ್ಬುಸಾಹೇಬ ಹಿಂದೂ ದೇವಾಲಯ (Hindu Temple) – ದರ್ಗಾ (Darga) ಕಟ್ಟಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಮೂಲತ ಕೊಪ್ಪಳ (Koppala) ಜಿಲ್ಲೆಯ ಗಂಗಾವತಿ ತಾಲೂಕಿನ ಬಸಾಪಟ್ಟಣ ಗ್ರಾಮದ ಇವರು ಹುಟ್ಟಿನಿಂದ ವೀಕಲ ಚೇತನರಾಗಿದ್ದಾರೆ. ಹುಟ್ಟಿನಿಂದಲೇ ಹಿಂದೂ-ಮಸ್ಲಿಂ-ಕ್ರೈಸ್ತರೆಲ್ಲರೂ ಒಂದೇ ಎನ್ನುವ ಅಂಶವನ್ನು ಮೈಗೂಡಿಸಿಕೊಂಡು ಬೆಳೆದ ಇವರು, ಜೀವನ ಸಾಗಿಸುವ ಸಲುವಾಗಿ ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಪಂಕ್ಚರ್ ಶಾಪ್ ಇಟ್ಟುಕೊಂಡು ಜೀವನ ಮಾಡುತ್ತಾರೆ. ಅದೊಂದು ದಿನ ಇವರ ಕನಸಿನಲ್ಲಿ ಅಂಬಾದೇವಿ ಬರ್ತಾಳಂತೆ. ಇದರಿಂದ ಮತ್ತಷ್ಟು ಭಾವೈಕ್ಯ ಮೂಡಿಸುವ ನಿಟ್ಟಿನಲ್ಲಿ ಅಬ್ಬುಸಾಹೇಬ ಅವರು ಹೊನ್ನೂರಲಿ ದರ್ಗಾ ಹಾಗೂ ಬಂಗಾಳಿ ಅಂಬಾದೇವಿ ದೇವಸ್ಥಾನ ಕಟ್ಟಿಸಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ.

    ಕಳೆದ ಎರಡು ವರ್ಷದ ಹಿಂದೆ ಈ ಗ್ರಾಮದಲ್ಲಿ ಅಂಬಾದೇವಿ ಭಾವೈಕ್ಯತಾ ಆಶ್ರಯ ನಿರ್ಮಾಣವಾಗಿದೆ. ಕಳೆದ ಐದು ತಿಂಗಳ ಹಿಂದೆ ಆಶ್ರಮದ ಭಕ್ತರೆಲ್ಲರೂ 15 ದಿನಗಳಲ್ಲಿಯೇ ಭವ್ಯವಾದ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಯಾವುದೇ ಅಪೇಕ್ಷೆ ಇಲ್ಲದೆ ಪೂಜೆ ಮಾಡುತ್ತಿರುವ ಅಬ್ಬುಸಾಹೇಬ ಅವರು ದೇಶದಲ್ಲಿ ಮತ್ತಷ್ಟು ಭಾವೈಕ್ಯತೆ ಹೆಚ್ಚಾಗಬೇಕು ಎಂದು ಹೇಳುತ್ತಾರೆ. ಇದನ್ನೂ ಓದಿ: World Athletics Championships- ಚಿನ್ನದ ಪದಕಕ್ಕೆ ಮುತ್ತಿಟ್ಟು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ

    ಒಟ್ಟಿನಲ್ಲಿ ಜಾತಿ-ಧರ್ಮ ಅಂತಾ ಜಗಳವಾಡುವ ಜನರ ಮಧ್ಯೆ ಅಬ್ಬುಸಾಹೇಬ ಅವರ ಭಾವೈಕ್ಯತಾ ಕಾರ್ಯ ಎಲ್ಲರೂ ಮೆಚ್ಚುವಂತಾಗಿದೆ. ಇವರ ಕಾರ್ಯ ಇನ್ನಷ್ಟೂ ಜನರಿಗೆ ಮಾದರಿಯಾಗಲಿ ಅನ್ನೋದೇ ಎಲ್ಲರ ಆಶಯವಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂಗಳೂರಿನ ಮಳಲಿಯಲ್ಲಿರುವುದು ದರ್ಗಾವೋ, ದೇಗುಲವೋ? – ಇಂದು ನಡೆಯಲಿದೆ ತಾಂಬೂಲ ಪ್ರಶ್ನೆ

    ಮಂಗಳೂರಿನ ಮಳಲಿಯಲ್ಲಿರುವುದು ದರ್ಗಾವೋ, ದೇಗುಲವೋ? – ಇಂದು ನಡೆಯಲಿದೆ ತಾಂಬೂಲ ಪ್ರಶ್ನೆ

    ಮಂಗಳೂರು: ಕಾಶಿಯ ಜ್ಞಾನವಾಪಿ ಮಸೀದಿಯ ವಿವಾದದ ನಡುವೆ ಇದೀಗ ಮಂಗಳೂರಿನ‌ ಮಳಲಿ ಮದನಿ ದರ್ಗಾದ ವಿವಾದದ ಕಾವು ಹೆಚ್ಚಿದೆ. ಇಲ್ಲಿ ಹಿಂದೂ ದೇವಾಲಯ ಇತ್ತು ಅನ್ನೋ ಕುರುಹುಗಳು ಪತ್ತೆಯಾಗಿದೆ ಎಂದು ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಿಲೇರಿದ್ದು, ಸ್ಥಳ ಇತಿಹಾಸಕ್ಕೆ ತಾಂಬೂಲ ಪ್ರಶ್ನೆಗೂ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಇಂದು ತಾಂಬೂಲ ಪ್ರಶ್ನೆ ನಡೆಯಲಿದೆ.

    ಹಿಂದೂಪರ ಸಂಘಟನೆಗಳ ನೇತ್ರತ್ವದಲ್ಲಿ ವಿವಾದಿತ ‌ಮಳಲಿ ದರ್ಗಾದ ಅನತಿ ದೂರದಲ್ಲೇ ಇಂದು ಬೆಳಗ್ಗೆ 8 ಗಂಟೆಗೆ ತಾಂಬೂಲ ಪ್ರಶ್ನೆ ನಡೆಯಲಿದೆ. ಮಳಲಿಯ ರಾಮಾಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನೆ ನಡೆಸಲಾಗುವುದು. ಇದನ್ನೂ ಓದಿ: ಜ್ಞಾನವಾಪಿ ಕೇಸ್ – ಮೇ 28, 29ಕ್ಕೆ 5 ಸಾವಿರ ಮುಸ್ಲಿಂ ಸಂಘಟನೆಗಳಿಂದ ಬೃಹತ್ ಸಭೆ

    ತಳಿರು‌ ತೋರಣಗಳಿಂದ ಭಜನಾ ಮಂದಿರವನ್ನು ಶೃಂಗಾರಗೊಳಿಸಲಾಗಿದ್ದು, ಭಜನಾ ಮಂದಿರದ ಮುಂಭಾಗ ಶಾಮಿಯಾನ ಹಾಕಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೇರಳ ಮೂಲದ ಪೊದುವಾಲ್‌ರಿಂದ ತಾಂಬೂಲ ಪ್ರಶ್ನೆ ನಡೆಯಲಿದ್ದು, ಮಸೀದಿ ಸುತ್ತಮುತ್ತ ದೈವಿ ಶಕ್ತಿ ಇದ್ಯಾ ಎಂಬ ಬಗ್ಗೆ ಪ್ರಶ್ನೆ ಕೇಳಲಾಗುವುದು. ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ ದೈವೀ ಶಕ್ತಿ ಪತ್ತೆ ಹಚ್ಚಲಾಗುವುದು ಹಿಂದೂಪರ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

    ತಾಂಬೂಲ ಪ್ರಶ್ನೆ ನಡೆಯಲಿರುವ ಭಜನಾ ಮಂದಿರದ ಸುತ್ತ ಭಾರಿ‌ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ವಿವಾದಿತ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಮೂಲಕ ಕ್ರಮವಹಿಸಲಾಗಿದೆ. ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿದೆ. 2 ಎಸಿಪಿ, 7 ಇನ್ಸ್‌ಪೆಕ್ಟರ್, 12 ಪಿಎಸ್‌ಐ, 10 ಎಎಸ್‌ಐ, 120 ಸಿವಿಲ್ ಸ್ಟಾಪ್ ಹಾಗೂ 3 ಕೆಎಸ್‌ಆರ್‌ಪಿ ತುಕಡಿ, 3 ಸಿಎಆರ್‌ ತುಕಡಿ ಸ್ಥಳದಲ್ಲಿ ನಿಯೋಜನೆ ಮಾಡಲಾಗಿದೆ. ವಿವಾದಿತ ದರ್ಗಾದ ಸ್ಥಳದಲ್ಲೂ ಭಾರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದ್ದು, ದರ್ಗಾ 500 ಮೀ. ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇದನ್ನೂ ಓದಿ: ಗಿಡ ನೆಡುವುದರ ಜೊತೆಗೆ ಸಂರಕ್ಷಿಸಿ: ರಾಜ್ಯಪಾಲರ ಕರೆ

    ಏನಿದು ವಿವಾದ?
    ಮಂಗಳೂರಿನ ಹೊರವಲಯದ ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದಲ್ಲಿ ಹಿಂದೂ ದೇವಸ್ಥಾನದ ಶೈಲಿ ಪತ್ತೆಯಾಗಿರೋ ಹಿನ್ನಲೆಯಲ್ಲಿ ಸಾಕಷ್ಟು ಚರ್ಚೆ ಆರಂಭಗೊಂಡಿದೆ. ಎಪ್ರಿಲ್ 21 ರಂದು ಈ ದರ್ಗಾವನ್ನು ನವೀಕರಣಗೊಳಿಸೋದಕ್ಕಾಗಿ ಎದುರಿನ‌ ಭಾಗವನ್ನು‌ ನೆಲ ಸಮಗೊಳಿಸಲಾಗಿತ್ತು. ಈ ವೇಳೆ ದರ್ಗಾದ ಒಳ ಭಾಗದಲ್ಲಿ ದೇವಸ್ಥಾನದಲ್ಲಿರುವಂತಹ ಗುಡಿಯ ಶೈಲಿ, ಕಂಬಗಳು, ತೋಮರ, ಬಾಗಿಲುಗಳು ಪತ್ತೆಯಾಗಿತ್ತು. ಹೀಗಾಗಿ ಇದು ಜೈನ ಅಥವಾ ಹಿಂದೂ ದೇವಸ್ಥಾನ ಆಗಿರೋ‌ ಸಾಧ್ಯತೆ ಇದೆ ಎಂದು ಹಿಂದೂ ಸಂಘಟನೆಗಳು ಕೋರ್ಟ್ ಮೆಟ್ಟಿಲು ಏರಿತ್ತು. ಇದರ ನಡುವೆ ವಿಹೆಚ್‌ಪಿ ಇಂದು ತಾಂಬೂಲ ಪ್ರಶ್ನೆ ಇಡುತ್ತಿದ್ದು, ಈ ಪ್ರಶ್ನೆಯಲ್ಲಿ ಸಿಕ್ಕ ಅಂಶದಂತೆ ಮುಂದುವರಿಯಲು ತೀರ್ಮಾನಿಸಿದೆ.

  • ದರ್ಗಾ ಹಿಂದೂಗಳಿಗೆ ಸೇರಿದ ಸ್ವತ್ತು – ಬೆಂಗಳೂರು ಕರಗದ ಬಗ್ಗೆ ಋಷಿಕುಮಾರ ಸ್ವಾಮೀಜಿ ಪ್ರತಿಕ್ರಿಯೆ

    ದರ್ಗಾ ಹಿಂದೂಗಳಿಗೆ ಸೇರಿದ ಸ್ವತ್ತು – ಬೆಂಗಳೂರು ಕರಗದ ಬಗ್ಗೆ ಋಷಿಕುಮಾರ ಸ್ವಾಮೀಜಿ ಪ್ರತಿಕ್ರಿಯೆ

    ಬೆಂಗಳೂರು: ದರ್ಗಾಕ್ಕೆ ಹೋಗುವವರನ್ನು ತಡೆಯಬೇಡಿ. ದರ್ಗಾ ಹಿಂದೂಗಳಿಗೆ ಸೇರಿದ ಸ್ವತ್ತು ಎಂದು ಬೆಂಗಳೂರು ಕರಗದ ಬಗ್ಗೆ ಋಷಿಕುಮಾರ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.

    karaga

    ಶ್ರೀಭೀಮಲಿಂಗೇಶ್ವರ ದೇವಾಲಯ ವಿವಾದದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಗಾಕ್ಕೆ ಹೋಗುವವರನ್ನು ತಡೆಯಬೇಡಿ. ದರ್ಗಾ ಹಿಂದೂಗಳಿಗೆ ಸೇರಿದ ಸ್ವತ್ತು. ಬೆಂಗಳೂರಿನ ಕರಗಕ್ಕೆ 5,000 ವರ್ಷಗಳ ಇತಿಹಾಸವಿದೆ. ಧರ್ಮರಾಯನ ದೇವಸ್ಥಾನವಿದೆ ದ್ರೌಪದಿ ಪಂಚಪತಿಯರನ್ನು ಸುತ್ತು ಹಾಕಿದ್ದರ ಪ್ರತೀಕ ಈ ದೇವಸ್ಥಾನ. ಪಾಂಡವರು ಮತ್ತು ದ್ರೌಪದಿ ಈ ದೇವಸ್ಥಾನಕ್ಕೆ ಸುತ್ತು ಹಾಕಿರುವ ಪ್ರತೀಕವಾಗಿ ಇಲ್ಲಿ ಐದು ದೇವಾಲಯಗಳಿವೆ ಎಂದರು. ಇದನ್ನೂ ಓದಿ: ಆಲ್‍ಖೈದಾ ಉಗ್ರನನ್ನು RSS ಮುಖಂಡ ಅಂದ್ರೂ ಆಶ್ಚರ್ಯವಿಲ್ಲ- ಸಿದ್ದು ವಿರುದ್ಧ ಹಿಂದೂ ಜಾಗರಣಾ ವೇದಿಕೆ ಕಿಡಿ

    ಭೀಮಲಿಂಗೇಶ್ವರ ಇದ್ದ ಜಾಗ ದರ್ಗಾವಾಗಿದೆ. ದರ್ಗಾ ಆಗಿದೆಯೇ, ಅಥವಾ ಮಹಲ್ ಆಗಿದೆಯೋ ಗೊತ್ತಿಲ್ಲ. ಹಿಂದೆ ಕೊಳದ ಮಠದ ಆಶ್ರಯದಲ್ಲಿ ಭೀಮಲಿಂಗೇಶ್ವರ ದೇವಾಲಯವಿತ್ತು. ಕೊಳದ ಮಠದ ಜಾಗ ಇದೀಗ ಲಾಲ್ ಬಾಗ್, ಕಬ್ಬನ್ ಪಾರ್ಕ್ ಆಗಿದೆ. ಇದೀಗ ದರ್ಗಾ ಇರುವ ಜಾಗ ಭೀಮಲಿಂಗೇಶ್ವರ ದೇವಾಲಯದ್ದು ಈಗಿರುವ ದರ್ಗಾ 500 ವರ್ಷ ಇತಿಹಾಸವಿರುವ ಪುರಾತನವಾದ ಭೀಮಲಿಂಗೇಶ್ವರನ ಜಾಗ. ಟಿಪ್ಪು ಸುಲ್ತಾನನ ಮೂರು ಯೋಧರ ಪೈಕಿ ಒಬ್ಬರು ಸತ್ತಾಗ ಅಂತ್ಯಸಂಸ್ಕಾರ ಮಾಡಲು ಸ್ಥಳವಿಲ್ಲದೇ ಒಬ್ಬ ಯೋಧನ ಅಂತ್ಯಸಂಸ್ಕಾರ ಮಾಡಿದ ಜಾಗವಾಗಿತ್ತು. ಈ ಸ್ಥಳಕ್ಕೆ ಕರಗ ತೆರಳಲೇಬೇಕು ಎಂದು ಪಟ್ಟುಹಿಡಿದಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್ ಕೇಸ್‍ಗೆ ಟ್ವಿಸ್ಟ್ – ನನ್ನನ್ನು ಯಾರು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ ಅಂದ ಯುವತಿ

  • ಅಜ್ಮೀರ್ ದರ್ಗಾಕ್ಕೆ ಚಾದರ ಕಳಿಸಿಕೊಟ್ಟ ಪ್ರಧಾನಿ ಮೋದಿ

    ಅಜ್ಮೀರ್ ದರ್ಗಾಕ್ಕೆ ಚಾದರ ಕಳಿಸಿಕೊಟ್ಟ ಪ್ರಧಾನಿ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಅಜ್ಮೀರ್ ದರ್ಗಾಕ್ಕೆ ಅರ್ಪಿಸಲೆಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರ ಮೂಲಕ ಚಾದರವನ್ನು ಕಳುಹಿಸಿಕೊಟ್ಟಿದ್ದಾರೆ. ಇದನ್ನು ಪ್ರಧಾನಿ ಮೋದಿ ತಮ್ಮ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ಖ್ವಾಜಾ ಮೊಯಿನುದ್ದೀನ್ ಚಿಸ್ತಿಯ ಉರ್ಸ್‍ನಲ್ಲಿ ಅಜ್ಮೀರ್ ಷರೀಫ್ ದರ್ಗಾಕ್ಕೆ ಚಾದರ್‍ವನ್ನು ಅರ್ಪಿಸಲಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಹಾಗೂ ಸಚಿವರು ಚಾದರ್ ಹಿಡಿದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.

    ಅಜ್ಮೀರ್ ಷರೀಫ್ ದರ್ಗಾವು ರಾಜಸ್ಥಾನದ ಅಜ್ಮೀರ್‍ನಲ್ಲಿರುವ ಪವಿತ್ರ ಸೂಫಿ ದರ್ಗಾವಾಗಿದೆ. ಅಲ್ಲಿ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಅವರ 810ನೇ ಉರ್ಸ್‍ನಲ್ಲಿ ಚಾದರವನ್ನು ಅರ್ಪಿಸಲಾಗುತ್ತದೆ. ಪ್ರತಿ ವರ್ಷ ಜಾತಿ, ಧರ್ಮ ಮತ್ತು ಧರ್ಮವನ್ನು ಲೆಕ್ಕಿಸದೇ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಇದನ್ನೂ ಓದಿ: ಚೀನಾವನ್ನು ಪ್ರತಿನಿಧಿಸಲು ಬಂದಿದ್ದಾರೆಯೇ: ರಾಹುಲ್ ವಿರುದ್ಧ ಜೋಶಿ ಕಿಡಿ

    ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮಂಗಳವಾರ ದರ್ಗಾಕ್ಕೆ ಚಾದರವನ್ನು ಕಳಿಸಿಕೊಟ್ಟಿದ್ದಾರೆ. ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಉರುಸ್‍ಗಾಗಿ ರಾಹುಲ್ ಗಾಂಧಿಯವರು ಚಾದರ್‍ವನ್ನು ಕೊಟ್ಟಿದ್ದನ್ನು ಕಾಂಗ್ರೆಸ್‍ನ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಇಮ್ರಾನ್ ಪ್ರತಾಪ್‍ಗಢಿ ದೃಢಪಡಿಸಿದ್ದಾರೆ. ಇದನ್ನೂ ಓದಿ: ಭಾರತವನ್ನು ಸಾಮ್ರಾಜ್ಯವಾಗಿ ಆಳಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

  • ಕೆಜಿ ಹಳ್ಳಿಯಲ್ಲಿ ಬೆಂಕಿ ಹಚ್ಚಿ ದರ್ಗಾಗೆ ಹೋದ್ರಾ ಕಿಡಿಗೇಡಿಗಳು?

    ಕೆಜಿ ಹಳ್ಳಿಯಲ್ಲಿ ಬೆಂಕಿ ಹಚ್ಚಿ ದರ್ಗಾಗೆ ಹೋದ್ರಾ ಕಿಡಿಗೇಡಿಗಳು?

    ಬೆಂಗಳೂರು: ಇತ್ತೀಚಿಗೆ ಪೊಲೀಸರನ್ನು ಅತೀ ಭೀಕರವಾಗಿ ಹತ್ಯೆ ಮಾಡಿದ್ದ ಉತ್ತರ ಪ್ರದೇಶದ ಗ್ಯಾಂಗ್‍ಸ್ಟರ್ ವಿಕಾಸ್ ದುಬೇ, ಮಾಡಿದ ಪಾಪ ತೊಳೆದುಕೊಳ್ಳಲು ತೀರ್ಥಯಾತ್ರೆ ಹೋಗಿದ್ದ. ಉಜ್ಜೈನಿನ ಮಹಾಂಕಾಳಿ ದೇಗುಲದಲ್ಲಿ ದರ್ಶನ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದ. ಬೆಂಗಳೂರು ಗಲಭೆಯಲ್ಲಿ ಪಾಲ್ಗೊಂಡು ಸಿಕ್ಕ ಸಿಕ್ಕಿದ್ದಕ್ಕೆ ಬೆಂಕಿ ಹಚ್ಚಿದ್ದ ಪುಂಡರು ಇದೀಗ ರಾಜಧಾನಿಯಿಂದ ಎಸ್ಕೇಪ್ ಆಗಿದ್ದು, ದರ್ಗಾಗಳನ್ನು ಸುತ್ತುತ್ತಿದ್ದಾರೆ ಎನ್ನಲಾಗಿದೆ.

    ಗಲಭೆ ನಡೆದ ರಾತ್ರಿಯೇ ಊರು ಬಿಟ್ಟಿದ್ದ 50ಕ್ಕೂ ಹೆಚ್ಚು ಗಲಭೆಕೋರರು ಚಿಂತಾಮಣಿ ಸಮೀಪದ ಮುರುಗಮಲ್ಲದಲ್ಲಿರುವ ದರ್ಗಾಕ್ಕೆ ಹೋಗಿದ್ರು ಅನ್ನೋದನ್ನು ತಾಂತ್ರಿಕ ಅಂಶಗಳ ಮೂಲಕ ಪತ್ತೆ ಹಚ್ಚಲಾಗಿದೆ. ಪೊಲೀಸರು ಹಾರಿಸಿದ ಗುಂಡುಗಳಿಗೂ ಗಾಯಗೊಂಡವರ ಸಂಖ್ಯೆಗೂ ಮ್ಯಾಚ್ ಆಗ್ತಿಲ್ಲ. ಸುಮಾರು 15ಕ್ಕೂ ಹೆಚ್ಚು ಮಂದಿಗೆ ಗುಂಡು ತಾಕಿರೋ ಸಾಧ್ಯತೆಗಳಿದ್ದು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರೋ ಅನುಮಾನ ವ್ಯಕ್ತವಾಗಿರೋದ್ರಿಂದ ಪೊಲೀಸರು ಆಸ್ಪತ್ರೆಗಳನ್ನು ಶೋಧಿಸುತ್ತಿದ್ದಾರೆ.

    ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಸದ್ಯ ಯುವಕರೇ ಕಾಣುತ್ತಿಲ್ಲ. ಗಲಾಟೆ ನಡೆದ ರಾತ್ರಿಯೇ ಮನೆ ಬಿಟ್ಟು ಶೇಕಡಾ 80 ರಷ್ಟು ಹುಡುಗರು ಹೋಗಿದ್ದಾರೆ. ಇತರೆ ಜಿಲ್ಲೆಗಳಲ್ಲಿ ಸಂಬಂಧಿಕರ ಮನೆಗಳಲ್ಲಿ, ಪ್ರಾರ್ಥನಾ ಮಂದಿರಗಳಲ್ಲಿ ಉಳಿದುಕೊಂಡಿರುವ ಸಾಧ್ಯತೆ ಇದೆ. ಕೇವಲ 20ರಷ್ಟು ಯುವಕರು ಮಾತ್ರ ತಮ್ಮ ತಮ್ಮ ಮನೆಗಳಲ್ಲಿಯೇ ಉಳಿದಿದ್ದಾರೆ.

  • ಕವಣಾಪುರದ ಬಸವನಿಗೆ ಬಳ್ಳಾರಿಯ ದರ್ಗಾದಲ್ಲಿ ಪೂಜೆ

    ಕವಣಾಪುರದ ಬಸವನಿಗೆ ಬಳ್ಳಾರಿಯ ದರ್ಗಾದಲ್ಲಿ ಪೂಜೆ

    ರಾಮನಗರ: ಇತ್ತೀಚೆಗೆ ಮಂಡ್ಯ ಜಿಲ್ಲೆಯ ಡಣ್ಣಾಯಕನಪುರ ಗ್ರಾಮದಲ್ಲಿ ಅಳುತ್ತಿದ್ದ ಮಗುವಿನ ತೊಟ್ಟಿಲು ತೂಗಿ ಮಲಗಿಸಿ ಅಚ್ಚರಿ ಮೂಡಿಸಿದ್ದ ರಾಮನಗರ ಜಿಲ್ಲೆಯ ಕವಣಾಪುರ ಗ್ರಾಮದ ದೈವ ಸ್ವರೂಪಿ ಬಸವಣ್ಣ ಇದೀಗ ಮುಸ್ಲಿಂ ಪ್ರಾರ್ಥನಾ ಮಂದಿರಕ್ಕೆ ತೆರಳಿ ಪೂಜೆ ಪಡೆಯುವ ಮೂಲಕ ವಿಸ್ಮಯವನ್ನುಂಟು ಮಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕಾಂತೆಬೆನ್ನೂರು ಗ್ರಾಮದ ದರ್ಗಾದಲ್ಲಿ ಬಸವಣ್ಣ ಪೂಜೆ ಸ್ವೀಕರಿಸಿದೆ. ಅದು ಕೂಡ ಪ್ರಾರ್ಥನಾ ಮಂದಿರದಲ್ಲಿ ಪೂಜೆ ಸಲ್ಲಿಸುವವರಿಂದ ಪೂಜೆ ಸ್ವೀಕರಿಸಿದ ಬಳಿಕ ದರ್ಗಾದಿಂದ ಹೊರಗೆ ಬಂದಿರುವುದು ಸಾಕಷ್ಟು ಅಚ್ಚರಿಯನ್ನುಂಟು ಮಾಡಿದೆ. ಇದನ್ನೂ ಓದಿ: ಅಳುತ್ತಿದ್ದ ಮಗುವಿನ ತೊಟ್ಟಿಲನ್ನು ಕೊಂಬಿನಿಂದ ತೂಗಿ ಮಲಗಿಸಿದ ಬಸಪ್ಪ

    ಇತ್ತೀಚೆಗೆ ಬಳ್ಳಾರಿಯ ಕಾಂತೆಬೆನ್ನೂರು ಗ್ರಾಮದ ಮಹಾದೇವ ಸದ್ಗುರುಗಳ ಉತ್ಸವದಲ್ಲಿ ಪಾಲ್ಗೊಂಡಿದ್ದ ರಾಮನಗರ ತಾಲೂಕು ಕವಣಾಪುರ ಬಸವಣ್ಣ ಉತ್ಸವದ ವೇಳೆ ಗ್ರಾಮದಲ್ಲಿನ ಪ್ರತಿ ದೇವಾಲಯಗಳಿಗೂ ತೆರಳಿ ಪೂಜೆ ಸ್ವೀಕರಿಸುತ್ತಾ ಮುಂದೆ ಸಾಗುತ್ತಿತ್ತು. ಇದೇ ವೇಳೆ ದಾರಿಯಲ್ಲಿದ್ದ ಮುಸ್ಲಿಂ ಪ್ರಾರ್ಥನಾ ಮಂದಿರ ಒಳ ಪ್ರವೇಶಿಸಿದೆ. ಬಸವಣ್ಣನ ವರ್ತನೆಯಿಂದ ನೆರೆದಿದ್ದವರಿಗೆ ಕ್ಷಣಕಾಲ ಗೊಂದಲ ಮತ್ತು ವಿಚಿತ್ರ ಎನಿಸಿದೆ. ಅಲ್ಲದೇ ಎಷ್ಟೇ ಪ್ರಯತ್ನಿಸಿದ್ರು ಬಸವಣ್ಣ ಮಾತ್ರ ಹೊರಗೆ ಬಂದಿಲ್ಲ.

    ಕೊನೆಗೆ ದರ್ಗಾದಲ್ಲಿ ನಿತ್ಯ ಪ್ರಾರ್ಥನೆ ಸಲ್ಲಿಸುವ ಮುಸ್ಲಿಂ ಧರ್ಮಗುರುಗಳು ಬಂದು ಮುಸ್ಲಿಂ ಪದ್ಧತಿಯಂತೆ ಪೂಜೆ ಸಲ್ಲಿಸಿದ್ದಾರೆ. ಪೂಜೆ ಪಡೆದ ಬಸವಣ್ಣ ನಂತರ ದರ್ಗಾದಿಂದ ಹೊರಗೆ ಹೊರಟಿದೆ. “ಧರ್ಮ ಬೇರೆಯಾದರೂ ದೇವರೊಬ್ಬನೆ” ಎಂಬಂತೆ ದರ್ಗಾದಲ್ಲಿ ಪೂಜೆ ಸ್ವಿಕರಿಸಿದ ವಿಸ್ಮಯ ನೋಡಿದ ಜನರು ಹರ ಹರ ಶಂಕರ ಶಂಭೋ ಮಹಾದೇವ ಎಂಬ ಜೈಕಾರ ಕೂಗಿ ಸಂಭ್ರಮಿಸಿದ್ದಾರೆ.

    ರಾಮನಗರದ ಕವಣಾಪುರ ಗ್ರಾಮದಲ್ಲಿ ನೂರಾರು ವರ್ಷಗಳ ಇತಿಹಾಸವಿರುವ ಬಸವೇಶ್ವರ ದೇವಾಲಯದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಬಸವನ್ನು ಬಿಡಲಾಗಿತ್ತು. ಅಂದಿನಿಂದಲೂ ದೈವಿ ಸ್ವರೂಪಿ ಬಸಪ್ಪ ಎಂದೇ ಹೆಸರುವಾಸಿಯಾಗಿರುವ ಬಸವ ಹಲವು ಪವಾಡಗಳನ್ನು ಸೃಷ್ಟಿಸುತ್ತಿದೆ ಎನ್ನಲಾಗಿದೆ.

    ಜಮೀನು ವ್ಯಾಜ್ಯ, ದೇವಾಲಯಕ್ಕೆ ಪೂಜಾರಿಗಳನ್ನು ಗೊತ್ತು ಮಾಡುವುದು, ಭೀತಿ ಶಂಕೆ ಪರಿಹಾರ, ಮಾಟಮಂತ್ರ ಪತ್ತೆ ಹಚ್ಚುವುದು ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಜಿಲ್ಲೆಯಾದ್ಯಂತ ಹಾಗೂ ಹೊರ ಜಿಲ್ಲೆಗಳಿಗೆ ತೆರಳಿ ತನ್ನ ದೈವಿ ಶಕ್ತಿಯಿಂದ ಸಮಸ್ಯೆಗಳನ್ನು ಪರಿಹರಿಸಿದೆ.

  • ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ

    ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ

    ಹುಬ್ಬಳ್ಳಿ: ನಿಮ್ಮ ತಂದೆ- ತಾಯಿ ದರ್ಗಾಕ್ಕೆ ಕರೆದುಕೊಂಡು ಬಾ ಅಂತಾ ಹೇಳಿದ್ದಾರೆ ಎಂದು ಪುಸಲಾಯಿಸಿ ಕರೆದುಕೊಂಡು ಹೋಗಿ ಅಪ್ತಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಹುಬ್ಬಳಿಯ ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ತನ್ನ ಅಜ್ಜಿಯ ಮನೆಯಲ್ಲಿದ್ದ 14 ವರ್ಷದ ಬಾಲಕಿಯನ್ನು ಬೈಕಿನಲ್ಲಿ ಬಂದ ಯುವಕನೊಬ್ಬ ನಿಮ್ಮ ತಂದೆ-ತಾಯಿ ಅಲ್ತಾಫ್ ನಗರದ ದರ್ಗಾದಲ್ಲಿ ಇದ್ದಾರೆ. ನಿನ್ನನ್ನು ಕರೆದುಕೊಂಡು ಬಾ ಎಂದು ಹೇಳಿದ್ದಾರೆ ಎಂದು ನಂಬಿಸಿ ಬೈಕಿನಲ್ಲಿ ಕರೆದುಕೊಂಡು ಹೋಗಿದ್ದಾನೆ.

    ಈ ವೇಳೆ ಯುವಕನ ಬೈಕಿಗೆ ಇಬ್ಬಾಲಿಸಿದ ಆಟೋದಲ್ಲಿದ್ದ ನಾಲ್ವರು ಯುವಕರು ಅಂಚಟಗೇರಿ ಕ್ರಾಸ್‍ವರೆಗೂ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಲೈಂಗಿಕ ಕಿರುಕುಳ ನೀಡಿದ ಬಳಿಕ ಆಕೆಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ.

    ಘಟನೆಯಿಂದ ತೀವ್ರ ಅಸ್ವಸ್ಥಗೊಂಡ ಬಾಲಕಿಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.

  • ರಾಹುಲ್ ಗಾಂಧಿ ಕೊನೆ ದಿನದ ರಾಜ್ಯ ಪ್ರವಾಸ- ನಿನ್ನೆ ದರ್ಗಾ, ಇಂದು ಅನುಭವ ಮಂಟಪಕ್ಕೆ ಭೇಟಿ

    ರಾಹುಲ್ ಗಾಂಧಿ ಕೊನೆ ದಿನದ ರಾಜ್ಯ ಪ್ರವಾಸ- ನಿನ್ನೆ ದರ್ಗಾ, ಇಂದು ಅನುಭವ ಮಂಟಪಕ್ಕೆ ಭೇಟಿ

    ಬೀದರ್: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ರಾಜ್ಯ ಪ್ರವಾಸ ಇಂದು ಅಂತ್ಯವಾಗಲಿದೆ. ಇಂದು ರಾಹುಲ್ ಗಾಂಧಿ ಕಲಬುರ್ಗಿಯಲ್ಲಿ ದಿವಂಗತರಾದ ಇಬ್ಬರು ಕಾಂಗ್ರೆಸ್ ನಾಯಕರುಗಳ ಮನೆಗಳಿಗೆ ಭೇಟಿ ಕೊಡಲಿದ್ದಾರೆ. ಇದನ್ನೂ ಓದಿ:  ರಾಹುಲ್ ಪ್ರಧಾನಿ ಆಗೋವರೆಗೆ ಚಪ್ಪಲಿಯೇ ಹಾಕಲ್ಲ – ಅಭಿಮಾನಿಯಿಂದ ಶಪಥ

    ಮಾಜಿ ಸಿಎಂ ಎನ್ ಧರ್ಮಸಿಂಗ್ ಹಾಗೂ ಮಾಜಿ ಸಚಿವ ಖಮರುಲ್ ಇಸ್ಲಾಮ್ ರವರ ಮನೆಗಳಿಗೆ ಇಂದು ಬೆಳಗ್ಗೆ ಭೇಟಿ ಕೊಡಲಿರುವ ರಾಹುಲ್ ಗಾಂಧಿ ಉಭಯ ನಾಯಕರ ಕುಟುಂಬ ಸದಸ್ಯರುಗಳಿಗೆ ಸಾಂತ್ವಾನ ಹೇಳಲಿದ್ದಾರೆ. ಬಳಿಕ ಕಲಬುರ್ಗಿಯ ವಾಣಿಜ್ಯೋದ್ಯಮಿಗಳ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ. ಆ ಬಳಿಕ ಮಧ್ಯಾಹ್ನಕ್ಕೆ ರಾಹುಲ್ ಹೆಲಿಕಾಪ್ಟರ್ ಮೂಲಕ ಬೀದರ್ ಜಿಲ್ಲೆಯ ಬಸವಕಲ್ಯಾಣಕ್ಕೆ ತೆರಳಲಿದ್ದಾರೆ. ಇದನ್ನೂ ಓದಿ: ಭಾಷಣದಲ್ಲಿ ಮಹದಾಯಿ ಬಗ್ಗೆ ಒಂದೇ ಒಂದು ಮಾತು ಎತ್ತಲಿಲ್ಲ- ರಾಹುಲ್ ವಿರುದ್ಧ ಶೆಟ್ಟರ್ ವಾಗ್ದಾಳಿ

    ಬಸವಕಲ್ಯಾಣದಲ್ಲಿ ರಾಹುಲ್ ಗಾಂಧಿ ಅನುಭವ ಮಂಟಪಕ್ಕೆ ಭೇಟಿ ಕೊಡಲಿದ್ದಾರೆ. ಇಡೀ ದಿನ ಕಾಂಗ್ರೆಸ್ ನ ರಾಜ್ಯ ನಾಯಕರುಗಳು ರಾಹುಲ್ ಗಾಂಧಿಗೆ ಸಾಥ್ ನೀಡಲಿದ್ದಾರೆ. ಮದ್ಯಾಹ್ನ 1 ಗಂಟೆ ನಂತರ ರಾಹುಲ್ ಗಾಂಧಿ ವಿಶೇಷ ವಿಮಾನದ ಮೂಲಕ ದೆಹಲಿಗೆ ವಾಪಸ್ಸಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ:  ಒಂದೇ ದಿನದಲ್ಲಿ 5 ವಿಧಾನಸಭಾ ಕ್ಷೇತ್ರಗಳಲ್ಲಿ ರಾಹುಲ್ ಗಾಂಧಿ ಪ್ರವಾಸ