Tag: Daniel Vettori

  • ಸನ್‍ರೈಸರ್ಸ್‍ಗೆ ಮುಖ್ಯ ಕೋಚ್ ಆಗಿ ಡೇನಿಯಲ್ ವೆಟ್ಟೋರಿ ಆಯ್ಕೆ

    ಸನ್‍ರೈಸರ್ಸ್‍ಗೆ ಮುಖ್ಯ ಕೋಚ್ ಆಗಿ ಡೇನಿಯಲ್ ವೆಟ್ಟೋರಿ ಆಯ್ಕೆ

    ಹೈದರಾಬಾದ್: ಸನ್‍ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡದ ಮುಖ್ಯ ಕೋಚ್ ಆಗಿ ಬ್ರಿಯಾನ್ ಲಾರಾ ಬದಲಿಗೆ ಡೇನಿಯಲ್ ವೆಟ್ಟೋರಿ (Daniel Vettori) ನೇಮಕಗೊಂಡಿದ್ದಾರೆ.

    ವೆಟ್ಟೋರಿ ಅವರು ಈ ಹಿಂದೆ 2014 ರಿಂದ 2018ರ ವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್ ಆಗಿದ್ದರು. ಪ್ರಸ್ತುತ ಆಸ್ಟ್ರೇಲಿಯಾ ಪುರುಷರ ತಂಡದೊಂದಿಗೆ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸನ್‍ರೈಸರ್ಸ್ ಆರು ಋತುಗಳಲ್ಲಿ ಟಾಮ್ ಮೂಡಿ (2019 ಮತ್ತು 2022), ಟ್ರೆವರ್ ಬೇಲಿಸ್ (2020 ಮತ್ತು 2021), ಮತ್ತು ಲಾರಾ (2023) ಅವರನ್ನು ಬದಲಿಸಿದೆ. 2023ರ ಐಪಿಎಲ್ ಸೀಸನ್‍ಗೆ ಮುಂಚಿತವಾಗಿ ಲಾರಾ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ತಂಡವು ನಾಲ್ಕು ಗೆಲುವುಗಳನ್ನು ದಾಖಲಿಸಿತ್ತು. ಬಳಿಕ ಹತ್ತು ಸೋಲುಗಳೊಂದಿಗೆ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಇದನ್ನೂ ಓದಿ: ಈ ಸಲ ವಿಶ್ವಕಪ್ ನಮ್ದೆ – ರೋಹಿತ್ ಶರ್ಮಾ ವಿಶ್ವಾಸ

    ಇದು 2024ರ ಋತುವಿಗಾಗಿ ಮೂರನೇ ಉನ್ನತ ಮಟ್ಟದ ಕೋಚಿಂಗ್ ನೇಮಕಾತಿಯಾಗಿದೆ. ಜಸ್ಟಿನ್ ಲ್ಯಾಂಗರ್ ಲಕ್ನೋ ಸೂಪರ್ ಜೈಂಟ್ಸ್‍ನಲ್ಲಿ ಆಂಡಿ ಫ್ಲವರ್ ಅವರಿಂದ ಅಧಿಕಾರ ವಹಿಸಿಕೊಂಡಿದ್ದರು. ನಂತರ ಫ್ಲವರ್ ಅದೇ ಸ್ಥಾನಕ್ಕೆ ಆರ್‌ಸಿಬಿಗೆ ಸೇರ್ಪಡೆಗೊಂಡರು.

    2016 ರಿಂದ 2020 ರವರೆಗೆ ಸನ್‍ರೈಸರ್ಸ್ ಪ್ರತಿ ಋತುವಿನಲ್ಲೂ ಪ್ಲೇಆಫ್‍ಗಳನ್ನು ತಲುಪಿತ್ತು. ಆದರೆ ಆ ಯಶಸ್ಸನ್ನು ಪುನರಾವರ್ತಿಸಲು ಟೀಂ ವಿಫಲವಾಗಿದೆ. ಈಗ ವೆಟ್ಟೋರಿ ಮತ್ತು ಏಡೆನ್ ಮಾಕ್ರ್ರಾಮ್ ಅವರ ಮಾರ್ಗದರ್ಶನದ ಮೂಲಕ ಮತ್ತೆ ಹಳೆಯ ಲಯಕ್ಕೆ ಮರಳಲು ಮುಂದಾಗಿದೆ.

    ಐಪಿಎಲ್ (IPL) 2021 ರಿಂದ ಸನ್‍ರೈಸರ್ಸ್ ಕೇವಲ 13 ಪಂದ್ಯಗಳನ್ನು ಗೆದ್ದಿದೆ. ಅಲ್ಲದೇ 29 ಪಂದ್ಯಗಳಲ್ಲಿ ಸೋಲು ಕಂಡಿದೆ. ಇದು ಕೋಚ್‍ಗಳ ಬದಲಾವಣೆಗೆ ಮುಖ್ಯ ಕಾರಣವಾಗಿದೆ. ಈ ಹಿಂದೆ ಐಪಿಎಲ್‍ನಲ್ಲಿ ಮುಖ್ಯ ತರಬೇತುದಾರರಾಗಿ ವೆಟ್ಟೋರಿ 2015ರಲ್ಲಿ ಆರ್‍ಸಿಬಿಗೆ ಪ್ಲೇಆಫ್‍ಗೆ ಮತ್ತು 2016 ರಲ್ಲಿ ಫೈನಲ್‍ಗೆ ಪ್ರವೇಶಿಸಲು ಸಹಕರಿಸಿದ್ದರು. ಇದನ್ನೂ ಓದಿ: ನಮ್ಮ ಬ್ಯಾಟಿಂಗ್‌ ಕಳಪೆಯಾಗಿತ್ತು – ಅಗ್ರಕ್ರಮಾಂಕದ ಬ್ಯಾಟರ್‌ಗಳ ವಿರುದ್ಧ ಪಾಂಡ್ಯ ಬೇಸರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಂದು ಕೊಹ್ಲಿ ಏಕೆ ಬೌಲಿಂಗ್ ಮಾಡಿದರೆಂದು ಇಂದಿಗೂ ತಿಳಿದಿಲ್ಲ: ಅಲ್ಬಿ ಮಾರ್ಕೆಲ್

    ಅಂದು ಕೊಹ್ಲಿ ಏಕೆ ಬೌಲಿಂಗ್ ಮಾಡಿದರೆಂದು ಇಂದಿಗೂ ತಿಳಿದಿಲ್ಲ: ಅಲ್ಬಿ ಮಾರ್ಕೆಲ್

    ಮುಂಬೈ: ದಕ್ಷಿಣ ಆಫ್ರಿಕಾ ಆಲ್‍ರೌಂಡರ್ ಅಲ್ಬಿ ಮಾರ್ಕೆಲ್ ಐಪಿಎಲ್ ನಲ್ಲಿ ಚೆನ್ನೈ ತಂಡದ ಪರ ಆಡಿದ ಪಂದ್ಯದ ಬಗ್ಗೆ ಮಾತನಾಡಿದ್ದು, ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬೌಲಿಂಗ್ ಮಾಡಿದ್ದೇಕೆ ಎಂದು ಇಂದಿಗೂ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

    2012ರಲ್ಲಿ ಸಿಎಸ್‍ಕೆ ಪರ ಮಾರ್ಕೆಲ್ ಆಡಿದ್ದರು. ಆರ್ ಸಿಬಿ ವಿರುದ್ಧ ಪಂದ್ಯದಲ್ಲಿ 7 ಎಸೆತಗಳಲ್ಲಿ 28 ರನ್ ಗಳಿಸಿ ಪಂದ್ಯ ಗೆಲ್ಲಿಸಿಕೊಟ್ಟು ತಂಡದ ಪರ ಹೀರೋ ಆಗಿ ಹೊರಹೊಮ್ಮಿದ್ದರು. ಬಹುಮುಖ್ಯವಾಗಿ ಅಂದು ವಿರಾಟ್ ಕೊಹ್ಲಿ ಎಸೆದ 19ನೇ ಓವರಿನಲ್ಲಿ ಮಾರ್ಕೆಲ್ 28 ರನ್ ಸಿಡಿಸಿದ್ದರು.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬೆಂಗಳೂರು ತಂಡ 20 ಓವರ್ ಗಳಲ್ಲಿ 205 ರನ್ ಗಳಿಸಿತ್ತು. ಆ ಬಳಿಕ ಬ್ಯಾಟಿಂಗ್ ಮಾಡಿದ್ದ ಚೆನ್ನೈ ಬಹುಬೇಗ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮ 2 ಓವರ್ ಗಳಲ್ಲಿ ಚೆನ್ನೈ ತಂಡಕ್ಕೆ 43 ರನ್‍ಗಳ ಅಗತ್ಯವಿತ್ತು. ಆದರೆ ಈ ಸಂದರ್ಭದಲ್ಲಿ ಯಾರು ಊಹಿಸಿದಂತೆ ಆರ್ ಸಿಬಿ ನಾಯಕರಾಗಿದ್ದ ಡೇನಿಲ್ ವೆಕ್ಟೋರಿ 19ನೇ ಓವರ್ ಎಸೆಯಲು ವಿರಾಟ್ ಕೊಹ್ಲಿ ಅವರಿಗೆ ಚೆಂಡು ನೀಡಿದ್ದರು. ಕೊಹ್ಲಿ ಎಸೆದ ಓವರಿನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಲ್ಬಿ ಮಾರ್ಕೆಲ್ 3 ಸಿಕ್ಸರ್, 2 ಬೌಂಡರಿ ಸಿಡಿಸಿ ಮಿಂಚಿದ್ದರು. ಆದರೆ ಕೊಹ್ಲಿ ಏಕೆ ಬೌಲಿಂಗ್ ಮಾಡಿದ್ದರು ಎಂದು ಇಂದಿಗೂ ಯಾವುದೇ ಐಡಿಯಾ ಇಲ್ಲ ಎಂದು ಮಾರ್ಕೆಲ್ ಹೇಳಿದ್ದಾರೆ.

    ನಾನು ಬ್ಯಾಟಿಂಗ್ ಆಗಮಿಸುವ ವೇಳೆಗೆ 2 ಓವರ್ ಮಾತ್ರ ಬಾಕಿ ಇತ್ತು. 43 ರನ್ ಗೆಲುವಿಗೆ ಅಗತ್ಯವಿತ್ತು. ಆ ವೇಳೆ 2 ಭರ್ಜರಿ ಹೊಡೆತ ಸಿಡಿಸಿದರೆ ಗೆಲುವಿನ ಕುರಿತು ಚಿಂತಿಸಬಹುದು ಎಂದು ಕೊಂಡು ಬ್ಯಾಟಿಂಗ್ ಆರಂಭಿಸಿದ್ದೆ. ಅಂತಹ ಸಂದರ್ಭದಲ್ಲಿ ಕೊಹ್ಲಿ ಬೌಲಿಂಗ್ ಮಾಡಿದ್ದು, ನನ್ನ ಕೆಲಸವನ್ನ ಸುಲಭ ಮಾಡಿತ್ತು ಎಂದು ಮಾರ್ಕೆಲ್ ಅಂದಿನ ಸನ್ನಿವೇಶವನ್ನು ಸ್ಮರಿಸಿಕೊಂಡಿದ್ದಾರೆ. ಪಂದ್ಯದಲ್ಲಿ ಅಲ್ಬಿ ಮಾರ್ಕೆಲ್ ಔಟಾದ ಬಳಿಕ ಬ್ರಾವೋ ಚೆನ್ನೈ ತಂಡವನ್ನು ಗೆಲುವಿನ ದಡ ಸೇರಿಸಿದ್ದರು. ಅಂತಿಮವಾಗಿ 5 ವಿಕೆಟ್ ಕಳೆದುಕೊಂಡಿದ್ದ ಚೆನ್ನೈ 208 ರನ್ ಗಳಿಸಿ ಗೆಲುವು ಪಡೆದಿತ್ತು.

  • ಕಿವೀಸ್ ಸ್ಪಿನ್ ದಿಗ್ಗಜ ವೆಟ್ಟೋರಿ ಈಗ ಏಷ್ಯಾದ ದುಬಾರಿ ಕೋಚ್

    ಕಿವೀಸ್ ಸ್ಪಿನ್ ದಿಗ್ಗಜ ವೆಟ್ಟೋರಿ ಈಗ ಏಷ್ಯಾದ ದುಬಾರಿ ಕೋಚ್

    – ಬಿಸಿಬಿಯಿಂದ ದಿನಕ್ಕೆ 2.5 ಲಕ್ಷ ರೂ. ವೇತನ

    ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ಬೌಲಿಂಗ್ ಕೋಚ್ ಆಗಿ ಆಯ್ಕೆಯಾಗಿರುವ ಕಿವೀಸ್ ಸ್ಪಿನ್ ದಿಗ್ಗಜ ಡೇನಿಯಲ್ ವೆಟ್ಟೋರಿ ಅವರಿಗೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ (ಬಿಸಿಬಿ) ಪ್ರತಿದಿನಕ್ಕೆ 2.5 ಲಕ್ಷ ರೂ. ವೇತನ ನೀಡಲಿದೆ. ಈ ಮೂಲಕ ವೆಟ್ಟೋರಿ ಏಷ್ಯಾದ ದುಬಾರಿ ಬೌಲಿಂಗ್ ಕೋಚ್ ಎನಿಸಿಕೊಂಡಿದ್ದಾರೆ.

    ಆಸ್ಟ್ರೇಲಿಯಾದಲ್ಲಿ ಮುಂದಿನ ವರ್ಷ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿವರೆಗೆ ಬಾಂಗ್ಲಾದೇಶ ತಂಡವು ಭರ್ಜರಿ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಬಿಸಿಬಿ ತನ್ನ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿ 40 ವರ್ಷದ ವೆಟ್ಟೋರಿ ಅವರನ್ನು ಕಳೆದ ತಿಂಗಳು ಆಯ್ಕೆ ಮಾಡಿಕೊಂಡಿತ್ತು. ಮಾತುಕತೆ ಪ್ರಕಾರ ಬಿಸಿಬಿ ವೆಟ್ಟೋರಿ ಅವರಿಗೆ ದಿನದ 3,571 ಅಮೆರಿಕನ್ ಡಾಲರ್ ವೇತನ ನಿಗದಿಪಡಿಸಿದೆ. ಅಂದರೆ ದಿನಕ್ಕೆ ಸುಮಾರು 2.5 ಲಕ್ಷ ರೂಪಾಯಿಯನ್ನು ಡೇನಿಯನ್ ವೆಟ್ಟೋರಿ ವೇತನವಾಗಿ ಪಡೆಯಲಿದ್ದಾರೆ.

    ಈ ಕುರಿತು ಮಾಹಿತಿ ನೀಡಿರುವ ಬಾಂಗ್ಲಾದೇಶದ ಕ್ರಿಕೆಟ್ ವೆಬ್‍ಸೈಟ್, ಸ್ಪಿನ್ ಬೌಲಿಂಗ್ ಕೋಚ್ ವೆಟ್ಟೋರಿ ಶೇ. 30ರಷ್ಟು ತೆರಿಗೆ ರೂಪದಲ್ಲಿ ಕಟ್ಟಲಿದ್ದಾರೆ ಎಂದು ತಿಳಿಸಿದೆ. ಈಗಾಗಲೇ ಬಾಂಗ್ಲಾ ತಂಡವನ್ನು ಸೇರಿರುವ ವೆಟ್ಟೋರಿ ತರಬೇತಿ ಆರಂಭಿಸಿದ್ದಾರೆ. ಪ್ರತಿದಿನಕ್ಕೆ 2.5 ಲಕ್ಷ ರೂ. ವೇತನ ಪಡೆಯುತ್ತಿರುವ ವೆಟ್ಟೋರಿ ಏಷ್ಯಾದ ದುಬಾರಿ ಬೌಲಿಂಗ್ ಕೋಚ್ ಆಗಿದ್ದಾರೆ.

    ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಜೋಶಿ ಕೋಚಿಂಗ್ ಅವಧಿ ಮುಗಿದ ಮೇಲೆ ಬಿಸಿಬಿ ಡೇನಿಯಲ್ ವೆಟ್ಟೋರಿ ಅವರಿಗೆ ಮಣೆ ಹಾಕಿದೆ. ವೆಟ್ಟೋರಿ ಬಾಂಗ್ಲಾ ತಂಡಕ್ಕೆ ಅರೆಕಾಲಿಕ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

    ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ವೇಗಿಗಳದ್ದೇ ದರ್ಬಾರ್ ಆಗಿದ್ದ ಕಾಲದಲ್ಲಿ ಡೇನಿಯನ್ ವೆಟ್ಟೋರಿ ತಮ್ಮದೇ ಆದ ಛಾಪು ಮೂಡಿಸಿದ್ದರು. 18ನೇ ವಯಸ್ಸಿನಲ್ಲಿ ವೆಟ್ಟೋರಿ ಟೆಸ್ಟ್ ಕ್ರಿಕೆಟ್ ಕಣಕ್ಕಿಳಿದಿದ್ದರು. 1996-97ರಲ್ಲಿ ನ್ಯೂಜಿಲೆಂಡ್ ಪರ ಟೆಸ್ಟ್ ಸರಣಿ ಆಡುವ ಮೂಲಕ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎನಿಸಿಕೊಂಡಿದ್ದರು.

    ಎಡಗೈ ಸ್ಪಿನ್ನರ್ ವೆಟ್ಟೋರಿ ಟೆಸ್ಟ್ ಕ್ರಿಕೆಟ್‍ನಲ್ಲಿ 113 ಟೆಸ್ಟ್ ಪಂದ್ಯಗಳಿಂದ 362 ವಿಕೆಟ್ ಪಡೆದುಕೊಂಡು ನ್ಯೂಜಿಲೆಂಡ್ ಪರ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಎನಿಸಿದ್ದಾರೆ. 2015ರ ವಿಶ್ವಕಪ್ ಟೂರ್ನಿಯಲ್ಲಿ 15 ವಿಕೆಟ್ ಪಡೆದು ಭರ್ಜರಿ ಮಿಂಚಿದ್ದರು. ಒಟ್ಟಾರೆ ವಿಶ್ವಕಪ್ ಟೂರ್ನಿಗಳಲ್ಲಿ ವೆಟ್ಟೋರಿ 32 ಪಂದ್ಯಗಳಿಂದ 36 ವಿಕೆಟ್ ಪಡೆದಿದ್ದರು. ಟಿ-20 ಕ್ರಿಕೆಟ್‍ನಲ್ಲಿ 34 ವಿಕೆಟ್ ಪಡೆದು, 205 ರನ್ ಬಾರಿಸಿ ಮಿಂಚಿದ್ದರು.

    ಏಕದಿನ ಪಂದ್ಯಕ್ಕೆ ವಿದಾಯ ಹೇಳಿದ್ದ ವೆಟ್ಟೋರಿ ಅವರಿಗೆ ಐಪಿಎಲ್‍ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಣೆ ಹಾಕಿತ್ತು. ಆರ್.ಸಿ.ಬಿ ಕೋಚ್ ಆಗಿದ್ದ ವೆಟ್ಟೋರಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದ ಕೋಚ್ ಆಗಿ ಆಯ್ಕೆಯಾಗಿದ್ದಾರೆ.