Tag: dally dhananjay

  • ಮಂಡ್ಯ ರಾಜಕೀಯಕ್ಕೂ ಹಬ್ಬಿತು ‘ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ’ ಅಭಿಯಾನ

    ಮಂಡ್ಯ ರಾಜಕೀಯಕ್ಕೂ ಹಬ್ಬಿತು ‘ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ’ ಅಭಿಯಾನ

    ಮಂಡ್ಯ: ನಟ ಡಾಲಿ ಧನಂಜಯ್ (Daly Dhananjay) ಅವರ ‘ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ’ ಎಂದು ಪೋಸ್ಟ್ ಹಾಕಿದ್ದೇ ತಡ ಅದು ಒಂದು ಅಭಿಯಾನವಾಗಿಯೇ ರೂಪುಗೊಂಡಿತು. ಇದೀಗ ಬಡವರ ಮಕ್ಳು ಬೆಳೆಯಬೇಕು ಎನ್ನುವುದು ಮಂಡ್ಯ (Mandya) ರಾಜಕಿಯಕ್ಕೂ ಬಂದು ತಲುಪಿದೆ, ಜೆಡಿಎಸ್ (JDS) ನಾಯಕರ ಬೆಂಬಲಿಗರು ಈ ಅಭಿಯಾನ ನಡೆಸುತ್ತಿದ್ದಾರೆ.

    ಸಕ್ಕರೆ ನಾಡು ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಅಭಿಯಾನ ಆರಂಭವಾಗಿದ್ದು, ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ, ನಿಷ್ಠಾವಂತ ಕಾರ್ಯಕರ್ತ ಬೆಳೆಯಬೇಕು ಕಣ್ರಯ್ಯ ಎಂದು ಪೋಸ್ಟ್ ಹಾಕಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ನಾಗಮಂಗಲ ಶಾಸಕ ಸುರೇಶಗೌಡ (Suresh Gowda), ಮಂಡ್ಯ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಮಹಾಲಿಂಗೇಗೌಡ (Mahalinge Gowda) ಸೇರಿದಂತೆ ಹಲವು ಟಿಕೆಟ್ ಆಕಾಂಕ್ಷಿ ಪರವಾಗಿ ಪೋಸ್ಟ್ ಹಾಕಿ ಈ ಅಭಿಯಾನ ಆರಂಭಿಸಲಾಗಿದೆ. ಇದನ್ನೂ ಓದಿ: ಜಾಮಿಯಾ ಮಸೀದಿ ವಿವಾದ ಹೈಕೋರ್ಟ್ ಅಂಗಳಕ್ಕೆ

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಗಳು ಸಖತ್ ವೈರಲ್ ಆಗುತ್ತಿದ್ದು, ಬಡವರನ್ನ ಬೆಳೆಸಿ, ಹಾರೈಸಿ ಎಂದು ಟ್ರೆಂಡ್ ಆಗುತ್ತಿದೆ. ಅಲ್ಲದೆ ಈ ಪೋಸ್ಟ್ ಗಳಿಗೆ ಪರ ಹಾಗೂ ವಿರೋಧ ಕಾಮೆಂಟ್‍ಗಳು ಸಹ ವ್ಯಕ್ತವಾಗುತ್ತಿವೆ. ಎಂಎಲ್‍ಎ ಅದವರು ಬಡವ ಹೇಗೆ ಆಗ್ತಾನೆ, 10 ಕಾರು ಇಟ್ಟವರು ಬಡವರಾ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ನಮ್ಮ ಎಂಎಲ್‍ಎ ಮತ್ತೆ ಗೆಲ್ಲುತ್ತಾರೆ, ಜೆಡಿಎಸ್ 100% ವಿನ್ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟ ಡಾಲಿ ನೋಡಲು ಬಂದ ಅಭಿಮಾನಿಗಳಿಗೆ ಲಾಠಿ ಏಟು!

    ನಟ ಡಾಲಿ ನೋಡಲು ಬಂದ ಅಭಿಮಾನಿಗಳಿಗೆ ಲಾಠಿ ಏಟು!

    ಬಳ್ಳಾರಿ: ನಟ ಡಾಲಿ ಧನಂಜಯ್ ಅವರನ್ನು ನೋಡಲು ಬಂದ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಹೌದು. ಬಡವ ರಾಸ್ಕಲ್ ಚಿತ್ರದ ಪ್ರಮೋಷನ್ ಗೆಂದು ನಟ ಬಳ್ಳಾರಿಯ ನಟರಾಜ ಥಿಯೇಟರ್ ಗೆ ಆಗಮಿಸಿದ್ದರು. ಈ ವೇಳೆ ಅವರನ್ನು ನೋಡಲು ಜನ ಸಾಗರವೇ ಹರಿದುಬಂತು. ಅಲ್ಲದೆ ತಮ್ಮ ನೆಚ್ಚಿನ ನಟನ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಜನ ಮುಗಿಬಿದ್ದರು. ಮಾಸ್ಕ್, ಸಾಮಾಜಿಕ ಅಂತರ ಮರೆತು ನಟನನ್ನ ನೋಡಿ ಅಭಿಮಾನಿಗಳು ಕಣ್ಣು ತುಂಬಿಕೊಂಡರು. ನೆರೆದ ಸುಮಾರು ಸಾವಿರಕ್ಕೂ ಅಧಿಕ ಮಂದಿಯನ್ನು ನಿಯಂತ್ರಿಸಲು ಪೊಲೀಸರು ಹಾಗೂ ಥಿಯೇಟರ್ ಸಿಬ್ಬಂದಿ ಹರಸಾಹಸವೇ ಪಡಬೇಕಾಯಿತು.

    ಇದೇ ವೇಳೆ ಅಭಿಮಾನಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಹೊಸಪೇಟೆಯ ಪುನೀತ್ ಸರ್ಕಲ್ ಬಳಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಚಿತ್ರದ ಪ್ರಮೋಷನ್ ಗೂ ಮುನ್ನ ಡಾಲಿ, ಪುನೀತ್ ರಾಜ್‍ಕುಮಾರ್ ಸರ್ಕಲ್ ಗೆ ಬಂದಿದ್ದಾರೆ. ಈ ವೇಳೆಯೂ ಡಾಲಿ ನೋಡಲು ನೂಕು ನುಗ್ಗಲು ಏರ್ಪಟ್ಟಿತ್ತು. ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು. ಇದನ್ನೂ ಓದಿ: ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದ ‘ಕಾಕ್ಟೈಲ್’ ಚಿತ್ರತಂಡ

    ಪುನೀತ್ ರಾಜಕುಮಾರ್ ವೃತ್ತದಿಂದ ಲಕ್ಷ್ಮೀ ಟಾಕೀಸ್ ವರೆಗೆ ಅದ್ಧೂರಿ ಮೆರವಣಿಗೆ ನಡೆಯಿತು. ಓಪನ್ ಜೀಪ್ ನಲ್ಲಿ ಭರ್ಜರಿ ಮೆರವಣಿಗೆ ಮಾಡಲಾಯಿತು. ದಾರಿಯುದ್ದಕ್ಕೂ ಅಭಿಮಾನಿಗಳು ಓಡೋಡಿ ಬಂದರು. ನಂತರ ಲಕ್ಷ್ಮೀ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆ ಮಾಡಿ ಡಾಲಿ ಬೆಂಗಳೂರಿನತ್ತ ಹೊರಟರು.