Tag: danish azad ansari

  • ಮಾನ್ಯತೆ ಇಲ್ಲದ ಮದರಸಾಗಳ ಆದಾಯ ಪರಿಶೀಲಿಸಲು ಮುಂದಾದ ಯುಪಿ ಸರ್ಕಾರ

    ಮಾನ್ಯತೆ ಇಲ್ಲದ ಮದರಸಾಗಳ ಆದಾಯ ಪರಿಶೀಲಿಸಲು ಮುಂದಾದ ಯುಪಿ ಸರ್ಕಾರ

    ಲಕ್ನೋ: ರಾಜ್ಯದಲ್ಲಿ ಮಾನ್ಯತೆ ಪಡೆಯದ ಮದರಸಾಗಳಲ್ಲಿರುವ ಶಿಕ್ಷಕರ ಸಂಖ್ಯೆ, ಪಠ್ಯಕ್ರಮ ಮತ್ತು ಅಲ್ಲಿ ಲಭ್ಯವಿರುವ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಉತ್ತರ ಪ್ರದೇಶ ಸರ್ಕಾರ ಸಮೀಕ್ಷೆ ನಡೆಸಲು ಮುಂದಾಗಿದೆ.

    ಈ ಕುರಿತಂತೆ ಪ್ರತಿಕ್ರಿಯಿಸಿರುವ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಅವರು, ಮದರಸಾಗಳಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ಮೂಲ ಸೌಕರ್ಯಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‍ಸಿಪಿಸಿಆರ್) ಅಗತ್ಯಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೈಲಿನಲ್ಲಿ ಬಂದ ಪಾರ್ಸೆಲ್‍ಗಳನ್ನು ಬೀಸಾಡಿದ ಸಿಬ್ಬಂದಿ – ವೈರಲ್ ವೀಡಿಯೋಗೆ ರೈಲ್ವೆ ಇಲಾಖೆ ಸ್ಪಷ್ಟನೆ

    ಶೀಘ್ರದಲ್ಲೇ ಸಮೀಕ್ಷೆ ಆರಂಭವಾಗಲಿದೆ. ಸಮೀಕ್ಷೆ ವೇಳೆ ಮದರಸಾದ ಹೆಸರು ಮತ್ತು ಅದನ್ನು ನಿರ್ವಹಿಸುವ ಸಂಸ್ಥೆ, ಅದು ಖಾಸಗಿ ಅಥವಾ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆಯೋ, ಅಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಕುಡಿಯುವ ನೀರು, ಶೌಚಾಲಯ, ಪೀಠೋಪಕರಣಗಳು ಮತ್ತು ವಿದ್ಯುತ್ ಸರಬರಾಜು ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಜೊತೆಗೆ ಮದರಸಾದಲ್ಲಿರುವ ಶಿಕ್ಷಕರ ಸಂಖ್ಯೆ, ಪಠ್ಯಕ್ರಮ, ಆದಾಯದ ಮೂಲ ಮತ್ತು ಯಾವುದೇ ಸರ್ಕಾರೇತರ ಸಂಸ್ಥೆ (ಎನ್‍ಜಿಒ)ಯೊಂದಿಗೆ ಹೊಂದಿರುವ ಸಂಬಂಧದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ ಎಂದಿದ್ದಾರೆ.

    ಈ ಸಮೀಕ್ಷೆಯ ನಂತರ ರಾಜ್ಯ ಸರ್ಕಾರ ಹೊಸ ಮದರಸಾಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತದೆಯೇ ಎಂಬ ಪ್ರಶ್ನೆಗೆ, ಸದ್ಯ ಮಾನ್ಯತೆ ಇಲ್ಲದ ಮದರಸಾಗಳ ಬಗ್ಗೆ ಮಾತ್ರ ಮಾಹಿತಿ ಸಂಗ್ರಹಿಸುವುದು ಸರ್ಕಾರದ ಉದ್ದೇಶವಾಗಿದೆ. ಪ್ರಸ್ತುತ ಉತ್ತರ ಪ್ರದೇಶದಲ್ಲಿ ಒಟ್ಟು 16,461 ಮದರಸಾಗಳಿದ್ದು, ಈ ಪೈಕಿ 560ಕ್ಕೆ ಸರ್ಕಾರದ ಅನುದಾನ ನೀಡಿರುವುದು ಗಮನಾರ್ಹವಾಗಿದೆ. ರಾಜ್ಯದಲ್ಲಿ ಕಳೆದ ಆರು ವರ್ಷಗಳಿಂದ ಹೊಸ ಮದರಸಾಗಳು ಅನುದಾನದ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಗರ್ಭಿಣಿ ಪ್ರವಾಸಿ ಸಾವು- ಪೋರ್ಚುಗಲ್‍ನ ಆರೋಗ್ಯ ಸಚಿವೆ ರಾಜೀನಾಮೆ

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ, ಮೋದಿ, ಯೋಗಿಯನ್ನು ಮುಸ್ಲಿಮರು ಪ್ರೀತಿಸುತ್ತಾರೆ: ದ್ಯಾನಿಶ್‌ ಅಜಾದ್‌ ಅನ್ಸಾರಿ

    ಬಿಜೆಪಿ, ಮೋದಿ, ಯೋಗಿಯನ್ನು ಮುಸ್ಲಿಮರು ಪ್ರೀತಿಸುತ್ತಾರೆ: ದ್ಯಾನಿಶ್‌ ಅಜಾದ್‌ ಅನ್ಸಾರಿ

    ಲಕ್ನೋ: ಮುಸ್ಲಿಂ ಸಮುದಾಯದವರು ಬಿಜೆಪಿ, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌ ಅವರನ್ನು ಪ್ರೀತಿಸುತ್ತಾರೆ ಎಂದು ಉತ್ತರ ಪ್ರದೇಶ ರಾಜ್ಯ ಸರ್ಕಾರದ ಸಚಿವ ದ್ಯಾನಿಶ್‌ ಅಜಾದ್‌ ಅನ್ಸಾರಿ ಅಭಿಪ್ರಾಯಪಟ್ಟಿದ್ದಾರೆ.

    ಆ ಅಭಿಪ್ರಾಯ (ಸುನ್ನಿ ಮುಸ್ಲಿಮರ) ಬದಲಾಗಿದೆ. ಯೋಗಿ ಸರ್ಕಾರವು ಮುಸ್ಲಿಂ ಸಮುದಾಯದ ಎಲ್ಲಾ ಪಂಗಡಗಳ ಅಭಿವೃದ್ಧಿಗಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಪಡಿತರ, ಮನೆ, ಆಯುಷ್ಮಾನ್ ಕಾರ್ಡ್ ಯೋಜನೆಗಳಿಂದ ಎಲ್ಲ ವರ್ಗದವರಿಗೂ ಲಾಭವಾಗಿದೆ. ಮುಸ್ಲಿಮರೂ ಅದನ್ನು ಅರ್ಥಮಾಡಿಕೊಂಡಿದ್ದಾರೆ. ಆದ್ದರಿಂದ ಅವರು ಬಿಜೆಪಿ, ಯೋಗಿ ಮತ್ತು ಮೋದಿಯನ್ನು ಪ್ರೀತಿಸುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೆಹಬೂಬಾ ಮುಫ್ತಿ ಏನೇ ಹೇಳುತ್ತಿದ್ದರೂ ಅದಕ್ಕೆಲ್ಲಾ ಬಿಜೆಪಿಯೇ ಹೊಣೆ: ಸಂಜಯ್ ರಾವತ್

    ಈಚೆಗೆ ನಡೆದ ಯುಪಿ ವಿಧಾನಸಭೆ ಚುನಾವಣೆಯಲ್ಲಿ ಸುಮಾರು 10 ಪ್ರತಿಶತದಷ್ಟು ಮುಸ್ಲಿಂ ಜನಸಂಖ್ಯೆಯು ಬಿಜೆಪಿಗೆ ಮತ ಹಾಕಿದೆ ಎಂದು ಅನ್ಸಾರಿ ತಿಳಿಸಿದ್ದಾರೆ.

    ಮುಸ್ಲಿಂ ಸಮುದಾಯದ ಸಾಮಾನ್ಯರು ನನ್ನನ್ನು ವಿರೋಧಿಸುವುದಿಲ್ಲ. ಬೇರೆ ಯಾವುದೇ ಪಕ್ಷದೊಂದಿಗೆ ಸಂಬಂಧ ಹೊಂದಿರುವವರು, ಎಸ್‌ಪಿ ಮತ್ತು ಬಿಎಸ್‌ಪಿ ಮನಸ್ಥಿತಿ ಹೊಂದಿರುವವರು ಮಾತ್ರ ನನ್ನನ್ನು ವಿರೋಧಿಸುತ್ತಾರೆ. ಸಾಮಾನ್ಯ ಮುಸ್ಲಿಮರು ಬಿಜೆಪಿಯ ಕೆಲಸವನ್ನು ಇಷ್ಟಪಡುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನು ಓದಿ: ದಿಗ್ವಿಜಯ್ ಸಿಂಗ್ ಸಹಿತ 6 ಮಂದಿಗೆ 1 ವರ್ಷ ಜೈಲು ಶಿಕ್ಷೆ

    ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರದ ಸಂಪುಟದಲ್ಲಿ ಸ್ಥಾನ ಪಡೆದ ಏಕೈಕ ಮುಸ್ಲಿಂ ಸಚಿವ ದ್ಯಾನಿಶ್ ಆಜಾದ್ ಅನ್ಸಾರಿ.

    ಬಲ್ಲಿಯಾ ಕ್ಷೇತ್ರದವರಾದ ಅನ್ಸಾರಿ ಅವರು ವಿಧಾನಸಭೆ ಹಾಗೂ ವಿಧಾನ ಪರಿಷತ್ ಎರಡೂ ಸದನಗಳ ಸದಸ್ಯರಲ್ಲ. ಆದರೆ ಯೋಗಿ ಆದಿತ್ಯನಾಥ್ ಅವರ ಸರ್ಕಾರದಲ್ಲಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದ 52 ಸಚಿವರಲ್ಲಿ ಅವರೂ ಸೇರಿದ್ದಾರೆ.