Tag: Dandi Duggamma Devi

  • ಈ ಪೂಜಾರಿಯ ಪಾದ ಸ್ಪರ್ಶ ಮಾಡಿದರೆ ಇಷ್ಟಾರ್ಥ ಸಿದ್ಧಿ – ಅರಸೀಕೆರೆಯಲ್ಲಿ ವಿಶಿಷ್ಟ ಆಚರಣೆ

    ಈ ಪೂಜಾರಿಯ ಪಾದ ಸ್ಪರ್ಶ ಮಾಡಿದರೆ ಇಷ್ಟಾರ್ಥ ಸಿದ್ಧಿ – ಅರಸೀಕೆರೆಯಲ್ಲಿ ವಿಶಿಷ್ಟ ಆಚರಣೆ

    ದಾವಣಗೆರೆ: ಈ ಶತಮಾನದಲ್ಲಿಯೂ ಕೆಲವು ಭಾಗಗಳಲ್ಲಿ ದಲಿತರನ್ನು ದೇವಸ್ಥಾನದ ಒಳಗೆ ಬಿಟ್ಟುಕೊಳ್ಳದ ಪರಿಸ್ಥಿತಿ ಇದೆ. ಆದರೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಅರಸೀಕೆರೆಯಲ್ಲಿ ಮಾತ್ರ ದಲಿತ ಪೂಜಾರಿಯ ಪಾದ ಸ್ಪರ್ಶಕ್ಕೆ ಹಲವು ಜನ ಕಾಯುತ್ತಿರುವ ವಿಶಿಷ್ಟ ಆಚರಣೆಯಿದೆ.

    ದಲಿತ ಪೂಜಾರಿ ಪಾದ ಸ್ಪರ್ಶ ಮಾಡಲು ಕಿಲೋಮೀಟರ್ ಗಟ್ಟಲೇ ದಾರಿಯುದ್ದಕ್ಕೂ ಸಾವಿರಾರು ಭಕ್ತರು ಮಲಗಿ ಕಾಯುತ್ತಿರುತ್ತಾರೆ. ಭಕ್ತರ ಮೇಲೆ ಆ ದಲಿತ ಪೂಜಾರಿ ನಡೆದರೆ ಅವರ ಎಲ್ಲ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಅದರ ಜೊತೆಗೆ ಪಾಪ ಕಳೆಯುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನಗಳಿಗಿದೆ.

    ಈ ರೀತಿಯ ವಿಶಿಷ್ಟ ಆಚರಣೆ ಅರಸೀಕೆರೆ ದಂಡಿ ದುಗ್ಗಮ್ಮ ಜಾತ್ರೆಯಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಆಚಾರವಾಗಿದೆ. ಕಾರ್ತಿಕ ನಂತರದ ಅಮಾವಾಸ್ಯೆ ದಿನದಂದು ಈ ಜಾತ್ರೆ ನಡೆಯಲಿದ್ದು, ಬೆಳಗ್ಗಿನ ಜಾವ ದಲಿತ ಪೂಜಾರಿ ಗಂಗೆ ಪೂಜೆ ಸಲ್ಲಿಸಿ ದೇವರ ಮೂರ್ತಿಯನ್ನು ಹೊತ್ತು ಸಾಗುತ್ತಾರೆ. ಊರ ಹೊರಗೆ ಗಂಗೆಪೂಜೆ ಮುಗಿಸಿ ದಂಡಿ ದುಗ್ಗಮ್ಮನ ಮೂರ್ತಿಯನ್ನು ಹೊತ್ತು ಎರಡು ಕಿಲೋಮೀಟರ್ ನಡೆಯುತ್ತಾರೆ. ಇದನ್ನೂ ಓದಿ: 30 ದೇಶಗಳ ಅನಿವಾಸಿ ಕನ್ನಡಿಗರಿಂದ ಇಂದು ‘ಎನ್ಆರ್‌ಐ ಅಪೀಲ್ ಡೇ’ ಟ್ವಿಟ್ಟರ್ ಅಭಿಯಾನ

    ಈ ಎರಡು ಕಿಲೋಮೀಟರ್ ಉದ್ದಕ್ಕೂ ಭಕ್ತರು ಅಡ್ಡಲಾಗಿ ಮಲಗುತ್ತಾರೆ. ಭಕ್ತರ ಮೇಲೆಯೇ ಪೂಜಾರಿ ನಡೆದು ದೇವಸ್ಥಾನ ಸೇರುತ್ತಾರೆ. ಸಾವಿರಾರು ಜನರು ಈ ರೀತಿ ತಮ್ಮ ಹರಕೆಯನ್ನು ತೀರಿಸಿಕೊಳ್ಳುತ್ತಾರೆ. ದಲಿತ ಪೂಜಾರಿಯ ಪಾದಸ್ಪರ್ಶ ಮಾಡಿದರೆ ಒಳಿತಾಗುತ್ತದೆ ಎನ್ನುವ ವಾಡಿಕೆ ಈಗಲೂ ಕೂಡ ನಡೆದುಕೊಂಡು ಬಂದಿದೆ. ಅಲ್ಲದೆ ದಂಡಿ ದುಗ್ಗಮ್ಮ ದೇವಿಗೆ ಜಾತ್ರೆಯಲ್ಲಿ ಜಾನುವಾರುಗಳನ್ನು ದೇವಸ್ಥಾನ ಬಳಿ ಪ್ರದಕ್ಷಿಣೆ ಹಾಕಿಸಿದರೆ ಅವುಗಳಿಗೆ ಯಾವುದೇ ರೋಗ ತಗುಲುವುದಿಲ್ಲ ಎನ್ನುವ ನಂಬಿಕೆ ಇದೆ. ಇದನ್ನೂ ಓದಿ: ಓಮಿಕ್ರಾನ್‌ ಸ್ಫೋಟ – ಬೆಂಗಳೂರಿನಲ್ಲಿ ಲಾಕ್‌ಡೌನ್‌ ಸುಳಿವು ನೀಡಿದ ಸಚಿವ ಆರ್‌.ಅಶೋಕ್‌