Tag: damaged Houses

  • ಬೆಂಗ್ಳೂರಲ್ಲಿ ಹೆಚ್ಚಾಗ್ತಿದೆ ಗುಜರಿ ಮನೆ, ಬಿಲ್ಡಿಂಗ್- ತೆರವಿಗೆ ಬಿಬಿಎಂಪಿ ನೋಟಿಸ್

    ಬೆಂಗ್ಳೂರಲ್ಲಿ ಹೆಚ್ಚಾಗ್ತಿದೆ ಗುಜರಿ ಮನೆ, ಬಿಲ್ಡಿಂಗ್- ತೆರವಿಗೆ ಬಿಬಿಎಂಪಿ ನೋಟಿಸ್

    – ನಗರದ 178 ಮನೆಗಳು, ಕಟ್ಟಡ ಡೇಂಜರ್

    ಬೆಂಗಳೂರು: ಬೇರೆಯವರ ಮನೆಯ ಪಾಯ ತೆಗೆಯೋವಾಗ ಅಕ್ಕ-ಪಕ್ಕದ ಎರಡು ಮನೆ ಕುಸಿತ ಕಂಡು ಬೆಂಗಳೂರಿನಲ್ಲಿ ಭಾನುವಾರ ಅನಾಹುತ ನಡೆದಿದೆ. ಇದರ ಬೆನ್ನಲ್ಲೇ ಗುಜರಿ ಮನೆಗಳು ಹಾಗೂ ಬಿಲ್ಡಿಂಗ್‍ಗಳ ಹಿಂದೆ ಬಿದ್ದ ಬಿಬಿಎಂಪಿಗೆ ಶಾಕ್ ಆಗಿದ್ದು, ಗುಜರಿ ಮನೆಗಳ ಮಾಲೀಕರಿಗೆ ಬಿಸಿ ಮುಟ್ಟಿಸೋಕೆ ಮುಂದಾಗಿದೆ.

    ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಮನೆಯ ಪಾಯ ಅಗೆದ ಪರಿಣಾಮ ಎರಡು ಅಕ್ಕ-ಪಕ್ಕದ ಮನೆಗಳಿಗೆ ಹಾನಿಯಾಗಿ ಕುಸಿದಿದ್ದವು. ಇದರ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಇದೀಗ ಗುಜರಿ ಬಿಲ್ಡಿಂಗ್ಸ್, ಮನೆಗಳ ಬೇಟೆಗೆ ಮುಂದಾಗಿದೆ. ಇದಕ್ಕಾಗಿ 8 ವಲಯದಲ್ಲೂ ಸರ್ವೆ ಮಾಡಿದಾಗ ಬಿಬಿಎಂಪಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಯಾಕೆಂದರೆ ಸಿಲಿಕಾನ್ ಸಿಟಿಯಲ್ಲಿ ಸಿಕ್ಕಾಪಟ್ಟೆ ಶಿಥಿಲಾವಸ್ಥೆಯಲ್ಲಿರುವ ಬಿಲ್ಡಿಂಗ್, ಮನೆಗಳು ಇರೋದು ಬೆಳಕಿಗೆ ಬಂದಿದೆ.

    ಬೆಂಗಳೂರಿನಲ್ಲಿ 178 ಮನೆಗಳು, ಕಟ್ಟಡ ಡೇಂಜರ್ ಜೋನ್‍ನಲ್ಲಿದೆ. ಈ ಪೈಕಿ, 77 ಕಟ್ಟಡಗಳಿಗೆ ಪಾಲಿಕೆ ನೋಟಿಸ್ ನೀಡಿದೆ. ಕಟ್ಟಡಗಳ ಮಾಲೀಕರು ತಾವಾಗಿಯೇ ಡೆಮಾಲಿಷನ್ ಮಾಡದೆ ಹೋದರೆ ನಾವೇ ಬಂದು ಮನೆಗಳನ್ನು ತೆರವು ಮಾಡುತ್ತೇವೆ ಎಂದು ಬಿಬಿಎಂಪಿ ಅಧಿಕಾರಿಗಳು ವಾರ್ನಿಂಗ್ ಕೊಟ್ಟಿದ್ದಾರೆ.

    ಈ ಹಿಂದೆ ರಾಜಕಾಲುವೆ ಒತ್ತುವರಿ ಮಾಡಿಕೊಂಡ ಮನೆಗಳನ್ನು ಒಡೆದಾಗ ದೊಡ್ಡ ಹೈಡ್ರಾಮ ನಡೆದಿತ್ತು. ದೊಡ್ಡವರ ಮನೆಗೆ ವಿನಾಯಿತಿ ಎಂದು ಬಿಬಿಎಂಪಿ ಮೇಲೆ ಆರೋಪ ಕೇಳಿಬಂದಿತ್ತು. ಈ ವಿಚಾರದಲ್ಲಿ ಮಾತ್ರ ಹೀಗಾಗದಿರಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.