ಮಂಗಳೂರು: ಡ್ಯಾಂ ಒಂದರಲ್ಲಿ ಈಜಾಡಲು ಹೋಗಿ ಮೂವರು ಯುವಕರು (Youths) ನೀರುಪಾಲಾದ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ತಂಗಡಿ (Belthangady) ತಾಲೂಕಿನ ವೇಣೂರು ಸಮೀಪದ ಮೂಡುಕೋಡಿ ಎಂಬಲ್ಲಿ ನಡೆದಿದೆ.
ಮೂಡುಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಕಾರ್ಯಕ್ರಮದ ನಿಮಿತ್ತ ಬಂದ ಮೂಡಬಿದ್ರೆ ತಾಲೂಕಿನ ಎಡಪದವು ನಿವಾಸಿ ಲಾರೆನ್ಸ್ (20), ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್ (19), ಬಂಟ್ವಾಳ ಗ್ರಾಮದ ವಗ್ಗದ ಜೈಸನ್ (19) ಎಂಬವರು ಸಾವನ್ನಪ್ಪಿದ ದುರ್ದೈವಿಗಳು. ವಾಲ್ಟರ್‌ರವರ ಮನೆಯಲ್ಲಿ ಊಟ ಮುಗಿಸಿ ಮೂಡುಕೋಡಿ ಗ್ರಾಮದ ಬರ್ಕಜೆ ಡ್ಯಾಂ ಬಳಿ ಈಜಲು ಹೋಗಿದ್ದರು. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಯುವಕರು ನೀರುಪಾಲಾಗಿದ್ದಾರೆ. ಇದನ್ನೂ ಓದಿ: ಭೋವಿ ನಿಗಮ ಹಗರಣ: ಡಿವೈಎಸ್ಪಿ ಹೆಸರು ಬರೆದಿಟ್ಟರೂ ಬಂಧನ ಮಾಡಿಲ್ಲ ಯಾಕೆ – ಸರ್ಕಾರಕ್ಕೆ ಹೈಕೋರ್ಟ್ ಚಾಟಿ
ಕೋಲಾರ: 16 ವರ್ಷಗಳ ಬಳಿಕ ಯರಗೋಳ್ (Yuragol) ಬಳಿ ಜಲಾಶಯವೊಂದರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಸುಂದರವಾದ ಬೆಟ್ಟಗುಡ್ಡಗಳ ನಡುವೆ ಹರಿದು ತಮಿಳುನಾಡು (Tamil Nadu) ಸೇರುತ್ತಿದ್ದ ನೀರಿಗೆ ಅಡ್ಡಲಾಗಿ ಡ್ಯಾಂ (Dam) ನಿರ್ಮಾಣ ಮಾಡಿ ಕೋಲಾರ, ಮಾಲೂರು ಸೇರಿದಂತೆ 42 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆಯನ್ನು 2006ರಲ್ಲಿ ರೂಪಿಸಲಾಗಿತ್ತು. ಆದರೆ ಕಾಮಗಾರಿ ವಿಳಂಬವಾಗಿದ್ದು, 16 ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡಿದೆ.
ಈ ಬೆನ್ನಲ್ಲೇ ಯರಗೋಳ್ ಜಲಾಶಯದ ಸುತ್ತಲೂ ಹಸಿರ ಸುಂದರ ವಾತಾವರಣ, ಜಲಾಶಯ ಹಾಗೂ ನೀರು ಬಯಲು ಸೀಮೆ ಜನರನ್ನು ಕೈಬೀಸಿ ಕರೆಯುತ್ತಿದೆ. ಯರಗೋಳ್ ಡ್ಯಾಂ ಕೋಲಾರ ಜಿಲ್ಲಾ ಕೇಂದ್ರದಿಂದ ಸುಮಾರು 45 ಕಿ.ಮೀ ದೂರವಿದ್ದು ತಮಿಳುನಾಡು ಹಾಗೂ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಂತಿದೆ. ಹಾಗಾಗಿ ಕೇವಲ ಕೋಲಾರ ಜಿಲ್ಲೆಯ ಜನರಷ್ಟೇ ಅಲ್ಲಾ ಗಡಿ ಭಾಗದಿಂದ ಹೊರ ರಾಜ್ಯದ ಜನರು ಕೂಡಾ ಬಂದು ಡ್ಯಾಂ ನೋಡಿ ಖುಷಿ ಪಡುವಂತಹ ಸ್ಥಳವಾಗಿದೆ. ಇದನ್ನೂ ಓದಿ: Kanpur| ಖಾಸಗಿ ಆಸ್ಪತ್ರೆ ನಿರ್ದೇಶಕನಿಂದ 22 ವರ್ಷದ ನರ್ಸ್ ಮೇಲೆ ಅತ್ಯಾಚಾರ
ಸುಂದರ ವಾತಾವರಣದಲ್ಲಿ ಕುಟುಂಬ ಸಮೇತರಾಗಿ ಬಂದು ಕೆಲ ಸಮಯ ಇಲ್ಲಿ ಕಳೆದು ಖುಷಿಪಟ್ಟು ಹೋಗುವಂತಿದೆ. ಹಾಗಾಗಿ ಇಲ್ಲಿ ಅರಣ್ಯ ಇಲಾಖೆ ಪ್ರವಾಸಿಗರನ್ನು ಆಕರ್ಷಿಸಲು ಹಲವು ಯೋಜನೆಗಳನ್ನು ಸಿದ್ಧ ಮಾಡಿದೆ. ಸರ್ಕಾರದಿಂದ ಅನುಮತಿ ಸಿಕ್ಕ ಕೂಡಲೇ ಸುಂದರ ತಾಣವಾಗಿಸಲು ಮುಂದಾಗಿದೆ. ಇದನ್ನೂ ಓದಿ: ಚಾಮರಾಜನಗರ| ‘ಮಿಸ್ಟರ್ ಬಿಆರ್‌ಟಿ’ ಎಂದೇ ಹೆಸರಾಗಿದ್ದ ವಕ್ರದಂತ ಹೊಂದಿದ್ದ ಕಾಡಾನೆ ಸಾವು
ಬೆಂಗಳೂರು: ರಾಜ್ಯದ ಜಲಾಶಯಗಳ (Karnataka Dam) ನೀರಿನ ಮಟ್ಟ ಭಾರೀ ಕುಸಿತಗೊಂಡಿದ್ದು, ಮಳೆ (Rain) ಬಾರದೇ ಇದ್ದರೆ ಈ ಬಾರಿ ಬೇಸಿಗೆಯಲ್ಲಿ ನೀರಿಗೆ ಸಮಸ್ಯೆಯಾಗುವುದು (Water Scarcity) ಖಚಿತ.
ಕಳೆದ ವರ್ಷ ಲಿಂಗನಮಕ್ಕಿ ಜಲಾಶಯದಲ್ಲಿ 95.19 ಟಿಎಂಸಿ ನೀರಿದ್ದರೆ ಈ ಬಾರಿ 52.98 ಟಿಎಂಸಿ ನೀರು ಸಂಗ್ರಹವಾಗಿದೆ. ಕೆಎಆರ್‌ಎಸ್‌ನಲ್ಲಿ ಕಳೆದ ವರ್ಷ 41.13 ಟಿಎಂಸಿ ನೀರಿದ್ದರೆ ಈ ಬಾರಿ 19.81 ಟಿಂಎಂಸಿ ನೀರು ಸಂಗ್ರಹವಾಗಿದೆ.
ಆಲಮಟ್ಟಿಯಲ್ಲಿ 2023ರಲ್ಲಿ87.23 ಟಿಎಂಸಿ ಇದ್ದರೆ ಈ ಬಾರಿ 54.76 ಟಿಎಂಸಿ ನೀರು ಸಂಗ್ರಹವಾಗಿದೆ. ತುಂಗಾಭದ್ರ ಜಲಾಶಯದಲ್ಲಿ ಕಳೆದ ವರ್ಷ 67.75 ಟಿಎಂಸಿ ನೀರಿದ್ದರೆ ಈ ಬಾರಿ 10.20 ಟಿಎಂಸಿ ನೀರು ಸಂಗ್ರಹವಾಗಿದೆ.
ಮಂಡ್ಯ: ಕಾವೇರಿ (Cauvery) ಜಲಾನಯನ ಪ್ರದೇಶದಲ್ಲಿ ಕಳೆದ 2 ದಿನಗಳಿಂದ ಸ್ವಲ್ಪ ಪ್ರಮಾಣದಲ್ಲಿ ಮಳೆ ಬಿದ್ದ ಪರಿಣಾಮ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನ (KRS Dam) ಒಳಹರಿವು 11,800 ಕ್ಯೂಸೆಕ್‌ಗೆ ಏರಿಕೆಯಾಗಿದೆ.
ಸಾಕಷ್ಟು ಆತಂಕ ಮೂಡಿಸಿದ್ದ ಕೆಆರ್‌ಎಸ್‌ನ ನೀರಿನ ಮಟ್ಟ ಇದೀಗ 2 ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹಿನ್ನೆಲೆ ಡ್ಯಾಂಗೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ನಿನ್ನೆ (ಸೋಮವಾರ) ಬೆಳಗ್ಗೆ 5,811 ಕ್ಯೂಸೆಕ್ ಇದ್ದ ಒಳ ಹರಿವು ಇಂದು ಬೆಳಗ್ಗೆ 11,800 ಕ್ಯೂಸೆಕ್ ಏರಿಕೆಯಾಗಿದೆ.
ಒಳ ಹರಿವು ಹೆಚ್ಚಳದಿಂದ ಮತ್ತೆ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 100 ಅಡಿ ಗಡಿ ತಲುಪಿದೆ. ಸದ್ಯ 99.50 ಅಡಿಗೆ ಕೆಆರ್‌ಎಸ್ ನೀರಿನ ಮಟ್ಟ ಏರಿಕೆಯಾಗಿದೆ. ಒಳ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ರೈತರಲ್ಲಿ ಸ್ವಲ್ಪ ಸಮಾಧಾನ ಮೂಡಿದೆ. ಮತ್ತೊಂದೆಡೆ ತಮಿಳುನಾಡಿಗೆ ನೀರು ಬಿಡುಗಡೆ ಮುಂದುವರಿಕೆಯಾಗಿದ್ದು, ಇಂದು 1,592 ಕ್ಯೂಸೆಕ್ ನೀರು ತಮಿಳುನಾಡಿಗೆ ಹೋಗುತ್ತಿದೆ. ಇದನ್ನೂ ಓದಿ: ಬೆಂಗಳೂರಿನ ನಡುರಸ್ತೆಯಲ್ಲಿ ಹೊತ್ತಿ ಉರಿದ ಬೃಹತ್ ಗಾತ್ರದ ಕ್ರೇನ್
ಕೆಆರ್‌ಎಸ್ ಡ್ಯಾಂ ಇಂದಿನ ನೀರಿನ ಮಟ್ಟ:
ಗರಿಷ್ಠ ಮಟ್ಟ – 124.80 ಅಡಿ
ಇಂದಿನ ಮಟ್ಟ – 99.50 ಅಡಿ
ಒಳ ಹರಿವು – 11,800 ಕ್ಯೂಸೆಕ್
ಹೊರ ಹರಿವು – 1,592 ಕ್ಯೂಸೆಕ್
ಗರಿಷ್ಠ ಸಂಗ್ರಹ ಸಾಮರ್ಥ್ಯ – 49.452 ಟಿಎಂಸಿ
ಇಂದು ಸಂಗ್ರಹ ಇರುವ ನೀರು – 22.453 ಟಿಎಂಸಿ ಇದನ್ನೂ ಓದಿ: Breaking – ಮೆಟ್ರೋ ಹಸಿರು ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯ
ಇದೇ ತಿಂಗಳ ಆರಂಭದಲ್ಲಿ ಸಂಭವಿಸಿದ ಲಿಬಿಯಾದ (Libya) ಎರಡು ಅಣೆಕಟ್ಟುಗಳ (Dam) ಕುಸಿತದಿಂದ ಉಂಟಾದ ಭೀಕರ ಪ್ರವಾಹದಿಂದ 5,300ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಅಲ್ಲದೇ 11 ಸಾವಿರಕ್ಕೂ ಹೆಚ್ಚು ಜನ ಈ ದುರಂತದಲ್ಲಿ ನಾಪತ್ತೆಯಾಗಿದ್ದಾರೆ. ಭೀಕರ ಮಳೆಯಿಂದ ಕುಸಿತಕ್ಕೊಳಗಾದ ಡ್ಯಾಂಗಳ ವಿಚಾರವಾಗಿ ವಿಶ್ವಸಂಸ್ಥೆ (United Nations) ಈ ಹಿಂದೆ ಹಲವು ಬಾರಿ ಎಚ್ಚರಿಸಿದ್ದರೂ ಈ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದರ ಪರಿಣಾಮ ಈ ಭೀಕರ ದುರಂತಕ್ಕೆ ಲಿಬಿಯಾ ಸಾಕ್ಷಿಯಾಗಿದೆ. ಇದೇ ರೀತಿ ವಿಶ್ವದ ನಾನಾ ಭಾಗಗಳ ಹಲವಾರು ಅಣೆಕಟ್ಟುಗಳು ತಮ್ಮ ಆಯಸ್ಸನ್ನು ಮುಗಿಸುತ್ತ ಬಂದಿದ್ದು ಲಿಬಿಯಾ ದುರಂತದಿಂದ ಎಚ್ಚೆತ್ತುಕೊಳ್ಳುವಂತೆ ಕೂಗಿ ಹೇಳುತ್ತಿವೆ.
ಅಣೆಕಟ್ಟುಗಳ ಜೀವಿತಾವಧಿ ಎಷ್ಟು?
ಡ್ಯಾಂಗಳ ಜೀವಿತಾವಧಿಯನ್ನು ಸುಮಾರು 50 ರಿಂದ 100 ವರ್ಷ ಎಂದು ಅಂದಾಜಿಸಲಾಗುತ್ತದೆ. ಈ ಅಂದಾಜು ಸಿಮೆಂಟ್‌ನ ಜೀವಿತಾವಧಿ, ಡ್ಯಾಂನಲ್ಲಿನ ಬಿರುಕು, ಒಣಗುವಿಕೆ, ಭೂಕಂಪ ಅಲ್ಲದೇ ಬಿರುಕುಗಳಲ್ಲಿ ಹುಟ್ಟಬಹುದಾದ ಸಸ್ಯಗಳ ಆಧಾರದ ಮೇಲೆ ಕಡಿಮೆಯಾಗುವ ಸಾಧ್ಯತೆ ಕೂಡ ಇದೆ. ಡ್ಯಾಂಗಳ ನಿರ್ಮಾಣದ ಜಾಗದಲ್ಲಿರುವ ಬಂಡೆಗಳಲ್ಲಿನ ಪಲ್ಲಟ ಇಲ್ಲವೇ ಮೃದುಗೊಳ್ಳುವಿಕೆ ಕೂಡ ಡ್ಯಾಂಗಳ ಕುಸಿತಕ್ಕೆ ಕಾರಣವಾಗಬಹುದು. ಅಣೆಕಟ್ಟುಗಳ ಮರು ನವೀಕರಣ ಸ್ವಲ್ಪ ಪ್ರಮಾಣದಲ್ಲಿ ಜೀವಿತಾವಧಿಯನ್ನೂ ಮುಂದೂಡಬಹುದು. ಆದರೆ ಅದು ಶಾಶ್ವತ ಪರಿಹಾರ ಆಗಲು ಸಾಧ್ಯವಿಲ್ಲ. ಇದನ್ನೂ ಓದಿ: ಸ್ವದೇಶಿ ಆಯುಧ ನಿರ್ಮಾಣ ತಂತ್ರಜ್ಞಾನದಲ್ಲಿ ಭಾರತದ ಸಾಧನೆ; ಶತ್ರುಗಳ ನಿದ್ದೆಗೆಡಿಸಲಿದೆ ಧ್ರುವಾಸ್ತ್ರ
ಕೆಲವೇ ದಿನಗಳಲ್ಲಿ ಭಾರತದ 1000 ಡ್ಯಾಂಗಳು 50 ವರ್ಷ ಪೂರೈಸಲಿವೆ
ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿನ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಅಣೆಕಟ್ಟುಗಳು 50 ವರ್ಷಗಳನ್ನು ಪೂರೈಸಲಿವೆ. ಇದರಿಂದಾಗಿ ಶಿಥಿಲಗೊಂಡಿರುವ ಡ್ಯಾಂಗಳ ಸಂಖ್ಯೆ ಹೆಚ್ಚುವ ಮೂಲಕ ದುರಂತಗಳ ಭೀತಿ ಕೂಡ ಕಾಡುತ್ತಿದೆ. ಈ ವಿಚಾರದಲ್ಲಿ ಅಣೆಕಟ್ಟುಗಳ ಸುತ್ತಲಿನ ಪ್ರದೇಶಗಳಲ್ಲಿನ ಜನರ ಜೀವದ ಬಗ್ಗೆ ಯೋಚಿಸಲೇ ಬೇಕಾದ ಅನಿವಾರ್ಯ ಕೂಡ ಇದೆ. ಈ ಬಗ್ಗೆ ವಿಶ್ವಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದೆ.
1930 ರಿಂದ 1970ರ ನಡುವೆ ವಿಶ್ವಾದ್ಯಂತ 58,700 ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು. ಅವುಗಳ ಕಾಲಾವಧಿಯನ್ನು 50 ರಿಂದ 100 ವರ್ಷಗಳು ಎಂದು ವಿನ್ಯಾಸ ತಜ್ಞರು ಮತ್ತು ಸಿವಿಲ್ ಇಂಜಿನಿಯರ್‌ಗಳು ನಿರ್ಧರಿಸಿದ್ದಾರೆ. ಅದರಂತೆ 2025ಕ್ಕೆ ಭಾರತವೊಂದರಲ್ಲೇ ಸಾವಿರಕ್ಕೂ ಹೆಚ್ಚು ಡ್ಯಾಂಗಳ ನಿರ್ಮಾಣಗೊಂಡು 50 ವರ್ಷಗಳ ಅವಧಿ ಪೂರ್ಣಗೊಳ್ಳಲಿದೆ. ಇದರಿಂದಾಗಿ ಅವುಗಳು ಶಿಥಿಲಗೊಳ್ಳುತ್ತಾ ಹೋಗುತ್ತವೆ ಎಂದು ವಿಶ್ವಸಂಸ್ಥೆ ಅಧ್ಯಯನ ವರದಿಯಲ್ಲಿ ಕೂಡ ತಿಳಿಸಿತ್ತು.
2050ರ ಹೊತ್ತಿಗೆ ಬಹುತೇಕ ಡ್ಯಾಂಗಳ ಕುಸಿತ
ಸದ್ಯ 50 ವರ್ಷ ದಾಟಿರುವ ಮತ್ತು ಅದಕ್ಕೂ ಹಳೆಯದಾದ ಡ್ಯಾಂಗಳು 2050ರ ಹೊತ್ತಿಗೆ ತೀವ್ರ ಶಿಥಿಲಗೊಂಡು ಕುಸಿಯಲು ಆರಂಭಗೊಳ್ಳಲಿವೆ. ಇಲ್ಲವೇ ಸರ್ಕಾರವೇ ಡ್ಯಾಂಗಳನ್ನು ಕೆಡವಲು ಮುಂದಾಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿ ಸಿದ್ಧಪಡಿಸಲು ಅಮೆರಿಕ, ಕೆನಡಾ, ಫ್ರಾನ್ಸ್, ಭಾರತ, ಜಪಾನ್, ಜ್ಯಾಂಬಿಯಾ ಹಾಗೂ ಜಿಂಬಾಬ್ವೆಗಳಲ್ಲಿನ ದೊಡ್ಡ ಅಣೆಕಟ್ಟುಗಳ ಅಧ್ಯಯನವನ್ನೂ ಮಾಡಲಾಗಿದೆ.
ಏಷ್ಯಾ ಒಂದರಲ್ಲೇ ವಿಶ್ವದ 55% ಬೃಹತ್ ಡ್ಯಾಂಗಳು
ವಿಶ್ವದಲ್ಲಿರುವ ಡ್ಯಾಂಗಳ ಪ್ರಮಾಣದ 55%ರಷ್ಟು ಏಷ್ಯಾದ ನಾಲ್ಕೇ ರಾಷ್ಟ್ರಗಳಲ್ಲಿ ನಿರ್ಮಿಸಲಾಗಿದೆ. ಅಂದರೆ ಭಾರತ (India), ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಲ್ಲಿ 32,716 ಬೃಹತ್ ಗಾತ್ರದ ಅಣೆಕಟ್ಟುಗಳಿವೆ. ಇದರಲ್ಲಿ ಬಹುತೇಕ ಡ್ಯಾಂಗಳು ಮುಂದಿನ ಎರಡು ವರ್ಷಗಳಲ್ಲಿ 50 ವರ್ಷಗಳನ್ನು ಪೂರೈಸಲಿವೆ. ಇದನ್ನೂ ಓದಿ: ISKCON ಗೋಶಾಲೆಗಳಿಂದ ಕಟುಕರಿಗೆ ಹಸುಗಳ ಮಾರಾಟ – ಸಂಸದೆ ಮೇನಕಾ ಗಾಂಧಿ ಗಂಭೀರ ಆರೋಪ
ಮಂಡ್ಯ: ಕಾವೇರಿ (Cauvery) ಮತ್ತು ಹೇಮಾವತಿ (Hemavati) ನೀರಿಗಾಗಿ ಸೆಪ್ಟೆಂಬರ್ 26ರಂದು ಕೆಆರ್ ಪೇಟೆ (KR Pete) ಬಂದ್‌ಗೆ (Bandh) ಕರೆ ನೀಡಲಾಗಿದೆ.
ಕಾವೇರಿ ನೀರಿನ ಜೊತೆಗೆ ಹೇಮಾವತಿ ನೀರು ಉಳಿವಿಗಾಗಿ ಬಂದ್‌ಗೆ ಕರೆ ನೀಡಲಾಗಿದೆ. ರೈತ, ಕನ್ನಡ, ದಲಿತ, ಪ್ರಗತಿಪರ ಸಂಘಟನೆಗಳು ಬದ್‌ಗೆ ಕರೆ ನೀಡಿವೆ. ಈ ಬಂದ್‌ಗೆ ಜೆಡಿಎಸ್ ಹಾಗೂ ಬಿಜೆಪಿಯೂ ಬೆಂಬಲ ಸೂಚಿಸಿವೆ. ಇದನ್ನೂ ಓದಿ: ಗೋಮಾಂಸ ಸಾಗಾಟ ಮಾಡುತ್ತಿದ್ದ ಕಾರಿಗೆ ಬೆಂಕಿ ಹಚ್ಚಿದ ಶ್ರೀರಾಮ ಸೇನೆ
ಕೆಆರ್ ಪೇಟೆ ಭಾಗದಲ್ಲಿ ಉಪಯೋಗಕ್ಕೆ ಸಿಗುವುದು ಹೇಮಾವತಿ ನೀರು. ಕೆಆರ್‌ಎಸ್ ಡ್ಯಾಂನಲ್ಲಿ ನೀರು ಖಾಲಿಯಾದರೆ ಹೇಮಾವತಿಯಿಂದ ನೀರು ಬಿಡುಗಡೆಯಾಗಲಿದೆ. ಆಗ ಎರಡೂ ಡ್ಯಾಂನ ನೀರು ಖಾಲಿಯಾಗುವ ಆತಂಕ ಎದುರಾಗಿದೆ. ಹೀಗಾಗಿ ಎರಡು ಡ್ಯಾಂ ನೀರು ರಕ್ಷಣೆಗೆ ಆಗ್ರಹಿಸಿ ಕೆಆರ್ ಪೇಟೆ ಬಂದ್‌ಗೆ ಕರೆ ನೀಡಲಾಗಿದೆ. ಇದನ್ನೂ ಓದಿ: ಬಂದ್ ಮಾಡಿದರೆ ಬ್ರ್ಯಾಂಡ್ ಬೆಂಗಳೂರಿಗೆ ಧಕ್ಕೆ – ಡಿಕೆಶಿ ಹೇಳಿಕೆಗೆ ಆಕ್ರೋಶ
ಕೀವ್: ಉಕ್ರೇನ್ (Ukraine) ಹೃದಯ ಚೂರುಚೂರಾಗಿದ್ದು ನೀಪರ್ ನದಿಗೆ ಅಡ್ಡಲಾಗಿ ನಿರ್ಮಿಸಿದ ನೋವಾ ಕಖೋವ್ಕಾ (Nova Kakhovka Dam) ಜಲಾಶಯವನ್ನು ಸ್ಫೋಟಿಸಲಾಗಿದೆ.
ಸ್ಫೋಟದಿಂದ ದೊಡ್ಡ ಮಟ್ಟದಲ್ಲಿ ನೀರಿನ ಪ್ರವಾಹ ಉಂಟಾಗಿದ್ದು, ತಗ್ಗುಪ್ರದೇಶದ ಜನ ಎದ್ನೋ ಬಿದ್ನೋ ಎಂದು ಓಡಿ ಪ್ರಾಣ ಉಳಿಸಿಕೊಂಡಿದ್ದು ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಖೇರ್ಸಾನ್‍ಗೆ 30 ಕಿಲೋಮೀಟರ್ ದೂರದಲ್ಲಿರುವ ಈ ಡ್ಯಾಂ ಉಕ್ರೇನ್ ಪಾಲಿಗೆ ಜೀವನಾಡಿಯಾಗಿತ್ತು. ಇದನ್ನೂ ಓದಿ: ಕಚ್ಚಾ ತೈಲ ಉತ್ಪಾದನೆ ಕಡಿತಗೊಳಿಸಲು ಮುಂದಾದ ಸೌದಿ – ತೈಲ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆ
Russia blew up Ukraine’s Kakhovka dam wrecking havoc on civilians and the environment downstream on the Dnipro river. Russia’s army was squandered in Ukraine, so it chose to employ water as a weapon. However, this will only increase Ukraine's resolve to drive them off our soil. pic.twitter.com/agdy6ykyhG
ಈ ಡ್ಯಾಂ ಸಮೀಪ ಕಳೆದ ಕೆಲ ದಿನಗಳಿಂದ ಭಾರೀ ದಾಳಿಗಳು ನಡೆಯುತ್ತಿದ್ದವು. ಇದು ರಷ್ಯಾ (Russia) ಕೆಲಸ ಎಂದು ಉಕ್ರೇನ್ ಆರೋಪಿಸುತ್ತಿದೆ. ಆದರೆ ರಷ್ಯಾ ಇದು ನಮ್ಮ ಕೆಲಸವಲ್ಲ. ಇದು ಭಯೋತ್ಪಾದಕ ದಾಳಿ ಎಂದು ತಿರುಗೇಟು ನೀಡಿದೆ.
ಈ ಡ್ಯಾಂ ಎತ್ತರ 30 ಮೀಟರ್ ಇದ್ದು, ನೂರಾರು ಮೀಟರ್ ಉದ್ದ ಇತ್ತು. 1956ರಲ್ಲಿ ಜಲ ವಿದ್ಯುತ್‌ಗಾಗಿ ಈ ಜಲಾಶಯವನ್ನು ನಿರ್ಮಾಣ ಮಾಡಲಾಗಿತ್ತು.
ಬೆಂಗಳೂರು: ರಾಜ್ಯದ ಜಲಾಶಯಗಳ ನೀರಿನ ಮಟ್ಟ (Dam Water level) ಬಹುತೇಕ ಕುಸಿದಿದ್ದು ಸರಿಯಾದ ಸಮಯದಲ್ಲಿ ಮಳೆ (Rain) ಸುರಿಯದೇ ಇದ್ದರೆ ಕಷ್ಟ ಎದುರಾಗುವ ಸಾಧ್ಯತೆಯಿದೆ.
ಮುಂಗಾರು ಮಳೆ (Monsoon Rain) ಇನ್ನೂ ಶುರುವಾಗಿಲ್ಲ. ಒಂದು ವಾರದ ನಂತರ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶಿಸುವ ಸಾಧ್ಯತೆಯಿದೆ. ಮುಂಗಾರು ಪೂರ್ವದಲ್ಲಿ ಸುರಿದ ಮಳೆಯಿಂದ ನದಿ ಹಳ್ಳ ಕೊಳ್ಳಗಳು ತುಂಬಿ ಹರಿದಿಲ್ಲ. ಇದರ ನೇರ ಪರಿಣಾಮ ಜಲಾಶಯಗಳ ಮೇಲೆ ಬಿದ್ದಿದ್ದು, ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಮಟ್ಟ ತಳಕಾಣುತ್ತಿದೆ.
ಲಿಂಗನಮಕ್ಕಿ ಜಲಾಶಯದಲ್ಲಿ (Linganamakki Dam) ನೀರು ಬರಿದಾಗುತ್ತಿದ್ದು ಸದ್ಯ ಇರುವ ನೀರಿನಿಂದ ಇನ್ನು 25 ದಿನಗಳಷ್ಟೇ ವಿದ್ಯುತ್ (Hydel Power) ಉತ್ಪಾದಿಸಬಹುದಾಗಿದೆ. ಶರಾವತಿ ನದಿಪಾತ್ರದಲ್ಲಿ ಬೇಗ ಮಳೆಯಾಗದೇ ಇದ್ದರೆ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಬರೀ ಇದೊಂದೇ ಅಲ್ಲ. ರಾಜ್ಯದ ಬಹುತೇಕ ಎಲ್ಲಾ ಜಲಾಶಯಗಳ ಪರಿಸ್ಥಿತಿ ಇದೇ ರೀತಿಯಿದೆ. ಹೀಗಾಗಿ ಕಳೆದ ವರ್ಷದ ಜೂನ್ 6 ರಂದು ನೀರು ಎಷ್ಟಿತ್ತು? ಇಂದು ಎಷ್ಟಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ. ಇದನ್ನೂ ಓದಿ: ಬಾಡಿಗೆದಾರರೇ ನಿಮಗೆ ಉಚಿತ ವಿದ್ಯುತ್ ಬೇಕೇ – ಷರತ್ತುಗಳನ್ನು ಪೂರ್ಣಗೊಳಿಸಿದ್ರೆ ಮಾತ್ರ ಫ್ರೀ
ಯಾವ ಜಲಾಶಯದಲ್ಲಿ ನೀರು ಎಷ್ಟಿದೆ? ಡ್ಯಾಂ – ಲಿಂಗನಮಕ್ಕಿ ಸಾಮರ್ಥ್ಯ– 151 ಟಿಎಂಸಿ 2023 – 15.44 ಟಿಎಂಸಿ 2022 – 22.02 ಟಿಎಂಸಿ
ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.
ರಾಯ್ಪುರ: ಸರ್ಕಾರಿ ಅಧಿಕಾರಿಯೊಬ್ಬನ ಮೊಬೈಲ್ ನೀರಿಗೆ ಬಿದ್ದಿದ್ದಕ್ಕೆ ಡ್ಯಾಮ್‍ನ ಪೂರ್ತಿ ನೀರನ್ನು ಖಾಲಿ ಮಾಡಿದ ಪ್ರಸಂಗವೊಂದು ಛತ್ತೀಸ್‍ಗಢ (Chhattisgarh) ದ ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್‍ನ ಖೇರ್ಕಟ್ಟಾ ಅಣೆಕಟ್ಟಿನಲ್ಲಿ (Kherkatta Paralkot reservoir) ನಡೆದಿದೆ.
ಖೇರ್ಕಟ್ಟಾ ಅಣೆಕಟ್ಟಿನ ಸುತ್ತ ಭಾನುವಾರ ಸಂಜೆ ಆಹಾರ ಇಲಾಖೆಯ ಆಧಿಕಾರಿ ರಾಜೇಶ್ ವಿಶ್ವಾಸ್ ವಾಯುವಿಹಾರಕ್ಕೆ ತೆರಳಿದ್ದರು. ಹೀಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ತಮ್ಮ ಕೈ ಜಾರಿ ಮೊಬೈಲ್ ಡ್ಯಾಂನೊಳಗೆ ಬಿದ್ದಿದೆ. ಮೊಬೈಲ್ (Mobile) 1 ಲಕ್ಷ ರೂ. ದ್ದಾಗಿದೆ.
ಇದರಿಂದ ಗಲಿಬಿಲಿಗೊಂಡ ಅಧಿಕಾರಿ ನೀರಿಗೆ ಬಿದ್ದ ಮೊಬೈಲ್‍ಗಾಗಿ ಇಡೀ ಅಣೆಕಟ್ಟಿನ ನೀರನ್ನೇ ಖಾಲಿ ಮಾಡುವಂತೆ ಆದೇಶಿಸಿದ್ದಾರೆ. ಅದರಂತೆ ಇತರ ಅಧಿಕಾರಿಗಳು ಸುಮಾರು 21 ಲಕ್ಷ ಲೀಟರ್ ನೀರನ್ನು ಹೊರತೆಗೆದು ಮೊಬೈಲ್ ಹುಡುಕಿ ಕೊಟ್ಟಿದ್ದಾರೆ. ಇದನ್ನೂ ಓದಿ: 72 ವರ್ಷದ ವೃದ್ಧನನ್ನು ಕೊಂದು ತಿಂದ 40 ಮೊಸಳೆಗಳು!
ಪಂಪ್ ಮಾಡಿದ ನೀರು ಉಪಯೋಗಕ್ಕೆ ಯೋಗ್ಯವಲ್ಲ. ಮೊಬೈಲ್ ಫೋನ್ ತನ್ನ ವೈಯಕ್ತಿಕವಾಗಿದ್ದರಿಂದ ದರಲ್ಲಿ ಅನೇಕ ಪ್ರಮುಖರ ಸಂಪರ್ಕಗಳಿವೆ. ಹೀಗಾಗಿ ನೀರು ಖಾಲಿ ಮಾಡಿ ಅದನ್ನು ಹುಡುಕಬೇಕಾಯಿತು. ಅಲ್ಲದೆ ಅಣೆಕಟ್ಟಿನ ನೀರು ಹೊರತೆಗೆಯಲು ಸುಮಾರು 7 ಆವಿರದಿಂದ 8 ಸಾವಿರ ರೂ. ಮೌಲ್ಯದ ಡೀಸೆಲ್ ಬಳಸಲಾಗಿದೆ. ಈ ಬಗ್ಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಂದ ಮೌಖಿಕವಾಗಿ ಆದೇಶ ಹೊರಡಿಸಲಾಗಿತ್ತು. ನನ್ನ ಕ್ರಮದಿಂದ ಯಾರಿಗೂ ಹಾನಿಯಾಗಿಲ್ಲ ಎಂದು ಅಧಿಕಾರಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಧಿಕಾರಿಯ ಬೇಜವಾಬ್ದಾರಿತನದಿಂದ ಸೋಮವಾರದಿಂದ ಗುರುವಾರದವರೆಗೆ ಸುಮಾರು 21 ಲಕ್ಷ ನೀರು ಪೋಲಾಗಿದೆ. ಈ ನೀರನ್ನು ರೈತರು 1.500 ಸಾವಿರ ಕೃಷಿ ಭೂಮಿಗೆ ಬಳಸಿಕೊಳ್ಳಲಾಗುತ್ತಿತ್ತು ಎನ್ನಲಾಗಿತ್ತು. ಅಧಿಕಾರಿಯ ನಡೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಿ ಕಂಕೇರ್ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮಂಡ್ಯ: ಕೆಆರ್‌ಎಸ್ (KRS) ಡ್ಯಾಂ (Dam) ಬಳಿ ಪದೇ ಪದೇ ಚಿರತೆ (Leopard) ಪ್ರತ್ಯಕ್ಷವಾಗುತ್ತಿರುವ ಹಿನ್ನೆಲೆ ವಿಶ್ವ ಪ್ರಸಿದ್ಧ ಬೃಂದಾವನಕ್ಕೆ (Brindavana) ಪ್ರವಾಸಿಗರ ನಿರ್ಬಂಧ ಮುಂದುವರಿದಿದೆ.
ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಇಲ್ಲಿನ ಸಿಬ್ಬಂದಿ ಡ್ಯಾಂನ ಮೆಟ್ಟಿಲು ಬಳಿ ಗಿಡದ ಗಂಟೆಗಳನ್ನು ಕೀಳುವ ಸಂದರ್ಭದಲ್ಲಿ ಚಿರತೆಯೊಂದು ಕಾಣಿಸಿಕೊಂಡಿದೆ. ಇದರಿಂದ ಗಾಬರಿಗೊಂಡ ಸಿಬ್ಬಂದಿ ಅಲ್ಲಿಂದ ಬಂದು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ನಿನ್ನೆ ಒಂದು ದಿನ ತಾತ್ಕಾಲಿಕವಾಗಿ ಚಿರತೆಯ ಭಯದಿಂದ ಪ್ರವಾಸಿಗರಿಗೆ ಬೃಂದಾವನಕ್ಕೆ ನಿರ್ಬಂಧ ಏರಿದ್ರು. ಆದ್ರೆ ಕಳೆದ ರಾತ್ರಿಯೂ ಅದೇ ಚಿರತೆ ಡ್ಯಾಂನ ಪಕ್ಕದಲ್ಲಿ ಓಡಾಡುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಾಗಿ ಇಂದು ಸಹ ಪ್ರವಾಸಿಗರಿಗೆ ನಿರ್ಬಂಧ ಏರಲಾಗಿದೆ. ಭಾನುವಾರ ಪ್ರವಾಸಿಗರಿಂದ ತುಂಬಿ-ತುಳಕಬೇಕಿದ್ದ ಬೃಂದಾವನ, ಪ್ರವಾಸಿಗರೇ ಇಲ್ಲದೇ ಬಣಗುಡುತ್ತಿದೆ. ಇದನ್ನೂ ಓದಿ: ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ಸೋಮಣ್ಣ
ಒಂದು ಕಡೆ ಪ್ರವಾಸಿಗರು ಇಲ್ಲದೇ ಬೃಂದಾವನ ಬಣಗುಡುತ್ತಿದ್ರೆ, ಅತ್ತ ಆಪರೇಷನ್ ಲಿಪರ್ಡ್‍ಗೆ ಅರಣ್ಯ ಇಲಾಖೆ (Forest Department) ಸಿಬ್ಬಂದಿ ಮುಂದಾಗಿದೆ. ನಿನ್ನೆ ಕಾಣಿಸಿಕೊಂಡಿರುವ ಸ್ಥಳದಲ್ಲೇ ಬೋನ್ ಇರಿಸಿ ಬೋನ್‍ನಲ್ಲಿ ನಾಯಿಯನ್ನು (Dog) ಕಟ್ಟಿ ಹಾಕಿ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ಈ ಭಾಗದಲ್ಲಿ ಇದೇ ಮೊದಲು ಅಲ್ಲ. ಈ ಹಿಂದೆ ಎರಡು ಬಾರಿ ಚಿರತೆ ಕಾಣಿಸಿಕೊಂಡಿದ್ದು, ಒಂದು ಬಾರಿ ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಇದೀಗ ಮತ್ತೆ ಚಿರತೆ ಕಾಣಿಸಿಕೊಂಡಿರುವ ಕಾರಣ ಮುಂದಿನ ಆದೇಶದ ವರೆಗೆ ಪ್ರವಾಸಿಗರ ಹಿತದೃಷ್ಟಿಯಿಂದ ಬೃಂದಾವನಕ್ಕೆ ನಿಷೇಧ ಏರಲಾಗಿದೆ. ಇದನ್ನೂ ಓದಿ: RSSನವರು ಹೆಚ್ಚು ಮಕ್ಕಳನ್ನು ಹುಟ್ಟಿಸಲಿ ನಾವು ಹುಟ್ಟಿಸಲ್ಲ: ಅಸಾದುದ್ದೀನ್ ಓವೈಸಿ
Live Tv
[brid partner=56869869 player=32851 video=960834 autoplay=true]