Tag: dangal

  • ʻದಂಗಲ್‌ʼ ಸಿನಿಮಾ ಗಳಿಸಿದ್ದು 2,000 ಕೋಟಿ, ನಮಗೆ ಸಿಕ್ಕಿದ್ದು ಕೇವಲ 1 ಕೋಟಿ: ಬಬಿತಾ ಫೋಗಟ್‌

    ʻದಂಗಲ್‌ʼ ಸಿನಿಮಾ ಗಳಿಸಿದ್ದು 2,000 ಕೋಟಿ, ನಮಗೆ ಸಿಕ್ಕಿದ್ದು ಕೇವಲ 1 ಕೋಟಿ: ಬಬಿತಾ ಫೋಗಟ್‌

    ಚಂಡೀಗಢ: ಆಮೀರ್‌ ಖಾನ್‌ ನಟನೆಯ ಬ್ಲಾಕ್‌ಬಸ್ಟರ್‌ ʻದಂಗಲ್‌ʼಸಿನಿಮಾ (Dangal Cinema) ಇಡೀ ವಿಶ್ವದಾದ್ಯಂತ ಗಳಿಸಿದ್ದು 2,000 ಕೋಟಿ ರೂ. ಆದ್ರೆ ನಮ್ಮ ಕುಟುಂಬಕ್ಕೆ ಸಿಕ್ಕಿದ್ದು ಕೇವಲ 1 ಕೋಟಿ ರೂ. ಎಂದು ಭಾರತದ ಮಾಜಿ ಕುಸ್ತಿಪಟು ಬಬಿತಾ ಫೋಗಟ್‌ (Babita Phogat) ಬಹಿರಂಗಪಡಿಸಿದ್ದಾರೆ.

    2016ರಲ್ಲಿ ತೆರೆ ಕಂಡ‌ ಬಬಿತಾ ಫೋಗಟ್‌ ಅವರ ಜೀವನಾಧಾರಿತ ಬಾಲಿವುಡ್‌ ಸಿನಿಮಾ (Bollywood Movie) ʻದಂಗಲ್‌ʼ ದೇಶಾದ್ಯಂತ ಭರ್ಜರಿ ಕಮಾಲ್‌ ಮಾಡಿತ್ತು. ಸದ್ಯ ಕುಸ್ತಿ ಬಿಟ್ಟು ರಾಜಕೀಯ ಹಾದಿಯಲ್ಲಿ ಸಾಗುತ್ತಿರುವ ಬಬಿತಾ ಅವರು ದಂಗಲ್‌ ಚಿತ್ರದ ಹಣಕಾಸಿನ ವಿವರವನ್ನ ಬಹಿರಂಗಪಡಿಸಿದ್ದಾರೆ. ದಂಗಲ್‌ ಚಿತ್ರವು ವಿಶ್ವದಾದ್ಯಂತ 2,000 ಕೋಟಿ ರೂ. ಗಳಿಸಿತು. ಆದ್ರೆ ಚಿತ್ರ ತಯಾಕರಿಂದ ನಮಗೆ ಸಿಕ್ಕಿದ್ದು ಕೇವಲ 1 ಕೋಟಿ ರೂ. ಮಾತ್ರ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಯುದ್ಧಕ್ಕೆ ನಮ್ಮ ಬೆಂಬಲ ಇಲ್ಲ: BRICS ಶೃಂಗಸಭೆಯಲ್ಲಿ ಮೋದಿ ಸ್ಪಷ್ಟನೆ

    ಇದರಿಂದ ನಿಮಗೆ ಭ್ರಮನಿರಸನವಾಗಿದೆಯೇ ಎಂದು ನಿರೂಪಕರು ಮರು ಪ್ರಶ್ನೆ ಮಾಡಿದಾಗ ಪ್ರತಿಕ್ರಿಯಿಸಿದ ಬಬಿತಾ, ಇದು ತಮ್ಮ ತಂದೆ ಮಹಾವೀರ್ ಸಿಂಗ್‌ ಫೋಗಟ್ (Mahavir Singh) Phogat) ಅವರಲ್ಲಿ ಅಡಗಿರುವ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಏಕೆಂದರೆ ನಮಗೆ ಜನರ ಪ್ರೀತಿ ಹಾಗೂ ಗೌರವ ಬೇಕು ಹಣ ಮುಖ್ಯವಲ್ಲ ಎಂದು ನಮ್ಮ ತಂದೆ ನಮಗೆ ಹೇಳಿದ್ದರು ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವ್ರು ಗನ್ ತಗೊಂಡು ಹೋದ್ರು, ಬುಲೆಟ್‌ಗಳು ಬಿಜೆಪಿ-ಜೆಡಿಎಸ್‌ನಲ್ಲಿವೆ: ಸುರೇಶ್ ಬಾಬು

    2016ರ ಡಿಸೆಂಬರ್ 23ರಂದು ಬಿಡುಗಡೆಯಾದ ದಂಗಲ್ ಚಿತ್ರವನ್ನು ನಿತೀಶ್ ತಿವಾರಿ ನಿರ್ದೇಶಿಸಿದ್ದು, ಆಮೀರ್ ಖಾನ್, ಮಹಾವೀರ್ ಫೋಗಟ್ ಅವರ ಪ್ರಮುಖ ಪಾತ್ರ ನಿರ್ವಹಿಸಿರುವುದು ಮಾತ್ರವಲ್ಲದೇ ಈ ಚಿತ್ರದ ಸಹ ನಿರ್ಮಾಪಕರೂ ಹೌದು. ಇದು ಮಾಜಿ ಕುಸ್ತಿಪಟು ಮಹಾವೀರ್ ಫೋಗಟ್ ಅವರು ತಮ್ಮ ಮಕ್ಕಳಾದ ಗೀತಾ ಹಾಗೂ ಬಬಿತಾ ಅವರನ್ನು ವಿಶ್ವದರ್ಜೆಯ ಕುಸ್ತಿಪಟುಗಳಾಗಿ ಬೆಳೆಸಿದ ಕಥಾನಕವನ್ನು ಬಿಂಬಿಸುತ್ತದೆ. ಇದನ್ನೂ ಓದಿ: `ಮಹಾ’ ಚುನಾವಣೆ: ಎನ್‌ಸಿಪಿ ಮೊದಲ ಪಟ್ಟಿ ಬಿಡುಗಡೆ – ಬಾರಾಮತಿಯಿಂದ ಅಜಿತ್ ಪವಾರ್ ಸ್ಪರ್ಧೆ

  • ‘ದಂಗಲ್’ ಖ್ಯಾತಿಯ ನಟಿ ಸುಹಾನಿ ಹಠಾತ್ ಸಾವು

    ‘ದಂಗಲ್’ ಖ್ಯಾತಿಯ ನಟಿ ಸುಹಾನಿ ಹಠಾತ್ ಸಾವು

    ಬಾಲಿವುಡ್ ನ ಹೆಸರಾಂತ ನಟ ಆಮೀರ್ ಖಾನ್ ನಟನೆಯ ದಂಗಲ್ (Dangal) ಸಿನಿಮಾದಲ್ಲಿ ಬಬಿತಾ ಪೋಗಟ್ (Babita Pogat) ಪಾತ್ರವನ್ನು ನಿರ್ವಹಿಸಿ ಅಸಂಖ್ಯಾತ ನೋಡುಗರ ಹೃದಯ ಕದ್ದಿದ್ದ 17ನೇ ವಯಸ್ಸಿನ ನಟಿ ಸುಹಾನಿ ಭಟ್ನಾಗರ್ (Suhani Bhatnagar) ಹಠಾತ್ ನಿಧನರಾಗಿದ್ದಾರೆ (Passed away). ಅವರು ತಗೆದುಕೊಳ್ಳುತ್ತಿದ್ದ ಔಷಧಿಯೇ ಅವರ ಸಾವಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

    ಅತೀ ಸಣ್ಣ ವಯಸ್ಸಿನ ಈ ನಟಿಯ ಸಾವಿಗೆ ಬಾಲಿವುಡ್ ಕಂಬನಿ ಮಿಡಿದಿದೆ. ಆಪ್ತರ ಪ್ರಕಾರ ಸುಹಾನಿ ತಮ್ಮ ಕಾಲಿನ ಮೂಳೆ ಮುರಿತದ ಸಲುವಾಗಿ ಚಿಕಿತ್ಸೆ ಪಡೆದುಕೊಂಡು, ಅದಕ್ಕೆ ಸಂಬಂಧಿಸಿದ ಔಷಧಿ ಸೇವಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಔಷಧಿಯ ಅಡ್ಡ ಪರಿಣಾಮದಿಂದಾಗಿ ಸಾವಿ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.

    ಸಾವಿನ ಕುರಿತಂತೆ ನಾನಾ ಸುದ್ದಿಗಳು ಹರಡಿದ್ದು, ಸಾವಿನ ಬಗ್ಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಆಕೆ ದೆಹಲಿಯ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನುವ ಮಾಹಿತಿ ಇದೆ.

  • ಮಗಳ ವಯಸ್ಸಿನ ಫಾತಿಮಾ ಜೊತೆ ಮತ್ತೆ ಮದುವೆಗೆ ಸಜ್ಜಾದ ಆಮೀರ್‌ ಖಾನ್

    ಮಗಳ ವಯಸ್ಸಿನ ಫಾತಿಮಾ ಜೊತೆ ಮತ್ತೆ ಮದುವೆಗೆ ಸಜ್ಜಾದ ಆಮೀರ್‌ ಖಾನ್

    ಟ ಆಮೀರ್ ಖಾನ್, ಕಿರಣ್ ರಾವ್ ಅವರಿಗೆ ಡಿವೋರ್ಸ್ ಕೊಟ್ಟ ಮೇಲೆ ಸಿಂಗಲ್ ಆಗಿ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಬಾಲಿವುಡ್ ನಟಿಯ ಜೊತೆ ಆಮೀರ್ ಖಾನ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ. ಈ ಬಗ್ಗೆ ಸಿನಿಮಾ ವಿಮರ್ಶಕ ಕಮಾಲ್ ಆರ್. ಖಾನ್ ಟ್ವೀಟ್ ಮಾಡಿ, ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ. ಇದನ್ನೂ ಓದಿ:‘ಸಲಾರ್’ ಅಡ್ಡಾಗೆ ಎಂಟ್ರಿ ಕೊಟ್ಟ ಕನ್ನಡದ ನಟ ಸೌರವ್ ಲೋಕಿ

    ಆಮೀರ್ ಖಾನ್, ಅವರು ಇದೀಗ ಸಿನಿಮಾಗಿಂತ ವೈಯಕ್ತಿಕ ವಿವಾರವಾಗಿಯೇ ಭಾರಿ ಸುದ್ದಿ ಆಗ್ತಿದ್ದಾರೆ. ಮಗಳ ವಯಸ್ಸಿನ ಹುಡುಗಿ ಫಾತಿಮಾ ಜೊತೆ ಆಮೀರ್ ಮದುವೆ ಆಗ್ತಿದ್ದಾರೆ ಅಂತಾ ಬಾಲಿವುಡ್ ಅಂಗಳಲ್ಲಿ ಗುಸು ಗುಸು ಶುರುವಾಗಿದೆ. ಈ ಸುದ್ದಿಗೆ ಸಿನಿಮಾ ಮಿಮರ್ಶಕನ ಟ್ವೀಟ್‌ ಕೂಡ ಸದ್ದು ಮಾಡ್ತಿದೆ.

    ಬ್ರೇಕಿಂಗ್ ನ್ಯೂಸ್- ಆಮೀರ್, ಮಗಳ ವಯಸ್ಸಿನ ಫಾತಿಮಾ ಸನಾ ಶೇಖ್ ಅವರನ್ನು ಶೀಘ್ರದಲ್ಲೇ ಮದುವೆಯಾಲಿದ್ದಾರೆ. ಆಮೀರ್ ಖಾನ್ ತಮ್ಮ ‘ದಂಗಲ್’ ಸಿನಿಮಾ ಸಮಯದಿಂದಲೂ ಸನಾ ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂದು ಕಮಾಲ್ ಆರ್. ಖಾನ್ ಟ್ವೀಟ್ ಮಾಡಿದ್ದಾರೆ.

    ನಟಿ ಫಾತಿಮಾಗೆ, ಆಮೀರ್ ಖಾನ್ ಕುಟುಂಬದ ಜೊತೆ ಹೆಚ್ಚು ಆಪ್ತತೆ ಇದೆ. ಆಮೀರ್ ಪುತ್ರಿ ಇರಾ ಖಾನ್ ಜೊತೆ ಒಳ್ಳೆಯ ಬಾಂದವ್ಯವಿದೆ. ಹಾಗಾಗಿ ಈ ಸುದ್ದಿಗೆ ಆಮೀರ್- ಫಾತಿಮಾ ಮದುವೆ ಸುದ್ದಿ ಮತ್ತಷ್ಟು ಪುಷ್ಟಿ ನೀಡಿದ್ದಾರೆ. ಆಮೀರ್ ನಟನೆಯ ‘ದಂಗಲ್’, ‘ಥಗ್ಸ್ ಆಫ್ ಹಿಂದೂಸ್ತಾನ್’ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು.  ಕಮಾಲ್ ಆರ್. ಖಾನ್ ಅವರ ವಿವಾದತ್ಮಕ ಟ್ವೀಟ್‌ಗೆ ಆಮೀರ್ ಖಾನ್ ಸ್ಪಷ್ಟನೆ ನೀಡುವವರೆಗೂ ಕಾದುನೋಡಬೇಕಿದೆ.

  • ದೆಹಲಿ ಮಹಿಳೆಯರಿಗೆ ಸುರಕ್ಷಿತವಲ್ಲ: ದಂಗಲ್ ನಟಿ ಸಾನಿಯಾ ಮಲ್ಹೋತ್ರ

    ದೆಹಲಿ ಮಹಿಳೆಯರಿಗೆ ಸುರಕ್ಷಿತವಲ್ಲ: ದಂಗಲ್ ನಟಿ ಸಾನಿಯಾ ಮಲ್ಹೋತ್ರ

    ಹುಟ್ಟೂರಿನ ಬಗ್ಗೆಯೇ ಅನುಮಾನದ ಮಾತುಗಳನ್ನಾಗಿ ಅಚ್ಚರಿ ಮೂಡಿಸಿದ್ದಾರೆ ಬಾಲಿವುಡ್ ನಟಿ, ದಂಗಲ್ ಖ್ಯಾತಿಯ ಸಾನಿಯಾ ಮಲ್ಹೋತ್ರ. ಈ ನಟಿ ದೆಹಲಿಯಲ್ಲಿ ಹುಟ್ಟಿದ್ದರೂ, ಇದು ಮಹಿಳೆಯರಿಗೆ ಸುರಕ್ಷಿತ ಸಿಟಿಯಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ. ದೆಹಲಿ ಸುರಕ್ಷತೆಯ ಬಗ್ಗೆ ಅಚ್ಚರಿಯ ಸಂಗತಿಗಳನ್ನು ಹೇಳಿರುವ ಅವರು, ಆ ಕಾರಣಕ್ಕಾಗಿಯೇ ತಾವು ದೆಹಲಿ ತೊರೆದಿರುವುದಾಗಿ ಹೇಳಿಕೊಂಡಿದ್ದಾರೆ.

    ದೆಹಲಿಯ ಪ್ರತಿ ಹುಡುಗಿಗೂ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳ ಆಗಿರುತ್ತದೆ. ನಾನೂ ಅನುಭವಿಸಿದವಳೇ. ದೆಹಲಿ ಅಭಿವೃದ್ಧಿ ಬಗ್ಗೆ ನನಗೆ ಗೊತ್ತಿಲ್ಲ. ಅದು ಅಭಿವೃದ್ಧಿ ಆಗಿದೆಯೋ ಇಲ್ಲವೋ ನನಗೆ ತಿಳಿದಿಲ್ಲ. ಆದರೆ, ಸುರಕ್ಷಿತ ದೃಷ್ಟಿಯಲ್ಲಿ ನನಗೆ ದೆಹಲಿ ಬಗ್ಗೆ ತೃಪ್ತಿಯಿಲ್ಲ. ಹಾಗಾಗಿಯೇ ನಾನು ದೆಹಲಿ ತೊರೆದು, ಮುಂಬೈ ಸೇರಿಕೊಂಡಿದ್ದೇನೆ ಎಂದು ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್

    ದೆಹಲಿಗಿಂತಲೂ ಹೆಚ್ಚು ಮುಂಬೈ ಸುರಕ್ಷತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು ಹಾಗಾಗಿಯೇ ತಾವು ಮುಂಬೈಯಲ್ಲಿ ನವೆಂಬರ್ ತಿಂಗಳಿನಲ್ಲಿ ಹೊಸ ಮನೆ ಖರೀದಿಸಿರುವುದಾಗಿ ಅವರು ತಿಳಿಸಿದ್ದಾರೆ. ಇಲ್ಲಿ ನೆಮ್ಮೆದಿಯ ಜೀವನ ನಡೆಸುವುದಕ್ಕೆ ಸಾಧ್ಯವಾಗಿದೆ ಎಂದೂ ಅವರು ಮುಂಬೈ ಬಗ್ಗೆ ಹಾಡಿ ಹೊಗಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

    ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್

    ಮುಂಬೈ: ಬಾಲಿವುಡ್‌ನ ದಂಗಲ್ ಸಿನಿಮಾದಲ್ಲಿ ನಟಿಸಿದ್ದ ಝೈರಾ ವಾಸಿಮ್ ಕರ್ನಾಟಕದ ಹಿಜಬ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಪ್ರೀತಿಸುವ ದೇವರು ತನ್ನ ಮೇಲೆ ವಿಧಿಸಿರುವ ಬಾಧ್ಯತೆ ಎಂದಿದ್ದು, ಹಿಜಬ್ ನಿಷೇಧವನ್ನು ಖಂಡಿಸಿದ್ದಾರೆ.

    ಹಿಜಾಬ್ ಇಸ್ಲಾಂನ ಒಂದು ಬಾಧ್ಯತೆ, ಆಯ್ಕೆಯಲ್ಲ ಎಂದು ಹೇಳಿದ ಝೈರಾ ನಾನು ಕೃತಜ್ಞತೆ ಮತ್ತು ನಮ್ರತೆಯಿಂದ ಹಿಜಬ್ ಧರಿಸಿಸುತ್ತೇನೆ. ಕೇವಲ ಧಾರ್ಮಿಕ ಬದ್ಧತೆಯನ್ನು ನಿರ್ವಹಿಸುವುದಕ್ಕಾಗಿ ಮಹಿಳೆಯರನ್ನು ನಿಲ್ಲಿಸಿ ಕಿರುಕುಳ ನೀಡುತ್ತಿರುವ ಈ ಸಂಪೂರ್ಣ ವ್ಯವಸ್ಥೆಯನ್ನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದ- ಮಡಿಕೇರಿ ಪ್ರಿನ್ಸಿಪಾಲರಿಗೆ ಜೀವ ಬೆದರಿಕೆ

     

    View this post on Instagram

     

    A post shared by Zaira Wasim (@zairawasim_)

    ಅಮೀರ್ ಖಾನ್‌ರ ದಂಗಲ್ ಸಿನಿಮಾದಲ್ಲಿ ನಟಿಸಿದ್ದ ಝೈರಾ 2019ರಲ್ಲಿ ಬಾಲಿವುಡ್ ತೊರೆದಿದ್ದರು. ಇದೀಗ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಝೈರಾ ಕರ್ನಾಟಕದ ಹಿಜಬ್ ನಿಷೇಧ ಹಾಗೂ ವಿದ್ಯಾರ್ಥಿನಿಯರು ಎದುರಿಸುತ್ತಿರುವ ಕಿರುಕುಳವನ್ನು ಟೀಕಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

    ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ ಹಾಗೂ ಹಿಜಬ್ ನಡುವೆ ಆಯ್ಕೆಯಾಗಿಸುವಂತೆ ಮಾಡಿರುವುದು ಅನ್ಯಾಯ. ಇದೆಲ್ಲವನ್ನೂ ಸಬಲೀಕರಣ ಹೆಸರಿನಲ್ಲಿ ಮಾಡಲಾಗುತ್ತಿದೆ. ಆದರೆ ಇದು ಮುಸ್ಲಿಮ್ ಮಹಿಳೆಗೆ ಪಕ್ಷಪಾತವಾಗಿದೆ ಎಂದು ತಿಳಿಸಿದ್ದಾರೆ.

  • ಬಾಲಿವುಡ್ ತೊರೆದ ದಂಗಲ್ ಬೆಡಗಿ

    ಬಾಲಿವುಡ್ ತೊರೆದ ದಂಗಲ್ ಬೆಡಗಿ

    ಮುಂಬೈ: ಬಾಲಿವುಡ್ ದಂಗಲ್ ಬೆಡಗಿ ಝೈರಾ ವಾಸಿಂ ಚಿತ್ರರಂಗ ತೊರೆಯುವುದಾಗಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ಝೈರಾ ಎರಡೇ ಚಿತ್ರದ ಮೂಲಕ ಬಾಲಿವುಡ್‍ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಝೈರಾ ಮಿ. ಪರ್ಫೆಕ್ಟ್ ಎಂದೇ ಖ್ಯಾತರಾಗಿರುವ ನಟ ಅಮೀರ್ ಖಾನ್ ಜೊತೆ ದಂಗಲ್ ಹಾಗೂ ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದಲ್ಲಿ ನಟಿಸಿದ್ದರು. ಈ ಎರಡು ಚಿತ್ರಗಳು ಬಾಕ್ಸ್ ಆಫೀಸ್‍ನಲ್ಲಿ ಸದ್ದು ಮಾಡಿತ್ತು. ಈಗ ಝೈರಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಬಾಲಿವುಡ್ ತೊರೆಯುವುದಾಗಿ ಪೋಸ್ಟ್ ಮಾಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    5 ವರ್ಷದ ಮೊದಲು ನಾನು ಒಂದು ನಿರ್ಧಾರ ಮಾಡಿದೆ. ಆ ನಿರ್ಧಾರ ನನ್ನ ಜೀವನವನ್ನೇ ಬದಲಾಯಿಸಿದೆ. ನಾನು ಬಾಲಿವುಡ್‍ಗೆ ಹೆಜ್ಜೆ ಇಟ್ಟಾಗ ನನಗೆ ಪಾಪುಲ್ಯಾರಿಟಿಯ ರಸ್ತೆಯನ್ನು ತೆರೆಯಿತು. ನಿಧಾನವಾಗಿ ನಾನು ಯುವ ಜನತೆಗೆ ರೋಲ್ ಮಾಡಲ್ ಆಗಿ ಕಾಣಲಾರಂಭಿಸಿದೆ. ಬಾಲಿವುಡ್‍ಗೆ ಬಂದು 5 ವರ್ಷ ಆಗಿದೆ. ಆದರೆ ನನ್ನ ಕೆಲಸದಲ್ಲಿ ನನಗೆ ಖುಷಿಯಿಲ್ಲ ಎಂದು ಹೇಳಲು ಇಷ್ಟಪಡುತ್ತೇನೆ. ನಾನು ಇಲ್ಲಿ ಫಿಟ್ ಆಗಿದ್ದೇನೆ ಆದ್ರೆ ನಾನು ಇಲ್ಲಿಯವಳಲ್ಲ. ನಟಿ ಆಗುವ ಕಾರಣದಿಂದ ನಾನು ನನ್ನ ಇಸ್ಲಾಂ ಧರ್ಮದಿಂದ ದೂರವಾಗುತ್ತಿದ್ದೇನೆ. ಹಾಗಾಗಿ ನಾನು ಚಿತ್ರರಂಗದಿಂದ ನನ್ನ ಸಂಬಂಧವನ್ನು ಮುರಿಯುತ್ತಿದ್ದೇನೆ. ನಾನು ಯೋಚಿಸಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಪೋಸ್ಟ್ ಮಾಡಿದ್ದಾರೆ.

    ಝೈರಾ ದಂಗಲ್ ಚಿತ್ರದಲ್ಲಿ ಅಮೀರ್ ಖಾನ್ ಅವರ ಮಗಳ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರದಲ್ಲಿ ಝೈರಾ ಮಹಿಳಾ ಪೈಲ್ವಾನ್ ಗೀತಾ ಪೋಗಾಟ್‍ನ ಬಾಲ್ಯದ ಪಾತ್ರವನ್ನು ನಿರ್ವಹಿಸಿದ್ದರು. ಈ ಚಿತ್ರ 2016ರಲ್ಲಿ ಬಿಡುಗಡೆ ಆಗಿತ್ತು.

     

    View this post on Instagram

     

    A post shared by Zaira Wasim (@zairawasim_) on

  • ಸಿನಿಮಾಗಾಗಿ ಕಣ್ಣಿನ ಹುಬ್ಬನ್ನೇ ಶೇವ್ ಮಾಡಿಸಿಕೊಂಡ್ರಾ ದಂಗಲ್ ನಟಿ ಫಾತಿಮಾ ಸನಾ ಶೇಕ್

    ಸಿನಿಮಾಗಾಗಿ ಕಣ್ಣಿನ ಹುಬ್ಬನ್ನೇ ಶೇವ್ ಮಾಡಿಸಿಕೊಂಡ್ರಾ ದಂಗಲ್ ನಟಿ ಫಾತಿಮಾ ಸನಾ ಶೇಕ್

    ಮುಂಬೈ: ದಂಗಲ್ ನಟಿ ಫಾತಿಮಾ ಸನಾ ಶೇಕ್ ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರಕ್ಕಾಗಿ ಕಣ್ಣಿನ ಹುಬ್ಬನ್ನು ಭಾಗಶಃ ಶೇವ್ ಮಾಡಿಸಿಕೊಂಡಿದ್ದಾರೆ ಎಂಬ ಸುದ್ದಿ ಇದೀಗ ಬಾಲಿವುಡ್‍ನಲ್ಲಿ ಸಾಕಷ್ಟು ಸದ್ದು ಮಾಡ್ತಿದೆ.

     

    ಇತ್ತೀಚೆಗೆ ಫಾತಿಮಾ ಮುಂಬೈನಲ್ಲಿ ಕಾಣಿಸಿಕೊಂಡಾಗ ಅವರ ಫೋಟೋ ತೆಗೆಯಲಾಗಿದ್ದು, ನಟಿಯ ಕಣ್ಣಿನ ಹುಬ್ಬು ಭಾಹಶಃ ಶೇವ್ ಆಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಫಾತಿಮಾ ಸಹನಟರಾದ ಆಮಿರ್ ಖಾನ್ ಹಾಗೂ ನಟಿ ಕತ್ರೀನಾ ಕೈಫ್ ಜೊತೆ ಫೋಟೋಗಳಿಗೆ ಪೋಸ್ ನೀಡಿದ್ದು, ಇದರಲ್ಲಿಯೂ ಕಣ್ಣಿನ ಹುಬ್ಬನ್ನು ಭಾಗಶಃ ಶೇವ್ ಮಾಡಿರೋದನ್ನ ಕಾಣಬಹುದು. ಚಿತ್ರದ ಸೆಟ್‍ನಲ್ಲಿ ತೆಗೆಯಲಾದ ಫೋಟೋಗಳನ್ನ ಫಾತಿಮಾ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರಕ್ಕಾಗಿ ಫಾತಿಮಾ ಹುಬ್ಬನ್ನು ಶೇವ್ ಮಾಡಿಸಿರಬಹುದು ಎಂದು ಬಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡ್ತಿದೆ.

    https://www.instagram.com/p/Be2XgWVnkRs/?utm_source=ig_embed

    ಕೆಲವು ದಿನಗಳ ಹಿಂದೆ ಫಾತಿಮಾ, ಕತ್ರೀನಾ ಹಾಗೂ ಆಮಿರ್ ಹಾಡೊಂದರ ಚಿತ್ರೀಕರಣದ ವೇಳೆ ತೆಗೆದ ಫೋಟೋ ಲೀಕ್ ಆಗಿತ್ತು. ಈ ಹಿಂದೆ ಚಿತ್ರದಲ್ಲಿನ ಆಮಿರ್ ಖಾನ್ ಲುಕ್ ನ ಫೋಟೋ ಕೂಡ ಲೀಕ್ ಆಗಿತ್ತು. ಚಿತ್ರದ ಬಗ್ಗೆ ಗುಟ್ಟು ಬಿಟ್ಟು ಕೊಡದ ಚಿತ್ರತಂಡ ಫೋಟೋಗಳು ಲೀಕ್ ಆದ ಬಳಿಕ ಸಾಕಷ್ಟು ಎಚ್ಚರಿಕೆ ವಹಿಸಿದ್ದರು. ಸೆಟ್‍ನಲ್ಲಿ ಫೋನ್ ನಿಷೇಧಿಸಲಾಗಿತ್ತು. ಹಾಗೂ ಸೆಟ್‍ಗೆ ಭೇಟಿ ನೀಡುವವರಿಗೂ ನಿರ್ಬಂಧವಿತ್ತು.

    https://www.instagram.com/p/Be2bPc4Hai_/?taken-by=fatimasanashaikh

     ಥಗ್ಸ್ ಆಫ್ ಹೊಂದೊಸ್ತಾನ್ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ನಟಿಸಿದ್ದು, ಇದೇ ವರ್ಷ ದೀಪಾವಳಿಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಧೂಮ್ 3 ನಿರ್ದೇಶಕ ವಿಜಯ್ ಕೃಷ್ಣ ಈ ಚಿತ್ರದ ನಿರ್ದೇಶನ ಮಾಡಿದ್ದು, ಯಶ್ ರಾಜ್ ಫಿಲ್ಮ್ಸ್ ಪ್ರೊಡಕ್ಷನ್‍ನಲ್ಲಿ ಚಿತ್ರ ಮೂಡಿಬಂದಿದೆ. 1839ರ ‘ಕನ್ಫೆಷನ್ಸ್ ಆಫ್ ಎ ಥಗ್’ ಎಂಬ ಕಾದಂಬರಿಯನ್ನ ಆಧರಿಸಿದ ಚಿತ್ರವಾಗಿದೆ.

  • ದೆಹಲಿಯ ವಿಮಾನದಲ್ಲಿ ದಂಗಲ್ ನಟಿ ಮೇಲೆ ಲೈಂಗಿಕ ಕಿರುಕುಳ

    ದೆಹಲಿಯ ವಿಮಾನದಲ್ಲಿ ದಂಗಲ್ ನಟಿ ಮೇಲೆ ಲೈಂಗಿಕ ಕಿರುಕುಳ

    ನವದೆಹಲಿ: ದಂಗಲ್, ಸೀಕ್ರೆಟ್ ಸೂಪರ್ ಸ್ಟಾರ್ ಖ್ಯಾತಿಯ ಝೈರಾ ವಾಸಿಂ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ದೆಹಲಿಯಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುವಾಗ ಕಿರಾತಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ತನ್ನ ಮೇಲೆ ಆದ ಈ ಕಿರುಕುಳದ ಬಗ್ಗೆ ನಟಿ ಜೈರಾ ವಾಸೀಮ್ ವಿಡಿಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡರು.

    ವಿಮಾನದಲ್ಲಿ ಕಿಡಿಗೇಡಿಯೊರ್ವ ತನ್ನೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರಿಂದ ಮನನೊಂದ ‘ದಂಗಲ್’ ನಟಿ ಝೈರಾ ವಾಸಿಂ ಬಿಕ್ಕಿ-ಬಿಕ್ಕಿ ಅತ್ತಿದ್ದಾರೆ. ಆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಏರ್ ವಿಸ್ತಾರ್ ದಲ್ಲಿ ಪ್ರಯಾಣಿಸುತ್ತಿದ್ದ 17 ವರ್ಷದ ನಟಿ ಝೈರಾ ಫ್ಲೈಟ್‍ ನಲ್ಲಿ ನಿದ್ರೆಗೆ ಜಾರಿದ್ದರು. ಈ ವೇಳೆ ಹಿಂಬದಿ ಸೀಟ್ ನಲ್ಲಿ ಕುಳಿತುಕೊಂಡಿದ್ದ ಮಧ್ಯ ವಯಸ್ಸಿನ ವ್ಯಕ್ತಿಯೊರ್ವ ಆಕೆಯ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಝೈರಾಳನ್ನು ಹಿಂದಿನಿಂದ ಕಾಲಿನಲ್ಲಿ ಸ್ಪರ್ಶಿಸಿದ್ದಾನೆ.

    https://www.youtube.com/watch?v=QLYr2Kq4FtI

    https://www.youtube.com/watch?v=V08GqgaR9kE

    ಇದರಿಂದ ನಾನು ಕೂಡಲೇ ಎಚ್ಚರಗೊಂಡು ಆ ವ್ಯಕ್ತಿಯ ಅಸಭ್ಯ ಚಟುವಟಿಕೆಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದೆ. ಆದರೆ ಅಲ್ಲಿ ಬೆಳಕು ಕಡಿಮೆ ಇದಿದ್ದರಿಂದ ನಾನು ಅವನ ಮುಖವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಆಗಲಿಲ್ಲ. ಆ ವ್ಯಕ್ತಿ ಸುಮಾರು 5-10 ನಿಮಿಷವರೆಗೂ ನನ್ನ ಕತ್ತನ್ನು ಸವರಿದ್ದಾನೆ ಹಾಗೂ ನನ್ನ ಕಾಲುಗಳನ್ನು ಸವರಿದ್ದಾನೆ ಎಂದು ಝೈರಾ ಪೋಸ್ಟ್ ಮಾಡಿದ್ದಾರೆ.

    ನಾನು ಈಗ ತಾನೇ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಿದ್ದೇನೆ. ವಿಮಾನದಲ್ಲಿ ನಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ. ಹುಡುಗಿಯರ ಜೊತೆ ಈ ರೀತಿ ಮಾಡುವುದು ಸರಿಯಿಲ್ಲ. ನಾವು ನಮ್ಮನ್ನು ರಕ್ಷಿಸಿಕೊಳ್ಳಲಿಲ್ಲ ಎಂದರೆ ನಮಗೆ ಯಾರು ಸಹಾಯ ಮಾಡುತ್ತಾರೆ. ಇದು ಬಹಳ ಕೆಟ್ಟದ್ದು ಎಂದು ಝೈರಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಅಲ್ಲದೇ ಝೈರಾ ಸಹಾಯಕ್ಕಾಗಿ ಕ್ಯಾಬೀನ್ ಸಿಬ್ಬಂದಿಯನ್ನು ಕರೆದಿದ್ದಾರೆ. ಆದರೆ ಯಾವುದೇ ಪ್ರಯೋಜವಾಗಿಲ್ಲ. ಝೈರಾ ಸಹಾಯಕ್ಕೆ ಯಾರು ಬಾರದೇ ಇದ್ದಿದ್ದು, ಅವರಿಗೆ ತುಂಬಾ ಬೇಸರ ಮೂಡಿಸಿದೆ. ಹೀಗಾಗಿ ಮುಂಬೈಗೆ ಬಂದ ಝೈರಾ ಮರುಕ್ಷಣವೇ ಇನ್ ಸ್ಟಾಗ್ರಾಂನಲ್ಲಿ ಫ್ಲೈಟ್‍ನಲ್ಲಿ ನಡೆದ ಘಟನೆ ಬಗ್ಗೆ ಅಳುತ್ತಾ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

  • ಟಿಕೆಟ್ ಬುಕ್ಕಿಂಗ್‍ನಲ್ಲೂ ಹೊಸ ದಾಖಲೆ: 24 ಗಂಟೆಯಲ್ಲಿ ಎಷ್ಟು ಬಾಹುಬಲಿ ಟಿಕೆಟ್ ಮಾರಾಟವಾಗಿದೆ ಗೊತ್ತಾ?

    ಟಿಕೆಟ್ ಬುಕ್ಕಿಂಗ್‍ನಲ್ಲೂ ಹೊಸ ದಾಖಲೆ: 24 ಗಂಟೆಯಲ್ಲಿ ಎಷ್ಟು ಬಾಹುಬಲಿ ಟಿಕೆಟ್ ಮಾರಾಟವಾಗಿದೆ ಗೊತ್ತಾ?

    ನವದೆಹಲಿ: ಈಗಾಗಲೇ ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗುವ ಮೂಲಕ ಹೊಸ ದಾಖಲೆ ಬರೆಯಲಿರುವ ಬಾಹುಬಲಿ ಈಗ ಟಿಕೆಟ್ ಬುಕ್ಕಿಂಗ್ ನಲ್ಲೂ ದಾಖಲೆ ಬರೆದಿದೆ.

    ‘ಬುಕ್‍ಮೈಶೋ’ದಲ್ಲಿ ಅತಿ ಹೆಚ್ಚು ಟಿಕೆಟ್ ಬುಕ್ ಆದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತರ ಭಾರತದಲ್ಲಿ ಬುಕ್ಕಿಂಗ್ ಓಪನ್ ಆದ 24 ಗಂಟೆಯಲ್ಲೇ 10 ಲಕ್ಷ ಟಿಕೆಟ್ ಮಾರಾಟವಾಗಿದೆ.

    ಬುಕ್‍ಮೈ ಶೋದಲ್ಲಿ ಇದೂವರೆಗೆ ರಿಲೀಸ್ ಗೆ ಮೊದಲೇ ಅತಿಹೆಚ್ಚು ಟೆಕೆಟ್ ಖರೀದಿಯಾಗಿದ್ದು ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರಕ್ಕೆ. ಈಗ ರಾಜಮೌಳಿ ನಿರ್ದೇಶನದ ಬಾಹುಬಲಿ ದಂಗಲ್ ದಾಖಲೆಯನ್ನು ಬ್ರೇಕ್ ಮಾಡಿದೆ.

    ಸಿಂಗಲ್ ಸ್ಕ್ರೀನ್ ಸಿನಿಮಾದಲ್ಲಿ ಏಪ್ರಿಲ್ 22ರಿಂದ ಬುಕ್ಕಿಂಗ್ ಓಪನ್ ಆದರೆ, ಮಲ್ಟಿಪ್ಲೆಕ್ಸ್ ಗಳಲ್ಲಿ ಏ.24ರಿಂದ ಓಪನ್ ಆಗಿದೆ. ತೆಲುಗು, ತಮಿಳು, ಹಿಂದಿ, ಮಲೆಯಾಳಂ ನಾಲ್ಕು ಭಾಷೆಯಲ್ಲಿ ಈ ಸಿನಿಮಾದ 10 ಲಕ್ಷಕ್ಕೂ ಅಧಿಕ ಟಿಕೆಟ್‍ಗಳು ಬಿಡುಗಡೆಗೂ ಮೊದಲೇ ಮಾರಾಟವಾಗಿದೆ ಎಂದು ಸಿನಿ ಮಾರುಕಟ್ಟೆಯ ವಿಶ್ಲೇಷಕ ಶ್ರೀಧರ್ ಪಿಳ್ಳೈ ಎಂಬವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಬಾಹುಬಲಿ ಮೊದಲ ದಿನ 100 ಕೋಟಿ ರೂ. ಕಲೆಕ್ಷನ್ ಮಾಡಿದರೆ, ವಾರಾಂತ್ಯಕ್ಕೆ ಒಟ್ಟು 300-350 ರೂ. ಕಲೆಕ್ಷನ್ ಮಾಡಬಹುದು. ಮೊದಲ ವಾರದಲ್ಲಿ ಒಟ್ಟು 500 ಕೋಟಿ ರೂ. ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಿದ್ದಾರೆ.

    ಆಂಧ್ರಪ್ರದೇಶ ಮತ್ತು ತೆಲಂಗಣಾ ಸರ್ಕಾರ ಸಿಂಗಲ್ ಸ್ಕ್ರೀನ್ ಟಿಕೆಟ್‍ಗೆ 160 ರೂ. ಮಲ್ಟಿಪ್ಲೆಕ್ಸ್ ಗೆ 200 ರೂ. ದರವನ್ನು ಏರಿಸಲು ಅನುಮತಿ ನೀಡಿದೆ. ಕರ್ನಾಟಕದಲ್ಲೂ ಈಗಾಗಲೇ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿರುವ ಕಾರಣ ದಕ್ಷಿಣ ಭಾರತದಲ್ಲಿ ಉತ್ತಮ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.

    ಶುಕ್ರವಾರ ಬಿಡುಗಡೆಯಾಗಬೇಕಾದ ಬಾಹುಬಲಿ ದೇಶದ ಹಲವೆಡೆ ಗುರುವಾರ ರಾತ್ರಿಯೇ ಬಿಡುಗಡೆಯಾಗುತ್ತಿದೆ. ಬೆಗಳೂರಿನಲ್ಲಿ ರಾತ್ರಿ ತೆಲುಗು ಭಾಷೆಯಲ್ಲಿರುವ ಚಿತ್ರ 52 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾದರೆ 9 ಪರದೆಯಲ್ಲಿ ತಮಿಳು ಬಾಹುಬಲಿ ತೆರೆ ಕಾಣಲಿದೆ. ಹಿಂದಿಯಲ್ಲಿ 20 ಪರದೆಯಲ್ಲಿ ಬಿಡುಗಡೆಯಾಗುತ್ತಿದೆ.

    ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಬಾಹುಬಲಿ ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ನಿಮ್ಗೆ ಆಶ್ಚರ್ಯ ಆಗುತ್ತೆ!

     

    ಇದನ್ನೂ ಓದಿ:  ಮತ್ತೊಂದು ದಾಖಲೆ: ಎಷ್ಟು ಸ್ಕ್ರೀನ್ ಗಳಲ್ಲಿ ಬಾಹುಬಲಿ ಬಿಡುಗಡೆಯಾಗಲಿದೆ ಗೊತ್ತಾ?