Tag: Darbhanga

  • ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ

    ಅಂತರ್ಜಾತಿ ವಿವಾಹ ಆಗಿದ್ದಕ್ಕೆ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದ ಮಾವ

    – ಹೆಂಡತಿ ಮಡಿಲಲ್ಲೇ ಪ್ರಾಣ ಬಿಟ್ಟ ಗಂಡ

    ಪಾಟ್ನಾ: ಅಂತರ್ಜಾತಿ ವಿವಾಹ (Intercaste Marriage) ಆಗಿದ್ದಕ್ಕೆ ವ್ಯಕ್ತಿಯೊಬ್ಬ ಮಗಳ ಮುಂದೆಯೇ ಅಳಿಯನನ್ನ ಗುಂಡಿಕ್ಕಿ ಕೊಂದಿರುವ ಘಟನೆ ಬಿಹಾರದ ದರ್ಭಾಂಗಾದಲ್ಲಿರುವ (Darbhanga) ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.

    ರಾಹುಲ್ ಕುಮಾ‌ರ್ (25) ಹತ್ಯೆಯಾದ ವ್ಯಕ್ತಿ. ದರ್ಭಾಂಗಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (Medical College Hospital) 2ನೇ ವರ್ಷದ ಬಿಎಸ್ಸಿ ನರ್ಗಿಂಗ್‌ ವ್ಯಾಸಂಗ ಮಾಡುತ್ತಿದ್ದ. 4 ತಿಂಗಳ ಹಿಂದಷ್ಟೇ ಅದೇ ಕಾಲೇಜಿನಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ತನ್ನು ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದ. ರಾಹುಲ್‌ ಅಂತರ್ಜಾತಿ ಅನ್ನೋ ಕಾರಣಕ್ಕೆ ಕುಟುಂಬದವರಿಂದ ಭಾರೀ ವಿರೋಧ ಇತ್ತು ಅಂತ ತಿಳಿದುಬಂದಿದೆ.

    ಇನ್ನೂ ಗುಂಡಿಕ್ಕಿ ಹತ್ಯೆಗೈದ ಬೆನ್ನಲ್ಲೇ ರಾಹುಲ್‌ನ ಸ್ನೇಹಿತರು ತನ್ನುವಿನ ತಂದೆ ಆರೋಪಿ ಪ್ರೇಮ್‌ಶಂಕ‌ರ್‌ ಝಾಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದಂತಹ ಬಲಿಷ್ಠ ಮಿತ್ರ ರಾಷ್ಟ್ರದೊಂದಿಗೆ ಸಂಬಂಧವನ್ನ ಹದಗೆಡಿಸಬೇಡಿ – ಟ್ರಂಪ್‌ಗೆ ತಿವಿದ ನಿಕ್ಕಿ ಹ್ಯಾಲಿ

    ಹೆಂಡತಿ ಮಡಿಲಲ್ಲೇ ಪ್ರಾಣಬಿಟ್ಟ ಗಂಡ
    ಮಂಗಳವಾರ (ಆ.5) ಸಂಜೆ ಹೂಡಿ (ಪುಲೋವರ್‌ ಮಾದರಿಯ ಜೆರ್ಸಿ) ಧರಿಸಿದ್ದ ವ್ಯಕ್ತಿಯೊಬ್ಬ ರಾಹುಲ್‌ನ ಬಳಿಗೆ ಬಂದಿದ್ದ. ಹತ್ತಿರ ಬಂದಾಗ ಅದು ನನ್ನ ತಂದೆ ಅನ್ನೋದು ಗೊತ್ತಾಯ್ತ. ಅವರ ಕೈಯಲ್ಲಿ ಬಂದೂಕು ಇತ್ತು. ನನ್ನ ಕಣ್ಮುಂದೆಯೇ ನನ್ನ ಗಂಡನ ಎದೆಗೆ ಗುಂಡು ಹಾರಿಸಿದ್ರು. ನನ್ನ ಗಂಡ ನನ್ನ ಮಡಿಲಲ್ಲಿ ಪ್ರಾಣ ಬಿಟ್ಟರು ಅಂತ ತನ್ನು ಕಣ್ಣೀರಿಟ್ಟಿದ್ದಾಳೆ. ಇದನ್ನೂ ಓದಿ: ಟ್ರಂಪ್‌ ಬೆದರಿಕೆಗೆ ಡೋಂಟ್‌ ಕೇರ್‌ – ಸಂಬಂಧ ಬಲಪಡಿಸಲು ರಷ್ಯಾಗೆ ಅಜಿತ್ ದೋವಲ್ ಭೇಟಿ

    ನನ್ನ ಇಡೀ ಕುಟುಂಬ ಈ ಸಂಚಿನಲ್ಲಿ ಭಾಗಿಯಾಗಿದೆ. ನನ್ನ ಸಹೋದರ ಮತ್ತು ತಂದೆಯಿಂದ ನಮ್ಮ ಜೀವಕ್ಕೆ ಬೆದರಿಕೆಯಿದೆ ಎಂದು ದೂರು ನೀಡಿ ನ್ಯಾಯಾಲಯಕ್ಕೂ ಹೋಗಿದ್ದೆವು ಎಂದು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಮರ್ಯಾದೆಗೇಡು ಹತ್ಯೆ ಎಂದು ತಿಳಿದುಬಂದಿದೆ ಎಂದು ವದರಿಯಾಗಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: 24 ಗಂಟೆಗಳಲ್ಲಿ ಭಾರತದ ಎಲ್ಲ ಆಮದುಗಳ ಮೇಲೆ ಸುಂಕ ಗಣನೀಯ ಏರಿಕೆ – ಟ್ರಂಪ್‌ ಮತ್ತೆ ಬೆದರಿಕೆ

  • ಮೈಸೂರು-ದರ್ಭಾಂಗ ರೈಲು ದುರಂತ ಉದ್ದೇಶಿತ ದುಷ್ಕೃತ್ಯ

    ಮೈಸೂರು-ದರ್ಭಾಂಗ ರೈಲು ದುರಂತ ಉದ್ದೇಶಿತ ದುಷ್ಕೃತ್ಯ

    ಚೆನ್ನೈ: ಕಳೆದ ವರ್ಷ ಮೈಸೂರಿನಿಂದ (Mysuru) ದರ್ಭಾಂಗಗೆ (Darbhanga) ಹೊರಟಿದ್ದ ಭಾಗಮತಿ ಎಕ್ಸ್‌ಪ್ರೆಸ್‌ (Bhagmati Express) ರೈಲು, ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಭಾರೀ ದುರಂತ ಸಂಭವಿಸಿತ್ತು. ಆದರೆ ಇದು ಅಪಘಾತವಲ್ಲ, ಉದ್ದೇಶಿತ ದುಷ್ಕೃತ್ಯ. ಹಳಿ ಇಂಟರ್‌ಲಾಕ್ ತೆಗೆದು ದುಷ್ಕೃತ್ಯ ಎಸಗಿದ್ದಾರೆ ಎಂದು ರೈಲ್ವೆ ಸುರಕ್ಷತಾ ಆಯುಕ್ತರು ತನಿಖಾ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ.

    ಈ ಕುರಿತು ದಕ್ಷಿಣ ರೈಲ್ವೆ ವಲಯದ ರೈಲ್ವೆ ಸುರಕ್ಷತಾ ವಿಭಾಗದ ಆಯುಕ್ತ ಎ.ಎಂ.ಚೌಧರಿ ಅವರು, 2024ರ ಅ.11ರಂದು ಚೆನ್ನೈ ಸಮೀಪದ ಕವರೈ ಪಟ್ಟಿ ರೈಲ್ವೆ ನಿಲ್ದಾಣದಲ್ಲಿ ಭಾಗಮತಿ ಎಕ್ಸ್ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಎರಡು ಭೋಗಿಗಳು ಹೊತ್ತಿ ಉರಿದಿದ್ದವು. ಆದರೆ ಇದು ಸ್ವಯಂಚಾಲಿತ ಅಥವಾ ಯಾವುದೇ ಸಾಧನದ ದಿಢೀರ್ ವೈಫಲ್ಯದಿಂದ ಆಗಿಲ್ಲ. ಬದಲಾಗಿ ರೈಲು ಹಳಿಯ ಇಂಟರ್‌ಲಾಕ್ ಕಿತ್ತ ಹಿನ್ನೆಲೆಯಲ್ಲಿ ಸಂಭವಿಸಿದೆ. ಹೀಗಾಗಿ ಈ ರೈಲು ಅಪಘಾತವನ್ನು ವಿಧ್ವಂಸಕ ಕೃತ್ಯದ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಕೋಮುವಾದ ಹರಡಲು ಯತ್ನಿಸಿದ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ನೀಡಿರೋದು ಭಾರತ ಚಿತ್ರರಂಗಕ್ಕೆ ಅವಮಾನ: ಪಿಣರಾಯಿ ವಿಜಯನ್

    ಹಳಿಯ ಇಂಟರ್‌ಲಾಕ್ ವ್ಯವಸ್ಥೆಯನ್ನು ಕಿಡಿಗೇಡಿಗಳು ಕಿತ್ತಿದ್ದ ಹಿನ್ನೆಲೆ ಭಾಗಮತಿ ಎಕ್ಸ್ಪ್ರೆಸ್ ರೈಲು ನಿಂತಿದ್ದ ಮುಖ್ಯ ಹಳಿ ಬಿಟ್ಟು ಪಕ್ಕದ ಹಳಿಯಲ್ಲಿ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿತ್ತು. ದುರಂತದಲ್ಲಿ 13 ಬೋಗಿಗಳು ಹಳಿತಪ್ಪಿ, 19 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಎಂದಿದ್ದಾರೆ.

    ದುಷ್ಕೃತ್ಯದ ಸಂಚು:
    ಇನ್ನೂ ಈ ದುಷ್ಕೃತ್ಯವು ರೈಲ್ವೆ ಇಲಾಖೆಯ ಒಳಗಿನವರಿಂದಲೇ ನಡೆದಿರುವ ಶಂಕೆ ಇದ್ದು, ರೈಲ್ವೆ ಇಲಾಖೆಯ ಗುಪ್ತಚರ ವಿಭಾಗವು ಈ ಕುರಿತು ಮಾಹಿತಿ ಕಲೆಹಾಕಬೇಕು ಎಂದು ಸಿಆರ್‌ಎಸ್ ಕೇಂದ್ರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ತಿಳಿಸಿದ್ದಾರೆ. ಜೊತೆಗೆ ರೈಲ್ವೆಯ ಮಹತ್ವದ ಸುರಕ್ಷತಾ ಕೆಲಸಗಳಿಗೆ ಗುತ್ತಿಗೆ ಆಧಾರದಲ್ಲಿ ಉದ್ಯೋಗಿಗಳ ನೇಮಕ ಮಾಡಿಕೊಳ್ಳಬಾರದು. ರೈಲ್ವೆಯ ಸುರಕ್ಷತಾ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಈ ಕುರಿತ ಕೌಶಲ್ಯ ನೀಡುವ ಕೆಲಸ ಆಗಬೇಕು ಎಂದು ಸೂಚಿಸಿದ್ದಾರೆ.

    ಘಟನೆ ವೇಳೆ ಭಾಗಮತಿ ಎಕ್ಸ್ಪ್ರೆಸ್ ರೈಲಿನ ಲೋಕೋ ಪೈಲಟ್ ಜಿ.ಸುಬ್ರಮಣಿ ಅವರು ಸಮಯ ಪ್ರಜ್ಞೆ ಪ್ರದರ್ಶಿಸಿ, ತಕ್ಷಣ ತುರ್ತು ಬ್ರೇಕ್ ಹಾಕಿದ ಹಿನ್ನೆಲೆ ದುರಂತದ ತೀವ್ರತೆ ಕಡಿಮೆಯಾಗಿತ್ತು. ಹೀಗಾಗಿ ಚೆನ್ನೈ ಡಿವಿಜನ್‌ನ ಈ ಲೋಕೋ ಪೈಲಟ್ ಹೆಸರನ್ನು ಅತೀ ವಿಶಿಷ್ಟ ರೈಲು ಸೇವಾ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.ಇದನ್ನೂ ಓದಿ: Pakistan | ಹಳಿತಪ್ಪಿದ ಇಸ್ಲಾಮಾಬಾದ್ ಎಕ್ಸ್‌ಪ್ರೆಸ್‌ – 30 ಪ್ರಯಾಣಿಕರಿಗೆ ಗಾಯ, ಮೂವರು ಗಂಭೀರ

  • ಬಿಹಾರದ ಕಾರ್ಯಕ್ರಮದಲ್ಲಿ ಮೋದಿ ಪಾದಸ್ಪರ್ಶಕ್ಕೆ ನಿತೀಶ್ ಯತ್ನ – ವೀಡಿಯೋ ವೈರಲ್

    ಬಿಹಾರದ ಕಾರ್ಯಕ್ರಮದಲ್ಲಿ ಮೋದಿ ಪಾದಸ್ಪರ್ಶಕ್ಕೆ ನಿತೀಶ್ ಯತ್ನ – ವೀಡಿಯೋ ವೈರಲ್

    – ಎರಡನೇ ಏಮ್ಸ್ ನಿರ್ಮಾಣಕ್ಕೆ ಪ್ರಧಾನಿ ಅಡಿಪಾಯ
    – 12,100 ಕೋಟಿ ರೂ. ಕಾಮಗಾರಿಗೆ ಚಾಲನೆ

    ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ದರ್ಭಾಂಗಾದಲ್ಲಿ (Darbhanga) ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾದಗಳನ್ನು ಸ್ಪರ್ಶಿಸಲು ಯತ್ನಿಸಿದ್ದಾರೆ. ನೀತಿಶ್ ಪಾದಸ್ಪರ್ಶಕ್ಕೆ ಯತ್ನಿಸುತ್ತಿದ್ದಂತೆ ಪ್ರಧಾನಿ ಮೋದಿ ಅವರನ್ನು ತಡೆದಿರುವ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

    ಕಾರ್ಯಕ್ರಮದಲ್ಲಿ 73 ವರ್ಷದ ನಿತೀಶ್ ಕುಮಾರ್, 74 ವರ್ಷದ ಪ್ರಧಾನಿ ಮೋದಿಯವರ (Narendra Modi) ಪಾದಗಳನ್ನು ಮುಟ್ಟಿ ನಮಸ್ಕರಿಸಲು ಪ್ರಯತ್ನಿಸಿದ್ದಾರೆ. ನಿತೀಶ್ ಈ ವರ್ಷದಲ್ಲಿ ಮೂರನೇ ಬಾರಿಗೆ ಈ ಪ್ರಯತ್ನ ಮಾಡಿದ್ದಾರೆ.   ಇದನ್ನೂ ಓದಿ: MUDA Scam | ಬ್ಲ್ಯಾಕ್‌ಮೇಲ್‌ ಆರೋಪ – ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್‌

    ಕಳೆದ ಜೂನ್‌ನಲ್ಲಿ ನಿತೀಶ್ ಕುಮಾರ್ ಅವರು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಮೋದಿಯವರ ಪಾದಗಳನ್ನು ಸ್ಪರ್ಶಿಸಲು ಪ್ರಯತ್ನಿಸಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ ನವಾಡದಲ್ಲಿ ನಡೆದ ಲೋಕಸಭಾ ಚುನಾವಣಾ ರ‍್ಯಾಲಿಯಲ್ಲಿ ಅವರು ಪ್ರಧಾನಿ ಮೋದಿಯವರ ಪಾದಗಳನ್ನು ಸ್ಪರ್ಶಿಸಿದ್ದರು.   ಇದನ್ನೂ ಓದಿ: Chitradurga| ಮನೆ ಕಾಂಪೌಂಡ್ ಒಳಗೆ ನುಗ್ಗಿ ಮಹಿಳೆಯ ಕೊರಳಲ್ಲಿದ್ದ ಸರ ಕದ್ದು ಆರೋಪಿ ಪರಾರಿ

     

    ದರ್ಭಾಂಗಾದಲ್ಲಿ ನಡೆದ ಸಮಾರಂಭದಲ್ಲಿ ಮೋದಿ ಹೊಸ ಏಮ್ಸ್ ನಿರ್ಮಾಣಕ್ಕೆ ಅಡಿಪಾಯ ಹಾಕಿದರು ಮತ್ತು ಸುಮಾರು 12,100 ಕೋಟಿ ರೂ. ಮೌಲ್ಯದ ಹಲವಾರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿತೀಶ್ ರಾಜ್ಯವನ್ನು ಪರಿವರ್ತಿಸಿದ್ದಾರೆ. ಜಂಗಲ್ ರಾಜ್ ಹಣೆಪಟ್ಟಿಯಿಂದ ಹೊರತೆಗೆದಿದ್ದಾರೆ ಎಂದು ಶ್ಲಾಘಿಸಿದರು. ಇದೇ ವೇಳೆ ಆರ್‌ಜೆಡಿ ಮತ್ತು ಲಾಲು ಪ್ರಸಾದ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದರು.   ಇದನ್ನೂ ಓದಿ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಬರ್ಬರ ಹತ್ಯೆ

    ಬಿಹಾರ ಸಾಕಷ್ಟು ಅಭಿವೃದ್ಧಿಗೆ ಸಾಕ್ಷಿಯಾಗುತ್ತಿದೆ. ಬಿಹಾರದ ಹಿಂದಿನ ಸರ್ಕಾರ ಆರೋಗ್ಯ ಮೂಲಸೌಕರ್ಯಗಳ ಬಗ್ಗೆ ಎಂದಿಗೂ ತಲೆಕೆಡಿಸಿಕೊಳ್ಳಲಿಲ್ಲ. ಅವರು ಸುಳ್ಳು ಭರವಸೆಗಳನ್ನು ನೀಡಿದರು. ಆದರೆ ನಿತೀಶ್ ಕುಮಾರ್ ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿ ಸುಧಾರಿಸಿದೆ ಎಂದು ಮೋದಿ ಹೇಳಿದರು.  ಇದನ್ನೂ ಓದಿ: ಬೀದರ್‌ನಲ್ಲಿ ಚಿತ್ರಾನ್ನ ತಿಂದು ವಸತಿ ಶಾಲೆಯ 50 ಮಕ್ಕಳು ಅಸ್ವಸ್ಥ

  • ಭಾಗಮತಿ ಎಕ್ಸ್‌ಪ್ರೆಸ್ ರೈಲು ದುರಂತ – 18 ಗಂಟೆಗಳ ಬಳಿಕ ತೆರವು ಕಾರ್ಯಾಚರಣೆ ಯಶಸ್ವಿ

    ಭಾಗಮತಿ ಎಕ್ಸ್‌ಪ್ರೆಸ್ ರೈಲು ದುರಂತ – 18 ಗಂಟೆಗಳ ಬಳಿಕ ತೆರವು ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಭಾಗಮತಿ ಎಕ್ಸ್‌ಪ್ರೆಸ್ (Bagmati Express) ರೈಲು ದುರಂತ (Train Accident) ನಡೆದ ಜಾಗದಲ್ಲಿ ಹಳಿಗಳ ತೆರವು ಕಾರ್ಯಚರಣೆ ಸತತ 18 ಘಂಟೆಗಳ ಬಳಿಕ ಯಶಸ್ವಿಯಾಗಿದೆ. ಹೊಸ ಟ್ರ್ಯಾಕ್ ನಿರ್ಮಾಣ ಮಾಡಿ, ಎಂದಿನಂತೆ ರೈಲು ಓಡಾಟಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

    ಅಪಘಾತದ ಬಳಿಕ ಹಳಿಗಳ ಮೇಲೆ ಬಿದ್ದಿದ್ದ ಎಲ್ಲಾ ಬೋಗಿಗಳನ್ನ ಸಂಪೂರ್ಣವಾಗಿ ರೈಲ್ವೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಟ್ರಯಲ್ ರನ್ ಬಳಿಕ ಎಲ್ಲಾ ರೈಲುಗಳ ಓಡಾಟಕ್ಕೆ ಅನುವು ಮಾಡಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಕರ್ನಾಟದ ಮೈಸೂರು (Mysuru), ಬೆಂಗಳೂರು ಮೂಲಕವಾಗಿ ಬಿಹಾರದ ದರ್ಭಾಂಗ್‌ಗೆ (Darbhanga) ಹೊರಟಿದ್ದ ಭಾಗಮತಿ ಎಕ್ಸ್‌ಪ್ರೆಸ್ ರೈಲು ಚೆನ್ನೈನ ಕವರಪೆಟ್ಟೈ ಬಳಿ ಭೀಕರ ಅಪಘಾತಕ್ಕೊಳಗಾಗಿತ್ತು. ಲೂಪ್ ಲೈನ್‍ನಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಭಾಗಮತಿ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು, 13 ಬೋಗಿಗಳು ಹಳಿ ತಪ್ಪಿದ್ದವು. ಇದೀಗ ಸತತ 18 ಘಂಟೆಗಳ ಬಳಿಕ ಹಳಿಗಳ ಮೇಲೆ ಬಿದ್ದಿದ್ದ ಬೋಗಿಗಳನ್ನ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ.

    ಕೇವಲ ಇಂಜಿನ್ ತೆರವು ಕಾರ್ಯಾಚರಣೆ ಮಾತ್ರ ಬಾಕಿ ಇದೆ. 120 ಟನ್ ತೂಕವಿರುವ ರೈಲಿನ ಇಂಜಿನ್ ತೆರವುಗೊಳಿಸಿ, ಟ್ರಯಲ್ ರನ್ ಮುಗಿಸಿದ ಬಳಿಕ ಎಲ್ಲಾ ರೈಲುಗಳ ಓಡಾಟಕ್ಕೆ ರೈಲ್ವೆ ಅಧಿಕಾರಿಗಳು ಅನುವು ಮಾಡಿಕೊಳ್ಳಲಿದ್ದಾರೆ.

    ಹೊಸದಾಗಿ ಟ್ರ್ಯಾಕ್ ಅಳವಡಿಸಿದ್ದು, ಸಂಪೂರ್ಣ ತೆರವು ಕಾರ್ಯಾಚರಣೆಯ ಬಳಿಕ ಎಂದಿನಂತೆ ರೈಲು ಸಂಚಾರ ಆರಂಭವಾಗಲಿದೆ. ಇನ್ನೂ 19 ಜನರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಚೆನ್ನೈ ನಗರದ ಸ್ಟ್ಯಾನ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮೂವರಿಗೆ ಚಿಕಿತ್ಸೆ ಮುಂದುವರೆದಿದೆ.

    ಕವರಪೆಟ್ಟೈ ಲೂಪ್ ಲೈನ್ ನಲ್ಲಿ ಕಳೆದ ಒಂದು ವಾರದಿಂದ ಗೂಡ್ಸ್ ರೈಲು ನಿಂತಿತ್ತು. ಭಾಗಮತಿ ಎಕ್ಸ್‌ಪ್ರೆಸ್ ಮುಖ್ಯ ಮಾರ್ಗದಲ್ಲಿ ಗುಡೂರು ಕಡೆಗೆ ತೆರಳಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದ್ರೆ ಅದು ತಪ್ಪಾಗಿ ಕವರಪೆಟ್ಟೈ ನಿಲ್ದಾಣದ ಲೂಪ್ ಲೈನ್ ಗೆ ಪ್ರವೇಶಿಸಿದೆ. ಇದೇ ಲೈನ್ ನಲ್ಲಿ ಗೂಡ್ಸ್ ರೈಲು ನಿಂತಿತ್ತು. ಈ ವೇಳೆ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ರೈಲ್ವೆ ಪಾಯಿಂಟ್ ತಪ್ಪಾಗಿ ಈ ಘಟನೆ ನಡೆದಿರೋದು ಮೇಲ್ನೋಟಕ್ಕೆ ತಿಳಿದಿದ್ದು, ರೈಲ್ವೆ ಅಧಿಕಾರಿಗಳು ಹಾಗೂ ಎನ್‍ಐಎ ಯಿಂದ ತನಿಖೆ ನಡೆಯುತ್ತಿದೆ.

  • ಸ್ವಚ್ಚ ರೈಲ್ವೆ ನಿಲ್ದಾಣಗಳ ಪಟ್ಟಿ ಪ್ರಕಟ: ವಿಶಾಖಪಟ್ಟಣ ಫಸ್ಟ್, ದರ್ಭಾಂಗ್ ಲಾಸ್ಟ್, ಬೆಂಗಳೂರು?

    ಸ್ವಚ್ಚ ರೈಲ್ವೆ ನಿಲ್ದಾಣಗಳ ಪಟ್ಟಿ ಪ್ರಕಟ: ವಿಶಾಖಪಟ್ಟಣ ಫಸ್ಟ್, ದರ್ಭಾಂಗ್ ಲಾಸ್ಟ್, ಬೆಂಗಳೂರು?

    ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣ ರೈಲು ನಿಲ್ದಾಣ ದೇಶದಲ್ಲೇ ಅತ್ಯಂತ ಸ್ವಚ್ಛ ರೈಲು ನಿಲ್ದಾಣ ಎಂಬ ಹೆಗ್ಗಳಿಕಗೆ ಪಾತ್ರವಾಗಿದ್ದರೆ, ಬಿಹಾರದ ದರ್ಭಂಗ್ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

    ದೇಶದ 407 ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿಯನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಪ್ರಕಟಿಸಿದ್ದಾರೆ. ನಮ್ಮ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣ ಪಟ್ಟಿಯಲ್ಲಿ 10ನೇ ಸ್ಥಾನವನ್ನು ಪಡೆದುಕೊಂಡಿದೆ. `ಎ’ ಕೆಟಗಿರಿಯಲ್ಲಿರುವ ರಾಜ್ಯದ ರಾಯಚೂರು ನಿಲ್ದಾಣ 66 ನೇ ಸ್ಥಾನದಲ್ಲಿದೆ. ಕಳೆದ ಬಾರಿ ಇದೇ ರಾಯಚೂರು ನಿಲ್ದಾಣ 330ನೇ ಸ್ಥಾನವನ್ನು ಹೊಂದಿತ್ತು.

    ಸ್ವಚ್ಛ ರೈಲು ಅಭಿಯಾನದ ಅಡಿಯಲ್ಲಿ ರೈಲ್ವೆ ಇಲಾಖೆ ದೇಶದ ಸ್ವಚ್ಛ ರೈಲು ನಿಲ್ದಾಣಗಳ ಸಮೀಕ್ಷೆ ನಡೆಸಲಾಗಿದೆ. ದೇಶಾದ್ಯಂತ ಅತಿ ಹೆಚ್ಚು ಕಾರ್ಯನಿರ್ವಹಿಸುವ 75 ರೈಲು ನಿಲ್ದಾಣಗಳ ಪೈಕಿ ವಿಶಾಖಪಟ್ಟಣ ರೈಲ್ವೆ ನಿಲ್ದಾಣ ಅತ್ಯಂತ ಸ್ವಚ್ಛ ರೈಲು ನಿಲ್ದಾಣವಾಗಿದ್ದು, ಸಿಕಂದರಾಬಾದ್ ಮತ್ತು ಜಮ್ಮು-ಕಾಶ್ಮೀರ ರೈಲು ನಿಲ್ದಾಣ ಕ್ರಮವಾಗಿ 2 ಮತ್ತು 3ನೇ ಸ್ಥಾನವನ್ನು ಪಡೆದಿವೆ.

    ರೈಲ್ವೆ ನಿಲ್ದಾಣಗಳನ್ನು ಎ1, ಎ, ಬಿ, ಸಿ., ಡಿ, ಇ ಮತ್ತು ಎಫ್ ಎಂದು ವರ್ಗಿಕರಿಸಲಾಗಿದೆ. ವಾರ್ಷಿಕವಾಗಿ 50 ಕೋಟಿ ರೂ. ಗಳಿಸುವ ನಿಲ್ದಾಣಗಳು ಎ1 ವಿಭಾಗದಲ್ಲಿ ಬರುತ್ತವೆ. ವಾರ್ಷಿಕವಾಗಿ 6 ರಿಂದ 50 ಕೋಟಿ ರೂ. ಗಳಿಸುವ ನಿಲ್ದಾಣಗಳು `ಎ’ ವಿಭಾಗದಲ್ಲಿ ಸೇರ್ಪಡೆಯಾಗುತ್ತವೆ. ಇನ್ನು ಉಳಿದ ಸಬ್ ಅರ್ಬನ್ ರೈಲ್ವೆ ನಿಲ್ದಾಣಗಳು `ಸಿ’ ವಿಭಾಗದಲ್ಲಿ ಬರುತ್ತವೆ. ಉಳಿದ ಹಾಲ್ಟ್ ಸ್ಟೇಶ್‍ನ್‍ಗಳು `ಎಫ್’ ವಿಭಾಗದಲ್ಲಿ ಸೇರುತ್ತದೆ.

    ಒಟ್ಟು 75 ರೈಲು ನಿಲ್ದಾಣಗಳು `ಎ1′ ವರ್ಗದಲ್ಲಿವೆ. 332 ರೈಲು ನಿಲ್ದಾಣಗಳು `ಎ’ ವಿಭಾಗದಲ್ಲಿ ಬರುತ್ತವೆ. ಈ 332 ನಿಲ್ದಾಣಗಳಲ್ಲಿ ಪಂಜಾಬ್ ರಾಜ್ಯದ ಬಿಯಾಸ್ ರೈಲು ನಿಲ್ದಾಣ ಸ್ವಚ್ಛತೆಯಲ್ಲಿ ಮೊದಲ ಸ್ಥಾನದಲ್ಲಿದೆ. ಬಿಹಾರ ರಾಜ್ಯದ ಜೊಗ್ಬನಿ ನಿಲ್ದಾಣ ಕೊನೆಯ ಸ್ಥಾನದಲ್ಲಿದೆ.