Tag: Dancer

  • ವೇದಿಕೆ ಮೇಲೆಯೇ ನೃತ್ಯಗಾರ್ತಿಯೊಂದಿಗೆ ರೊಮ್ಯಾನ್ಸ್ – ಪುರಸಭೆ ಕಾರ್ಯಕರ್ತ ಅಮಾನತು

    ವೇದಿಕೆ ಮೇಲೆಯೇ ನೃತ್ಯಗಾರ್ತಿಯೊಂದಿಗೆ ರೊಮ್ಯಾನ್ಸ್ – ಪುರಸಭೆ ಕಾರ್ಯಕರ್ತ ಅಮಾನತು

    ಭೋಪಾಲ್: ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲಿದ್ದ ಜಾನಪದ ನೃತ್ಯಗಾರ್ತಿ ಜೊತೆ ಮಧ್ಯಪ್ರದೇಶದ (Madhya Pradesh) ಛತ್ತರ್‍ಪುರ (Chhatarpur) ಜಿಲ್ಲೆಯ ಪುರಸಭೆಯ ಕಾರ್ಯಕರ್ತನೊಬ್ಬ ಅನುಚಿತವಾಗಿ ವರ್ತಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಈ ಘಟನೆ ನಂತರ ನೃತ್ಯಗಾರ್ತಿಯರು ಕಾರ್ಯಕರ್ತ ಮುಖೇಶ್ ಶ್ರೀನಿವಾಸ್ ವಿರುದ್ಧ ಛತ್ತರ್‍ಪುರ ಪುರಸಭೆಗೆ (Chhatarpur Municipality) ದೂರು ಸಲ್ಲಿಸಿದ್ದಾರೆ. ದೂರಿನ ಮೇರೆಗೆ ಪಾಲಿಕೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದು, ಇದೀಗ ಆರೋಪಿ ಮುಖೇಶ್ ಶ್ರೀನಿವಾಸ್ ಅನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ನಗರಪಾಲಿಕೆ ಸಿಎಂಒ ಓಂಪಾಲ್ ಸಿಂಗ್ ಭಡೋರಿಯಾ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಸ್ಟುಡಿಯೋ ಕ್ಲೀನ್ ಮಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಫೋಟೋಗ್ರಾಫರ್‌ಗಳಿಬ್ಬರ ದುರ್ಮರಣ

    ಅಕ್ಟೋಬರ್ 18 ರಂದು ಮುನ್ಸಿಪಲ್ ಕಾರ್ಪೊರೇಷನ್ ಆವರಣದಲ್ಲಿ ವಾರ್ಷಿಕ ಜಲ ವಿಹಾರ ಜಾತ್ರೆ ವೇಳೆ ಈ ಘಟನೆ ನಡೆದಿದ್ದು, ವೇದಿಕೆ ಮೇಲಿದ್ದ ಜಾನಪದ ನೃತ್ಯಗಾರ್ತಿಯೊಂದಿಗೆ ನಗರಸಭೆ ಸಿಬ್ಬಂದಿ ಮುಖೇಶ್ ಶ್ರೀನಿವಾಸ್ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನರ್ತಕಿಯರೊಂದಿಗೆ ಹೀಗೆ ನಡೆದುಕೊಂಡಿದ್ದರಿಂದ ಸಂಸ್ಥೆಯ ಪ್ರತಿಷ್ಠೆಗೆ ನನ್ನಿಂದ ಧಕ್ಕೆ ಉಂಟಾಗಿದೆ ಎಂದು ಮುಖೇಶ್ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಿಂದ ನಾವು ವಿಚಲಿತರಾಗಿದ್ದೇವೆ – ಪ್ರಹ್ಲಾದ್ ಜೋಶಿ

    Live Tv
    [brid partner=56869869 player=32851 video=960834 autoplay=true]

  • ಆಸ್ಪತ್ರೆ ದಾಖಲಾಗಿದ್ದ ಪದ್ಮಶ್ರೀ ಪುರಸ್ಕೃತೆಗೆ ಬಲವಂತವಾಗಿ ನೃತ್ಯ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆ

    ಆಸ್ಪತ್ರೆ ದಾಖಲಾಗಿದ್ದ ಪದ್ಮಶ್ರೀ ಪುರಸ್ಕೃತೆಗೆ ಬಲವಂತವಾಗಿ ನೃತ್ಯ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆ

    ಭುವನೇಶ್ವರ: ಒಡಿಶಾದ ಪರಾಜ ಬುಡಕಟ್ಟು ಸಮುದಾಯದ ಪದ್ಮಶ್ರೀ ಪುರಸ್ಕೃತೆ ಕಮಲಾ ಪುಜಾರಿ ಇತ್ತೀಚೆಗೆ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಡಿಸ್ಚಾರ್ಜ್ ಮಾಡುವುದಕ್ಕೂ ಮೊದಲು ಸಾಮಾಜಿಕ ಕಾರ್ಯಕರ್ತೆಯೊಬ್ಬರು ಬಲವಂತವಾಗಿ ನೃತ್ಯ ಮಾಡಿಸಿರುವ ಘಟನೆ ಕಟಕ್ ನಗರದ ಆಸ್ಪತ್ರೆಯಲ್ಲಿ ನಡೆದಿದೆ.

    ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ ವೃದ್ಧ ಪದ್ಮಶ್ರೀ ಪುರಸ್ಕೃತೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ವೀಡಿಯೋದಲ್ಲಿ ಸಾಮಾಜಿಕ ಕಾರ್ಯಕರ್ತೆ ಮಮತಾ ಬೆಹೆರಾ ಕೂಡ ಅವರೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.

    ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ನನಗೆ ನೃತ್ಯ ಮಾಡಲು ಇಷ್ಟವಿರಲಿಲ್ಲ. ಆದರೆ ನನಗೆ ನೃತ್ಯ ಮಾಡಲು ಒತ್ತಾಯಿಸಲಾಗಿತ್ತು. ನಾನು ಪದೇ ಪದೇ ನಿರಾಕರಿಸಿದರೂ ಅವರು ಕೇಳಲಿಲ್ಲ. ಎಂದು ಕಮಲಾ ಪೂಜಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಪರಾಜ ಬುಡಕಟ್ಟು ಸಮುದಾಯದ ಸದಸ್ಯರು ಸಾಮಾಜಿಕ ಕಾರ್ಯಕರ್ತೆಯ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬ್ರಿಟಿಷರ ಕಾಲದ ಚಿನ್ಹೆಗೆ ಕೊಕ್ – ನೌಕಾಪಡೆಗೆ ಶಿವಾಜಿಯ ಧ್ವಜ ಸೇರ್ಪಡೆ

    ಕಮಲಾ ಪುಜಾರಿ ಅವರನ್ನು ಬಲವಂತವಾಗಿ ನೃತ್ಯ ಮಾಡಿಸಿದ ಸಾಮಾಜಿಕ ಕಾರ್ಯಕರ್ತೆಯ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ವಿಫಲವಾದರೆ, ನಮ್ಮ ಸದಸ್ಯರು ಬೀದಿಗಿಳಿಯುತ್ತಾರೆ ಎಂದು ಬುಡಕಟ್ಟು ಸಮುದಾಯ ಪರಜಾ ಸಮಾಜದ ಅಧ್ಯಕ್ಷ ಹರೀಶ್ ಮುದುಳಿ ಎಚ್ಚರಿಕೆ ನೀಡಿದ್ದಾರೆ.

    ಸಾವಯವ ಕೃಷಿಯನ್ನು ಉತ್ತೇಜಿಸಿದ ಹಾಗೂ ಭತ್ತ ಸೇರಿದಂತೆ ವಿವಿಧ ಬೆಳೆಗಳ 100 ಕ್ಕೂ ಹೆಚ್ಚು ದೇಶೀಯ ಬೀಜಗಳನ್ನು ಸಂರಕ್ಷಿಸಿದ್ದಕ್ಕಾಗಿ 2019 ರಲ್ಲಿ ಕಮಲಾ ಪುಜಾರಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿತ್ತು. ಇತ್ತೀಚೆಗೆ ಅವರು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಪೈಲಟ್‍ಗಳ ಮುಷ್ಕರದಿಂದ ವಿಮಾನ ಸಂಚಾರ ರದ್ದು – ದೆಹಲಿ ವಿಮಾನ ನಿಲ್ದಾಣದಲ್ಲಿ ಜನಜಂಗುಳಿ

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಸ್ಪರ್ಧಿ ಸಪ್ನಾ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ: ಬಂಧಿಸಲು ಕಾಯುತ್ತಿರುವ ಪೊಲೀಸರು

    ‘ಬಿಗ್ ಬಾಸ್’ ಸ್ಪರ್ಧಿ ಸಪ್ನಾ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿ: ಬಂಧಿಸಲು ಕಾಯುತ್ತಿರುವ ಪೊಲೀಸರು

    ಖ್ಯಾತ ಗಾಯಕಿ, ಡಾನ್ಸರ್ ಆಗಿರುವ ಹರ್ಯಾಣದ ಸಪ್ನಾ ಚೌಧರಿ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿದ್ದು, ಅವರನ್ನು ಬಂಧಿಸಲು ಲಕ್ನೋ ಪೊಲೀಸರು ಹರ್ಯಾಣಗೆ ಪ್ರಯಾಣ ಬೆಳೆಸಿದ್ದಾರೆ. ನ್ಯಾಯಾಲಯಕ್ಕೆ ಗೈರಾಗಿದ್ದರಿಂದ ಬಂಧಿಸುವಂತೆ ನ್ಯಾಯಾಲಯವು ವಾರೆಂಟ್ ಹೊರಡಿಸಲಾಗಿದೆ. ಯುಪಿ ಪೊಲೀಸ್ ತಂಡ ಇಂದು ಅಥವಾ ನಾಳೆ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ನೃತ್ಯ ಕಾರ್ಯಕ್ರಮವೊಂದನ್ನು ಒಪ್ಪಿಕೊಂಡು, ಮುಗಂಡ ಹಣ ಪಡೆದು ಕಾರ್ಯಕ್ರವನ್ನು ನೀಡದೆ ವಂಚಿಸಿದ್ದಾರೆ ಎಂದು ಅವರ ಮೇಲೆ ದೂರು ದಾಖಲಾಗಿತ್ತು. ಈ ದೂರಿಗೆ ಸಂಬಂಧಿಸಿದಂತೆ ಸಪ್ನಾ ಚೌಧರಿ ವಿರುದ್ಧ ಎಸಿಜೆಎಂ ನ್ಯಾಯಾಲಯವು ಸೋಮವಾರ ಅರೆಸ್ಟ್ ವಾರೆಂಟ್ ಜಾರಿ ಮಾಡಿದೆ. ನ್ಯಾಯಾಲಯಕ್ಕೆ ಹಾಜರಾಗದೇ, ತಮ್ಮ ಪರವಾಗಿಯೂ ಯಾರೂ ಅರ್ಜಿ ಸಲ್ಲಿಸದೇ ಇರುವ ಕಾರಣಕ್ಕಾಗಿ ನ್ಯಾಯಾಲಯವು ಈ ನಿಲುವು ತೆಳೆದಿದೆ. ಅಲ್ಲದೇ ಹೆಚ್ಚುವರಿ ಮುಖ್ಯ ಮ್ಯಾಜಿಸ್ಟ್ರೇಟ್ ಶಾಂತನು  ತ್ಯಾಗಿ ಅವರು ಮುಂದಿನ ವಿಚಾರಣೆಯನ್ನು ಸೆ.30ಕ್ಕೆ ನಿಗದಿಪಡಿಸಿದ್ದಾರೆ. ಈ ಕೇಸಿಗೆ ಸಂಬಂಧಿಸಿದಂತೆ ನವೆಂಬರ್ 2021ರಲ್ಲೂ ಇದೇ ನ್ಯಾಯಾಲಯವು ಬಂಧನ ವಾರೆಂಟ್ ಜಾರಿ ಮಾಡಿತ್ತು. ಆಗ ಸಪ್ನಾ ಜಾಮೀನು ಪಡೆದುಕೊಂಡಿದ್ದರು. ಇದನ್ನೂ ಓದಿ: ಸಿನಿಮಾ ಆಗಲಿದೆ ಸೋನು ಶ್ರೀನಿವಾಸ್ ಗೌಡ ಲೈಫ್ ಸ್ಟೋರಿ: ಯಾರಾಗಲಿದ್ದಾರೆ ಹೀರೋಯಿನ್?

    ಸಂಸ್ಥೆಯೊಂದಕ್ಕೆ ಕಾರ್ಯಕ್ರಮ ಕೊಡಲು ಒಪ್ಪಿಕೊಂಡಿದ್ದ ಸಪ್ನಾ ಚೌಧರಿ ಆ ಒಪ್ಪಂದನ್ನು ಮುರಿದಿದ್ದಾರಂತೆ. ಅಲ್ಲದೇ, ಪಡೆದ ಹಣವನ್ನೂ ವಾಪಸ್ಸು ನೀಡಿಲ್ಲ. ಒಪ್ಪಂದ ಪ್ರಕಾರ ಅವರು ಗ್ರಾಹಕರ ಜೊತೆ ನೇರ ಸಂಪರ್ಕ ಇಟ್ಟುಕೊಳ್ಳಬಾರದು ಮತ್ತು ಒಪ್ಪಂದಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳಬಾರದು ಎನ್ನುವ ನಿಯಮವಿತ್ತು ಎಂದು ಹೇಳಲಾಗಿತ್ತು. ಅದನ್ನು ಅವರು ಮುರಿದಿದ್ದಾರೆ ಎಂದು ದೂರು ದಾಖಲಿಸಲಾಗಿತ್ತು. ಈ ಸಪ್ನ ಹಿಂದಿಯ ಬಿಗ್ ಬಾಸ್ ಸೀಸನ್ 11ರಲ್ಲೂ ಭಾಗಿಯಾಗಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದರು ಎನ್ನುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ಡ್ರಗ್ಸ್ ಪ್ರಕರಣದ ಆರೋಪಿ, ರಿಯಾಲಿಟಿ ಶೋ ಡಾನ್ಸರ್ ಕಿಶೋರ್‌ಗೆ ಪೊಲೀಸ್ ಫುಲ್ ಕ್ಲಾಸ್

    ಡ್ರಗ್ಸ್ ಪ್ರಕರಣದ ಆರೋಪಿ, ರಿಯಾಲಿಟಿ ಶೋ ಡಾನ್ಸರ್ ಕಿಶೋರ್‌ಗೆ ಪೊಲೀಸ್ ಫುಲ್ ಕ್ಲಾಸ್

    ಮಂಗಳೂರು: ಇಲ್ಲಿನ ಪೊಲೀಸ್ ಗ್ರೌಂಡ್‌ನಲ್ಲಿ ಇಂದು ರೌಡಿ ಹಾಗೂ ಗಾಂಜಾ ಗಿರಾಕಿಗಳಿಗೆ ಪರೇಡ್ ನಡೆಸಲಾಗಿದ್ದು, ಬೆಳ್ಳಂಬೆಳಗ್ಗೆ ಪೊಲೀಸರು ರೌಡಿಗಳಿಗೆ ಫುಲ್‌ಕ್ಲಾಸ್ ತೆಗೆದುಕೊಂಡಿದ್ದಾರೆ.

    ಈ ವೇಳೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇತೃತ್ವದಲ್ಲಿ ಗಾಂಜಾ ಗಿರಾಕಿಗಳ ಪರೇಡ್ ನಡೆಸಿದ್ದು, ಡ್ರಗ್ಸ್ ಪ್ರಕರಣದ ಆರೋಪಿ ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿಗೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಲಕ್ಕಿಡಿಪ್‍ನಲ್ಲಿ ಗೆದ್ದರೂ, ಸೋತರೂ ಅಳುತ್ತೇನೆ ನಾನ್ಯಾರು ಬಲ್ಲಿರಾ!? – ನಾನೇ ಲಕ್ಕಿಡಿಪ್ ಸಿಎಂ ಹೆಚ್‍ಡಿಕೆ: ಬಿಜೆಪಿ

    ಪರೇಡ್ ವೇಳೆ ಕಿಶೋರ್ ಅಮನ್ ಶೆಟ್ಟಿ ಶರ್ಟ್ ಬಿಚ್ಚಿಸಿ, ಏನಪ್ಪಾ ಮೈ ಮೇಲೆ ಇಷ್ಟು ಟ್ಯಾಟೋ ಹಾಕಿಸಿಕೊಂಡಿದ್ಯಾ ಎಂದಿದ್ದಾರೆ. ಅಷ್ಟೇ ಅಲ್ಲದೇ ಉದಕ್ಕ ಕೂದಲನ್ನು ನೋಡಿ ಯಾಕೆ ಇಷ್ಟು ಉದ್ದ ಬಿಟ್ಟಿದ್ದಿ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೋಡಲ್ಲ ಅಂದ್ರೆ ಮುಖ ನೋಡಲ್ಲ, ಮಾತಾಡಲ್ಲ ಅಂದ್ರೆ ಮಾತಾಡಲ್ಲ ಅಷ್ಟೇ – ಇದು ಸಿದ್ದು ವರಸೆ

    ಇದಕ್ಕೆ ಉತ್ತರಿಸಿದ ಆರೋಪಿ ಕಿಶೋರ್ ಡ್ಯಾನ್ಸ್‌ಗಾಗಿ ಕೂದಲು ಬಿಟ್ಟಿದ್ದೇನೆ. ತನ್ನ ತಾಯಿಯ ಟ್ಯಾಟೋ ಅಂತಾ ಕಿಶೋರ್ ಅಮನ್ ಹೇಳಿದ ಕೂಡಲೇ ಮಾಡೋದೆಲ್ಲಾ ಮಾಡಿ ತಾಯಿಯದ್ದು ಯಾಕೆ ಹಾಕಿಸಿಕೊಂಡಿದ್ಯಾ? ನೆಟ್ಟಗೆ ಬಾಳಿದರೆ ಸಾಕು ಹಚ್ಚೆ ಹಾಕಿಸಿಕೊಳ್ಳಬೇಕಿಲ್ಲ ಎಂದು ಬುದ್ಧಿವಾದ ಹೇಳಿದ್ದಾರೆ.

    ಎಲ್ಲಿಂದ ಡ್ರಗ್ಸ್ ಸಪ್ಲೈ ಮಾಡಿಕೊಂಡಿದ್ಯಾ, ಸಪ್ಲೈ ನಿಲ್ಲಿಸಿದ್ಯಾ? ನೀನ್ ತಿನ್ನುತ್ತೀಯಾ ಅಥವಾ ಬೇರೆಯವರಿಗೆ ತಿನ್ನಿಸುತ್ತಿಯಾ? ಕಿಶೋರ್ ಶೆಟ್ಟಿಯ ಉದ್ದ ಕೂದಲು ಬಿಟ್ಟಿದ್ದನ್ನು ಪ್ರಶ್ನಿಸಿ ರೌಡಿ, ಡ್ರಗ್ಸ್, ಗಾಂಜಾ, ಕಳ್ಳ ಗಿರಾಕಿಗಳ ಚಳಿ ಬಿಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮತ್ತೊಂದು ಹಿಂದೂಯೇತರ ನೃತ್ಯಗಾರ್ತಿಗೆ ದೇವಸ್ಥಾನದ ಉತ್ಸವದಲ್ಲಿ ನಿರ್ಬಂಧ

    ಮತ್ತೊಂದು ಹಿಂದೂಯೇತರ ನೃತ್ಯಗಾರ್ತಿಗೆ ದೇವಸ್ಥಾನದ ಉತ್ಸವದಲ್ಲಿ ನಿರ್ಬಂಧ

    ತಿರುವನಂತಪುರಂ: ಕೇರಳದ ಪ್ರಸಿದ್ಧ ಕೂಡಲ್ಮಾಣಿಕ್ಯಂ ದೇಗುಲದಲ್ಲಿ ಮತ್ತೊಬ್ಬ ಹಿಂದೂಯೇತರ ನೃತ್ಯಗಾರ್ತಿಗೆ ಪ್ರದರ್ಶನ ನೀಡಲು ನಿರಾಕರಿಸಿದ ಘಟನೆ ನಡೆದಿದೆ.

    ಸೌಮ್ಯಾ ಸುಕುಮಾರನ್ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದವರು ಎನ್ನುವ ಕಾರಣಕ್ಕೆ ಅವರಿಗೆ ಅವಕಾಶ ನೀಡಿಲ್ಲ. ಈ ಬಗ್ಗೆ ಎಎನ್‍ಐಗೆ ಸಂದರ್ಶನ ನೀಡಿದ ಅವರು, 10 ದಿನಗಳ ಕಾಲ ನಡೆಯುವ ಉತ್ಸವದಲ್ಲಿ ನೃತ್ಯ ಪ್ರದರ್ಶನಕ್ಕೆ ಅವಕಾಶ ಕೊಡುವಂತೆ ನಾನು ಕೇಳಿದ್ದೆ. ಆದರೆ ನನಗೆ ಅವಕಾಶ ಕೊಡಲು ದೇವಸ್ಥಾನದ ಅಧಿಕಾರಿಗಳು ನಿರಾಕರಿಸಿದರು. ನನ್ನ ತಂದೆ ಹಿಂದೂ ಆಗಿದ್ದರು. ಮದುವೆಯಾದ ನಂತರ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಈ ವಿಷಯವನ್ನು ದೇವಸ್ಥಾನದ ಅಧಿಕಾರಿಗಳಿಗೆ ತಿಳಿಸಿದ್ದೆ ಎಂದರು.

    ಈ ವಿಷಯ ತಿಳಿದ ಅಲ್ಲಿನ ಅಧಿಕಾರಿಗಳು ದೇವಸ್ಥಾನದ ಹೊರಗಿದ್ದರೆ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಆದರೆ ಈ ಕಾರ್ಯಕ್ರಮವನ್ನು ಒಳಗೆ ನಡೆಸುವುದರಿಂದ ಕಷ್ಟವಾಗುತ್ತದೆ ಎಂದು ಹೇಳಿದರು. ಇದರಿಂದಾಗಿ ನಾನು ಹಿಂದೆ ಸರಿದೆ ಎಂದರು.

    ದೇವಸ್ಥಾನದ ಅಧಿಕಾರಿಗಳು ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಸೌಮ್ಯಾ ಅವರು ತಮ್ಮ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ದೇವಾಲಯವು ಹಿಂದೂಯೇತರರಿಗೆ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ವಿನಮ್ರವಾಗಿ ತಿಳಿಸಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ದೇವಸ್ಥಾನದ ಉತ್ಸವದಲ್ಲಿ ಮುಸ್ಲಿಂ ಭರತನಾಟ್ಯ ಕಲಾವಿದೆಗೆ ನಿರ್ಬಂಧ

    ಇತ್ತೀಚೆಗಷ್ಟೇ ಕೇರಳದ ದೇವಸ್ಥಾನದ ಉತ್ಸವದಲ್ಲಿ ಕೇರಳದ ಕಲಾವಿದೆಗೆ ನೃತ್ಯ ಪ್ರದರ್ಶನ ನೀಡುವುದನ್ನು ನಿರ್ಬಂಧಿಸಲಾಗಿದೆ. ಮುಸ್ಲಿಂ ಧರ್ಮದವರು ಎಂಬ ಕಾರಣಕ್ಕೆ ದೇಗುಲದಲ್ಲಿ ನೃತ್ಯ ಮಾಡುವುದನ್ನು ಅರ್ಧಕ್ಕೆ ನಿಲ್ಲಿಸಿದ್ದರು.

    ದೇವಸ್ಥಾನದ ಉತ್ಸವದಲ್ಲಿ ಪ್ರದರ್ಶನ ನೀಡಲು ಮದ್ರಾಸ್ ವಿವಿಯಿಂದ ಎಂ.ಎ. ಭರತನಾಟ್ಯಂ ಕೋರ್ಸ್‍ನಲ್ಲಿ ಮೊದಲ ರ‍್ಯಾಂಕ್ ಪಡೆದ ಶಾಸ್ತ್ರೀಯ ನೃತ್ಯಗಾರ್ತಿ ಮಾನ್ಸಿಯಾ ವಿ.ಪಿ ಅವರು ಹಿಂದೂ ಅಲ್ಲ ಎಂಬ ಕಾರಣಕ್ಕೆ ತ್ರಿಶ್ಯೂರು ಜಿಲ್ಲೆಯ ಜಲಕೂಡದಲ್ಲಿರುವ ಕೂಡಲ್ ಮಾಣಿಕ್ಯಂ ದೇವಸ್ಥಾನದಲ್ಲಿ ನೃತ್ಯ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: 8 ಸಾವಿರ ಸಾಲ ಮಾಡಿ ಲಕ್ಷ ಲಕ್ಷ ಮರುಪಾವತಿ ಮಾಡಿದ ಖಾಸಗಿ ಬ್ಯಾಂಕ್ ನೌಕರ

  • ನರ್ತಕಿಯರ ಜೊತೆ ಬಿಜೆಪಿ ನಾಯಕನ ನಂಗಾನಾಚ್!

    ನರ್ತಕಿಯರ ಜೊತೆ ಬಿಜೆಪಿ ನಾಯಕನ ನಂಗಾನಾಚ್!

    – ಜನರೆದ್ರು ಆಶ್ಲೀಲ ನೃತ್ಯ

    ಜೈಪುರ: ಬಿಜೆಪಿ ನಾಯಕರೊಬ್ಬರು ಡ್ಯಾನ್ಸರ್ ಜೊತೆ ಆಶ್ಲೀಲವಾಗಿ ನರ್ತಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಜಸ್ಥಾನದ ಚಿತ್ತೋಢಗಢ ಜಿಲ್ಲೆಯ ಮಾಂಗರೋಲ್ ನಲ್ಲಿ ಈ ಘಟನೆ ನಡೆದಿದೆ.

    ವೀಡಿಯೋದಲ್ಲಿ ಕಾಣಿಸಿಕೊಂಡಿರುವ ನಾಯಕನ ಹೆಸರು ಕೈಲಾಶ್ ಗುರ್ಜರ್. ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸರ್ ಜೊತೆ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಜನವರಿ 23ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ದೇಶಾದ್ಯಂತ ವೈರಲ್ ಆಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕೈಲಾಶ್ ಗುರ್ಜರ್, ಕುಟುಂಬಸ್ಥರ ಮದುವೆಯಲ್ಲಿ ಭಾಗಿಯಾಗಿದ್ದ ವೇಳೆ ಕೆಲವರು ವೀಡಿಯೋ ಸೆರೆಹಿಡಿದ್ದಾರೆ. ರಾಜಕೀಯ ದ್ವೇಷಕ್ಕಾಗಿ ತಪ್ಪು ಬರಹಗಳೊಂದಿಗೆ ವೀಡಿಯೋ ವೈರಲ್ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ.

  • ನಟಿಯ ಬೀಟ್‍ರೂಟ್ ಮೈಮಾಟ ನೋಡಿ ಕೆಂಪಾದವು ನೆಟ್ಟಿಗರ ಕಣ್ಣು

    ನಟಿಯ ಬೀಟ್‍ರೂಟ್ ಮೈಮಾಟ ನೋಡಿ ಕೆಂಪಾದವು ನೆಟ್ಟಿಗರ ಕಣ್ಣು

    ನವದೆಹಲಿ: ಬಾಲಿವುಟ್ ನಟಿ, ಡ್ಯಾನ್ಸರ್ ಎಲಿ ಅವ್ರಾಮ್ ಮುಖ, ಕೈ-ಕಾಲು ಸೇರಿ ಈಡೀ ದೇಹಕ್ಕೆ ಬೀಟ್‍ರೂಟ್ ಹಚ್ಚಿಕೊಂಡು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

    29 ವರ್ಷದ ನಟಿ ಎಲಿ ಅವ್ರಾಮ್‍ಗೆ ಚರ್ಮದ ಚಿಕಿತ್ಸೆಗಾಗಿ ಮೈತುಂಬ ಬೀಟ್‍ರೂಟ್ ಜ್ಯೂಸ್ ಅನ್ನು ಹಚ್ಚಿಕೊಳ್ಳಲು ಅವರ ಮನೆಯ ಸಹಾಯಕಿ ಸಲಹೆ ನೀಡಿದ್ದಳು. ಇದರಿಂದಾಗಿ ಮೈತುಂಬ ಬೀಟ್‍ರೂಟ್ ಜ್ಯೂನ್ ಅನ್ನು ಹಚ್ಚಿಕೊಂಡ ನಟಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಬಿಕಿನಿಯಲ್ಲಿರುವ ಫೋಟೋಗಳನ್ನು ತಮ್ಮನ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ಎಲಿ ಅವ್ರಾಮ್, ‘ಇದು ಬೀಟ್‍ರೂಟ್ ಅಂಗಡಿ’ ಎಂದು ಶೀರ್ಷಿಕೆ ಹಾಕಿದ್ದಾರೆ. ಜೊತೆಗೆ “ಬೀಟ್‍ರೂಟ್‍ನ ಪ್ರೀತಿಗಾಗಿ. ಇದು ಮನೆಯಲ್ಲಿ ನನ್ನ ಸಹಾಯಕಿ ಉಷಾ ಕಲ್ಪನೆ. ಈ ಅಲಂಕಾರ ನೋಡಿ ಅವಳು ನನ್ನನ್ನು ಅನ್ಯಲೋಕದವಳು ಎಂದು ಕರೆದಳು” ಎಂದು ಬರೆದುಕೊಂಡಿದ್ದಾರೆ.

    ಎಲಿ ಅವ್ರಾಮ್ ಫೋಟೋಗಳಿಗೆ 99 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಕೆಲ ನೆಟ್ಟಿಗರು ತಮ್ಮದೇ ರೀತಿಯಲ್ಲಿ  ಕಮೆಂಟ್ ಮಾಡಿದ್ದಾರೆ.

    ಡ್ಯಾನ್ಸಿಂಗ್ ಕೌಶಲ್ಯದಲ್ಲಿ ಸಖತ್ ಹೆಸರು ಮಾಡಿರುವ ಎಲಿ ಅವ್ರಾಮ್ ಅನೇಕ ಸಿನಿಮಾ ಹಾಡುಗಳಿಗೆ ಸ್ಟೆಪ್ ಹಾಕಿದ್ದಾರೆ. ಸಲ್ಮಾನ್ ಖಾನ್ ನಿರೂಪಿಸಿದ ರಿಯಾಲಿಟಿ ಟಿವಿ ಶೋ ಬಿಗ್‍ಬಾಸ್‍ನ ಏಳನೇ ಆವೃತ್ತಿಯಲ್ಲಿ ಎಲಿ ಅವ್ರಾಮ್ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ಝಲಕ್ ದಿಕ್ಲಾ ಜಾ ಸೀಸನ್ 7ರ ಸ್ಪರ್ಧಿಯೂ ಆಗಿದ್ದಾರೆ. ಕಳೆದ ವರ್ಷ, ಅವರು ಟೈಪ್ ರೈಟರ್ ಮತ್ತು ಇನ್‍ಸೈಡ್ ಎಡ್ಜ್-2 ನಂತಹ ವೆಬ್ ಶೋಗಳಲ್ಲಿ ಕಾಣಿಸಿಕೊಂಡಿದ್ದರು.

    https://www.instagram.com/p/CAz1kmMggFm/?utm_source=ig_embed

  • ತೂಕ ಇಳಿಸಲು ನಿಷೇಧಿತ ಮಾತ್ರೆ ಸೇವನೆ – 22 ವರ್ಷದ ಡ್ಯಾನ್ಸರ್ ಸಾವು

    ತೂಕ ಇಳಿಸಲು ನಿಷೇಧಿತ ಮಾತ್ರೆ ಸೇವನೆ – 22 ವರ್ಷದ ಡ್ಯಾನ್ಸರ್ ಸಾವು

    – ಮಾತ್ರೆ ಸೇವಿಸಿದ ಕೆಲ ಕ್ಷಣದಲ್ಲೇ ವಾಂತಿ

    ಮುಂಬೈ: ತೂಕ ಇಳಿಸಲು ನಿಷೇಧಿತ ಮಾತ್ರೆ ಸೇವನೆ ಮಾಡಿ 22 ವರ್ಷದ ಡ್ಯಾನ್ಸರ್, ಜಿಮ್ ಟ್ರೈನರ್ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.

    ಮೃತ ಡ್ಯಾನ್ಸರನ್ನು ಮೇಘನಾ ದೇವಗಡ್ಕರ್ (22) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಡ್ಯಾನ್ಸರ್ ಮತ್ತು ಜಿಮ್ ಟ್ರೈನರ್ ಆಗಿದ್ದ ಈಕೆ ತೂಕ ಇಳಿಸಲು ನಿಷೇಧಿತ ಡೈನಿಟ್ರೋಫೆನಾಲ್ ಎಂಬ ಮಾತ್ರೆ ಸೇವಿಸಿದ್ದಾರೆ. ಮಾತ್ರೆ ಸೇವಿಸಿದ ಕೆಲ ಗಂಟೆಯೊಳಗೆ ಸಾವನ್ನಪ್ಪಿದ್ದಾರೆ.

    ಮೇಘನಾ ಇಂದು ಬೆಳಗ್ಗೆ ಎಂದಿನಂತೆ ತಾನು ಹೊಸದಾಗಿ ಟ್ರೈನರ್ ಆಗಿ ಸೇರಿದ್ದ ಜಿಮ್‍ಗೆ ಬಂದು ವರ್ಕೌಟ್ ಆರಂಭಿಸುವ ಮೊದಲು ಈ ಮಾತ್ರೆಯನ್ನು ತೆಗೆದುಕೊಂಡಿದ್ದಾರೆ. ಅದನ್ನು ಸೇವಿಸಿದ ಕೆಲ ಕ್ಷಣದಲ್ಲಿ ಅವರು ವಾಂತಿ ಮಾಡಲು ಶುರು ಮಾಡಿದ್ದಾರೆ. ಇದಾದ ನಂತರ ಆಕೆಯನ್ನು ಜಿಮ್ ನಲ್ಲಿ ಇದ್ದ ಕೆಲವರು ಅಲ್ಲಿಯೇ ಸ್ಥಳೀಯ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ.

    ಮೇಘನಾಳನ್ನು ಪರೀಕ್ಷಿಸಿದ ವೈದ್ಯರು ನಂತರ ಲೈಫ್‍ಲೈನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಆದರೆ ಅಲ್ಲಿನ ವೈದ್ಯರು ಇಲ್ಲಿ ಚಿಕಿತ್ಸೆ ನೀಡಲು ಆಗುವುದಿಲ್ಲ ಎಂದು ಸಿಯಾನ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸಿಯಾನ್ ಆಸ್ಪತ್ರೆ ವೈದ್ಯರು ಆಕೆಯನ್ನು ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಿದ್ದಾರೆ. ಆದರೆ ಸ್ವಲ್ಪ ಸಮಯದ ಕಾಲ ಐಸಿಯುವಿನಲ್ಲಿ ಇದ್ದ ಮೇಘನಾ ಅಲ್ಲೇ ಅಧಿಕ ರಕ್ತದೊತ್ತಡದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ವೈದ್ಯರು, ನಿಷೇಧಿತ ಮಾತ್ರೆ ಸೇವಿಸಿದ ನಂತರ ಮೇಘನಾ ಹೈಪರ್ಥರ್ಮಿಯಾದಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ. ಈ ಮಾತ್ರೆ ಸೇವನೆಯಿಂದ ಅವರ ದೇಹದ ಉಷ್ಣತೆಯನ್ನು ಸಾಮಾನ್ಯಕ್ಕಿಂತ ಜಾಸ್ತಿ ಮಾಡಿದೆ. ಹೀಗಾಗಿ ಅವರ ದೇಹದಲ್ಲಿ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ತೀವ್ರವಾಗಿ ಹೆಚ್ಚಾಗಿದ್ದು, ಮೇಘನಾ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

    ಸಾಯುವುದಕ್ಕೂ ಮುನ್ನ ಮೇಘನಾ ಆಸ್ಪತ್ರೆಗೆ ಬಂದ ಪೊಲೀಸರಿಗೆ ನಾನು ತೂಕ ಕಮ್ಮಿ ಮಾಡಿಕೊಳ್ಳಲು ಡೈನಿಟ್ರೋಫೆನಾಲ್ ಮಾತ್ರೆಯನ್ನು ಸೇವಿಸಿದ್ದೆ ಎಂದು ಮಾಹಿತಿ ನೀಡಿದ್ದಾಳೆ. ಸದ್ಯ ಈ ಬಗ್ಗೆ ನೌಪಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿಷೇಧಿತ ಮಾತ್ರೆ ಮೇಘನಾ ಅವರಿಗೆ ಹೇಗೆ ದೊರಕಿದೆ ಎಂದು ಮುಂಬೈ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ಅಭ್ಯಾಸದ ವೇಳೆ ಗಾಯಗೊಂಡ ಡ್ಯಾನ್ಸರ್ – ನಟ ವರುಣ್‍ರಿಂದ ಚಿಕಿತ್ಸೆಗೆ 5 ಲಕ್ಷ ರೂ. ಸಹಾಯ

    ಅಭ್ಯಾಸದ ವೇಳೆ ಗಾಯಗೊಂಡ ಡ್ಯಾನ್ಸರ್ – ನಟ ವರುಣ್‍ರಿಂದ ಚಿಕಿತ್ಸೆಗೆ 5 ಲಕ್ಷ ರೂ. ಸಹಾಯ

    ಮುಂಬೈ: ಬಾಲಿವುಡ್ ನಟ ವರುಣ್ ಧವನ್ ಡ್ಯಾನ್ಸ್ ಅಭ್ಯಾಸದ ವೇಳೆ ಗಾಯಗೊಂಡಿದ್ದ ಯುವ ಡ್ಯಾನ್ಸರ್ ಚಿಕಿತ್ಸೆಗೆ 5 ಲಕ್ಷ ರೂ. ನೀಡಿ ಸಹಾಯ ಮಾಡಿದ್ದಾರೆ.

    ಇಶಾನ್ ಡ್ಯಾನ್ಸ್ ಅಭ್ಯಾಸದ ವೇಳೆ ಡಬಲ್ ಫ್ರಂಟ್ ಫ್ಲಿಪ್ ಒಡೆಯಲು ಪ್ರಯತ್ನಿಸಿದ್ದಾನೆ. ಈ ವೇಳೆ ಕುತ್ತಿಗೆಗೆ ಗಂಭೀರವಾಗಿ ಗಾಯವಾಗಿ ಆಸ್ಪತ್ರೆಗೆ ಸೇರಿದ್ದಾನೆ. ಈ ವಿಷಯ ತಿಳಿದ ಹಲವು ಡ್ಯಾನ್ಸರ್ ಗಳು ಇಶಾನ್ ಚಿಕಿತ್ಸೆಗೆ ಹಣವನ್ನು ಸಂಗ್ರಹಿಸಲು ಶುರು ಮಾಡಿದ್ದರು.

    ಡ್ಯಾನರ್ಸ್ ಹಣ ಸಂಗ್ರಹಿಸುತ್ತಿರುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದನ್ನು ನೋಡಿದ ವರುಣ್ ಇನ್‍ಸ್ಟಾಗ್ರಾಂ ಮೆಸೇಜ್ ಮಾಡಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಇಶಾನ್ ಬಗ್ಗೆ ಮಾಹಿತಿ ಪಡೆದು ಸಾಹಯಕ್ಕೆ ಮುಂದಾಗಿದ್ದಾರೆ.

    ವರುಣ್, ಇಶಾನ್ ಚಿಕಿತ್ಸೆಗಾಗಿ 5 ಲಕ್ಷ ರೂ. ಹಣ ನೀಡಿದ್ದಾರೆ. ಡ್ಯಾನ್ಸರ್ ವೊಬ್ಬರು ವರುಣ್ ಜೊತೆ ಚಾಟ್ ಮಾಡಿದ ಸ್ಕ್ರೀನ್ ಶಾಟ್ ತೆಗೆದು ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಸ್ಕ್ರೀನ್ ಶಾಟ್ ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ವರುಣ್ ಧವನ್ ನಿರ್ದೇಶಕ ರೆಮೋ ಡಿಸೋಜಾ ನಿರ್ದೇಶನದ ‘ಸ್ಟ್ರೀಟ್ ಡ್ಯಾನ್ಸರ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ವರುಣ್‍ಗೆ ನಾಯಕಿಯಾಗಿ ಶ್ರದ್ಧಾ ಕಪೂರ್ ಹಾಗೂ ನೋರಾ ಫತೇಹಿ ನಟಿಸುತ್ತಿದ್ದಾರೆ. ಇದಲ್ಲದೆ ವರುಣ್ ನಟಿ ಸಾರಾ ಅಲಿ ಖಾನ್ ಜೊತೆ ‘ಕೂಲಿ ನಂ. 1’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • ಸಲ್ಮಾನ್ ಯೂಸುಫ್ ಖಾನ್ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

    ಸಲ್ಮಾನ್ ಯೂಸುಫ್ ಖಾನ್ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲು

    ಮುಂಬೈ: ಬೆಂಗಳೂರು ಮೂಲದ ಡ್ಯಾನ್ಸರ್, ನೃತ್ಯ ಸಂಯೋಜಕ ಸಲ್ಮಾನ್ ಯೂಸುಫ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮುಂಬೈನ ಅಂಧೇರಿಯ ಓಶಿವರಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.

    ಜನವರಿ 30ರಂದ ಸಂತ್ರಸ್ತೆ ದೂರು ದಾಖಲಿಸಿದ್ದು, ಸಲ್ಮಾನ್ ಮತ್ತು ಆತನ ಸೋದರ ಸಂಬಂಧಿ ನನ್ನ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಹೇಳಿದ್ದಾರೆ. ಇಬ್ಬರು ಬೇರೆ ಬೇರೆ ಸ್ಥಳಗಳಲ್ಲಿ ನನಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದು, ಸಿನಿಮಾ ಉದ್ಯಮದಲ್ಲಿ ಇದೆಲ್ಲ ಸಾಮಾನ್ಯ ಅಂತಾ ಸಲ್ಮಾನ್ ಹೇಳಿದ್ದರು. ಆಷ್ಟೇ ಅಲ್ಲದೇ ವಿಷಯವನ್ನು ಬಹಿರಂಗಗೊಳಿಸದಂತೆ ಬೆದರಿಕೆಯನ್ನು ಸಲ್ಮಾನ್ ಹಾಕಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ನಾನು ಸಹ ನೃತ್ಯಗಾರ್ತಿಯಾಗಿದ್ದು, 2018 ಆಗಸ್ಟ್ ನಲ್ಲಿ ಸಲ್ಮಾನ್ ಮ್ಯಾನೇಜರ್ ಅವರನ್ನು ನಾನು ಸಂಪರ್ಕಿಸಿದೆ. ಈ ಸಮಯದಲ್ಲಿ ನಾನು ಲಂಡನ್ ನಲ್ಲಿದ್ದೆ. ಕೆಲ ದಿನಗಳ ನಂತರ ಅಂಧೇರಿಯ ಕಾಫಿ ಶಾಪ್ ನಲ್ಲಿ ಸಲ್ಮಾನ್ ಮತ್ತು ನಾನು ಭೇಟಿಯಾಗಿದ್ದೆ. ಇದಾದ ಬಳಿಕ ಸಲ್ಮಾನ್ ಬಾಲಿವುಡ್ ಪಾರ್ಕ್, ದುಬೈನಲ್ಲಿ ತಮ್ಮೊಂದಿಗೆ ನರ್ತಿಸುವ ಅವಕಾಶ ನೀಡಿದ್ದರು. ಒಂದು ದಿನ ಸಲ್ಮಾನ್ ಡ್ಯಾನ್ಸ್ ಮಾಡುವ ವೇಳೆ ನನ್ನನ್ನು ಅಸಭ್ಯವಾಗಿ ಸ್ಪರ್ಶಿಸಿದರು. ಇದನ್ನು ಪ್ರಶ್ನಿಸಿದ್ದಕ್ಕೆ ಬಾಲಿವುಡ್ ನಲ್ಲಿ ಇದೆಲ್ಲಾ ಕಾಮನ್ ಅಂತ ಹೇಳಿದ್ದರು. ಈ ಘಟನೆ ಬಳಿಕ ಮತ್ತೊಮ್ಮೆ ಸಲ್ಮಾನ್ ಮ್ಯಾನೇಜರ್ ಕರೆ ಮಾಡಿ ದುಬೈ ಕಾರ್ಯಕ್ರಮದ ಅವಕಾಶ ನೀಡಿದ್ದರು. ಆಗಸ್ಟ್ 30ರಂದು ಮತ್ತೊಂದು ಶೋಗಾಗಿ ನಮ್ಮ ಡ್ಯಾನ್ಸ್ ತಂಡವನ್ನು ಬಹರೈನ್ ಗೆ ಕಳುಹಿಸಲಾಯ್ತು.

    ವಿಮಾನ ನಿಲ್ದಾಣದಲ್ಲಿ ಸಲ್ಮಾನ್ ತಮ್ಮ ಓರ್ವ ಸೋದರನನ್ನು ಪರಿಚಯಿಸಿದರು. ಪ್ರಯಾಣದ ವೇಳೆ ಸಲ್ಮಾನ್ ಸೋದರ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದರು. ಈ ಘಟನೆ ನಂತರ ಸಲ್ಮಾನ್ ನನಗೆ ಹಲವು ಬಾರಿ ಕಿರುಕುಳ ನೀಡಿದ್ದಾರೆ. ಒಂದು ವೇಳೆ ಈ ವಿಷಯವನ್ನು ಬಹಿರಂಗಗೊಳಿಸಿದ್ರೆ ಪರಿಣಾಮ ಸರಿಯಾಗಿರಲ್ಲ ಎಂದು ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ದೂರು ನೀಡಿದ್ದು ಎಫ್‍ಐಆರ್ ದಾಖಲಾಗಿದೆ.

    ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ ಸಲ್ಮಾನ್ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಬಾಲಿವುಡ್‍ನಲ್ಲಿ ಕೆಲ ಚಿತ್ರಗಳಿಗೂ ನೃತ್ಯ ಸಂಯೋಜನೆ ಮಾಡಿದ್ದಾರೆ. ಕನ್ನಡದ ಖಾಸಗಿ ವಾಹಿನಿಯ ಡ್ಯಾನ್ಸ್ ರಿಯಾಲಿಟಿ ಶೋವೊಂದರ ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ. ಮಹಿಳೆಯ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv