Tag: Danushka Gunathilaka

  • ಅತ್ಯಾಚಾರ ಆರೋಪಿ ದನುಷ್ಕಗೆ ಜಾಮೀನು – 1 ಕೋಟಿ ರೂ. ಠೇವಣಿ ಇಟ್ಟು ಸಿಡ್ನಿ ಜೈಲಿನಿಂದ ಬಿಡುಗಡೆ

    ಅತ್ಯಾಚಾರ ಆರೋಪಿ ದನುಷ್ಕಗೆ ಜಾಮೀನು – 1 ಕೋಟಿ ರೂ. ಠೇವಣಿ ಇಟ್ಟು ಸಿಡ್ನಿ ಜೈಲಿನಿಂದ ಬಿಡುಗಡೆ

    ಸಿಡ್ನಿ: ಅತ್ಯಾಚಾರ ಆರೋಪದಿಂದಾಗಿ ಸಿಡ್ನಿ ಜೈಲು ಸೇರಿದ್ದ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ (Danushka Gunathilaka)  ಅವರಿಗೆ 11 ದಿನಗಳ ಬಳಿಕ ಸಿಡ್ನಿ (Sydney)  ನ್ಯಾಯಾಲಯ ಷರತ್ತುಬದ್ಧ ಜಾಮೀನು (Bail) ಮಂಜೂರು ಮಾಡಿದೆ.

    ಶ್ರೀಲಂಕಾದ ಟಿ20 ವಿಶ್ವಕಪ್ ತಂಡದಲ್ಲಿದ್ದ (T20 World Cup)  ಗುಣತಿಲಕ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. ಅವರ ಬದಲಿಗೆ ಬೇರೆ ಆಟಗಾರನನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಆದರೆ ನಂತರ ಟೀಮ್ ಮ್ಯಾನೇಜ್ ಮೆಂಟ್ ಸಲಹೆ ಮೇರೆಗೆ ಗುಣತಿಲಕ ಆಸ್ಟ್ರೇಲಿಯಾದಲ್ಲೇ ಉಳಿದುಕೊಂಡಿದ್ದರು. ಈ ವೇಳೆ ದನುಷ್ಕ ಗುಣತಿಲಕ ಅವರನ್ನು ಡೇಟಿಂಗ್ ಆ್ಯಪ್ ಮೂಲಕ ಭೇಟಿಯಾದ 29 ವರ್ಷದ ಮಹಿಳೆ, ಅತ್ಯಾಚಾರದ ಆರೋಪ ಹೊರಿಸಿದ್ದರು. ನಂತರ ನವೆಂಬರ್ 6 ರಂದು ಸಿಡ್ನಿಯ ಸಸೆಕ್ಸ್ ಸ್ಟ್ರೀಟ್ ಹೋಟೆಲ್‍ನಿಂದ ಪೊಲೀಸರು ಗುಣತಿಲಕರನ್ನು ಬಂಧಿಸಿದ್ದರು. ಇದನ್ನೂ ಓದಿ: ಇಂಡಿಯಾ, ನ್ಯೂಜಿಲೆಂಡ್ ಕ್ರಿಕೆಟ್ ಸರಣಿ – ಡಿ.ಡಿ ಸ್ಪೋರ್ಟ್ಸ್‌ನಲ್ಲಿ ಮಾತ್ರ ನೇರ ಪ್ರಸಾರ

    ಬಂಧನದ ನಂತರ ಅವರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಸಿಡ್ನಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಕೋರ್ಟ್ ಜಾಮೀನು ನಿರಾಕರಿಸಿತ್ತು. ಇದರಿಂದ ದನುಷ್ಕ ಗುಣತಿಲಕ 11 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದರು. ಇಂದು ಸಿಡ್ನಿಯ ಸ್ಥಳೀಯ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸಹಕಾರದೊಂದಿಗೆ ಜಾಮೀನು ಮಂಜೂರಾಗಿದ್ದು ಸಿಡ್ನಿ ನ್ಯಾಯಾಲಯ 1 ಕೋಟಿ ರೂ. ಠೇವಣಿ ಇಟ್ಟು ಜಾಮೀನು ನೀಡಿದ್ದು, ಜೊತೆಗೆ ಟಿಂಡರ್ ಸೇರಿದಂತೆ ಯಾವುದೇ ಇತರ ಡೇಟಿಂಗ್ ಅಪ್ಲಿಕೇಶನ್‍ಗಳನ್ನು ಬಳಸದಿರುವಂತೆ ಷರತ್ತು ವಿಧಿಸಿದೆ. ಪ್ರತಿದಿನ 2 ಬಾರಿ ವೀಡಿಯೋ ಕಾನ್ಫರೆನ್ಸ್ ಮೂಲಕ ಪಾಸ್‍ಪೋರ್ಟ್‍ನೊಂದಿಗೆ ಸಿಡ್ನಿ ಪೊಲೀಸ್ ಠಾಣೆಗೆ ಗುಣತಿಲಕ ಹಾಜರಾಗಬೇಕು. ಮತ್ತು ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಮನೆಯಿಂದ ಹೊರ ಹೋಗದಂತೆ ನಿಷೇಧ ಹೇರಿದೆ. ಇದನ್ನೂ ಓದಿ: ಅತ್ಯಾಚಾರ ಆರೋಪ – ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದನುಷ್ಕ ಅಮಾನತು

    ಜೀವಾವಧಿ ಶಿಕ್ಷೆಯ ತೂಗುಗತ್ತಿ:
    ಗುಣತಿಲಕ ಮೇಲೆ ಮಹಿಳೆ ಮಾಡಿದ್ದ ಆರೋಪವೇನಾದರೂ ಸಾಭೀತಾಗಿದ್ದರೆ, ಆಸ್ಟ್ರೇಲಿಯಾದ ಕಾನೂನಿನ ಪ್ರಕಾರ ಜೀವಾವಧಿ ಶಿಕ್ಷೆ ಖಚಿತವಾಗುತ್ತಿತ್ತು. ಆದರೆ ಇದೀಗ ನ್ಯಾಯಾಲಯ ಜಾಮೀನು ನೀಡಿದೆ. ಆರೋಪ ಸಾಭೀತಾದರೆ ಮುಂದಿನ ಕ್ರಮದ ಬಗ್ಗೆ ಸಾಕಷ್ಟು ಕುತೂಹಲವಿದೆ. ಗುಣತಿಲಕರನ್ನು ಈಗಾಗಲೇ ಶ್ರೀಲಂಕಾ ಕ್ರಿಕೆಟ್‌ ಬೋರ್ಡ್‌ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದಲೂ ಅಮಾನತುಗೊಳಿಸಿದೆ. ಇದನ್ನೂ ಓದಿ: ರಿಟೈನ್ ಪಟ್ಟಿಯಲ್ಲಿ RCB ಗೇಮ್ ಪ್ಲಾನ್ – 10 ತಂಡಗಳ ರಿಟೈನ್-ರಿಲೀಸ್‌ ಲಿಸ್ಟ್

    Live Tv
    [brid partner=56869869 player=32851 video=960834 autoplay=true]

  • ಅತ್ಯಾಚಾರ ಆರೋಪ – ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದನುಷ್ಕ ಅಮಾನತು

    ಅತ್ಯಾಚಾರ ಆರೋಪ – ಎಲ್ಲ ಮಾದರಿಯ ಕ್ರಿಕೆಟ್‌ನಿಂದ ದನುಷ್ಕ ಅಮಾನತು

    ಕೊಲಂಬೊ: ಅತ್ಯಾಚಾರ ಆರೋಪ ಕೇಳಿಬಂದಿರುವ ಶ್ರೀಲಂಕಾ ಕ್ರಿಕೆಟಿಗ (Sri Lankan Cricketer) ದನುಷ್ಕ ಗುಣತಿಲಕ (Danushka Gunathilaka) ಅವರನ್ನ ಎಲ್ಲ ಮಾದರಿಯ ಕ್ರಿಕೆಟ್‌ನಿಂದಲೂ ಅಮಾನತುಗೊಳಿಸಲು ಶ್ರೀಲಂಕಾ ಕ್ರಿಕೆಟ್ (Sri Lanka Cricket) ಮಂಡಳಿಯ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.

    ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸಿಡ್ನಿ ಪೊಲೀಸರು (Sydney Police) ಬಂಧಿಸಿದ ಒಂದು ದಿನದ ನಂತರ ಲಂಕಾ ಕ್ರಿಕೆಟ್ ಮಂಡಳಿ ಈ ತೀರ್ಮಾನ ಕೈಗೊಂಡಿರುವುದಾಗಿ ತಿಳಿಸಿದೆ. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಟಿಪ್ಪು ಜಯಂತಿಗೆ ಅವಕಾಶ ಕೇಳಿದ್ದ ಬೆನ್ನಲ್ಲೇ ಇದೀಗ ಕನಕದಾಸ ಜಯಂತಿಗೂ ಮನವಿ

    ಸದ್ಯಕ್ಕೆ ಅವರನ್ನು ಅಮಾನತು ಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಮುಕ್ತಾಯದ ನಂತರ ಅವರು ತಪ್ಪಿತಸ್ಥರೆಂದು ಕಂಡುಬಂದಲ್ಲಿ, ದನುಷ್ಕಗೆ ದಂಡ ವಿಧಿಸುವ ಕ್ರಮ ತೆಗೆದುಕೊಳ್ಳಲಾಗುತ್ತದೆ. ಅಲ್ಲದೇ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಆಸ್ಟ್ರೇಲಿಯಾದ (Australia) ಕಾನೂನು ಅಧಿಕಾರಿಗಳಿಗೆ ಅಗತ್ಯ ಬೆಂಬಲ ನೀಡುತ್ತದೆ ಎಂದು ಲಂಕಾ ಕ್ರಿಕೆಟ್ ಮಂಡಳಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: RTPSನಲ್ಲಿ ಅಗ್ನಿ ಅವಘಡ – 25ಕ್ಕೂ ಹೆಚ್ಚು ಕ್ಯಾರಿಂಗ್ ರೋಲರ್‌ಗಳು ಬೆಂಕಿಗಾಹುತಿ

    ಏನಿದು ಪ್ರಕರಣ?
    ಟಿ20 ವಿಶ್ವಕಪ್‌ನ (T20 WorldCup) ಶ್ರೀಲಂಕಾದ ತಂಡದಲ್ಲಿದ್ದ ಕ್ರಿಕೆಟಿಗ ದನುಷ್ಕಾ ಗುಣತಿಲಕ (31) ಅವರನ್ನು ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿದೆ. ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ (Aating App) ಹಲವು ದಿನಗಳ ಹಿಂದೆ ಮಹಿಳೆಯ ಪರಿಚಯವಾಗಿದ್ದು, ನವೆಂಬರ್ 2 ರಂದು ಅವರಿಬ್ಬರು ಭೇಟಿಯಾದ ವೇಳೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುಣತಿಲಕ ಅವರನ್ನು ಬಂಧಿಸಿ ಸಿಡ್ನಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

    2015 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಗುಣತಿಲಕ, ಪ್ರಸ್ತುತ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಟೂರ್ನಿಯಲ್ಲಿ ಇಂಗ್ಲೆಂಡ್ ಎದುರು ಕೊನೆ ಪಂದ್ಯವಾಡಿ ಸೋತು ಲಂಕಾ ತಂಡ ತವರಿಗೆ ಮರಳಿದೆ.

    Live Tv
    [brid partner=56869869 player=32851 video=960834 autoplay=true]

  • ಅತ್ಯಾಚಾರ ಆರೋಪ – ಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಸಿಡ್ನಿಯಲ್ಲಿ ಬಂಧನ

    ಅತ್ಯಾಚಾರ ಆರೋಪ – ಲಂಕಾ ಕ್ರಿಕೆಟಿಗ ದನುಷ್ಕಾ ಗುಣತಿಲಕ ಸಿಡ್ನಿಯಲ್ಲಿ ಬಂಧನ

    ಕ್ಯಾನ್‌ಬೆರಾ: ಟಿ20 ವಿಶ್ವಕಪ್‌ನ (T20 World) ಶ್ರೀಲಂಕಾದ (Sri Lanka) ತಂಡದಲ್ಲಿರುವ ಕ್ರಿಕೆಟಿಗ (Cricketer) ದನುಷ್ಕಾ ಗುಣತಿಲಕ (Danushka Gunathilaka) ಅವರನ್ನು ಲೈಂಗಿಕ ದೌರ್ಜನ್ಯದ (Sexual Assault) ಆರೋಪದ ಮೇಲೆ ಆಸ್ಟ್ರೇಲಿಯಾದಲ್ಲಿ (Australia) ಬಂಧಿಸಲಾಗಿದೆ ಎಂದು ಮೂಲಗಳು ಭಾನುವಾರ ತಿಳಿಸಿದೆ.

    ನವೆಂಬರ್ 2 ರಂದು ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ತನಿಖೆಯ ಬಳಿಕ ಗುಣತಿಲಕ (31) ಅವರನ್ನು ಇಂದು ಮುಂಜಾನೆ ಬಂಧಿಸಿ, ಸಿಡ್ನಿ (Sydney) ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

    ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡ ಸೋತಿದ್ದು, ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಅತ್ಯಾಚಾರದ ಆರೋಪದಡಿ ಲಂಕಾದ ಕ್ರಿಕೆಟಿಗ ದನುಷ್ಕಾ ಗುಣತಿಲಕ ಅವರನ್ನು ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿದೆ. ಇದೀಗ ಶ್ರೀಲಂಕಾದ ತಂಡ ಗುಣತಿಲಕ ಅವರನ್ನು ಬಿಟ್ಟು, ಆಸ್ಟ್ರೇಲಿಯಾವನ್ನು ತೊರೆದಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಲಂಕಾ ವಿರುದ್ಧ ಜಯ – ಆಸ್ಟ್ರೇಲಿಯಾವನ್ನು ಹೊರದಬ್ಬಿ ಸೆಮಿಸ್‍ಗೆ ಎಂಟ್ರಿಕೊಟ್ಟ ಇಂಗ್ಲೆಂಡ್

    ವರದಿಗಳ ಪ್ರಕಾರ ಸಿಡ್ನಿಯ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದ ಮೇಲೆ ಗುಣತಿಲಕ ಅವರನ್ನು ಬಂಧಿಸಲಾಗಿದೆ. ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ಹಲವು ದಿನಗಳ ಹಿಂದೆ ಇಬ್ಬರ ಪರಿಚಯವಾಗಿದ್ದು, ನವೆಂಬರ್ 2 ರಂದು ಅವರಿಬ್ಬರು ಭೇಟಿಯಾದ ವೇಳೆ ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಇದನ್ನೂ ಓದಿ: ಭಾರತ-ಜಿಂಬಾಬ್ವೆ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಅವಕಾಶ? – ಸೆಮಿಸ್ ಲೆಕ್ಕಾಚಾರ ಹೀಗಿದೆ

    Live Tv
    [brid partner=56869869 player=32851 video=960834 autoplay=true]

  • ಕ್ಷೇತ್ರ ರಕ್ಷಣೆಗೆ ಅಡ್ಡಿ, ಗುಣತಿಲಕ ಔಟ್‌ – ವಿಂಡೀಸ್‌ ವಿರುದ್ಧ ಅಭಿಮಾನಿಗಳ ಕಿಡಿ

    ಕ್ಷೇತ್ರ ರಕ್ಷಣೆಗೆ ಅಡ್ಡಿ, ಗುಣತಿಲಕ ಔಟ್‌ – ವಿಂಡೀಸ್‌ ವಿರುದ್ಧ ಅಭಿಮಾನಿಗಳ ಕಿಡಿ

    – ವಿವಾದಕ್ಕೆ ಕಾರಣವಾದ ಔಟ್‌ ನಿರ್ಧಾರ
    – ಗುಣತಿಲಕ ಬಳಿ ಕ್ಷಮೆ ಕೇಳಿದ ಪೊಲಾರ್ಡ್‌

    ಆ್ಯಂಟಿಗುವಾ: ವೆಸ್ಟ್‌ಇಂಡೀಸ್‌ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್ ಧನುಷ್ಕಾ ಗುಣತಿಲಕ ಔಟ್‌ ನಿರ್ಧಾರ ಈಗ ವಿವಾದಕ್ಕೆ ಕಾರಣವಾಗಿದೆ.

    ನಡೆದಿದ್ದು ಏನು?
    ಕೀರಾನ್ ಪೊಲಾರ್ಡ್ ಎಸೆದ ಇನ್ನಿಂಗ್ಸ್‌ನ 22ನೇ ಓವರ್‌ನ ಮೊದಲ ಎಸೆತದಲ್ಲಿ ಗುಣತಿಲಕ ಒಂಟಿ ರನ್ ಕಸಿಯಲು ಮುಂದಾಗಿದ್ದರು. ಈ ವೇಳೆ ಪೊಲಾರ್ಡ್‌ ವೇಗವಾಗಿ ಬಾಲ್‌ ಹಿಡಿಯಲು ಮುಂದಕ್ಕೆ ಬರುತ್ತಿದ್ದರು. ಪೊಲಾರ್ಡ್‌ ಬರುತ್ತಿರುವುದನ್ನು ಗಮನಿಸಿದ ಗುಣತಿಲಕ ಒಂದು ರನ್‌ ಓಡುವ ನಿರ್ಧಾರದಿಂದ ಹಿಂದಕ್ಕೆ ಸರಿದು ಮರಳಿ ಸ್ಟ್ರೈಕ್‌ನತ್ತ ಹಿಂದಕ್ಕೆ ಓಡಿದ್ದಾರೆ. ಓಡುವ ಸಂದರ್ಭದಲ್ಲಿ ಗುಣತಿಲಕ ಚೆಂಡಿನ ಮೇಲೆ ಕಾಲಿಟ್ಟಿದ್ದಾರೆ. ಕಾಲಿನ ಹಿಂಬದಿಗೆ ತಾಗಿದ ಚೆಂಡು ಕೀಪರ್‌ನತ್ತ ಸಾಗಿದೆ.

    https://twitter.com/ImKanup/status/1370085333530857472

    ಬಾಲ್‌ ಹಿಡಿಯಲು ಗುಣತಿಲಕ ಅಡ್ಡಿಯಾದ ಕಾರಣ ರನೌಟ್‌ ಪ್ರಯತ್ನ ವಿಫಲಗೊಂಡಿತು. ಇದರಿಂದ ಸಿಟ್ಟಾದ ಪೊಲಾರ್ಡ್‌ ಕ್ಷೇತ್ರ ರಕ್ಷಣೆಗೆ ಅಡ್ಡಿ ಪಡಿಸಿದ ಕಾರಣ ನೀಡಿ ಅಂಪೈರ್‌ ಬಳಿ ಔಟ್‌ ನೀಡಲು ಮನವಿ ಮಾಡಿದರು.

    ಫೀಲ್ಡ್‌ ಅಂಪೈರ್‌ ಜೋ ವಿಲ್ಸನ್‌ ಮೂರನೇ ಅಂಪೈರ್‌ಗೆ ತೀರ್ಪನ್ನು ನೀಡುವ ಮೊದಲು ಸಾಫ್ಟ್‌ ಸಿಗ್ನಲ್‌ ಔಟ್‌ಎಂದು ತೀರ್ಪು ನೀಡಿದ್ದರು. ರಿಪ್ಲೇ ವೇಳೆ ಗುಣತಿಲಕ ಉದ್ದೇಶಪೂರ್ವಕವಾಗಿ ಚೆಂಡಿಗೆ ಅಡ್ಡಿ ಪಡಿಸಿರುವುದು ಸ್ಪಷ್ಟವಾಗಿ ಕಾಣದೇ ಇದ್ದರೂ ಫೀಲ್ಡ್‌ ಅಂಪೈರ್‌ ಔಟ್‌ ತೀರ್ಮಾನ ನೀಡಿದ ಹಿನ್ನೆಲೆಯಲ್ಲಿ ಮೂರನೇ ಅಂಪೈರ್‌ ಔಟ್‌ ಎಂದು ತೀರ್ಪು ನೀಡಿದರು.

    ಉದ್ದೇಶಪೂರ್ವಕವಾಗಿ ಯಾವುದೇ ತಪ್ಪು ಎಸಗದಿದ್ದರೂ ಫೀಲ್ಡಿಂಗ್‌ಗೆ‌ ಅಡ್ಡಿಯಾಗಿದ್ದಾರೆ ಎಂಬ ಐಸಿಸಿ ನಿಯಮದನ್ವಯ ಅಂಪೈರ್ ಔಟ್ ತೀರ್ಪು ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಮಹತ್ವದ ಪಂದ್ಯದಲ್ಲಿ ಅಂಪೈರ್‌ಗಳಿಂದ ಈ ರೀತಿಯ ತೀರ್ಪುಗಳು ಪ್ರಕಟವಾದರೆ ಗೆಲ್ಲುವ ತಂಡ ಸೋಲಬಹುದು ಎಂದು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಂಡೀಸ್‌ ಆಟಗಾರರು ಕ್ರೀಡಾ ಸ್ಪೂರ್ತಿ ಮರೆತು ಆಡಿದ್ದಾರೆ ಎಂದು ಕ್ರಿಕೆಟ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    https://twitter.com/ShuvoAlHossain/status/1370076093613404160

    ಕ್ಷಮೆಯಾಚಿಸಿದ ಪೊಲಾರ್ಡ್‌: ಪಂದ್ಯ ಮುಗಿದ ಬಳಿಕ ಪೊಲಾರ್ಡ್‌ ಧನುಷ್ಕಾ ಗುಣತಿಲಕ ಅವರ ಬಳಿ ಕ್ಷಮೆಯಾಚಿಸಿದ್ದಾರೆ. ಪಂದ್ಯ ನಡೆಯುವಾಗ ಈ ವಿಚಾರ ತಿಳಿದಿರಲಿಲ್ಲ. ರಿಪ್ಲೇ ನೋಡುವಾಗ ನೋಡಿದ ಬಳಿಕವಷ್ಟೇ ನಾನು ಅಡ್ಡಿ ಮಾಡಿಲ್ಲ ಎನ್ನುವುದು ಅವರ ಗಮನಕ್ಕೆ ಬಂದಿದೆ ಎಂದು ಗುಣತಿಲಕ ಹೇಳಿದ್ದಾರೆ.

    ವಿಂಡೀಸ್‌ಗೆ ಜಯ : ವಿಂಡೀಸ್ ಮೊದಲ ಏಕದಿನ ಪಂದ್ಯದಲ್ಲಿ ಎಂಟು ವಿಕೆಟ್ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 49 ಓವರ್‌ಗಳಲ್ಲಿ 232 ರನ್‌ಗಳಿಗೆ ಆಲೌಟ್‌ ಆಗಿತ್ತು. ಆರಂಭಿಕ ಆಟಗಾರ ಶಾಯ್‌ ಹೋಪ್‌ ಅವರ 110 ರನ್‌ಗಳ ನೆರವಿನಿಂದ ವಿಂಡೀಸ್‌ 2 ವಿಕೆಟ್‌ ನಷ್ಟಕ್ಕೆ 236 ರನ್‌ ಹೊಡೆದು ಜಯಗಳಿಸಿತು.