Tag: Dalpati Vijay

  • ಲಿಯೋ ಚಿತ್ರದ ‘ನಾ ರೆಡಿದಾ ವರವಾ’ ಹಾಡಿಗೆ ಭರ್ಜರಿ ರೆಸ್ಪಾನ್ಸ್

    ಲಿಯೋ ಚಿತ್ರದ ‘ನಾ ರೆಡಿದಾ ವರವಾ’ ಹಾಡಿಗೆ ಭರ್ಜರಿ ರೆಸ್ಪಾನ್ಸ್

    ಕಾಲಿವುಡ್​ನ ಜನಪ್ರಿಯ ನಟ ವಿಜಯ್​ (Dalpati Vijay) ಗುರುವಾರ (ಜೂನ್​ 22) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಬುಧವಾರ ಮಧ್ಯರಾತ್ರಿಯೇ ‘ಲಿಯೋ’ (Leo) ಚಿತ್ರತಂಡದವರು ಫಸ್ಟ್​ಲುಕ್​ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ವಿಜಯ್​ ಅವರಿಗೆ ಶುಭಾಶಯ ಕೋರಿದ್ದರು. ಈಗ ಚಿತ್ರದ ಮೊದಲ ಲಿರಿಕಲ್​ ಹಾಡು (Song) ಬಿಡುಗಡೆಯಾಗಿದೆ.

    ‘ನಾ ರೆಡಿದಾ ವರವಾ’ ಎಂಬ ಲಿರಿಕಲ್​ ಹಾಡು ಬಿಡುಗಡೆಯಾಗಿದ್ದು, ಈ ಹಾಡಿಗೆ ವಿಜಯ್​ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಧ್ವನಿಯಾಗಿರುವುದು ವಿಶೇಷ. ಈ ಹಾಡಿಗೆ ವಿಷ್ಣು ಎಡವನ್​ ಸಾಹಿತ್ಯ ರಚಿಸಿದ್ದು, ವಿಜಯ್​ ಸಖತ್​ ಸ್ಟೆಪ್​ ಹಾಕಿದ್ದಾರೆ. ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮೂರು ಮಿಲಿಯನ್​ಗಳಿಗೂ ಹೆಚ್ಚು ವೀಕ್ಷಣೆ ಕಂಡಿದೆ. ಇದನ್ನೂ ಓದಿ:‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

    ‘ಮಾಸ್ಟರ್’ ನಂತರ ನಿರ್ದೇಶಕ ಲೋಕೇಶ್​ ಕನಕರಾಜ್​ (Lokesh Kanakaraj) ಮತ್ತು ವಿಜಯ್ ಜೊತೆಯಾಗಿ ಕೆಲಸ ಮಾಡುತ್ತಿರುವ ‘ಲಿಯೋ’ ಚಿತ್ರವನ್ನು ಸೆವೆನ್​ ಸ್ಕ್ರೀನ್​ ಸ್ಟುಡಿಯೋಸ್​ ಬ್ಯಾನರ್​ನಲ್ಲಿ ಲಲಿತ್​ ಕುಮಾರ್​ ನಿರ್ಮಿಸುತ್ತಿದ್ದಾರೆ. ಇನ್ನು, ನಿರ್ದೇಶನದ ಜೊತೆಗೆ ಕಥೆ ಮತ್ತು ಚಿತ್ರಕಥೆಯನ್ನೂ ರಚಿಸಿದ್ದಾರೆ ವಿಜಯ್​.

     

    ‘ಲಿಯೋ’ ಒಂದು ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಅಕ್ಟೋಬರ್​ 19ರಂದು ಐದು ಭಾಷೆಗಳಲ್ಲಿ  ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಬಾಲಿವುಡ್​ ನಟ ಸಂಜಯ್​ ದತ್​ ಈ ಚಿತ್ರದ ಮೂಲಕ ಕಾಲಿವುಡ್​ಗೆ ಎಂಟ್ರಿ ಕೊಡುತ್ತಿದ್ದು, ವಿಜಯ್​ ಮತ್ತು ಸಂಜಯ್​ ದತ್​ ಜೊತೆಗೆ ತ್ರಿಷಾ, ಅರ್ಜುನ್‌ ಸರ್ಜಾ, ಪ್ರಿಯಾ ಆನಂದ್, ಮನ್ಸೂರ್‌ ಅಲಿ ಖಾನ್‌, ಗೌತಮ್​ ಮೆನನ್​, ಮಿಸ್ಕಿನ್​ ಮುಂತದವರು ಅಭಿನಯಿಸುತ್ತಿದ್ದಾರೆ.

  • ರಾಜಕೀಯ ಅಖಾಡಕ್ಕೆ ನಟ ದಳಪತಿ ವಿಜಯ್ ಗ್ಯಾರಂಟಿ: ಭರ್ಜರಿ ಸಿದ್ಧತೆ

    ರಾಜಕೀಯ ಅಖಾಡಕ್ಕೆ ನಟ ದಳಪತಿ ವಿಜಯ್ ಗ್ಯಾರಂಟಿ: ಭರ್ಜರಿ ಸಿದ್ಧತೆ

    ಮಿಳುನಾಡಿನ (Tamil Nadu) ರಾಜಕಾರಣದಲ್ಲಿ ಬಿರುಗಾಳಿ, ಸುನಾಮಿ ಏಕಕಾಲಕ್ಕೆ ಎದ್ದು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿವೆ. ಒಂದು ಕಡೆ ಬಿಜೆಪಿಯು ಮಾಜಿ ಐಪಿಎಸ್ ಆಫೀಸರ್ ಅಣ್ಣಾಮಲೈ ನೇತೃತ್ವದಲ್ಲಿ ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸಿದ್ದರೆ, ಮತ್ತೊಂದು ಕಡೆ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟ ದಳಪತಿ ವಿಜಯ್ (Dalpati Vijay) ಕೂಡ ಈ ಬಾರಿ ಚುನಾವಣೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆಯನ್ನೇ ಗುರಿಯಾಗಿರಿಸಿಕೊಂಡು ವಿಜಯ್, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ದಳಪತಿ ವಿಜಯ್ ರಾಜಕಾರಣಕ್ಕೆ (Politics) ಬರುತ್ತಾರೆ ಎನ್ನುವ ಸುದ್ದಿ ಹೊಸದೇನೂ ಅಲ್ಲ. ಈಗಾಗಲೇ ಹಲವಾರು ಬಾರಿ ಅವರ ಹೆಸರು ತೇಲಿ ಬಂದಿದೆ. ವಿಜಯ್ ಅವರ ತಂದೆ ರಾಜಕಾರಣಿಯೂ ಆಗಿರುವುದರಿಂದ ಪದೇ ಪದೇ ವಿಜಯ್ ಹೆಸರು ಚುನಾವಣಾ ಕಣದಲ್ಲಿ ಕೇಳಿ ಬಂದಿದೆ. ಪ್ರತಿ ಸಲವೂ ಅದು ಠುಸ್ ಪಟಾಕಿ ಆಗಿದೆ. ಆದರೆ, ಈ ಬಾರಿ ಅವರು ಕಣಕ್ಕೆ ಇಳಿಯೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಲೂಸಿಯಾ ಪವನ್ ನಿರ್ದೇಶನದ ‘ಧೂಮಂ’ ಚಿತ್ರದಲ್ಲಿ ‘ಕೆಜಿಎಫ್’ ರಾಕಿಭಾಯ್ : ಟ್ರೈಲರ್ ರಿಲೀಸ್

    ಸೋಷಿಯಲ್ ಮೀಡಿಯಾಗಳಿಂದ ದೂರವಿದ್ದ ವಿಜಯ್, ಇದೀಗ ಎಲ್ಲ ಸೋಷಿಯಲ್ ಮೀಡಿಯಾ ವೇದಿಕೆಗೆ ಬಂದಿದ್ದಾರೆ. ನಿರಂತರವಾಗಿ ಅಭಿಮಾನಿಗಳ ಜೊತೆ ಸಂವಹನ ಮಾಡುತ್ತಿದ್ದಾರೆ. ಅಲ್ಲದೇ, ತಮಿಳುನಾಡಿನಾದ್ಯಂತ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಟಾಪ್ ಬಂದ ಮಕ್ಕಳಿಗೆ ಬಹುಮಾನವನ್ನು ನೀಡಲು ಮುಂದಾಗಿದ್ದಾರೆ. ಅದು ತಾಲ್ಲೂಕು  ಮತ್ತು ಜಿಲ್ಲಾ ಮಟ್ಟದಲ್ಲಿ ಪರಿಗಣನೇ

    ತೆಗೆದುಕೊಳ್ಳದೇ ಮತಕ್ಷೇತ್ರವನ್ನು ಗುರಿಯಾಗಿರಿಸಿಕೊಂಡು ಬಹುಮಾನ ನೀಡುತ್ತಿದ್ದಾರೆ.

    ವಿಜಯ್ ಮಕ್ಕಳ್ ಇಯಕ್ಕಮ್ (Vijay Makkal Iyakkam) ಎನ್ನುವ ಸಂಸ್ಥೆಯ ಮೂಲಕ ವಿಜಯ್ ಈ ಕೆಲಸಗಳನ್ನು ಮಾಡುತ್ತಿದ್ದಾರೆ. ಒಟ್ಟು 235 ವಿಧಾನಸಭಾ ಕ್ಷೇತ್ರಗಳ ಮಕ್ಕಳಿಗೆ ಬಹುಮಾನ ನೀಡುತ್ತಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ನಗದು ಬಹುಮಾನ ಮತ್ತು ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಈ ಬಾರಿ ಅಷ್ಟೂ ಕ್ಷೇತ್ರಗಳಲ್ಲೂ ವಿಜಯ್ ಅವರ ಪಕ್ಷ ಸ್ಪರ್ಧಿಸಲಿದೆ ಎಂದು ಹೇಳಲಾಗುತ್ತಿದೆ.

  • ಸದ್ಯಕ್ಕಿಲ್ಲ ‘ಕಿರಿಕ್ ಪಾರ್ಟಿ 2’ : ಈಗೇನಿದ್ದರೂ ರಿಚರ್ಡ್ ಆಂಟನಿ ಗುಂಗಿನಲ್ಲಿ ರಕ್ಷಿತ್

    ಸದ್ಯಕ್ಕಿಲ್ಲ ‘ಕಿರಿಕ್ ಪಾರ್ಟಿ 2’ : ಈಗೇನಿದ್ದರೂ ರಿಚರ್ಡ್ ಆಂಟನಿ ಗುಂಗಿನಲ್ಲಿ ರಕ್ಷಿತ್

    ಕ್ಷಿತ್ ಶೆಟ್ಟಿ (Rakshit Shetty) ಅವರ ಮುಂದಿನ ಸಿನಿಮಾ ಯಾವುದು ಎನ್ನುವುದಕ್ಕೆ ಅವರೇ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಸದ್ದಿಲ್ಲದೇ ರಕ್ಷಿತ್ ತಮಿಳಿಗೆ ಹಾರಲಿದ್ದಾರೆ ಎನ್ನುವ ಸುದ್ದಿಗೆ ಗುದ್ದು ಕೊಟ್ಟಿರುವ ಅವರು, ಕನ್ನಡದಲ್ಲೇ ಕೈತುಂಬಾ ಕೆಲಸ ಇರುವಾಗ ಬೇರೆ ಭಾಷೆಗೆ ನಾನ್ಯಾಕೆ ಹೋಗಲಿ ಎನ್ನುವ ಅರ್ಥದಲ್ಲಿ ಅವರು ಸಾಕಷ್ಟು ವಿಷಯಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಂತರ ಕಿರಿಕ್ ಪಾರ್ಟಿ 2 (Kirik Part 2) ಸಿನಿಮಾವನ್ನು ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅದಕ್ಕೂ ಮುನ್ನ ಅವರು ರಿಚರ್ಡ್ ಆಂಟನಿ (Richard Antony) ಬಗ್ಗೆ ತಲೆ ಕೆಡಿಸಿಕೊಂಡಿದ್ದಾರಂತೆ.

    ದಳಪತಿ ವಿಜಯ್ ಜೊತೆ ತಾವು ನಟಿಸುತ್ತಿಲ್ಲ ಎಂದು ಹೇಳುವ ಮೂಲಕ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆಯೂ ಅವರು ಸಮಗ್ರವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ನಾಲ್ಕು ಪ್ರಾಜೆಕ್ಟ್ ಕಾರಣದಿಂದಾಗಿ ತಮಗೆ ನಿದ್ದೆಯೇ ಬರುತ್ತಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಆರೋಗ್ಯದ ಕುರಿತು ಆತಂಕ ಮೂಡುವಂತೆ ಮಾಡಿದ್ದಾರೆ. ‘ಸಿನಿಮಾಗಳು ಯಾವಾಗಲೂ ಇದ್ದದ್ದೆ, ಆರೋಗ್ಯ ನೋಡಿಕೊಳ್ಳಿ. ಚೆನ್ನಾಗಿ ಮಲಗಿ’ ಎಂದು ಅಭಿಮಾನಿಗಳು ಹೇಳುವಂತೆ  ಅಷ್ಟುದ್ದ ಸಿನಿಮಾ ಯಾದಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ‌ ಬಾಲಿವುಡ್ ನಟಿ ಇಲಿಯಾನಾ ಡಿಕ್ರೂಜ್

    ರಕ್ಷಿತ್ ಶೆಟ್ಟಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಂತೆ ಸದ್ಯ, ಸಪ್ತ ಸಾಗರದಾಚೆ ಎಲ್ಲೊ (SSE)ಸಿನಿಮಾ ಕೆಲಸ ಮುಗಿಸಬೇಕಿದೆ. ಅದು ತೆರೆಗೆ ಬರಬೇಕಿದೆ. ನಂತರ ರಿಚರ್ಡ್ ಆಂಟನಿ (RA), ಆನಂತರ ಪುಣ್ಯಕೋಟಿ ಪಾರ್ಟ್ 1 ಮತ್ತು ಪಾರ್ಟ್ 2 (PK 1 And 2) ಇದು ಮುಗಿದ ಮೇಲೆ ಮಿಡ್‍ ವೇ ಟು ಮೋಕ್ಷ (M2M) ಸಿನಿಮಾ ಮಾಡಬೇಕಿದೆಯಂತೆ. ಈ ನಾಲ್ಕು ಸಿನಿಮಾಗಳ ಮಧ್ಯೆ ಬೇರೆ ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ಹೇಳುವ ಮೂಲಕ ತಮಿಳು ಸಿನಿಮಾವನ್ನು ನಿರಾಕರಿಸಿದ್ದಾರೆ.

    ಅಷ್ಟೇ ಅಲ್ಲದೇ ಕಿರಿಕ್ ಪಾರ್ಟಿ 2 (KP2) ಸಿನಿಮಾದ ಬಗ್ಗೆಯೂ ಅವರು ಹಿಂಟ್ ಕೊಟ್ಟಿದ್ದು. ಕಿರಿಕ್ ಪಾರ್ಟಿ 2 ಸಿನಿಮಾದ ಬಗ್ಗೆ ವಿಭಿನ್ನ ಪ್ಲ್ಯಾನ್ ಹೊಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಸುದ್ದಿ ಏನೇ ಹರಿದಾಡಿದರೂ ಅದೆಲ್ಲವೂ ಎಂದಿಗೂ ನಿಜವಾಗುವುದಿಲ್ಲ ಎಂದು ಹೇಳುವ ಮೂಲಕ ದಳಪತಿ ವಿಜಯ್ ಜೊತೆಗಿನ ಸಿನಿಮಾದ ಸುದ್ದಿಯನ್ನು ಅವರು ನಿರಾಕರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತಮಿಳು ಸಿನಿಮಾ ಮಾಡುತ್ತಿಲ್ಲ: ಗಾಬರಿ ಹುಟ್ಟುವಂತೆ ಹೇಳಿದ ರಕ್ಷಿತ್ ಶೆಟ್ಟಿ

    ತಮಿಳು ಸಿನಿಮಾ ಮಾಡುತ್ತಿಲ್ಲ: ಗಾಬರಿ ಹುಟ್ಟುವಂತೆ ಹೇಳಿದ ರಕ್ಷಿತ್ ಶೆಟ್ಟಿ

    ಮಿಳಿನ ಹೆಸರಾಂತ ನಟ ದಳಪತಿ ವಿಜಯ್ (Dalpati Vijay) ಜೊತೆ ರಕ್ಷಿತ್ ಶೆಟ್ಟಿ (Rakshit Shetty) ಸಿನಿಮಾ ಮಾಡಲಿದ್ದಾರೆ ಎನ್ನುವ ವಿಚಾರ ಹಲವು ದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಲೇ ಇತ್ತು. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಮಾತ್ರವಲ್ಲ, ಬಾಲಿವುಡ್ ನಿಂದ ಸಂಜಯ್ ದತ್, ತಮಿಳಿನ ಮತ್ತೋರ್ವ ಹೆಸರಾಂತ ನಟ ಕಮಲ್ ಹಾಸನ್ ಕೂಡ ಇರಲಿದ್ದಾರೆ ಎನ್ನುವುದು ಭಾರೀ ಸುದ್ದಿಗೆ ಕಾರಣವೂ ಆಗಿತ್ತು. ತಮಿಳು ಮತ್ತು ಕನ್ನಡ ಸಿನಿಮಾ ರಂಗದಲ್ಲಿ ಅಷ್ಟೊಂದು ಸುದ್ದಿಯಾದರೂ, ರಕ್ಷಿತ್ ಈವರೆಗೂ ಪ್ರತಿಕ್ರಿಯೆ ನೀಡಿರಲಿಲ್ಲ. ಇದೇ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾ ಮೂಲಕ ಇದಕ್ಕೊಂದು ಉತ್ತರ ನೀಡಿದ್ದಾರೆ.

    ‘ದಳಪತಿ ವಿಜಯ್ ಜೊತೆ ನಾನು ಸಿನಿಮಾ ಮಾಡುತ್ತಿಲ್ಲ’ ಎನ್ನುವ ವಿಚಾರವನ್ನು ಸಿಂಪಲ್ ಆಗಿ ಹೇಳದೇ ಭಯ ಹುಟ್ಟುವ ರೀತಿಯಲ್ಲಿ ಅವರು ಬರೆದುಕೊಂಡಿದ್ದಾರೆ. ನಾಲ್ಕು ಪ್ರಾಜೆಕ್ಟ್ ಕಾರಣದಿಂದಾಗಿ ತಮಗೆ ನಿದ್ದೆಯೇ ಬರುತ್ತಿಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ಆರೋಗ್ಯದ ಕುರಿತು ಆತಂಕ ಮೂಡುವಂತೆ ಮಾಡಿದ್ದಾರೆ. ‘ಸಿನಿಮಾಗಳು ಯಾವಾಗಲೂ ಇದ್ದದ್ದೆ, ಆರೋಗ್ಯ ನೋಡಿಕೊಳ್ಳಿ. ಚೆನ್ನಾಗಿ ಮಲಗಿ’ ಎಂದು ಅಭಿಮಾನಿಗಳು ಹೇಳುವಂತೆ  ಅಷ್ಟುದ್ದ ಸಿನಿಮಾ ಯಾದಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಮಗುವಾದ ಬಳಿಕ ಮಾಲಿವುಡ್‌ನತ್ತ ಪ್ರಣಿತಾ ಸುಭಾಷ್

    ರಕ್ಷಿತ್ ಶೆಟ್ಟಿ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಂತೆ ಸದ್ಯ, ಸಪ್ತ ಸಾಗರದಾಚೆ ಎಲ್ಲೊ (SSE)ಸಿನಿಮಾ ಕೆಲಸ ಮುಗಿಸಬೇಕಿದೆ. ಅದು ತೆರೆಗೆ ಬರಬೇಕಿದೆ. ನಂತರ ರಿಚರ್ಡ್ ಆಂಟನಿ (RA) (Richard Antony), ಆನಂತರ ಪುಣ್ಯಕೋಟಿ (Punyakoti) ಪಾರ್ಟ್ 1 ಮತ್ತು ಪಾರ್ಟ್ 2 (PK 1 And 2) ಇದು ಮುಗಿದ ಮೇಲೆ ಮಿಡ್‍ ವೇ ಟು ಮೋಕ್ಷ (M2M) ಸಿನಿಮಾ ಮಾಡಬೇಕಿದೆಯಂತೆ. ಈ ನಾಲ್ಕು ಸಿನಿಮಾಗಳ ಮಧ್ಯೆ ಬೇರೆ ಹೇಗೆ ಒಪ್ಪಿಕೊಳ್ಳಲು ಸಾಧ್ಯ ಎಂದು ಹೇಳುವ ಮೂಲಕ ತಮಿಳು ಸಿನಿಮಾವನ್ನು ನಿರಾಕರಿಸಿದ್ದಾರೆ.

    ಅಷ್ಟೇ ಅಲ್ಲದೇ ಕಿರಿಕ್ ಪಾರ್ಟಿ 2 (KP2) (Kirik Part 2) ಸಿನಿಮಾದ ಬಗ್ಗೆಯೂ ಅವರು ಹಿಂಟ್ ಕೊಟ್ಟಿದ್ದು. ಕಿರಿಕ್ ಪಾರ್ಟಿ 2 ಸಿನಿಮಾದ ಬಗ್ಗೆ ವಿಭಿನ್ನ ಪ್ಲ್ಯಾನ್ ಹೊಂದಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಸುದ್ದಿ ಏನೇ ಹರಿದಾಡಿದರೂ ಅದೆಲ್ಲವೂ ಎಂದಿಗೂ ನಿಜವಾಗುವುದಿಲ್ಲ ಎಂದು ಹೇಳುವ ಮೂಲಕ ದಳಪತಿ ವಿಜಯ್ ಜೊತೆಗಿನ ಸಿನಿಮಾದ ಸುದ್ದಿಯನ್ನು ಅವರು ನಿರಾಕರಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟಿ ರೇಶ್ಮಾ ಪಸುಪಲೇಟಿ ಅಶ್ಲೀಲ ಮಾತಿಗೆ ವಿಜಯ್ ಫ್ಯಾನ್ಸ್ ಗರಂ

    ನಟಿ ರೇಶ್ಮಾ ಪಸುಪಲೇಟಿ ಅಶ್ಲೀಲ ಮಾತಿಗೆ ವಿಜಯ್ ಫ್ಯಾನ್ಸ್ ಗರಂ

    ವಿವಾದಿತ ಮಾತುಗಳ ಮೂಲಕವೇ ತಮಿಳು ಸಿನಿಮಾ ರಂಗದಲ್ಲಿ ಫೇಮಸ್ ಆದವರು ನಟಿ ರೇಶ್ಮಾ ಪಸುಪಲೇಟಿ. ಬೋಲ್ಡ್ ಮಾತುಗಳಿಂದಾಗಿಯೇ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಅದರಲ್ಲೂ ಅಡಲ್ಟ್ ಮಾತುಗಳನ್ನು ಆಡುವುದೆಂದರೆ ರೇಶ್ಮಾಗೆ ನೀರು ಕುಡಿದಷ್ಟೇ ಸಲೀಸು. ಈ ಬಾರಿ ಅಂಥದ್ದೇ ಮಾತುಗಳಿಂದ ರೇಶ್ಮಾ ವೈರಲ್ ಆಗಿದ್ದಾರೆ. ತಮಿಳಿನ ಖ್ಯಾತ ನಟ ವಿಜಯ್ ಫ್ಯಾನ್ಸ್ ಕಂಗೆಣ್ಣಿಗೆ ಗುರಿಯಾಗಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿರುವ ರೇಶ್ಮಾ, ‘ನಿಮಗೆ ಗನ್ ಪಾಯಿಂಟ್ ಇಟ್ಟು, ಯಾರೊಂದಿಗೆ ಸೆಕ್ಸ್ ಮಾಡುತ್ತೀರಿ?’ ಎಂದು ಕೇಳಲಾದ ಪ್ರಶ್ನೆಗೆ ಕ್ಷಣ ಹೊತ್ತೂ ಯೋಚಿಸದೇ, ಖ್ಯಾತ ನಟ ವಿಜಯ್ ಹೆಸರು ಹೇಳುತ್ತಾರೆ. ‘ಅವರು ಬಯಸಿದರೆ ಯಾವತ್ತಿಗೂ ನಾನು ರೆಡಿ’ ಎಂದು ಬೋಲ್ಡ್ ಮಾತುಗಳನ್ನು ಆಡುವ ಮೂಲಕ ರೇಶ್ಮಾ ವಿವಾದದ ಕಿಡಿ ಹೊತ್ತಿಸಿದ್ದಾರೆ. ವಿಜಯ್ ನನಗೆ ತುಂಬಾ ಇಷ್ಟವೆಂದು ಅವರು ಮಾತನಾಡಿದ್ದಾರೆ.

    ಇದಕ್ಕೂ ಮುನ್ನ ಇದೇ ಸಂದರ್ಶನದಲ್ಲೇ ನಿರೂಪಕಿಯು ‘ಯಾವ ಮಹಿಳೆಯ ಜೊತೆ ನೀವು ಸೆಕ್ಸ್ ಮಾಡುವುದಕ್ಕೆ ಬಯಸುತ್ತೀರಿ?’ ಎಂದು ಪ್ರಶ್ನೆ ಮಾಡುತ್ತಾರೆ. ‘ನನಗೆ ಮಹಿಳೆಯರ ಜೊತೆ ಸೆಕ್ಸ್ ಇಷ್ಟವಿಲ್ಲ. ಪುರುಷರೇ ಆಗಬೇಕು. ಅದರಲ್ಲೂ ವಿಜಯ್ ಜೊತೆ ಎಷ್ಟು ಸಾರಿ ಬೇಕಾದರೂ ಸೆಕ್ಸ್ ಮಾಡುತ್ತೇನೆ’ ಎಂದು ಬೋಲ್ಡ್ ಆಗಿ ಮಾತನಾಡಿದ್ದಾರೆ. ಈ ಸಂದರ್ಶನ ವೈರಲ್ ಆಗುತ್ತಿದ್ದಂತೆಯೇ ವಿಜಯ್ ಫ್ಯಾನ್ಸ್ ನಟಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ: ನಾನು ಆಡಿದ ಮಾತು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ: ವಿವಾದಗಳ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ

    ಪ್ರಚಾರಕ್ಕಾಗಿ ರೇಶ್ಮಾ ಎಂತಹ ಮಾತುಗಳನ್ನೂ ಆಡುವುದಕ್ಕೆ ಸಿದ್ಧರಿದ್ದಾರೆ. ಹಾಗಾಗಿಯೇ ಅವರ ಸಂದರ್ಶನಗಳು ಆಗಾಗ್ಗೆ ಹೀಗೆ ವಿವಾದಕ್ಕೆ ಕಾರಣವಾಗುತ್ತವೆ. ಇಂತಹ ಮಾತುಗಳನ್ನು ಇವರು ಆಡಿದ್ದು ಇದೇ ಮೊದಲೇನೂ ಅಲ್ಲ. ಇಂತಹ ಪ್ರಶ್ನೆಗಳಿಗೆ ಅವರು ಸದಾ ಕಾಯುತ್ತಿರುತ್ತಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಈ ರೀತಿಯ ಮಾತುಗಳನ್ನು ಆಡಿಸುವವರ ವಿರುದ್ಧವೂ ಅಭಿಮಾನಿಗಳು ಧ್ವನಿ ಎತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 14 ವರ್ಷಗಳ ಬಳಿಕ ಮತ್ತೆ ಒಂದಾದ  ಜನಪ್ರಿಯ ಜೋಡಿ ವಿಜಯ್-ತ್ರಿಷಾ

    14 ವರ್ಷಗಳ ಬಳಿಕ ಮತ್ತೆ ಒಂದಾದ ಜನಪ್ರಿಯ ಜೋಡಿ ವಿಜಯ್-ತ್ರಿಷಾ

    ಮಿಳಿನ ಜನಪ್ರಿಯ ಜೋಡಿ ವಿಜಯ್ ಮತ್ತು ತ್ರಿಷಾ ಒಟ್ಟಾಗಿ ನಟಿಸುವುದಕ್ಕಾಗಿ ಬರೋಬ್ಬರಿ 14 ವರ್ಷಗಳನ್ನು ತಗೆದುಕೊಂಡಿದ್ದಾರೆ. ಹದಿನಾಲ್ಕು ವರ್ಷಗಳ ನಂತರ ಈ ಜೋಡಿ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದು, ಇಬ್ಬರು ಅಭಿಮಾನಿಗಳಿಗೆ ಸಹಜವಾಗಿಯೇ ಖುಷಿಯಾಗಿದೆ. ಕಾಲಿವುಡ್ ನಲ್ಲಿ ಅತ್ಯಂತ ಜನಪ್ರಿಯ ಜೋಡಿಯಾಗಿದ್ದ ಇವರು, ಕಾರಣಾಂತರಗಳಿಂದ ಮತ್ತೆ ನಟಿಸುವುದಕ್ಕೆ ಸಾಧ್ಯವಾಗಿರಲಿಲ್ಲ.

    ಇದೀಗ ಲೋಕೇಶ್ ಕನಕರಾಜ್ ಅವರು ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದು, ಈ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ನಟಿಸುತ್ತಿದ್ದರೆ, ವಿಜಯ್ ನಾಯಕ. ಈಗಾಗಲೇ ಸದ್ದಿಲ್ಲದೇ ಚೆನ್ನೈನಲ್ಲಿ ಸಿನಿಮಾ ಕೂಡ ಸೆಟ್ಟೇರಿದೆ. ಸದ್ಯಕ್ಕೆ ಈ ಸಿನಿಮಾಗೆ ದಳಪತಿ 67 ಎಂಬ ಹೆಸರಿನಲ್ಲಿ ಪೂಜೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಟೈಟಲ್‍ ಅನ್ನು ಬಹಿರಂಗ ಪಡಿಸಲಿದ್ದಾರಂತೆ ಚಿತ್ರತಂಡ. ಇದನ್ನೂ ಓದಿ: ನಟಿ ಅಶು ರೆಡ್ಡಿ ಕಾಲು ಹಿಡಿದ ರಾಮ್ ಗೋಪಾಲ್ ವರ್ಮಾ: ನೆಟ್ಟಿಗರು ಶಾಕ್

    ವಿಜಯ್ ಮತ್ತು ತ್ರಿಷಾ ನಟನೆಯ ಕೊನೆಯ ಸಿನಿಮಾ 2008ರಲ್ಲಿ ರಿಲೀಸ್ ಆಗಿತ್ತು. ಕುರುವಿ ಹೆಸರಿನ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಅಷ್ಟೇನೂ ಸದ್ದು ಮಾಡಲಿಲ್ಲ. ಆದರೆ, ಜೋಡಿ ಮಾತ್ರ ಸಖತ್ತಾಗಿತ್ತು. ಯಾಕೆಂದರೆ, ಈ ಹಿಂದೆ ಇದೇ ಜೋಡಿ ಗಿಲ್ಲಿ, ಆದಿ, ತಿರುಪಾಚ್ಚಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಕುರುವಿ ನಂತರ ಇವರು ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಹಾಗಾಗಿ ಹೊಸ ಸಿನಿಮಾದ ಬಗ್ಗೆ ಕುತೂಹಲವಂತೂ ಮೂಡಿದೆ.

    Live Tv
    [brid partner=56869869 player=32851 video=960834 autoplay=true]

  • ಭಾರತದ ಟಾಪ್ 10 ನಟರಲ್ಲಿ ಕನ್ನಡದ ಯಶ್: ಬಾಲಿವುಡ್ ಅಕ್ಷಯ್ ಕುಮಾರ್ ನನ್ನೂ ಹಿಂದಿಕ್ಕಿದ ರಾಕಿಭಾಯ್

    ಭಾರತದ ಟಾಪ್ 10 ನಟರಲ್ಲಿ ಕನ್ನಡದ ಯಶ್: ಬಾಲಿವುಡ್ ಅಕ್ಷಯ್ ಕುಮಾರ್ ನನ್ನೂ ಹಿಂದಿಕ್ಕಿದ ರಾಕಿಭಾಯ್

    ವರೆಗೂ ಭಾರತದ ಟಾಪ್ ನಟರ ಸ್ಥಾನದಲ್ಲಿ ಕನ್ನಡದ (Sandalwood) ನಟರಿಗೆ ಯಾವ ಸ್ಥಾನಗಳು ದೊರೆಯುತ್ತಿರಲಿಲ್ಲ. ಕೇವಲ ಬಾಲಿವುಡ್ ನಟರು ಮಾತ್ರ ಆ ಸ್ಥಾನಗಳಲ್ಲಿ ಮೆರೆಯುತ್ತಿದ್ದರು, ಹೆಚ್ಚೆಂದರೆ ತಮಿಳು ಮತ್ತು ತೆಲುಗು ನಟರು ಇರುತ್ತಿದ್ದರು. ಇದೀಗ ಕನ್ನಡದ ನಟರಿಗೂ ಅಲ್ಲಿ ಸ್ಥಾನ ಸಿಗುತ್ತಿದೆ. ಕೆಜಿಎಫ್ ಸಿನಿಮಾವೊಂದು ಇಂತಹ ಸ್ಥಾನ ದೊರೆಕಿಸಿ ಕೊಡಲು ಯಶ್ (Yash) ಗೆ ನೆರವಾಗಿದೆ. ಹಾಗಾಗಿ ಯಶ್ ಭಾರತೀಯ ಟಾಪ್ ನಟರ ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ.

    ಪ್ರತಿ ವರ್ಷವೂ ಕೆಲ ಸಂಸ್ಥೆಗಳು ಭಾರತದ ಟಾಪ್ ನಟರ ಲಿಸ್ಟ್ ಅನ್ನು ಬಿಡುಗಡೆ ಮಾಡುತ್ತವೆ. ಈ ಬಾರಿ ಆಮ್ಯಾರ್ಕ್ಸ್ ಸಂಸ್ಥೆಯು ಟಾಪ್ ನಟರ ಪಟ್ಟಿಯನ್ನು ರಿಲೀಸ್ ಮಾಡಿದ್ದು, ದಳಪತಿ ವಿಜಯ್ (Dalpati Vijay) ಟಾಪ್ 1 ಸ್ಥಾನವನ್ನು ಪಡೆದುಕೊಂಡಿದ್ದರೆ, ಯಶ್ ಗೆ ಟಾಪ್ 5 ಸ್ಥಾನ ಸಿಕ್ಕಿದೆ. ಪ್ರಭಾಸ್ (Prabhas) ಎರಡನೇ ಸ್ಥಾನ, ಜ್ಯೂನಿಯರ್ ಎನ್.ಟಿ.ಆರ್ ಮೂರನೇ ಸ್ಥಾನ ಹಾಗೂ ಅಲ್ಲು ಅರ್ಜುನ್ ನಾಲ್ಕನೇ ಸ್ಥಾನವನ್ನು ಪಡೆಯುವ ಮೂಲಕ ಟಾಪ್ 5 ಪಟ್ಟಿಯಲ್ಲಿ ದಕ್ಷಿಣದವರಿಗೆ ಸ್ಥಾನ ಸಿಕ್ಕಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಮತ್ತೊಂದು ಅಚ್ಚರಿಯ ಸಂಗತಿಯಂದರೆ, ಬಾಲಿವುಡ್ ನಟರಲ್ಲಿ ಕೇವಲ ಅಕ್ಷಯ್ ಕುಮಾರ್ (Akshay Kumar) ಗೆ ಮಾತ್ರ ಸ್ಥಾನ ದೊರೆತಿದ್ದು ಆರನೇ ಸ್ಥಾನದಲ್ಲಿ ಅಕ್ಷಯ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಾಲಿವುಡ್ ನ ಖ್ಯಾತ ನಟರು ದೂರವೇ ಉಳಿಯುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಅಲ್ಲಿಗೆ ದಕ್ಷಿಣದವರೇ ಪ್ರಾಬಲ್ಯ ಮೆರೆದಿದ್ದಾರೆ. ಖಾನ್ ಪಡೆಯ ಒಬ್ಬನೇ ಒಬ್ಬ ನಟನೂ ಕೂಡ ಈ ಯಾದಿಯಲ್ಲಿ ಕಾಣಿಸಿಕೊಳ್ಳದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

    ಕೆಜಿಎಫ್ ಸಿನಿಮಾದ ಮೂಲಕ ಭಾರತೀಯ ಸಿನಿಮಾ  ರಂಗದ ಗತಿಯನ್ನೇ ಬದಲಿಸಿರುವ ಯಶ್, ಯಾವುದೇ ಸಂಸ್ಥೆಗಳು ಟಾಪ್ (Top) ಪಟ್ಟಿಯನ್ನು ಬಿಡುಗಡೆ ಮಾಡಿದರೂ, ಅದರಲ್ಲಿ ಒಂದು ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಕನ್ನಡದ ಹಿರಿಮೆಯನ್ನು ಹೆಚ್ಚಿಸುತ್ತಿದ್ದಾರೆ. ಕೆಜಿಎಫ್ (KGF)ಸಿನಿಮಾದ ನಂತರ ಬೇರೆ ಯಾವ ಸಿನಿಮಾವನ್ನೂ ಯಶ್ ಒಪ್ಪಿಕೊಳ್ಳದೇ ಇದ್ದರೆ, ಟಾಪ್ ನಲ್ಲಿ ಮಾತ್ರ ಸ್ಥಾನ ಪಡೆದುಕೊಳ್ಳುತ್ತಿರುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]