Tag: Danish Sait

  • ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ಹೂಂ ಅಂತೀಯಾ: ಕನ್ನಡದಲ್ಲಿ ಸೊಗಸಾಗಿ ಹಾಡಿದ ಪಡಿಕ್ಕಲ್‌

    ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ.. ಹೂಂ ಅಂತೀಯಾ: ಕನ್ನಡದಲ್ಲಿ ಸೊಗಸಾಗಿ ಹಾಡಿದ ಪಡಿಕ್ಕಲ್‌

    – ಬೆಂಗಳೂರು ಮನೆ, ವಾಪಸ್‌ ಬಂದಿದ್ದಕ್ಕೆ ಖುಷಿ ಇದೆ ಎಂದ ಕನ್ನಡಿಗ

    ಬೆಂಗಳೂರು: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಗುಜರಾತ್‌ ಟೈಟಾನ್ಸ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಈ ಹಿನ್ನೆಲೆಯಲ್ಲಿ ನಟ, ರೇಡಿಯೋ ಜಾಕಿ ಡ್ಯಾನಿಷ್‌ ಸೇಟ್‌ ಅವರು ಆರ್‌ಸಿಬಿ ತಂಡದ ಆಟಗಾರ ದೇವದತ್‌ ಪಡಿಕ್ಕಲ್‌ ಸಂದರ್ಶನ ಮಾಡಿದ್ದಾರೆ. ಕನ್ನಡಿಗನಾದ ಪಡಿಕ್ಕಲ್‌ ಕನ್ನಡವನ್ನು ಸೊಗಸಾಗಿ ಮಾತನಾಡಿದ್ದಾರೆ.

    ಆರ್‌ಸಿಬಿ ಇನ್‌ಸೈಡ್‌ ಶೋನಲ್ಲಿ ಪಡಿಕ್ಕಲ್‌ ಅವರನ್ನು ‘ಡಿಡಿಪಿ’ ಎಂದು ಸೇಟ್‌ ಪರಿಚಯಿಸುತ್ತಾರೆ. ಕನ್ನಡದಲ್ಲೇ ಪ್ರಶ್ನೆಗಳನ್ನು ಕೇಳುತ್ತಾರೆ. ‘ಹೇಗಿತ್ತಪ್ಪ ನಾರ್ಥ್‌ ಇಂಡಿಯಾ ಟೂರ್‌’ ಎಂದು ಕೇಳ್ತಾರೆ. ಅದಕ್ಕೆ ಪಡಿಕ್ಕಲ್‌, ‘ತುಂಬಾ ಚೆನ್ನಾಗಿತ್ತು. ಬೆಂಗಳೂರು ನನ್ನ ಮನೆ. ವಾಪಸ್‌ ಬಂದಿದ್ದಕ್ಕೆ ತುಂಬಾ ಖುಷಿಯಾಗಿದೆ’ ಎಂದು ಕನ್ನಡದಲ್ಲೇ ಹೇಳ್ತಾರೆ.

    ಮೊದಲು ನೀನು ಯೂತ್‌ಫುಲ್‌ ರೀತಿ ಮಾತಾಡ್ತಿದ್ದೆ. ಈಗ ಹರ್ಷ ಬೋಗ್ಲೆ ಥರ ಮಾತಾಡ್ತಿದ್ದೀಯಾ ಅಂತ ಕೇಳಿದಾಗ, ‘ಮತ್ತೆ ಹೆಂಗೆ ಮಾತಾಡ್ಬೇಕು’ ಅಂತ ಕನ್ನಡದಲ್ಲೇ ಪಡಿಕ್ಕಲ್‌ ಮರುಪ್ರಶ್ನೆ ಹಾಕ್ತಾರೆ. ಸ್ವಲ್ಪ ಜಾಲಿ ಆಗಿರು ಎಂದಾಗ, ‘ನಿಮ್‌ ಹತ್ರ ಜಾಲಿಯಾಗಿರೋಕೆ ಸ್ವಲ್ಪ ಕಷ್ಟ ಇದೆ’ ಅಂತ ಪಡಿಕ್ಕಲ್‌ ಉತ್ತರಿಸುತ್ತಾರೆ.

    ಇನ್‌ಸ್ಟಾದಲ್ಲಿ ಕೊರಿಯನ್ಸ್‌ ರೀತಿ ಸ್ಟೈಲ್‌ ಮಾಡ್ತಿದ್ದೀಯಾ ಎಂದು ಕೇಳಿದಾಗ, ‘ಅದೇ ತಾನೆ ಟ್ರೆಂಡ್‌ ಈಗ’ ಎಂದು ಪಡಿಕ್ಕಲ್‌ ಉತ್ತರಿಸುತ್ತಾರೆ.

    ಯುಗಾದಿ, ದೀಪಾವಳಿಗೆ ನಾರ್ಮಲ್‌ ಆಗಿ ವಿಶ್‌ ಮಾಡ್ತೀಯಾ. ಅಂತಾರಾಷ್ಟ್ರೀಯ ವಿಶೇಷ ದಿನಗಳಿಗೆ ವಿಶ್‌ ಮಾಡು ಎಂದಾಗ, ‘ವಿಶ್ವ ಕಪ್‌ ಕೇಕ್‌ ದಿನ.. ವಿಶ್ವ ಶೌಚಾಲಯದ ದಿನ.. ವಿಶ್ವ ಮೊಟ್ಟೆ ದಿನ’ಕ್ಕೆ ಕನ್ನಡದಲ್ಲೇ ವಿಶ್‌ ಮಾಡಿ ಪಡಿಕ್ಕಲ್‌ ಗಮನ ಸೆಳೆದಿದ್ದಾರೆ.

    ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಹಾಡನ್ನು ಮಾರ್ಪಡಿಸಿ, ಆರ್‌ಸಿಬಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ ಎಂದು ಸೇಟ್‌ ಹಾಡುತ್ತಾರೆ. ಅದಕ್ಕೆ ಹೂಂ ಅಂತೀಯಾ.. ಎಂದು ಪಡಿಕ್ಕಲ್‌ ದನಿಗೂಡಿಸುತ್ತಾರೆ. ಸಂದರ್ಶನವು ಫನ್‌ ಆಗಿ ಸಾಗುತ್ತದೆ.

  • ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಜೊತೆ ಕನ್ನಡಿಗ ಡ್ಯಾನಿಶ್ ನಟನೆ

    ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಜೊತೆ ಕನ್ನಡಿಗ ಡ್ಯಾನಿಶ್ ನಟನೆ

    ಹಂಬಲ್ ಪೊಲಿಟಿಷಿಯನ್ ನೊಗರಾಜ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಿತನಾದ ನಟ ಡ್ಯಾನಿಶ್ ಸೇಠ್ (Danish Sait) ಮೊನ್ನೆಯಷ್ಟೇ ಮತ್ತೊಂದು ಕನ್ನಡ ಚಿತ್ರವನ್ನು ಒಪ್ಪಿಕೊಂಡು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಇದೀಗ ಮತ್ತೊಂದು ಖುಷಿ ಸುದ್ದಿಯನ್ನು ಅವರು ಹಂಚಿಕೊಂಡಿದ್ದಾರೆ. ಮಲಯಾಳಂ (Malayalam) ಖ್ಯಾತ ನಟ ಮೋಹನ್ ಲಾಲ್ (Mohanlal) ಜೊತೆ ಅವರು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರಂತೆ.

    ಸದ್ಯ ಮೋಹನ್ ಲಾಲ್ ಅವರು ಮಲೈಕೋಟಿ ವಾಲಿಬಾನ್ (Malaikoti Valiban) ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಡ್ಯಾನಿಶ್ ಹೊಸ ಬಗೆಯ ಪಾತ್ರವನ್ನು ಮಾಡುತ್ತಿದ್ದಾರೆ. ಇಂಥದ್ದೊಂದು ಪಾತ್ರ ನನಗೆ ಸಿಕ್ಕಿದ್ದು ಅದೃಷ್ಟ ಎಂದು ಅವರು ಹೇಳಿಕೊಂಡಿದ್ದಾರೆ. ತುಂಬಾ ಗೌರವದಿಂದ ಆ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಅಶು ರೆಡ್ಡಿದು ಒಂದು ಗೋಳಾದರೆ, ನೀನಾದ್ದು ಮತ್ತೊಂದು ಸಂಕಟ

    ಮಲಯಾಳಂನಲ್ಲಿ ಮಾತ್ರವಲ್ಲ ಕನ್ನಡದಲ್ಲೂ ಡ್ಯಾನಿಶ್ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ‘ಕಿರಿಕ್ et11’ ಎಂದು ಹೆಸರಿಡಲಾಗಿದೆ. ಒಂದಷ್ಟು ಯುವಕರು ಯಾವುದೇ ರೀತಿಯಲ್ಲೂ ಅದೃಷ್ಟ ದೇವತೆ ಒಲಿಯದೆ ಇದ್ದಾಗ ಇಡೀ ದೇಶ ಅತ್ಯಂತ ಹುಮ್ಮಸ್ಸಿನಿಂದ ಆಡುವ, ನೋಡುವ ಕ್ರಿಕೆಟ್ ನಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗುತ್ತಾರೆ ಇಂತಹ ಕಥೆಯನ್ನು ಸಿನಿಮಾ ಹೊಂದಿದೆಯಂತೆ.

     

    ಡ್ಯಾನಿಶ್ ಜೊತೆ ನವೀನ್  ಶಂಕರ್ ಕೂಡ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಮನೋಜ್ ಕುಮಾರ್ ಕಾಲಾವನನ್ ಕಥೆ ಹೆಣೆದಿದ್ದರೆ, ಸುಮನ್ ಕುಮಾರ್ ಅವರು ನಿರ್ದೇಶಿಸಲಿದ್ದಾರೆ. ಸುಮನ್ ಕುಮಾರ್ ಅವರು ಈ ಹಿಂದೆ ರಘುತಾತ ಚಿತ್ರವನ್ನು ನಿರ್ದೇಶಿಸಿದ್ದು , ವೆಬ್ ಸೀರಿಸ್ ಲೋಕದಲ್ಲಿ ಬಹಳ ಜನಪ್ರಿಯ ಆಗಿರುವ The Family Man ಮತ್ತು Farzi ಯ ಕಥೆಯನ್ನು ಹೆಣೆದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನವೀನ್-ದಾನಿಶ್ ಕಾಂಬಿನೇಷನ್ ಚಿತ್ರ ಘೋಷಿಸಿದ ಕೆ.ಆರ್.ಜಿ ಸ್ಟುಡಿಯೋಸ್

    ನವೀನ್-ದಾನಿಶ್ ಕಾಂಬಿನೇಷನ್ ಚಿತ್ರ ಘೋಷಿಸಿದ ಕೆ.ಆರ್.ಜಿ ಸ್ಟುಡಿಯೋಸ್

    ಮೊನ್ನೆಯಷ್ಟೇ ಇಂದು ಹೊಸ ಸುದ್ದಿಯನ್ನು ಕೊಡುವುದಾಗಿ ಕೆಆರ್.ಜಿ ಸ್ಟುಡಿಯೋಸ್ (K.R.G ) ಘೋಷಣೆ ಮಾಡಿತ್ತು. ಅದು ಹೇಳಿಕೊಂಡಂತೆ ಇಂದು ಹೊಸ ಚಿತ್ರವೊಂದನ್ನು ಘೋಷಣೆ ಮಾಡಿದೆ. ಈ ಸಿನಿಮಾದಲ್ಲಿ ವಿಶೇಷ ತಾರಾಗಣವೇ ಇರಲಿದೆ. ಚಿತ್ರಕ್ಕೆ ಕಿರಿಕ್ ‘ಇಟಿ’1  (Kirik ET 1) ಎಂದು ಹೆಸರಿಡಲಾಗಿದೆ.

    ಕಿರಿಕ್ ‘et’ 11 ಚಿತ್ರ ಒಂದು ನಗೆ ಹಬ್ಬವಾಗಿ ತಯಾರಾಗಲಿದೆ. ಒಂದಷ್ಟು ಯುವಕರು ಯಾವುದೇ ರೀತಿಯಲ್ಲೂ ಅದೃಷ್ಟ ದೇವತೆ ಒಲಿಯದೆ ಇದ್ದಾಗ ಇಡೀ ದೇಶ ಅತ್ಯಂತ ಹುಮ್ಮಸ್ಸಿನಿಂದ ಆಡುವ, ನೋಡುವ ಕ್ರಿಕೆಟ್ ನಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗುತ್ತಾರೆ. ಮುಂದೆ ಅವರು ಭವಿಷ್ಯ ಏನಾಗಲಿದೆ ಎನ್ನುವುದೇ ಸಿನಿಮಾವಂತೆ.

    ಗುಳ್ಟು ಖ್ಯಾತಿಯ ನವೀನ್  ಶಂಕರ್ (Naveen Shankar) ಮತ್ತು ದಾನಿಶ್ ಸೇಠ್ (Danish Sait) ಕಾಂಬಿನೇಷನ್ ನಲ್ಲಿ ಈ ಸಿನಿಮಾ ಮೂಡಿ ಬರಲಿದೆ. ಈ ಚಿತ್ರಕ್ಕೆ ಮನೋಜ್ ಕುಮಾರ್ ಕಾಲಾವನನ್ ಕಥೆ ಹೆಣೆದಿದ್ದರೆ, ಸುಮನ್ ಕುಮಾರ್ (Suman Kumar) ನಿರ್ದೇಶಿಸಲಿದ್ದಾರೆ. ಇದನ್ನೂ ಓದಿ:ಕೆಂಪು ಬಣ್ಣದ ಸೀರೆಯಲ್ಲಿ ಗ್ಲ್ಯಾಮರಸ್ ಆಗಿ ಮಿಂಚಿದ ಮಾನ್ವಿತಾ

    ಸುಮನ್ ಕುಮಾರ್ ಅವರು ಈ ಹಿಂದೆ ರಘುತಾತ ಚಿತ್ರವನ್ನು ನಿರ್ದೇಶಿಸಿದ್ದು , ವೆಬ್ ಸೀರಿಸ್ ಲೋಕದಲ್ಲಿ ಬಹಳ ಜನಪ್ರಿಯ ಆಗಿದ್ದಾರೆ. ಅಲ್ಲದೇ The Family Man ಮತ್ತು Farzi ಯ ಕಥೆಯನ್ನು ಹೆಣೆದಿದ್ದಾರೆ. ಈ ಚಿತ್ರಕ್ಕೆ ಸಂಗೀತವನ್ನು ಬಡವ ರಾಸ್ಕಲ್ ಚಿತ್ರಕ್ಕೆ ಸಂಗೀತ ನೀಡಿದ್ದ ವಾಸುಕಿ ವೈಭವ್ ಅವರು ನೀಡಲಿದ್ದಾರೆ.

     

    ಈ ಚಿತ್ರವನ್ನು ಕಾರ್ತಿಕ್, ವಿಜಯ್ ಸುಬ್ರಮಣ್ಯಂ ಮತ್ತು ಯೋಗಿ ಜಿ ರಾಜ್ ಅವರು ನಿರ್ಮಿಸಲಿದ್ದಾರೆ. ಕೆ ಆರ್ ಜಿ ಸ್ಟುಡಿಯೋಸಿನ 6 ವರ್ಷಗಳ ಚಿತ್ರರಂಗದ ಪಯಣದಲ್ಲಿ ಇದು 4 ನೇ ಚಿತ್ರ ನಿರ್ಮಾಣವಾಗಲಿದೆ. ಕಿರಿಕ್ et 11 ಚಿತ್ರದ ಚಿತ್ರೀಕರಣ ಈ ವರ್ಷ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಸಮಯದಲ್ಲೇ ಶುರುವಾಗಲಿದೆಯಂತೆ.

  • ಮೋಹನ್ ಲಾಲ್ ಜೊತೆ ನಟಿಸಲಿದ್ದಾರೆ ದಾನಿಶ್ ಸೇಠ್

    ಮೋಹನ್ ಲಾಲ್ ಜೊತೆ ನಟಿಸಲಿದ್ದಾರೆ ದಾನಿಶ್ ಸೇಠ್

    ನ್ನಡದ ಪ್ರತಿಭಾನ್ವಿತ ನಟ ದಾನಿಶ್ ಸೇಠ್ (Danish Sait) ಇದೀಗ ಮಾಲಿವುಡ್‌ನತ್ತ (Mollywood) ಮುಖ ಮಾಡಿದ್ದಾರೆ. ಮಲಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್ (MohanLal) ಜೊತೆ ದಾನಿಶ್ ಸೇಠ್ ತೆರೆಹಂಚಿಕೊಳ್ಳಲಿದ್ದಾರೆ.

    `ಹಂಬಲ್ ಪೊಲಿಟಿಶಿಯನ್ ನೊಗ್‌ರಾಜ್’ ಖ್ಯಾತಿಯ ದಾನಿಶ್ ವಿಭಿನ್ನ ಶೈಲಿಯ ನಿರೂಪಣೆ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. `ಹಂಬಲ್ ಪೊಲಿಟಿಶಿಯನ್ ನೊಗ್‌ರಾಜ್’, ಫ್ರೆಂಚ್ ಬಿರಿಯಾನಿ, ಒನ್ ಕಟ್ ಟು ಕಟ್ ಸಿನಿಮಾ ಮೂಲಕ ನಟರಾಗಿಯೂ ಗಮನ ಸೆಳೆದಿದ್ದಾರೆ. ಇವರೀಗ ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

    ಮಲಯಾಳಂನ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿಗೆ ಲಿಜು ಜೋಸ್ (Liju Jose) ನಿರ್ದೇಶನ ಮಾಡುತ್ತಿರುವ `ಮಲೈ ಕೋಟೆ ವಾಲಿಬಾನ್’ ಸಿನಿಮಾದಲ್ಲಿ ದಾನಿಶ್ ಸೇಠ್ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿ, ಈಗಾಗಲೇ ಇದರ ಚಿತ್ರಿಕರಣದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ 15 ದಿನಗಳಿಂದ ಚಿತ್ರಿಕರಣದಲ್ಲಿ ಭಾಗಿಯಾಗಿರುವ ದಾನಿಶ್ ಇನ್ನೂ ಒಂದೆರಡು ತಿಂಗಳು ಶೂಟಿಂಗ್ ನಡೆಯಲಿದೆ. ಇದನ್ನೂ ಓದಿ: ಮತ್ತೆ ರಶ್ಮಿಕಾ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ವಿಜಯ್ ದೇವರಕೊಂಡ

    ಈಗಾಗಲೇ ಹಾಸ್ಯಮಯ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ದಾನಿಶ್ ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಸ್ಯದಿಂದ ಸಿಕ್ಕಾಪಟ್ಟೆ ದೂರವಿರುವ ರೋಲ್‌ನಲ್ಲಿ ನಟ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಮೋಹನ್ ಲಾಲ್ ಜೊತೆ ಕನ್ನಡದ ನಟ ಮಾಲಿವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಪ್ಪು ಆಸೆ ಕೊನೆಗೂ ಈಡೇರಲೇ ಇಲ್ಲ – ಖ್ಯಾತ ನಟನ ಬಗ್ಗೆ ಪುನೀತ್ ಮಾತು

    ಅಪ್ಪು ಆಸೆ ಕೊನೆಗೂ ಈಡೇರಲೇ ಇಲ್ಲ – ಖ್ಯಾತ ನಟನ ಬಗ್ಗೆ ಪುನೀತ್ ಮಾತು

    ಬೆಂಗಳೂರು: ಹೃದಯಾಘಾತದಿಂದ ನಟ ಪುನೀತ್ ರಾಜ್‍ಕುಮಾರ್ ನಿಧನರಾದ ಸುದ್ದಿ ಕನ್ನಡ ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ಪುನೀತ್ ನಿಧನಕ್ಕೆ ಕನ್ನಡ ಚಿತ್ರರಂಗದ ನಟ-ನಟಿಯರು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಸೂಚಿಸಿದ್ದಾರೆ. ಚಿತ್ರರಂಗದಲ್ಲಿ ತನ್ನ ಮಾರ್ಗದರ್ಶಕ ಅಪ್ಪು ನಿಧನಕ್ಕೆ ಸಂತಾಪ ಸೂಚಿಸಿರುವ ನಟ ದಾನಿಶ್ ಸೇಠ್ ಅವರು, ಪುನೀತ್ ರಾಜ್‍ಕುಮಾರ್ ಅವರ ಕೊನೆಗೂ ಈಡೇರದ ಒಂದು ಆಸೆಯ ಕುರಿತು ಇನ್‍ಸ್ಟಾ ಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

    DANISH SAIT

    “ನಾನು ಛಿದ್ರಗೊಂಡಿದ್ದೇನೆ, ಹೃದಯ ಚೂರಾಗಿ ಹೋಗಿದೆ. ನನ್ನ ಬಾಯಲ್ಲಿ ಪದಗಳೇ ಹೊರಡದಾಗಿದೆ” ಎಂದು ದಾನಿಶ್ ನೋವಿನಿಂದ ಇನ್‍ಸ್ಟಾದಲ್ಲಿ ಬರೆದುಕೊಂಡಿದ್ದಾರೆ.

    INSTA

    ನನ್ನ ಪುನೀತ್ ಅಣ್ಣ ಇನ್ನಿಲ್ಲ, ಆತ ವಿಶ್ವದಲ್ಲೇ ಒಬ್ಬ ಅತ್ಯುತ್ತಮ ಮಾನವೀಯ ವ್ಯಕ್ತಿ ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: 30 ವರ್ಷದ ಒಡನಾಟ ಹೇಗೆ ಮರೆಯಲಿ: ಜಗ್ಗೇಶ್ ಕಣ್ಣೀರು

    ಪುನೀತ್ ರಾಜ್‍ಕುಮಾರ್ ಅವರ ಪಿಆರ್‍ಕೆ ಪ್ರೊಡಕ್ಷನ್‍ನ ಬೆಂಬಲದೊಂದಿಗೆ ಫ್ರೆಂಚ್ ಬಿರಿಯಾನಿ ಕಳೆದ ವರ್ಷ ಜುಲೈನಲ್ಲಿ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಯಿತು. ಪುನೀತ್ ರಾಜ್‍ಕುಮಾರ್ ಒಮ್ಮೆ ಜೆಫ್ ಬೆಜೋಸ್ ಜೊತೆ ಅಮೆಜಾನ್ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಇದು ಸಿನಿಮಾ ತಾರೆಯರ ಗ್ಯಾಲಕ್ಸಿಯೊಂದಿಗಿನ ಕಾರ್ಯಕ್ರಮವಾಗಿದ್ದರಿಂದ ಎಲ್ಲರೂ ಪರಸ್ಪರ ಭೇಟಿಯಾಗುವುದು ಹಾಗೂ ಜೆಫ್ ಬೆಜೋಸ್ ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವಲ್ಲಿ ನಿರತರಾಗಿದ್ದರು.

    PANKAJ TRIPATHI

    ಆದರೆ, ಆ ಸ್ಥಳದಲ್ಲಿ ಪುನೀತ್ ರಾಜ್‍ಕುಮಾರ್ ಅವರು ಎಲ್ಲರಿಗಿಂತ ಭಿನ್ನವಾಗಿ ಕಾಣಿಸಿಕೊಂಡರು. ಆಗ ಅಮೆಜಾನ್ ಪ್ರೈಮ್ ವಿಡಿಯೊ ತಂಡ ಪುನೀತ್ ಅವರ ಬಳಿಗೆ ಹೋಗಿ, “ಅಪ್ಪು, ನೀವು ಯಾಕೆ ಯಾರೊಂದಿಗೂ ಫೋಟೊ ತೆಗೆದುಕೊಳ್ಳುತ್ತಿಲ್ಲ? ಎಲ್ಲರಿಂದಲೂ ದೂರ ಹೋಗಿ ಸುಮ್ಮನೆ ಯಾಕೆ ನಿಂತಿದ್ದೀರಿ? ಯಾರ ಹೆಸರನ್ನಾದರೂ ಹೇಳಿ ಅವರನ್ನು ನಿಮ್ಮ ಬಳಿಗೆ ಫೋಟೊ ತೆಗೆಸಿಕೊಳ್ಳಲು ಕರೆತರುತ್ತೇವೆ” ಎಂದು ಕೇಳಿತಂತೆ. ಆಗ ಪುನೀತ್ ಅವರು ನಸು ನಗುತ್ತಲೇ, “ನಿಜವಾಗಿಯೂ? ನಾನು ನಟ ಪಂಕಜ್ ತ್ರಿಪಾಠಿ ಅವರನ್ನು ಭೇಟಿಯಾಗಬೇಕು” ಎಂದು ಮನದಾಸೆ ವ್ಯಕ್ತಪಡಿಸಿದ್ದರಂತೆ.  ಇದನ್ನೂ ಓದಿ: ಅಪ್ಪು ಕುಟುಂಬವನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತೇನೆ: ರಮ್ಯಾ

    ಸಿನಿಮಾರಂಗದಲ್ಲಿ ನಟ ಪಂಕಜ್ ತ್ರಿಪಾಠಿ ಇಂದು ಎಲ್ಲರಿಗೂ ಚಿರಪರಿಚಿತ. ಆದರೆ 2012ರಲ್ಲಿ ತೆರೆಕಂಡ “ಗ್ಯಾಂಗ್ಸ್ ಆಫ್ ವಸ್ಸೆಯ್‍ಪುರ” ಸಿನಿಮಾಗೂ ಮುಂಚೆ ತಾನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸಾಕಷ್ಟು ಹೋರಾಟ ನಡೆಸಿದ್ದರು ಎಂಬುದು ಪುನೀತ್ ಅವರ ಅಭಿಪ್ರಾಯವಾಗಿತ್ತು.

    PUNEET

    “ನನ್ನ ಅಪ್ಪು ಅಣ್ಣ ಯಾವಾಗಲೂ ಕಿಕ್ಕಿರಿದ ಕೋಣೆಯಲ್ಲಿ ಪ್ರತಿಭೆಯನ್ನು ಗುರುತಿಸುತ್ತಿದ್ದರು” ಸೇಠ್ ಸ್ಮರಿಸಿದ್ದಾರೆ.

  • ರಾಜ್ ಶೆಟ್ಟಿ, ರಿಷಿ, ಡ್ಯಾನಿಶ್ ಮತ್ತು ರಾಮನ ಅವತಾರ!

    ರಾಜ್ ಶೆಟ್ಟಿ, ರಿಷಿ, ಡ್ಯಾನಿಶ್ ಮತ್ತು ರಾಮನ ಅವತಾರ!

    ಬೆಂಗಳೂರು: ಕನ್ನಡದಲ್ಲೀಗ ಮಲ್ಟಿ ಸ್ಟಾರ್ ಚಿತ್ರಗಳ ಜಮಾನ ಶುರುವಾಗಿದೆ. ಈ ಹೊತ್ತಿನಲ್ಲಿಯೇ ನಿಧಾನಕ್ಕೆ ತಮ್ಮದೇ ಆದ ಶೈಲಿಯಲ್ಲಿ ಹೆಸರಾಗುತ್ತಿರುವ ನಟರನ್ನು ಒಂದೇ ಚಿತ್ರದಲ್ಲಿ ನಟಿಸುವಂತೆ ಮಾಡೋ ಪ್ರಯತ್ನಕ್ಕೂ ಶ್ರೀಕಾರ ಬಿದ್ದಿದೆ. ಇಂಥಾದ್ದೊಂದು ನವೀನ ಪ್ರಯತ್ನಕ್ಕೆ ರಾಮನ ಅವತಾರ ಚಿತ್ರವೇ ಮೊದಲ ಹೆಜ್ಜೆಯಿಟ್ಟಿದೆ.

    ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಇದೀಗ ಕವಲು ದಾರಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಆ ಚಿತ್ರವಿನ್ನೂ ಬಿಡುಗಡೆಯ ಹಂತದಲ್ಲಿರುವಾಗಲೇ ಅವರು ರಾಮನ ಅವತಾರ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ಈ ಚಿತ್ರತಂಡ ದೀಪಾವಳಿ ಹಬ್ಬಕ್ಕೆ ಏಕಾಏಕಿ ಟೀಸರ್ ಬಿಡುಗಡೆ ಮಾಡಿ ಸರ್ ಪ್ರೈಸ್ ಕೊಟ್ಟಿದೆ. ರಿಷಿ ಈ ಚಿತ್ರದಲ್ಲಿ ರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

    ರಾಜ್ ಬಿ ಶೆಟ್ಟಿ ಮತ್ತು ಡ್ಯಾನಿಶ್ ಸೇಠ್ ಮತ್ತೆರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಹಾಸ್ಯ ಪ್ರಧಾನ ಚಿತ್ರ. ಆದರೆ ಇದರಲ್ಲಿ ಮಾಮೂಲಿ ಜಾಡನ್ನು ಮೀರಿದ ಶೈಲಿಯ ಹಾಸ್ಯ ಇರಲಿದೆಯಂತೆ. ಅಂತೂ ದೀಪಾವಳಿಯಂದು ಹೊರ ಬಂದಿರೋ ಈ ಟೀಸರ್ ಮೂಲಕ ರಿಷಿ, ಡ್ಯಾನಿಶ್ ಮತ್ತು ರಾಜ್ ಶೆಟ್ಟಿ ಸೇರಿದಂತೆ ಮೂವರು ಒಂದೇ ಚಿತ್ರದಲ್ಲಿ ನಟಿಸೋದು ಪಕ್ಕಾ ಆಗಿದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಡ್ಯಾನಿಶ್ ಸೇಠ್ ಚಿತ್ರ ನಿರ್ಮಾಣ ಮಾಡ್ತಾರಾ ಪವರ್ ಸ್ಟಾರ್?

    ಡ್ಯಾನಿಶ್ ಸೇಠ್ ಚಿತ್ರ ನಿರ್ಮಾಣ ಮಾಡ್ತಾರಾ ಪವರ್ ಸ್ಟಾರ್?

    ಪ್ರಾಂಕ್ ಕಾಲ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿದ್ದ ಡ್ಯಾನಿಶ್ ಸೇಠ್ ಹಂಬಲ್ ಪೊಲಿಟೀಷಿಯನ್ ಆಗಿಯೂ ಅವತಾರವೆತ್ತಿದ್ದರು. ಅವರು ನಟಿಸಿದ್ದ ಕನ್ನಡದ ಪ್ರಥಮ ಚಿತ್ರ ಹಂಬಲ್ ಪೊಲಿಟೀಷಿಯನ್ ನೊಗ್‍ರಾಜ್ ಚಿತ್ರ ಒಂದು ಮಟ್ಟಕ್ಕೆ ಜನಮನ್ನಣೆ ಗಳಿಸಿಕೊಂಡಿತ್ತು. ಆದರೆ ಅವರ ಮುಂದಿನ ಚಿತ್ರ ಯಾವುದೆಂಬುದು ಮಾತ್ರ ಇದುವರೆಗೂ ಪ್ರಶ್ನೆಯಾಗಿಯೇ ಉಳಿದುಕೊಂಡಿತ್ತು.

    ಅದಕ್ಕೀಗ ಒಂದು ಹಂತದ ಉತ್ತರ ಸಿಕ್ಕಿದೆ. ಈಗ ಹೊರ ಬಿದ್ದಿರೋ ಸುದ್ದಿ ನಿಜವೇ ಆಗಿದ್ದರೆ ಡ್ಯಾನಿಶ್ ಸೇಠ್ ಎರಡನೇ ಚಿತ್ರವನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡಲಿದ್ದಾರೆ!

    ಪುನೀತ್ ರಾಜ್ ಕುಮಾರ್ ಪಿಆರ್‍ಕೆ ಹೆಸರಲ್ಲಿ ಆಡಿಯೋ ಕಂಪೆನಿ ತೆರೆದಿದ್ದು, ಅದೀಗ ಅದ್ಭುತ ಯಶ ಕಂಡಿರೋದೆಲ್ಲ ಕಣ್ಣ ಮುಂದಿದೆ. ಒಳ್ಳೆ ಚಿತ್ರಗಳಿಗೆ ಪ್ರೋತ್ಸಾಹ ನೀಡಬೇಕು, ಹೊಸಾ ಪ್ರತಿಭೆಗಳಿಗೆ ಸಾಥ್ ನೀಡಬೇಕೆಂಬ ಇರಾದೆಯಿಂದಲೇ ಅವರು ಚಿತ್ರ ನಿರ್ಮಾಣಕ್ಕೂ ಇಳಿದದ್ದು ಗೊತ್ತೇ ಇದೆ. ಅವರೀಗ ಡ್ಯಾನಿಶ್ ಸೇಠ್ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆಂಬ ಸುದ್ದಿ ಮಾತ್ರ ಅಧಿಕೃತವೆಂಬಂತೆಯೇ ಹರಿದಾಡಲಾರಂಭಿಸಿದೆ.

    ಒಂದು ಮೂಲದ ಪ್ರಕಾರ ಈ ಬಗ್ಗೆ ಮಾತುಕತೆಗಳು ನಡೆಯುತ್ತಿವೆಯಂತೆ. ಪುನೀತ್ ರಾಜ್ ಕುಮಾರ್ ಡ್ಯಾನಿಶ್ ಸೇಠ್ ಚಿತ್ರವನ್ನು ನಿರ್ಮಾಣ ಮಾಡಲು ಉತ್ಸುಕರಾಗಿರೋದೂ ಸತ್ಯ. ಆದರೆ ಅದು ಯಾವಾಗ ಕಾರ್ಯರೂಪಕ್ಕೆ ಬರಲಿದೆ, ಆ ಚಿತ್ರ ಯಾವುದು ಎಂಬುದರ ವಿವರ ಇನ್ನಷ್ಟೇ ಹೊರ ಬೀಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪುನೀತ್ ರಾಜ್‍ಕುಮಾರ್ ಅವರಿಂದ ಹ್ಯಾಂಡ್ ಶೇಕ್ ಚಾಲೆಂಜ್

    ಪುನೀತ್ ರಾಜ್‍ಕುಮಾರ್ ಅವರಿಂದ ಹ್ಯಾಂಡ್ ಶೇಕ್ ಚಾಲೆಂಜ್

    ಬೆಂಗಳೂರು: ಇತ್ತೀಚೆಗೆ ಚಾಲೆಂಜ್ ಗಳ ಹಾವಳಿ ಹೆಚ್ಚಾಗುತ್ತಿದೆ. ಅದರಲ್ಲೂ ಸಿನಿಮಾರಂಗದಲ್ಲಿ ನಟ-ನಟಿ ಮತ್ತು ನಿರ್ದೇಶಕರಿಗೆ ಹೆಚ್ಚಾಗಿ ಚಾಲೆಂಜ್ ಹಾಕುತ್ತಿದ್ದಾರೆ. ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನೂತನವಾಗಿ `ಹ್ಯಾಂಡ್ ಶೇಕ್’ ಚಾಲೆಂಜ್ ಹಾಕಿದ್ದಾರೆ.

    ನಟ ಪುನೀತ್ ನೂತನವಾಗಿ ಹ್ಯಾಂಡ್ ಶೇಕ್ ಚಾಲೆಂಜ್ ಹಾಕಿದ್ದಾರೆ. ಈ ಬಗ್ಗೆ ಅವರು ತಮ್ಮ ಫೇಸ್ ಬುಕ್ ನಲ್ಲಿ ಶೇಕ್ ಹ್ಯಾಂಡ್ ಮಾಡುತ್ತಿರುವ ಫೋಟೋವನ್ನು ಹಾಕಿ ಚಾಲೆಂಜ್ ಹಾಕಿದ್ದಾರೆ. ನೀವು ನಿಮ್ಮ ಸ್ನೇಹಿತರಿಗೆ ವಿಶ್ವಾಸದಿಂದ ಹ್ಯಾಂಡ್ ಶೇಕ್ ಕೊಟ್ಟ ಫೋಟೋವೊಂದನ್ನು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿ ಎಂದು ಬರೆದು ಈ ಚಾಲೆಂಜ್ ನನ್ನು ನಟ ರಕ್ಷಿತ್ ಶೆಟ್ಟಿ, ರಾಜಕುಮಾರ ಸಿನಿಮಾ ನಿರ್ದೇಶಕರಾದ ಸಂತೋಷ್ ಆನಂದ್ ರಾಮ್ ಮತ್ತು ನಟ ಡ್ಯಾನಿಶ್ ಸೇಠ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

    ಪ್ರತಿದಿನ ಸಿಗುವ ಜನರಿಗೆ ಮತ್ತು ತಮ್ಮ ಸ್ನೇಹಿತರಿಗೆ ಹ್ಯಾಂಡ್ ಶೇಕ್ ಮಾಡುವುದು ಸಾಮಾನ್ಯವಾಗಿದೆ. ಆದರೆ ನಾವು ಎಷ್ಟು ವಿಶ್ವಾಸದಿಂದ ಹ್ಯಾಂಡ್ ಶೇಕ್ ಮಾಡುತ್ತೇವೆ ಅನ್ನೋದು ಈ ಚಾಲೆಂಜ್ ನ ಉದ್ದೇಶವಾಗಿದೆ.

    ಹ್ಯಾಂಡ್ ಶೇಕ್ ಚಾಲೆಂಜ್:
    ಈ ಚಾಲೆಂಜ್ ನನ್ನು ಯಾರು ಬೇಕಾದರೂ ಸ್ವೀಕರಿಸಬಹುದು. ಪರಿಚಯವಿಲ್ಲದವರು, ಆತ್ಮೀಯರನ್ನು ಪರಿಚಯ ಮಾಡಿಕೊಳ್ಳುವಾಗ ಕೈ ಕುಲುಕುವ ಒಂದು ಫೋಟೋ ತೆಗೆದು ಅದಕ್ಕೆ #handshakechallenge (ಹ್ಯಾಂಡ್ ಶೇಕ್ ಚಾಲೆಂಜ್ ಹ್ಯಾಷ್ ಟ್ಯಾಗ್) ಹಾಕಿ ಫೇಸ್‍ಬುಕ್ ಗೆ ಅಪ್ಲೋಡ್ ಮಾಡುವುದು.

    ಈ ಹಿಂದೆ ಭಾರತವನ್ನು ಫಿಟ್ ಮಾಡಲು `ಹಮ್ ಫಿಟ್ ತೋ ಇಂಡಿಯಾ ಫಿಟ್ ಹೇ’ ಚಾಲೆಂಜ್ ಟ್ರೆಂಡ್ ಆಗಿದ್ದು, ಅನೇಕ ನಟ-ನಟಿಯರು ಈ ಚಾಲೆಂಜ್ ಸ್ವೀಕರಿಸಿ ಪೂರೈಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews