Tag: daniil medvedev

  • Australian Open: 21ನೇ ಗ್ರ್ಯಾನ್‌ ಸ್ಲಾಂಗಾಗಿ ನಡಾಲ್‌, ಮೆಡ್ವೆಡೇವ್‌ ಪೈಪೋಟಿ

    Australian Open: 21ನೇ ಗ್ರ್ಯಾನ್‌ ಸ್ಲಾಂಗಾಗಿ ನಡಾಲ್‌, ಮೆಡ್ವೆಡೇವ್‌ ಪೈಪೋಟಿ

    ಮೆಲ್ಬರ್ನ್‌: ಪ್ರತಿಷ್ಠಿತ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿ ಫೈನಲ್‌ಗೆ ಸ್ಪೇನ್‌ನ ರಫೇಲ್‌ ನಡಾಲ್‌ ಹಾಗೂ ರಷ್ಯಾದ ಡೇನಿಲ್‌ ಮೆಡ್ವೆಡೇವ್‌ ಲಗ್ಗೆ ಇಟ್ಟಿದ್ದಾರೆ. ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ 21ನೇ ಗ್ರ್ಯಾನ್‌ ಸ್ಲಾಂ ಪ್ರಶಸ್ತಿಗಾಗಿ ಇಬ್ಬರೂ ಸೆಣಸಾಡಲಿದ್ದಾರೆ. ಭಾನುವಾರ ರೋಚಕ ಪಂದ್ಯಕ್ಕೆ ಟೆನಿಸ್‌ ಪ್ರಿಯರು ತುದಿಗಾಲಲ್ಲಿ ಕಾದು ಕುಳಿತಿದ್ದಾರೆ.

    ಶುಕ್ರವಾರ ಪುರುಷ ಸಿಂಗಲ್ಸ್‌ ವಿಭಾಗದಲ್ಲಿ ನಡೆದ ಸೆಮಿಫೈನಲ್‌ ಮುಖಾಮುಖಿಯಲ್ಲಿ ರಫೆಲ್‌ ನಡಾಲ್‌, ಇಟಲಿಯ ಮಟಿಯೊ ಬೆರೆಟಿನಿ ವಿರುದ್ಧ 6-3, 6-2, 3-6, 6-3 ಅಂತರದಲ್ಲಿ ಗೆಲುವು ದಾಖಲಿಸಿದ್ದು, ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಇದನ್ನೂ ಓದಿ: ಕೃನಾಲ್ ಪಾಂಡ್ಯ ಟ್ವಿಟ್ಟರ್ ಖಾತೆ ಹ್ಯಾಕ್ – ಬಿಟ್‍ಕಾಯಿನ್‍ಗೆ ಬೇಡಿಕೆ ಇಟ್ಟ ಹ್ಯಾಕರ್

    ಅಂತೆಯೇ ಡೇನಿಲ್‌ ಮೆಡ್ವೆಡೆವ್‌, ಸ್ಟೆಫಾನೊಸ್‌ ಸಿಸಿಪಸ್‌ ವಿರುದ್ಧ 7-6, 4-6, 6-4, 6-1 ಅಂತರದಲ್ಲಿ ಜಯಗಳಿಸಿ ಫೈನಲ್‌ ಪ್ರವೇಶಿಸಿದ್ದಾರೆ.

    ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಗೆಲುವು ದಾಖಲಿಸಿ ಇತಿಹಾಸ ಬರೆಯಲು ನಡಾಲ್‌, ಮೆಡ್ವೆಡೇವ್‌ ಸೆಣಸಾಟಕ್ಕೆ ಸಜ್ಜಾಗಿದ್ದಾರೆ. 21ನೇ ಗ್ರ್ಯಾನ್‌ ಸ್ಲಾಂ ಯಾರಿಗೆ ಒಲಿಯಲಿದೆ ಎಂಬುದನ್ನು ಇನ್ನಷ್ಟೇ ತಿಳಿಯಬೇಕಿದೆ. ಇದನ್ನೂ ಓದಿ: ಧೋನಿ ನನ್ನ ಫೇವರಿಟ್ ಕ್ಯಾಪ್ಟನ್ – CSK ಪರ ಆಡಲು ಬಯಸುತ್ತೇನೆಂದ ಮಾಜಿ RCB ಆಟಗಾರ