Tag: dam

  • ಹೊಗೆನಕಲ್ ಜಲಪಾತ ಸಂಪೂರ್ಣ ಜಲಾವೃತ – ಪ್ರವಾಸಿಗರ ಭೇಟಿಗೆ ನಿಷೇಧ: ವಿಡಿಯೋ

    ಹೊಗೆನಕಲ್ ಜಲಪಾತ ಸಂಪೂರ್ಣ ಜಲಾವೃತ – ಪ್ರವಾಸಿಗರ ಭೇಟಿಗೆ ನಿಷೇಧ: ವಿಡಿಯೋ

    ಚಾಮರಾಜನಗರ: ಭಾರಿ ಮಳೆಯಿಂದಾಗಿ ಅಪಾಯದ ಮಟ್ಟ ಮೀರಿ ಕಾವೇರಿ ನದಿ ಹರಿಯುತ್ತಿರುವ ಕಾರಣ ಕೊಳ್ಳೇಗಾಲ ತಾಲೂಕಿನ ಪ್ರಸಿದ್ಧ ಹೊಗೆನಕಲ್ ಜಲಪಾತಕ್ಕೆ ನಿಷೇಧ ಹೇರಲಾಗಿದೆ.

    ಸುತ್ತಮುತ್ತಲಿನ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಜಲಾಶಯಗಳು ತುಂಬಿವೆ. ಆದ್ದರಿಂದ ಕೆಆರ್‍ಎಸ್ ಮತ್ತು ಕಬಿನಿಯಿಂದ ಅಧಿಕ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿಯು ಅಪಾಯಮಟ್ಟ ಹರಿಯುತ್ತಿರುವುದರಿಂದ ಕೊಳ್ಳೆಗಾಲದ ಸಮೀಪವಿರುವ ಹೊಗೆನಕಲ್ ಜಲಪಾತಕ್ಕೆ ಪ್ರವಾಸಿಗರ ವೀಕ್ಷಣೆಗೆ ನಿಷೇಧ ಹೇರಲಾಗಿದೆ.

    ಹೊಗೆನಕಲ್ ಜಲಪಾತ ಸಂಪೂರ್ಣ ಜಲಾವೃತಗೊಂಡಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ಪ್ರವೇಶವನ್ನು ನಿರಾಕರಿಸಲಾಗಿದೆ. ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯದಿಂದ ನೀರಿನ ಹೊರ ಹರಿವು ಕಡಿಮೆಯಾಗುವವರೆಗೂ ಪ್ರವಾಸಿಗರಿಗೆ ನಿಷೇಧ ಮುಂದುವರಿಯಲಿದೆ.

    ಸದ್ಯ ಹೊಗೆನಕಲ್ ಸಂಪೂರ್ಣ ಜಲಾವೃತಗೊಂಡಿದ್ದು, ಅಕ್ಕ-ಪಕ್ಕದ ಮನೆಗಳು ಸಹ ನೀರಿನಿಂದ ಮುಳುಗಡೆಯಾಗಿದೆ. ಈ ಮೊದಲು ಬೆಂಗಳೂರು ಮೂಲಕ ಇಬ್ಬರು ಟೆಕ್ಕಿಗಳು ಹೊಗೆನಕಲ್ ನಲ್ಲಿ ಕೊಚ್ಚಿ ಹೋಗಿ ತಮ್ಮ ಪ್ರಾಣಕಳೆದುಕೊಂಡಿದ್ದರು.

  • ಅವಧಿಗೂ ಮುನ್ನವೇ ಭರ್ತಿಯಾದ ಬೆಳಗಾವಿಯ ರಕ್ಕಸಕೊಪ್ಪ ಜಲಾಶಯ

    ಅವಧಿಗೂ ಮುನ್ನವೇ ಭರ್ತಿಯಾದ ಬೆಳಗಾವಿಯ ರಕ್ಕಸಕೊಪ್ಪ ಜಲಾಶಯ

    ಬೆಳಗಾವಿ: ನಗರಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ಮಹತ್ವದ ಪಾತ್ರ ವಹಿಸಿರುವ ರಕ್ಕಸಕೊಪ್ಪ ಜಲಾಶಯವು ಈ ಬಾರಿ ಅವಧಿಗೂ ಮುನ್ನವೇ ಭರ್ತಿಯಾಗಿದ್ದು, ಜನತೆಯ ಮೊಗದಲ್ಲಿ ಸಂತಸಕ್ಕೆ ಕಾರಣವಾಗಿದೆ.

    ಖಾನಾಪುರದ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಜಲಾಶಯದ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಒಟ್ಟು 0.62 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯ ಇರುವ ರಕ್ಕಸಕೊಪ್ಪ ಜಲಾಶಯ ಇದೀಗ ಸಂಪೂರ್ಣ ಭರ್ತಿಯಾಗಿದೆ. ಹೀಗಾಗಿ ಜಲಾಶಯದ ಗೇಟ್ ಗಳ ಮೂಲಕ ಮಾರ್ಕಂಡೇಯ ನದಿಗೆ ನೀರು ಬಿಡಲಾಗುತ್ತಿದೆ.

    ಕಳೆದ ವರ್ಷ ಸೆಪ್ಟೆಂಬರ್ 15 ರಂದು ಭರ್ತಿಯಾಗಿದ್ದ ಜಲಾಶಯ ಈ ವರ್ಷ ಒಂದು ತಿಂಗಳು ಮೊದಲೇ ಭರ್ತಿಯಾಗಿದೆ. ವರ್ಷ ಪೂರ್ತಿ ಬೆಳಗಾವಿ ನಗರಕ್ಕೆ ರಕ್ಕಸಕೊಪ್ಪ ಜಲಾಶಯದಿಂದಲೇ ನೀರು ಪೂರೈಕೆಯಾಗುತ್ತದೆ. ಅಲ್ಲದೇ ಜಿಲ್ಲೆಯ ಕುಡಿಯುವ ನೀರು ಪೂರೈಕೆಗೆ ರಕ್ಕಸಕೊಪ್ಪ ಜಲಾಶಯವೇ ಮೂಲ ಆಧಾರವಾಗಿದೆ.

  • ಕಬಿನಿ, ಕೆಆರ್ ಎಸ್ ನಿಂದ ನೀರು ಹೊರಕ್ಕೆ- ತಮಿಳುನಾಡಿನ ಮೆಟ್ಟೂರು ಜಲಾಶಯದತ್ತ ಅಪಾರ ಪ್ರಮಾಣದ ನೀರು!

    ಕಬಿನಿ, ಕೆಆರ್ ಎಸ್ ನಿಂದ ನೀರು ಹೊರಕ್ಕೆ- ತಮಿಳುನಾಡಿನ ಮೆಟ್ಟೂರು ಜಲಾಶಯದತ್ತ ಅಪಾರ ಪ್ರಮಾಣದ ನೀರು!

    ಚೆನ್ನೈ: ತಮಿಳುನಾಡಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮೆಟ್ಟೂರು ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.

    ಕಾವೇರಿ ನದಿ ಪಾತ್ರದಲ್ಲಿ ಬಿಟ್ಟುಬಿಡದೆ ಮಳೆಯಾಗುತ್ತಿರುವ ಹಿನ್ನೆಲೆ ಕೆಆರ್‍ಎಸ್ ಡ್ಯಾಂ ಭರ್ತಿಯಾಗಿದೆ. ಹೀಗಾಗಿ ಕಬಿನಿ, ಕೆಆರ್ ಎಸ್ ಡ್ಯಾಂನಿಂದ ಭಾರೀ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗ್ತಿದೆ. ಇದ್ರಿಂದ ತಮಿಳುನಾಡಿನ ಮೆಟ್ಟೂರು ಜಲಾಶಯದತ್ತ ಅಪಾರ ಪ್ರಮಾಣ ನೀರು ಹರಿಯುತ್ತಿದೆ.

    ಸೋಮವಾರ ಬೆಳಗ್ಗೆ 87.92 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಸದ್ಯ ಮೆಟ್ಟೂರು ಡ್ಯಾಂ ನಲ್ಲಿ 1.25 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಓ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ಡ್ಯಾಂ ನ ನೀರಿನ ಮಟ್ಟ 100 ಅಡಿ ತಲುಪುವ ಸಾಧ್ಯತೆಗಳು ಹೆಚ್ಚಿವೆ.

    ಹೊಗೇನಕಲ್ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ನದಿ ಪಾತ್ರದ ಪ್ರದೇಶಗಳಿಗೆ ನೀರು ನುಗ್ಗಿದೆ. ಮನೆಗಳು, ದೇಗುಲಗಳಲ್ಲಿ ನೀರು ನಿಂತಿದ್ದು, ಜನ ಆತಂಕದಲ್ಲಿದ್ದಾರೆ. ಹೊಗೇನಕಲ್ ಫಾಲ್ಸ್ ಗೆ ಯಾರು ಹೋಗಬಾರದು ಅಂತಾ ತಮಿಳುನಾಡು ನಿಷೇಧ ಹೇರಿದೆ. ಈಗಾಗಲೇ 88 ಅಡಿಯಷ್ಟು ತಲುಪಿರುವ ಮೆಟ್ಟೂರು ಡ್ಯಾಂನ ನೀರಿನ ಮಟ್ಟ ಕೆಲವೇ ದಿನಗಳಲ್ಲಿ 100 ಅಡಿಯಷ್ಟು ತಲುಪಲಿದೆ. ಈ ಜಲಾಶಯದಲ್ಲಿ 120 ಅಡಿ ನೀರಿನ ಗರಿಷ್ಠ ಮಟ್ಟವನ್ನು ಹೊಂದಿದೆ.

    ಒಟ್ಟಿನಲ್ಲಿ ಮೆಟ್ಟೂರು ಜಲಾಶಯದಲ್ಲಿ ಜಲತಾಂಡವೇ ಸೃಷ್ಟಿಯಾಗಿದೆ. ಇನ್ನು ನದಿ ಪಾತ್ರದ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ.

  • ಕೊಡಗಿನಲ್ಲಿ ತಗ್ಗದ ಮಳೆ- ಕ್ಷಣ ಕ್ಷಣಕ್ಕೂ ಹೆಚ್ಚಾಗ್ತಿದೆ ಮಡಿಕೇರಿ ಸಮೀಪ ಕಾಣಿಸಿಕೊಂಡ ಹೆದ್ದಾರಿಯ ಬಿರುಕು!

    ಕೊಡಗಿನಲ್ಲಿ ತಗ್ಗದ ಮಳೆ- ಕ್ಷಣ ಕ್ಷಣಕ್ಕೂ ಹೆಚ್ಚಾಗ್ತಿದೆ ಮಡಿಕೇರಿ ಸಮೀಪ ಕಾಣಿಸಿಕೊಂಡ ಹೆದ್ದಾರಿಯ ಬಿರುಕು!

    ಮಡಿಕೇರಿ/ಶಿವಮೊಗ್ಗ: ಕಳೆದ 20 ದಿನಗಳಿಂದ ಸುರಿಯುತ್ತಿರೋ ಕುಂಭದ್ರೋಣ ಮಳೆಗೆ ಕೊಡಗು ಜಿಲ್ಲೆ ಅಕ್ಷರಶಃ ತತ್ತರಿಸಿದೆ. ಶಾಸಕರ ನಿವಾಸದ ಬಳಿ ಅಳವಡಿಸಿದ್ದ ಟ್ರಾನ್ಸ್‍ಫಾರ್ಮರ್ ಮೇಲೆ ಮರ ಬಿದ್ದು, ಟ್ರಾನ್ಸ್‍ಫಾರ್ಮರ್ ಸಂಪೂರ್ಣ ಜಖಂಗೊಂಡಿದೆ.

    ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಹಾಗೂ ಸುಂಟಿಕೊಪ್ಪದಲ್ಲಿ ಮರ ಬಿದ್ದು ಮನೆಗಳು ಜಖಂಗೊಂಡಿವೆ. ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆ ಸಂಪರ್ಕ ಕಡಿತಗೊಂಡು ಹಲವು ಗ್ರಾಮಗಳ ಜನರು ಪರದಾಡುವಂತಾಗಿದೆ. ಅಲ್ಲದೆ ವಿದ್ಯುತ್ ಕಂಬಗಳು ಧಾರಶಾಹಿಯಾದ್ದರಿಂದ 25ಕ್ಕೂ ಅಧಿಕ ಗ್ರಾಮಗಳು ಕಾರ್ಗತ್ತಲಲ್ಲಿ ಮುಳುಗಿವೆ. ಇನ್ನು ಇಂದು ಕೊಡಗು ಜಿಲ್ಲೆಯ ಕೆಲ ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕುಗಳ ಅಂಗನವಾಡಿ, ಶಾಲೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪಿ ಐ ಶ್ರೀ ವಿದ್ಯಾ ಆದೇಶ ಹೊರಡಿಸಿದ್ದಾರೆ.

    ಮೈಸೂರು ಮಡಿಕೇರಿ-ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ ಸಮೀಪ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದ್ದ ಬಿರುಕು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ವಾಹನ ಸವಾರರು ಆತಂಕದಲ್ಲೇ ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಶಿವಮೊಗ್ಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾಗರ ತಾಲೂಕಿನ ಸುಮಾರು ಐದು ಸಾವಿರ ಹೆಕ್ಟೇರ್ ಗದ್ದೆ ನೀರಿನಲ್ಲಿ ಮುಳುಗಿದೆ. ನೀರು ನಿಂತಿರುವ ಪ್ರದೇಶ ಮೇಲ್ನೋಟಕ್ಕೆ ಯಾವುದೋ ಕೆರೆ ಅಥವಾ ಜಲಾಶಯದಂತೆ ಕಾಣುತ್ತಿದೆ. ನಾಟಿ ಮಾಡಿದ ಭತ್ತ ನೀರಿನಲ್ಲಿ ಮುಳುಗಿರುವುದರಿಂದ ಈ ಭಾಗದ ರೈತರಲ್ಲಿ ಆತಂಕ ಮೂಡಿಸಿದೆ. ಸಾವಿರಾರು ಹೆಕ್ಟೇರ್ ಗದ್ದೆ ಮುಳುಗಿದ್ದಲ್ಲದೆ ಇಲ್ಲಿನ ಬೀಸನಗದ್ದೆ ಎಂಬ ಹಳ್ಳಿ ಸಂಪೂರ್ಣ ಸಂಪರ್ಕ ಕಡಿದುಕೊಡಿದೆ. ತೀರ್ಥಹಳ್ಳಿ, ಹೊಸನಗರ ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

  • ದೇವಸ್ಥಾನ ಸುತ್ತಲೂ ಆವರಿಸಿದ ನೀರು: ಕ್ಷೇತ್ರದಿಂದ ಹೊರ ಬರಲ್ಲ ಅಂತಾ ಪಟ್ಟು ಹಿಡಿದ ಸ್ವಾಮೀಜಿ

    ದೇವಸ್ಥಾನ ಸುತ್ತಲೂ ಆವರಿಸಿದ ನೀರು: ಕ್ಷೇತ್ರದಿಂದ ಹೊರ ಬರಲ್ಲ ಅಂತಾ ಪಟ್ಟು ಹಿಡಿದ ಸ್ವಾಮೀಜಿ

    ಮಂಡ್ಯ: ಕಾವೇರಿ ನದಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ದೇವಸ್ಥಾನದಿಂದ ಹೊರಬರುವಂತೆ ಜಿಲ್ಲಾಧಿಕಾರಿ ಮನವಿ ಮಾಡಿಕೊಂಡರೂ ಸ್ವಾಮೀಜಿಯೊಬ್ಬರು ಇದಕ್ಕೆ ಒಪ್ಪದೇ ಅಲ್ಲಿಯೇ ಕುಳಿತಿದ್ದಾರೆ.

    ಕಾವೇರಿ ನದಿ ಪಾತ್ರದ ಶ್ರೀರಂಗಪಟ್ಟಣದ ಗೌತಮ ಕ್ಷೇತ್ರ ದೇವಸ್ಥಾನ ಈಗಾಗಲೇ ನದಿ ಪ್ರವಾಹದಿಂದ ಅರ್ಧ ಮುಳುಗಡೆಯಾಗಿದೆ. ಮತ್ತೇ ಕೆಆರ್‌ಎಸ್‌ ಡ್ಯಾಂ ನಿಂದ 1 ಲಕ್ಷ ಕ್ಯೂಸೆಕ್ ನೀರು ಬಿಟ್ಟರೆ ದೇವಸ್ಥಾನವೇ ಮುಳುಗಡೆ ಆಗುತ್ತದೆ. ಹೀಗಾಗಿ ಜಿಲ್ಲಾಧಿಕಾರಿ ಮಂಜುಶ್ರೀ ಸ್ಥಳಕ್ಕೆ ಭೇಟಿ ನೀಡಿ, ಸ್ವಾಮೀಜಿಗಳಿಗೆ ಕರೆ ಮಾಡಿ ದೇವಸ್ಥಾನ ಬಿಟ್ಟು ಬರುವಂತೆ ಮನವಿ ಮಾಡಿಕೊಂಡಿದ್ದಾರೆ.

    ನೀರು ಬಂದರೂ ನಮಗೆನೂ ಆಗಲ್ಲ. ನಾನು ಗೌತಮ ಕ್ಷೇತ್ರದಿಂದ ಹೊರ ಬರುವುದಿಲ್ಲ ಎಂದು ಸ್ವಾಮೀಜಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸ್ವಾಮೀಜಿಯ ಯೋಗಕ್ಷೇಮ ವಿಚಾರಿಸಿದ ಮಂಜುಶ್ರೀ ಅವರು, ನೀರಿನ ಮಟ್ಟ ಹೆಚ್ಚಾಗಿ ನೀವು ತೊಂದರೆಗೆ ಒಳಗಾಗುತ್ತಿದ್ದಂತೆ ತಿಳಿಸಿ, ನಾವು ನಿಮ್ಮನ್ನು ಬೋಟ್‍ನಲ್ಲಿ ಕರೆದು ತರುತ್ತೇವೆ ಎಂದು ಸಲಹೆ ನೀಡಿದ್ದಾರೆ.

    ಬಳಿಕ ಸ್ಥಳೀಯ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಯಾವುದೇ ಅವಘಡ ಸಂಭವಿಸದಂತೆ ಎಚ್ಚರವಹಿಸಿ ಎಂದು ಸೂಚಿಸಿದ್ದಾರೆ.

  • ದಾಖಲೆ ಮಳೆಗೆ ಕಾವೇರಿಕೊಳ್ಳದ ಡ್ಯಾಂಗಳು ಭರ್ತಿ- ಹೆಚ್ಚುವರಿ ನೀರು ಬಳಕೆ ಅವಕಾಶಕ್ಕಾಗಿ ಸರ್ಕಾರ ಮನವಿ?

    ದಾಖಲೆ ಮಳೆಗೆ ಕಾವೇರಿಕೊಳ್ಳದ ಡ್ಯಾಂಗಳು ಭರ್ತಿ- ಹೆಚ್ಚುವರಿ ನೀರು ಬಳಕೆ ಅವಕಾಶಕ್ಕಾಗಿ ಸರ್ಕಾರ ಮನವಿ?

    ಬೆಂಗಳೂರು: ಮುಂಗಾರು ಅಬ್ಬರದಿಂದಾಗಿ ಕಾವೇರಿಕೊಳ್ಳದ ಡ್ಯಾಂಗಳು ಎಲ್ಲಾ ಭರ್ತಿಯಾಗಿವೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರು ಬಳಕೆಗೆ ಸಂಬಂಧ ಕರ್ನಾಟಕದಿಂದ ಮನವಿ ಸಾಧ್ಯತೆಗಳಿವೆ.

    ಕೆಆರ್‍ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಯಶಗಳು ಅವಧಿಗೂ ಮೊದಲೇ ಭರ್ತಿಯಾಗಿರುವುದರಿಂದ ರಾಜ್ಯ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲು ಚಿಂತಿಸಿದೆ ಎನ್ನಲಾಗಿದೆ.

    ಸಾಧಾರಣ ಮಳೆ ವರ್ಷದಲ್ಲಿ ಹೆಚ್ಚುವರಿ ನೀರು ಬಳಕೆ ಸಂಬಂಧ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಆದೇಶವಿಲ್ಲ. ಸಾಧಾರಣ ಮಳೆ ವರ್ಷದಲ್ಲಿ ಬಿಳಿಗುಂಡ್ಲುಗೆ 177.25 ಟಿಎಂಸಿ ನೀರು ತಲುಪಿದ ಬಳಿಕ ಸಿಗೋ ಹೆಚ್ಚುವರಿ ನೀರು ಬಳಕೆಗೆ ಸಂಬಂಧಿಸಿದಂತೆ ಇದೀಗ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

    ದಶಕಗಳ ಬಳಿಕ ಇದೀಗ ಅವಧಿಗೂ ಮುನ್ನವೇ ಕೆಆರ್‍ಎಸ್ ಜಲಾಶಯ ಭರ್ತಿಯಾಗಿದ್ದು, ಕನ್ನಡ ನಾಡಿನ ಜೀವನದಿ ಕಾವೇರಿ ಭೋರ್ಗರೆದು ಹರಿಯುತ್ತಿದ್ದಾಳೆ. ಬತ್ತಿ ಹೋಗಿದ್ದ ಕಾವೇರಿ ಕೊಳ್ಳದ ಭೂಮಿಯೀಗ ಹಸಿರಿನಿಂದ ಕಂಗೊಳಿಸುತ್ತಿದೆ. ಕೆಲ ವರ್ಷಗಳಿಂದ ಬರಿದಾಗಿದ್ದ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಮಳೆ ಬಂದು ಜಿಲ್ಲೆಯ ಜೀವನಾಡಿ ಕೃಷ್ಣರಾಜ ಸಾಗರ ಅಣೆಕಟ್ಟು ಸಂಪೂರ್ಣ ಭರ್ತಿಯಾಗಿ ಜೀವನದಿ ಕಾವೇರಿ ಮೈದುಂಬಿ ಹರಿಯುತ್ತಿದ್ದಾಳೆ. ಅವಧಿಗೂ ಮುನ್ನವೇ ಕೆಆರ್‍ಎಸ್ ಭರ್ತಿಯಾಗಿರೋದ್ರಿಂದ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಬಿಡಲಾಗಿದೆ. ವಾಡಿಕೆಯಂತೆ ಆಗಸ್ಟ್ ನಲ್ಲಿ ಕೆಆರ್‍ಎಸ್ ತುಂಬುವುದು. ಆದರೆ ಈ ಬಾರಿ ಒಂದು ತಿಂಗಳ ಮುಂಚಿತವಾಗಿ ಅಂದರೆ ಜುಲೈ ತಿಂಗಳಲ್ಲಿಯೇ ಅಣೆಕಟ್ಟು ಭರ್ತಿಯಾಗಿದೆ.

  • ಕೊಡಗಿನಲ್ಲಿ ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆ- ಜನಜೀವನ ಅಸ್ತವ್ಯಸ್ತ

    ಕೊಡಗಿನಲ್ಲಿ ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆ- ಜನಜೀವನ ಅಸ್ತವ್ಯಸ್ತ

    ಮಡಿಕೇರಿ: ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು ಅಕ್ಷರಶಃ ಕೊಡಗಿನ ಮಂದಿ ನಲುಗಿದ್ದಾರೆ. ಮಳೆಯ ಅರ್ಭಟದೊಂದಿಗೆ ಭಾರೀ ಗಾಳಿ ಇಡೀ ಜಿಲ್ಲೆಯನ್ನು ನಡುಗಿಸಿದೆ.

    10 ದಿನಗಳಿಂದ ಎಡೆಬಿಡದೆ ವರುಣ ತನ್ನ ಉಗ್ರನರ್ತನ ತೋರಿದ್ದು, ಮಳೆಯ ಅಬ್ಬರಕ್ಕೆ ವಿದ್ಯುತ್ ವ್ಯತ್ಯಯಗೊಂಡಿದೆ. ವಿದ್ಯುತ್ ಕಂಬಗಳು, ಮರಗಳು ಧರಶಾಯಿಗಳಾಗಿವೆ. ಮಡಿಕೇರಿ ನಗರದಲ್ಲಿ ಶನಿವಾರ ರಾತ್ರಿಯಿಂದಲ್ಲೇ ಪವರ್ ಕಟ್ ಆಗಿದ್ದು, ಹಲವು ಗ್ರಾಮಗಳು ಕಗ್ಗತ್ತಲಲ್ಲಿ ಮುಳುಗಿದೆ. ಗಾಳಿ ಮಳೆಗೆ ಹಲವೆಡೆ ಅನಾಹುತಗಳು ಸಂಭವಿಸುತ್ತಿದ್ದು ಮನೆಗಳ ಶೀಟ್ ಗಳು, ಗೋಡೆಗಳು ಕುಸಿತಗೊಳ್ತಿದೆ.

    ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ಕ್ಷೇತ್ರ ಜಲಾವೃತಗೊಂಡಿದ್ದು ಸಂಚಾರ ಅಸ್ತವ್ಯಸ್ಥಗೊಂಡಿದೆ. ಮಹಾಮಳೆಗೆ ತ್ರಿವೇಣಿ ಸಂಗಮ ತುಂಬಿ ಜಲಾವೃತಗೊಂಡಿದ್ದು, ಇದ್ರಿಂದ ತಲಕಾವೇರಿಗೆ ತೆರಳಲು ಸಂಪರ್ಕ ಅಸಾಧ್ಯವಾಗಿದೆ.

    ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳು ಉಕ್ಕಿ ಹರಿಯುತ್ತಿದೆ. ಕೊಡಗು ಜಿಲ್ಲೆ ಎಂದೆಂದೂ ಕಾಣದ ಮಹಾಮಳೆಗೆ ತತ್ತರಗೊಂಡಿದ್ದು ಮಳೆ ಸಾಕಪ್ಪ ಅಂತಾಗಿದೆ. ಇದನ್ನೂ ಓದಿ: ಕೊಡಗಿಗೆ ಸರ್ಕಾರದಿಂದಾಗಿರುವ ಅನ್ಯಾಯದ ವಿರುದ್ಧ ಗುಡುಗಿದ ಬಾಲಕ – ಸಿಎಂ ಎಚ್‍ಡಿಕೆ ಪ್ರತಿಕ್ರಿಯೆ ಏನು ಗೊತ್ತಾ?

  • ರಾಜ್ಯದಲ್ಲಿ ನಿಲ್ಲದ ಮಳೆ, ತಗ್ಗದ ಪ್ರವಾಹ – ಆಗುಂಬೆ ಸೂರ್ಯಾಸ್ತ ಗೋಪುರ ರಸ್ತೆ ಕುಸಿತ – KRS, ಹೇಮಾವತಿ ಇಂದು ಸಂಪೂರ್ಣ

    ರಾಜ್ಯದಲ್ಲಿ ನಿಲ್ಲದ ಮಳೆ, ತಗ್ಗದ ಪ್ರವಾಹ – ಆಗುಂಬೆ ಸೂರ್ಯಾಸ್ತ ಗೋಪುರ ರಸ್ತೆ ಕುಸಿತ – KRS, ಹೇಮಾವತಿ ಇಂದು ಸಂಪೂರ್ಣ

    ಬೆಂಗಳೂರು: ರಾಜ್ಯಾದ್ಯಂತ ಮಳೆರಾಯನ ಅಬ್ಬರ ಮತ್ತಷ್ಟು ಜೋರಾಗಿದೆ. ಕರಾವಳಿ, ಮಲೆನಾಡು ಜನರಿಗೆ ಸಾಕು ಅನ್ನಿಸುವಷ್ಟು ಮಳೆಯಾಗುತ್ತಿದ್ದರೆ, ಬಯಲು ಸೀಮೆಯ ಜನರಲ್ಲಿ ಖುಷಿಯೋ ಖುಷಿ. ಯಾಕಂದ್ರೆ ಎಲ್ಲಾ ಡ್ಯಾಮ್‍ಗಳಿಗೂ ಜೀವಕಳೆ ಬಂದಿದೆ.

    124.80 ಅಡಿ ಸಾಮರ್ಥ್ಯದ ಕೆಆರ್ ಎಸ್‍ನಲ್ಲೀಗ 121.40 ಅಡಿ ನೀರು ಬಂದಿದ್ದು, ಭರ್ತಿಗೆ ಮೂರು ಅಡಿ ಬಾಕಿ ಇದೆ. ಹೇಮಾವತಿಗೂ 3 ಅಡಿ ಬಾಕಿಯಿದ್ದು, ಎರಡು ಜಲಾಶಯಗಳು ಇವತ್ತೇ ಬಹುತೇಕ ತುಂಬಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನದಿ ತಟದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.

    ಕಬಿನಿ ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ನಂಜನಗೂಡಲ್ಲಿರುವ ಕಪಿಲಾ ನದಿ ಅಕ್ಕ-ಪಕ್ಕದ ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಮನೆಗಳು ಜಲಾವೃತಗೊಂಡಿದ್ದು, ಸ್ಥಳೀಯರು ಮನೆ ತೊರೆದು ಸಾಮಾನು ಸರಂಜಾಮುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಅತ್ತ, ಮಹಾರಾಷ್ಟ್ರದಲ್ಲಿ ವಿಪರೀತ ಮಳೆ ಆಗುತ್ತಿರೋ ಕಾರಣ ಕೃಷ್ಣಾನದಿಗೆ ಮತ್ತಷ್ಟು ನೀರು ಹರಿದು ಬಂದಿದೆ. ಚಿಕ್ಕೋಡಿ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.

    ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ಮಾಲತಿ ನದಿ ತುಂಬಿ ಹರಿಯುತ್ತಿದೆ. ಗುಡ್ಡೇಕೇರಿ- ಬಿದರಗೋಡು ರಸ್ತೆ ಮೇಲೆ ಮೂರು ಅಡಿ ನೀರು ನಿಂತಿದ್ದು, ಶೃಂಗೇರಿ-ತೀರ್ಥಹಳ್ಳಿ ಸಂಪರ್ಕ ಬಂದ್ ಆಗಿದೆ. ಗ್ರಾಮೀಣ ಪ್ರದೇಶದ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಆಗುಂಬೆ ಘಾಟ್‍ನಲ್ಲಿ ಮತ್ತೆ ಭೂ ಕುಸಿತವಾಗಿದೆ. ಆಗುಂಬೆ ಸನ್ ಸೆಟ್ ಪಾಯಿಂಟ್ ಬಳಿ ರಸ್ತೆ ಪಕ್ಕದಲ್ಲಿ ಭೂ ಕುಸಿದಿದ್ದು, ಸೂರ್ಯಾಸ್ತ ವೀಕ್ಷಣೆಗೆ ಸಾರ್ವಜನಿಕರಿಗೆ ನಿಷೇಧ ಹೇರಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿಕ್ಕ ಆಣೆಕಟ್ಟುಗಳೆಲ್ಲಾ ಭರ್ತಿ ಆಗಿದ್ದು, ರಸ್ತೆ, ಸೇತುವೆ, ಮನೆ ಗೋಡೆ, ಗುಡ್ಡಗಳೆಲ್ಲಾ ಕುಸಿಯುತ್ತಿವೆ.

    ರಾಮನಗರದ ಹಲವೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಚನ್ನಪಟ್ಟಣ, ಕನಕಪುರದಲ್ಲಿ ಸೇರಿ ಹಲವೆಡೆ ಮಳೆಯಾಗಿದ್ದು ರಸ್ತೆಯ ಮೇಲೆ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿ ದ್ವಿಚಕ್ರ ವಾಹನ ಸವಾರರು ಸಮಸ್ಯೆ ಅನುಭವಿಸಿದರು.

    ಮಲೆನಾಡಿನಲ್ಲಿ ಸಾಕು ಅನ್ನುವಷ್ಟು ಮಳೆಯಾಗ್ತಿದ್ರೆ, ಬಿಸಿಲನಾಡು ರಾಯಚೂರು, ಧಾರವಾಡ, ಹಾವೇರಿಯಲ್ಲಿ ಮಾತ್ರ ವರುಣದೇವ ತನ್ನ ಕೃಪೆ ತೋರಿಲ್ಲ. ಉದ್ದು, ಹೆಸರು, ಎಳ್ಳು ಬಿತ್ತನೆ ಮಾಡಿದ್ದ ರೈತರು ಮೊಳಕೆ ಬಾರದೆ ನಷ್ಟ ಅನುಭವಿಸಿದ್ದಾರೆ. ಮೋಡಕವಿದ ವಾತಾವರಣವಿದ್ದರೂ ದೊಡ್ಡ ಮಳೆ ಬಾರದೆ ಕಂಗಾಲಾಗಿ ವಿಶೇಷ ಪೂಜೆಗಳನ್ನ ಮಾಡುತ್ತಿದ್ದಾರೆ. ಇತ್ತ ನವಲಗುಂದ ಪಟ್ಟಣದ ಬಿರಲಿಂಗೇಶ್ವರ ಯುವಕ ಮಂಡಳಿಯವರು ಮಳೆಗಾಗಿ ಕತ್ತೆಗಳ ಮದುವೆ ಮಾಡಿದ್ದಾರೆ.

    ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಭಾರೀ ಮಳೆಯಾಗಿದೆ. ಮಳೆ ರುದ್ರನರ್ತನಕ್ಕೆ ನಗರದ ರಸ್ತೆಗಳು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನರು ಪರದಾಡುತ್ತಿದ್ದಾರೆ. ಮಿಂಟೋ ಸೇತುವೆಯ ಅಡಿ ಮಳೆ ನೀರು ತುಂಬಿ ಹೋಗಿದೆ. ರಸ್ತೆಗಳು ಕೆರೆಯಂತಾಗಿದ್ದು, ಹಲವಾರು ಬಸ್‍ಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿದೆ. ಸಂಚಾರ ಸಂಪೂರ್ಣ ಅಸ್ತವ್ಯಸ್ಯಗೊಂಡಿದೆ.

  • ಕಾವೇರಿ ನದಿ ಸಮೀಪದಲ್ಲಿರೋ ಜನರೇ ಎಚ್ಚರ ಎಚ್ಚರ!

    ಬೆಂಗಳೂರು: ಡ್ಯಾಂ ಮತ್ತು ನದಿಗಳ ಸನಿಹದಲ್ಲಿರುವ ಜನರೆ ಎಚ್ಚರವಾಗಿರಿ. ನಿರಂತರ ಭಾರೀ ಮಳೆಯಿಂದಾಗಿ ಕಾವೇರಿ ನದಿಯ ಹರಿಯುವ ಡ್ಯಾಂಗಳು ಭರ್ತಿಯಾಗಿವೆ. ಶನಿವಾರ ಅಥವಾ ಭಾನುವಾರ ಜಲಾಶಯಗಳ ನೀರನ್ನು ನದಿಗೆ ಬಿಡುವ ಸಾಧ್ಯತೆ ಇದೆ.

    ಈಗಾಗಲೇ ಕೆಆರ್‌ಎಸ್‌, ಹೇಮಾವತಿ ಹಾಗೂ ಹಾರಂಗಿ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಯಾವುದೇ ಸಮಯದಲ್ಲಿ ಡ್ಯಾಂ ನಿಂದ ನೀರನ್ನು ನದಿಗೆ ಬಿಡುವ ಸಾಧ್ಯತೆಯಿದೆ.

    ನದಿಪಾತ್ರದಲ್ಲಿ ಪ್ರವಾಹ ಉಂಟಾಗಲಿದ್ದು, ವಿಶೇಷವಾಗಿ ರಾಮನಗರ, ಮಂಡ್ಯ, ಹಾಸನ ಹಾಗೂ ಮೈಸೂರಿನ ಕೆಲ ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಲಿದೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಜಲ ಆಯೋಗದ ಅಧಿಕೃತ ಪ್ರವಾಹ ಮುನ್ಸೂಚನಾ ಟ್ವಿಟ್ಟರ್ ಹ್ಯಾಂಡಲ್ ಟ್ವೀಟ್ ಮಾಡಿದೆ.

     

  • ಐತಿಹಾಸಿಕ ವೆಸ್ಲೀ ಸೇತುವೆ ಮುಳುಗಡೆಗೆ ಕೇವಲ 2 ಅಡಿ ಬಾಕಿ!

    ಐತಿಹಾಸಿಕ ವೆಸ್ಲೀ ಸೇತುವೆ ಮುಳುಗಡೆಗೆ ಕೇವಲ 2 ಅಡಿ ಬಾಕಿ!

    ಚಾಮರಾಜನಗರ: ಕಬಿನಿ ಜಲಾಶಯದ ಹೊರ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನಲ್ಲಿರುವ ಪುರಾತನ ಇತಿಹಾಸ ಪ್ರಸಿದ್ಧ ವೆಸ್ಲೀ ಸೇತುವೆ ಮುಳುಗಡೆಯ ಭೀತಿಯಲ್ಲಿದೆ.

    ಸುಪ್ರಸಿದ್ಧ ವೆಸ್ಲೀ ಸೇತುವೆಯನ್ನು ಟಿಪ್ಪುಸುಲ್ತಾನನ ಕಾಲದಲ್ಲಿ ಕಪಿಲಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿತ್ತು. ಬ್ರಿಟಿಷ್ ರಾಯಭಾರಿಯಾದ ವೆಸ್ಲೀಯ ನೆನಪಿಗಾಗಿ ಈ ಸೇತುವೆಗೆ ವೆಸ್ಲೀ ಸೇತುವೆ ಎಂದು ಟಿಪ್ಪು ಸುಲ್ತಾನ್ ಹೆಸರಿಟ್ಟಿದ್ದ. ಆದರೆ ಇಂದು ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಬಿನಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗಿತ್ತು.

    ಕಪಿಲಾ ನದಿಯಲ್ಲಿ ನೀರಿನ ಹರಿವು ಜಾಸ್ತಿಯಾಗಿದ್ದರಿಂದ ವೆಸ್ಲೀ ಸೇತುವೆ ಮುಳುಗಡೆಗೆ ಕೇವಲ 2 ರಿಂದ 3 ಅಡಿಗಳಷ್ಟು ಮಾತ್ರ ಬಾಕಿಯಿದೆ. ಪುರಾತನ ಸೇತುವೆಗಳಲ್ಲೊಂದಾದ ವೆಸ್ಲೀ ಸೇತುವೆಯು ಅವನತಿಯ ಹಂಚಿನಲ್ಲಿದ್ದು, ಒಂದು ವೇಳೆ ಕೆಆರ್ ಎಸ್ ನಿಂದಲೂ ನೀರು ಬಿಡುಗಡೆಯಾದರೆ ಐತಿಹಾಸಿಕ ಸೇತುವೆ ಸಂಪೂರ್ಣವಾಗಿ ಮುಳಗಡೆಯಾಗಲಿದೆ.