Tag: Dancing

  • ಚಲಿಸುತ್ತಿರುವ ಕಾರಿನ ಮೇಲೆ ಡಾನ್ಸ್- 20 ಸಾವಿರ ಫೈನ್

    ಚಲಿಸುತ್ತಿರುವ ಕಾರಿನ ಮೇಲೆ ಡಾನ್ಸ್- 20 ಸಾವಿರ ಫೈನ್

    ನವದೆಹಲಿ: ಚಲಿಸುತ್ತಿರುವ ಕಾರಿನ ಮೇಲೇರಿ ಯುವಕರಿಬ್ಬರ ಡಾನ್ಸ್ ಮಾಡಿದ್ದವರಿಗೆ ಗಾಜಿಯಾಬಾದ್ ಪೊಲೀಸ್ ಪೊಲೀಸರು 20 ಸಾವಿರ ರೂ. ಫೈನ್ ಹಾಕಿರುವ ಘಟನೆ ನಡೆದಿದೆ.

    ಯುವಕರ ಗುಂಪೊಂದು ವಾಹನದ ಮೇಲೇರಿ ಡಾನ್ಸ್ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ ನಂತರ ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು ಕಾರಿನ ಮಾಲೀಕರೊಬ್ಬರಿಗೆ 20,000 ರೂ ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ಸಿನಿಮಾರಂಗ ಬಿಟ್ಟು ಕೃಷಿಯತ್ತ ಮುಖ ಮಾಡಿದ್ರಾ ಸ್ಟಾರ್ ನಟಿ ಸಾಯಿ ಪಲ್ಲವಿ?

    ವೀಡಿಯೋದಲ್ಲಿ ಏನಿದೆ?: ಘಾಜಿಯಾಬಾದ್‍ನಲ್ಲಿ, ಹುಡುಗರ ಗುಂಪು, ದೆಹಲಿ-ಮೀರತ್ ಎಕ್ಸ್‌ಪ್ರೇಸ್‌ವೇಯಲ್ಲಿ  ತಮ್ಮ ಕಾರಿನ ಟಾಪ್ ಮೇಲೇರಿ ಡಾನ್ಸ್ ಮಾಡಿತ್ತಿದ್ದಾರೆ. ಇಬ್ಬರು ಯುವಕರು ಕಾರಿನ ಮೇಲೇರಿ ನೃತ್ಯ ಮಾಡುವುದನ್ನು ಕಾಣಬಹುದು. ಇನ್ನಿಬ್ಬರು ವೀಡಿಯೋ ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ.  

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಗಾಜಿಯಾಬಾದ್ ಟ್ರಾಫಿಕ್ ಪೊಲೀಸರು, ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಾಹನ ಮಾಲೀಕರಿಗೆ 20,000 ರೂ. ದಂಡ ವಿಧಿಸಲಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ವಾಹನ ಮಾಲೀಕರ ವಿರುದ್ಧ ಒಟ್ಟು 20,000 ರೂ.ಗಳ  ದಂಡವನ್ನು ಹಾಕಲಾಗಿದೆ.

  • ಬಿಜೆಪಿ ಥೀಮ್ ಸಾಂಗ್‍ಗಳಿಗೆ ಡ್ಯಾನ್ಸ್ ಮಾಡ್ತಿದ್ದವರ ಮೇಲೆ ಎಸ್‍ಪಿ ಕಾರ್ಯಕರ್ತರಿಂದ ಹಲ್ಲೆ

    ಬಿಜೆಪಿ ಥೀಮ್ ಸಾಂಗ್‍ಗಳಿಗೆ ಡ್ಯಾನ್ಸ್ ಮಾಡ್ತಿದ್ದವರ ಮೇಲೆ ಎಸ್‍ಪಿ ಕಾರ್ಯಕರ್ತರಿಂದ ಹಲ್ಲೆ

    ಲಕ್ನೋ: ಬಿಜೆಪಿಯ ಚುನಾವಣಾ ಪ್ರಚಾರದ ಹಾಡುಗಳಿಗೆ ನೃತ್ಯ ಮಾಡುತ್ತಿದ್ದ ಗ್ರಾಮಸ್ಥರ ಮೇಲೆ ಜನರ ಗುಂಪೊಂದು ದಾಳಿ ಮಾಡಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

    ಕಾನ್ಪುರ ದೇಹತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ಜಿಲ್ಲೆಯ ರಸೂಲಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಸಂಭ್ರಮಾಚರಣೆಗಾಗಿ ತಮ್ಮ ಮನೆಯಲ್ಲಿ ಡಿಜೆ ಹಾಕಿ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ಥಳೀಯರು ಬಿಜೆಪಿ ಚುನಾವಣಾ ಥೀಮ್ ಸಾಂಗ್‍ಗಳಿಗೆ ಕುಣಿಯುತ್ತಿದ್ದರು. ಸ್ಥಳಕ್ಕೆ ಬಂದ ಸಮಾಜವಾದಿ ಪಕ್ಷದ ಕಾರ್ಯಕರ್ತರು ಬಿಜೆಪಿ ಚುನಾವಣಾ ಥೀಮ್ ಹಾಡುಗಳನ್ನು ಪ್ಲೇ ಮಾಡುವುದನ್ನು ನಿಲ್ಲಿಸುವಂತೆ ಡಿಜೆ ಆಯೋಜಕರನ್ನು ಕೇಳಿದರು. ಡಿಜೆ ಆಯೋಜಕರು ಕೇಳದೆ ಇದ್ದಾಗ ಆತನನ್ನು ನಿಂದಿಸಿ, ಥಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ: ಜಮ್ಮು, ಕಾಶ್ಮೀರ ಬಜೆಟ್ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

    ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ, ಸೆಕ್ಷನ್‍ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ರಸೂಲಾಬಾದ್ ಪೊಲೀಸ್ ಠಾಣೆಯ ಉಸ್ತುವಾರಿ ಪ್ರಮೋದ್ ಕುಮಾರ್ ಶುಕ್ಲಾ ಹೇಳಿದ್ದಾರೆ. ಇದನ್ನೂ ಓದಿ: ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಭಗವಂತ್ ಮಾನ್

    ಎಲ್ಲಾ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳಿಹೆರ ಹುಡುಕಾಟ ನಡೆಸಲಾಗುತ್ತಿದೆ. ಶುಕ್ರವಾರ ರಾತ್ರಿ, ಔರಯ್ಯ ಜಿಲ್ಲೆಯಲ್ಲಿ, ಬಿಜೆಪಿಯ ಚುನಾವಣಾ ಹಾಡುಗಳನ್ನು ನುಡಿಸುವಾಗ ಮದುವೆ ಮೆರವಣಿಗೆಯ ಮೇಲೆ ದಾಳಿ ನಡೆಸಿರುವುದು ಕೆಲವು ದಿನಗಳ ಹಿಂದೆ ಸುದ್ದಿಯಾಗಿತ್ತು.

  • ಭಾರತ ಸೇನೆಯ ಹಾಡಿಗೆ ಹೆಜ್ಜೆ ಹಾಕಿದ ಅಮೆರಿಕ ಸೈನಿಕರು: ವಿಡಿಯೋ

    ಭಾರತ ಸೇನೆಯ ಹಾಡಿಗೆ ಹೆಜ್ಜೆ ಹಾಕಿದ ಅಮೆರಿಕ ಸೈನಿಕರು: ವಿಡಿಯೋ

    ವಾಷಿಂಗ್ಟನ್: ಭಾರತ ಸೇನೆಯ ನೆಚ್ಚಿನ ಮೆರವಣಿಗೆ ಹಾಡಿಗೆ ಭಾರತೀಯ ಸೈನಿಕರ ಜೊತೆ ಅಮೆರಿಕದ ಸೈನಿಕರು ಹೆಜ್ಜೆ ಹಾಕಿದ್ದಾರೆ.

    ಜಂಟಿ ಮಿಲಿಟರಿ ವ್ಯಾಯಾಮದ ಸಮಯದಲ್ಲಿ ಭಾರತೀಯ ಸೈನಿಕರು ಮತ್ತು ಅಮೆರಿಕದ ಸೈನಿಕರು ಜೊತೆಗೂಡಿ ನಮ್ಮ ದೇಶದ ಸೇನೆಯ ಮೆರವಣಿಗೆ ಗೀತೆಯಾದ ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಹೈ ಎಂಬ ಹಾಡನ್ನು ಹೇಳುತ್ತಾ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಹೈ ಈ ಹಾಡು ಎರಡನೇ ಮಹಾಯುದ್ಧದಲ್ಲಿ ಹುತಾತ್ಮರಾದ ಅಸ್ಸಾಂ ರೆಜಿಮೆಂಟ್‍ನ ಸೈನಿಕ ಬದ್ಲುರಾಮ್ ಅವರಿಗೆ ಸಮರ್ಪಿಸಲಾಗಿರುವ ಬಹು ಜನಪ್ರಿಯ ಗೀತೆಯಾಗಿದೆ. ಈ ಹಾಡನ್ನು ಹಾಡುತ್ತಾ ಭಾರತ ಮತ್ತು ಅಮೆರಿಕ ಸೈನಿಕರ ಗುಂಪು ಚಪ್ಪಾಳೆ ತಟ್ಟುತ್ತಾ ಹರ್ಷೋದ್ಗಾರದಿಂದ ಡ್ಯಾನ್ಸ್ ಮಾಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

    ಮ್ಯಾಕ್‍ಕಾರ್ಡ್ ನ ಜಾಯಿಂಟ್ ಬೇಸ್ ಲೂಯಿಸ್‍ನಲ್ಲಿ ಭಾರತ ಮತ್ತು ಅಮೆರಿಕ ನಡೆಸಿದ ಜಂಟಿ ಸಮರಭ್ಯಾಸ ಕಾರ್ಯಕ್ರಮದ ಸಮಯದಲ್ಲಿ ಅಸ್ಸಾಂ ರೆಜಿಮೆಂಟ್‍ನ ಮೆರವಣಿಗೆಯ ಹಾಡನ್ನು ಸೈನಿಕರ ಗುಂಪು ಹಾಡಿ ಇದರ ಜೊತೆಗೆ ನೃತ್ಯವನ್ನು ಮಾಡಿದೆ.

  • ನಗರದ ಮಧ್ಯೆ ಮುಸ್ಲಿಂ ಯುವತಿಯರ ಡ್ಯಾನ್ಸ್- ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ನಗರದ ಮಧ್ಯೆ ಮುಸ್ಲಿಂ ಯುವತಿಯರ ಡ್ಯಾನ್ಸ್- ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ

    ತಿರುವನಂತಪುರ: ಕೇರಳದ ಮಲಪ್ಪುರಂನಲ್ಲಿ ಏಡ್ಸ್ ಜಾಗೃತಿ ಮೂಡಿಸುವ ಕುರಿತು ಆರೋಗ್ಯ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ಯುವತಿಯರು ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವು ಸಾಂಪ್ರದಾಯವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಮಲಪ್ಪುರಂ ಆರೋಗ್ಯ ಇಲಾಖೆ ಫ್ಲಾಶ್ ಮಾಬ್ ಆಯೋಜಿಸಿತ್ತು. ಈ ಫ್ಲಾಶ್ ಮಾಬ್ ನಲ್ಲಿ ಬುರ್ಖಾ ಹಾಗೂ ಜಿನ್ಸ್ ಧರಿಸಿ ಮೂವರು ದಂತ ವೈದ್ಯಕೀಯ ಓದುತ್ತಿರುವ ವಿದ್ಯಾರ್ಥಿಗಳು ಮಲಪ್ಪುರಂ ನಗರದ ಮುಖ್ಯ ವೃತ್ತದಲ್ಲಿ ಹಾಡೊಂದಕ್ಕೆ ಡಾನ್ಸ್ ಮಾಡಿದ್ದಾರೆ.

    ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ಕೇಳಿ ಬಂದಿದೆ. ಆದರೆ ಹಲವು ಮಂದಿ ಯುವತಿಯರಿಗೆ ಬೆಂಬಲ ನೀಡಿ ಕಮೆಂಟ್ ಮಾಡುತ್ತಿದ್ದಾರೆ.

    https://twitter.com/shilpasunil_rao/status/937567825035657216

  • ಮಿಸ್ಟರ್&ಮಿಸೆಸ್ ಐಕಾನ್ ಇಂಡಿಯಾ- ಫ್ಯಾಷನ್ ಶೋನಲ್ಲಿ ಮೆರುಗು ತುಂಬಿದ ಬೆಲ್ಲಿ ಡ್ಯಾನ್ಸ್

    ಮಿಸ್ಟರ್&ಮಿಸೆಸ್ ಐಕಾನ್ ಇಂಡಿಯಾ- ಫ್ಯಾಷನ್ ಶೋನಲ್ಲಿ ಮೆರುಗು ತುಂಬಿದ ಬೆಲ್ಲಿ ಡ್ಯಾನ್ಸ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾರಾಂತ್ಯ ಬಂದರೇ ಸಾಕು ಒಂದಿಲ್ಲೊಂದು ಮನರಂಜನಾ ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ನೋಡುಗರನ್ನು ರಂಜಿಸುವ ಕಾರ್ಯ ನಡೆಯುತ್ತಲೇ ಇರುತ್ತದೆ.

    ಈ ಬಾರಿಯ ವೀಕೆಂಡ್‍ನಲ್ಲಿ ನಗರದ ಪ್ರತಿಷ್ಠಿತ ಹೊಟೇಲೊಂದರಲ್ಲಿ ಆಯೋಜಿಸಿದ್ದ ಮಿಸ್ಟರ್ ಆ್ಯಂಡ್ ಮಿಸೆಸ್ ಐಕಾನ್ ಇಂಡಿಯಾ ಫ್ಯಾಷನ್ ಶೋ ಎಲ್ಲರ ಗಮನ ಸೆಳೆಯಿತು.

    ಜಗಮಗಿಸುವ ಲೈಟ್‍ಗಳ ನಡುವೆ ಮಾದಕ ಕಣ್ಣೋಟದ ಸುಂದರಿಯರು ರಾಕಿಂಗ್ ಮ್ಯೂಸಿಕ್ ಗೆ ಕ್ಯಾಟ್ ವಾಕ್ ಮಾಡುವ ಮೂಲಕ ಎಲ್ಲರನ್ನೂ ಒಂದು ಕ್ಷಣ ಮಾಯಾ ಪ್ರಪಂಚಕ್ಕೆ ಕರೆದುಕೊಂಡು ಹೋದರು. ಇಂಥದೊಂದು ಮನಮೋಹಕ ಫ್ಯಾಶನ್ ಶೋ ಅನಾವರಣಗೊಂಡಿದ್ದು ಬೆಂಗಳೂರಿನ `ದಿ ಕ್ಯಾಪಿಟಲ್ ಹೋಟೆಲ್’ ನಲ್ಲಿ.

    ಖಾಸಗಿ ಸಂಸ್ಥೆಯೊಂದು ಆಯೋಜನೆ ಮಾಡಿದ್ದ ಫ್ಯಾಷನ್ ಶೋವನ್ನು ಖ್ಯಾತ ನೃತ್ಯ ನಿರ್ದೇಶಕ ಡ್ಯಾನಿ ಹಾಗೂ ಸಟಿ ಸನಿಹಾ ಯಾದವ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟನೆ ಮಾಡಿದರು. ಇನ್ನು ಈ ಫ್ಯಾಷನ್ ಶೋ ಕಾರ್ಯಕ್ರಮದಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಕೇರಳ ಮೂಲದ ನೂರಕ್ಕೂ ಹೆಚ್ಚು ಮಾಡೆಲ್ ಗಳು ಭಾಗವಹಿಸಿ, ತಮ್ಮ ಪ್ರತಿಭೆಯನ್ನು ರ್ಯಾಪ್ ವಾಕ್ ಮಾಡುವ ಮೂಲಕ ಪ್ರದರ್ಶಿಸಿದರು.

    ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರೇಕ್ಷಕರನ್ನು ಹುರಿದುಂಬಿಸುವ ಸಲುವಾಗಿ ಬೆಲ್ಲಿ ಡ್ಯಾನ್ಸ್ ಏರ್ಪಡಿಸಲಾಗಿದ್ದು ಮತ್ತೊಂದು ವಿಶೇಷ. ಬೆಲ್ಲಿ ಡ್ಯಾನ್ಸ್ ಕಂಡ ಫ್ಯಾಷನ್ ಪ್ರಿಯರು ಮಾಗಿ ಚಳಿಯಲ್ಲೂ ಮೈ ಬಿಸಿಯಾದಂತೆ ಭಾಸವಾದ್ರು. ಇಷ್ಟೇ ಅಲ್ಲದೇ ಕೋರಿಯೊಗ್ರಾಫರ್ ಡ್ಯಾನಿ ಮಾಡಲ್ ಗಳ ಜೊತೆ ಹಿಂದಿ ಹಾಡುಗಳಿಗೆ ಡ್ಯಾನ್ಸ್ ಮಾಡುವ ಮೂಲಕ ಪ್ರೇಕ್ಷಕರನ್ನು ಮತ್ತಷ್ಟು ಮನಸೂರೆಗೊಳಿಸಿದರು. ಒಟ್ಟಿನಲ್ಲಿ ವೀಕೆಂಡ್ ಮಸ್ತಿಯಲ್ಲಿದ್ದ ಬೆಂಗಳೂರಿನ ಜನರಿಗೆ ಕಲರ್ ಫುಲ್ ರ್ಯಾಪ್ ವಾಕ್ ವಿಶೇಷ ಮನರಂಜನೆಯನ್ನು ನೀಡಿತು.