Tag: Danish Kaneria

  • ಭಾರತ ನನ್ನ ಮಾತೃಭೂಮಿ, ಪಾಕಿಸ್ತಾನ ನನ್ನ ಜನ್ಮಭೂಮಿ – ಪಾಕ್‌ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ

    ಭಾರತ ನನ್ನ ಮಾತೃಭೂಮಿ, ಪಾಕಿಸ್ತಾನ ನನ್ನ ಜನ್ಮಭೂಮಿ – ಪಾಕ್‌ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ

    ಇಸ್ಲಮಾಬಾದ್‌: ಭಾರತ (India) ನನ್ನ ಮಾತೃಭೂಮಿ, ಪಾಕ್‌ ನನ್ನ ಜನ್ಮಭೂಮಿ, ಭಾರತ ನನಗೆ ದೇಗುಲವಿದ್ದಂತೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ (Danish Kaneria) ಹೇಳಿಕೊಂಡಿದ್ದಾರೆ.

    ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ನೀವು ಪಾಕಿಸ್ತಾನದ ಬಗ್ಗೆ ಏಕೆ ಮಾತನಾಡುವುದಿಲ್ಲ? ಭಾರತದ ಆಂತರಿಕ ವಿಷಯಗಳ ಬಗ್ಗೆ ಏಕೆ ಪ್ರತಿಕ್ರಿಯಿಸುತ್ತೀರಿ ಎಂದು ಹಲವರು ನನ್ನನ್ನು ಪ್ರಶ್ನಿಸುತ್ತಾರೆ. ಕೆಲವರು ಭಾರತದ ಪೌರತ್ವಕ್ಕಾಗಿ ನಾನು ಹೀಗೆ ನಡೆದುಕೊಳ್ಳುತ್ತೇನೆ ಎಂದು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ವಿಂಡೀಸ್‌ ವಿರುದ್ಧ 140 ರನ್‌ಗಳ ಭರ್ಜರಿ ಗೆಲುವು – WTC ಅಂಕಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡ ಭಾರತ

    ನನಗೆ ಭಾರತದ ಪೌರತ್ವ ಪಡೆಯುವ ಯಾವ ಆಲೋಚನೆಯೂ ಇಲ್ಲ. ಮುಂದೆ ನನ್ನಂತವರಿಗೆ ಅಂತಹ ಯೋಚನೆ ಬಂದರೆ ಸಿಎಎ ಈಗಾಗಲೇ ಜಾರಿಯಲ್ಲಿದೆ. ಪಾಕಿಸ್ತಾನ (Pakistan) ನನ್ನ ಜನ್ಮಭೂಮಿಯಾಗಿರಬಹುದು ಆದರೆ ಭಾರತ ನನ್ನ ಪೂರ್ವಜರ ಭೂಮಿ, ನನ್ನ ಮಾತೃಭೂಮಿ. ನನ್ನ ಪಾಲಿಗೆ ಭಾರತ ಒಂದು ದೇವಾಲಯದಂತೆ ಎಂದು ಗೌರವಯುತ ಸಾಲುಗಳಲ್ಲಿ ಹಿಂದೂಸ್ಥಾನವನ್ನು ಕೊಂಡಾಡಿದ್ದಾರೆ.

    ನನ್ನ ಮಾತುಗಳು ಭಾರತದ ಪೌರತ್ವಕ್ಕಾಗಿ ಎಂಬ ಆರೋಪ ಸಂಪೂರ್ಣ ತಪ್ಪು. ನಾನು ಧರ್ಮದ ಪರವಾಗಿ ನಿಲ್ಲುವುದನ್ನು ಮತ್ತು ನಮ್ಮ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ರಾಷ್ಟ್ರವಿರೋಧಿಗಳು, ಹುಸಿ ಜಾತ್ಯತೀತರ ವಿರುದ್ಧದ ಸಮರವನ್ನು ಮುಂದುವರಿಸುತ್ತೇನೆ.

    ಪಾಕಿಸ್ತಾನದ ಜನರಿಂದಲೂ ನಾನು ಪ್ರೀತಿಯನ್ನು ಪಡೆದಿದ್ದೇನೆ. ಆ ಪ್ರೀತಿಯ ಜೊತೆಗೆ, ಬಲವಂತದ ಮತಾಂತರದ ಪ್ರಯತ್ನ, ಪಾಕ್‌ನ ಅಧಿಕಾರಿಗಳು ಮತ್ತು ಪಿಸಿಬಿಯಿಂದ (PCB) ತಾರತಮ್ಯವನ್ನು ಸಹ ಎದುರಿಸಿದ್ದೇನೆ ಎಂದು ತಾವು ಅನುಭವಿಸಿದ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.

    ಕೊನೆಯಲ್ಲಿ ʻಜೈ ಶ್ರೀರಾಮ್‌ʼ ಘೋಷದೊಂದಿದೆ, ನಾನು ನನ್ನ ಕುಟುಂಬದೊಂದಿಗೆ ಸುರಕ್ಷಿತವಾಗಿ, ಸಂತೋಷವಾಗಿದ್ದೇನೆ. ನನ್ನ ಭವಿಷ್ಯ ಭಗವಾನ್ ರಾಮನ ಕೈಯಲ್ಲಿದೆ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಆಸೀಸ್‌ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ – ಏಕದಿನ ಕ್ರಿಕೆಟ್‌ಗೆ ಗಿಲ್‌ ಕ್ಯಾಪ್ಟನ್‌; ರೋಹಿತ್‌, ಕೊಹ್ಲಿ ನಿವೃತ್ತಿ ಬಯಸಿದ್ಯಾ ಬಿಸಿಸಿಐ?

  • ಈಗ ಹೇಳಿ ಯಾರು ಪನೌತಿ – ರಾಹುಲ್‍ಗೆ ಟಾಂಗ್ ಕೊಟ್ಟ ಪಾಕ್ ಮಾಜಿ ಆಟಗಾರ

    ಈಗ ಹೇಳಿ ಯಾರು ಪನೌತಿ – ರಾಹುಲ್‍ಗೆ ಟಾಂಗ್ ಕೊಟ್ಟ ಪಾಕ್ ಮಾಜಿ ಆಟಗಾರ

    ಇಸ್ಲಮಾಬಾದ್: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‍ಗಢದಲ್ಲಿ ಜಯ ಸಾಧಿಸಿರುವ ಬಿಜೆಪಿ (BJP) ಸಂಭ್ರಮದ ನಡುವೆ ಪಾಕ್ (Pakistan) ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ (Danish Kaneria) ರಾಹುಲ್ ಗಾಂಧಿಯವರಿಗೆ (Rahul Gandhi) ಪರೋಕ್ಷವಾಗಿ ಕುಟುಕಿದ್ದಾರೆ.

    ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವಿನತ್ತ ಮುನ್ನುಗ್ಗುತ್ತಿದ್ದಂತೆ ಕನೇರಿಯಾ, ಯಾವ ಪಕ್ಷ ಹಾಗೂ ಯಾರ ಹೆಸರನ್ನೂ ತೆಗೆದುಕೊಳ್ಳದೆ ತಮ್ಮ ಎಕ್ಸ್ ಖಾತೆಯಲ್ಲಿ ಪನೌತಿ ಕೌನ್? ಎಂದು ಬರೆದುಕೊಂಡು ನಗುವ ಎಮೋಜಿಯೊಂದಿಗೆ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿಯವರನ್ನು ಪನೌತಿ ಎಂದಿದ್ದ ರಾಹುಲ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ವಿರುದ್ಧದ 3 ಸರಣಿಗಳಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ – ಏಡನ್‌ ಮಾರ್ಕ್ರಮ್‌ ನಾಯಕ

    ನ.19 ರಂದು ಏಕದಿನ ವಿಶ್ವಕಪ್ ಫೈನಲ್ ಪಂದ್ಯವ ವೇಳೆ ನರೇಂದ್ರ ಮೋದಿಯವರು (Narendra Modi) ಕ್ರೀಡಾಂಗಣಕ್ಕೆ ತೆರಳಿ ಪಂದ್ಯ ವೀಕ್ಷಿಸಿದ ಕಾರಣ ಭಾರತ ಸೋಲನ್ನು ಅನುಭವಿಸಿತು ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

    ದಾನಿಶ್ ಕನೇರಿಯಾ ಅವರು ಪಾಕ್ ತಂಡದ ಪ್ರಮುಖ ಸ್ಪಿನ್ನರ್ ಆಗಿದ್ದರು. ಅವರ ಸೋದರ ಸಂಬಂಧಿ ಅನಿಲ್ ದಲ್ಪತ್ ನಂತರ ಪಾಕ್ ಪರ ಆಡಿದ 2ನೇ ಹಿಂದೂ ಆಟಗಾರರಾಗಿದ್ದಾರೆ. ಪಾಕಿಸ್ತಾನ ಪರ ಉತ್ತಮ ಪ್ರದರ್ಶನ ನೀಡಿರುವ ಕನೇರಿಯಾ, 61 ಟೆಸ್ಟ್ ಪಂದ್ಯಗಳಲ್ಲಿ 261 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ 18 ಪಂದ್ಯಗಳನ್ನಾಡಿದ್ದು, 15 ವಿಕೆಟ್ ಪಡೆದಿದ್ದಾರೆ. ಟೆಸ್ಟ್‌ನಲ್ಲಿ 261 ವಿಕೆಟ್‍ಗಳೊಂದಿಗೆ ಪಾಕ್ ಪರ ಅತಿ ಹೆಚ್ಚು ವಿಕೆಟ್ ಪಡೆದ 4ನೇ ಬೌಲರ್ ಎಂಬ ಹೆಗ್ಗಳಿಕೆ ಅವರದ್ದು. ಇದನ್ನೂ ಓದಿ: IND vs AUS T20I: ಕೊನೆ ಪಂದ್ಯದಲ್ಲಿ ಭಾರತಕ್ಕೆ ಗೆಲುವು; 4-1 ಅಂತರದಿಂದ ಸರಣಿ ಕೈವಶ

  • ಬಾಬರ್ ದೊಡ್ಡ ಸೊನ್ನೆ; ಕೊಹ್ಲಿಯೊಂದಿಗೆ ಹೋಲಿಕೆ ಮಾಡೋದು ನಿಲ್ಸಿ – ಪಾಕ್ ಮಾಜಿ ಕ್ರಿಕೆಟಿಗ ಆಕ್ರೋಶ

    ಬಾಬರ್ ದೊಡ್ಡ ಸೊನ್ನೆ; ಕೊಹ್ಲಿಯೊಂದಿಗೆ ಹೋಲಿಕೆ ಮಾಡೋದು ನಿಲ್ಸಿ – ಪಾಕ್ ಮಾಜಿ ಕ್ರಿಕೆಟಿಗ ಆಕ್ರೋಶ

    ಇಸ್ಲಾಮಾಬಾದ್: ಟಿ20 ವಿಶ್ವಕಪ್‌ನಲ್ಲಿ (T20 World) ಇಂಗ್ಲೆಂಡ್ ಎದುರು ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡ ಪಾಕಿಸ್ತಾನ (Pakistan), 17 ವರ್ಷಗಳ ಬಳಿಕ ಇಂಗ್ಲೆಂಡ್ (England) ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲೂ (Test Cricket) 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಆಯಿತು.

    ಭರ್ಜರಿ ಬ್ಯಾಟಿಂಗ್ ಹಾಗೂ ಸಂಘಟಿತ ಬೌಲಿಂಗ್ ದಾಳಿಯಿಂದ ಬೆನ್‌ಸ್ಟೋಕ್ಸ್ (Ben Stokes) ಪಡೆ ಪಾಕಿಸ್ತಾನ ತಂಡವನ್ನು ತವರಿನಲ್ಲೇ ವೈಟ್‌ವಾಶ್ ಮಾಡಿತು. ಇದರಿಂದ ತೀವ್ರ ಮುಖಭಂಗ ಅನುಭವಿಸಿದ ಪಾಕ್ ತಂಡ, ಭಾರೀ ಟೀಕೆಗೆ ಗುರಿಯಾಗಿದೆ. ಪಾಕಿಸ್ತಾನದ ಮಾಜಿ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ (Danish Kaneria) ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಪಾಕಿಸ್ತಾನ ತಂಡದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ವಿರಾಟ್‌ಕೊಹ್ಲಿ ಅಲ್ಲ, ಎಬಿಡಿ ನನ್ನ ರೋಲ್ ಮಾಡೆಲ್ – ಬಾಬರ್ ಅಜಮ್‌

    ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar Azam) ದೊಡ್ಡ ಸೊನ್ನೆ. ಅವರನ್ನು ವಾಸ್ತವವಾಗಿ ವಿರಾಟ್ ಕೊಹ್ಲಿಗೆ (Virat Kohli) ಹೋಲಿಸೋದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 450 ಎಸೆತಕ್ಕೆ 506 ರನ್‌ – ಇಂಗ್ಲೆಂಡ್‌ ಬ್ಯಾಟರ್‌ಗಳ ಆರ್ಭಟಕ್ಕೆ ಹಲವು ವಿಶ್ವದಾಖಲೆ ಉಡೀಸ್‌

    ಜನರು ಬಾಬರ್ ಅಜಮ್‌ನನ್ನ ವಿರಾಟ್ ಕೊಹ್ಲಿ ಅವರಿಗೆ ಹೋಲಿಸೋದನ್ನು ನಿಲ್ಲಿಸಬೇಕು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Rohit Sharma) ಅವರಂತಹವರು ಬಹಳ ದೊಡ್ಡ ಆಟಗಾರರು. ಅವರಿಗೆ ಹೋಲಿಸುವಂತಹವರು ಪಾಕ್ ತಂಡದಲ್ಲಿ ಯಾರೂ ಇಲ್ಲ. ನೀವು ಅವರನ್ನ ಮಾತನಾಡಲು ಕೇಳಿದ್ರೆ ಹಾಜರಾಗುತ್ತಾರೆ. ಅದೇ ಫಲಿತಾಂಶ ನೀಡಲು ಕೇಳಿದ್ರೆ ಶೂನ್ಯವಾಗಿರುತ್ತದೆ ಎಂದು ಕನೇರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬಾಬರ್ ನಾಯಕನಾಗಿ ದೊಡ್ಡ ಶೂನ್ಯ, ತಂಡವನ್ನು ಮುನ್ನಡೆಸಲು ಅರ್ಹರಲ್ಲ. ಮುನ್ನಡೆಸುವ ಸಾಮರ್ಥ್ಯವನ್ನೂ ಅವರು ಹೊಂದಿಲ್ಲ. ಟೆಸ್ಟ್ ಕ್ರಿಕೆಟ್‌ಗೆ ಬಂದಾಗ ಬೆನ್‌ಸ್ಟೋಕ್ಸ್ ನೋಡಿ ಕಲಿಯಬೇಕಿದೆ. ಇನ್ನು ಮುಂದೆ ಬಾಬರ್ ಲಾಂಗೆಸ್ಟ್ ಫಾರ್ಮ್ಯಾಟ್‌ನಲ್ಲಿ ಆಡುವುದು ಸೂಕ್ತವಲ್ಲ ಎಂದು ಕನೇರಿಯಾ ಹೇಳಿದ್ದಾರೆ. ಇದನ್ನೂ ಓದಿ: ಪಾಕ್ ಕದನಕ್ಕೂ ಮುನ್ನವೇ ಇಂಗ್ಲೆಂಡ್‌ಗೆ ಆಘಾತ – ಹೆಸರಿಲ್ಲದ ವೈರಸ್‌ಗೆ ತುತ್ತಾದ ಸ್ಟೋಕ್ಸ್ ಪಡೆ

    Live Tv
    [brid partner=56869869 player=32851 video=960834 autoplay=true]

    Live Tv
    [brid partner=56869869 player=32851 video=960834 autoplay=true]

  • ನಟರಾಜನ್‍ಗೆ ಪ್ರಶಸ್ತಿ ನೀಡಿದ ಪಾಂಡ್ಯ – ನೋವು ಹೊರಹಾಕಿದ ಕನೇರಿಯಾ

    ನಟರಾಜನ್‍ಗೆ ಪ್ರಶಸ್ತಿ ನೀಡಿದ ಪಾಂಡ್ಯ – ನೋವು ಹೊರಹಾಕಿದ ಕನೇರಿಯಾ

    ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ತಮಗೆ ಲಭಿಸಿದ್ದ ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿಯನ್ನ ಟಿ.ನಟರಾಜನ್ ಗೆ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಾರ್ದಿಕ್ ಪಾಂಡ್ಯ ಮತ್ತು ನಟರಾಜನ್ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಹಂಚಿಕೊಂಡಿರುವ ಪಾಕ್ ಕ್ರಿಕೆಟಿಗ ದಾನಿಶ್ ಕನೇರಿಯಾ ತಮ್ಮ ನೋವನ್ನ ಹೊರ ಹಾಕಿದ್ದಾರೆ.

    ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನ 2-1ರ ಅಂತರದಲ್ಲಿ ಭಾರತ ತನ್ನದಾಗಿಸಿಕೊಂಡಿತ್ತು. ಈ ಪಂದ್ಯಗಳಲ್ಲಿ ಮಿಂಚಿದ್ದ ಹಾರ್ದಿಕ್ ಪಾಂಡ್ಯ ಮ್ಯಾಚ್ ಫಿನಿಶರ್ ಮತ್ತು ಉತ್ತಮವಾಗಿ ಬ್ಯಾಟ್ಸಮನ್ ಅನ್ನಿಸಿಕೊಂಡಿದ್ರು. ಉತ್ತಮ ಪ್ರದರ್ಶನ ನೀಡಿದ್ದ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದರು. ಆದ್ರೆ ಈ ಪ್ರಶಸ್ತಿಯನ್ನ ಮೊದಲ ಬಾರಿಗೆ ಅಂತರಾಷ್ಟ್ರೀಯ ಟಿಟ್ವೆಂಟಿ ಸರಣಿಯಲ್ಲಿ ಆಡಿದ್ದ ನಟರಾಜನ್ ಅವರಿಗೆ ನೀಡಿದ್ದರು.

    ಪಾಕ್ ಆಟಗಾರ ಹೇಳಿದ್ದೇನು?: ಇದೊಂದು ಅದ್ಭುತವಾದ ಫೋಟೋ. ಹಾರ್ದಿಕ್ ಪಾಂಡ್ಯ ಯುವ ಪ್ರತಿಭೆ ನಟರಾಜನ್ ಅವರಿಗೆ ಪ್ರಶಸ್ತಿ ನೀಡಿ ಎಲ್ಲರ ಹೃದಯ ಗೆದ್ದರು. ಇದು ಯುವ ಆಟಗಾರರಿಗೆ ಹಾರ್ದಿಕ್ ಪಾಂಡ್ಯ ನೀಡಿರುವ ಸ್ಪೂರ್ತಿ ಮತ್ತು ಪ್ರೋತ್ಸಾಹ. ಆದ್ರೆ ನಮ್ಮಲ್ಲಿ ಯಾರು ಹೀಗೆ ಯೋಚಿಸುವುದೇ ಇಲ್ಲ. ಎಲ್ಲರನ್ನ ತಮ್ಮದನ್ನ ಮಾತ್ರ ಯೋಚನೆ ಮಾಡ್ತಾರೆ ಎಂದು ದಾನಿಶ್ ಕನೆರಿಯಾ ನೋವಿನ ಮಾತುಗಳನ್ನಾಡಿದ್ದಾರೆ.

    ಆಸೀಸ್ ವಿರುದ್ಧ ಸರಣಿಯ ಮೂರು ಟಿ20 ಪಂದ್ಯಗಳಲ್ಲಿ ಆಡಿದ್ದ ನಟರಾಜನ್ ಒಟ್ಟು 6 ವಿಕೆಟ್ ಪಡೆದಿದ್ದರು. ಮೊದಲ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿ 30 ರನ್ ನೀಡಿ 3 ವಿಕೆಟ್ ಪಡೆದಿದ್ದರು. 2ನೇ ಪಂದ್ಯದಲ್ಲಿ 4 ಓವರ್ ಮಾಡಿ ಕೇವಲ 20 ರನ್ ನೀಡಿ, 2 ವಿಕೆಟ್ ಪಡೆದಿದ್ದರು. ಕೊನೆಗೆ ಪಂದ್ಯದಲ್ಲಿ 4 ಓವರ್ ಮಾಡಿ 33 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಚೊಚ್ಚಲ ಸರಣಿಯಲ್ಲಿ ನಟರಾಜನ್ ಅವರ ಅದ್ಭುತ ಪ್ರದರ್ಶನ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದ ಹಾರ್ದಿಕ್ ಪಾಂಡ್ಯ ತಮ್ಮ ಪ್ರಶಸ್ತಿ ನೀಡಿ, ಜೊತೆಯಲ್ಲಿ ತೆಗೆಸಿಕೊಂಡಿದ್ದ ಫೋಟೋವನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು.

  • ‘ಹಿಂದೂಗಳ ಪಾಲಿಗೆ ಐತಿಹಾಸಿಕ ದಿನ’ – ಪಾಕ್‌ ಮಾಜಿ ಸ್ಪಿನ್ನರ್‌ ಕನೇರಿಯಾ

    ‘ಹಿಂದೂಗಳ ಪಾಲಿಗೆ ಐತಿಹಾಸಿಕ ದಿನ’ – ಪಾಕ್‌ ಮಾಜಿ ಸ್ಪಿನ್ನರ್‌ ಕನೇರಿಯಾ

    ಇಸ್ಲಾಮಾಬಾದ್‌: ಹಿಂದೂಗಳ ಪಾಲಿಗೆ ಐತಿಹಾಸಿಕ ದಿನ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್‌ ದಾನಿಶ್ ಕನೇರಿಯಾ ಸಂಭ್ರಮ ವ್ಯಕ್ತಪಡಿಸಿದ್ದಾರೆ.

    ಬುಧವಾರ ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ಮಾಡಿದ ಹಿನ್ನೆಲೆಯಲ್ಲಿ ಮೂರು ಟ್ವೀಟ್‌ ಮಾಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

    ಇಂದು ವಿಶ್ವಾದ್ಯಂತ ಹಿಂದೂಗಳಿಗೆ ಐತಿಹಾಸಿಕ ದಿನ. ದೇವರು ರಾಮ ನಮ್ಮ ಆದರ್ಶ. ರಾಮನ ಸೌಂದರ್ಯವು ಅವನ ಹೆಸರಿನಲ್ಲಿ ಅಲ್ಲ, ಅವನ ಪಾತ್ರದಲ್ಲಿದೆ. ದುಷ್ಟರ ಮೇಲಿನ ವಿಜಯದ ಸಂಕೇತ ರಾಮ. ಇಂದು ಪ್ರಪಂಚದಾದ್ಯಂತ ಸಂತೋಷದ ಅಲೆ ಇದೆ. ಇದು ಬಹಳ ತೃಪ್ತಿಯ ಕ್ಷಣವಾಗಿದೆ ಜೈ ಶ್ರೀರಾಮ್‌ ಎಂದು ಬರೆದಿದ್ದಾರೆ.

    ಇನ್ನೊಂದು ಟ್ವೀಟ್‌ನಲ್ಲಿ, ನಾವು ಸುರಕ್ಷಿತವಾಗಿದ್ದೇವೆ ಮತ್ತು ನಮ್ಮ ಧಾರ್ಮಿಕ ನಂಬಿಕೆಗಳೊಂದಿಗೆ ಯಾರಿಗೂ ಯಾವುದೇ ಸಮಸ್ಯೆ ಇರಬಾರದು. ಪ್ರಭು ಶ್ರೀರಾಮನ ಜೀವನವು ನಮಗೆ ಏಕತೆ ಮತ್ತು ಸಹೋದರತೆಯನ್ನು ಕಲಿಸುತ್ತದೆ ಎಂದು ಹೇಳಿದ್ದಾರೆ.

    ಪಾಕ್ ತಂಡದ ಪರ ಆಡಿದ ಎರಡನೇ ಹಿಂದೂ ಆಟಗಾರ ಕನೇರಿಯಾ ಆಗಿದ್ದಾರೆ. ದಾನಿಶ್ ಅವರಿಗೂ ಮುನ್ನ ಅವರ ಸಹೋದರ ಸಂಬಂಧಿ ಅನಿಲ್ ದಲಪತ್ ಆಡಿದ್ದರು. ದಲಪತ್ ಪಾಕ್ ತಂಡದಲ್ಲಿ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಆಗಿದ್ದರು. ಈ ಹಿಂದೆ ದಾನಿಶ್ ವೃತ್ತಿಜೀವನದ ಕೆಲವು ಕಹಿ ಘಟನೆಗಳನ್ನು ಹಂಚಿಕೊಂಡಿದ್ದು, ಅಫ್ರಿದಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.

  • ಕಾಶ್ಮೀರ ಎಂದಿಗೂ ನಮ್ಮದೇ ಎಂದ ಅಫ್ರಿದಿಗೆ ಪಾಕ್ ಮಾಜಿ ಕ್ರಿಕೆಟಿಗನಿಂದಲೇ ಛೀಮಾರಿ

    ಕಾಶ್ಮೀರ ಎಂದಿಗೂ ನಮ್ಮದೇ ಎಂದ ಅಫ್ರಿದಿಗೆ ಪಾಕ್ ಮಾಜಿ ಕ್ರಿಕೆಟಿಗನಿಂದಲೇ ಛೀಮಾರಿ

    ಇಸ್ಲಾಮಾಬಾದ್: ಕಾಶ್ಮೀರ ಎಂದಿಗೂ ನಮ್ಮದೇ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ ತಂಡದ ಆಲ್‍ರೌಂಡರ್ ಶಾಹಿದ್ ಅಫ್ರಿದಿಗೆ ಸಹ ಆಟಗಾರರಾಗಿದ್ದ ದಾನಿಶ್ ಕನೇರಿಯಾ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಶ್ರಮಿಸುತ್ತಿದ್ದ ಶಾಹಿದ್ ಅಫ್ರಿದಿಗೆ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಸಹಾಯ ಮಾಡಿದ್ದರು. ಆದರೆ ಅದಾದ ಕೆಲ ದಿನಗಳಲ್ಲಿ ಅಫ್ರಿದಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಬಗ್ಗೆ ಮಾತನಾಡಿ ಯುವಿ ಹಾಗೂ ಭಜ್ಜಿ ಸ್ನೇಹದಿಂದ ದೂರವಾಗಿದ್ದಾರೆ. ಇದೇ ವಿಚಾರವಾಗಿ ಈಗ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ಇನ್ಮೇಲಿಂದ ಅಫ್ರಿದಿಗೂ ನನಗೂ ಸಂಬಂಧವಿಲ್ಲ, ಅವನು ಮಿತಿ ಮೀರಿದ್ದಾನೆ: ಭಜ್ಜಿ ಗರಂ

    ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಕನೇರಿಯಾ, “ಶಾಹಿದ್ ಅಫ್ರಿದಿ ಯಾವುದೇ ವಿಷಯದ ಬಗ್ಗೆ ಮಾತನಾಡುವ ಮೊದಲು ಯೋಚಿಸಬೇಕು. ಅವರು ರಾಜಕೀಯಕ್ಕೆ ಸೇರಲು ಬಯಸಿದರೆ ಕ್ರಿಕೆಟ್‍ನೊಂದಿಗಿನ ಎಲ್ಲಾ ಸಂಬಂಧಗಳನ್ನು ತ್ಯಜಿಸಬೇಕು. ರಾಜಕಾರಣಿಗಳಂತೆ ಮಾತನಾಡುತ್ತಿದ್ದರೆ ಕ್ರಿಕೆಟ್‍ನಿಂದ ದೂರವಿರುವುದು ಮುಖ್ಯ. ಈ ರೀತಿಯ ಮಾತುಗಳು ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಪಾಕಿಸ್ತಾನ ಕ್ರಿಕೆಟ್ ತಂಡದ ಬಗ್ಗೆ ಕೆಟ್ಟ ಭಾವನೆ ಮೂಡಿಸುತ್ತೆ” ಎಂದು ಗುಡುಗಿದ್ದಾರೆ. ಇದನ್ನೂ ಓದಿ: ‘ಕಾಶ್ಮೀರ ಎಂದಿಗೂ ನಮ್ಮದೇ’- ಅಫ್ರಿದಿ ಹೇಳಿಕೆಗೆ ಧವನ್ ತಿರುಗೇಟು

    ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಮುನ್ನ ಅಫ್ರಿದಿ ಯಾವ ಮುಖ ಇಟ್ಟುಕೊಂಡು ಯುವಿ ಮತ್ತು ಭಜ್ಜಿ ಅವರ ಬಳಿ ಸಹಾಯ ಕೇಳಿದರು? ಸಹಾಯ ಪಡೆದುಕೊಂಡು ಅವರ ದೇಶ ಮತ್ತು ಪ್ರಧಾನಿಯ ಬಗ್ಗೆ ದ್ವೇಷದ ಹೇಳಿಕೆ ನೀಡಿದ್ದಾರೆ. ಇದು ಯಾವ ರೀತಿಯ ಸ್ನೇಹ ಎಂದು ಕನೇರಿಯಾ ಪ್ರಶ್ನಿಸಿ ಕನೇರಿಯಾ ಅಫ್ರಿದಿಗೆ ಛೀಮಾರಿ ಹಾಕಿದ್ದಾರೆ.

    ಕಳೆದ ಕೆಲವು ತಿಂಗಳುಗಳಿಂದ ಕನೇರಿಯಾ ಸುದ್ದಿಯಲ್ಲಿದ್ದು, ಹಿಂದೂ ಎಂಬ ಕಾರಣಕ್ಕಾಗಿ ಪಾಕಿಸ್ತಾನ ರಾಷ್ಟ್ರೀಯ ತಂಡದಲ್ಲಿ ಅವರು ಎದುರಿಸಿದ ತಾರತಮ್ಯವನ್ನು ಎತ್ತಿ ತೋರಿಸಿದ್ದಾರೆ. ಅದರಲ್ಲೂ ಅಫ್ರಿದಿಯ ನಡೆದುಕೊಂಡ ರೀತಿಯನ್ನು ವಿವರಿಸಿದ್ದರು. ಇದನ್ನೂ ಓದಿ: ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

    ಪಿಒಕೆ ಬಗ್ಗೆ ಅಫ್ರಿದಿ ಮಾತನಾಡಿದ ನಂತರ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಗೌತಮ್ ಗಂಭೀರ್ ಸೇರಿದಂತೆ ಅನೇಕ ಟೀಂ ಇಂಡಿಯಾ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ವಾಗ್ದಾಳಿ ನಡೆಸಿದರು. ತೀವ್ರ ಹಿನ್ನಡೆ ಅನುಭವಿಸಿದ ಅಫ್ರಿದಿ ಕೆಲವು ಭಾರತೀಯ ಕ್ರಿಕೆಟಿಗರೊಂದಿಗೆ ಎಲ್ಲ ಸ್ನೇಹವನ್ನು ಕಳೆದುಕೊಂಡರು.

  • ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

    ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

    – ಹಿಂದೂ ಆಟಗಾರನಾಗಿ ಪಾಕ್ ತಂಡದಲ್ಲಿ ಬಚಾವ್ ಆಗೋದು ಅತ್ಯಂತ ಕಷ್ಟ

    ಇಸ್ಲಾಮಾಬಾದ್: ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಶಹೀದ್ ಅಫ್ರಿದಿ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಗಂಭೀರ ಆರೋಪ ಮಾಡಿದ್ದಾರೆ.

    ಪಾಕ್ ತಂಡದ ಪರ ಆಡಿದ ಎರಡನೇ ಹಿಂದೂ ಆಟಗಾರ ದಾನಿಶ್ ಕರೇನಿಯಾ ಆಗಿದ್ದಾರೆ. ದಾನಿಶ್ ಅವರಿಗೂ ಮುನ್ನ ಅವರ ಸಹೋದರ ಸಂಬಂಧಿ ಅನಿಲ್ ದಲಪತ್ ಆಡಿದ್ದರು. ದಲಪತ್ ಪಾಕ್ ತಂಡದಲ್ಲಿ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್ ಆಗಿದ್ದರು. ದಾನಿಶ್ ವೃತ್ತಿಜೀವನದ ಕೆಲವು ಕಹಿ ಘಟನೆಗಳನ್ನು ಹಂಚಿಕೊಂಡಿದ್ದು, ಅಫ್ರಿದಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ಮಾಧ್ಯಮವೊಂದರ ಜೊತೆಗೆ ಮಾತನಾಡಿದ 39 ವರ್ಷದ ದಾನಿಶ್, “ಧರ್ಮದ ಹೊರತಾಗಿ ಅಫ್ರಿದಿ ಅವರ ತಾರಮ್ಯದ ಹಿಂದಿನ ಕಾರಣ ತಿಳಿಯಲು ಕಷ್ಟವಾಗುತ್ತಿತ್ತು. ದೇಶಿಯ ಕ್ರಿಕೆಟ್ ಅಥವಾ ಏಕದಿನ ಕ್ರಿಕೆಟ್ ಆಡುವಾಗ ಅಫ್ರಿದಿ ಯಾವಾಗಲೂ ನನ್ನ ವಿರುದ್ಧವೇ ಇರುತ್ತಿದ್ದರು. ಒಬ್ಬ ವ್ಯಕ್ತಿ ನಿಮ್ಮ ವಿರುದ್ಧ ದ್ವೇಷ ಸಾಧಿಸುತ್ತಿದ್ದರೆ ಅದು ಧರ್ಮವನ್ನು ಬಿಟ್ಟು ಬೇರೆ ಏನೂ ಇರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

    “ಹಿಂದೂ ಆಟಗಾರನಾಗಿ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಬಚಾವ್ ಆಗುವುದು ಅತ್ಯಂತ ಕಷ್ಟ. ಹಿಂದೂ ಧರ್ಮದವರಾಗಿದ್ದರಿಂದ ನನ್ನನ್ನು ತಂಡದಲ್ಲಿ ಅತ್ಯಂತ ಹೀನಾಯವಾಗಿ ನೋಡಲಾಗಿತ್ತು. ನಾನು ಹಿಂದೂ ಧರ್ಮದವನಾಗಿದ್ದರಿಂದ ಅಫ್ರಿದಿ ಯಾವಾಗಲೂ ನನ್ನ ವಿರುದ್ಧ ಕಿಡಿಕಾರುತ್ತಿದ್ದ. ಅಂತಹ ಸನ್ನವೇಶದಲ್ಲಿ ನನ್ನ ಸ್ಥಿತಿ ಅತ್ಯಂತ ಕೆಟ್ಟದಾಗಿತ್ತು” ಎಂದು ದಾನಿಶ್ ಕನೇರಿಯಾ ತಿಳಿಸಿದರು.

    ಅಫ್ರಿದಿಯಿಂದಾಗಿಯೇ ನಾನು ವೃತ್ತಿ ಜೀವನದಲ್ಲಿ ಕೇವಲ 18 ಏಕದಿನ ಪಂದ್ಯಗಳನ್ನು ಆಡಿದೆ. ಇಲ್ಲವಾದಲ್ಲಿ ಹೆಚ್ಚಿನ ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸುತ್ತಿದ್ದೆ. ಏಕದಿನ ಕ್ರಿಕೆಟ್‍ನಲ್ಲಿ ಶಾಹೀದ್ ಅಫ್ರಿದಿ ಬೇರೆ ಸ್ಪಿನ್ನರ್‍ಗಳಿಗೆ ನೀಡಿದ ಪ್ರೋತ್ಸಾಹ ಹಾಗೂ ಸಹಕಾರ ನನಗೆ ನೀಡಲಿಲ್ಲ. ಆದರೂ ಪಾಕಿಸ್ತಾನ 10 ವರ್ಷಗಳ ಕಾಲ ಆಡಿದ್ದೇನೆಂಬ ಸಂತೋಷ ಹಾಗೂ ಗೌರವ ಇದೆ” ಎಂದು ನೆನೆದರು.

    “ಆಡುವ ಇಲೆವೆನ್‍ನಲ್ಲಿ ಇಬ್ಬರು ಸ್ಪಿನ್ನರ್ ಗಳು ಇರುತ್ತಾರೆ. ಆದರೆ ನನ್ನ ಫಿಲ್ಡಿಂಗ್ ಉತ್ತಮವಾಗಿಲ್ಲ ಎಂದು ಹೇಳಲಾಗುತ್ತಿತ್ತು. ಆಗ ತಂಡದಲ್ಲಿ ಯಾರು ಹೇಳಿಕೊಳ್ಳುವ ಮಟ್ಟಿಗೆ ಉತ್ತಮ ಫಿಲ್ಡರ್ ಗಳಾಗಿರಲಿಲ್ಲ. ಅಷ್ಟೇ ಅಲ್ಲದೆ ಆಗ ಪಾಕ್ ತಂಡ ಅಷ್ಟೇನು ಹೆಸರು ಮಾಡಿರಲಿಲ್ಲ. ಮೋಯಿನ್ ಖಾನ್, ರಶೀದ್ ಲತೀಫ್, ಇಂಜಾಮಾಮ್ ಉಲ್ ಹಕ್ ಹಾಗೂ ಯೂನಿಸ್ ಖಾನ್ ಅವರ ನಾಯಕತ್ವದಲ್ಲಿ ಆಡಿದ್ದೇನೆ. ಅಫ್ರಿದಿ ನಾಯಕತ್ವದಲ್ಲಿ ಅತ್ಯಂತ ಕಡಿಮೆ ಪಂದ್ಯಗಳನ್ನಾಡಿದ್ದೇನೆ. ಇಂಜಾಮಾಮ್ ಹಾಗೂ ಯೂನಿಸ್ ಭಾಯ್ ನನಗೆ ಸಾಕಷ್ಟು ಸಹಕಾರ, ಪ್ರೋತ್ಸಾಹ ನೀಡಿದ್ದರು” ಎಂದು ತಿಳಿಸಿದರು.

  • ಮಗಳು ಆರತಿ ಮಾಡಿದ್ದಕ್ಕೆ ಟಿವಿ ಒಡೆದಿದ್ದೆ- ಶಾಹಿದ್ ಅಫ್ರಿದಿ

    ಮಗಳು ಆರತಿ ಮಾಡಿದ್ದಕ್ಕೆ ಟಿವಿ ಒಡೆದಿದ್ದೆ- ಶಾಹಿದ್ ಅಫ್ರಿದಿ

    ಇಸ್ಲಾಮಾಬಾದ್: ನನ್ನ ಮಗಳು ಆರತಿ ಮಾಡುವಂತೆ ನಟಿಸುವದನ್ನು ನೋಡಿ ನಾನು ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟ್ ಆಟಗಾರ ಶಾಹಿದ್ ಅಫ್ರಿದಿ ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಶಾಹಿದ್ ಅಫ್ರಿದಿ ಈ ಕುರಿತು ಸಂದರ್ಶನವೊಂದರಲ್ಲಿ ಹೇಳಿಕೆ ನೀಡಿರುವ ಹಳೆಯ ವಿಡಿಯೋ ಇದೀಗ ವೈರಲ್ ಆಗಿದೆ. ಟಿವಿ ವಾಹಿನಿಯ ನಿರೂಪಕಿ ಸಂದರ್ಶನವೊಂದರಲ್ಲಿ ನೀವು ಎಷ್ಟು ಬಾರಿ ಟಿವಿ ಒಡೆದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಅಫ್ರಿದಿ ಪ್ರತಿಕ್ರಿಯಿಸಿದ್ದು, ನಾನು ಒಂದು ಬಾರಿ ಟಿವಿಯನ್ನು ಒಡೆದಿದ್ದೇನೆ ಎಂದು ತಿಳಿಸಿದ್ದಾರೆ.

    ನನ್ನ ಪತ್ನಿಯ ಕಾರಣದಿಂದಾಗಿ ಒಂದು ಬಾರಿ ಟಿವಿ ಒಡೆದಿದ್ದೇನೆ. ಭಾರತೀಯ ವಾಹಿನಿಯೊಂದರ ಡ್ರಾಮಾ ಶೋ ತುಂಬಾ ಜನಪ್ರಿಯವಾಗಿತ್ತು. ಈ ಶೋವನ್ನು ನನ್ನ ಪತ್ನಿ ನೋಡುತ್ತಿದ್ದಳು, ಆಗ ನೀನೊಬ್ಬಳೆ ನೋಡು ಮಕ್ಕಳು ಇದನ್ನು ನೋಡಲು ಬಿಡಬೇಡ ಎಂದು ಹೇಳಿದ್ದೆ. ಒಂದು ಬಾರಿ ನಾನು ರೂಮಿನಿಂದ ಹೊರಗಡೆ ಬಂದಾಗ ನನ್ನ ಮಕ್ಕಳಲ್ಲಿ ಒಬ್ಬಳು ಟಿವಿ ಶೋ ನೋಡಿಕೊಂಡು ಆರತಿ ಮಾಡುವುದನ್ನು ಅನುಕರಣೆ ಮಾಡುತ್ತಿದ್ದಳು. ಇದನ್ನು ಕಂಡ ತಕ್ಷಣ ಕೋಪ ಬಂತು ಹೀಗಾಗಿ ಟಿವಿಯನ್ನೇ ಒಡೆದು ಹಾಕಿದ್ದೆ ಎಂದು ಹೇಳಿಕೊಂಡಿದ್ದಾರೆ.

    ಟ್ವಿಟ್ಟರ್ ಬಳಕೆದಾರರೊಬ್ಬರು ಈ ಹಳೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಇದೀಗ ಫುಲ್ ವೈರಲ್ ಆಗಿದೆ. ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ ಅಫ್ರಿದಿ ಹೇಳಿಕೆ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರರ ದಾನಿಶ್ ಕನೇರಿಯಾ, ಹಿಂದೂ ಆಗಿದ್ದಕ್ಕೆ ತಂಡದಲ್ಲಿ ನನ್ನನ್ನು ಕೀಳಾಗಿ ನೋಡಲಾಗುತಿತ್ತು ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಅಫ್ರಿದಿ ವಿಡಿಯೋ ವೈರಲ್ ಆಗಿದೆ.

    ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದ ವೇಳೆ ತಂಡದಲ್ಲಿ ಹಿಂದೂ ಕ್ರಿಕೆಟ್ ಆಟಗಾರರನ್ನು ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು ಎಂಬುವುದನ್ನು ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಬಹಿರಂಗ ಪಡಿಸಿದ್ದರು.

    ಪಾಕ್ ಕ್ರಿಕೆಟ್ ತಂಡದಲ್ಲಿ ಹೆಚ್ಚಿನ ಆಟಗಾರರು ಧರ್ಮ, ಜಾತಿ, ಪ್ರದೇಶದ ಆಧಾರದ ಮೇಲೆ ತಾರತಮ್ಯ ಮಾಡಲಾಗುತ್ತಿದೆ. ಮಾಜಿ ಆಟಗಾರ ದಾನಿಶ್ ಕನೇರಿಯಾ ಅವರು ಸಾಕಷ್ಟು ತಾರತಮ್ಯಕ್ಕೆ ಒಳಗಾಗಿದ್ದಾರೆ. ಅವರೊಂದಿಗೆ ಕುಳಿತು ಊಟ ಮಾಡಲು ಕೂಡ ಆಟಗಾರರು ಇಷ್ಟ ಪಡುತ್ತಿರಲಿಲ್ಲ. ಇಡೀ ತಂಡ ಇದೇ ರೀತಿ ವರ್ತಿಸುತಿತ್ತು. ಅದರಲ್ಲೂ ಹೆಚ್ಚಿನ ಆಟಗಾರರು ಈ ರೀತಿ ಇದ್ದರು ಎಂದು ಅಖ್ತರ್ ಹೇಳಿದ್ದರು.

    ಯಾವಾಗಲೂ ನಿನ್ನ ಧರ್ಮ ಯಾವುದು? ಪ್ರದೇಶ ಯಾವುದು? ಎಂದು ಮಾತನಾಡುತ್ತಿದ್ದರು. ಕರಾಚಿ, ಪಂಜಾಬ್, ಪೇಶಾವರ್ ಪ್ರದೇಶಕ್ಕೆ ಸೇರಿದವರಾ ಎಂದು ಹೆಚ್ಚು ಚರ್ಚೆ ಮಾಡುತ್ತಿದ್ದರು. ಅದರಲ್ಲೂ ಮೂವರು ಆಟಗಾರರು ಹೆಚ್ಚು ಈ ರೀತಿ ವರ್ತಿಸುತ್ತಿದ್ದರು. ಹಿಂದೂ ಎಂಬ ಕಾರಣಕ್ಕೆ ದಾನಿಶ್ ಅವರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಆದರೆ ಅಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆತನಿಂದಲೇ ಗೆಲುವು ಪಡೆದಿದ್ದೆವು. ಆತ ತಂಡದಲ್ಲಿರದಿದ್ದರೆ ಖಂಡಿತಾ ಪಂದ್ಯವನ್ನು ಕಳೆದುಕೊಳ್ಳುತ್ತಿದ್ದೆವು. ಆದರೆ ಆತನಿಗೆ ಸಿಗಬೇಕಾದ ಗೌರವ ಮಾತ್ರ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

    ಶೋಯೆಬ್ ಅಖ್ತರ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದ ದಾನಿಶ್ ಕನೇರಿಯಾ, ಅಖ್ತರ್ ಹೇಳಿರುವುದು ಸತ್ಯ. ಆತ ಒಬ್ಬ ಲೆಜೆಂಡ್ ಆಟಗಾರ. ನನಗೆ ಯಾವಾಗಲೂ ಬೆಂಬಲವಾಗಿ ನಿಂತಿರುತ್ತಿದ್ದ. ಆದರೆ ಆ ಸಮಯದಲ್ಲಿ ತಂಡದ ಇತರೆ ಆಟಗಾರರು ತಾರತಮ್ಯ ಮಾಡುತ್ತಿದ್ದರು. ಅಖ್ತರ್ ರೊಂದಿಗೆ ಕೆಲ ಆಟಗಾರರು ಕೂಡ ಬೆಂಬಲ ನೀಡಿದ್ದಾರೆ. ಶೀಘ್ರದಲ್ಲೇ ನನ್ನ ವಿರುದ್ದ ತಾರತಮ್ಯ ನಡೆಸಿದ ಆಟಗಾರರ ಹೆಸರುಗಳನ್ನು ಬಹಿರಂಗ ಪಡಿಸುತ್ತೇನೆ ಎಂದಿದ್ದರು. ಅಲ್ಲದೆ ಪಾಕ್ ಪರ ಆಡುವುದು ಅದೃಷ್ಟವಾಗಿದ್ದು, ಅದನ್ನು ಗೌರವಿಸುತ್ತೇನೆ ಎಂದಿದ್ದರು.

  • ಭಾರತ ಪೌರತ್ವಕ್ಕೆ ಅರ್ಜಿ ಸಲ್ಲಿಸಿ – ದಾನಿಶ್ ಕನೇರಿಯಾಗೆ ಯುಪಿ ಸಚಿವ ಸಲಹೆ

    ಭಾರತ ಪೌರತ್ವಕ್ಕೆ ಅರ್ಜಿ ಸಲ್ಲಿಸಿ – ದಾನಿಶ್ ಕನೇರಿಯಾಗೆ ಯುಪಿ ಸಚಿವ ಸಲಹೆ

    ಲಕ್ನೋ: ಪಾಕಿಸ್ತಾನದ ಕ್ರಿಕೆಟ್ ತಂಡದಲ್ಲಿ ಹಿಂದೂ ಎಂಬ ಕಾರಣಕ್ಕೆ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದ ಮಾಜಿ ಆಟಗಾರ ದಾನಿಶ್ ಕನೇರಿಯಾ ಅವರಿಗೆ ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸುವಂತೆ ಉತ್ತರ ಪ್ರದೇಶ ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಮತ್ತು ಹಜ್ ಸಚಿವ ಮೊಹ್ಸಿನ್ ರಾಜಾ ಸಲಹೆ ನೀಡಿದ್ದಾರೆ.

    ಪಾಕಿಸ್ತಾನ ಸೇರಿದಂತೆ ಇತರೆ ದೇಶಗಳಲ್ಲಿ ಕಿರುಕುಳಕ್ಕೆ ಒಳಗಾಗುತ್ತಿರುವ ಮಂದಿ ಭಾರತದ ಪೌರತ್ವಕ್ಕೆ ಅರ್ಜಿಸಲ್ಲಿಸುವಂತೆ ಪ್ರತಿಕಾಗೋಷ್ಠಿಯಲ್ಲಿ ಮೊಹ್ಸಿನ್ ರಾಜಾ ತಿಳಿಸಿದರು. ಈ ವೇಳೆ ಪತ್ರಕರ್ತರಿಂದ ಕೇಳಿ ಬಂದ ದಾನಿಶ್ ಕನೇರಿಯಾ ಅವರ ವಿರುದ್ಧ ಟೀಕೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕನೇರಿಯಾ ಸೇರಿದಂತೆ ಧಾರ್ಮಿಕ ಅಸಮಾನತೆ, ಕಿರುಕುಳಕ್ಕೆ ಒಳಗಾಗಿರುವ ಜನರು ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಉತ್ತರಿಸಿದರು.

    ದಾನಿಶ್ ಕನೇರಿಯಾ ಅವರನ್ನು ಡ್ಯಾನಿಶ್, ಯೂಸುಫ್ ಯೋಹಾನಾರನ್ನು ಮೊಹಮ್ಮದ್ ಯೂಸುಫ್ ಆಗಿ ಬದಲಾಯಿಸಲಾಯಿತು. ಈ ರೀತಿ ಪಾಕಿಸ್ತಾನದಲ್ಲಿ ಎಷ್ಟು ಸಾಮಾನ್ಯ ನಾಗರಿಕರು ತಾರತಮ್ಯ ಎದುರಿಸಿರಬಹುದು. ಅಲ್ಲಿ ಎಷ್ಟು ಕಿರುಕುಳ ನೀಡಲಾಗುತ್ತಿದೆ ಎಂಬುವುದು ಸುಲಭವಾಗಿ ಆರ್ಥೈಸಿಕೊಳ್ಳಬಹುದು ಎಂದು ಮೊಹ್ಸಿನ್ ರಾಜಾ ಟ್ವೀಟ್ ಮಾಡಿದ್ದಾರೆ.

    ಇತ್ತ ದಾನಿಶ್ ಕನೇರಿಯಾ ತಮ್ಮ ಹೇಳಿಕೆ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ತಿರುಗೇಟು ಕೊಟ್ಟಿದ್ದು, ನಾನು ನಿಮ್ಮಂತೆ ಹಣಕ್ಕಾಗಿ ದೇಶವನ್ನು ಮಾರಾಟ ಮಾಡಿಲ್ಲ. ತಾರತಮ್ಯ ಎದುರಾದರೂ ನಾನು ಕ್ರಿಕೆಟ್‍ಗಾಗಿ ರಕ್ತವನ್ನು ಹರಿಸಿದ್ದೇನೆ ಎಂದು ಹೇಳಿದ್ದಾರೆ. ಕೆಲದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ಮಾಜಿ ಆಟಗಾರ ಶೋಯೆಬ್ ಅಖ್ತರ್, ಪಾಕ್ ಕ್ರಿಕೆಟ್ ತಂಡದಲ್ಲಿದ್ದ ವೇಳೆ ದಾನಿಶ್ ಕನೇರಿಯಾ ಎಷ್ಟು ತಾರತಮ್ಯಕ್ಕೆ ಒಳಗಾಗಿದ್ದರು ಎಂದು ವಿವರಿಸಿದ್ದರು. ಅಖ್ತರ್ ಅವರ ಈ ಹೇಳಿಕೆಗಳು ಸತ್ಯ, ಶೀಘ್ರವೇ ತಮ್ಮನ್ನು ತಾರತಮ್ಯದಿಂದ ನಡೆಸಿಕೊಂಡ ಪ್ರಮುಖ ಆಟಗಾರರ ಹೆಸರುಗಳನ್ನು ರಿವೀಲ್ ಮಾಡುವುದಾಗಿಯೂ ದಾನಿಶ್ ಕನೇರಿಯಾ ತಿಳಿಸಿದ್ದರು. ಆದರೆ ದಾನಿಶ್‍ರ ಈ ಹೇಳಿಕೆಗೆ ಸಾಕಷ್ಟು ಮಂದಿ ಟೀಕೆ ಮಾಡಿದ್ದರು.

  • ಹಿಂದೂ ಎಂಬ ಕಾರಣಕ್ಕೆ ಹೀನಾಯವಾಗಿ ನೋಡ್ತಿದ್ರು – ಶೋಯೆಬ್ ಅಖ್ತರ್

    ಹಿಂದೂ ಎಂಬ ಕಾರಣಕ್ಕೆ ಹೀನಾಯವಾಗಿ ನೋಡ್ತಿದ್ರು – ಶೋಯೆಬ್ ಅಖ್ತರ್

    ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡುತ್ತಿದ್ದ ವೇಳೆ ತಂಡದಲ್ಲಿ ಹಿಂದೂ ಕ್ರಿಕೆಟ್ ಆಟಗಾರರನ್ನು ಎಷ್ಟು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು ಎಂಬುವುದನ್ನು ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಬಹಿರಂಗ ಪಡಿಸಿದ್ದಾರೆ.

    ಪಾಕ್ ಕ್ರಿಕೆಟ್ ತಂಡದಲ್ಲಿ ಹೆಚ್ಚಿನ ಆಟಗಾರರು ಧರ್ಮ, ಜಾತಿ, ಪ್ರದೇಶದ ಆಧಾರದ ಮೇಲೆ ತಾರತಮ್ಯ ಮಾಡುತ್ತಿದ್ದರು. ಮಾಜಿ ಆಟಗಾರ ದಾನಿಶ್ ಕನೇರಿಯಾ ಅವರು ಸಾಕಷ್ಟು ತಾರತಮ್ಯಕ್ಕೆ ಒಳಗಾಗಿದ್ದಾರೆ. ಅವರೊಂದಿಗೆ ಕುಳಿತು ಊಟ ಮಾಡಲು ಕೂಡ ಆಟಗಾರರು ಇಷ್ಟ ಪಡುತ್ತಿರಲಿಲ್ಲ. ಇಡೀ ತಂಡ ಇದೇ ರೀತಿ ವರ್ತಿಸುತಿತ್ತು. ಅದರಲ್ಲೂ ಹೆಚ್ಚಿನ ಆಟಗಾರರು ಈ ರೀತಿ ಇದ್ದರು ಎಂದು ಅಖ್ತರ್ ಹೇಳಿದ್ದಾರೆ.

    ಯಾವಾಗಲೂ ನಿನ್ನ ಧರ್ಮ ಯಾವುದು? ಪ್ರದೇಶ ಯಾವುದು? ಎಂದು ಮಾತನಾಡುತ್ತಿದ್ದರು. ಕರಾಚಿ, ಪಂಜಾಬ್, ಪೇಜಾವರ್ ಪ್ರದೇಶಕ್ಕೆ ಸೇರಿದವರಾ ಎಂದು ಹೆಚ್ಚು ಚರ್ಚೆ ಮಾಡುತ್ತಿದ್ದರು. ಅದರಲ್ಲೂ ಮೂವರು ಆಟಗಾರರು ಹೆಚ್ಚು ಈ ರೀತಿ ವರ್ತಿಸುತ್ತಿದ್ದರು. ಹಿಂದೂ ಎಂಬ ಕಾರಣಕ್ಕೆ ದಾನಿಶ್ ರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದರು. ಆದರೆ ಅಂದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ಆತನಿಂದಲೇ ಗೆಲುವು ಪಡೆದಿದ್ದೆವು. ಆತ ತಂಡದಲ್ಲಿರದಿದ್ದರೆ ಖಂಡಿತಾ ಪಂದ್ಯವನ್ನು ಕಳೆದುಕೊಳ್ಳುತ್ತಿದ್ದೆವು. ಆದರೆ ಆತನಿಗೆ ಲಭಿಸಬೇಕಾದ ಗೌರವ ಮಾತ್ರ ಲಭಿಸಲಿಲ್ಲ ಎಂದಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ದಾನಿಶ್ ಕನೇರಿಯಾ, ಅಖ್ತರ್ ಹೇಳಿರುವುದು ಸತ್ಯ. ಆತ ಒಬ್ಬ ಲೆಜೆಂಡ್ ಆಟಗಾರ. ನನಗೆ ಯಾವಾಗಲೂ ಬೆಂಬಲವಾಗಿ ನಿಂತಿರುತ್ತಿದ್ದ. ಆದರೆ ಆ ಸಮಯದಲ್ಲಿ ತಂಡದ ಇತರೆ ಆಟಗಾರರು ತಾರತಮ್ಯ ಮಾಡುತ್ತಿದ್ದರು. ಅಖ್ತರ್ ರೊಂದಿಗೆ ಕೆಲ ಆಟಗಾರರು ಕೂಡ ಬೆಂಬಲ ನೀಡಿದ್ದಾರೆ. ಶೀಘ್ರದಲ್ಲೇ ನನ್ನ ವಿರುದ್ದ ತಾರತಮ್ಯ ನಡೆಸಿದ ಆಟಗಾರರ ಹೆಸರುಗಳನ್ನು ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ. ಅಲ್ಲದೇ ಪಾಕ್ ಪರ ಆಡುವುದು ಅದೃಷ್ಟವಾಗಿದ್ದು, ಅದನ್ನು ಗೌರವಿಸುತ್ತೇನೆ ಎಂದಿದ್ದಾರೆ.

    ಪಾಕಿಸ್ತಾನ ಪರ ಅಂತರ್ ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ 2ನೇ ಆಟಗಾರ ದಾನಿಶ್ ಆಗಿದ್ದು, ಅನಿಲ್ ದಲ್ಪತ್ ಮೊದಲ ಆಟಗಾರ. ದಾನಿಶ್ ಪಾಕ್ ಪರ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 261 ವಿಕೆಟ್ ಪಡೆದಿದ್ದರೆ. ಏಕದಿನ ಕ್ರಿಕೆಟ್ ನಲ್ಲಿ 18 ಪಂದ್ಯಗಳಿಂದ 15 ವಿಕೆಟ್ ಗಳಿಸಿದ್ದಾರೆ.