Tag: dammuru falls

  • ಕಣ್ಮನ ಸೆಳೆಯುತ್ತಿದೆ ದಮ್ಮೂರು ಫಾಲ್ಸ್

    ಕಣ್ಮನ ಸೆಳೆಯುತ್ತಿದೆ ದಮ್ಮೂರು ಫಾಲ್ಸ್

    ಬಾಗಲಕೋಟೆ: ಹಾಲ್ನೊರೆಯಂತೆ ಬೀಳುತ್ತಿರೋ ನೀರು. ರೋಗಗಳಿಂದ ಮುಕ್ತಿ ಹೊಂದೋಕೆ ರಾಮ ಬಾಣದಂತಿರೋ ಮಿನಿ ಜಲಪಾತ ಬಾಗಲಕೋಟೆ ಜಿಲ್ಲೆಯ ದಮ್ಮೂರು ಗ್ರಾಮದಲ್ಲಿದೆ. ಇಲ್ಲಿ ಸ್ನಾನ ಮಾಡಿದ್ರೆ ರೋಗಗಳು ಗುಣಮುಖವಾಗುತ್ತೇವೆ ಎಂಬುವುದು ಸ್ಥಳೀಯರ ಬಲವಾದ ನಂಬಿಕೆ. ಹಾಗಾಗಿ ಪ್ರತಿಬಾರಿಯೂ ಈ ಜಲಪಾತ ತುಂಬಿದಾಗ ಬಹುತೇಕರು ಸ್ನಾನಕ್ಕಾಗಿ ಇಲ್ಲಿಗೆ ಆಗಮಿಸುತ್ತಾರೆ.

    ದಮ್ಮೂರು ಗ್ರಾಮದ ಹೊರವಲಯದಲ್ಲಿರುವ ದಿಡಿಗಿನ ಬಸವೇಶ್ವರ ದೇಗುಲಕ್ಕೆ ಹೊಂದಿಕೊಂಡಂತೆ ಈ ಜಲಪಾತವಿದೆ. ಬೆಟ್ಟದ ಮಧ್ಯೆ ವಿವಿಧ ಗಿಡಬಳ್ಳಿಗಳ ಮಧ್ಯೆ ನುಸುಳಿ ಬರುವ ನೀರು ಮಿನಿ ಜಲಪಾತವಾಗಿದೆ. ಬೆಟ್ಟದಲ್ಲಿ ಬೇರುಗಳ ಮಧ್ಯೆ ನೀರು ಬರೋದ್ರಿಂದ ಇದು ಔಷಧೀಯ ಗುಣ ಹೊಂದಿದೆ. ಹಾಗಾಗಿ ಇಲ್ಲಿ ಸ್ನಾನ ಮಾಡಿದರೆ ರೋಗಗಳು ಗುಣಮುಖವಾಗುತ್ತೇವೆ ಎಂದು ಸ್ಥಳೀಯರಾದ ರಮೇಶ್ ಶಾಂತಗೇರಿ ಹೇಳುತ್ತಾರೆ.

    ದೂರದ ಊರುಗಳಿಂದ ಈ ಮಿನಿ ಜಲಪಾತ ನೋಡಲು ಕುಟುಂಬ ಸಹಿತ ಜನರು ಆಗಮಿಸ್ತಾರೆ. ಐತಿಹಾಸಿಕ ಹಿನ್ನೆಲೆಯುಳ್ಳ ಹೊಂದಿದ್ದರಿಂದ ಬೆಳಗಾದರೆ ಈ ಮಿನಿ ಜಲಪಾತದಲ್ಲಿ ಜನರು ಸ್ನಾನ ಮಾಡಲು ಬರುತ್ತಾರೆ. ಸ್ನಾನದ ಬಳಿಕ ಬಸವೇಶ್ವರನ ದರ್ಶನ ಪಡೆಯಯುತ್ತಾರೆ. ಈ ಮಿನಿ ಫಾಲ್ಸ್ ನೀರು ಹರಿದು ಹೋಗಿ ಪಕ್ಕದಲ್ಲಿರುವ ಕೆರೆಗೆ ಸೇರುತ್ತದೆ. ಇದೊಂದು ನಮ್ಮಂತಹ ಜನರಿಗೆ ಬಡವರ ಫಾಲ್ಸ್ ಆಗಿದೆ ಎಂದು ಪ್ರವಾಸಿಗರು ಹೇಳುತ್ತಾರೆ.

  • ಕಣ್ಮನ ಸೆಳೆಯುತ್ತಿದೆ ದಮ್ಮೂರು ಫಾಲ್ಸ್- ಹಲವು ರೋಗಗಳಿಗೆ ರಾಮಬಾಣ ಈ ನೀರು

    ಕಣ್ಮನ ಸೆಳೆಯುತ್ತಿದೆ ದಮ್ಮೂರು ಫಾಲ್ಸ್- ಹಲವು ರೋಗಗಳಿಗೆ ರಾಮಬಾಣ ಈ ನೀರು

    ಬಾಗಲಕೋಟೆ: ವರುಣನ ಅಬ್ಬರಕ್ಕೆ ರಾಜ್ಯದ ಬಹುತೇಕ ಜಿಲ್ಲೆಗಳ ಹಳ್ಳ-ಕೊಳ್ಳ, ನದಿ-ತೊರೆಗಳು ಮೈದುಂಬಿಕೊಂಡಿವೆ. ಅದೇ ರೀತಿ ಬಾಗಲಕೋಟೆಯ ದಮ್ಮೂರು ಗ್ರಾಮದ ಜಲಪಾತದಲ್ಲಿ ಜನ ಮಿಂದೇಳ್ತಿದ್ದಾರೆ. ಈ ನೀರಿನಲ್ಲಿ ಸ್ನಾನ ಮಾಡಿದ್ರೆ ರೋಗಗಳು ಗುಣಮುಖವಾಗ್ತವೆ ಅನ್ನೋ ನಂಬಿಕೆ ಇದೆ.

    ಮೇಲಿಂದ ಧುಮ್ಮಿಕ್ಕುತ್ತಿರೋ ಈ ನೀರಿನ ಬುಡದಲ್ಲಿ ಜನ ಕುಳಿತು ಸ್ನಾನ ಮಾಡುತ್ತಾರೆ. ಯಾಕಂದ್ರೆ ಇದು ಬರೀ ಮೋಜಿನ ಸ್ನಾನವಲ್ಲ. ಬದಲಿಗೆ ಸಂಜೀವಿನಿ ಸ್ನಾನ. ಯಾಕಂದ್ರೆ ಈ ನೀರಿನಲ್ಲಿ ಸ್ನಾನ ಮಾಡಿದ್ರೆ ಸಕಲ ರೋಗಗಳು ಗುಣಮುಖವಾಗ್ತವಂತೆ.

    ಬಾಗಲಕೋಟೆ ಜಿಲ್ಲೆಯ ದಮ್ಮೂರು ಗ್ರಾಮದ ಹೊರ ವಲಯದಲ್ಲಿದೆ ಈ ಮಿನಿ ಜಲಪಾತ. ದಿಡಿಗಿನ ಬಸವೇಶ್ವರ ದೇಗುಲಕ್ಕೆ ಹೊಂದಿಕೊಂಡಂತೆ ಬೆಟ್ಟದ ಮಧ್ಯೆ ಗಿಡಗಂಟೆಗಳು-ಬೇರುಗಳ ಮಧ್ಯೆ ಹರಿದು ಬರೋ ಈ ನೀರು ದಿವ್ಯೌಷಧವನ್ನ ಒಳಗೊಂಡಿದ್ದು, ಈ ನೀರಿನಲ್ಲಿ ಸ್ನಾನ ಮಾಡಿದ್ರೆ ರೋಗರುಜಿನಗಳು ಗುಣಮುಖವಾಗ್ತವೆ ಅಂತಾರೆ ಸ್ಥಳೀಯರು.

    ಜನ ಯಾವುದೇ ಭೇದ-ಭಾವವಿಲ್ಲದೆ ಸ್ನಾನ ಮಾಡಿ ನಂತರ ಬಸವೇಶ್ವರನ ದರ್ಶನ ಪಡೆದು ಧನ್ಯರಾಗುತ್ತಾರೆ. ರೋಗಗಳಿಗೆ ರಾಮಬಾಣದಂತ ಸ್ನಾನ ಅನ್ನೋದನ್ನ ಬದಿಗಿರಿಸಿದರೂ ಪಿಕ್‍ನಿಕ್‍ಗೆ ಈ ಸ್ಥಳ ಒಳ್ಳೆ ಹಾಟ್‍ ಸ್ಪಾಟ್ ಸಹ ಹೌದು.