Tag: Danish Ali

  • ಬಿಎಸ್‌ಪಿಯಿಂದ ಅಮಾನತಾಗಿದ್ದ ಡ್ಯಾನಿಶ್‌ ಅಲಿ ಕಾಂಗ್ರೆಸ್‌ ಸೇರ್ಪಡೆ

    ಬಿಎಸ್‌ಪಿಯಿಂದ ಅಮಾನತಾಗಿದ್ದ ಡ್ಯಾನಿಶ್‌ ಅಲಿ ಕಾಂಗ್ರೆಸ್‌ ಸೇರ್ಪಡೆ

    ನವದೆಹಲಿ: ಬಹುಜನ ಸಮಾಜ ಪಕ್ಷದಿಂದ (BSP) ಅಮಾನತುಗೊಂಡಿದ್ದ ಸಂಸದ ಡ್ಯಾನಿಶ್ ಅಲಿ ಅವರು ಲೋಕಸಭಾ ಚುನಾವಣೆಗೆ (Lok Sabha Elections 2024) ಮುನ್ನ ಬುಧವಾರ ಕಾಂಗ್ರೆಸ್ (Congress) ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

    ಕಳೆದ ವಾರ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರನ್ನು ಭೇಟಿ ಮಾಡಿದ್ದರು. ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಮುಂಬರುವ ಚುನಾವಣೆಯಲ್ಲಿ ಅಮ್ರೋಹಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದರು. ಇದನ್ನೂ ಓದಿ: ಸದಾನಂದಗೌಡರು ಬಿಜೆಪಿ ಪಕ್ಷ ಬಿಡ್ತಾರೆ ಅನ್ನೋದು ಸುಳ್ಳು: ಶೋಭಾ ಕರಂದ್ಲಾಜೆ

    ಪಕ್ಷ ವಿರೋಧಿ ಚಟುವಟಿಕೆಗಳ ಕಾರಣಕ್ಕೆ ಡ್ಯಾನಿಶ್‌ ಅಲಿ (Danish Ali) ಅವರನ್ನು ಕಳೆದ ವರ್ಷ ಬಿಎಸ್‌ಪಿ ಅಮಾನತುಗೊಳಿಸಿತ್ತು. ಅಮ್ರೋಹಾ ಸಂಸದ ಪಕ್ಷದ ಆರೋಪವನ್ನು ನಿರಾಕರಿಸಿದ್ದರು. ಅವರು ಬಿಜೆಪಿ ನೇತೃತ್ವದ ಸರ್ಕಾರದ ‘ಜನವಿರೋಧಿ’ ನೀತಿಗಳ ವಿರುದ್ಧ ಮಾತ್ರ ಧ್ವನಿ ಎತ್ತಿದ್ದೆ ಎಂದು ಪ್ರತಿಪಾದಿಸಿದ್ದರು.

    ಮಾಯಾವತಿ ಅವರು ನನ್ನನ್ನು ಬಿಎಸ್‌ಪಿ ಸಂಸದೀಯ ಪಕ್ಷದ ನಾಯಕ ಸ್ಥಾನವನ್ನೂ ನೀಡಿದ್ದರು. ನಾನು ಯಾವಾಗಲೂ ಅವರ ಅಪಾರ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತಿದ್ದೆ. ಆವರ ಇಂದಿನ ನಿರ್ಧಾರ ದುರದೃಷ್ಟಕರ. ನಾನು ಎಲ್ಲಾ ಕಠಿಣ ಕೆಲಸಗಳನ್ನು ಮಾಡಿದ್ದೇನೆ. ಬಿಎಸ್‌ಪಿಯನ್ನು ಬಲಪಡಿಸಲು ಶ್ರದ್ಧೆಯಿಂದ ಕೆಲಸ ಮಾಡಿದ್ದೇನೆ. ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆಗಳನ್ನು ಎಂದಿಗೂ ಮಾಡಿಲ್ಲ ಎಂದು ತಿಳಿಸಿದ್ದರು. ಇದನ್ನೂ ಓದಿ: ಸ್ಟ್ರಾಂಗ್ ಯಾರು ಅನ್ನೋದು ಜಗತ್ತಿಗೆ ಗೊತ್ತಿದೆ- ಸಿಎಂ ವಿರುದ್ಧ ಸಿ.ಟಿ ರವಿ ಕಿಡಿ

    ಹೆಚ್.ಡಿ.ದೇವೇಗೌಡ ಅವರ ಶಿಫಾರಸಿನ ಮೇರೆಗೆ ಟಿಕೆಟ್ ದಕ್ಕಿಸಿಕೊಂಡಿದ್ದರು. ಇದಕ್ಕೂ ಮೊದಲು ಅವರು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಈಗ ಬಿಎಸ್ಪಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

  • ಬಿಜೆಪಿ ನಾಯಕನಿಂದ ನಿಂದನೆಗೊಳಗಾದ ಸಂಸದರನ್ನು ರಾಹುಲ್ ಗಾಂಧಿ ಭೇಟಿ

    ಬಿಜೆಪಿ ನಾಯಕನಿಂದ ನಿಂದನೆಗೊಳಗಾದ ಸಂಸದರನ್ನು ರಾಹುಲ್ ಗಾಂಧಿ ಭೇಟಿ

    – ಈಗ ನಾನು ಒಬ್ಬಂಟಿಯಲ್ಲ ಅಂದ್ರು ಡ್ಯಾನಿಶ್ ಅಲಿ

    ನವದೆಹಲಿ: ಬಿಜೆಪಿ ನಾಯಕ, ಸಂಸದ ರಮೇಶ್ ಬಿಧುರಿಯಿಂದ (Ramesh Bidhuri) ನಿಂದನೆಗೊಳಗಾದ ಬಹುಜನ ಸಮಾಜ ಪಕ್ಷದ (BSP) ಸಂಸದ ಡ್ಯಾನಿಶ್ ಅಲಿಯನ್ನು (Danish Ali) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭೇಟಿಯಾಗಿದ್ದಾರೆ.

    ಡ್ಯಾನಿಶ್ ಅಲಿಯನ್ನು ಭೇಟಿಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಹುಲ್ (Rahul Gandhi), ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ಎಂದು ಹೇಳಿದ್ದಾರೆ. ರಾಹುಲ್‍ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹಾಗೂ ಸಂಸದ ಇಮ್ರಾನ್ ಪ್ರತಾಪಗಢಿ ಸಾಥ್ ನೀಡಿದ್ದಾರೆ.

    ಇತ್ತ ಭೇಟಿ ಬಳಿಕ ಡ್ಯಾನಿಶ್ ಅಲಿ ಮಾತನಾಡಿ, ರಾಹುಲ್ ಗಾಂಧಿ ಭೇಟಿ ಬಳಿಕ ನಾನು ಒಂಟಿಯಲ್ಲ ಎಂಬುದು ಮನವರಿಕೆಯಾಯ್ತು. ರಾಹುಲ್ ಗಾಂಧಿಯವರು ಬಂದು ನನ್ನ ಜೊತೆ ಮಾತುಕತೆ ನಡೆಸುವ ಮೂಲಕ ನನಗೆ ಧೈರ್ಯ ತುಂಬಿದರು. ಆಗಿದ್ದನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ, ಅದರ ಕಡೆ ಹೆಚ್ಚಿನ ಗಮನವನ್ನೂ ಕೊಡಬೇಡಿ. ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ ಎಂದು ಧೈರ್ಯದ ಮಾತುಗಳನ್ನಾಡಿದರು. ಹೀಗಾಗಿ ಒಬ್ಬಂಟಿ ಎಂದು ಈಗ ನನಗನಿಸುತ್ತಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮುಲ್ಲಾ, ಭಯೋತ್ಪಾದಕ – ಲೋಕಸಭೆಯಲ್ಲಿ ಡ್ಯಾನಿಶ್‌ ಅಲಿಗೆ ಬಿಜೆಪಿ ಸಂಸದನಿಂದ ನಿಂದನೆ

    ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ದಾಳಿಯಾಗಿದೆ. ಇದೀಗ ಅಮೃತಕಾಲದಲ್ಲಿ ಹೊಸ ಸಂಸತ್ತಿನಲ್ಲಿ ದ್ವೇಷದ ಅಂಗಡಿಗಳು ಬೀದಿಗಿಳಿದಿರುವುದು ವಿಷಾದನೀಯ, ಲೋಕಸಭೆಯೇ ನಮ್ಮ ರಕ್ಷಕ ಎಂದು ಡ್ಯಾನಿಶ್ ಹೇಳಿದರು. ಇತ್ತ ರಾಹುಲ್ ಗಾಂಧಿ ಫೋಟೋ ಸಮೇತ ‘ಎಕ್ಸ್’ ನಲ್ಲಿ ಅಪ್ಲೋಡ್ ಮಾಡಿ, ರಮೇಶ್ ಬಿಧುರಿ ಸಂಸತ್‍ನಲ್ಲಿ ನಾಚಿಗೇಡಿನ ವರ್ತನೆ ತೋರಿದ್ದಾರೆ. ಈ ಮೂಲಕ ಅವರು ಸದನದ ಘನತೆಗೆ ಕಳಂಕ ತಂದಿದ್ದಾರೆ. ಪ್ರಜಾಪ್ರಭುತ್ವದ ದೇವಾಲಯದಲ್ಲಿ ಇಂತಹ ದ್ವೇಷ ಮತ್ತು ದ್ವೇಷದ ಮನಸ್ಥಿತಿಯನ್ನು ಪಕ್ಷವು ಬಲವಾಗಿ ವಿರೋಧಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

    ನಡೆದಿದ್ದೇನು..?: ಲೋಕಸಭೆಯಲ್ಲಿ (Loksabha) ಚಂದ್ರಯಾನದ ಯಶಸ್ಸು ಕುರಿತು ಚರ್ಚೆಯ ಸಂದರ್ಭದಲ್ಲಿ ರಮೇಶ್ ಬಿಧುರಿಯವರು ಡ್ಯಾನಿಶ್ ಅಲಿಯನ್ನು ಮುಲ್ಲಾ, ಭಯೋತ್ಪಾದಕ ಎಂದು ಕರೆಯುವ ಮೂಲಕ ನಿಂದಿಸಿದ್ದಾರೆ. ರಮೇಶ್ ಬಿಧುರಿ ಹೇಳಿಕೆಯ ವಿರುದ್ಧ ಸ್ಪೀಕರ್ ಓಂ ಬಿರ್ಲಾ ಸಿಟ್ಟಾಗಿದ್ದು ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಲ್ಲಾ, ಭಯೋತ್ಪಾದಕ – ಲೋಕಸಭೆಯಲ್ಲಿ ಡ್ಯಾನಿಶ್‌ ಅಲಿಗೆ ಬಿಜೆಪಿ ಸಂಸದನಿಂದ ನಿಂದನೆ

    ಮುಲ್ಲಾ, ಭಯೋತ್ಪಾದಕ – ಲೋಕಸಭೆಯಲ್ಲಿ ಡ್ಯಾನಿಶ್‌ ಅಲಿಗೆ ಬಿಜೆಪಿ ಸಂಸದನಿಂದ ನಿಂದನೆ

    ನವದೆಹಲಿ: ಬಹುಜನ ಸಮಾಜ ಪಕ್ಷದ (BSP) ಸಂಸದ ಡ್ಯಾನಿಶ್ ಅಲಿ (Danish Ali) ಅವರನ್ನು ಬಿಜೆಪಿ ಸಂಸದ ರಮೇಶ್ ಬಿಧುರಿ (Ramesh Bidhuri) ಅವರು ಲೋಕಸಭೆಯಲ್ಲಿ ಮುಲ್ಲಾ, ಭಯೋತ್ಪಾದಕ ಎಂದು ಕರೆಯುವ ಮೂಲಕ ನಿಂದಿಸಿದ್ದಾರೆ.

    ಲೋಕಸಭೆಯಲ್ಲಿ ಚಂದ್ರಯಾನದ ಯಶಸ್ಸು ಕುರಿತು ಚರ್ಚೆಯ ಸಂದರ್ಭದಲ್ಲಿ ರಮೇಶ್‌ ಬಿಧುರಿ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ. ರಮೇಶ್‌ ಬಿಧುರಿ ಹೇಳಿಕೆಯ ವಿರುದ್ಧ ಸ್ಪೀಕರ್‌ ಓಂ ಬಿರ್ಲಾ (Om Birla) ಸಿಟ್ಟಾಗಿದ್ದು ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಮಹಿಳಾ ಕಾರ್ಯಕರ್ತೆಯರಿಂದ ಸನ್ಮಾನ- ತಲೆಬಾಗಿ ಕೈಮುಗಿದ ಪ್ರಧಾನಿ

    ಡ್ಯಾನಿಶ್ ಅಲಿ ಲೋಕಸಭೆಯಲ್ಲಿ (Lok Sabha) ಉತ್ತರ ಪ್ರದೇಶದ ಅಮ್ರೋಹಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಬಿಧುರಿ ಹೇಳಿಕೆಗೆ ರಕ್ಷಣಾ ಸಚಿವ ಮತ್ತು ಲೋಕಸಭೆಯ ಉಪನಾಯಕ ರಾಜನಾಥ್ ಸಿಂಗ್ (Rajnath Singh) ವಿಷಾದ ವ್ಯಕ್ತಪಡಿಸಿದ್ದಾರೆ.

    ಸದಸ್ಯರು ಮಾಡಿದ ಟೀಕೆಗಳಿಂದ ಪ್ರತಿಪಕ್ಷಗಳಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ರಕ್ಷಣಾ ಸಚಿವರು ಹೇಳಿದರು. ಪ್ರತಿಪಕ್ಷಗಳು ಕ್ಷಮೆಯಾಚನೆ ಸಾಕಾಗುವುದಿಲ್ಲ. ಬಿಧುರಿ ಅವರನ್ನು ಅಮಾನತುಗೊಳಿಸಬೇಕು ಅಥವಾ ಬಂಧಿಸಬೇಕು ಎಂದು ಹೇಳಿವೆ.

    ಇದು ಸಂಪೂರ್ಣ ನಾಚಿಕೆಗೇಡಿನ ಸಂಗತಿ. ರಾಜನಾಥ್ ಸಿಂಗ್ ಅವರ ಕ್ಷಮೆಯಾಚನೆ ಸ್ವೀಕಾರಾರ್ಹವಲ್ಲ ಮತ್ತು ಅರೆಮನಸ್ಸಿನದು. ಇದು ಸಂಸತ್ತಿಗೆ ಮಾಡಿದ ಅವಮಾನ. ಇದು ಅಮಾನತುಗೊಳಿಸಬಹುದಾದ ಸ್ಪಷ್ಟ ಪ್ರಕರಣ. ಬಿಧುರಿ ಹೇಳಿಕೆಯಿಂದ ಪ್ರತಿಯೊಬ್ಬ ಭಾರತೀಯನಿಗೂ ಅವಮಾನವಾಗಿದೆ” ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಲೋಕಸಭಾ ಕಲಾಪದಲ್ಲಿ ಭಾಗಿಯಾಗಿದ್ದ ಸಂಸದನಿಗೆ ಸೋಂಕು ದೃಢ

    ಲೋಕಸಭಾ ಕಲಾಪದಲ್ಲಿ ಭಾಗಿಯಾಗಿದ್ದ ಸಂಸದನಿಗೆ ಸೋಂಕು ದೃಢ

    ನವದೆಹಲಿ: ಲೋಕಸಭಾ ಕಲಾಪದಲ್ಲಿ ಭಾಗಿಯಾಗಿದ್ದ ಬಿಎಸ್‍ಪಿ ಸಂಸದ ಡ್ಯಾನಿಶ್ ಅಲಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ಡ್ಯಾನಿಶ್ ಅಲಿ ಸೋಮವಾರ ಸಂಸತ್ತಿನ ಕಲಾಪದಲ್ಲಿ ಭಾಗಿಯಾಗಿದ್ದರು. ಮಂಗಳವಾರ ಟ್ವೀಟ್‌ ಮೂಲಕ ಮಾಹಿತಿ ತಿಳಿಸಿದ್ದಾರೆ. ಡಿಸೆಂಬರ್ 23ಕ್ಕೆ ಸಂಸತ್ತಿನ ಚಳಿಗಾಲ ಅಧಿವೇಶನ ಅಂತ್ಯವಾಗುತ್ತಿದೆ. ಕಲಾಪಕ್ಕೆ ಹಾಜರಾಗಿದ್ದ ಸಂಸದರಿಗೆ  ಕೊರೊನಾ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ. ದನ್ನೂ ಓದಿ: ನಕಲಿ ದಾಖಲೆಯಿಂದ ರೈಲು ಇಂಜಿನ್ ಮಾರಾಟ ಮಾಡಿದ ಎಂಜಿನಿಯರ್

    ಟ್ವೀಟ್‍ನಲ್ಲಿ ಏನಿದೆ?: ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದ ಹೊರತಾಗಿ ಸೋಂಕು ದೃಢಪಟ್ಟಿದೆ.  ಸೋಮವಾರ ಕಲಾಪದಲ್ಲಿ ಭಾಗಿಯಾಗಿದ್ದೆ. ಹೀಗಾಗಿ ನನ್ನ ಸಂಪರ್ಕಕ್ಕೆ ಬಂದವರು ಎಲ್ಲರೂ ಕ್ವಾರಂಟೈನ್‍ಗೆ ಒಳಗಾಗಿ ಮತ್ತು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ. ದನ್ನೂ ಓದಿ: ಮಾಜಿ ಪತ್ನಿಗೆ 5516 ಕೋಟಿ ಜೀವನಾಂಶ ನೀಡುವಂತೆ ದುಬೈ ದೊರೆಗೆ ಹೈಕೋರ್ಟ್ ಆದೇಶ

    ಭಾರತದಲ್ಲಿ ಓಮಿಕ್ರಾನ್ ರೂಪಾಂತರದ ಕನಿಷ್ಠ 200 ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಹೊಸ ರೂಪಾಂತರದ ವಿರುದ್ಧ ದೇಶದಲ್ಲಿ ಲಭ್ಯವಿರುವ ಕೋವಿಡ್ ಲಸಿಕೆಗಳ ಪರಿಣಾಮ ಒಂದು ವಾರದೊಳಗೆ ತಿಳಿಯುತ್ತದೆ. ಈ ಸಂಬಂಧಿತ ಅಧ್ಯಯನದ ಫಲಿತಾಂಶಗಳು ಪ್ರಕಟವಾದ ತಕ್ಷಣ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸೋಮವಾರ ಸಂಸತ್ತಿಗೆ ತಿಳಿಸಿದರು. ದನ್ನೂ ಓದಿ: ಪಾಕ್‍ನ 20 ಯೂಟ್ಯೂಬ್ ಚಾನೆಲ್, 2 ವೆಬ್‍ಸೈಟ್‍ಗಳಿಗೆ ನಿರ್ಬಂಧ

  • ಲೋಕಸಭೆಯ ಬಿಎಸ್‍ಪಿ ನಾಯಕನಾಗಿ ಡ್ಯಾನಿಶ್ ಅಲಿ ಆಯ್ಕೆ

    ಲೋಕಸಭೆಯ ಬಿಎಸ್‍ಪಿ ನಾಯಕನಾಗಿ ಡ್ಯಾನಿಶ್ ಅಲಿ ಆಯ್ಕೆ

    ನವದೆಹಲಿ: ಲೋಕಸಭೆಯ ಬಹುಜನ ಸಮಾಜವಾದಿ ಪಕ್ಷದ (ಬಿಎಸ್‍ಪಿ) ನಾಯಕರಾಗಿ ಡ್ಯಾನಿಶ್ ಅಲಿ ಆಯ್ಕೆಯಾಗಿದ್ದಾರೆ.

    ಆನಂದ್ ಕುಮಾರ್ ಅವರನ್ನು ಬಿಎಸ್‍ಪಿಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆಕಾಶ್ ಆನಂದ್ ಮತ್ತು ರಾಮ್‍ಜಿ ಗೌತಮ್ ಅವರು ಬಿಎಸ್‍ಪಿ ರಾಷ್ಟ್ರೀಯ ಸಂಯೋಜಕರಾಗಿ ಆಯ್ಕೆ ಆಗಿದ್ದಾರೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಬಿಎಸ್‍ಪಿ ಹಾಗೂ ಎಸ್‍ಪಿ ಮೈತ್ರಿ ಮಾಡಿಕೊಂಡಿದ್ದವು. ಆದರೆ ಈ ಮೈತ್ರಿ ವಿಫಲವಾದ ಪರಿಣಾಮ ಬಿಎಸ್‍ಪಿ ಕೇವಲ ಒಟ್ಟು 10 ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಬಿಎಸ್‍ಪಿಯ 10 ಸಂಸದರಿಗೆ ಡ್ಯಾನಿಶ್ ಅಲಿ ನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

    ಡ್ಯಾನಿಶ್ ಅಲಿ ಅವರು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಆಪ್ತರು. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವರಿಷ್ಠರ ಒಪ್ಪಿಗೆ ಪಡೆದು ಬಿಎಸ್‍ಪಿಯಿಂದ ಉತ್ತರ ಪ್ರದೇಶದ ಅವ್ರೋಹಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

    ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಸರ್ಕಾರ ರಚನೆಯಲ್ಲಿ ಡ್ಯಾನಿಶ್ ಅಲಿ ಪ್ರಮುಖ ಪಾತ್ರ ವಹಿಸಿದ್ದರು. ಅಷ್ಟೇ ಅಲ್ಲದೆ ಇತ್ತೀಚೆಗೆ ನಡೆದಿದ್ದ ಕರ್ನಾಟಕ ಲೋಕಸಭಾ ಸೀಟುಗಳ ಹಂಚಿಕೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆಗೆ ಡ್ಯಾನಿಶ್ ಅಲಿ ಮಾತುಕತೆ ನಡೆಸಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ದೇವೇಗೌಡರಿಗೆ ಶಾಕ್ ಕೊಟ್ಟು ಬಿಎಸ್‍ಪಿ ಸೇರ್ಪಡೆಯಾದ ಡ್ಯಾನಿಶ್ ಅಲಿ

    ದೇವೇಗೌಡರಿಗೆ ಶಾಕ್ ಕೊಟ್ಟು ಬಿಎಸ್‍ಪಿ ಸೇರ್ಪಡೆಯಾದ ಡ್ಯಾನಿಶ್ ಅಲಿ

    – ಡ್ಯಾನಿಶ್ ಪಕ್ಷ ಬಿಟ್ಟಿಲ್ಲ: ಜೆಡಿಎಸ್

    ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಬಿಗ್ ಶಾಕ್ ಕೊಟ್ಟಿದ್ದಾರೆ.

    ಡ್ಯಾನಿಶ್ ಅಲಿ ಅವರು ಇಂದು ಜೆಡಿಎಸ್‍ಗೆ ಗುಡ್‍ಬೈ ಹೇಳಿ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಸೇರ್ಪಡೆಯಾಗಿದ್ದಾರೆ. ಈ ಬೆಳವಣಿಗೆ ಎಚ್.ಡಿ.ದೇವೇಗೌಡ ಅವರಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ. ಇಂದು ಉತ್ತರ ಪ್ರದೇಶದ ಲಕ್ನೋನಲ್ಲಿ ಬಿಎಸ್‍ಪಿಯ ಪ್ರಧಾನ ಕಾರ್ಯದರ್ಶಿ ಸತೀಶ್ ಮಿಶ್ರಾ ಸಮ್ಮುಖದಲ್ಲಿ ಡ್ಯಾನಿಶ್ ಅಲಿ ಸೇರ್ಪಡೆಯಾಗಿದ್ದಾರೆ.

    ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಸರ್ಕಾರ ರಚನೆಯಲ್ಲಿ ಡ್ಯಾನಿಶ್ ಅಲಿ ಪ್ರಮುಖ ಪಾತ್ರ ಹೊಂದಿದ್ದರು. ಅಷ್ಟೇ ಅಲ್ಲದೆ ಇತ್ತೀಚೆಗೆ ನಡೆದಿದ್ದ ಕರ್ನಾಟಕ ಲೋಕಸಭಾ ಸೀಟುಗಳ ಹಂಚಿಕೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆಗೆ ಡ್ಯಾನಿಶ್ ಅಲಿ ಮಾತುಕತೆ ನಡೆಸಿದ್ದರು. ರಾಷ್ಟ್ರಮಟ್ಟದಲ್ಲಿ ಜೆಡಿಎಸ್‍ಗೆ ಡ್ಯಾನಿಶ್ ಅಲಿ ಬೆನ್ನೆಲುಬಾಗಿದ್ದರು.

    ರಾಜ್ಯದಲ್ಲಿ ಬಿಎಸ್‍ಪಿ ಹಾಗೂ ಜೆಡಿಎಸ್ ಮೈತ್ರಿಯಿದೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗೆ ಸರ್ಕಾರ ರಚನೆ ಮಾಡಿದ್ದಾಗಲೂ ಬಿಎಸ್‍ಪಿ ಶಾಸಕ ಎನ್.ಮಹೇಶ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹೀಗಾಗಿ ಉತ್ತರ ಪ್ರದೇಶದ ಕ್ಷೇತ್ರವೊಂದರಲ್ಲಿ ಡ್ಯಾನಿಶ್ ಅಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಬಿಎಸ್‍ಪಿ ನಾಯಕರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv