Tag: Dance Queen Harish

  • ಭೀಕರ ಅಪಘಾತದಲ್ಲಿ ವಿಶ್ವ ಖ್ಯಾತಿಯ ಡ್ಯಾನ್ಸ್ ಕ್ವೀನ್ ಹರೀಶ್ ದುರ್ಮರಣ

    ಭೀಕರ ಅಪಘಾತದಲ್ಲಿ ವಿಶ್ವ ಖ್ಯಾತಿಯ ಡ್ಯಾನ್ಸ್ ಕ್ವೀನ್ ಹರೀಶ್ ದುರ್ಮರಣ

    ಜೈಪುರ: ರಸ್ತೆ ಅಪಘಾತದಲ್ಲಿ ವಿಶ್ವ ಖ್ಯಾತಿಯ ಡ್ಯಾನ್ಸ್ ಕ್ವೀನ್ ಹರೀಶ್ ಮತ್ತು ಇತರೆ ಮೂರು ಜಾನಪದ ಕಲಾವಿದರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೋಧ್ಪುರದ ಬಳಿ ನಡೆದಿದೆ.

    ಜೋಧ್ಪುರದ ಹೆದ್ದಾರಿಯ ಕಪಾರ್ಡಾ ಗ್ರಾಮದ ಬಳಿ ಭಾನುವಾರ ಈ ಅಪಘಾತ ಸಂಭವಿಸಿದೆ. ಮೃತರು ಜೈಸಲ್ಮೇರ್ ನಿಂದ ಅಜ್ಮೇರ್ ಕಡೆಗೆ ಎಸ್‍ಯುವಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಈ ವಾಹನ ವೇಗವಾಗಿ ಎದುರಿಗೆ ಬರುತ್ತಿದ್ದ ಟ್ರಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹರೀಶ್, ರವೀಂದ್ರ, ಭಿಖೇ ಖಾನ್ ಮತ್ತು ಲತೀಫ್ ಖಾನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸೀತರಾಮ್ ಖೋಜಾ ತಿಳಿಸಿದ್ದಾರೆ.

    ಮೃತ ಕ್ವೀನ್ ಹರೀಶ್ ಅವರು ತಮ್ಮ ಜಾನಪದ ಕಲಾವಿದರ ತಂಡದೊಂದಿಗೆ ಸಮಾರಂಭಕ್ಕೆ ಪ್ರಯಾಣ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಲಾವಿದರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    ಜೋಧ್ಪುರದ ರಸ್ತೆ ಅಪಘಾತದಲ್ಲಿ ಪ್ರಸಿದ್ಧ ಕಲಾವಿದ ಕ್ವೀನ್ ಹರೀಶ್ ಸೇರಿದಂತೆ ನಾಲ್ಕು ಮಂದಿ ಸಾವು ತುಂಬಾ ದುಃಖವಾಗಿದೆ. ರಾಜಸ್ಥಾನದ ಜಾನಪದ ಕಲೆ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದ್ದು, ಹರೀಶ್ ಜೈಸಲ್ಮೇರ್ ನಲ್ಲಿ ತಮ್ಮ ಹೊಸ ನೃತ್ಯ ಶೈಲಿಯ ಮೂಲಕ ಗುರುತಿಸಿಕೊಂಡಿದ್ದರು. ಅವರ ಸಾವಿನಿಂದ ಜಾನಪದ ಕಲೆಯ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.

    ಮೃತ ಹರೀಶ್ ಕುಮಾರ್ ಜೈಸಲ್ಮೇರ್ ನಲ್ಲಿ ಕ್ವೀನ್ ಹರೀಶ್ ಎಂದು ಜನಪ್ರಿಯರಾಗಿದ್ದು, ಅವರ ಜಾನಪದ ನೃತ್ಯ ಕೌಶಲ್ಯಗಳಿಂದ ವಿಶ್ವದಾದ್ಯಂತ ಗುರುತಿಸಿಕೊಂಡಿದ್ದರು.