Tag: Dalpati Vijay

  • ವಿಜಯ್ ಪಡೆದ ಸಂಭಾವನೆ 275 ಕೋಟಿ: ವೈರಲ್ ಆಯ್ತು ವಿಡಿಯೋ

    ವಿಜಯ್ ಪಡೆದ ಸಂಭಾವನೆ 275 ಕೋಟಿ: ವೈರಲ್ ಆಯ್ತು ವಿಡಿಯೋ

    ಳಪತಿ ವಿಜಯ್ (Dalpati Vijay) ಕೊನೆಯ ಚಿತ್ರ ಎನ್ನಲಾದ `ದಳಪತಿ 69′ ಘೋಷಣೆಯ ವೀಡಿಯೋ ವೈರಲ್ ಆಗಿದೆ. ಹೆಚ್ ವಿನೋದ್ ನಿರ್ದೇಶನದ ಈ ಚಿತ್ರವನ್ನ ವಿಜಯ್ ಸಿನಿಮಾ ಕರಿಯರ್‌ನ ಕೊನೆಯ ಚಿತ್ರ ಎನ್ನಲಾಗುತ್ತೆ. ಯಾಕೆಂದರೆ ರಾಜಕೀಯ ಪ್ರವೇಶಿಸಿರುವ ವಿಜಯ್ ಮುಂದಿನ ದಿನಗಳಲ್ಲಿ ಅದರತ್ತ ಸಂಪೂರ್ಣ ಗಮನ ಕೊಡಲಿದ್ದಾರಂತೆ. ಇದೀಗ ದಳಪತಿ 69 ಚಿತ್ರ ಸ್ಯಾಂಡಲ್‌ವುಡ್‌ಗೂ ಕನೆಕ್ಟ್ ಆಗಿದ್ದು ಈ ಚಿತ್ರವನ್ನ ಕನ್ನಡದ `ಕೆವಿಎನ್ ಸಂಸ್ಥೆ’ ನಿರ್ಮಿಸಲಿದೆ.

    `ದಳಪತಿ 69′ ಮೇಲೆ ಬಲು ನಿರೀಕ್ಷೆ ಇರೋದ್ರಿಂದ ಭರ್ತಿ 500 ಕೋಟಿಯಲ್ಲಿ ಚಿತ್ರ ತಯಾರಾಗುತ್ತಿದೆ. ತಮಿಳು ಚಿತ್ರಪ್ರೇಮಿಗಳ ಪಾಲಿನ ಮಾಸ್‌ಮ್ಯಾನ್ ಇನ್ಮುಂದೆ ಬಣ್ಣ ಹಚ್ಚೋದಿಲ್ಲ ಅನ್ನುವ ಕೊರಗಿನ ಮಧ್ಯೆ ದಳಪತಿ 69 ಮೇಲೆ ನಿರೀಕ್ಷೆಯಂತೂ ದುಪ್ಪಟ್ಟಾಗಿದೆ. ಈ ನಡುವೆ ಇನ್ನೊಂದು ವಿಷಯ ಭಾರೀ ಆಶ್ಚರ್ಯ ಹುಟ್ಟಿಸಿದೆ. ಅದುವೇ ವಿಜಯ್ ರೆಮನ್ಯುರೇಶನ್.

    ದಳಪತಿ 69 ಚಿತ್ರಕ್ಕೆ ವಿಜಯ್ ಭರ್ತಿ 275 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾಂತೆ. ಚಿತ್ರದ ಬಜೆಟ್‌ನ ಅರ್ಧ ಭಾಗದಷ್ಟು ವಿಜಯ್ ಸಂಭಾವನೆ ಇರುತ್ತದೆ ಎಂದು ಸುದ್ದಿಯಾಗಿದೆ. ಹಿಂದಿನ `ದಿ ಗೋಟ್’ ಚಿತ್ರಕ್ಕೆ ವಿಜಯ್ ಬರೋಬ್ಬರಿ 200 ಕೋಟಿ ಸಂಭಾವನೆ ಪಡೆದಿದ್ದರು ಎಂಬ ವದಂತಿ ಇದೆ. ಈ ಬೆನ್ನಲ್ಲೇ ಅದಕ್ಕಿಂತಲೂ ಹೆಚ್ಚು 275 ಕೋಟಿ ಹಣ ಸಂಭಾವನೆ ರೂಪದಲ್ಲಿ ವಿಜಯ್ ಪಡೆಯಲಿದ್ದಾರೆ ಎಂಬುದೇ ಕುತೂಹಲದ ಸಂಗತಿ.

    2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ವಿಜಯ್ ಅಣಿಯಾಗುತ್ತಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ. ಲೋಗೋ ಮತ್ತಿತರ ಕೆಲಸಗಳನ್ನ ಮಾಡಿಕೊಂಡು ಬಂದಿದ್ದಾರೆ. ಈ ನಡುವೆ ವರ್ಷ ಕಳೆಯುವದರೊಳಗೆ ವಿಜಯ್ ಒಪ್ಪಿಕೊಂಡ 69ನೇ ಚಿತ್ರ ಮುಗಿಸ ಕೊಡಬೇಕಾಗಿದೆ. ಹೀಗಾಗಿ ಶೀಘ್ರದಲ್ಲೇ ದಳಪತಿ 69 ಚಿತ್ರೀಕರಣ ಶುರುವಾಗಲಿದೆ ಎಂಬ ಮಾಹಿತಿ ಇದೆ. ಇನ್ನು ವಿಜಯ್ ಪಡೆದುಕೊಳ್ತಿರುವ 275ಕೋಟಿ ಸಂಭಾವನೆ ಸುದ್ದಿಯಂತೂ ಇನ್ನುಳಿದ ಸ್ಟಾರ್ ನಟರಿಗೆ ಆಶ್ಚರ್ಯ ಮೂಡಿಸಿದೆ. ಇಲ್ಲಿವರೆಗೆ 200 ಕೋಟಿ ಸಂಭಾವನೆಯನ್ನ ಭಾರತದಲ್ಲಿ ಸ್ಟಾರ್ ನಟರು ನೇರವಾಗಿ ಪಡೆದಿರಲಿಲ್ಲ. ಶೇರ್ ರೂಪದಲ್ಲಿ ಬಂದಿರೋ ಆದಾಯದಲ್ಲಿ ಲೆಕ್ಕ ಚುಕ್ತಾ ಮಾಡಿಕೊಳ್ತಿದ್ದರು. ಅದನ್ನೇ ಸಂಭಾವನೆಯಾಗಿ ಲಾಭ ಗಳಿಸಿಸುತ್ತಿದ್ದ ಹಲವರು ನಟರ ಉದಾಹರಣೆ ಇದೆ. ಆದರೆ ಈಗ ವಿಜಯ್ ಭರ್ತಿ 275 ಕೋಟಿ ಮೊತ್ತದ ರೂಪದಲ್ಲೇ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ವಿಷಯ ಭಾರೀ ಚರ್ಚೆಗೀಡುಮಾಡಿದೆ.

  • ವಿಜಯ್ ಅಭಿಮಾನಿಗಳಿಗೆ ಶಾಕ್ ಕೊಟ್ಟ ನಿರ್ದೇಶಕ ವೆಟ್ರಿಮಾರನ್

    ವಿಜಯ್ ಅಭಿಮಾನಿಗಳಿಗೆ ಶಾಕ್ ಕೊಟ್ಟ ನಿರ್ದೇಶಕ ವೆಟ್ರಿಮಾರನ್

    ರಾಜಕೀಯ ಕಾರಣಕ್ಕಾಗಿ ತಮಿಳಿನ ಹೆಸರಾಂತ ನಟ ದಳಪತಿ ವಿಜಯ್ (Dalpati Vijay) ಶೀಘ್ರದಲ್ಲೇ ಚಿತ್ರರಂಗ ತೊರೆಯಲಿದ್ದಾರೆ ಎನ್ನುವ ಗುಸುಗುಸು ಕೇಳಿ ಬರುತ್ತಿದೆ. ಕೈಯಲ್ಲಿರೋ ಪ್ರಾಜೆಕ್ಟ್ ಮುಗಿದ ತಕ್ಷಣವೇ ಅವರು ರಾಜಕಾರಣದಲ್ಲಿ ಸಕ್ರೀಯರಾಗಿ, ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ಅವರ ಆಪ್ತರ ಮಾಹಿತಿ.

    ವಿಜಯ್ ಒಪ್ಪಿಕೊಂಡಂತೆ ಅವರ 69ನೇ ಸಿನಿಮಾವೇ ಕೊನೆಯ ಚಿತ್ರ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ವೆಟ್ರಿ ಮಾರನ್ (Vetrimaran) ನಿರ್ದೇಶನ ಮಾಡಲಿದ್ದಾರೆ ಎಂದು ಘೋಷಣೆಯೂ ಆಗಿದೆ. ಆದರೆ, ಈ ವಿಚಾರದಲ್ಲಿ ವೆಟ್ರಿ ಮಾರನ್ ಶಾಕಿಂಗ್ ಸಂಗತಿಯೊಂದನ್ನು ಹೇಳಿಕೊಂಡಿದ್ದಾರೆ. ಈ ಮಾತು ವಿಜಯ್ ಅಭಿಮಾನಿಗಳಿಗೆ ಶಾಕ್ ನೀಡಿದೆ.

    ವೆಟ್ರಿಮಾರನ್ ಮತ್ತು ವಿಜಯ್ ಕಾಂಬಿನೇಷನ್ (Combination) ಚಿತ್ರವೆಂದರೆ ಕಾಯುವಿಕೆ ಸಹಜ. ಮತ್ತೊಂದು ಅದ್ಭುತ ಸಿನಿಮಾ ತೆರೆಯ ಮೇಲೆ ಬರಲಿದೆ ಎಂದೇ ಅಭಿಮಾನಿಗಳ ಆಸೆ ಆಗಿತ್ತು. ಆದರೆ, ಈ ಸಿನಿಮಾ ತೆರೆ ಕಾಣೋದು ಅನುಮಾನ ಎಂದು ವೆಟ್ರಿ ಹೇಳಿಕೊಂಡಿದ್ದಾರೆ. ಈ ಮಾತು ಅಭಿಮಾನಿಗಳಲ್ಲಿ ನಿರಾಸೆ ತಂದಿದ್ದು ಸುಳ್ಳಲ್ಲ. ಯಾಕೆ ಅವರು ಹಾಗೆ ಹೇಳಿದರು ಎನ್ನುವುದನ್ನು ಮುಂದಿನ ದಿನಗಳಲ್ಲಿ ಅವರೇ ಸ್ಪಷ್ಟನೆ ನೀಡಬಹುದು.

    ವಿಜಯ್ 69ನೇ ಚಿತ್ರಕ್ಕೆ ಸಮಂತಾ (Samantha) ನಾಯಕಿಯಾಗಿ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಈ ಚಿತ್ರಕ್ಕೆ ಖ್ಯಾತ ನಿರ್ಮಾಣ ಸಂಸ್ಥೆಯೊಂದು ನಿರ್ಮಾಣದ ಹೊಣೆ ಹೊತ್ತಿದೆ ಎನ್ನುವ ಸುದ್ದಿಯೂ ಇತ್ತು. ಆದರೆ, ಸಿನಿಮಾನೇ ಬರೋದಿಲ್ಲ ಎನ್ನುವ ಸುದ್ದಿ ಆಘಾತ ಮೂಡಿಸಿದೆ.

  • ದಳಪತಿ ವಿಜಯ್ ನಟನೆಯ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್

    ದಳಪತಿ ವಿಜಯ್ ನಟನೆಯ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್

    ಸರಾ ಹಬ್ಬದಂದು ಚಾಲನೆ ನೀಡಿದ್ದ ದಳಪತಿ ವಿಜಯ್ ನಟನೆಯ 68ನೇ ಸಿನಿಮಾಗೆ ಟೈಟಲ್ (Title) ಫಿಕ್ಸ್ ಆಗಿದೆ. ಹೊಸ ವರ್ಷದ ದಿನದಂದು ಈ ಚಿತ್ರದ ಶೀರ್ಷಿಕೆಯನ್ನು ಅನಾವರಣ ಮಾಡಿದ್ದು, ಚಿತ್ರಕ್ಕೆ ದ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಎಂದು ಹೆಸರಿಡಲಾಗಿದೆ. ಇಷ್ಟುದ್ದದ ಟೈಟಲ್ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

    ಕಾಲಿವುಡ್‌ನಲ್ಲಿ (Kollywood) ವಿಜಯ್‌ಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಇದೆ. ಅವರ ಸಿನಿಮಾಗಾಗಿಯೇ ಕಾದು ಕೂರುವ ಅಭಿಮಾನಿಗಳಿದ್ದಾರೆ. ಈ ಹಿಂದೆ ‘ಲಿಯೋ’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡಿತ್ತು.  ಈ ಸಮಯದಲ್ಲೇ ಹೊಸ ಸಿನಿಮಾದತ್ತ ವಿಜಯ್ ಮುಖ ಮಾಡಿದ್ದರು.

    ವಿಜಯ್ ನಟನೆಯ ದ ಗ್ರೇಟೆಸ್ಟ್ ಆಫ್ ಆಲ್ ಟೈಮ್  ಚಿತ್ರಕ್ಕೆ ವೆಂಕಟ್ ಪ್ರಭು (Venkat Prabhu) ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ದಸರಾ ಹಬ್ಬದ (ಅ.24) ಶುಭ ಸಂದರ್ಭದಲ್ಲಿ ಅದ್ದೂರಿಯಾಗಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿತ್ತು. ಚಿತ್ರದ ದೊಡ್ಡ ತಾರಾ ಬಳಗ ಈ ಸಮಾರಂಭದಲ್ಲಿ ಭಾಗಿಯಾಗಿತ್ತು.

    ದಳಪತಿ ವಿಜಯ್ ಜೊತೆ ಬಹುಭಾಷಾ ನಟ ಕನ್ನಡಿಗ ಪ್ರಭುದೇವ (Prabhudeva), ಸ್ನೇಹಾ, ಲೈಲಾ, ಮೀನಾಕ್ಷಿ ಚೌಧರಿ, ಜಯರಾಮ್, ಯೋಗಿ ಬಾಬು (Yogi Babu) ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಮುಹೂರ್ತ ಕಾರ್ಯಕ್ರಮದಲ್ಲಿಯೂ ಅವರೆಲ್ಲ ಭಾಗಿಯಾಗಿದ್ದರು.

  • ಬಿಡುಗಡೆಗೂ ಮುನ್ನ ‘ಲಿಯೋ’ ಸಿನಿಮಾದ ದೃಶ್ಯ ಲೀಕ್: ಟೀಮ್ ಕಿಡಿಕಿಡಿ

    ಬಿಡುಗಡೆಗೂ ಮುನ್ನ ‘ಲಿಯೋ’ ಸಿನಿಮಾದ ದೃಶ್ಯ ಲೀಕ್: ಟೀಮ್ ಕಿಡಿಕಿಡಿ

    ನಾಳೆ ವಿಶ್ವದಾದ್ಯಂತ ದಳಪತಿ ವಿಜಯ್  ಅವರ ಲಿಯೋ ಸಿನಿಮಾ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಆರಂಭಿಕ ಕೆಲ ದೃಶ್ಯಗಳನ್ನು ಆನ್ ಲೈನ್ ನಲ್ಲಿ ಸೋರಿಕೆ (Scene Leek) ಆಗಿವೆ. ಇದು ಥಿಯೇಟರ್ ನಿಂದ ಸೋರಿಕೆಯಾದ ದೃಶ್ಯವಲ್ಲ ಎಂದು ಕೆಲವರು ಅಭಿಪ್ರಾಯ ಪಟ್ಟರೆ ಇನ್ನೂ ಕೆಲವರು ಇದು ಡಿಲಿಟೆಡ್ ದೃಶ್ಯವೆಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಟೀಮ್‍ ಗೆ ಇದು ನುಂಗಲಾರದ ತುತ್ತಾಗಿದೆ.

    ಕಾನೂನು ಸಂಕಷ್ಟ

    ಬಹು ನಿರೀಕ್ಷಿತ ಲಿಯೋ (Leo) ಸಿನಿಮಾ ಅಕ್ಟೋಬರ್ 19ರಂದು ವಿಶ್ವದಾದ್ಯಂತ ರಿಲೀಸ್ ಗೆ ಸಿದ್ಧತೆ ಮಾಡಿಕೊಂಡಿದೆ. ಆದರೆ, ತೆಲುಗಿನಲ್ಲಿ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಕನ್ನಡ, ಮಲಯಾಳಂ, ಹಿಂದಿ, ತಮಿಳಿನಲ್ಲಿ ಈ ಸಿನಿಮಾ ಏಕಕಾಲದಲ್ಲಿ ಬಿಡುಗಡೆಯಾದರೆ, ತೆಲುಗಿನಲ್ಲಿ ಅಕ್ಟೋಬರ್ 20ರವರೆಗೂ ಕಾಯುವುದು ಅನಿವಾರ್ಯವಾಗಿದೆ.

    ಲಿಯೋ ಸಿನಿಮಾದ ಶೀರ್ಷಿಕೆಯ ಕುರಿತಂತೆ ಸಿತಾರಾ ಎಂಟರ್ ಟೈನ್ಮೆಂಟ್ ನಿರ್ಮಾಪಕ ನಾಗ ವಂಶಿ ಕೋರ್ಟು ಮೆಟ್ಟಿಲು ಏರಿದ್ದರು. ಈ ಟೈಟಲ್ ನಾಗ ವಂಶಿ ಅವರಿಗೆ ಸೇರಿದ್ದು ಆಗಿದ್ದು. ಹಾಗಾಗಿ ಈ ಟೈಟಲ್ ನಲ್ಲಿ ಸಿನಿಮಾ ರಿಲೀಸ್ ಮಾಡದಂತೆ ಮನವಿ ಮಾಡಿಕೊಂಡಿದ್ದರು. ನಿನ್ನೆ ಹೈದರಾಬಾದ್ ನ ಸಿಟಿ ಸಿವಿಲ್ ನ್ಯಾಯಾಲಯವು ತೆಲುಗಿನಲ್ಲಿ ಲಿಯೋ ಶೀರ್ಷಿಕೆ ಬಳಕೆ ಕುರಿತಂತೆ ತಡೆಯಾಜ್ಞೆ (Injunction) ನೀಡಿದೆ.

    ಅಕ್ಟೋಬರ್ 20ನೇ ತಾರೀಖಿನವರೆಗೂ ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡದಂತೆ ಮಾನ್ಯ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಹೀಗಾಗಿ ಸಹಜವಾಗಿಯೇ ದಳಪತಿ ವಿಜಯ್ (Dalpati Vijay) ಅಭಿಮಾನಿಗಳಿಗೆ ನಿರಾಸೆ ಆಗಿದೆ. ಅಕ್ಟೋಬರ್ 20ರಂದು ನ್ಯಾಯಾಲಯ ಏನು ಹೇಳಲಿದೆ ಎಂದು ಅಭಿಮಾನಿಗಳು ಕಾದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಲುಗಿನಲ್ಲಿ ‘ಲಿಯೋ’ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ

    ತೆಲುಗಿನಲ್ಲಿ ‘ಲಿಯೋ’ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ

    ಹು ನಿರೀಕ್ಷಿತ ಲಿಯೋ (Leo) ಸಿನಿಮಾ ಅಕ್ಟೋಬರ್ 19ರಂದು ವಿಶ್ವದಾದ್ಯಂತ ರಿಲೀಸ್ ಗೆ ಸಿದ್ಧತೆ ಮಾಡಿಕೊಂಡಿದೆ. ಆದರೆ, ತೆಲುಗಿನಲ್ಲಿ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಕನ್ನಡ, ಮಲಯಾಳಂ, ಹಿಂದಿ, ತಮಿಳಿನಲ್ಲಿ ಈ ಸಿನಿಮಾ ಏಕಕಾಲದಲ್ಲಿ ಬಿಡುಗಡೆಯಾದರೆ, ತೆಲುಗಿನಲ್ಲಿ ಅಕ್ಟೋಬರ್ 20ರವರೆಗೂ ಕಾಯುವುದು ಅನಿವಾರ್ಯವಾಗಿದೆ.

    ಲಿಯೋ ಸಿನಿಮಾದ ಶೀರ್ಷಿಕೆಯ ಕುರಿತಂತೆ ಸಿತಾರಾ ಎಂಟರ್ ಟೈನ್ಮೆಂಟ್ ನಿರ್ಮಾಪಕ ನಾಗ ವಂಶಿ ಕೋರ್ಟು ಮೆಟ್ಟಿಲು ಏರಿದ್ದರು. ಈ ಟೈಟಲ್ ನಾಗ ವಂಶಿ ಅವರಿಗೆ ಸೇರಿದ್ದು ಆಗಿದ್ದು. ಹಾಗಾಗಿ ಈ ಟೈಟಲ್ ನಲ್ಲಿ ಸಿನಿಮಾ ರಿಲೀಸ್ ಮಾಡದಂತೆ ಮನವಿ ಮಾಡಿಕೊಂಡಿದ್ದರು. ನಿನ್ನೆ ಹೈದರಾಬಾದ್ ನ ಸಿಟಿ ಸಿವಿಲ್ ನ್ಯಾಯಾಲಯವು ತೆಲುಗಿನಲ್ಲಿ ಲಿಯೋ ಶೀರ್ಷಿಕೆ ಬಳಕೆ ಕುರಿತಂತೆ ತಡೆಯಾಜ್ಞೆ (Injunction) ನೀಡಿದೆ.

    ಅಕ್ಟೋಬರ್ 20ನೇ ತಾರೀಖಿನವರೆಗೂ ತೆಲುಗು ಭಾಷೆಯಲ್ಲಿ ಬಿಡುಗಡೆ ಮಾಡದಂತೆ ಮಾನ್ಯ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಹೀಗಾಗಿ ಸಹಜವಾಗಿಯೇ ದಳಪತಿ ವಿಜಯ್ (Dalpati Vijay) ಅಭಿಮಾನಿಗಳಿಗೆ ನಿರಾಸೆ ಆಗಿದೆ. ಅಕ್ಟೋಬರ್ 20ರಂದು ನ್ಯಾಯಾಲಯ ಏನು ಹೇಳಲಿದೆ ಎಂದು ಅಭಿಮಾನಿಗಳು ಕಾದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಲಿಯೋ’ ರಿಲೀಸ್ ಡೇಟ್ ಘೋಷಣೆ: ಕರ್ನಾಟಕದಲ್ಲಿ ಬಿಡುಗಡೆ ಆಗತ್ತಾ?

    ‘ಲಿಯೋ’ ರಿಲೀಸ್ ಡೇಟ್ ಘೋಷಣೆ: ಕರ್ನಾಟಕದಲ್ಲಿ ಬಿಡುಗಡೆ ಆಗತ್ತಾ?

    ಕಾವೇರಿ (Cauvery) ನದಿ ನೀರಿನ ಹೋರಾಟ ಮತ್ತು ತಮಿಳು ಸಂಘಟನೆಗಳು ಕನ್ನಡ ಸಿನಿಮಾವನ್ನು ಬ್ಯಾನ್ ಮಾಡುವಂತಹ ಹೇಳಿಕೆಗಳ ಪರಿಣಾಮವಾಗಿ ‘ಲಿಯೋ’ ಸಿನಿಮಾ ಕನ್ನಡದಲ್ಲಿ(Karnataka)  ಬಿಡುಗಡೆ ಆಗುತ್ತಾ ಎನ್ನುವ ಅನುಮಾನ ಶುರುವಾಗಿದೆ. ತಮಿಳಿನ ಖ್ಯಾತ ನಟ ವಿಜಯ್ ನಟನೆಯ ಈ ಸಿನಿಮಾ ತನ್ನದೇ ಆದ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಆದರೆ, ಕಾವೇರಿ ಹೋರಾಟದ ಹಿನ್ನೆಲೆಯಲ್ಲಿ ತಮಿಳು ಚಿತ್ರವನ್ನು ಬಿಡುಗಡೆ ಮಾಡಬಾರದು ಎಂದು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹಲವರು ಆಗ್ರಹಿಸಿದ್ದಾರೆ. ಹೀಗಾಗಿ ಲಿಯೋ ಟೀಮ್ ಏನು ಮಾಡಲಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ.

    ಕೇರಳದಲ್ಲಿ ಮತ್ತೊಂದು ರೀತಿಯ ಬಿಸಿ  

    ದಳಪತಿ ವಿಜಯ್  (Vijay) ನಟನೆಯ, ಬಹುನಿರೀಕ್ಷಿತ ‘ಲಿಯೋ’ (Leo) ಸಿನಿಮಾವನ್ನು ಬೈಕಾಟ್ (Boycott) ಮಾಡಬೇಕು ಎನ್ನುವ ಕೂಗು ಕೇರಳದಲ್ಲಿ (Kerala) ಕೇಳಿ ಬರುತ್ತಿದೆ. ಲಿಯೋ ಸಿನಿಮಾವನ್ನು ಬೈಕಾಟ್ ಮಾಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಬೇರೆ ಮಾಡಲಾಗುತ್ತಿದೆ. ಹೀಗಾಗಿ ಸಹಜವಾಗಿಯೇ ನಿರ್ಮಾಪಕರಿಗೆ ಆತಂಕ ಎದುರಾಗಿದೆ.

    ತಮಿಳು ನಟ ವಿಜಯ್ ಮತ್ತು ಮಲಯಾಳಂ ನಟ ಮೋಹನ್ ಲಾಲ್ (Mohanlal) ಅಭಿಮಾನಿಗಳು ಯಾವಾಗಲೂ ಕಿತ್ತಾಡುತ್ತಿರುತ್ತಾರೆ. ಈ ಜೋಡಿ ನಟನೆಯ ‘ಜಿಲ್ಲಾ’ ಸಿನಿಮಾದ ಸಂದರ್ಭದಲ್ಲಿ ವಿಜಯ್ ಅಭಿಮಾನಿಯೊಬ್ಬ ಮೋಹನ್ ಲಾಲ್ ಅವರಿಗೆ ಕೆಟ್ಟದ್ದಾಗಿ ಕಾಮೆಂಟ್ ಮಾಡಿದ್ದ, ಅಲ್ಲಿಂದ ಈ ಇಬ್ಬರ ಫ್ಯಾನ್ಸ್ ವಾರ್ ಶುರುವಾಗಿತ್ತು. ವಿಜಯ್ ಸಿನಿಮಾ ರಿಲೀಸ್ ಗೆ ಬಂದಾಗೆಲ್ಲ  ಬೈಕಾಟ್ ಕೂಗು ಕೇಳಿ ಬರುತ್ತದೆ.

    ‘ಲಿಯೋ’ ಚಿತ್ರದ ಬಿಡುಗಡೆಗೆ ಇನ್ನೊಂದು ತಿಂಗಳು ಮಾತ್ರ ಬಾಕಿ ಇದ್ದು, ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಈ ಮಧ್ಯೆ, ಚಿತ್ರವನ್ನು ನಿರ್ಮಿಸುತ್ತಿರುವ 7 ಸ್ಕ್ರೀನ್‍ ಸ್ಟುಡಿಯೋ ಸಂಸ್ಥೆಯು, ಚಿತ್ರದ ಕನ್ನಡ ಪೋಸ್ಟರ್ ಬಿಡುಗಡೆ ಮಾಡಿದೆ.

    ತಮಿಳಿನ ಜನಪ್ರಿಯ ನಿರ್ದೇಶಕರಾದ ಲೋಕೇಶ್‍ ಕನಕರಾಜ್‍ ನಿರ್ದೇಶಿಸಿರುವ ‘ಲಿಯೋ’ ಚಿತ್ರದಲ್ಲಿ ‘ಇಳಯದಳಪತಿ’ ವಿಜಯ್‍, ತ್ರಿಷಾ, ಸಂಜಯ್‍ ದತ್‍, ಅರ್ಜುನ್‍ ಸರ್ಜಾ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಲಿಯೋ’ ಚಿತ್ರವು ಒಂದು ಅದ್ಭುತ ಅನುಭವ ನೀಡುವ ಚಿತ್ರವಾಗಿ ರೂಪುಗೊಂಡಿದ್ದು, ಇದರಲ್ಲಿ ಆಕ್ಷನ್‍, ಡ್ರಾಮಾ, ಎಮೋಷನ್‍ ಸೇರಿದಂತೆ ಎಲ್ಲಾ ಭಾಷೆಯ ಮತ್ತು ಪ್ರದೇಶದ ಜನರನ್ನು ಆಕರ್ಷಿಸುವಂತಹ ಅಂಶಗಳಿವೆ.

    ಇನ್ನು, ಚಿತ್ರದ ಕರ್ನಾಟಕ ವಿತರಣೆಯ ಹಕ್ಕುಗಳನ್ನು ಸ್ವಾಗತ್‍ ಎಂಟರ್ ಪ್ರೈಸಸ್ ಸಂಸ್ಥೆಯು ತನ್ನದಾಗಿಸಿಕೊಂಡಿದ್ದು, ಚಿತ್ರವನ್ನು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದೆ. ‘ಲಿಯೋ’ ಚಿತ್ರವು ಅಕ್ಟೋಬರ್‍ 19ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖ್ಯಾತನಟ ದಳಪತಿ ವಿಜಯ್ ಪುತ್ರ ಈಗ ಡೈರೆಕ್ಟರ್: ಲೈಕಾ ನಿರ್ಮಾಣ

    ಖ್ಯಾತನಟ ದಳಪತಿ ವಿಜಯ್ ಪುತ್ರ ಈಗ ಡೈರೆಕ್ಟರ್: ಲೈಕಾ ನಿರ್ಮಾಣ

    ಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಲೈಕಾ (Lyca Production) ಕನ್ನಡಕ್ಕೂ ಪದಾರ್ಪಣೆ ಮಾಡಿದೆ. ನಿಖಿಲ್ ಕುಮಾರಸ್ವಾಮಿ ಹೊಸ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಈ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಇದೀಗ ಮತ್ತೊಂದು ಮೆಗಾ ಅನೌನ್ಸ್ ಮೆಂಟ್ ಮಾಡಿದೆ. ತಮಿಳು ಚಿತ್ರರಂಗದ ಖ್ಯಾತ ನಟ ಇಳಯ ದಳಪತಿ ವಿಜಯ್ (Dalpati Vijay) ಸುಪುತ್ರ ನಿರ್ದೇಶನದ ಚೊಚ್ಚಲ ಸಿನಿಮಾಗೆ ಲೈಕಾ ಹಣ ಹಾಕುತ್ತಿದೆ.

    ಸ್ಟಾರ್ ಸಿನಿಮಾ ಮೇಕರ್ಸ್ ಜೊತೆಗೆ ಯುವ ಪ್ರತಿಭೆಗಳಿಗೂ ವೇದಿಕೆ ಕಲ್ಪಿಸುತ್ತಿರುವ ಲೈಕಾ ಸೃರ್ಷಿಕರ್ತ ಸುಭಾಷ್ ಕರಣ್ (Subhash Karan) ಈಗ ವಿಜಯ್ ಪುತ್ರ ಜೇಸನ್ ಸಂಜಯ್ ವಿಜಯ್ ಗೂ ಹೊಸ ಹೆಜ್ಜೆಗೆ ಸಾಥ್ ಕೊಟ್ಟಿದ್ದಾರೆ. ಜೇಸನ್ ಸಂಜಯ್ ವಿಜಯ್ (Jason Sanjay Vijay) ಜೊತೆ ಕೈ ಜೋಡಿಸಿರುವ ಸುಭಾಸ್ ಕರಣ್ ಮಾತನಾಡಿ, ಲೈಕಾ ಪ್ರೊಡಕ್ಷನ್ ಹೌಸ್ ಸದಾ ಯುವ ಪ್ರತಿಭೆಗಳಿಗೆ ವೇದಿಕೆ ನಿರ್ಮಾಣ ಮಾಡಿಕೊಡುತ್ತಿದೆ. ನಮ್ಮ ಮುಂದಿನ ಪ್ರಾಜೆಕ್ಟ್ ಜೇಸನ್ ಸಂಜಯ್ ವಿಜಯ್ ಅನ್ನೋದನ್ನು ಘೋಷಿಸಲು ಖುಷಿಯಾಗುತ್ತಿದೆ’ ಎನ್ನುತ್ತಾರೆ. ಇದನ್ನೂ ಓದಿ:ಶಾರುಖ್ ಖಾನ್ ಮನೆಗೆ ಹೆಚ್ಚಿನ ಭದ್ರತೆ: ಮನೆ ಮುಂದೆ ಪ್ರತಿಭಟನೆ

    ಜೇಸನ್ ಲಂಡನ್‌ನಲ್ಲಿ ಬಿಎ ಚಿತ್ರಕಥೆಯಲ್ಲಿ ಪರಿಪೂರ್ಣ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದ್ದಾರೆ. ನಂತರ ಟೊರೊಂಟೊ ಫಿಲ್ಮ್ ಸ್ಕೂಲ್‌ನಲ್ಲಿ ಫಿಲ್ಮ್ ಪ್ರೊಡಕ್ಷನ್ ಡಿಪ್ಲೊಮಾವನ್ನು ಪಡೆದಿದ್ದಾರೆ. ‘ಅವರು ಸ್ಕ್ರಿಪ್ಟ್ ಅನ್ನು ವಿವರಿಸಿದಾಗ, ಅದು ನಮಗೆ ಸಿನಿಮೀಯ ಅನುಭವವನ್ನು ನೀಡಿದ್ದರಿಂದ ನಾವು ಚಿತ್ರ ನಿರ್ಮಾಣ ಮಾಡಲು ಮುಂದೆ ಬಂದೆವು. ಅವರು ಚಿತ್ರಕಥೆ ಮತ್ತು ನಿರ್ದೇಶನದಲ್ಲಿ ಪರಿಣತಿ ಹೊಂದಿದ್ದಾರೆ. ಜೇಸನ್ ಸಂಜಯ್ ವಿಜಯ್ ಅವರೊಂದಿಗೆ ಕೆಲಸ ಮಾಡುವ ಅದ್ಭುತ ಅನುಭವಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ. ಉದಯೋನ್ಮುಖ ತಾರೆಗಳು ಚಿತ್ರದಲ್ಲಿ ನಟಿಸಲಿದ್ದಾರೆ’ ಎನ್ನುವುದು ಲೈಕಾ ಸಂಸ್ಥೆಯ ಮಾತು.

    ನಿರ್ದೇಶಕ ಜೇಸನ್ ಸಂಜಯ್ ವಿಜಯ್ ಮಾತನಾಡಿ, ಲೈಕಾ ಪ್ರೊಡಕ್ಷನ್ಸ್‌ನಂತಹ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಡಿ ನನ್ನ ಮೊದಲ ಚಿತ್ರವನ್ನು ನಿರ್ದೇಶಿಸುವ ಅವಕಾಶ ಸಿಕ್ಕಿರುವುದು ಗೌರವದ ಸಂಗತಿಯಾಗಿದೆ. ಇದು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೇಂದ್ರವಾಗಿದೆ. ಈ ಅವಕಾಶಕ್ಕಾಗಿ ನಾನು ಸುಭಾಸ್ಕರನ್ ಸರ್ ಅವರಿಗೆ ಧನ್ಯವಾದ ಹೇಳುತ್ತೇನೆ. ನಾನು ನಿರ್ದೇಶಕನಾಗುವ ನನ್ನ ಕನಸುಗಳನ್ನು ಈಡೇರಿಸಲು ಉತ್ತಮ ಬೆಂಬಲವನ್ನು ನೀಡಿದ ತಮಿಳು ಕುಮಾರನ್ ಅವರಿಗೆ ಧನ್ಯವಾದ. ನಾನು ಈ ಅವಕಾಶವನ್ನು ಬಳಸಿಕೊಳ್ಳುತ್ತೇನೆ ಎಂದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಜವಾನ್’ ಸಿನಿಮಾದಲ್ಲಿ ದಳಪತಿ ವಿಜಯ್ ಕೂಡ ಇದ್ದಾರೆ: ಭರ್ಜರಿ ಸುದ್ದಿ

    ‘ಜವಾನ್’ ಸಿನಿಮಾದಲ್ಲಿ ದಳಪತಿ ವಿಜಯ್ ಕೂಡ ಇದ್ದಾರೆ: ಭರ್ಜರಿ ಸುದ್ದಿ

    ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾದಲ್ಲಿ ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ ಮಾತ್ರವಲ್ಲ, ಮತ್ತೋರ್ವ ಸೂಪರ್ ಸ್ಟಾರ್ ದಳಪತಿ ವಿಜಯ್ (Dalpati Vijay) ಕೂಡ ಇದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಈ ಸಿನಿಮಾದಲ್ಲಿ ಅವರದ್ದು ಅತಿಥಿ ಪಾತ್ರವಂತೆ. ಆ ಕ್ಯಾರೆಕ್ಟರ್ ಏನು ಎನ್ನುವುದನ್ನು ಚಿತ್ರತಂಡ ಬಹಿರಂಗ ಪಡಿಸಿಲ್ಲ.

    ‘ಜವಾನ್’ (Jawan) ಬಗ್ಗೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಾಗುತ್ತಿದೆ. ಅದಕ್ಕೆ ಸರಿಯಾಗಿ ಮೊನ್ನೆ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಜಯ್ ಸೇತುಪತಿ ಅವರ ಮೊದಲ ನೋಟವನ್ನು (First Look) ಶಾರುಖ್ ಖಾನ್ (Shah Rukh Khan) ಬಿಡುಗಡೆ ಮಾಡಿದ್ದಾರೆ. ವಿಜಯ್ ಸೇತುಪತಿ ಅವರನ್ನು ಚಿತ್ರದಲ್ಲಿ ‘ಸಾವಿನ ವ್ಯಾಪಾರಿ’ ಎಂದು ಶಾರುಖ್ ಬಣ್ಣಿಸಿದ್ದು, ಈ ಚಿತ್ರದಲ್ಲಿ ಅವರೊಂದಿಗೆ ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ.

    ಇತ್ತೀಚೆಗೆ ಬಿಡುಗಡೆಯಾದ ‘ಜವಾನ್’ ಚಿತ್ರದ ಪ್ರಿವ್ಯೂನಲ್ಲಿ ವಿಜಯ್ ಸೇತುಪತಿ (Vijay Sethupathi) ಅವರ ಝಲಕ್ ನೋಡುವುದಕ್ಕೆ ಸಿಕ್ಕಿತ್ತು. ಈಗ ಅವರ ಪಾತ್ರವನ್ನು ಹೊಸ ಪೋಸ್ಟರ್ ಮೂಲಕ ಪರಿಚಯಿಸಿದ್ದಾರೆ ಶಾರುಖ್ ಖಾನ್. ಇದುವರೆಗೂ ದಕ್ಷಿಣ ಭಾರತದ ಚಿತ್ರಗಳಲ್ಲಿ ತಮ್ಮ ಅದ್ಭುತ ಅಭಿನಯ ಮತ್ತು ವೈವಿಧ್ಯಮಯ ಪಾತ್ರಗಳಿಂದ ಎಲ್ಲರ ಮನಸ್ಸನ್ನು ಸೂರೆಗೊಂಡಿದ್ದ ವಿಜಯ್ ಸೇತುಪತಿ, ಈಗ ಮೊದಲ ಬಾರಿಗೆ ಶಾರುಖ್ ಖಾನ್ ಎದುರು ಖಳನಟನಾಗಿ ಅಬ್ಬರಿಸಲಿದ್ದಾರೆ.

    ಪ್ರತಿ ಹೊಸ ಪೋಸ್ಟರ್ ಮೂಲಕವೂ ‘ಜವಾನ್’ ಚಿತ್ರದ ಮೇಲಿನ ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಾಗುತ್ತಲೇ ಇದೆ. ಮೊದಲು ಶಾರುಖ್ ಖಾನ್ ಅವರ ಬಾಲ್ಡ್ ಲುಕ್, ನಂತರ ನಯನತಾರಾ ಅವರ ಸಾಹಸಮಯ ಅವತಾರ, ಈಗ ವಿಜಯ್ ಸೇತುಪತಿ ಅವರ ಪಾತ್ರದ ಪರಿಚಯ. ಇದೆಲ್ಲದರಿಂದ ಜವಾನ್ ಈ ವರ್ಷದ ಅತೀ ನಿರೀಕ್ಷಿತ ಚಿತ್ರವಾಗಿದೆ.

    ‘ಜವಾನ್’ ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಗೌರಿ ಖಾನ್ ನಿರ್ಮಿಸಿದರೆ, ಗೌರವ ವರ್ಮ ಸಹನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 07ರಂದು ಜಗತ್ತಿನಾದ್ಯಂತ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಂಕರ್ ಜೊತೆಗಿನ ಸಿನಿಮಾ ನಂತರ ಸಕ್ರಿಯ ರಾಜಕಾರಣಕ್ಕೆ ವಿಜಯ್

    ಶಂಕರ್ ಜೊತೆಗಿನ ಸಿನಿಮಾ ನಂತರ ಸಕ್ರಿಯ ರಾಜಕಾರಣಕ್ಕೆ ವಿಜಯ್

    ಮಿಳಿನ ಸ್ಟಾರ್ ನಟ ದಳಪತಿ ವಿಜಯ್ ರಾಜಕೀಯಕ್ಕೆ ಬರುವುದು ಪಕ್ಕಾ ಎನ್ನುತ್ತಿದ್ದರೂ, ಶಂಕರ್ (Shankar)  ಜೊತೆಗಿನ ಸಿನಿಮಾ ಮುಗಿಸಿಕೊಂಡು ಅವರು ಸಕ್ರಿಯ ರಾಜಕಾರಣದಲ್ಲಿ ತೊಡಗಲಿದ್ದಾರಂತೆ. ಸದ್ಯ ಲಿಯೋ ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅದರ ಜೊತೆ ಜೊತೆಗೆ ರಾಜಕಾರಣದ ಕಣವನ್ನು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಅವರು ಆಪ್ತ ಬಳಗದ ಮಾಹಿತಿ.

    ವಿಜಯ್ ರಾಜಕಾರಣಕ್ಕೆ ಬರುವುದು ಪಕ್ಕಾ ಆಗಿರುವುದರಿಂದ ಅಭಿಮಾನಿಗಳು ಮತ್ತು ಆಪ್ತರ ಜೊತೆ ವಿಜಯ್ ನಿರಂತರ ಮೀಟಿಂಗ್ ಮಾಡುತ್ತಿದ್ದಾರೆ ಎನ್ನುವುದು ಸಿಕ್ಕಿರುವ ವರ್ತಮಾನ. ಈ ನಡುವೆ ವಿಜಯ್ ರಾಜಕಾರಣಕ್ಕೆ ಬಂದರೆ, ಅವರನ್ನು ಬೆಂಬಲಿಸುವುದಾಗಿ ಅಜಿತ್ ಫ್ಯಾನ್ಸ್ ಹೇಳಿಕೊಂಡಿದ್ದಾರೆ. ಹಾಗಾಗಿ ವಿಜಯ್ ಎಂಟ್ರಿ ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.

    ತಮಿಳುನಾಡಿನ (Tamil Nadu) ರಾಜಕಾರಣದಲ್ಲಿ ಬಿರುಗಾಳಿ, ಸುನಾಮಿ ಏಕಕಾಲಕ್ಕೆ ಎದ್ದು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿವೆ. ಒಂದು ಕಡೆ ಬಿಜೆಪಿಯು ಮಾಜಿ ಐಪಿಎಸ್ ಆಫೀಸರ್ ಅಣ್ಣಾಮಲೈ ನೇತೃತ್ವದಲ್ಲಿ ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸಿದ್ದರೆ, ಮತ್ತೊಂದು ಕಡೆ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟ ದಳಪತಿ ವಿಜಯ್ (Dalpati Vijay) ಕೂಡ ಈ ಬಾರಿ ಚುನಾವಣೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆಯನ್ನೇ ಗುರಿಯಾಗಿರಿಸಿಕೊಂಡು ವಿಜಯ್, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ದಳಪತಿ ವಿಜಯ್ ರಾಜಕಾರಣಕ್ಕೆ (Politics) ಬರುತ್ತಾರೆ ಎನ್ನುವ ಸುದ್ದಿ ಹೊಸದೇನೂ ಅಲ್ಲ. ಈಗಾಗಲೇ ಹಲವಾರು ಬಾರಿ ಅವರ ಹೆಸರು ತೇಲಿ ಬಂದಿದೆ. ವಿಜಯ್ ಅವರ ತಂದೆ ರಾಜಕಾರಣಿಯೂ ಆಗಿರುವುದರಿಂದ ಪದೇ ಪದೇ ವಿಜಯ್ ಹೆಸರು ಚುನಾವಣಾ ಕಣದಲ್ಲಿ ಕೇಳಿ ಬಂದಿದೆ. ಪ್ರತಿ ಸಲವೂ ಅದು ಠುಸ್ ಪಟಾಕಿ ಆಗಿದೆ. ಆದರೆ, ಈ ಬಾರಿ ಅವರು ಕಣಕ್ಕೆ ಇಳಿಯೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಕೊನೆಗೂ ಮದುವೆ ಬಗ್ಗೆ ಸಿಕ್ರೇಟ್ ಬಿಟ್ಟುಕೊಟ್ಟ ವಿಜಯ್ ದೇವರಕೊಂಡ

    ಸೋಷಿಯಲ್ ಮೀಡಿಯಾಗಳಿಂದ ದೂರವಿದ್ದ ವಿಜಯ್, ಇದೀಗ ಎಲ್ಲ ಸೋಷಿಯಲ್ ಮೀಡಿಯಾ ವೇದಿಕೆಗೆ ಬಂದಿದ್ದಾರೆ. ನಿರಂತರವಾಗಿ ಅಭಿಮಾನಿಗಳ ಜೊತೆ ಸಂವಹನ ಮಾಡುತ್ತಿದ್ದಾರೆ. ಅಲ್ಲದೇ, ಮೊನ್ನೆಯಷ್ಟೇ ತಮಿಳುನಾಡಿನಾದ್ಯಂತ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಟಾಪ್ ಬಂದ ಮಕ್ಕಳಿಗೆ ಬಹುಮಾನ ನೀಡಿದ್ದಾರೆ. ಅದು ತಾಲ್ಲೂಕು  ಮತ್ತು ಜಿಲ್ಲಾ ಮಟ್ಟದಲ್ಲಿ ಪರಿಗಣನೇ ತೆಗೆದುಕೊಳ್ಳದೇ ಮತಕ್ಷೇತ್ರವನ್ನು ಗುರಿಯಾಗಿರಿಸಿಕೊಂಡು ಬಹುಮಾನ ನೀಡಿದ್ದಾರೆ.

    ವಿಜಯ್ ಮಕ್ಕಳ್ ಇಯಕ್ಕಮ್ (Vijay Makkal Iyakkam) ಎನ್ನುವ ಸಂಸ್ಥೆಯ ಮೂಲಕ ವಿಜಯ್ ಈ ಕೆಲಸಗಳನ್ನು ಮಾಡುತ್ತಿದ್ದಾರೆ. ಒಟ್ಟು 235 ವಿಧಾನಸಭಾ ಕ್ಷೇತ್ರಗಳ ಮಕ್ಕಳಿಗೆ ಬಹುಮಾನ ನೀಡಿದ್ದು, ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ನಗದು ಬಹುಮಾನ ಮತ್ತು ಸನ್ಮಾನವನ್ನು ಹಮ್ಮಿಕೊಂಡಿದ್ದರು. ಹೀಗಾಗಿ ಈ ಬಾರಿ ಅಷ್ಟೂ ಕ್ಷೇತ್ರಗಳಲ್ಲೂ ವಿಜಯ್ ಅವರ ಪಕ್ಷ ಸ್ಪರ್ಧಿಸಲಿದೆ ಎಂದು ಹೇಳಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚುನಾವಣೆ ಕಣದಲ್ಲಿ ದಳಪತಿ ವಿಜಯ್ ಪಕ್ಕಾ : ನಿರಂತರ ಮೀಟಿಂಗ್ ನಲ್ಲಿ ನಟ

    ಚುನಾವಣೆ ಕಣದಲ್ಲಿ ದಳಪತಿ ವಿಜಯ್ ಪಕ್ಕಾ : ನಿರಂತರ ಮೀಟಿಂಗ್ ನಲ್ಲಿ ನಟ

    ಮಿಳಿನ ಸ್ಟಾರ್ ನಟ ದಳಪತಿ ವಿಜಯ್ ರಾಜಕಾರಣಕ್ಕೆ ಬರುವುದು ಪಕ್ಕಾ ಆದಂತೆ ಕಾಣುತ್ತಿದೆ. ಅಭಿಮಾನಿಗಳು ಮತ್ತು ಆಪ್ತರ ಜೊತೆ ವಿಜಯ್ ನಿರಂತರ ಮೀಟಿಂಗ್ ಮಾಡುತ್ತಿದ್ದಾರೆ ಎನ್ನುವುದು ಸಿಕ್ಕಿರುವ ವರ್ತಮಾನ. ಈ ನಡುವೆ ವಿಜಯ್ ರಾಜಕಾರಣಕ್ಕೆ ಬಂದರೆ, ಅವರನ್ನು ಬೆಂಬಲಿಸುವುದಾಗಿ ಅಜಿತ್ ಫ್ಯಾನ್ಸ್ ಹೇಳಿಕೊಂಡಿದ್ದಾರೆ. ಹಾಗಾಗಿ ವಿಜಯ್ ಎಂಟ್ರಿ ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.

    ತಮಿಳುನಾಡಿನ (Tamil Nadu) ರಾಜಕಾರಣದಲ್ಲಿ ಬಿರುಗಾಳಿ, ಸುನಾಮಿ ಏಕಕಾಲಕ್ಕೆ ಎದ್ದು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿವೆ. ಒಂದು ಕಡೆ ಬಿಜೆಪಿಯು ಮಾಜಿ ಐಪಿಎಸ್ ಆಫೀಸರ್ ಅಣ್ಣಾಮಲೈ ನೇತೃತ್ವದಲ್ಲಿ ಈಗಿನಿಂದಲೇ ಚುನಾವಣೆಗೆ ಸಿದ್ಧತೆ ನಡೆಸಿದ್ದರೆ, ಮತ್ತೊಂದು ಕಡೆ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ನಟ ದಳಪತಿ ವಿಜಯ್ (Dalpati Vijay) ಕೂಡ ಈ ಬಾರಿ ಚುನಾವಣೆ ಅಖಾಡಕ್ಕೆ ಇಳಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಚುನಾವಣೆಯನ್ನೇ ಗುರಿಯಾಗಿರಿಸಿಕೊಂಡು ವಿಜಯ್, ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ದಳಪತಿ ವಿಜಯ್ ರಾಜಕಾರಣಕ್ಕೆ (Politics) ಬರುತ್ತಾರೆ ಎನ್ನುವ ಸುದ್ದಿ ಹೊಸದೇನೂ ಅಲ್ಲ. ಈಗಾಗಲೇ ಹಲವಾರು ಬಾರಿ ಅವರ ಹೆಸರು ತೇಲಿ ಬಂದಿದೆ. ವಿಜಯ್ ಅವರ ತಂದೆ ರಾಜಕಾರಣಿಯೂ ಆಗಿರುವುದರಿಂದ ಪದೇ ಪದೇ ವಿಜಯ್ ಹೆಸರು ಚುನಾವಣಾ ಕಣದಲ್ಲಿ ಕೇಳಿ ಬಂದಿದೆ. ಪ್ರತಿ ಸಲವೂ ಅದು ಠುಸ್ ಪಟಾಕಿ ಆಗಿದೆ. ಆದರೆ, ಈ ಬಾರಿ ಅವರು ಕಣಕ್ಕೆ ಇಳಿಯೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅಮೆರಿಕಾದಲ್ಲಿ ಅವಳಿ ಮಕ್ಕಳಿಗೆ ಕೇಶ ಮುಂಡನ ಮಾಡಿಸಿದ ಪ್ರೀತಿ ಜಿಂಟಾ