Tag: Dangerous

  • ರಾಮ್ ಗೋಪಾಲ್ ವರ್ಮಾ ಒಬ್ಬ ಮಹಾನ್ ಮೋಸಗಾರ : ನಟ್ಟಿಕುಮಾರ್

    ರಾಮ್ ಗೋಪಾಲ್ ವರ್ಮಾ ಒಬ್ಬ ಮಹಾನ್ ಮೋಸಗಾರ : ನಟ್ಟಿಕುಮಾರ್

    ಅಂದುಕೊಂಡಂತೆ ಆಗಿದ್ದರೆ ಈ ವಾರ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಡೇಂಜರಸ್’ ಚಿತ್ರ ಬಿಡುಗಡೆ ಆಗಬೇಕಿತ್ತು. ಹಿಂದಿ ಮತ್ತು ತೆಲುಗುನಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾಗಾಗಿ ವರ್ಮಾ ಸಾಕಷ್ಟು ಪ್ರಚಾರ ಮಾಡಿದರು. ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿನಿಮಾದ ನಾಯಕಿಯರನ್ನು ಕರೆದುಕೊಂಡು ಸುದ್ದಿಗೋಷ್ಠಿ ಕೂಡ ಏರ್ಪಡಿಸಿದ್ದರು. ಆದರೆ, ಸಿನಿಮಾ ರಿಲೀಸ್ ಆಗಲಿಲ್ಲ. ಅದಕ್ಕೆ ವರ್ಮಾ ಕೊಟ್ಟ ಕಾರಣ, ‘ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಮಾಡಲು ವಿತರಕರು ಒಪ್ಪುತ್ತಿಲ್ಲ’ ಎನ್ನುವುದಾಗಿತ್ತು. ಈ ನಡೆಯ ವಿರುದ್ಧ ತಾವು ಹೋರಾಟ ಮಾಡುವುದಾಗಿ ಹೇಳಿದ್ದರು.

    ಆದರೀಗ ಡೇಂಜರಸ್‌ ಸಿನಿಮಾ ರಿಲೀಸ್ ಆಗದೇ ಇರುವುದಕ್ಕೆ ಬೇರೆಯದ್ದೇ ಕಾರಣವನ್ನು ಕೊಡುತ್ತಾರೆ ವಿತರಕ ನಟ್ಟಿ ಕುಮಾರ್. ಈ ಕುರಿತು ಅವರು ಇಂದು ಸುದ್ದಿಗೋಷ್ಠಿ ಮಾಡಿದ್ದು, ರಾಮ್ ಗೋಪಾಲ್ ವರ್ಮಾ ಬಗ್ಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಒಬ್ಬ ಮೋಸಗಾರ. ನನ್ನ ಹತ್ತಿರವೇ ಐದು ಕೋಟಿಗೂ ಹೆಚ್ಚು ಸಾಲ ಮಾಡಿದ್ದಾರೆ. ಆ ಸಾಲವನ್ನು ಈವರೆಗೂ ಕೊಟ್ಟಿಲ್ಲ. ಹಾಗಾಗಿ ಕಾನೂನು ಮೊರೆ ಹೋಗಿ ಚಿತ್ರ ಪ್ರದರ್ಶನ ಆಗದಂತೆ ತಡೆಯಾಜ್ಞೆ ತಂದಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ, ಕೇವಲ ಹಿಂದಿಯಲ್ಲಿ ಮಾತ್ರ ಈ ಸಿನಿಮಾ ಸೆನ್ಸಾರ್ ಆಗಿದೆ. ಉಳಿದಂತೆ ಅವರಿಗೆ ಯಾವ ಭಾಷೆಯಲ್ಲೂ ಸಿಬಿಎಫ್‍ಸಿ ಸರ್ಟಿಫಿಕೇಟ್ ಸಿಕ್ಕಿಲ್ಲ. ಪ್ರಮಾಣಪತ್ರವಿಲ್ಲದೇ ಹೇಗೆ ಬಿಡುಗಡೆ ಮಾಡಲು ಸಾಧ್ಯ ಎಂದೂ ಅವರು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್

    ರಾಮ್ ಗೋಪಾಲ್ ವರ್ಮಾ ಸಿನಿಮಾಗಳಿಗೆ ತಡೆಯಾಜ್ಞೆ ತರುತ್ತಿರುವುದು ಇದೇ ಮೊದಲೇನೂ ಅಲ್ಲ. ಈ ಹಿಂದಿನ ಅವರ ಎರಡು ಚಿತ್ರಗಳಿಗೆ ತಂದಿದ್ದೆ. ಮುಂದೆಯೂ ತರುತ್ತೇನೆ. ನನಗೆ ಕೊಡಬೇಕಾದ ಹಣ ಸಂದಾಯ ಆಗುವವರೆಗೂ ನಾನು ಈ ಕೆಲಸ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ ನಟ್ಟಿಕುಮಾರ್. ಬಾಲಿವುಡ್ ನಲ್ಲೂ ಸುಮಾರು 12 ಕೋಟಿಗೂ ಹೆಚ್ಚು ರಾಮ್ ಗೋಪಾಲ್ ವರ್ಮಾ ಸಾಲ ಮಾಡಿದ್ದಾರಂತೆ. ಅದನ್ನು ತೀರಿಸೋಕೆ ಆಗದೇ ಆ ಸಿನಿಮಾ ರಂಗವನ್ನೇ ಬಿಟ್ಟು ಬಂದರಂತೆ. ಆಗ ವರ್ಮಾ ಸಹಾಯಕ್ಕೆ ಬಂದವರು ಇದೇ ನೆಟ್ಟಿಕುಮಾರ್. ನನಗೂ ಮೋಸ ಮಾಡಿ ಗೋವಾಗೆ ಹೋದರು. ಅಲ್ಲಿಯೂ ಮೋಸ ಮಾಡಿ ವಾಪಸ್ಸು ಇಲ್ಲಿಗೆ ಬಂದಿದ್ದಾರೆ. ಅವರಿಂದ ಸಾಕಷ್ಟು ಜನರು ಮೋಸ ಹೋಗಿದ್ದಾರೆ ಎಂದು ನಟ್ಟಿಕುಮಾರ್ ಆರೋಪಿಸಿದ್ದಾರೆ. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್

    ನಟ್ಟಿಕುಮಾರ್ ಆರೋಪಕ್ಕೆ ತಿರುಗೇಟು ನೀಡಿರುವ ರಾಮ್ ಗೋಪಾಲ್ ವರ್ಮಾ, ಅದೆಲ್ಲವೂ ಸುಳ್ಳು ಎಂದು ನಿರಾಕರಿಸಿ ವೀಡಿಯೋವೊಂದನ್ನು ಹರಿಬಿಟ್ಟಿದ್ದಾರೆ. ನಟ್ಟಿಕುಮಾರ್ ಬರೀ ಸುಳ್ಳನ್ನೇ ಹೇಳುತ್ತಾರೆ. ಅವರು ಪ್ರಚಾರ ಪ್ರಿಯರು. ನಾನು ಅವರ ವಿರುದ್ಧ ಕಾನೂನುಕ್ರಮಕ್ಕೆ ಹೋರಾಡುತ್ತೇನೆ ಎಂದು ಅವರು ವೀಡಿಯೋದಲ್ಲಿ ಹೇಳಿದ್ದಾರೆ.

  • ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವಿಟ್ ವಾಪಸ್ಸು ಅವರ ಬುಡಕ್ಕೆ ಬಂದಿದೆ. ನಿರ್ದೇಶಕ ರಾಜಮೌಳಿ ಅವರನ್ನು ಕಾಲೆಳೆಯಲು ಹೋಗಿ, ಅಭಿಮಾನಿಗಳಿಂದ ತಾವೇ ಕಾಲೆಳಿಸಿಕೊಂಡಿದ್ದಾರೆ ವರ್ಮಾ. ಇದನ್ನೂ ಓದಿ:  ‘ಕೆಜಿಎಫ್ 2’ ರಿಲೀಸ್ ದಿನವೇ ಪುನೀತ್ ‘ಜೇಮ್ಸ್’ ಸಿನಿಮಾ ಓಟಿಟಿಯಲ್ಲಿ ರಿಲೀಸ್

    ರಾಜಮೌಳಿ, ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಮೂವರು ಇರುವ ಫೋಟೋವೊಂದನ್ನು ಹಾಕಿ, ‘ರಾಜಮೌಳಿ ಸರ್, ನಿಮ್ಮೊಂದಿಗೆ ಇಬ್ಬರು ಡೇಂಜರ್ಸ ಗಂಡಸರಿದ್ದರೆ, ನನ್ನ ಹತ್ತಿರ ಡೇಂಜರ್ಸ್ ಹುಡುಗಿಯರು ಇದ್ದಾರೆ’ ಎಂದು ಬರೆದು ಟ್ವಿಟ್ ಮಾಡಿದ್ದಾರೆ. ಆ ಹುಡುಗಿಯರು ಯಾರು ಎನ್ನುವುದನ್ನೂ ಬಹಿರಂಗ ಪಡಿಸಿದ್ದಾರೆ.  ಇದನ್ನೂ ಓದಿ: ಆರ್.ಆರ್.ಆರ್ ನಿಖರ ಗಳಿಕೆ 611 ರೂ.ಕೋಟಿ: ವಾರಾಂತ್ಯಕ್ಕೆ ಸಾವಿರ ಕೋಟಿ ನಿರೀಕ್ಷೆ

    ಸದ್ಯ ರಾಮ್ ಗೋಪಾಲ್ ವರ್ಮಾ ‘ಖತ್ರಾ ಡೇಂಜರಸ್’ ಎನ್ನುವ ಸಿನಿಮಾ ಮಾಡಿದ್ದಾರೆ. ಅದು ಭಾರತೀಯ ಸಿನಿಮಾ ರಂಗದಲ್ಲಿ ಬರುತ್ತಿರುವ ಮೊದಲ ಲೆಸ್ಬಿಯನ್ ಚಿತ್ರ. ನೈನಾ ಮತ್ತು ಅಪ್ಸರಾ ಲೆಸ್ಬಿಯನ್ ಗಳಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇವರನ್ನೇ ವರ್ಮಾ ಡೇಂಜರಸ್ ಹುಡುಗಿಯರು ಎಂದು ಹೇಳಿಕೊಂಡಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಅದಕ್ಕಾಗಿ ವರ್ಮಾ ಬೆಂಗಳೂರಿಗೆ ಕೂಡ ಬಂದಿದ್ದರು.

    ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಸಿನಿಮಾದ ಕುರಿತಾಗಿ ಸಾಕಷ್ಟು ಪೋಸ್ಟ್ ಮಾಡಿದ್ದಾರೆ ವರ್ಮಾ. ಅದಕ್ಕೂ ಮುನ್ನ ಈ ಕಲಾವಿದೆಯರ ಜತೆ ಪಬ್, ಹೊಟೇಲ್ ಅಂತ ಸುತ್ತಾಡಿ ಸುದ್ದಿ ಆಗಿದ್ದರು. ಅಲ್ಲದೇ, ಈ ಹುಡುಗಿಯರ ಹಾಟ್ ಹಾಟ್ ಫೋಟೋಗಳನ್ನೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಪಡ್ಡೆಗಳ ನಿದ್ದೆ ಗೆಡಿಸಿದ್ದರು.

    ರಾಮ್ ಗೋಪಾಲ್ ವರ್ಮಾ ಅವರ ಟ್ವಿಟ್ ಅನ್ನು ರಾಜಮೌಳಿ, ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜಾ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೇ ತಮ್ಮ ಹುಡುಗಿಯರಿಗೂ ಟ್ಯಾಗ್ ಮಾಡಿದ್ದಾರೆ. ಯಾರೂ, ಅಷ್ಟಾಗಿ ವರ್ಮಾ ಅವರ ಟ್ವಿಟ್ ಗೆ ತಲೆಕೆಡಿಸಿಕೊಂಡಿಲ್ಲ. ಆದರೆ, ರಾಜಮೌಳಿ ಮತ್ತು ಇತರ ಕಲಾವಿದರ ಅಭಿಮಾನಿಗಳು ಮಾತ್ರ ವರ್ಮಾ ಮೇಲೆ ರೊಚ್ಚಿಗೆದ್ದಿದ್ದಾರೆ. ‘ನೀನು 100 ರೂಪಾಯಿ ಟಿಕೆಟ್ ನ ಸಿನಿಮಾ ಮಾಡುವವನು. ದೊಡ್ಡವರಿಗೆ ಹೋಲಿಸಿಕೊಳ್ಳಬೇಡ’ ಎನ್ನುವಷ್ಟರ ಮಟ್ಟಿಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.